Saturday 5 August 2017

ಲೇಖನ : ಜೀವನದ ಸಂತೆಯಲಿ ಸ್ನೇಹಸುಗಂಧ

ಲೇಖನ : ಜೀವನದ ಸಂತೆಯಲಿ ಸ್ನೇಹಸುಗಂಧ


      ಇನ್ನೇನು ಸ್ನೇಹಿತರ ದಿನಾಚರಣೆ ಹತ್ತಿರ ಬರುತ್ತಿದೆ. ಶಾಲಾ-ಕಾಲೇಜು ಹುಡುಗರಿಗಂತೂ ಕಾಂಪಾಸ್ ನಲ್ಲಿ ಹಬ್ಬದ ವಾತಾವರಣ.ಆ ಹಂತ ದಾಟಿ ಬಂದವರಿಗೆ ನೆನಪು ಇದೆಯೋ ಇಲ್ಲವೋ.. ಹಾಗೆ ಸ್ನೇಹದ ಕುರಿತಾದ ಒಂದು ಸಣ್ಣ ಲೇಖನ, ಓದಿ ನಿಮ್ಮ ಅಭಿಪ್ರಾಯ ತಿಳಿಸಿ..
        ಜೀವನವೇ ಒಂದು ಉಗಿಬಂಡಿಯಂತೆ. ಅದೆಷ್ಟು ದೂರ ಪಯಣಿಸಬೇಕೆಂದು ಯಾರಿಗೂ ತಿಳಿಯದು. ನಡುನಡುವೆ ಸಿಗುವ ನಿಲ್ದಾಣದಲ್ಲಿ ಒಂದಷ್ಟು ಸ್ನೇಹಿತರು ನಮ್ಮ‌ಜೀವನಕ್ಕೆ ಬಂದು-ಇದ್ದು-ಮತ್ತೆ ಇಳಿದು ಹೋಗುತ್ತಾರೆ. ಕೊನೆಗೆ ಉಳಿಯುವುದು ಒಂದಷ್ಟು ನೆನಪುಗಳು, ಸವಿನೆನಪುಗಳಿಂದ ಮೂಡುವ ಆನಂದಭಾಷ್ಪ, ಹಾಗೂ ಕಹಿಘಟನೆಯಿಂದ ಉದುರಿದ ಕಣ್ಣೀರ ಹನಿಗಳು.... ಸ್ನೇಹ ಆರಂಭವಾಗಲು ಕಿರುನಗು ಸಾಕು. ಚಿಗುರಲು ಕಾಳಜಿ ತುಂಟತನದಿಂದ ಕೂಡಿದ ಮಾತು, ಪರಸ್ಪರ ಸಹಾಯ ಮಾಡುವ ಮನೋಭಾವ ಎಲ್ಲವೂ ಬೇಕು‌. ಆದರೊಂದು ಬಹುಮುಖ್ಯವಾಗಿ ಸ್ನೇಹ ಈ ಜಾತಿ-ಧರ್ಮ ನೋಡಿಯಾಗಲಿ, ಆಸ್ತಿ-ಅಂತಸ್ತು ನೋಡಿಯಾಗಲಿ ಬರುವುದಿಲ್ಲ. ಹಾಗೆ ಜೊತೆಗೆ ಬಂದವರೂ ಹೆಚ್ಚು ದಿನ ಉಳಿಯುವುದೂ ಇಲ್ಲ.
          ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ಮದುವೆಯಾದ ಮೇಲೆ ಕಾಲೇಜುದಿನದ ಸ್ನೇಹಿತರ ಸಂಪರ್ಕ ದಲ್ಲಿರುವುದು ಕಷ್ಟವಾಗುತ್ತದೆ. ಗೃಹಿಣಿಯರಿಗೆ (ಮನೆಯಲ್ಲೇ ಇರುವವರಿಗೆ) ಅಕ್ಕ-ಪಕ್ಕದ ಮನೆಯ ಮಹಿಳಾಮಣಿಗಳೇ ಸ್ನೇಹಿತರಾಗುತ್ತಾರೆ.ಉದ್ಯೋಗಕ್ಕೆ ಹೋಗುವವರಿಗೆ ಸಹೋದ್ಯೋಗಿಗಳು ಒಂದಷ್ಟು ಜನ. ಈಗಿನ ಕಾಲದಲ್ಲಿ ಎಫ್.ಬಿ (ಫೇಸ್ಬುಕ್, ಫ್ರೈಂಡ್ಸ್ ಬುಕ್) ಇದೆ. ಅಲ್ಲಿ ಒಂದಷ್ಟು ಸ್ನೇಹಿತರು ಸಿಗುತ್ತಾರೆ. ಮೊಬೈಲ್ ನಂಬರ್ ತೆಗೆದುಕೊಂಡು ವಾಟ್ಸ್ ಆಪ್ ನಲ್ಲೂ ಬಂದುಬಿಡ್ತಾರೆ. ಹಾಗೆ ಹಳೆಯ ಗೆಳೆಯ/ತಿಯರೂ ಮತ್ತೆ ಮಾತಿಗೆ/ಸಂಪರ್ಕಕ್ಕೆ ಸಿಗುತ್ತಾರೆ..
.
.

ಆದರೆ ನಿಜವಾದ ಸ್ನೇಹಿತೆ/ತ ಅಂದರೆ ಯಾರು? ನಂಬಿಕೆ, ಪ್ರೀತಿ,ವಿಶ್ವಾಸಕ್ಕೆ ಅರ್ಹರು ಯಾರು..??

ನಮ್ಮ ಮನಸ್ಸಿನ ಮಾತುಗಳನ್ನು (ನೋವುಗಳು ಅಥವಾ ಸಂತೋಷದ ವಿಷಯಗಳಿರಬಹುದು)  ಕೇಳುವ , ಸಾಂತ್ವಾನ ಹೇಳುವ ಸಹೃದಯಿ ಮಿತ್ರರು ನಮ್ಮ ಜೊತೆ ಇದ್ದಾರೆ ಅಂದರೆ ಅದೇ ಅದೃಷ್ಟ..
ಕಷ್ಟ ಕಾಲಕ್ಕೆ ಕರ ಸಹಾಯ ಇಲ್ಲಾ ಹಣದ ಸಹಾಯ ಮಾಡುವ ಸ್ನೇಹಿತರು,ಮಾನವೀಯತೆ ಇರುವ ಮನಸ್ಸುಗಳು ಬೇಗ ಆಪ್ತರಾಗಿ ಬಿಡುತ್ತಾರೆ. ಎಲ್ಲೋ ಯಾವುದೋ ಅಪರಿಚಿತ ಊರಿನಲ್ಲಿ ದಿಕ್ಕುಕಾಣದೇ ಒದ್ದಾಡುತ್ತಿದ್ದಾಗ ಸಹಾಯ ಮಾಡಿದವರೂ ಯಾವಾಗಲೂ ನೆನಪಿನಲ್ಲಿ ಉಳಿಯುತ್ತಾರೆ. ಆದರೆ ಅವರೆಲ್ಲ ಸ್ನೇಹಿತರಲ್ಲ. ಅವರಲ್ಲಿ ಮಾನವೀಯತೆ ಇದೆ ಎನ್ನಬಹುದು. ಅಂತವರ ಸ್ನೇಹವನ್ನು ಮುಂದುವರಿಸಲೂ ಆಗುವುದಿಲ್ಲ. ಕೃತಜ್ಞತೆಯನ್ನು ತಿಳಿಸಲು ಮಾತ್ರ ಸಾಧ್ಯ.
••••
ಆದರೆ ನಂಬಿಕೆಗೆ ದ್ರೋಹ ಮಾಡುವವರು, ಮೋಸ ಮಾಡುವವರು, ಅಲ್ಲಿಂದ ಇಲ್ಲಿಗೆ ಚಾಡಿ ಹೇಳಿ ಜಗಳ ತಂದಿಡುವವರು, ಮತ್ಸರ ಪಡುವವರು ಮೊಸಳೆ ಕಣ್ಣೀರು ಹಾಕಿ ಸಾಲ ಕೇಳಿಪಡೆದು ಹಣ ವಾಪಾಸು ಮಾಡದೇ ಇರುವವರು, ವ್ಯಾಪಾರ-ವ್ಯವಹಾರದಲ್ಲಿ ಮೋಸ ಮಾಡುವವರು, ಎದುರಿಗೊಂದು-ಹಿಂದೊಂದು ಮಾತನಾಡುವವರು, ಇಷ್ಟವಾಗದಿದ್ದರೂ ನಮ್ಮ ಜೀವನದಲ್ಲಿ ಮೂಗು ತೂರಿಸುವವರು, ಸಂಸಾರದಲ್ಲಿ ಬಿರುಕು ಮೂಡುವ ಹಾಗೆ ಮಾಡುವವರು, ಅವಮಾನ-ಅಗೌರವ ತೋರಿಸುವವರು,ತಾತ್ಸಾರ-ಸಸಾರ ಮಾಡುವವರು....ಅಂತವರು ಯಾರಾಗಿದ್ದರೂ ಸರಿಯೇ, ಮೊದಲು ನಮಗೆ ಎಷ್ಟು ಬೇಕಿದ್ದರು ಸಹಾಯ ಮಾಡಿದವರಾಗಿರಬಹುದು ಅಂತವರಿಂದ ದೂರ ಇರಿ. ಮಾತನಾಡಲು ,ನಿಮ್ಮ ಜೊತೆ ವ್ಯವಹಾರ ಮಾಡಲು ಇಷ್ಟವಿಲ್ಲ ಎಂದು ಮುಲಾಜಿಲ್ಲದೇ ಹೇಳಿ ಬಿಡಿ. ಮಾತು ನಿಲ್ಲಿಸಿಬಿಡಿ. ಆದರೆ ದ್ವೇಷ ಕಟ್ಟಿಕೊಳ್ಳಬೇಡಿ. ದ್ವೇಷದಿಂದ ನಮ್ಮ ಜೀವನ ಇಕ್ಕಳದಲ್ಲಿ ಸಿಕ್ಕಿಹಾಕಿಕೊಂಡಂತಾಗುತ್ತದೆ. ಅವರ ಸೇಡಿನ ಜ್ವಾಲೆಗೆ ಸಾವು-ನೋವು ಸಂಭವಿಸುತ್ತದೆ. ಸ್ನೇಹ ಬೆಳೆಸುವ ಮೊದಲೇ ಜಾಗರೂಕರಾಗಿರಿ. ನಮ್ಮ ತೀರ ವೈಯಕ್ತಿಕ ವಿಷಯಗಳನ್ನು , ಹಣಕಾಸಿನ ಬಗ್ಗೆ , ಸಂಸಾರದ ಒಳಗುಟ್ಟುಗಳನ್ನು ಎಷ್ಟೇ ಆಪ್ತರಾಗಲಿ ಹಂಚಿಕೊಳ್ಳಲು ಹೋಗಬಾರದು.
ಕೊನೆಯದಾಗಿ,ಮುಪ್ಪಿನ ಕಾಲದಲ್ಲಿ ಕೂಡ ಜನರು ಸ್ನೇಹವನ್ನು ಬಯಸುತ್ತಿರುತ್ತಾರೆ. ತಮ್ಮ ಅನುಭವಗಳನ್ನು ಹಂಚಿಕೊಳ್ಳಲೋ, ಮನದ ನೋವನ್ನು ಹೊರಹಾಕಲೋ, ಏಕಾಂಗಿತನವನ್ನು ಕಳೆಯಲೋ, ಒಂದಷ್ಟು ಸಮಯ ಕಳೆಯಲೆಂದು ಹಿರಿಯ ಮನಸ್ಸುಗಳು ಪಾರ್ಕ್‌ನಲ್ಲಿ, ದೇವಸ್ಥಾನದ ಕಟ್ಟೆಯಲ್ಲಿ ಮಾತನಾಡುತ್ತಾ ಕುಳಿತಿರುವುದನ್ನು ನಾವು ನೋಡಬಹುದು. ಒಂದಷ್ಟು ಅಮೂಲ್ಯ ಜವಾಬ್ದಾರಿಗಳನ್ನು ಮುಗಿಸಿರುವ ಅವರೆಲ್ಲರಿಗೂ ಸಂಧ್ಯಾಕಾಲದಲ್ಲಿ ಒಂದಷ್ಟು ನೆಮ್ಮದಿ, ಖುಷಿ, ಮನಸ್ಸಿಗೆ ಹಿತವೆನಿಸಿದರೆ ಸಾಕೆಂದೆನಿಸುತ್ತದೆ. ಹೀಗೆ ಒಂದಲ್ಲ ಒಂದು ಹಂತದಲ್ಲಿ ಮನುಷ್ಯ ಸ್ನೇಹಜೀವಿಯಾಗಿರುತ್ತಾನೆ.
.
.

ಸ್ನೇಹ ಹಚ್ಚಹಸಿರಾಗಿರಬೇಕು‌. ಉಸಿರು ಕಟ್ಟುವಂತಾಗಬಾರದು.
"ವಿಶ್ವಸ್ನೇಹಿತರ ದಿನಾಚರಣೆಯ ಶುಭಾಶಯಗಳು."

- ಸಿಂಧು ಭಾರ್ಗವ್.

ಸಂತೆಯಲ್ಲಿ ಗುನುಗಿದ ಹಾಡು: ಶ್ರಾವಣ ಬಂದಿದೆ ಈಗ

*_ಸಂತೆಯಲ್ಲಿ ಗುನುಗಿದ ಹಾಡು: ಶ್ರಾವಣ ಬಂದಿದೆ ಈಗ_*

ಎಲ್ಲಿ ನೋಡಿದರಲ್ಲಿ
ಹುಲ್ಲು ಹಾಸಿಗೆ ನೆಲದಲ್ಲಿ
ಶ್ರಾವಣ ಬಂದಿದೆ ಈಗ..

ಹಸಿರು ಹೊದ್ದ ವನದೇವಿ
ಕಣ್ಣಮುಂದೆ ನಿಂತಳಿಲ್ಲಿ
ಶ್ರಾವಣ ಬಂದಿದೆ ಈಗ..

ಆಗಸಕೆ ಚಪ್ಪರ ಹಾಕಿ
ಭುವಿಗೆ ಹಸಿರ ಹೊದೆಸಲು
ಶ್ರಾವಣ ಬಂದಿದೆ ಈಗ

ಸರದಿ ನಿಂತ ಹಬ್ಬಗಳಿಗೆ
ಹರುಷ ಪಡುವ ಹೆಂಗಳೆಯರು
ಶ್ರಾವಣ ಬಂದಿದೆ ಈಗ..

ತನುಮನದ ಶುದ್ಧಿಗಾಗಿ
ವೃತಗಳ ಆಚರಿಸಲು
ಶ್ರಾವಣ ಬಂದಿದೆ ಈಗ..

ಬಿಡದೇ ಸುರಿವ ಮಳೆರಾಯ
ಮನಕೆ ತಂಪು ನೀಡಲು
ಶ್ರಾವಣ ಬಂದಿದೆ ಈಗ..

_- ಸಿಂಧು ಭಾರ್ಗವ್._

ಸಂತೆಯಲಿ ಗುನುಗಿದ ಹಾಡು ಕನಸಿನ ಪ್ರಸೂತಿ

ಸಂತೆಯಲಿ ಗುನುಗಿದ ಹಾಡು : *_ಕನಸಿನ ಪ್ರಸೂತಿ:_*
*°°° °°° °°° °°° °°° °°°*
ಹೊಕ್ಕುಳ ಬಳ್ಳಿಯಲಿ
ಕನಸಿನ ಮಗುವು
ಮಿಸುಕಾಡಿತಿದೆ..

ಉಸಿರಿನ ಬಸಿರೀಗ
ಕನಸೊಂದನು
ಹಡೆಯ ಹೊರಟಿದೆ..

ಓ ಇನಿಯಾ,

ಮಗುವಿನ
ಎದೆಬಡಿತದ
ಪಲ್ಲವಿಯನ್ನು
ಕೇಳು ಬಾ...

ಹೆಜ್ಜೆಗಳು
ಕಳಗುಳಿ
ಇಡುವುದಾ
ಸವಿಯ ಬಾ..

ನಾ
ನೋಡಬೇಕೀಗ
ನಿನ್ನದೇ ಆದ
ಪ್ರತಿರೂಪವಾ..

ಅದಕ್ಕಾಗಿಯೇ
ಕಾಯುತಲಿರುವೆ
ದಿನಗಳ
ದೂಡುತಾ..

📝 - *#ಸಿಂಧು* 🍁

ಸಂತೆಯಲಿ ಗುನುಗಿದ ಹಾಡು: ನಮ್ಮ ಪ್ರೀತಿ ಗೂಡು

*ಸಂತೆಯಲಿ ಗುನುಗಿದ ಹಾಡು: ನಮ್ಮ ಪ್ರೀತಿ ಗೂಡು*

ನಿನ್ನ ನೋಡಿದ ಮೊದಲ ದಿನವೇ,
ಮೋಡಿ ಮಾಡಿದೆಯಲ್ಲ.
ಮಾತನಾಡಿದ ಮೊದಲ ಪದವೇ
ಮನದಲಿ ಉಳಿದಿದೆಯಲ್ಲ..

ಹೆಮ್ಮರವಾಗಿದೆ ನಮ್ಮ ಪ್ರೀತಿ
ಬೇಧಭಾವ ಮಾಡುವ ಹಾಗಿಲ್ಲ...
ನೆರಳೊಂದು ನಗುತ ನಿಂತಿದೆ
ದೂರು ಹಾಕುವ ಹಾಗಿಲ್ಲ...

ಅಚ್ಚುಮೆಚ್ಚು ನೀನೀಗ,
ಯಾರಿಗೂ ಹೇಳುವ ಹಾಗಿಲ್ಲ..
ಮುಚ್ಚುಮರೆಯಲಿ ಮೂಡಿದ ಪ್ರೀತಿ,
ಹಂಚಿಕೊಳ್ಳುವ ಹಾಗಿಲ್ಲ..

ನಮ್ಮ ಲೋಕದಲ್ಲಿ ನಾವೇ ಸುಖಿಗಳು,
ಸಂಶಯವಂತೂ ಇಲ್ಲವೇ ಇಲ್ಲ..
ಯಾರನು ಬರಲು ನಾನು ಬಿಡೆನು,
ಅಪನಂಬಿಕೆಯಂತೂ ನಿನಗೆ ಸಲ್ಲ..

ನಾಳಿನ ದಿನಗಳ ಕನಸಿನಲಿ,
ಇಂದಿನ ನೋವುಗಳ ಮರೆಯುವ ಮೆಲ್ಲ..
ಹರುಷದ ಕ್ಷಣಗಳ ನೆನಪಿಸುತ,
ಬಾನಾಡಿಗಳಾಗುವ ಬಾ ನಲ್ಲ..

📝 -ಸಿಂಧು ಭಾರ್ಗವ್ 🍁

ಅರಿವಿನ ದೀಪ

🙏🌸 ಅರಿವಿನ ದೀಪ -೦೧ 🌸🙏

🌸 ಹುಲುಮಾನವ 🌸
ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು
ಎಲ್ಲೋ ಕೊಳೆತು,  ಎಲ್ಲೋ ಕರಗಿ
ಹೋಗೋ ಜೀವ ನಮ್ಮದೆಂಬ
ವಿಷಯ ಅರಿಯದ ಮಾನವ,
ಹೆಣ್ಣು- ಹೊನ್ನು-ಮಣ್ಣಿಗಾಗಿ
ಹಾರಾಡುವುದ ನೋಡುವುದೇ ಒಂದು
ಹಾಸ್ಯಾಸ್ಪದ....  😏

🙏🌷 *_||•ಹರಿಃಓಂ•||_* 🌷🙏

@()@)(@)(@)(@)@
*||• ಅರಿವಿನ ದೀಪ-೨ •||*
☺🙏🍓🌷🌷🍓🌷☺
*||.ತಾಳ್ಮೆ ಅತೀ ಮುಖ್ಯ.||*
ಯಾರೂ ಜೊತೆಗಿಲ್ಲ ಎಂದೋ ಯಾರ ಸಹಾಯವೂ ನಮಗಿಲ್ಲ ಎಂದೋ ಕೆಲವೊಮ್ಮೆ ಕೊರಗಿದ್ದಿದೆ. ಆದರೆ ಎಲ್ಲರೂ ಎದುರಿಗೇ ಇದ್ದು ನಮ್ಮ ಕಷ್ಟಕ್ಕೆ ದನಿ ಕೂಡ ಆಗದಿದ್ದಾಗ ಉಂಟಾಗುವ ಸಂಕಟ ಅನುಭವಿಸಿದವರಿಗೇ ಗೊತ್ತು....

*"ಎಲ್ಲರಿದ್ದೂ ಯಾರೂ ಇಲ್ಲ ಎಂಬಂತೆ.. ಯಾರನ್ನೂ ಅವಲಂಬಿತರಾಗಬೇಡಿ.. ಆದರೆ ತಾಳ್ಮೆ, ಸಹನೆ, ಸಮಸ್ಯೆಗೆ ನಾವಾಗೇ ಪರಿಹಾರ ಕಂಡುಕೊಳ್ಳುವ ಜಾಣ್ಮೆ ಬೆಳೆಸಿಕೊಳ್ಳಿ"*


🙏🌷 *_||•ಹರಿಃಓಂ•||_* 🌷🙏

@()@()@()@()@
😊🍁 *_ಅರಿವಿನ ದೀಪ-೦೩_* 🍁😊
*ಮಾತು ಕಡಿಮೆಯಾಡಿದರೂ ಸಮಸ್ಯೆ ಏನಿಲ್ಲ, ಆಡಿದಮಾತು ಸರಿಯಾಗಿರಬೇಕು. ಕಾರಣ 'ಅವರು ನಮ್ಮ ಜೊತೆ ಮಾತನಾಡುವುದೇ ಇಲ್ಲಪ್ಪಾ..' ಎಂದು ಒಂದು ದೂರು ಬರಬಹುದು.. ಆದರೆ ನಮ್ಮ ಮನಸ್ಸಿಗೆ ತೋಚಿದ್ದನ್ನೆಲ್ಲಾ ಮಾತನಾಡಿ(ಸಲಿಗೆಯಿಂದಲೋ, ಕೋಪದಿಂದಲೋ) ಆ ಮಾತುಗಳು ಸಹ್ಯವೆನಿಸದೇ ಹೋಗಿ ನಂತರ  ಅವರ ಕೊನೆಉಸಿರಿರುವ ವರೆಗೂ ನೆನಪುಳಿಯುವಂತಾದರೆ ಮನಸ್ಸು ಅಸಮಧಾನದ ಕೂಪವಾಗಿ ಬಿಡುತ್ತದೆ..*

🙏🌷 *_||•ಹರಿಃಓಂ•||_* 🌷🙏

@()@()@()@()@
😊🍁 *_ಅರಿವಿನ ದೀಪ-೦೪_* 🍁😊
🐝🐝 ಮಗುವಿನ ಮನಸ್ಸು, ನಗುವಿನ ಮುಖ ಹೊಂದುವುದು ಎರಡೂ ಕಷ್ಟ🐝🐝
🌼🌸 ದೊಡ್ಡವರಾದ ಹಾಗೆ ಎರಡನ್ನೂ ಪೊರೆ ಕಳಚಿದ ಹಾವಿನಂತೆ ತೆಗೆದು ಹಾಕುವವರೇ ಜಾಸ್ತಿ .🌼🌸
🐣🐥 ಹಾಗೆ ಮಾಡದೇ, ಅದರ ಜೊತೆಗೆ ಜೀವನವನ್ನು  ನಡೆಸಿ. ಸದಾ ಮಗುವಿನಂತೆ ಬಂದ ನೋವನ್ನು ಕ್ಷಣದಲ್ಲಿ ಮರೆಯುತಾ ಮತ್ತೆ ನಿಮ್ಮ ಕರ್ತವ್ಯದಲ್ಲಿ ತೊಡಗಿಕೊಳ್ಳಿ..🐥🐣

🙏 || ಹರೇ_ಕೃಷ್ಣಾ || 🙏

ಸಂತೆಯಲಿ ಗುನುಗಿದ ಹಾಡು: ಪ್ರಿಯ ಮಾಧವ

*_ಸಂತೆಯಲಿ ಗುನುಗಿದ ಹಾಡು: ಪ್ರಿಯ ಮಾಧವ_*

ಮುತ್ತಿನು ಸುರಿಸುವ
ಮುರುಳಿಯ ಗಾನವು
ಮನವನು ತಣಿಸಿದೆ ಇಂದು...

ದೂರದ ಊರಿಗೆ
ತೇಲಿಸಿ ಮನದ
ಭಾರವ ಇಳಿಸಿದೆ ಇಂದು...

ಮನದಲಿ ಶ್ಯಾಮನ
ನೆನಪುಗಳೇ
ತುಂಬಿವೆ ಸಾವಿರಾರು..

ಶ್ಯಾಮನ ಗಾನಕೆ
ಮನವೀಗ
ಭ್ರಮರವಾಗಿದೆ ನೋಡು..

ಇನಿಯನ ಜೊತೆಯಲಿ
ಇರುವೆನು ಎನ್ನುವ
ಹರುಷವು  ನನ್ನೀ ಮನಕೆ..

ಪರಿಶುದ್ಧ ಪ್ರೇಮದ
ಅಮಲಿನಲಿ ಇರುವೆವು
ನಾವೀಗ ಜೊತೆಜೊತೆಗೆ...

📝 -ಸಿಂಧು ಭಾರ್ಗವ್. 🍁

ಕವನ: ಪುಟಾಣಿ ಲಕುಮಿ

ಕವನ: ಪುಟಾಣಿ ಲಕುಮಿ

ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು
ಗೆಜ್ಜೆಯ ದನಿಯ ಮನದಲಿ ಬಿಟ್ಟು
ಎತ್ತ ಹೋದಳು ಲಕುಮಿ..

ಕಿಲಕಿಲ ನಗುತ ನೋವನು‌‌ ಮರೆಸಲು
ಮತ್ತೆ ಬಂದಳು ಲಕುಮಿ..

ಹಾಲುಗೆನ್ನೆಯ
ನೋಡುತ ಕುಳಿತರೆ
ನಾಳಿನ ಚಿಂತೆಯು ಬರದು..

ಹವಳದ ತುಟಿಯ
ನಗುವ ನೋಡಿದರೆ
ಬಾಳಲಿ ಚಿಂತೆಯು ಇರದು..

ಮುದ್ದು ಮಗುವಿನ
ಆಟವ ನೋಡುತ
ಸಮಯವು ಸರಿಯುತಲಿಹುದು..

ಮನೆಯ ದೀಪವು
ನಗುತಿರಲೆಂದು
ಮನವು ಹರಸುತಲಿಹುವು..
ಸದಾ ಮನವು ಹರಸುತಲಿಹುದು..

📝 - ಸಿಂಧು ಭಾರ್ಗವ್ 🍁

ಸಂತೆಯಲಿ ಗುನುಗಿದ ಹಾಡು : ಮಳೆಯು ಸುರಿಯುತಿದೆ

ಸಂತೆಯಲಿ ಗುನುಗಿದ ಹಾಡು : ಮಳೆಯು ಸುರಿಯುತಿದೆ..

ಸುತ್ತ‌ಮುತ್ತಲು
ಕಪ್ಪು ಕತ್ತಲು
ಮಳೆಯು ಸುರಿಯುತಿದೆ..

ಹಗಲು ಇರುಳಿನ
ಅರಿವೇ ಆಗದು
ಮಳೆಯು ಸುರಿಯುತಿದೆ...

ಕಪ್ಪೆಗಳ ಮನವೀಗ
ತಂಪಗಾಗಿದೆ
ಮಳೆಯು ಸುರಿಯುತಿದೆ...

ಸೊಳ್ಳೆಗಳ ಬಳಗದ
ಹಾಡು ಕೇಳಿದೆ
ಮಳೆಯು ಸುರಿಯುತಿದೆ...

ಮಿಂಚು ಹುಳುಗಳು
ಮಿಂಚುತಲಿವೆ
ಮಳೆಯು ಸುರಿಯುತಿದೆ..

ನವಿಲುಗಳು ಗರಿಯ
ಮುದುಡಿ ಕುಳಿತಿವೆ
ಮಳೆಯು ಸುರಿಯುತಿದೆ...

ಹೂವುಗಳು ನೆನೆದು
ತೊಪ್ಪೆಯಾಗಿವೆ
ಮಳೆಯು ಸುರಿಯುತಿದೆ...

ಕೆರೆ-ಕಟ್ಟೆಗಳು
ತುಂಬಿ ಹರಿದಿದೆ
ಮಳೆಯು ಸುರಿಯುತಿದೆ...

ಗಾಳಿಯ ರಭಸಕೆ
ಮರಗಳುರುಳಿವೆ
ಮಳೆಯು ಸುರಿಯುತಿದೆ...

ಕಡಲ ಕೊರೆತವು
ಅಧಿಕವಾಗಿದೆ
ಮಳೆಯು ಸುರಿಯುತಿದೆ...

ಮೀನುಗಾರರ
ಕೆಲಸ ನಿಂತಿದೆ
ಮಳೆಯು ಸುರಿಯುತಿದೆ...

ಕರಿದ ಖಾದ್ಯಕೆ
ಬೇಡಿಕೆ ಬಂದಿದೆ
ಮಳೆಯು ಸುರಿಯುತಿದೆ...

ಕಡುಬು ಪತ್ರೊಡೆ
ಘಮವ ಸೂಸಿದೆ
ಮಳೆಯು ಸುರಿಯುತಿದೆ...

ಗೊರಬು- ಕೊಡೆಯು
ತಲೆಯ ಏರಿದೆ
ಮಳೆಯು ಸುರಿಯುತಿದೆ...

ನೇಗಿಲ ಯೋಗಿಗೆ
ಕೆಲಸ ಹೆಚ್ಚಿದೆ
ಮಳೆಯು ಸುರಿಯುತಿದೆ...

- 📝 ಸಿಂಧು ಭಾರ್ಗವ್ 🍁

(( ಕರಾವಳಿಯ ಮಳೆಯ ಸೊಬಗನು ನೋಡಲೆರಡು ಕಣ್ಣು ಸಾಲದು..ಮನದಲೇನೋ ಹರುಷ ಭಯವು ಜೊತೆಜೊತೆಗೆ ಮೂಡುವುದು.. ))

Thursday 15 June 2017

Song about Our Beautiful Life

ಹಾಡು : ಜೀವನಕೆ ಮೂರರ ನಂಟು

ಮೂರೇ ಮೂರು ಅಕ್ಷರದಲ್ಲಿ
ಮೂರು ದಿನದ ಬಾಳು ಇದೆ...
ನಗುತ ಅಳುತ ಜೀವನವನ್ನು
ಸಾಗಿಸುವ ಛಲವು ಇದೆ....
*
ಜನನ ಎಂಬ ಮೂರಕ್ಷರದಿಂದ
ಪುಟ್ಟ ಪ್ರಪಂಚವ ನೋಡುವೆವು..
ಹೆತ್ತವರ ಆರೈಕೆಯಲ್ಲಿ ಆರು
ವರುಷವ ಕಳೆಯುವೆವು..
*
ಕಲಿಕೆ ಎಂಬ ಮೂರಕ್ಷಕ್ಕಾಗಿ
ಶಾಲೆಯ ಮೆಟ್ಟಿಲ ಏರುವೆವು..
ಶಿಕ್ಷಕರ ಭೋದನೆಯಿಂದ
ವಿನಯವನ್ನು ಕಲಿಯುವೆವು..
*
ವ್ಯಾಸಂಗವನ್ನು ಮುಂದುವರೆಸಿ
 ಸಾಧನೆಯನ್ನು ಮಾಡುವೆವು..
ಸಹನೆಯ ಜೊತೆಗೆ ಶೋಧನೆಯು
 ಸೇರಿ ಉನ್ನತ ಹುದ್ದೆಗೆ ಏರುವೆವು..
*
ಯವ್ವನ ಎಂಬ ಪಾಶಕೆ ಸೋತು
 ಮದುವೆ ಗೆ ಬಲಿಯಾಗುವೆವು‌..
ಸಂಗಾತಿಯ ಜೊತೆಗೆ ಒಲುವೆಯ
 ಬೆಳೆಸಿ ಮಕ್ಕಳನ್ನು ಪಡೆಯುವೆವು..
*
ಸಂಸಾರದ ನೊಗವ ಸಾಗಿಸಲೆಂದು
 ದುಡಿಮೆಗೆ ಕಟಿಬೀಳುವೆವು..
ಜೀವನ ಹೀಗೆ ಸಾಗುತಲಿ
ವೃದ್ಧಾಪ್ಯವು ಬಂದು ಆವರಿಸುವುದು...
*
ಖಾಯಿಲೆ ಎಂಬ ವೈರಿಗಳಿಂದ
 ನೆಮ್ಮದಿಯು ದೂರಾಗುವುದು..
ಹಾಗೋ ಹೇಗೋ ದಿನಗಳ ದೂಡುತ
ಮರಣವು ಸಮೀಪಿಸುವುದು..
*
ಮೂರೇ ಮೂರು ಅಕ್ಷರದಲ್ಲಿ
ಮೂರುದಿನದ ಬಾಳು ಇದೆ...
ನಗುತ ಅಳುತ ಜೀವನವನ್ನು
ಸಾಗಿಸುವ ಛಲವು ಇದೆ....

📝 - ಸಿಂಧು ಭಾರ್ಗವ್ 🍁

Sunday 11 June 2017

Poem : kattale kavidide

ಹಾಡು : ಕತ್ತಲೆ ಕವಿದಿದೆ ನಲ್ಲ

ಕತ್ತಲೆ ಕವಿದಿದೆ ನಲ್ಲ...ಹತ್ತಿರ ಬಾ ನೀ ಮೆಲ್ಲ..
ಮಳೆಯನೇ ನೋಡು‌ ನಲ್ಲ
ಹೊಸ ಭಾವವು ಮೂಡಿದೆಯಲ್ಲ..
*
ಮಿಂಚು ಬಂದರೆ ನಲ್ಲ
ಭಯವು ಕಾಡುವುದಲ್ಲ
ಗುಡುಗಿನ ಸದ್ದಿಗೆ ನಲ್ಲ
ನಡುಗಿ ಹೋಗುವೆನಲ್ಲ..
**
ಕಪ್ಪೆಯ ನೋಡು ನಲ್ಲ
ಒಟ ಒಟಗುಟ್ಟುತ್ತಿದೆಯಲ್ಲ..
ಜೀರುಂಡೆಯ ಹಾಡಿದೆಯಲ್ಲ
ಏಕಾಂತಕೆ ತಡೆ ಮಾಡುವುದಲ್ಲ..
***
ಚಟಪಟ ಮಳೆಗೆ ನಲ್ಲ
ಮನ ಮಗುವಂತಾಗಿದೆಯಲ್ಲ..
ಕೈಕೈ ಹಿಡಿಯುತ ನಲ್ಲ..
ನಲಿದಾಡುವ ಮಳೆಯಲಿ ಬಾ ನಲ್ಲ..
ಕತ್ತಲೆ ಕವಿದಿದೆ ನಲ್ಲ...ಹತ್ತಿರ ಬಾ ನೀ ಮೆಲ್ಲ..
****

- ಸಿಂಧು ಭಾರ್ಗವ್.

ಕವನ : ಬಿಸಿಯುಸಿರು

ಬಿಸಿಯುಸಿರು


ನೆಮ್ಮದಿ ಇಲ್ಲದ ಬಾಳಿನಲಿ
ನೆಮ್ಮದಿಯ ಹುಡುಕುತ್ತಾ ಹೊರಟೆ..
ನನ್ನ ನೆರಳೇ ಹಿಂದುಮುಂದು
 ಹೋಗುತ್ತಿತ್ತು...
ಬಿಸಿಲಿಗೆ ಬಾಯಾರಿಕೆ ಹೆಚ್ಚಾಗಿ
ಬಾಯಿ ಒಣಗುತ್ತಿತ್ತು...
ನೆರಳು ಕೊಡುವ ಮರವೇ
ಮೂತಿ ತಿರುಗಿಸುತ್ತಿತ್ತು‌...
ಸಿಹಿ ಇಲ್ಲದ ಹಣ್ಣುಗಳು,
ಘಮವಿಲ್ಲದ ಹೂವುಗಳು.‌‌..
ಬರಡು ಬರಡು ಎನಿಸುವ
ಪ್ರಕೃತಿಗೇನೆ ನೆಮ್ಮದಿಯಿಲ್ಲ...
ಮಳೆರಾಯನ ಆಗಮನದ
ಸುಳಿವೇ ಇಲ್ಲ..
ತಂಪಿಲ್ಲ, ಮನಕೆ ಹಿತವಿಲ್ಲ..
ಸುತ್ತಮುತ್ತಲೂ ಎತ್ತಲೂ ಹಿತವೆಂಬುದಿಲ್ಲ...

- ಸಿಂಧು ಭಾರ್ಗವ್.

Wednesday 17 May 2017

ಸಂತೆಯಲ್ಲಿ ಗುನುಗಿದ ಹಾಡು : ರಾಧೆ ರಾಧೆ ಮನವನು ತಣಿಸಿದೆ ನೀ..




(@)(@)(@)



ಸಂತೆಯಲ್ಲಿ ಗುನುಗಿದ ಹಾಡು : ರಾಧೆ ರಾಧೆ ಮನವನು ತಣಿಸಿದೆ ನೀ..
*** *** ***
ರಾಧೆ ರಾಧೆ ಮನವನು ತಣಿಸಿದೆ ನೀ..
ರಾಧೆ ರಾಧೆ ಪ್ರೀತಿಯ ಉಣಿಸಿದೆ ನೀ..

ನಿನ್ನಯ ಪ್ರೀತಿಗೆ ಹೂಬನ ಅರಳಿದೆ..
ನಿನ್ನಯ ಸ್ನೇಹಕೆ ದುಂಬಿಯು ಹಾಡಿದೆ..
ಕೊಳಲಿನ ನಾದಕೆ ನೀ ಜೊತೆಯಾದೆ..
ಕಿರುಬೆರಳನು ಹಿಡಿಯುತ ನೀ ನಡೆದೆ..

 ರಾಧೆ ರಾಧೆ ಮನವನು ತಣಿಸಿದೆ ನೀ...

ಸೋಲಲಿ ನಿಂತು ಸಲಹೆಯ ನೀಡಿದೆ..
ನೋವಲಿ ನಿಂತು ಬೆಂಬಲ ನೀಡಿದೆ..
ಹೆಂಗಳೆಯರ ಮನ ಗೆದ್ದವ ನಾನು..
ನನ್ನೀ ಮನವ ಗೆದ್ದವಳು ನೀನು..

ರಾಧೆ ರಾಧೆ ಮನವನು ತಣಿಸಿದೆ ನೀ..

ನಮ್ಮಯ ಪ್ರೀತಿಯು ಜನರಿಗೆ ಮಾದರಿ
ನೋವನು ಮರೆಸುವ ಪ್ರೀತಿಯು ಸಿಗಲಿ
ನಮ್ಮಯ ನಡತೆಯು ಲೋಕಕೆ ಮಾದರಿ
ಸ್ವಾರ್ಥವು ಇಲ್ಲದೆ ಪ್ರೀತಿಯ ಮಾಡಲಿ

📝 ಸಿಂಧು ಭಾರ್ಗವ್ 🍁


Tuesday 16 May 2017

ಕವನ: ಆರೋಗ್ಯದ ಕಡೆ ಗಮನ ನೀ ಕೊಡು

ಕವನ: ಆರೋಗ್ಯದ ಕಡೆ ಗಮನ ನೀ ಕೊಡು


*** *** ***
ನಾನಿನ್ನು ಹೊರಡುವೆ ಅಳದಿರು ಉಸಿರೆ..
ನಾನಿನ್ನು ಹೊರಡುವೆ ಕೊರಗದಿರು ಉಸಿರೇ..
ಈ ವಿರಹ ಅನಿವಾರ್ಯ, ಬೇಕಂತಲೇ ಅಲ್ಲ..
ನಮ್ಮ ಕನಸೊಂದು ಬರಲಿಕ್ಕಿದೆಯಲ್ಲ..

ಕಾಯಬೇಕು, ದೂರವಿರಲೇ ಬೇಕು..
ತವರು ಮನೆಯಲಿ ನಾಲ್ಕು ದಿನ ಕಳೆಯಲೇ ಬೇಕು..

ನಾನು ಮಾಡಿದ ಕೈರುಚಿ ನೆನಪಾಗಬಹುದೀಗ..
ನಾನಾಡಿದ ಜಗಳ ಕಾಡುವುದು ನಿನಗೀಗ..

ಸಾಮೀಪ್ಯ ಬಯಸಲಾಗೊಲ್ಲ,ಕೈಬಳೆ ಸದ್ದಿಲ್ಲ ..
ರೇಗಿಸಲು ನಾನಿಲ್ಲ, ಮುದ್ದಿಸಲೂ ಜೊತೆಗಿಲ್ಲ..

ನನ್ನ ಕೆಲಸಗಳೊಂದಿಷ್ಟು ಹೊರೆಯಾಗಬಹುದೀಗ
ಮನೆಯಲಿ ಖಾಲಿತನ ಕಾಡಬಹುದೀಗ..

ಹೊತ್ತೊತ್ತಿಗೆ ಊಟವ ನೀಮಾಡು
ರಾತ್ರಿಯ ನಿದಿರೆಯ ತಪ್ಪಿಸದಿರು

ಕೋಪವು ಬರುವುದು, ರೇಗುವೆ ನಿನ್ನ ಮೇಲೆ..
ಪ್ರೀತಿಯು ಕಡಿಮೆ ಆದಂತೆ ಅನಿಸಿದಾಗ ನನ್ನ ಮೇಲೆ..

ನಾಮಾಡಿದ ತಪ್ಪನು ನೀ‌ ಕ್ಷಮಿಸು ಮನವೇ....
ದುಡುಕಿಯಾಡಿದ ಮಾತನು ಮರೆತುಬಿಡು ಮನವೇ..

ನಾನಿನ್ನು ಹೊರಡುವೆ ಅಳದಿರು ಉಸಿರೆ..
ನಾನಿನ್ನು ಹೊರಡುವೆ ಕೊರಗದಿರು ಉಸಿರೇ..

- ಸಿಂಧು ಭಾರ್ಗವ್.

Monday 15 May 2017

ಲೇಖನ : "ತವರುಮನೆ ದೀಪ ನಮ್ಮ ತಾಯಿಯ ರೂಪ"

ಲೇಖನ : "ತವರುಮನೆ ದೀಪ ನಮ್ಮ ತಾಯಿಯ ರೂಪ"

Some Photos Of My Family....






ಅಮ್ಮನ ಹಾಗೆ ಯಾರೂ ಇಲ್ಲ..ಅಮ್ಮನಂತೆ ಎಲ್ಲೂ ಇಲ್ಲ. ಮೊದಲಿಗೆ ಎಲ್ಲಾ ತಾಯಿಯಂದಿರಿಗೆ ಅಮ್ಮಂದಿರ ದಿಬಾಚರಣೆಯ ಶುಭಹಾರೈಕೆಗಳು.
ಮಗುವಿನ ಮೊದಲ ಅಳುವ ಆಸ್ವಾದಿಸುವ, ಜಗವ ತೋರಿಸುವ,ನಗುವ ತರಿಸುವ ನೋವ ಮರೆಸುವ "ಅಮ್ಮ".....
***
ಏನ ಹೇಳಲಿ ಅವಳ ಬಗ್ಗೆ. ತ್ಯಾಗವನ್ನೇ ಮೈಗಂಟಿಸಿಕೊಂಡವಳು
ವಯಸ್ಸೇನು ಮುದುಕಿಯದೇ..? ಎಲ್ಲಾ ಸುಖವ ಕಂಡವಳೇ? ಮಕ್ಕಳು ಮರಿಗಳನ್ನ ಎತ್ತಿ ಆಡಿಸಿದವಳೇ.? ಎಳೆವಯಸ್ಸಿನಲ್ಲಿಯೇ ಹೊಂದಿಕೊಳ್ಳುವ ಗುಣವ ಬೆಳೆಸಿಕೊಂಡವಳು.‌ ಕರಿಮಣಿ ಸರವ ಅಡವಿಡಲು ಕೊಟ್ಟು ಪತಿರಾಯ ಏನೋ ಹೊಸ ಜೀವನವ ಶುರುಮಾಡುವ ,ಹೊಸ ಉದ್ಯೋಗ ಮಾಡಲು ಹೊರಟಿರುವ ಎಂಬ ನಂಬಿಕೆ ಇಟ್ಟಿದ್ದವಳು. ರೇಶಿಮೆ ಸೀರೆಗೆ ಆಸೆ ಪಡದ, ಕಾಟನ್ ಸೀರೆಯ ಸೊಸೈಟಿಯಿಂದ ತಂದು ಉಡುತ್ತಿದ್ದಳು. ತವರಿನಲ್ಲಿ ಚಿನ್ನದ ಒಡವೆ ಎಲ್ಲೇ ? ಎಂದು ಕೇಳಬಾರದಲ್ಲ,ಹಾಗಾಗಿ ಉಮಾಗೋಲ್ಡ್ ಸರ ಮತ್ತು ಬಳೆಗಳನ್ನು ತೊಡುತ್ತಿದ್ದವಳು‌. ಸ್ವಲ್ಪವೂ ಗಂಡನ ಮೇಲೆ ಅಸಮಧಾನ ತೋರಿಸುತ್ತಿರಲಿಲ್ಲ. ಜಗಳ ಮಾಡುತ್ತಿರಲಿಲ್ಲ. ಗಂಡನನ್ನು ದೂರುತ್ತಿರಲಿಲ್ಲ. ಮಕ್ಕಳ ಹತ್ತಿರವೆಲ್ಲ ತಂದೆಯ ಬಗ್ಗೆ ದೂರು ಹೇಳುತ್ತಿರಲಿಲ್ಲ. ಕೈಹಾಕಿದ ಕೆಲಸವೆಲ್ಲ ಮಸಿಯಾಗುತ್ತಿದ್ದರೂ ಏನೋ ಒಂದು ನಂಬಿಕೆಯಿಂದ ಗಂಡನಿಗೂ ಸಮಾಧಾನ ಮಾಡಿ "ನಾಳೆಯ ಜೀವನ ನಮ್ಮದೇ..." ಎಂಬ ಆತ್ಮವಿಶ್ವಾಸ ತುಂಬುತ್ತಿದ್ದವಳು. ತನ್ನ ಗಂಡನನ್ನು ಯಾರ ಎದುರಿಗೂ ಹೆಚ್ಚಾಗಿ ತವರು ಮನೆಯಲ್ಲಿ ಅಕ್ಕ ತಂಗಿಯರ ಎದುರಿಗೆ ಕಡಿಮೆ ಎಂಬಂತೆ ಮಾತನಾಡುತ್ತಿರಲಿಲ್ಲ. ಅವರಿಗೂ ಮಾತನಾಡಲು ಬಿಡುತ್ತಿರಲಿಲ್ಲ.ಹಾಗೇನಾದರೂ ಹೇಳಿದರೆ ಜಗಳಕ್ಕೇ ನಿಲ್ಲುತ್ತಿದ್ದಳು.
***
ಅಮ್ಮ ಏನೆಲ್ಲ ನಮಗೆ ಕಲಿಯಲು ಬಿಟ್ಟಳು. ಮಕ್ಕಳ ಜೀವನಕ್ಕಿಂತ ಇನ್ನೊಬ್ಬರ ಸತಿಯಾಗಿ ಬಾಳಸಂಗಾತಿಯಾಗಿ ಹೇಗೆ ಬದುಕಬೇಕು ಎಂಬುದನ್ನೇ  ತೋರಿಸಿಕೊಟ್ಟವಳು. ಕಲಿಸಲಿಲ್ಲ‌. ಹತ್ತಿರ ಕುಳ್ಳಿರಿಸಿ ಏನೆನ್ನನ್ನೂ ಹೇಳಿಕೊಡಲಿಲ್ಲ‌ . ಅವಳು ನಡೆದುಕೊಂಡದ್ದೇ ಹಾಗೆ. ಕಷ್ಟದಲ್ಲಿ ಜೀವನ ನಡೆಸುವುದಿದೆಯಲ್ಲ, ಅದಕ್ಕೂ ಮೇಲಾಗಿ ಮಕ್ಕಳಿಗೆ ಗಂಡ-ಹೆಂಡಿರ ಹಣಕಾಸಿನ ಕಷ್ಟ ಗೊತ್ತಾಗದಂತೆ ಜೀವನ ನಡೆಸುವುದಿದೆಯಲ್ಲ  ನಿಜಕ್ಕೂ ಅಧ್ಬುತ. ಗಟ್ಟಿಗಿತ್ತಿ. ಧೈರ್ಯವಂತೆ. ಕೈಯಲ್ಲಿ ಹಣ ಬೇಕಾಗುವಷ್ಟು ಇಲ್ಲದಿದ್ದರೂ ಮಕ್ಕಳ ಬೇಕುಬೇಡಗಳನ್ನು ಪೂರೈಸುವುದು ನಿಜಕ್ಕೂ ಒಂದು ಸವಾಲು. ಒಂದು ಮೂವತ್ತು ವರುಷದ ಹಿಂದೆ ಹೆಚ್ಚಿನವರ ಜೀವನ ಹೀಗೆ ಇದ್ದಿರುತ್ತದೆ. ಅವರ ಮಕ್ಕಳು ಹೀಗೆ ಯೋಚಿಸುವವರಾಗಿರುತ್ತಾರೆ. ಬಡತನದ ,ಕಷ್ಟದ ಜೀವನವೇ ಆಗೆಲ್ಲ ಇದ್ದಿತ್ತು. ಅದೂ ಮೊದಲೆರಡು ಮಕ್ಕಳು ಜಾಸ್ತಿಯೇ ಜೀವನವನ್ನು ಬಹಳ ಹತ್ತಿರದಿಂದ ಅಪ್ಪ ಅಮ್ಮ ನಿಂದ ಕಲಿತಿರುತ್ತಾರೆ. ಅಂತವರಿಗೆ ಈಗ ಬದುಕು ಕಟ್ಟಿಕೊಳ್ಳಲು ಕಷ್ಟವೆನಿಸುವುದಿಲ್ಲ. ಹೊಂದಾಣಿಕೆ, ಅನ್ಯೋನ್ಯತೆ, ಪಾರಸ್ಪರಿಕ ಅರ್ಥಮಾಡಿಕೊಳ್ಳುವಿಕೆ, ನಂಬಿಕೆ, ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಗಂಡ ಎಂಬ ಪ್ರೀತಿ , ಅವ ನನ್ನವನು ಎಂಬ ಪ್ರೀತಿ ಬಾಳ ಪಯಣವನ್ನು ಇನ್ನಷ್ಟು ಸಂತೋಷದಿಂದ ನಡೆಸುತ್ತಿರುತ್ತದೆ.ಅಷ್ಟೆ ಬೇಕಾಗಿರುವುದು.
***
ಈಗಿನ ಜನರೇಷನ್ (ಕಾಲದ) ಮಕ್ಕಳಲ್ಲಿ ಪಾರಸ್ಪರಿಕ ನಂಬಿಕೆ ಎಂಬುದೇ ಇರುವುದಿಲ್ಲ. ಅದಕ್ಕಿಂತಲೂ ಜಾಸ್ತಿ ತಾನೂ ಓದಿದ್ದೇನೆ, ಉದ್ಯೋಗಸ್ಥೆ.ಒಂಟಿಯಾಗಿ ಜೀವಿಸಬಲ್ಲೆ, ನಾನು ಯಾರ ಸಹಾಯ ಇಲ್ಲದೆಯೂ ಬದುಕಬಲ್ಲೆ ಎಂಬ ಅಹಂ ತಲೆಯಲ್ಲಿ ಕುಣಿದಾಡುತ್ತಿರುತ್ತದೆ‌. ಹೊಂದಿಕೊಂಡು ಹೋಗಬೇಕು ಎಂಬ ಪದಕ್ಕೆ ಬೆಲೆ ಕೊಡುವುದಿಲ್ಲ. ಅರ್ಥವೂ ಗೊತ್ತಿರುವುದಿಲ್ಲ. ಚಿಕ್ಕಚಿಕ್ಕ ವಿಷಯಕ್ಕೂ ತಪ್ಪು ಕಂಡು ಹಿಡಿಯುವುದು, ಸಂಗಾತಿಯಿಂದ ಬಿಡುಗಡೆ ಪಡೆಯುವುದರ ಬಗ್ಗೆಯೇ ಯೋಚಿಸುತ್ತಾ ಇರುತ್ತಾರೆ. ಜೊತೆಗೆ ಕೂಡಿ ಬಾಳಬೇಕೆನ್ನುವ ಆಸೆ ಕನಸುಗಳು ಇರುವುದಿಲ್ಲ. ಅವರಿಗೆ ನಾವು ಏನೂ ಹೇಳಲೂ ಆಗುವುದಿಲ್ಲ. ಕೇಳಿದರೆ 'ಕಾಲ ಬದಲಾಗಿದೆ, ನಿಮ್ಮಹಾಗೆ 1947ನಲ್ಲೇ ಯಾರು ಇರಲು ಬಯಸೋದಿಲ್ಲ' ಎನ್ನುವರು.ಎಂತಹ ಹಾಸ್ಯಾಸ್ಪದ. ಕಾಲ ಬದಲಾಗಿಲ್ಲ. ಮನಸ್ಥಿತಿ ಬದಲಾಗಿದೆ. ಅಮ್ಮನ ಒಮ್ಮೆ ನೆನಪು ಮಾಡಿಕೊಂಡರೆ ಅವಳ ತ್ಯಾಗ ಅವಳು ಪಟ್ಟ ಕಷ್ಟ ಒಮ್ಮೆ ನೆನಪು ಮಾಡಿಕೊಂಡರೆ ಹೀಗೆ ಹೇಳಲು ಬರುವುದಿಲ್ಲ ಅನ್ನಿಸುತ್ತದೆ.

- ಸಿಂಧು ಭಾರ್ಗವ್.

Saturday 13 May 2017

ಕವನ : ಬೋಳು ಭಾವನೆ

ಕವನ : ಬೋಳು ಭಾವನೆ



ಭಾವನೆಗಳನ್ನೆಲ್ಲ ಕಳಚಿಟ್ಟಿದ್ದೇನೆ..
ಕೆಲವನ್ನು ನೆಲದೊಳಗೆ,
ಹಲವನ್ನು ಮನದೊಳಗೆ
ಮುಚ್ಚಿಟ್ಟಿದ್ದೇನೆ..

ಮಳೆಯನ್ನೇ ಕಾಯುತಿರುವೆ
ಮೊಳಕೆಯೊಡೆಯ ಬಹುದು..
ಮನ ತಣಿಯುವುದ ನೋಡುತಿರುವೆ
ಕನಸು ಚಿಗುರಬಹುದು..

ಪ್ರೀತಿಯ ನಾಯಕನಾತ
ಮರೆತು ಹೋಗಿರುವ..
ಮನದ ನಾವಿಕನಾತ
ತೊರೆದು ಸಾಗಿರುವ..

ನನಗೀಗ ಅಲೆಗಳೇ ಗೆಳತಿಯರು..
ಭಾವನೆಗಳಿಗೆ ಜೊತೆಗಿಹರು..

ಕ್ಷಮಿಸುವುದ ಕಲಿಸುತ್ತಾ
ನೋವುಗಳ ಮರೆಸಿಹರು..
ಮತ್ತೊಂದು ಹೊಸ ಪರ್ವ
ಬರುವ ಭರವಸೆ ತುಂಬಿಹರು..

- ಸಿಂಧು ಭಾರ್ಗವ್.🍁

Thursday 11 May 2017

ಕವನ: ಪರಮ ಸ್ವಾರ್ಥಿಯ ಕೊನೆಯೆಂದು??

ಸುಂದರ_ಪ್ರಕೃತಿಗೇ ಎಲ್ಲರೂ ಮಕ್ಕಳೇ..

ತಂಪಾಗಿ ಬೀಸುವ ಗಾಳಿ ಕೇಳಲಿಲ್ಲ ನೀನು ಯಾವ ಜಾತಿ?
ಬೆಳಕು ನೀಡುವ ರವಿಯು ಕೇಳಲಿಲ್ಲ ನಿನದು ಯಾವ ಮತ?

ಅಕ್ಕಿ ಬೆಳೆಯುವ ಮಣ್ಣಿಗೆ ಜಾತಿಮತದ ಹಂಗಿಲ್ಲ..
ನೀನು ಮೇಲ್ಜಾತಿ ನೀನು ಕೀಳು ಎಂದು ಹರಿವ ನೀರು ಇಂಗಿಲ್ಲ..

ನಮಗಾಗಿ ಎಲ್ಲವನೂ ನೀಡುವ ತ್ಯಾಗಮಯಿ ಪ್ರಕೃತಿ ಮಾತೆ,
ಆದರೆ ಮನುಜ ಅದೆಲ್ಲವೂ ನನದೇ ಎಂದು ಸ್ವಾಧೀನಕ್ಕೆ ತಂದುಕೊಂಡು ಕೊಡುಕೊಳ್ಳುವಿಕೆಯಲಿ ಜಾತಿಮತಧರ್ಮದ  ದುರ್ಗಂಧ ಬೀರುತ್ತಿದ್ದಾನೆ..

ಪರಮಸ್ವಾರ್ಥಿಯ ಕೊನೆಯೆಂದು?!? :

ಧರ್ಮ-ಕರ್ಮಗಳ ನಡುವೆ ನಮ್ಮ ಜೀವನ.

:: 😍😂😉😊😍😂😉
ಯೋಗರಾಜ್ ಭಟ್ರಿಂದ ಸ್ಪೂರ್ತಿ ಪಡೆದ ಸಿಂಧು. ವಿಷಯವಸ್ತು : ಧರ್ಮ-ಕರ್ಮಗಳ ನಡುವೆ ನಮ್ಮ ಜೀವನ..
😍😂😉😊😍😂😉 ::

೧) ಪರಿಶುದ್ಧ ಆತ್ಮವಿರುವವರಿಗೆ ಈ ಜಾತಿ-ಮತ-ಧರ್ಮದ ಯಾವುದೇ ಹಂಗಿರುವುದಿಲ್ಲ.

೨) ನಾವು ಮಾಡುವ ಕೆಲಸದಲ್ಲಿ ತೃಪ್ತಿಯ ಜೊತೆಗೆ ನಿಷ್ಠೆ ,ಪ್ರಾಮಾಣಿಕತೆ ಇರಲೇಬೇಕು. ಆಗಲೇ ಯಶಸ್ಸು ಸಿಗಲು ಸಾಧ್ಯ.

೩) ಜಗತ್ತಿನಲ್ಲಿ ಅನ್ಯಾಯ, ಅಧರ್ಮ, ಅಕ್ರಮ ತಾಂಡವವಾಡುತ್ತಿದೆ.
ಕಣ್ಣು, ಕಿವಿ, ಬಾಯಿಯನ್ನು
ಮುಚ್ಚಿಕೊಂಡ ಗಾಂಧೀಜಿಯ ಮೂರು ಮಂಗಗಳಿಗೆ ಕೈಸೋತು ಹೋಗುತ್ತಿದೆ.😢😯😐

೪)) ಭಾಷೆ ಬಗ್ಗೆಯಾಗಲಿ, ಧರ್ಮದ ಬಗ್ಗೆಯಾಗಲಿ ಅಂಧಾಭಿಮಾನ ಇರಕೂಡದು. ಅದು ಅದೆಷ್ಟೋ ಜನರ ಮಾನಹಾನಿಗೂ,ಪ್ರಾಣಹಾನಿಗೂ ಕಾರಣವಾಗುವುದು.
❌🙅✖

೫)) ಕಾಮ, ಕ್ರೋಧ, ಮೋಹ, ಮದ, ಮತ್ಸರ, ಲೋಭ,ಸಂಶಯ, ಮಮಕಾರ, ಅಹಂಕಾರ ಇವುಗಳು ಮನುಷ್ಯನ ಸಹಜವಾದ ಒಂಭತ್ತು ವೈರಿಗಳು. ಹಾಗೇ ಮನುಷ್ಯನಿಗೆ ಹುಟ್ಟುಗುಣಗಳಾಗಿ ಬಂದಿರುತ್ತವೆಯೇ ಹೊರತು ಯಾವುದೇ ಧರ್ಮಕ್ಕೆ ಅಂಟಿಕೊಂಡಿದ್ದಲ್ಲ.

ಆದರೆ, ಆದರೆ ಸ್ವಾರ್ಥಿಗಳು ತಮ್ಮ ಲಾಭಕ್ಕೋಸ್ಕರ ಒಬ್ಬ ವ್ಯಕ್ತಿ ಮಾಡಿದ ತಪ್ಪನ್ನು ಧರ್ಮದ ಹೆಸರಿನಲ್ಲಿ ಮುಚ್ಚಿಹಾಕಿಯೋ(ರಕ್ಷಿಸಲು) ಅಥವಾ ಅದೇ ಧರ್ಮದ ಹೆಸರಿನಲ್ಲಿ ಶಿಕ್ಷೆ ನೀಡಲು ಮುಂದಾಗುತ್ತಾರೆ..

(ಗೂಗಲ್ ಚಿತ್ರ)


🙏🌷 ಶುಭನುಡಿ🌷🙏

- ಸಿಂಧು ಭಾರ್ಗವ್ , ಬೆಂಗಳೂರು

ಜೀವನದ ಬಗ್ಗೆ ಒಂದು ಅವಲೋಕನ ಮಾವಿನ ವಾಟೆಯಂತೀ ಜೀವನ

ನಮ್ಮ ಜೀವನವೂ ಈ ಮಾವಿನ ವಾಟೆ ತರಹ. ಬರುವಾಗಲೂ ಬತ್ತಲೆ, ಹೋಗುವಾಗಲೂ ಬತ್ತಲೆ. ನಡುವೆ ಒಂದಷ್ಟು ದಿನ ಉಬ್ಬುವುದು ಕೊಬ್ಬುವುದು. ಮಾವಿನ ಹಾಗೆಯೇ ಮುರುಟಿಹೋದ ಮನಸ್ಸುಗಳು, ಕೊಳೆತುಹೋದ ಮನಸ್ಸುಗಳು, ಹೇಗೆ ಹೊರಗಿನಿಂದ ನೋಡಲು ಮಾವು ಸುಂದರವಾಗಿ ಕಾಣಿಸುತ್ತದೆಯೋ ಜನರೂ ಕೂಡ ಮುಖವಾಡ ಧರಿಸಿಕೊಂಡು ಸುಂದರವಾಗಿಯೇ ಮೋಸಮಾಡುವರು, ಮಾತನಾಡುವರು. ಆದರವರ ಮನಸ್ಸು ಸ್ವಾರ್ಥ, ಮತ್ಸರ, ದ್ವೇಷದ ಕೂಪವಾಗಿರುತ್ತದೆ.. ಅವರ ಸಂಗ ನಮಗೆ ಹುಳಿಮಾವು ತಿಂದ ಅನುಭವ ನೀಡುತ್ತದೆ.
**
ಪ್ರಾಯದಲ್ಲಿ ಹುಳಿ ತೋರಿಸುವುದು, (ಅಹಂ) ಬಿಸಿಲು-ಗಾಳಿ ,ಹಗಲು-ರಾತ್ರಿ ಎನ್ನದೇ ಮೈಯೊಡ್ಡಿ ನಿಂತು ಮಾವು ಹೇಗೆ ಮಾಗುವುದೋ ಮುಪ್ಪು ಬಂದಹಾಗೆ ದುಡಿತ, ಸವೆತದ ನಡುವೆ ನಮ್ಮ ಜೀವಿತದ ಅನುಭವದ ಸಿಹಿಯನ್ನು ಹಂಚಲಿಕ್ಕೆ ಶುರುಮಾಡುತ್ತೇವೆ.
**
ಆದರೆ ಎಲ್ಲಾ ಕಾಲದಲ್ಲಿಯೂ ,ಎಲ್ಲಾ ರುಚಿಯಲ್ಲಿಯೂ ಜನ ಮಾವನ್ನು ಇಷ್ಟ ಪಡುತ್ತಾರೆ.. ಹೇಗೆ ಉಪ್ಪು ಬೆರೆಸಿ , ಕಾರ ಬೆರೆಸಿ ತಿನ್ನುವರೋ ಹಾಗೆ ನಾವು ಜೀವನದಲ್ಲಿ ಸ್ನೇಹ-ಪ್ರೀತಿ ಬೆರೆಸಿ ಸೌಹಾರ್ದತೆಯಿಂದ ಬಾಳಬೇಕು..

- ಸಿಂಧು ಭಾರ್ಗವ್ 🍁

ಚುಟುಕು:: ನಾನು ಮತ್ತು ನನ್ನ ಕಡಲು




ನಾನು ಮತ್ತು ನನ್ನ _ಕಡಲು..

#ಶೃಂಗಾರ :
೧) ಕಡಲಿನಾಳದಲಿ ಚಿಪ್ಪೊಂದನ್ನು
ತಂದು ಕೊಡು ಇನಿಯಾ...
ಅದರಲ್ಲಿರುವ ಮುತ್ತಿನ ಜೊತೆಗೆ ನನ್ನ ನಾಲ್ಕು ಮುತ್ತನ್ನೂ ಸೇರಿಸಿ ನಿನಗೆ ಕೊಡುವೆ...😘
~
#ವೇದನೆ :
೨) ವಿರಹಿ ಅಲ್ಲ ನಾನು, ಕಡಲು ಜೊತೆಗಿಹುದು.‌..
ಅಲೆಗಳು ಒಂದೊಂದಾಗಿ ಬಂದು ಕಣ್ಣೀರೊರೆಸುವುವು...😢
~
#ಹಾಸ್ಯ :
೩) ನಾನು ಮತ್ತು ನನ್ನ ಕಡಲು,
ಸಂಜೆ ಅಮ್ಮ ಮಾಡಿದ ಬಂಗುಡೆ ಫ್ರೈಯಿಂದಲೇ ತುಂಬುವುದು ನನ್ನ ಒಡಲು.. 😝
~
#ವಾಸ್ತವ :
೪) ಸ್ತಬ್ಧವಾಗಿ ನಿಂತ ಬಂಡೆಗಳು,
ಸಾಲುಸಾಲು ತೆಂಗಿನ ಮರಗಳು,
ಜೊತೆಗೆ ಉಪ್ಪು ನೀರಿನಿಂದ ಕೂಡಿದ ಕಡಲು...
ಹಾಗೆ ನಮ್ಮ ಜೀವನವೂ,
ಆಗಾಗ ಬರುವ ಕಷ್ಟಗಳು,
ನಡುನಡುವೆ ಸುಖದ ಎಳನೀರು,
ನೊಂದಾಗ ಹೊರಹಾಕುವ ಉಪ್ಪು ಕಣ್ಣೀರು..🙏😍
~
#ಹಾಸ್ಯ :
೫) ದಿನವೂ ಸಂಜೆ ಕಡಲ ಅಲೆಗಳ ನೋಡುತ
ದೂರಾದ ಪ್ರಿಯತಮೆಯ ನೆನಪು ಮಾಡುತ ಬಾಟಲಿ ಏರಿಸುವೆ..
ಇಂದು ಸ್ವಲ್ಪ ಚೇಂಜ್ ಇರಲಿ ಅಂತ ಜ್ಯೂಸ್ ಕುಡಿತ ಇದ್ರೂ,
ನನ್ನ ಗೆಳೆಯ ಬಂದು
ಎಷ್ಟ್ ಕುಡಿತಿ ಮರಾಯ, ಸಾಕ್ ನಿಲ್ಸಾ.. ಅಬ್ಬಿ ಕರಿತಾ ಇದ್ಲ್ ಮನಿಗ್ ಹೋಪಾ ಬಾ.. ಅಂತಾನೆ.. 😇😝

- ಸಿಂಧು ಭಾರ್ಗವ್. 🍁

Wednesday 10 May 2017

ಸಂತೆಯಲಿ ಗುನುಗಿದ ಹಾಡು : ಕಳೆದುಹೋದ ಹಾದಿಯಲ್ಲಿ

ಸಂತೆಯಲಿ ಗುನುಗಿದ ಹಾಡು : ಕಳೆದುಹೋದ ಹಾದಿಯಲ್ಲಿ

ಕಳೆದು ಹೋದ ಹಾದಿಯಲ್ಲಿ ಮತ್ತೆ ಹುಡುಕಬೇಕಿದೆ..
ತೊರೆದುಹೋದ ಇನಿಯನ ಮತ್ತೆ ಹುಡುಕಬೇಕಿದೆ..

ಆಡಿ ಹೋದ ಮಾತಿನಲ್ಲಿ
ಸರಿಯು ಕಾಣಬಹುದು ಈಗ..
ಮುನಿಸಿಕೊಂಡ ಮನಸಿನಲ್ಲಿ
ಕನಸು ಮೂಡಬಹುದು ಈಗ..

ನಿನ್ನ ಪ್ರೀತಿ ಪ್ರೇಮವೀಗ
ಕಾಡುತಿಹುದು ಬಿಡದೆ ಈಗ..
ನಿನ್ನ ನಡೆಯು ನುಡಿಯು ಈಗ
ಬೇಡುತಿಹುದು ಮತ್ತೆ ಈಗ..

ಒಮ್ಮೆ ಬಂದು ಎದುರು ನಿಂತು
ನಗುವ ಬೀರಿ ಹೋದರೂನು
ಮನಕೆ ಹೊಸತು ಹುರುಪು ಬಂದು
ಹಳೆಯ ನೋವ ಮರೆವೆ ನಾನು..

ಕಾಯುತಿರುವೆ ಎಂದಿನಂತೆ ನೀನು ಬರುವುದಾ...
ಕಾಯುತಿರುವೆ ಎಂದಿನಂತೆ ಅದೇ ಹಾದಿಯಾ...

- ಸಿಂಧು ಭಾರ್ಗವ್. 🍁

ಸಂತೆಯಲಿ ಗುನುಗಿದ ಹಾಡು : ನಗಲು ಬಾರದೇ ಮುಗುದೆ.

ಸಂತೆಯಲಿ ಗುನುಗಿದ ಹಾಡು : ನಗಲು ಬಾರದೇ ಮುಗುದೆ..

ಮುನಿಸು ಏತಕೆ ಮಗುವೆ, ನಗಲು ಬಾರದೇ,
ಮುತ್ತನೊಂದು ನಿನಗೆ ಕೊಡುವೆ ಸನಿಹ ಬಂದರೇ...
**
ಆಟ ಆಡಬೇಡ ಎಂದು ನಾನು ಹೇಳಬಾರದೀಗ
ಊಟಮಾಡು ಬಾರೆ ಎಂದು ನಾನು‌ ಕರೆಯಬಾರದೀಗ..

ಕಳ್ಳ ನೋಟ ಬೀರಬಹುದು ಎಂಬ ಭಯವು ನನಗೀಗ...
ನಿನ್ನ ಹೊರಗೆ ಬಿಟ್ಟು ನಾನು ಹೇಗೆ ಕೆಲಸಮಾಡಲೀಗ..
ಮುನಿಸು ಏತಕೆ ಮಗುವೆ, ನಗಲು ಬಾರದೇ..
**
ನಾನು ತೋರುವ ಕಾಳಜಿಯು ಬಿಗಿದ ಹಗ್ಗವಾಗಬಹುದು..
ನನ್ನ ಮಮತೆಯು ನಿನಗೆ ಕಟ್ಟಿಹಾಕಲೂ ಬಹುದು..

ಅನಿಸಬಹುದು ಈಗ ಮಗುವೆ
ವಯಸು ಹಾಗೆ ಅರಿಯದಾದೆ
ನೀನು ಮುಂದೆ ತಾಯಿಯಾಗು ಎಲ್ಲ ಅರಿಯುವೆ..
ನೀನು ಮುಂದೆ ತಾಯಿಯಾಗು ಎಲ್ಲ ಅರಿಯುವೆ..

- ಸಿಂಧು ಭಾರ್ಗವ್ 🍁

ಸಂತೆಯಲಿ ಗುನುಗಿದ ಹಾಡು : ನೆನಪಿನ ಹೆಜ್ಜೆಗುರುತ

ಸಂತೆಯಲಿ ಗುನುಗಿದ ಹಾಡು : ನೆನಪಿನ ಹೆಜ್ಜೆಗುರುತ


ನೆನಪಿನ ಹೆಜ್ಜೆ ಗುರುತು ಅಳಿಸುವ ಮಳೆಹನಿಯೆ
ನಿನ್ನಲಿ ನಾ ಮುನಿಸಿಕೊಂಡಿರುವುದು  ಸರಿಯೆ

ಸಾಗಿದೆ ಸಾಗಿದೆ ಜೀವನ ಸಾಗಿದೆ
ಮಾಗಿದ ನೆನಪದು ಜೀವಕೆ  ಬೇಕಿದೆ

ನೀರಿಲ್ಲದೆ ಬಾಯಾರಿದೆ ,ನೀನಿಲ್ಲದೆ ಬಾಳಾರಿದೆ

ಅರಿಯಾಗದೆ ತೊರೆಯಾಗಿಸು
ದುಮ್ಮಾನವ ಮರೆಯಾಗಿಸು

ಮನದಾಸೆಯ ಚಿಗುರಾಗಿಸು
ಹೃದಯವಾ ಹಗುರಾಗಿಸು

ನಿನ್ನನು ಕ್ಷಮಿಸುವೆ... ಬದುಕನು ರಮಿಸುವೆ...

- ಸಿಂಧು ಭಾರ್ಗವ್🍁

ಸಂತೆಯಲಿ ಗುನುಗಿದ ಹಾಡು : ನೀ ಶ್ಯಾಮನಲ್ಲ

ಸಂತೆಯಲಿ ಗುನುಗಿದ ಹಾಡು : ನೀ ಶ್ಯಾಮನಲ್ಲ

ನೀ ಶ್ಯಾಮನಲ್ಲ ನಾನು ರಾಧೆ
ಮೊದಲೆ ಅಲ್ಲ..
ನೀ ಶ್ಯಾಮನಲ್ಲ ನಾನು ರಾಧೆ
ಮೊದಲೆ ಅಲ್ಲ..
ನಮ್ಮ ಪ್ರೀತಿ ಪ್ರೇಮ ಕೂಡ
ಅವರಿಗಿಂತ ಕಡಿಮೆ ಇಲ್ಲ..
ನಮ್ಮ ಪ್ರೀತಿ ಪ್ರೇಮ ಕೂಡ
ಅವರಿಗಿಂತ ಕಡಿಮೆ ಇಲ್ಲ..
*
ಮಲ್ಲಿಗೆಯ ಮೊಗ್ಗನೊಮ್ಮೆ
ಮೂಗುತಿಯ ಮಾಡಿಸಿದ್ದೆ..
ನೈದಿಲೆಯ ಎಸಳ ತಂದು
ಕಿವಿಯ ಓಲೆ ತೊಡಿಸಿದ್ದೆ..

ರಾಗ ತಾಳ ಇಲ್ಲದೇನು
ಹಾಡುಹೊಸೆಯ ಬಲ್ಲೆ ನೀನು..
ಮನದ ಭಾವ ಬೆಸೆದು ನೀನು
ಹೊಸತು ಲೋಕ ತರುವೆ ನೀನು..
ನೀ ಶ್ಯಾಮನಲ್ಲ ನಾನು ರಾಧೆ
ಮೊದಲೆ ಅಲ್ಲ..
*
ಕನಸ ಕಾಣ ಹೊರಟ ನಯನ
ನಿನ್ನೇ ಎನಿಸಿ ನಾಚಿದಂತೆ
ಮುತ್ತು ನೀಡ ಬರುವ ತುಟಿಯು
ನಿನ್ನ ನೋಡಿ ಹೆದರಿದಂತೆ
*
ರಸಮಯದ ಸಮಯದಲ್ಲಿ
ನಿನ್ನ ಹೆಸರ ಗುನುಗಿದಂತೆ
ಜೊತೆಗೆ ಹೆಜ್ಜೆಹಾಕೋ ನೀನು
ಮನದ ಅರಸನಾದೆಯಂತೆ..
ನೀ ಶ್ಯಾಮನಲ್ಲ ನಾನು ರಾಧೆ
ಮೊದಲೆ ಅಲ್ಲ..

- ಸಿಂಧು ಭಾರ್ಗವ್ 

ಸಣ್ಣ ಕವನ : ಇನಿಯನ ಪ್ರೀತಿ

ಸಣ್ಣ ಕವನ : ಇನಿಯನ ಪ್ರೀತಿ

ಇನಿಯನು ಪ್ರೀತಿಯಿಂದ
ಅಪ್ಪಿಕೊಂಡರೆ ಲತೆಯಾಗುವೆ..

ದುಂಬಿಯಂತೆ ಮಧುವ
ಹೀರಿದರೆ ನಾಚಿ ನೀರಾಗುವೆ..

ಸರಸದಲಿ ಬೆರೆತಾಗ
ಕಡೆದ ಮಜ್ಜಿಗೆಯಾಗುವೆ..

ಕಾಳಜಿಯ ಮಾತಿನಲಿ
ತಾಯಿಯ ನೋಡುವೆ..

ಅರೆಕ್ಷಣವೂ ದೂರಾದರೂ
ಹೆದರಿ‌ಚಡಪಡಿಸುವೆ..

ಇನಿಯನ ಪ್ರೀತಿಗೆ
ರಚ್ಚೆಹಿಡಿವ ಮಗುವಾಗುವೆ..

- ಸಿಂಧು ಭಾರ್ಗವ್ .

ಸಂತೆಯಲಿ ಗುನುಗಿದ ಹಾಡು: ಕನಸಲಿ ಬಂದೆ ನೀನು

ಸಂತೆಯಲಿ ಗುನುಗಿದ ಹಾಡು: ಕನಸಲಿ ಬಂದೆ ನೀನು
~~~
(@)(@)
ಕನಸಲಿ ಬಂದೆ ನೀನು
ಮನದಲಿ‌ ನಿಂತೆ ನೀನು
ಕವನವ ಬರೆದೆ ನೀನು
ಸನಿಹಕೆ ಕರೆದೆ ನೀನು

ಕಂಗಳು ತುಂಬಿದ ನಿನ್ನಯ ಬಿಂಬಕೆ
ಮನವಿದು ಕುಣಿಯುತ ನಿನ್ನೆಡೆ ಬಂತು..
ಸುಮಧುರ ಗಾನವು ಕೇಳಿದ ಕೂಡಲೆ
ತನುವಿದು ಕುಣಿಯುತ ನಿನ್ನೆಡೆ ಬಂತು.
ಕನಸಲಿ ಬಂದೆ ನೀ
ಮನದಲಿ ನಿಂತೆ ನೀ..

ಹಿತಮಿತ ಮಾತಿಗೆ ಸೋತಿಹೆ ನಾನು
ನಿನ್ನಯ ಮೌನವೆ ಜೊತೆಗಿಹುದಿಂದು
ಪ್ರೀತಿಗೆ ಹೊಸ ಭಾಷೆಯ ಬರೆಯುತ
ಇಬ್ಬರು ಸೇರಿ ಸಹಿ ಹಾಕಿದೆವಂದು
ಕನಸಲಿ ಬಂದೆ ನೀ..
ಮನಸಲಿ ನಿಂತೆ ನೀ..

ನಿನ್ನಯ ಪ್ರೀತಿಯ ಜೇನಲಿ ನಾನು
ತನುಮನ ಅರ್ಪಿಸಿ ಮಿಂದಿಹೆನು..
ನಿನ್ನೆಯ ನೆನಪಿನ ಜೊತೆಯಲಿ ನಾನು
ಜೀವನ ಕಳೆಯಲು ನಿಂತಿಹೆನು..

ಕನಸಲಿ ಬಂದೆ ನೀನು
ಮನದಲಿ‌ ನಿಂತೆ ನೀನು..
ಕವನವ ಬರೆದೆ ನೀನು
ಸನಿಹಕೆ ಕರೆದೆ ನೀನು..

- ಸಿಂಧು ಭಾರ್ಗವ್

ಲೇಖನ : ಹಿಂದೇ ಇರುವ ಮುಖಪರಿಚಯ ಇಲ್ಲದ ಹಿಂಬಾಲಕರು

ಲೇಖನ : ಹಿಂದೇ ಇರುವ ಮುಖಪರಿಚಯ ಇಲ್ಲದ ಹಿಂಬಾಲಕರು

ಮೊದಲೆಲ್ಲಾ ಸಮಾಜದಲ್ಲಿನ ಉನ್ನತ ಸ್ಥಾನದಲ್ಲಿರುವ  ವ್ಯಕ್ತಿಗಳು ಜನರಿಗೆ ತಿಳಿಸಬೇಕಾದ ವಿಷಯವನ್ನು ತಲುಪಿಸಬೇಕಾದರೆ ಮಾಧ್ಯಮಗಳ ಸಭೆ ಕರೆಯುತ್ತಿದ್ದರು. ಹಳ್ಳಿಯಿಂದ ದಿಲ್ಲಿಯ ಜನರೂ ಕೂಡ ಬೆಳಗಾಯಿತೆಂದರೆ ರೇಡಿಯೋ ಕೇಳಿಕೊಂಡೆ ದೇಶವಿದೇಶದ ಆಗುಹೋಗುಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದರು.ನಿನ್ನೆ ನಡೆದ ಘಟನೆಗಳೋ, ಮಾಹಿತಿಗಳೋ ಪತ್ರಿಕೆಗಳ ಮೂಲಕ ಮರುದಿನ ಬೆಳಿಗ್ಗೆ ಕೈಸೇರುತ್ತಿತ್ತು‌ . ಆದರೀಗ ಖಾಸಗೀತನದ ಹಾವಳಿ ಹೆಚ್ಚಾಗಿ ಮಾದ್ಯಮಗಳು ನಾಯಿಕೊಡೆಯಂತೆ ತಲೆಯೆತ್ತಿವೆ. ಒಂದು ವಿಷಯವನ್ನು ತಮಗೆ ಬೇಕಾದ ಹಾಗೆ ಅರ್ಥೈಸಿಕೊಂಡು ,ತಿರುಚಿ ದಿನದ ೨೪ಗಂಟೆ ಬೇಕಾದರೂ ಸಂಬಂಧಪಡದ ನಾಲ್ಕು ಜನರನ್ನು ಕರೆದುಕೊಂಡು ಬಂದು ಚರ್ಚೆ ಮಾಡುತ್ತಿದ್ದೇವೆ ಎಂದು ಬೊಬ್ಬೆ ಹಾಕುತ್ತಾ  ಕುಳಿತುಕೊಳ್ಳುತ್ತಾರೆ. ಏನು ಮಾಡಬೇಕು ಎಂದು ಸಲಹೆ ಕೊಡುವುದ ಬಿಟ್ಟು ಅವರಿವರ ತಪ್ಪು ಹುಡುಕುತ್ತಾ ಕುಳಿತಿರುತ್ತಾರೆ. ಹಾಗೆಯೇ ಅಮಾಯಕರನ್ನು ವಂಚಿಸುತ್ತಾರೆ. ನೇರಪ್ರಸಾರದ ಶೋಕಿ ನಾವೇ ಮೊದಲು ವಿಷಯ ಬಿತ್ತರಿಸುತ್ತಿದ್ದೇವೆ ಎಂಬ ಎಕ್ಸಕ್ಲೂಸಿವ್ ನ್ಯೂಸ್ಗಳು ಹೆಚ್ಚಾಗತೊಡಗಿವೆ. ಇದರಿಂದಾಗಿ ಪ್ರತಿಕೀಯೆಗಳು ಕೂಡಲೇ ಬರತೊಡಗಿವೆ.
ಅನೇಕ ಸ್ವಯಂ ಸಂಘಟನೆಗಳು, ಅಭಿಮಾನಿಗಳು, ಸಂಘ ಸಂಸ್ಥೆಗಳು ಅಥವಾ ಹಾಗೆ ಕರೆಸಿಕೊಳ್ಳುವವರು ಬೀದಿಗಿಳಿದು ಕಂಡಕಂಡಲ್ಲಿ ಜಗಳ,ಮುಷ್ಕರ, ಹೊಡೆದಾಟಕ್ಕೆ ನಿಲ್ಲುತ್ತಾರೆ.  ವೈಮನಸ್ಸು ಅತಿಯಾಗಲು ಇವು ಕಾರಣವಾಗುತ್ತಿವೆ. ಅಲ್ಲಿಯೂ ಹಣದ ಹೊಳೆ ಹರಿಸಿ ಅನೇಕ ಕಾಣದ ಕೈಗಳು ಪರಿಸ್ಥಿಯನ್ನು ಅತಿರೇಕಕ್ಕೇರಲು ದಾರಿಮಾಡಿಕೊಡುತ್ತಾರೆ.
.
ಈಗ ಎಲ್ಲರ ಕೈಯಲ್ಲೂ ಮೊಬೈಲ್ ಬಂದಿದೆ. ಕುಂತರೂ ನಿಂತರೂ ಎಲ್ಲಿ ತಿರುಗಾಡಿದರೂ ಜನರಿಗೆ ಊರಲ್ಲಿರುವ ಹೆತ್ತವರಿಗೆ ಹೇಳಲು ಸಮಯವಿರುವುದಿಲ್ಲ. ವಾರಾಂತ್ಯಕ್ಕೆ ಕರೆ ಮಾಡಿ ತಿಳಿಸುತ್ತಾರೆ. ಆದರೆ ಸೆಲ್ಫೀ ಎಂಬ ಹೆಸರಿನಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ಇಡೀ ಜಗತ್ತಿಗೆ ಗೊತ್ತುಮಾಡುತ್ತಾರೆ. ನೆಂಟರಿಷ್ಟರಿಗೂ ಅದರ ಮುಖಾಂತರವೇ ತಿಳಿಯಬೇಕಾಗಿ ಬರುವುದು ವಿಷಾದದ ಸಂಗತಿ. ತಾನು ಮನಸ್ಸಿನಲ್ಲಿ ಗೊಣಗಿಕೊಳ್ಳುವುದನ್ನೂ ಟ್ವೀಟರ್ ನಲ್ಲಿ ಹಾಕಿ ಗಲಭೆ ಎಬ್ಬಿಸುತ್ತಾರೆ. ಅದರಲ್ಲಿಯೂ ಯಾವುದೇ ಜಾತಿ, ಧರ್ಮ, ಭಾಷೆ ನೆಲದ ವಿಚಾರವಾಗಿ ಯಾರೂ ವಿವಾದಾತ್ಮಕ ಹೇಳಿಕೆ ನೀಡಲು ಹೋಗಬಾರದು ಎಂಬ ಸಾಮಾನ್ಯ ಪ್ರಜ್ಞೆ ಯನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಧರ್ಮದಲ್ಲಿಯೂ ಅವರದೇ ಆದ ನಂಬಿಕೆಗಳಿರುತ್ತವೆ‌ ಅದನ್ನು ವ್ಯಂಗ್ಯ ಮಾಡುವುದಾಗಲಿ, ಲೇವಡಿ ಮಾಡುವುದಾಗಲಿ, ಅಗೌರವ ತೋರುವುದಾಗಲಿ ಮಾಡಬಾರದು. ಇಷ್ಟವಿಲ್ಲದಿದ್ದರೆ ಬಿಟ್ಟುಬಿಡಬೇಕು. ಯಾರೂ ಒತ್ತಾಯ ಮಾಡುವುದಿಲ್ಲ‌ ಅದನ್ನು ಬಿಟ್ಟು ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತಹ ಪೋಸ್ಟ್ ಮಾಡುವುದಾದರೂ ಯಾಕೆ..? ಒಂದಷ್ಟು ಜಗಳಗಳಾದ ಮೇಲೆ ಕ್ಷಮೆ ಕೇಳುವುದಾದರೂ ಯಾಕೆ..? ವಿವೇಕವಿರುವವರಾದರೆ ಯೋಚಿಸಿ ಮಾತನಾಡುತ್ತಾರೆ. ಇಲ್ಲದಿದ್ದರೆ ಬಾಯಿಮುಚ್ಚಿಕೊಂಡಿರುತ್ತಾರೆ.  ಸಾಮಾಜಿಕ ಜಾಲತಾಣದಲ್ಲಿರುವ ಫಾಲೋವರ್ಸ್ ಯಾವತ್ತಿಗೂ ಜೊತೆಗಿರುವುದಿಲ್ಲ.  ಜೊತೆಗಿರುವುದು ಕಷ್ಟಕಾಲಕ್ಕೆ ಸಹಾಯ ಮಾಡುವುದು ತಮ್ಮ ಹೆತ್ತವರು, ಒಡಹುಟ್ಟಿದವರು, ಸ್ನೇಹಿತರ ವರ್ಗಮಾತ್ರವೇ. ಒಂದಷ್ಟು ಲೈಕ್ ಒಂದಷ್ಟು ಹಂಚಿಕೊಳ್ಳುವುಕೆ, ತಮಗುಷ್ಟವಾದ ಕಮೆಂಟ್ಗಳು ಬಂದ ತಕ್ಷಣ ಅವರೆಲ್ಲ ನಮ್ಮ ಬೆಂಬಲಕ್ಕಿದ್ದಾರೆ ಎಂದರ್ಥವಲ್ಲ. ಬದಲಾಗಿ ಸಮಾನ ಮನಸ್ಕರು ಎಂದು ಪರಿಗಣಿಸಬಹುದು. ಈಗೀಗ ಮನಸಿಗೆ ತೋಚಿದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಕ್ಕೆ ಕಡಿವಾಣವೂ ಹಾಕುತ್ತಿದ್ದಾರೆ. ಯಾರ ತೇಜೋವಧೆ ಮಾಡುವಂತಹ ಮಾನನಷ್ಟ ಮಾಡುವಂತಹ ಪೋಸ್ಟ್ ಗಳನ್ನು ಪ್ರಕಟಿಸುವಂತಿಲ್ಲ. ಕಾನೂನಾತ್ಮಕವಾಗಿ ಕೇಸು ಹಾಕಿ ಅವರನ್ನು ಒಳಗೆಕಳುಹಿಸಬಹುದು ಇಲ್ಲವೇ ದಂಡವಿಧಿಸಬಹುದು. ಆಗ ಪರವಾಗಿ ಕಮೆಂಟಿಸಿದವರಾಗಲಿ ಹೊಗಳಿದವರಾಗಲಿ ಜೊತೆಗೆ ಬರುವುದಿಲ್ಲ. ಹತ್ತಿರವಿದ್ದ ಹೆತ್ತವರೋ, ಸ್ನೇಹಿತರೋ ಸಹಾಯಕ್ಕೆ ನಿಲ್ಲಬೇಕು.
.
ಈಗಿನ ಯುವಜನತೆ ಸಮಯವನ್ನು ವ್ಯರ್ಥಮಾಡುತ್ತಾ, ತಮ್ಮ ಕರ್ತವ್ಯವನ್ನು ಮರೆಯುತ್ತಾ ಮೊಬೈಲ್ ನ ವ್ಯಸನಿಗಳಾಗಿದ್ದಾರೆ.

- ಸಿಂಧು ಭಾರ್ಗವ್.

ಜೀವನದ ಸಂತೆಯಲಿ - ಬದುಕುವ ಕಲೆ ಬೆಳೆಸಿಕೊಳ್ಳಿ

ಜೀವನದ ಸಂತೆಯಲಿ - ಬದುಕುವ ಕಲೆ ಬೆಳೆಸಿಕೊಳ್ಳಿ.

ಕೆಲ ಹೆಣ್ಣು ಮಕ್ಕಳಿಗೆ ತವರು ಮನೆಯಲ್ಲಿ ಏನೂ ಸಿರಿತನ ಇರುವುದಿಲ್ಲ. ಬಡನದಲ್ಲಿಯೇ ಜೀವನ ಕಳೆದಿರುತ್ತಾರೆ.
ಆದರೆ ಗಂಡನ ಮನೆಯಲ್ಲಿ ಬೇಕಾದಷ್ಟು ಆಸ್ತಿ-ಅಂತಸ್ತು ಹಣಕಾಸಿನಲ್ಲಿ ಉತ್ತಮರಾಗಿರುತ್ತಾರೆ.
ಕೆಲ ಹೆಣ್ಣು ಮಕ್ಕಳು ತವರು ಮನೆಯಲ್ಲಿ ಮಹಾರಾಣಿಯರಂತೆ ಬೆಳೆದಿರುತ್ತಾರೆ. ಎಲ್ಲದಕ್ಕೂ ಲೆಕ್ಕಚಾರ ಹಾಕುತ ಜೀವನ ನಡೆಸುವ ಸಂಗಾತಿ ಮತ್ತು ಅವರ ಮನೆಯವರು ಸಿಗುತ್ತಾರೆ.
ಕೆಲ ಹೆಣ್ಣು ಮಕ್ಕಳಿಗೆ ತವರು ಮನೆಯಲ್ಲಿಯೂ ಕಷ್ಟದ ಜೀವನ , ಗಂಡನ ಮನೆಯಲ್ಲಿಯೂ ಕಷ್ಟದ ಜೀವನವೇ.
ಇನ್ನು ಕೊನೆಯದಾಗಿ , ಕೆಲ ಹೆಣ್ಣು ಮಕ್ಕಳು ಹುಟ್ಟಿನಿಂದಲೇ ಸಿರಿತನದ ಸುಪ್ಪತ್ತಿಗೆಯಲ್ಲಿಯೇ ಬದುಕಿ ಅಭ್ಯಾಸ, ಎಲ್ಲದಕ್ಕೂ ಆಳು-ಕಾಳು ,ಕಷ್ಟ ಎಂದರೆ ಏನೂ ಅಂತಾನೇ ಗೊತ್ತಿರುವುದಿಲ್ಲ. ಹಾಗೆ ಸಿರಿವಂತನ ಅಳಿಯನನ್ನೇ ನೋಡಿ ಮದುವೆಯೂ ಮಾಡಿಸುತ್ತಾರೆ.
***
ಯಾಕೆ ಹಂಚಿಕೊಂಡೆನೆಂದರೆ ,  ಬಾಲ್ಯದ ಜೀವನವನ್ನು ಕಷ್ಟದಿಂದ ಕಳೆದವರು ಮುಂದೆ ಬರುವ ಎಂತಹುದೇ ಕಠಿಣ ಸಂದರ್ಭವನ್ನು ಎದುರಿಸಲು ಶಕ್ತರಾಗಿರುತ್ತಾರೆ. ಬಾಲ್ಯದಲ್ಲಿಯೇ ಹಣದ ಬೆಲೆ ತಿಳಿಯದೇ ಬೆಳೆದ ಮನುಷ್ಯ ಮುಂದೆ ಎದುರಾಗುವ ಕಷ್ಟಗಳಿಗೆ ಮೈಯೊಡ್ಡಲು ಸೋಲುತ್ತಾನೆ. ಆ ಸೋಲನ್ನು ಅವಮಾನವೆಂಬಂತೆ ಪರಿಗಣಿಸಿ ತುಂಬಾ ಖಿನ್ನತೆಗೊಳಗಾಗುತ್ತಾನೆ.

ಪ್ರತಿಯೊಬ್ಬರೂ ನಮ್ಮ ಜೀವನ 'ಹೀಗೆ' ಇರಬೇಕು ಎಂಬ ನೂರಾರು ಕನಸುಗಳನ್ನು ಕಟ್ಟಿಕೊಂಡಿರಬೇಕು. ಇಲ್ಲದಿದ್ದರೆ ಪ್ರಗತಿ ಕಾಣಲು ಸಾಧ್ಯವಿಲ್ಲ. ಬಡವನಾಗಿ ಹುಟ್ಟುವುದು ತಪ್ಪಲ್ಲ, ಬಡವನಾಗೇ ಸಾಯುವುದು ತಪ್ಪು ಎಂದು ಹಿರಿಯರ ಮಾತೇ ಇದೆ‌. ಹಾಗಾಗಿ ನಾವು ಒಂದು ಗಠ ಬೆಳೆಸಿಕೊಳ್ಳಬೇಕು, ನಾವು ಎಲ್ಲರಂತೆ ಸ್ಥಿತಿವಂತರಾಗಬೇಕು ಅದಕ್ಕೆ ಕಷ್ಟಪಟ್ಟು ದುಡಿಯಬೇಕು ಎಂದು. ಯಾವ ಅಭಿವೃದ್ಧಿಯೂ ಕಾಣದ ಜೀವನ ನಿಂತ ನೀರಿನಂತೆಯೇ ಸರಿ. ತಮ್ಮ ಮನೆಯವರಿಗಾಗಿಯೇ  ಜೀವನ ಸವೆಸುವವರೂ ಇರುತ್ತಾರೆ. ಕಷ್ಟಪಟ್ಟು ದುಡಿಯುವುದು, ತಮ್ಮ ಯವ್ವನವನ್ನೇ ತ್ಯಾಗಮಾಡುವುದು, ಮನೆಯವರ ಸಂತೋಷ-ಹಿತ ಕಾಯ್ದುಕೊಳ್ಳಲು ತೇಯ್ದ ಗಂಧದಂತೆ ಬದುಕುತ್ತಿರುತ್ತಾರೆ. ಇವರೂ ಕೂಡ ಒಂದು ರೀತಿಯ ತ್ಯಾಗಮೂರ್ತಿಗಳೇ. ಆಗೆಲ್ಲ ತನ್ನ ಕನಸುಗಳನ್ನೆಲ್ಲ ಸಾಯಿಸಿಕೊಂಡು ಬದುಕಬೇಕೆಂದೇನಿಲ್ಲ. ತನ್ನ ಜೀವನವನನ್ನು ಪ್ರೀತಿಸುತ್ತಾ ಬದುಕುವುದು ಕೂಡ ಒಂದು ಕಲೆ‌. ಪ್ರತಿಯೊಬ್ಬ ವ್ಯಕ್ತಿಗೂ ಕಷ್ಟಸುಖ ಎರಡರ ಅನುಭವವಿರಬೇಕು. ಜೀವನದಲ್ಲಿ ಇನ್ನೊಬ್ಬರಿಗೆ ಬಂದ ಸಮಸ್ಯೆಯೇ ನಮಗೂ ಬರಬೇಕೆಂದಿಲ್ಲ. ಅವರ ಸಮಸ್ಯೆ ನೋಡಿ ನಾವು ಎಚ್ಚೆತ್ತುಕೊಳ್ಳಬಹುದು. ದೂರದಿಂದಲೇ ಗುರುತಿಸಬಹುದು.  ಜೀವನದಲ್ಲಿ ಏಳು-ಬೀಳುಗಳಿದ್ದರೇನೆ ಚಂದ. ಸಹನೆ-ತಾಳ್ಮೆಯೊಂದಿಗೆ ಜೀವನ ನಡೆಸಬೇಕು. ನಾಳೆಯ ದಿನ ನಮ್ಮ ಕೈಲೇ ಇರುತ್ತದೆ. ಹಾಗಾಗ ಬೇಕಾದರೆ ಇಂದು ಚೆಂದವಾಗಿ ಬದುಕಬೇಕು.

- ಸಿಂಧು ಭಾರ್ಗವ್. 

ಕವನ : ಅಲೆಯ ಮೇಲೆ ಮನೆಯ ಕಟ್ಟಿ

ಕವನ : ಅಲೆಯ ಮೇಲೆ ಮನೆಯ ಕಟ್ಟಿ

ಅಲೆಯ ಮೇಲೆ ಮನೆಯ ಕಟ್ಟಿದೆ
ಕಲ್ಲು,ಮರಳು ನೀರಿಗೇನು ಬರಲಿಲ್ಲ..
.
ಸ್ವಪ್ನದಲ್ಲಿ ಕಂಡ ಮನೆಯೇ ತಲೆ ಎತ್ತಿದೆ..
ಹೊಗಳುಭಟರಿಗೇನು ಬರವಿಲ್ಲ...
..
ಮುಂಜಾನೆ ರವಿಯ ಸ್ವಾಗತ, ಸಂಜೆಗೆ
ಶಶಿಯು ನಿಲ್ಲುವ ನಗುತ..
ಹರುಷಕೇನು ಬರವಿಲ್ಲ..
...
ಜೋರಾಗಿ ಬೀಸುತ ಗಾಳಿಯು,
ಅಲೆಅಲೆಯಾಗಿ ಬಂದು ಬಂಡೆಗಪ್ಪಳಿಸಿತು,
ಕನಸಿನ ಮನೆಯೂ ಛಿದ್ರಗೊಂಡಿತು..
ಕಣ್ಣೀರು ತೇಲಿ ತೇಲಿ ದಡವ ಸೇರುತ್ತಿತ್ತು...
.
ಅತ್ತ ರವಿಯು , ಇತ್ತ ಶಶಿಯೂ ಜೊತೆಗೆ ಕಣ್ಣೀರ ಒರೆಸಿದರು..
ಸಾಂತ್ವಾನ, ಪ್ರೀತಿಗೇನು ಬರಗಾಲವಿರಲಿಲ್ಲ...

- ಸಿಂಧು ಭಾರ್ಗವ್ . 🍁

ಕವನ: ಕಾಪಿಡುವೆ ನಿನ್ನ ಪ್ರೀತಿಯ





ಕವನ: ಕಾಪಿಡುವೆ ನಿನ್ನ ಪ್ರೀತಿಯ
•°•°•°•°•°•°•°•°•°•°•°•°•°•°•

ಹೂವು ಮನಕೆ ಮುದವ ನೀಡುವುದು..
ಹೂವು ಮೊಗಕೆ ನಗುವ ನೀಡುವುದು..

ಮೊಗ್ಗು ಅರಳಲು ಸಮಯಬೇಕು..
ಹೂವು ಬಾಡಲು ದಿನವು ಸಾಕು..

ಹಗಲು ಇರುಳು ಕಾಪಿಡುವ ಪ್ರೀತಿಯು
ಮೊಟಕುಗೊಳ್ಳಲು ನಿಮಿಷ ಸಾಕು..

ನಂಬಿಕೆಯ ನೀರೆರೆಯಿರಿ, ಗಿಡದಲ್ಲಿಯೇ ಅಂದವ ಕಾಣಿರಿ..
ಚಿವುಟದಿರಿ.. ಮನವ ನೋಯಿಸದಿರಿ..

ಹರುಷ ಪಡಲು ಮಾತ್ರ ಹೂವಿರುವುದಲ್ಲ..
ಅದರ ಕಾಪಾಡುವುದೂ ನಮ್ಮ ಕರ್ತವ್ಯವಲ್ಲ..

..ಪ್ರೀತಿಯಿಂದ ಪ್ರೀತಿಸಿ..
..ಪ್ರೀತಿಗೋಸ್ಕರ ಜೀವಿಸಿ..

- 📝 ಸಿಂಧು ಭಾರ್ಗವ್ 🍁

ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ರಾಜ್ಯಮಟ್ಟ ಕವನ ಮತ್ತು ಲೇಖನ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ

(@)(@)(@)


(@)(@)(@)

ಇದೇ ಮೊದಲ ಬಾರಿಗೆ ಒಂದು ಸ್ಪರ್ಧೆಯಲ್ಲಿ ನಾನು ಬಹುಮಾನ ಪಡೆದಿರುವುದು. ಹಾಗು ನನ್ನ ಹೆಸರು ಒಂದು ಪತ್ರಿಕೆಯಲ್ಲಿ ಬಂದಿರುವುದು ಸಂತಸ ನೀಡಿದೆ.
.
.
ಧನ್ಯವಾದಗಳು..
- 📝 ಸಿಂಧು ಭಾರ್ಗವ್ 💐🙏👍

1))
ಬ್ಲಡ್ ಡೋನರ್ಸ್ ಸಂಘಟನೆ ಮಂಗಳೂರು ಇವರ ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ ರಾಜ್ಯಮಟ್ಟದ ಕವನ, ಲೇಖನ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದ ಬಗ್ಗೆ  ವಿಜಯ ಕರ್ನಾಟಕ ಪೇಪರ್ ನಲ್ಲಿ ಒಂದು ಸಣ್ಣ ಲೇಖನ.. ವಿಜೇತರಿಗೆಲ್ಲರಿಗೂ ಅಭಿನಂದನೆಗಳು.ಶುಭಹಾರೈಕೆಗಳು..))
(@)(@)(@)





2))
ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ರಾಜ್ಯಮಟ್ಟ ಕವನ ಮತ್ತು ಲೇಖನ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ -

(@)(@)(@)

3))
ಬ್ಲಡ್ ಡೋನರ್ಸ್ ಸಂಘಟನೆ ಮಂಗಳೂರು ಇವರ ವತಿಯಿಂದ ನಡೆದ ಅನೇಕ ಸಮಾಜಮುಖಿ ಕಾರ್ಯಗಳು :
YouTube link is : News at V4 NEWS(24*7) channel 


https://youtu.be/6j624UCQLNY

Tuesday 25 April 2017

ಕನ್ನಡ ಹಾಡು: ಪ್ರೀತಿ ಮೂಡಿದೆ ಹೊಸ ಶಂಕೆ ಕಾಡಿದೆ..

*ಹಾಡು : _ಪ್ರೀತಿ ಮೂಡಿದೆ, ಹೊಸ ಶಂಕೆ ಕಾಡಿದೆ..._*
°°° °°° °°° °°° °°° °°° °°° °°° °°° °°° °°° °°° °°° °°° °°°


 @@()@@

ಹಾಡು: ಪ್ರೀತಿ ಮೂಡಿದೆ, ಹೊಸ ಶಂಕೆ ಕಾಡಿದೆ.

ಮನದಲಿ ಹೊಸ ಭಾವವು
ಮರೆಯದ ಹೊಸ ರಾಗವು
ನೀ ಬಂದು ಎದುರಾಗಲೂ
ಪ್ರೀತಿ ಮೂಡಿದೆ, ಹೊಸ ಶಂಕೆ ಕಾಡಿದೆ...

ಜೀಕುವ ಜೋಕಾಲಿಯ
ಹಿಡಿಯಲಿ ಹೊಸ ಕನಸನು
ನಾ ಈಗ ಹೊಸೆದಿರಲೂ
ಪ್ರೀತಿ ಮೂಡಿದೆ ಹೊಸ ಶಂಕೆ ಕಾಡಿದೆ...

ಹದಮಾಡಿದ ಹಸಿ ಮಣ್ಣಲಿ
ಅರಿಯದೇ ನಿನ್ನ ಬಿಂಬವ
ನಾನೀಗ ಕೊರೆದಿರಲು
ಪ್ರೀತಿ ಮೂಡಿದೆ ಹೊಸ ಶಂಕೆ ಕಾಡಿದೆ.

ಮನಸಿನ ಮೂಲೆಯಲಿ
ಹೂವರಳಿ ನಿಂತಿರಲು
ಮೂಡಿದ ಚಿತ್ರದಲಿ ನಾನಿನ್ನ ನೋಡಿರಲು
ಪ್ರೀತಿ ಮೂಡಿದೆ ಹೊಸ ಶಂಕೆ ಕಾಡಿದೆ.

📝 - ಸಿಂಧು ಭಾರ್ಗವ್ 🍁

Thursday 20 April 2017

ಲೇಖನ: ಜೀವನದ ಸಂತೆಯಲಿ - ಅರಿತು ಬೆರೆತು ಬಾಳಿದರೆ ಸಾಂಸಾರಿಕ ಜೀವನ ಸುಂದರ.

@()@()@

*ಜೀವನದ ಸಂತೆಯಲಿ - ಅರಿತು ಬೆರೆತು ಬಾಳಿದರೆ ಸಾಂಸಾರಿಕ ಜೀವನ ಸುಂದರ*.

@)) ಮದುವೆ ಆಗೋ ಮೊದಲು ಹೆಣ್ಮಕ್ಕಳು ನೂರಾರು ಕನಸುಗಳನ್ನು ಕಟ್ಟಿಕೊಳ್ಳುವುದು ಸಹಜ.

@)) 21-22ರ ವಯಸ್ಸಿನಲ್ಲಿ ಶೇ.70% ರಷ್ಟು ಹೆಣ್ಣು ಮಕ್ಕಳಿಗೆ ಮನೆಯಲ್ಲಿ ಯೋಗ್ಯ ವರನ ನೋಡಿ ಅದೂ 29-30ರ ಆಸುಪಾಸಿನ ಹುಡುಗನ ಜೊತೆಗೆ ಮದುವೆ ಮಾಡಿಸುವುದು ರೂಢಿಯಾಗಿದೆ.

@)) ಕೆಲವು ಹುಡುಗರು ತನ್ನೆಲ್ಲಾ ಭಾವನೆಗಳನ್ನು ಮನಬಿಚ್ಚಿ ಮಾತನಾಡಲು ಬಯಸುವರು. ಪತ್ನಿಯ ಆಗಮನಕ್ಕೆ ಕಾಯುತಲಿರುವರು. ಅಂತವರಿಗೆ ತನ್ನ ಜೀವನದ ಬಹುದೊಡ್ಡ ಘಟ್ಟ "ಮದುವೆ" ಎಂಬ ನಂಬಿಕೆ ಇರುತ್ತದೆ. ಅಲ್ಲದೇ ಒಂದಷ್ಟು ಕನಸುಗಳನ್ನು ಕಟ್ಟಿಕೊಂಡಿರುವರು.
ಪತ್ನಿಯ ಜೊತೆಗೆ ಕುಳಿತು ಮಾತನಾಡುವುದು, ತಮಾಷೆ, ರೇಗಿಸುವುದು ಬಾಲ್ಯದ ನೆನಪುಗಳನ್ನು ಹೇಳೆಂದು ಅವಳ‌ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಹೋಗುತ್ತಾರೆ.
*ಅಲ್ಲಿ ಅನ್ಯೋನ್ಯತೆ ಮನೆಮಾಡುತ್ತದೆ. ಸಂಬಂಧ ಗಟ್ಟಿಯಾಗಿ ಬೆಸೆದುಕೊಳ್ಳುತ್ತದೆ. ಒಬ್ಬರನ್ನೊಬ್ಬರ ಅರಿತು ನಡೆಯುವುದರಿಂದ ಜೀವನ ಸುಂದರವಾಗಿರುತ್ತದೆ.*

@)) ಕೆಲವು ಗಂಡಸರು ಹಾಗಲ್ಲ, ಅವರಿಗೆ ಹೆಂಡತಿ ಮೇಲೆ ಪ್ರೀತಿಯೇನೊ ತುಂಬಾ ಇರುತ್ತದೆ. ಆದರೆ ವ್ಯಕ್ತಪಡಿಸಲು ಬರುವುದಿಲ್ಲ. ಬೇಕು-ಬೇಡಗಳ ತಂದುಕೊಡುತ್ತಾರೆ. ರಾಣಿಯ ಹಾಗೆ ನೋಡಿಕೊಳ್ಳುತ್ತಾರೆ. ಆದರೆ ಜೊತೆಗೆ ಕೂತು ಹರಟೆ, ತಮಾಷೆ, ಭಾವನೆಗಳ ವಿನಿಮಯ ಮಾಡಿಕೊಳ್ಳಲು ಬರುವುದಿಲ್ಲ. ಅಂತವರಿಂದ ಯಾವ ನಿರೀಕ್ಷೆಯು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಹಾಗೆ ಅವಳು ಕಾಣುವ ಅದೆಷ್ಟೋ ಸಣ್ಣ ಸಣ್ಣ ಕನಸುಗಳು ಕಣ್ಣೀರಾಗಿ ಹರಿದುಹೋಗಿರುತ್ತದೆ. ಕಾರಣ ಗಂಡನಿಗೆ ಮನಸ್ಸಿನ ಭಾವನೆ ಅರ್ಥವಾಗುವುದಿಲ್ಲ.
*ಇಂತಹ ಪತಿರಾಯರನ ಜೊತೆಗೆ ಜೀವಿಸಲು ತುಂಬಾ ಸಹನೆಯಿಂದಿರಬೇಕಾಗುತ್ತದೆ. ಅವನನ್ನು ಅರ್ಥಮಾಡಿಕೊಂಡು ನಡೆದರೆ ಜೀವನ  ಚೆನ್ನಾಗಿ ನಡೆಸಬಹುದು. ಹಾಗೆ ಪತ್ನಿಯೇ ಒಂದಷ್ಟು ಬಾಯಿ ಬಿಟ್ಟು ಮನದ ಮಾತನ್ನು ಹೇಳಿಕೊಂಡರೆ ಅವನು ಬದಲಾಗಲೂ ಬಹುದು. ಇಲ್ಲದಿದ್ದರೆ ಮನಸ್ಸು ಹದಗೆಡುತ್ತದೆ. ಸಂಬಂಧ ಬಿರುಕು ಬಿಡುತ್ತದೆ.*

@)) ಕೆಲವು ಹೆಂಗಸರು ಅಲ್ಲದೇ ಗಂಡಸರು ಕೂಡ ಮುಂಗೋಪ, ಅಸಹನೆ, ಹಠಮಾರಿತನ, ಕಲಹ , ದ್ವೇಷಗಳನ್ನೇ ಮದುವೆ ಆದಂದಿನಿಂದ ಪ್ರಾರಂಭಿಸಿ ಸಾಂಸಾರಿಕ ಜೀವನವನ್ನು ನರಕ ಮಾಡಿಕೊಳ್ಳುತ್ತಾರೆ.
*ಹೆಂಗಸರಿಗಾಗಲಿ, ಗಂಡಸರಿಗಾಗಲಿ ಬಯಕೆಗಳು ಇರಬೇಕು (ಅದು ಬೇಕು ಇದು ಬೇಕು ಎಂದು) ಆದರೆ ಪಡೆಯಲೇಬೇಕು ಎಂಬ ಹಠವಿರಬಾರದು..*

@)) *ಈಗಿನ ಕಾಲದಲ್ಲಿ ಹೆಣ್ಮಕ್ಕಳು ಕೆಲಸಕ್ಕೆ ಹೋಗುತ್ತಾರೆ. ಗಂಡು- ಹೆಣ್ಣು ಇಬ್ಬರೂ ಸಮಾನರು ಎಂಬ ಭಾವನೆ ಬಂದುಬಿಟ್ಟಿದೆ. ಮಾನಸಿಕವಾಗಿ ಹೆಣ್ಣು , ಗಂಡಿಗಿಂತ ಗಟ್ಟಿಗಿತ್ತಿಯಾದರೂ ದೈಹಿಕವಾಗಿ ಅಲ್ಲ ಎಂದು ವೈದ್ಯರೇ ಹೇಳುತ್ತಾರೆ. ಹಾಗಾಗಿ ಹೆಣ್ಣು ತನ್ನ ಸ್ಥಾನವನ್ನು ಅರಿತು ,ಕರ್ತವ್ಯವನ್ನು ಅರಿತು ಸಾಂಸಾರಿಕ ಜೀವನವನ್ನು ನಡೆಸಬೇಕು. ತುಂಬಾ ಓದಿದ್ದೇನೆ , ಕೈತುಂಬಾ ಸಂಬಳಬರುತ್ತದೆ, ನಾನು ಯಾರಿಗೂ ಗುಲಾಮಳಾಗಿ ಇರಬೇಕೆಂದಿಲ್ಲ ಎಂಬ ಭ್ರಮೆಯನ್ನು ಬಿಟ್ಟು ಅರಿತು ಬೆರೆತು ಅವರವರ ಸಾಂಸಾರಿಕ ಜೀವನವನ್ನು ಚಂದಗಾಣಿಸಿಕೊಳ್ಳಬೇಕು. ಅದನ್ನು ಬಿಟ್ಟು ಅಹಂಕಾರದಿಂದ ಗಂಡನ ಅವಶ್ಯಕತೆ ಇಲ್ಲವೆಂದರೆ ಒಂಟಿಯಾಗಿ ಜೀವನಮಾಡಬೇಕಾಗುತ್ತದೆ. ಒಂಟಿತನವೂ ಕೆಲವೊಮ್ಮೆ ಖಿನ್ನತೆಯನ್ನು ಮೂಡಿಸುತ್ತದೆ. ಜೀವನವನ್ನು ಗೆಲ್ಲಬೇಕು. ಜಾಣ್ಮೆಯಿಂದ ಗೆಲ್ಲಬೇಕು.*
@()@
*ಈಗ ಹೇಳಿ ಯಾರು ಯಾವ ರೀತಿಯ ಮನಸ್ಥಿತಿಯನ್ನು ಹೊಂದಿದ್ದೀರಿ...??*

📝 - ಸಿಂಧು ಭಾರ್ಗವ್ 🍁

Friday 7 April 2017

I promoted as Lyric Writer By the Song Sanjegempu mooditu

ಹಾಡು : ಸಂಜೆಗೆಂಪು‌ ಮೂಡಿತು.
ಬರೆದವರು : ಸಿಂಧು ಭಾರ್ಗವ್.
ಹಾಡಿದವರು : ಜನಪ್ರಿಯ ಚಲನಚಿತ್ರ ಗಾಯಕಿ ಸಂಗೀತ ಬಾಲಚಂದ್ರ ಉಡುಪಿ.
ರೆಕಾರ್ಡಿಂಗ್ : ಗುರುರಾಜ್ ಎಂ.ಬಿ
(ಸಾಯಿರಾಮ್ ಸ್ಟುಡಿಯೋ ಮಂಗಳೂರು)
ಸಂಯೋಜನೆ : ಹುಸೈನ್ ಕಾಟಿಪಳ್ಳ.

ಕೆಲ ಚಿತ್ರಗಳು :

ಹಾಡಿದವರು ಸಂಗೀತ ಬಾಲಚಂದ್ರ ,ಮೊಹಮ್ಮದ್ ಅಲಿ ಕಮ್ಮರಡಿ ಪಕ್ಕದಲ್ಲಿ ( ಕಲೆಯನ್ನು ಅತೀವವಾಗಿ ಪ್ರೋತ್ಸಾಹಿಸುವ ವ್ಯಕ್ತಿ)


ಹಾಡು ಬರೆದವರು : ಸಿಂಧು ಭಾರ್ಗವ್ 


ವಿಷೇಶವಾಗಿ ನನ್ನ ಬರವಣಿಗೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿದವರು ಶ್ರೀ ಮೊಹಮ್ಮದ್ ಅಲಿ ಕಮ್ಮರಡಿ.. ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು. ಒಮ್ಮೆ ಕೇಳಿ. ಆನಂದಿಸಿ.
.
YouTube link is :-

https://youtu.be/x1RkXTxkHc4

ಯುಗಾದಿ ಮತ್ತೆ ಬಂದಿದೆ



ಯುಗಾದಿ ಮತ್ತೆ ಬಂದಿದೆ..‌

ಯುಗದ ಆದಿ ಶುರುವಾಗಿದೆ..
ಅಂಗಳದಲ್ಲಿ ಪ್ರೀತಿಯ ರಂಗವಲ್ಲಿ ಬಿಡಿಸಬೇಕಿದೆ..
ಹೊಸಕನಸುಗಳ ತೋರಣದಲ್ಲಿ ಹೊಸೆಯಬೇಕಿದೆ..
ಹಳೆಯ ನೋವುಗಳ ಇಂಚಿಂಚಾಗಿ ಮರೆಯಬೇಕಿದೆ..

ಹೊಸವರುಷ ಮತ್ತೆ ಬಂದಿದೆ...
ಪಟ್ಟೆ ಸೀರೆಯಲ್ಲಿ ಮನೆಮಗಳಂದವ ನೋಡಬೇಕಿದೆ..
ಮಗನ ರೇಶಿಮೆ ಶಾಲಿನಲ್ಲಿ ಹುರುಪು ತುಂಬ ಬೇಕಿದೆ..
ಪತಿರಾಯರಿಗೆ ಬಿಸಿಬಿಸಿಯ ಒಬ್ಬಟ್ಟು ತಿನ್ನಿಸಬೇಕಿದೆ.‌.

ಯುಗಾದಿ ಮತ್ತೆ ಬಂದಿದೆ..
ನೆರೆಕೆರೆಯವರಿಗೆಲ್ಲ ಹಾರೈಸಿ ಸಂಭ್ರಮ ಪಡಬೇಕಿದೆ..
ಸಿಹಿ ಹಂಚಿ ಅವರ ನಗುಮೊಗವ ನೋಡಬೇಕಿದೆ‌..
ಚಿಗುರೆಲೆ ತಿಂದು ಹಾಡುವ ಕೋಗಿಲೆಯ ಹುಡುಕಬೇಕಿದೆ‌‌‌‌..

ಯುಗಾದಿ ಮತ್ತೆ ಬಂದಿದೆ..
ಮನ,
ಈ ಹೊಸ ವರುಷ ಹರುಷವನ್ನೇ ತರಲಿ ಎಂದಿದೆ.‌.

- ಸಿಂಧು ಭಾರ್ಗವ್ .

Thursday 16 March 2017

ಕವನ : ಹೋಳೀ ಹುಣ್ಣಿಮೆ



🍁🙏😊😍🌼🌸🌷🌹
ಹೋಳಿಹುಣ್ಣಿಮೆಯ ಶುಭಹಾರೈಕೆಗಳು..
🍁🙏😊😍🌼🌸🌷🌹
ಆಹಾ..ಹುಣ್ಣಿಮೆ ಬಂದಿದೆ ಇನ್ನೊಮ್ಮೆ..
ನೋಡು ಪೂರ್ಣ ಚಂದಿರನ ನೀನೊಮ್ಮೆ..

ಪ್ರೀತಿಯ ಕಣಕಣದಲೂ
ಬಣ್ಣತುಂಬಿದವ ನೀನು..
ಚಂದಿರನ ತುಣುಕೊಂದನು
ಕಾಣಿಕೆ ನೀಡಿದವ ನೀನು..

ತೆಂಗಿನ ಗರಿಗಳ ನಡುವೆ
ನೂರಾರು ಕನಸುಗಳು..
ಮೋಡದ ರಾಶಿಗಳ ನಡುವೆ
ಬೆರೆತ ಪ್ರೀತಿಯ ಉಸಿರು..

ವರ್ಣನೆಗೂ ಅತೀತ ನಿನ್ನಯ ಪ್ರೀತಿ..
ಶ್ಯಾಮನ ನೆನಯುವ ರಾಧೆಯ ರೀತಿ..

ಆಹಾ..! ಹುಣ್ಣಿಮೆ ಬಂದಿದೆ ಇನ್ನೊಮ್ಮೆ..
ನೋಡು ಪೂರ್ಣ ಚಂದಿರನ ನೀನೊಮ್ಮೆ..

- #ಸಿಂಧು_ಭಾರ್ಗವ್. 🍁

Wednesday 8 March 2017

ಮಾರ್ಚ್ ೦೮ ವಿಶ್ವ ಮಹಿಳಾದಿನ



@*@*@*@

@*@*@*@*@*@



(•) *ಬೆಳಿಗ್ಗೆ ಏಳು ಗಂಟೆಗಾಗಲೇ ರೊಟ್ಟಿ ತಿಂದು ೮-೯ತಿಂಗಳ ಮಗುವನ್ನು ಬಿಗಿಯಾಗಿ ಬೆನ್ನಿಗೆ ಕಟ್ಟಿಕೊಂಡು ಕಚ್ಚೆಕಟ್ಟಿ ಪಿಕಾಸಿ ಹಿಡಿದು ರಸ್ತೆ ಬದಿಯಲಿ ಮಣ್ಣು ಅಗೆಯುತಲಿರುವ ಮಹಿಳೆಗೆ ತಿಳಿದೇ ಇಲ್ಲ ಇಂದು ಮಹಿಳಾದಿನವೆಂದು..*

(•) *ನಿನ್ನೆ ಸಂಜೆ ಮಳೆ ಬಂದಿತೆಂದು ಸ್ವಲ್ಪ ಬೇಗನೆ ಮನೆಗೆ ಹೋದ ಕಾರಣ ಇಂದು ಮುಂಜಾನೆ ಆರು ಗಂಟೆಗಾಗಲೇ ತನ್ನ ನಿಗದಿತ ಜಾಗದಲ್ಲಿ ಬಂದು ಕುಳಿತು ವಿಧವಿಧ ತರಕಾರಿಗಳ ಗುಡ್ಡೆಹಾಕಿ ಮಾರಾಟಕ್ಕಿಳಿದ ಮುದಿ ಅಜ್ಜಿಗೆ ತಿಳಿದೇ ಇಲ್ಲ ಇಂದು ಮಹಿಳಾದಿನವೆಂದು..*

(•) *ಬಿಸಿಲು ಮಳೆಗೆ ಮೈಯೊಡ್ಡಿ ಕಾಲಗಳ ಭೇದವಿಲ್ಲದೇ ಸೇವಂತಿಗೆ ,ಮಲ್ಲಿಗೆ ,ಕನಕಾಂಬರ, ಗುಲಾಬಿ ಹಾರ ಮಾಡಿ ಮಾರಲು ಕುಳಿತ ಕಮಲಮ್ಮನಿಗೆ ತಿಳಿದಿಲ್ಲ ಇಂದು ಮಹಿಳಾದಿನವೆಂದು..*

(•) *ಅಷ್ಟೇ ಏಕೆ ದಿನಾ ಬೆಳಿಗ್ಗೆ ಕೋಳಿಕೂಗುವ ಮೊದಲೇ ಎದ್ದು ಕೊಟ್ಟಿಗೆಗೆ ಹೋಗಿ ಹಸುಗಳ ಮೈತೊಳೆಸಿ ಹೊಟ್ಟೆಗೆ ಕೊಟ್ಟು ಹಾಲು ಕರೆದು ಡೈರಿಗೆ ಕೊಡುವ ನನ್ನ #ಹಡೆದವ್ವನಿಗೂ ತಿಳಿದೇ ಇಲ್ಲ ಇಂದು ನಮ್ಮ ದಿನ- ಮಹಿಳಾ ದಿನವೆಂದು..*

*ಏನೀ ಸಂಭ್ರಮ? ಯಾಕೀ ಸಂಭ್ರಮ? ದಿನವೂ ಸವೆಯುತ , ಸೇವೆ ಮಾಡುತ ಏನೂ ಪಡೆದುಕೊಳ್ಳದೆ ಅವರಿಷ್ಟದ ವಿಷಯಗಳನ್ನು ತ್ಯಾಗ ಮಾಡುವ ಅದೆಷ್ಟೋ ಮಹಿಳೆಯರು, ಹಳ್ಳಿಗಳಲಿ, ಹೊಲಗಳಲಿ ಬೆವರುಸುರಿಸಿ ದುಡಿಯುವ ಅದೆಷ್ಟೋ ಮಹಿಳೆಯರು ಇಂದು ಇವರೆಲ್ಲರ ನೆನಪಿಸುವ ಕೆಲಸವಾದರೂ ನಡೆಯಲಿ..*

*ಈ ಒಂದು ದಿನದ ಬಾಯಿಮಾತಿನ ಹಾರೈಕೆಯಿಂದ ಏನೇನೂ ಲಾಭವಿಲ್ಲ..*
🙏🌼🌸🌹🌷🌹🌸🌼🙏
√) *ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಲು ಇನ್ನೂ  ಸಾಧ್ಯವಾಗಲಿಲ್ಲ..*
 √) *ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕೊಲೆ ಮಾನಸಿಕವಾಗಿ, ದೈಹಿಕವಾಗಿ ಹಿಂಸಿಸುವುದು ಇನ್ನೂ ನಿಂತಿಲ್ಲ..*
√) *ಹೆಣ್ಣನ್ನು ಮಕ್ಕಳನ್ಹಡೆಯುವ ಯಂತ್ರದಂತೆ, ಕೇವಲ ಭೋಗದ ವಸ್ತುವಿನಂತೆ, ಮನೆಕೆಲಸ ಮಾಡುವ ಆಳಿನಂತೆ ನೋಡುವುದು ಇನ್ನೂ ಬಿಟ್ಟಿಲ್ಲ..*
😔😞😔😢😭
ಸಾಕು.. ಹೆಣ್ಣು ಸೃಷ್ಟಿ -ಸ್ಥಿತಿ-ಲಯ ಎಲ್ಲವೂ.. ಆದರೂ ಈಗಿನ ಕಾಲದಲ್ಲಿ ಅವಳನ್ನು ನೆಮ್ಮದಿಯಿಂದ ಬದುಕಲೂ ಬಿಡುತ್ತಿಲ್ಲ..
😢🙏😔🙏
ಬದಲಾವಣೆ ಬರಲಿ..
.
.
.
ಇದೊಂದು ಕಡೆಯಾದರೆ ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವ ಮಾತು ಕೂಡ ಸುಳ್ಳಲ್ಲ. ಸ್ವಾರ್ಥ, ಅಹಂಕಾರ ದರ್ಪ ತೋರಿಸುತ್ತಾ ಬಂದ ಸೊಸೆಯನ್ನು ಮೂಲೆ ಗುಂಪಾಗಿಸುವ ಅತ್ತೆ ,ನಾದಿನಿಯರು, ಇಲ್ಲಾ "ನಾನೂ ಓದಿರುವೆ, ನಾನೂ ದುಡಿಯುವೆ  ಎಂದು ಗಂಡನನ್ನ ಅಗೌರವದಿಂದ ನೋಡುವ ವಯಸ್ಸಾದ ಅತ್ತೆ ಮಾವಂದಿರನ್ನ ನೋಡಿಕೊಳ್ಳಲೂ ಮನಸ್ಸು ಮಾಡದ, ಮಕ್ಕಳನ್ನೂ ಹೆರಲು ಒಪ್ಪದ, ಹೆತ್ತರೂ ಆ ಮಗುವನ್ನು ಚೆನ್ನಾಗಿ ನೋಡಿಕೊಂಡು ತಾಯ್ತನ ಅನುಭವಿಸುವ ಭಾಗ್ಯವೂ ಇಲ್ಲದ ಮಹಿಳೆಯರು...

ಎಲ್ಲಾ ಅಯೋಮಯ..
- ಸಿಂಧು ಭಾರ್ಗವ್. 🍁

Wednesday 1 March 2017

ರಕ್ತದಾನದ ಬಗ್ಗೆ ಬರೆದ ಕವನಕ್ಕೆ ಸಮಾಧಾನಕರ ಬಹುಮಾನ ದೊರೆತದ್ದು ಮರೆಯಲಾಗದ ಕ್ಷಣ.

.

ರಕ್ತದಾನ ಮಾಡುವುದರ ಬಗ್ಗೆ ಜಾಗ್ರತಿ ಮೂಡಿಸುವ ಸಲುವಾಗಿ  ನಡೆಸಿದ ರಾಜ್ಯಮಟ್ಟದ ಕವನ  ಸ್ಪರ್ಧೆಯಲ್ಲಿ ನನಗೆ ಸಮಾಧಾನಕರ ಬಹುಮಾನ ಸಿಕ್ಕಿದೆ👆🌷😍😘 9th place see 🌷😍👆
ಆಯೋಜಕರಿಗೆ ಅಭಿವಂದನೆಗಳು🙏
•••••••••••
 #ಕವನದ_ಶೀರ್ಷಿಕೆ : ರಕ್ತದಾನ
~~‌ ~~ ~~ ~~ ~~ ~‌~ ~~
ಕಾಲೇಜು ದಿನಗಳಲಿ ಅದೊಂತರಾ ಉತ್ಸಾಹ..
ರಕ್ತದಾನ ಮಾಡುವೆನೆಂದರೆ ಎಲ್ಲರದ್ದೂ ಪ್ರೋತ್ಸಾಹ..

ಉಚಿತವಾಗಿ ಸಿಗುವ ಒಂದು ಸೇಬಿಗಾಗಿ,
ಹತ್ತಾರು ಶಹಬ್ಬಾಸ್ ಗಿರಿಗಾಗಿ..
ಓಡುತ್ತಿದ್ದೆವು ರಕ್ತದಾನ ಮಾಡಲು
ತಾಮುಂದು ನಾಮುಂದಾಗಿ...

ಆಗೆಲ್ಲ ರಕ್ತದಾನದ ಮಹತ್ವ ತಿಳಿದವನೂ ಅಲ್ಲ,
ನನಗೂ ಅದರ ಅಗತ್ಯ
ಬರಬಹುದಾದ ಅರಿವೂ ಇರಲಿಲ್ಲ..

ಬಿಸಿರಕ್ತ, ಮೋಟಾರು ಬೈಕಿನಲಿ ಕುಳಿತರೂ
ಕುದುರೆ ಮೇಲೆ ಕುಳಿತ ಭಾವ..
ಲಗಾಮು ಇಲ್ಲದೇ ಓಡಿಸಿದ್ದಕ್ಕೆ
ನೆಲಕ್ಕುರುಳಿತು ಜೀವ..

ಪ್ರಜ್ಞೆ ತಪ್ಪಿತು, ಮುಂದೇನಾಯಿತು?
ದಡಬಡ ಎಂದು ತುರ್ತು ನಿಗಾ ಘಟಕಕ್ಕೆ ದೇಹ ಹೋಯಿತು..

ವೈಧ್ಯರು ಬಂದರು, ಸ್ನೇಹಿತರ ಕರೆದರು..
ಅಗತ್ಯವಾಗಿ ರಕ್ತ ಬೇಕಾಗಿದೆ..
ಆಸ್ಪತ್ರೆಯಲಿ ಸಂಗ್ರಹಿಸಿದ್ದು ಕಾಲಿಯಾಗಿದೆ..
ಅಲ್ಲಿ ಇಲ್ಲಿ ವಿಚಾರಿಸಿದರು, ಗೆಳೆಯರು ಗಾಬರಿಗೊಂಡರು..
ರಕ್ತದ ಬ್ಯಾಗಿಗಾಗಿ ಉಪಾಯ ಮಾಡಿದರು..

ಗೆಳೆಯನ ರಕ್ತವೇ ದೇಹಕ್ಕೆ ಸರಬರಾಜಾಯಿತು,
ಕೊನೆಯುಸಿರು ಕೂಡ ಸರಾಗವಾಯಿತು..

ಪಿಳಿಪಿಳಿ ಕಣ್ಣಿನಿಂದ ಮತ್ತೆ ಲೋಕ ನೋಡಿದೆ,
ಗೆಳೆಯ ನೀಡಿದ ರಕ್ತದಿಂದ ಮತ್ತೆ ಜೀವ ಬಂದಿದೆ,
ರಕ್ತದಾನದ ನಿಜವಾದ ಅರ್ಥ ಈಗ ಅರಿವಾಗಿದೆ..

"ರಕ್ತದಾನ ಶ್ರೇಷ್ಟ ದಾನ"
( ನಿಮ್ಮಿಂದ ಒಂದು ಜೀವ ಉಳಿಯುವುದೆಂದಾರೆ ಯಾಕೆ ರಕ್ತದಾನಕ್ಕೆ‌ ಮುಂದಾಗಬಾರದು)

- ಸಿಂಧು ಭಾರ್ಗವ್   

Friday 10 February 2017

ಕವಿತೆ: ಜೀವನದ ಸಂತೆಯಲಿ ಮನವೊಂದು ಹುಚ್ಚು ಸಂತೆ

ಹುಣ್ಣಿಮೆಗೆ ಅದೇಕೋ ಉಕ್ಕುವುದು ಪ್ರೀತಿ
~~~~~~~~~~~~~~~~~~~~~
ಯಾವಾಗಲೂ ನಾನೇ ಮೈಮೇಲೆ
ಬಿದ್ದು ಹೋಗುವುದು.
ಅತೀ ಆಯಿತು ಎಂದರೂ ಪ್ರೀತಿ
ಮಧುರ ಅನಿಸುವುದು..

ಪ್ರೇಮಿಗಳ ದಿನದ ಸ್ವಾಗತಕೆ
ಕಾಯುತಿರಬಹುದು  ಹಲವರು..
ದಿನವೂ ಅದರ ಸವಿಯ
ಸವಿಯುವವರು ಕೆಲವೇ ಕೆಲವರು..

ಅವನಲ್ಲಿ ಕೊಂಚ ನೆನಪಿಸಿಕೊಂಡರೂ
ಬಿಕ್ಕಳಿಕೆ  ಬರುವುದು..
'ನೆನಪಿಸಿದ್ದು ಸಾಕು ಹೋಗಿ ಮಲಗು'
ಎಂದಾಗಲೇ ಕಡಿಮೆಯಾಗುವುದು...

ಬಿಡುವಾದಾಗೆಲ್ಲ ಮುತ್ತಿನ ಸುರಿಮಳೆ,
ಕಂತುಕಂತಾಗಿ ಸವಿಯಲಿ ಎಂದು..
ಸಗ್ಗವೇ ಕೈಗಿಡುವ ಅವನ ಪ್ರೀತಿಗೆ
ನಾನು ಋಣಿ ಎಂದೆದೂ...

- ಸಿಂಧು.

ಕವನ : ಮತ್ತೆ ಬಂದಿದೆ ಹುಣ್ಣಿಮೆ

ಮತ್ತೆ ಬಂದಿದೆ ಹುಣ್ಣಿಮೆ...

ನೀನೇಕೆ‌ ಇಂದು ಬಂದೆ...
ಆ ರಾತ್ರಿ ಗಾಢ ಕತ್ತಲ ಅಮವಾಸ್ಯೆಗೆ
ನಿನ್ನ ಕಾಣದಾದಾಗ ನಾನೇಷ್ಟು ಭಯಗೊಂಡಿದ್ದೆ..
ನಾನೆಷ್ಟು ಕಳವಳ ಗೊಂಡಿದ್ದೆ..
ನಿನಗೇನಾದರೂ ತಿಳಿದಿದೆಯಾ..?
ಇಷ್ಟು ದಿನ ಬರದವನು ಇಂದು ಬಂದು
 ನನ್ನೆದುರು ಹಲ್ಲುಕಿರಿಯುತ್ತಾ ಏಕೆ ನಿಂತಿರುವೆ..?
ಹೋ ಮತ್ತೆ ನಿನ್ನ ಬೆಳದಿಂಗಳ ಕಾಂತಿಗೆ
 ಕರಗಿ ನಿನ್ನ ತೋಳಬಂಧನದಲ್ಲಿ ಸಿಲುಕುವೆ ಎನಿಸಿದೆಯಾ.?
ಇಲ್ಲ.. ನನಗೆ ತಿಳಿದಿದೆ.. ನಿನಗೆ ನಾನೀಗ ಅಷ್ಟಾಗಿ ಹಿಡಿಸುತ್ತಿಲ್ಲವೆಂದು..
ಲೋಕವೇ ಮೆ‍ಚ್ಚುವ ನಿನ್ನ, ನಾನು
ನನ್ನವನೆಂದು ಪ್ರೀತಿಸಿದ್ದೇ ತಪಾಯ್ತು..
ಓ ಅಲ್ಲಿ ನೋಡು..
ಹುಚ್ಚು ಹುಡುಗಿ ಬೆಳದಿಂಗಳ ನೋಡಿ ಕನಸ ಕಾಣಲು ಶುರು ಮಾಡಿದ್ದಾಳೆ.
ಕವನವೂ ಬರೆಯಬಹುದು..
ಅಂಗಳದಲ್ಲಿ ನಾಲ್ಕು ಹೆಜ್ಜೆ ನೃತ್ಯವೂ ಮಾಡಬಹುದು..
ಈಗ ಅವಳ ಸರದಿ.
ಮುಂಬರುವಾ ಅಮವಾಸ್ಯೆಗೆ ಅಳುತಾ ಕೂರುವ ಮುನ್ಸೂಚನೆ..
ನಿನ್ನ ಪ್ರೀತಿಸಿದವರಿಗೆಲ್ಲಾ ಇದೇ ಉಡುಗೊರೆ..
ನಿನ್ನ ಮುಕ್ತವಾಗಿ ಪ್ರೀತಿಸುತ್ತಿದ್ದ ನಾನೀಗ ಬಂಧಮುಕ್ತ...!!

- ಸಿಂಧು ಭಾರ್ಗವ್. 🍁

Monday 6 February 2017

ಹಾಡು: ಓ ಜೀವವೇ ನಿನ್ನ ನೋಡುತಲೇ..



#ಓ_ಜೀವವೇ...

ನಿನ್ನ ನೋಡಿ ನೋಡಿ ಜೀವವೇ...
ನಿನ್ನ ನೋಡುತಲೇ ಜೀವಿಸುವೆ..
ನಿನ್ನ ನೋಡಿ ನೋಡಿ ಜೀವವೇ..
ನಿನ್ನ ನೋಡುತಲೇ ಸಾಯುವೆ..

ಒಂಟಿಯಾಗಿದ್ದೆ ನಾನು
ಒಣ ಹುಲ್ಲಿನಂತೆ ಮನಸ್ಸು..
ಸಿಂಚನವಾಯ್ತು ಪ್ರೀತಿಯ
ಚಿಗುರಿ ನಿಂತಿತು ಕನಸು...

ಎದೆಬಡಿತವ ಕೇಳಿಸಿಕೋ
ನಿನ್ನ ಹೆಸರೇ ಹೇಳುತಿದೆ..
ಕಂಗಳ ಒಮ್ಮೆ ಗಮನಿಸು
ನಿನ್ನ ಬಿಂಬವೇ ಕಾಣುತಿದೆ..

ಮಡಿಲಿನಲಿ‌ ಮಲಗಿಸಿ ನಿನಗೆ
ಜೋಗುಳ ಹಾಡುವಾಸೆ..
ನನ್ನ ಕನಸಿನೂರಿಗೆ ನಿನ್ನ
ಅರಸನ ಮಾಡುವಾಸೆ..

ಅನಿಸುವುದು ನನಗೆ ನೀನೇ ಅವನೆಂದು,
ದಿನವೂ ಕನಸಲಿ ಬರುವವನೆಂದು..
ಪೋಣಿಸಿಟ್ಟೆ ಎಲ್ಲಾ ಭಾವಗಳನು
ನಿನ್ನ ಕೊರಳಿಗೆ ಹಾಕಲೆಂದು..

ಪ್ರೀತಿಯ ಪರಿಯ ತಿಳಿಸಿದವ ನೀನು..
ಪ್ರತೀ ಹೆಜ್ಜೆಯನು ಸವಿದವಳು ನಾನು..
ಓ‌ ಜೀವವೇ ನಿನ್ನ ನೋಡುತಲೇ ಜೀವಿಸುವೆ..

- ಸಿಂಧುಭಾರ್ಗವ್ 🍁

ಕವನ: ನಮ್ಮ ಸೈನಿಕರು

@.
@@.
@
🙏 ಅಮ್ಮ ಹೇಳುತ್ತಿದ್ದರು, ನಮ್ಮನ್ನೆಲ್ಲ ರಕ್ಷಿಸುವವನು ಆ ದೇವರು ಎಂದು..
ದೇವರಿಗಿಂತ ಒಂದು ಕೈ ಮೇಲಾದೆಯಲ್ಲೋ... 🙏
••
 🚶 ಹುಟ್ಟಿ ಬೆಳೆದ ಮನೆಯ ಬಿಟ್ಟು ಹೋದೆ, ಈ ದೇಶವೇ ನನ್ನ ಮನೆಯೆಂದು..
 🚶 ಹೆತ್ತವರ ಒಡಹುಟ್ಟಿದವರಿಗೆ ವಿದಾಯ ಹೇಳಿದೆ,ದೇಶದ ಜನರೇ ನನ್ನ ಬಂಧುಗಳೆಂದು..
••
😍 ಚಿಗುರು ಮೀಸೆ, ನೂರಾರು ಕನಸುಗಳು, ಸ್ವಪ್ನ‌ಕನ್ನಿಕೆ ಸ್ವಪ್ನಕ್ಕೆ ಮಾತ್ರ ಸೀಮಿತಳಾದಳು..
😍 ಅಲ್ಲೊಬ್ಬನಿಗೆ ಮದುವೆ ದಿನ ಗೊತ್ತಾಗಿದೆ, ನಾಳೆಯೆಂದರೆ ಮದರಂಗಿ ಕರಗಳಲಿ ಕಂಗೊಳಿಸಲಿದೆ..
😍 ಇಲ್ಲೊಬ್ಬನಿಗೆ ಪುಟ್ಟಪುಟ್ಟ ಕೈಗಳ ಎತ್ತಿ ಆಡಿಸುವ ಭಾಗ್ಯ, ಬಾಣಂತಿ ಮಡದಿಯ ನೋಡುವ ತವಕದಲ್ಲಿದ್ದಾನೆ..
😍 ಇವನೋ ಒಬ್ಬನೇ ಮಗ, ಹಿರಿಯ ತಂದೆತಾಯಿಗೆ ಊಟ-ನಿದಿರೆಯು ದೂರದ ಮಾತಾಗಿದೆ..
••
 😳 ಅಲ್ಲೆಲ್ಲೋ ಗುಂಡಿನ ಶಬ್ಧ ಬೆಚ್ಚಿ ಬೀಳಿಸಿತು ಪ್ರಿಯತಮೆಯಾ, ಕಂಪಿಸಿತು ಮದರಂಗಿ ಕೈಯಾ, ಈಗಷ್ಟೆ ಹೊಸ ಪ್ರಪಂಚ ಕಾಣುತ್ತಿರುವ ಹಸುಳೆಯ, ಮುದಿ ಪೋಷಕರ..
••
🙏 "ರಕ್ತದ ಮಡುವಿನಲ್ಲಿ ಮಡಿದ ವೀರ ಯೋಧ.. ಮಾಡಿದ ಪ್ರಾಣತ್ಯಾಗ" 🙏😭
••
ಎಲ್ಲರೂ ಬಂದರೂ, ಕಣ್ಣೊರೆಸಿದರೂ, ಸರ್ಕಾರಿ ಗೌರವದೊಂದಿಗೆ ದೇಹವ ಮಣ್ಣು ಮಾಡಿದರು....
👍 ಮಗನನ್ನು ಸೈನ್ಯಕ್ಕೆ ಸೇರಿಸಿದ್ದಕ್ಕೆ ಹೆಮ್ಮೆಯಾಗುವುದು, ಪತಿಯಾಗಿ ಪಡೆದುದಕ್ಕೆ ಗರ್ವವಾಗುವುದು..
ಆದರೂ... ಆದರೂ... :(
ಇನ್ನೆಲ್ಲಿ ನೀ ಬರುವೆ..?? ಕೂಡಿಟ್ಟ ಕನಸುಗಳಿಗೆ ಯಜಮಾನನೇ ಇಲ್ಲ.. ನೀನಿಲ್ಲದೇ ಮನೆಮನಗಳು ಬರಿದಾಯಿತಲ್ಲ..ಹೀಗೆ ಒಂದಲ್ಲ ಎರಡಲ್ಲ.. ಸಾವಿರಾರು ಸೈನಿಕರು..

"ನಿಮ್ಮನಿಮ್ಮ ಜೀವನವೇ ದೊಡ್ಡದು ಎಂಬುದು ಬಿಡಿ.. ನಮಗಾಗಿ ನಮ್ಮ ದೇಶಕ್ಕಾಗಿ ಪ್ರಾಣತ್ಯಾಗ ಮಾಡುವವರ ಒಮ್ಮೆ ನೆನಪಿಸಿಕೊಳ್ಳಿ.. ದಿನದಲ್ಲೊಮ್ಮೆ  ಅವರ ಒಳಿತಿಗಾಗಿ ಪ್ರಾರ್ಥಿಸಿ..

#Our_Soldiers.. #ನಮ್ಮಸೈನಿಕರು..

Share With Your Friends
ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಸೈನಿಕರಿಗಾಗಿ ದಿನದಲ್ಲೊಮ್ಮೆ ಪ್ರಾರ್ಥಿಸಿ 🙏🌹

- ಸಿಂಧು ಭಾರ್ಗವ್. 🍁

Wednesday 1 February 2017

ಕವನ : ಬಾಲ್ಯದ ಆಟ

.
@@.
.
ಕವನದ ಶೀರ್ಷಿಕೆ : ಬಾಲ್ಯದ ಆಟ :
* * * * * * * * * * * * * * * * * * *
ಬಾಲ್ಯದಲಿ ಆಡುವ
 ಆಟಗಳೆಲ್ಲವೂ ಚಂದ..
ಕಾತುರ ಕಣ್ಣಿಂದ
ನೋಡುವುದೇ ಆನಂದ..

ಸಮಯದ ಪರಿವಿಲ್ಲ ,
ಮನೆಯ ನೆನಪಿಲ್ಲ..
ಹೊಟ್ಟೆಗೆ ಹಸಿವಿಲ್ಲ ,
ಕನಸಿನಲೂ ಕಾಡುವುದಲ್ಲ..

ಒಮ್ಮೊಮ್ಮೆ ಗೆಳೆಯರ ಗೆಲುವು
ತರಿಸುವುದು ಮತ್ಸರ..
ಇನ್ನೊಮ್ಮೆ ಸೋಲಿಸಲೇ
ಬೇಕೆಂಬ ಕಾತುರ..

ನೋವಿನ ಅರಿವಿಲ್ಲ,
ಸ್ನೇಹಕೆ ಸಮವಿಲ್ಲ ..
ಸೋತರೂ ಬೇಸರವಿಲ್ಲ,
ಗೆದ್ದರೂ ಖುಷಿಯಿಲ್ಲ..

ಆಟದ ಜೊತೆಗೆ ಪಾಠವು ,
ಹಠದಲಿ ಅಡಗಿರುವ ಛಲವು..
ಗೆಳೆಯರ ಜೊತೆಗಿನ ಬಾಲ್ಯವು,
ಸವಿದಷ್ಟು ಸಿಹಿಯಾದ ಅಮೃತವು..


-ಸಿಂಧುಭಾರ್ಗವ್ 🍁

ಕವನ: ಓ ಮಲ್ಲಿಗೆ

.
@@@
.
ಕವನದ ಶೀರ್ಷಿಕೆ : ಓ‌ ಮಲ್ಲಿಗೆ
* * * * * *‌ * *‌ * * * * * * *‌ *‌ *
#ಓ_ಮಲ್ಲಿಗೆ , ಅಂದದ ಮುಗುಳು ನೀನೀಗ.
ಅಪ್ಪ-ಅಮ್ಮನ ಪ್ರೀತಿಯ ಮಗಳು ನೀನೀಗ..
ತಂಗಾಳಿ ಜೊತೆಗೆ ಆಡುವೆ,
ಗಂಧದ ಜೊತೆಗೆ ಬೆರೆಯುವೆ..
ಮನಕೆ ಮುದವ ನೀಡುವೆ..
ಹೆತ್ತವರ ಹಿಡಿತದಲ್ಲಿಯೇ ಇರುವೆ..

#ಓ_ಮಲ್ಲಿಗೆ , ಬಿರಿದ ಸುಮವು ನೀನೀಗ..
ಕಣ್ಗಳ ಕುಕ್ಕುವ ಹರೆಯ ನಿನದೀಗ..
ಬೇಡವೆಂದರೂ ಪಸರಿಸುವ ಘಮವು,
ತಿರುತಿರುಗಿ ನೋಡುವಂತಹ ಸೌಂದರ್ಯವು..
ಕಾಡಿಸುವರು, ಪೀಡಿಸುವರು..
ಜೋಪಾನ ಎಲ್ಲಿಯೂ ಯಾಮಾರದಿರು..

#ಓ_ಮಲ್ಲಿಗೆ, ನೀ ತೊಟ್ಟು ಕಳಚಿ ಬೀಳುವ ಸಮಯವೀಗ..
ಇಳಿವಯಸ್ಸನು ಕಳೆಯುವ ಅವಕಾಶವೀಗ..
ಯವ್ವನವು ಮಾಯವಾಯ್ತು..
ಅನುಭವವು ಜಾಸ್ತಿಯಾಯ್ತು..
ಸಂಧ್ಯಾರಾಗ ಗುನುಗುತಲಿ,
ನಿನ್ನೆಯ ನೆರಳ ಉಳಿಸುತಲಿ,
ಮಲ್ಲಿಗೆ ನೀ‌ನುಳಿದೆ ಎಲ್ಲರ ಮನದಲಿ..

- ಸಿಂಧುಭಾರ್ಗವ್ 🍁

Hats off To Farmer's family



#ಸುಂದರ_ಪ್ರಕೃತಿಗೇ ಎಲ್ಲರೂ ಮಕ್ಕಳೇ..

ತಂಪಾಗಿ ಬೀಸುವ ಗಾಳಿ ಕೇಳಲಿಲ್ಲ ನೀನು ಯಾವ ಜಾತಿ?
ಬೆಳಕು ನೀಡುವ ರವಿಯು ಕೇಳಲಿಲ್ಲ ನಿನದು ಯಾವ ಮತ?

ಅಕ್ಕಿ ಬೆಳೆಯುವ ಮಣ್ಣಿಗೆ ಜಾತಿಮತದ ಹಂಗಿಲ್ಲ..
ನೀನು ಮೇಲ್ಜಾತಿ ನೀನು ಕೀಳು ಎಂದು ಹರಿವ ನೀರು ಇಂಗಿಲ್ಲ..

ನಮಗಾಗಿ ಎಲ್ಲವನೂ ನೀಡುವ ತ್ಯಾಗಮಯಿ ಪ್ರಕೃತಿ ಮಾತೆ,
ಆದರೆ ಮನುಜ ಅದೆಲ್ಲವೂ ನನದೇ ಎಂದು ಸ್ವಾಧೀನಕ್ಕೆ ತಂದುಕೊಂಡು ಕೊಡುಕೊಳ್ಳುವಿಕೆಯಲಿ ಜಾತಿಮತಧರ್ಮದ  ದುರ್ಗಂಧ ಬೀರುತ್ತಿದ್ದಾನೆ..

ಪರಮಸ್ವಾರ್ಥಿಯ ಕೊನೆಯೆಂದು?!? :(

(( Really Hats off to u ))

ಕಥೆ : ಶಾರದಾಳ ದಡ್ಡತನ

ಕಥೆ: ಶಾರದಾಳ‌ ದಡ್ಡತನ

ರಾಜಿ ಹತ್ತನೇ ತರಗತಿಗೂ ಸರಿಯಾಗಿ ಹೋಗಲಿಲ್ಲ. ಓದು ತಲೆಗೆ ಹತ್ತುವುದಿಲ್ಲ ಎಂದು ಅಮ್ಮನಲ್ಲಿ ಅಳಲು ಶುರುಮಾಡಿದ್ದಳು. ಇದ್ದೊಂದು ಮಗಳಾದರೂ ಚೆನ್ನಾಗಿ ಓದಲಿ ಎಂಬ ಕನಸೂ ನೀರಿನಲ್ಲಿ  ಕದಡಿಹೋಯಿತು. ಶಾರದಾ, ರಾಜಿಯ ತಾಯಿ ದಿನ ಬೆಳಿಗ್ಗೆ ರೋಡ್ ಸೈಡ್ ನಲ್ಲಿ ಡಬ್ಬಿ ಅಂಗಡಿ ಇಟ್ಟಿದ್ದಳು. ಬೆಳಿಗ್ಗಿನ ಉಪಹಾಕ್ಕೆ ಇಡ್ಲಿ-ಒಡೆ ಮಾರುತ್ತಿದ್ದಳು. ಸ್ವಾವಲಂಬೀ ಜೀವನ ನಡೆಸುತ್ತಿದ್ದಳು. ಮಧ್ಯಾಹ್ನದ ವೇಳೆ ಬಿಡುವಾಗಿರುತ್ತಿದ್ದಳು. ನಾಳಿನ ತಿಂಡಿಗೆ ಹಿಟ್ಟು ತಯಾರಿಸುವುದು ಚಟ್ನಿ ಮಾಡಲು ಬೇಕಾಗುವ ವ್ಯಂಜನಗಳಿಗೆ ಮಾರುಕಟ್ಟೆಗೆ ಹೋಗುವುದೂ ಸರಿಯಾಗುತ್ತಿತ್ತು. ಅವಳ ಮಾಗಲ್ಯವೋ ರಾತ್ರೆ ಕುಡಿದು ಚರಂಡಿಗೆ ಬಿದ್ದರೆ ಮರುದಿನ ಮಧ್ಯಾಹ್ನ ಏಳುತ್ತಿದ್ದ. ಅಷ್ಟರೊಳಗೆ ಪ್ರತಿದಿನ ಮುಂಜಾನೆ ₹೫೦೦-೬೦೦/- ಸಂಪಾದನೆ ಮಾಡುತ್ತಿದ್ದಳು. ಅಲ್ಲೇ ಸನಿಹದಲ್ಲಿ ಸಣ್ಣ ಗುಡಿಸಿಲಿನಲ್ಲಿ ವಾಸಿಸುತ್ತಿದ್ದರು. ಸ್ಲಮ್ ಏರಿಯಾ ಆದ ಕಾರಣ ಗಂಡು ನಾಯಿಗಳ ಹಾವಳಿ ಜಾಸ್ತಿ ಇತ್ತು. ಆದರೂ ಗಟ್ಟಿಗಿತ್ತಿ ಮಗಳನ್ನು , ತನ್ನನ್ನೂ‌ ರಕ್ಷಿಸಿಕೊಂಡಿದ್ದಳು.
*
ಒಮ್ಮೆ ಅದೆಲ್ಲಿಂದಲೋ ಬಂದ ಹುಡುಗನೊಬ್ಬ ಅಕ್ಕ ಅಕ್ಕ ಎಂದು ಅವಳ ಹಿಂದೆಯೇ ಸುತ್ತುತ್ತಿದ್ದ. ಸೋಮ ದಿನವೂ ಅವಳಿಗೆ ತರಕಾರಿ ತರಲು ಸಹಾಯ ಮಾಡುತ್ತಿದ್ದ. ದಿನ ಕಳೆದಂತೆ ಅವನ ಗಮನ ರಾಜಿ ಮೇಲೆ ಹೋಯಿತು. ಸ್ನೇಹದಲ್ಲಿ ಮಾತನಾಡಲು ಶುರುಮಾಡಿದ್ದ. ಅವನ ಗುಣನಡತೆ ಮೇಲೆ ಶಾರದಾಳಿಗೆ ಅನುಮಾನ ಬರತೊಡಗಿತು. ಆದರೂ ಅಕ್ಕ ಎಂದು ಬಾಯಿತುಂಬಾ ಕರೆಯುತ್ತಾನಲ್ಲ ಎಂದು ಸುಮ್ಮನಿದ್ದಳು. ಮುಗ್ಧೆಯಾದ ರಾಜಿಗೆ ಅವನ ನರಿಬುದ್ಧಿ ತಿಳಿದಿರಲಿಲ್ಲ. ಅದೊಂದು ದಿನ ಮುಂಜಾನೆ ಶಾರದ ಪಾತ್ರೆಯನ್ನೆಲ್ಲಾ ತೊಳೆಯುತ್ತಿದ್ದಾಗ ಗರಬಡಿದವಳಂತೆ ಕುಳಿತಿದ್ದ ರಾಜಿಯ ನೋಡಿದಳು. "ಏನಾಯಿತೇ ನಿನಗೆ? ನಾಲ್ಕು ಪಾತ್ರೆ ತೊಳೆಯಲಾದರೂ ಬರಬಾರದೇ? ಮಂಕಾಗಿ ಏಕೆ ಕುಳಿತಿರುವೆ ? ನಿನ್ನಪ್ಪನೋ ಯಾವುದಕ್ಕೂ ಉಪಕಾರಕ್ಕಿಲ್ಲ.. ನಾನು ಇಷ್ಟು ಒದ್ದಾಎಉವುದು ನಿನಗಾಗೇ ತಾನೇ.. "ಎಂದು ಸ್ವಲ್ಪ ಜೋರಾಗೇ ಕೇಳಿದಳು. ಅವನೆಲ್ಲಿ ನಿನ್ನ ಗೆಳೆಯ ದಿನ ತಿಂಡಿ ತಿನ್ನಲು ಬರುತ್ತಿದ್ದ. ಇಂದೆಲ್ಲಿ ಹೋದ? " ಎಂದು ಕೇಳಿದಳು. ರಾಜಿ ಏನೂ ಮಾತನಾಡಲಿಲ್ಲ. ಅಲ್ಲಿಂದ ಎದ್ದು ಹೋದಳು. ರಾಜಿ ಹೋದುದನ್ನು ನೋಡಿದ ಅಮ್ಮನಿಗೆ ಅಚ್ಚರಿ ಕಾದಿತ್ತು. ರಾಜಿ ತೊಟ್ಟ ಸ್ಕರ್ಟ್ ರಕ್ತದ ಕಲೆಗಳಿದ್ದವು. "ಅಯ್ಯೋ.. ಅಯ್ಯೋ.. ಮಾನ-ಮರ್ಯಾದೆಗಾಗೇ ಬದುಕುತ್ತಿದ್ದವಳು ನಾನು .ಗಂಡ ಸರಿ ಇಲ್ಲದಿದ್ದರೂ ನನ್ನ ಜೀವನ ನಾನು ಕಂಡುಕೊಂಡಿದ್ದೆ.. ಏನಾಯಿತೇ ನಿನಗೆ ಯಾರು ಹೀಗೆ ಮಾಡಿದ್ದು ? ಒದರು? ಬಾಯಿ ಬಿಡು "ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಕಿರುಚಾಡ ತೊಡಗಿದಳು. ಸುಸ್ತಾಗಿ ನಡೆಯಲೂ ಆಗದ ರಾಜಿ ಸಣ್ಣ ದನಿಯಲ್ಲಿಯೇ ಸೋಮ ಸೋಮ.. ಎಂದು ಅಲ್ಲೇ ಬಿದ್ದುಬಿಟ್ಟಳು. ಚೀರಾಡಿದ ಶಾರದ ತನ್ನ ಮಗಳಿಗಾದ ಅನ್ಯಾಯ ,ಶೀಲ ಕಳೆದುಕೊಂಡ ನೋವನ್ನು ಹೇಗೆ ಹೊರಹಾಕುವುದೆಂದು ಅರಿಯದೇ ಸಂಕಟಪಡುತ್ತಾ ತಲೆತಲೆ ಜಜ್ಜಿಕೊಳ್ಳುತ್ತಿದ್ದಳು. ಎಷ್ಟು ಹುಡುಕಿದರೂ ಸಿಗದ ಸೋಮ ಊರುಬಿಟ್ಟು ಹೋಗಿದ್ದ..

- ಸಿಂಧುಭಾರ್ಗವ್ 🍁

Friends Forever

ಸ್ನೇಹ_ಸಮ್ಮಿಲನ By, Sabith

ಇಂದು ನನ್ನ ಮತ್ತು ಅನ್ಸಾರ್ ಕಾಟಿಪಳ್ಳವರ ಪಯಣ ಸೀದಾ ಮಲ್ಲೇಶ್ವರಂ ಕಡೆಗಾಗಿತ್ತು
ಏನು ಹೇಳಲಿ ಮಾತೇ ಬರುತಿಲ್ಲ .....ನಮ್ಮ ಅನ್ಸಾರ್ಚರವರಿಂದಾಗಿ ನನ್ನ ಪ್ರೀತಿಯ ಸಿಂಧು ಭಾರ್ಗವ್ ಮತ್ತು ಸಾಹುಕಾರ್ ಅಚ್ಚು'ರನ್ನು ಭೇಟಿ ಆಗುವ ಭಾಗ್ಯ ನನಗೂ ಲಭಿಸಿತು☺
ಸಿಂಧು ಅಕ್ಕಾ ಬರೆಯುವ ಒಂದೊಂದು ಸಾಲುಗಳು ಅತ್ಯದ್ಭುತ ಎನ್ನುವುದರಲ್ಲಿ ಮಾತಿಲ್ಲ.....👍
ಅಚ್ಚುಚ್ಚ ಮತ್ತೆ ಮತ್ತೆ ಓದಿಸಿಕೊಳ್ಳುವ ಸಾಲುಗಳ ಪೊಣಿಸುವ ಕಲಾಕಾರ,ತುಂಬಾ ಶ್ರಮಜೀವಿ😍
ಇವರಿಬ್ಬರದ್ದು ಮೊದಲ ಭೇಟಿ,ಮೊದಲ ಭೇಟಿ ಅಂತ ಅನ್ನಿಸಲೇ ಇಲ್ಲ,ಅಷ್ಟೊಂದು ಆತ್ಮೀಯತೆಯ ಮನಸದು
ನಮ್ಮ ಪಾವತೆ ಮನುಷ್ಯ ಅನ್ಸಾರ್ ಕಾಟಿಪಳ್ಳದವರ ತರ 😍

ಇವರೆಲ್ಲರಂತಹ ಅಪರೂಪದ ವ್ಯಕ್ತಿಗಳೊಂದಿಗೆ ಸ್ನೇಹವಿದೆ ಎನ್ನುವುದೇ ನಿಜಕ್ಕೂ ನನ್ನ ಖುಷಿ....

ಒಳ್ಳೆಯದಾಗಲಿ ನಿಮಗೆಲ್ಲರಿಗೂ ...ತುಂಬಾ ಧನ್ಯವಾದಗಳು ಬಂಗಾರಕ್ಕ,ಅಚ್ಚುಚ್ಚ ಕೆಲಸದ ಒತ್ತಡದಲ್ಲಿದ್ದರೂ ಭೇಟಿಯಾಗಿದ್ದಕ್ಕೆ...

ಕೊನೆಯದಾಗಿ ಎರಡು ಸಾಲು :
ಅಪರಿಚಿತರಾಗಿ ಬಳಿ ಬಂದೆವು.
ಗೆಳೆತನವೆಂಬ ಕೊಂಡಿಯಲ್ಲಿ ಈ ಜೀವನ.
ಮನಸ್ಸು ಅಗೆದಷ್ಟು ಕನಸುಗಳ ಗೋಪುರ
 ಜೊತೆಯಾಗಿ ಈ ಒಡನಾಟ ತುಂಬಾ ತುಂಬಾ ನೆನಪಿನಲ್ಲುಳಿಯುವ ಕ್ಷಣಗಳಿವು
ಭೇಟಿ ಆಕಸ್ಮಿಕವದರೂ ನಿಮ್ಮ ನೆನಪು ಮಾತ್ರ ಶಾಶ್ವತ.😍
.
@@@
.
By, Sindhu
ಆಪ್ತರೊಂದಿಗೆ ಕಳೆಯುವ  ಅದ್ಭುತವಾದ ಸಮಯವನ್ನು‌ ಕಾಪಿಡ ಬೇಕಂತೆ..ಬೆಂಗಳೂರಿನಲ್ಲೇ ಇದ್ದರೂ ನನಗೆ ಯಾರನ್ನೂ ಭೇಟಿ ಮಾಡಲು ಆಗಲಿಲ್ಲ.
ಅನ್ಸಾರ್ Ansar Katipalla ಅವರಿಂದಾಗಿ ಸಾಹುಕಾರ್ ಅಚ್ಚು , ಸಾಬಿತ್ Sabith Kumbra ರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು.
ಅನ್ಸಾರ್:ಬರವಣಿಗೆಯಲ್ಲಿ ಪರಿಪೂರ್ಣತಾವಾದಿ.. ಒಂದು ಕವನ ಬರೆದರೆ ಅದು Perfect ಆಗಿ ಬರಲೇ ಬೇಕು. ಹಾಗೆಯೆ ಸುಂದರ ಡಿಸೈಯ್ನ್ ಮಾಡಿ ಒಂದು ಚೌಕಟ್ಟಿನಲ್ಲಿ ಹೊಳೆಯುವ ಹಾಗೆ ಮಾಡುತ್ತಾರೆ..
ಸಾಬಿತ್ : ಎಲ್ಲರ ಪ್ರೀತಿಯ ತಮ್ಮ... ನಗಿಸುತ್ತಾ ನಗುತ್ತಾ ಇರುವವನು.. ಸೋ ನೈಸ್..
ಅಚ್ಚು : ತಮ್ಮ ಬಿಜಿ ಕೆಲಸದ ನಡುವೆಯೂ ನನಗಾಗಿ ಸಮಯ ಮೀಸಲಿಟ್ಟಿದ್ದರು.. ನಗು ಮುಖ ತಮಾಷೆ..ಒಂದಷ್ಟು ನಡೆದಾಟದ ನಡುವೆ ಅಂತೂ ಅಚ್ಚು ಬೇಕರಿ ದರುಶನ ಆಯ್ತು.

ಜಝಾಕಲ್ಲಾಹು ಖೈರ್ .
ಆ ಭಗವಂತನ ಅನುಗ್ರಹ ಸದಾ ನಿಮ್ಮೆಲ್ಲರ ಮೇಲಿರಲಿ. ನಗುನಗುತ್ತಾ ಇರಿ..
ಶುಭವಾಗಲಿ.. 🙏🌷
(( ಇನ್ನೊಂದು ಕೊನೆಯ ಮಾತು ಎಲ್ಲದಕ್ಕೂ ಈ ಬರಹಲೋಕವೇ ಕಾರಣ ಆದದ್ದು. ಅದಕ್ಕೆ ವೇದಿಕೆ ಮಾಡಿದ್ದು ಫೇಸ್ಬುಕ್. ಹಾಗಾಗಿ ಖುಷಿಯಾಗುತ್ತೆ. ಬರಹಗಾರರನ್ನ ಭೇಟಿಮಾಡಲು ))
((PikPlace: Nandini Dairy ,one Km far from BEL circle.))

ಎರಡು ಹನಿ ಪ್ರೀತಿಯೆಂದರೇನು ಗೊತ್ತೆ

ಎರಡು ಹನಿಗಳು : ಪ್ರೀತಿಯೆಂದರೇನು ಗೊತ್ತೆ...
@@@@@

ಬೋಳು ಬಯಲೇ ನಿನಗೆ ಪ್ರೀತಿ ಎಂದರೇನು ಗೊತ್ತೆ?!
ಬಿಸಿಗಾಳಿಯನೇ ಅಪ್ಪಿಕೊಂಡಿರುವೆ..
ಸುಳಿಗಾಳಿಗೆ ಸಿಲುಕಿಕೊಳ್ಳುವೆ..
ಸಿಹಿಗಾಳಿಯ ಸವಿಯಬೇಕೆಂದು ಸಂಜೆವರೆಗೆ ಕಾಯುವೆ...
ಚಂದ್ರಮನ ಸಂಗದಲಿ ಸುಖವ ಕಾಣುವೆ..😍
ಅಲ್ಲೇ ಇಹುದು ಪ್ರೀತಿ...
ನಾನದನು ಬಲ್ಲೆನು...

@@@@@@@@

ಕೂಹು-ಕೂಹು ಕೂಗೋ ಕೋಗಿಲೆ
ಪ್ರೀತಿ ಅರ್ಥ ಅರಿತೆಯೇನೋ..
ಮುಂಗಾರಿಗೆ ಅಳುವೆ..
ವಸಂತಕೆ ಕಾಯುವೆ..
ಮಾವು ಚಿಗುರ ತಿಂದು ತೇಗಿ
ಕೂಹೂ ಕೂಹೂ ಹಾಡುವೆ..
ಅಲ್ಲೇ ಇಹುದು ಪ್ರೀತಿ.. ಶುರುವಾಯಿತು ಪ್ರೇಮಗೀತೆ..
ನಾನದನ ಬಲ್ಲೆನು...

- ಸಿಂಧುಭಾರ್ಗವ್. 🍁

Nammoora Habba 2017

#ನಮ್ಮೂರಹಬ್ಬದಲ್ಲಿ #ನಮ್ಮೂರಮಕ್ಕಳ #ಕಲರವ

ಅಭಿನಂದನಾ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಜಯನಗರ ೫ನೇ ಬ್ಲಾಕ್ ಶಾಲಿನಿ ಗ್ರೌಂಡ್ ನಲ್ಲಿ ನಡೆದ "ನಮ್ಮೂರಹಬ್ಬ -ಕರಾವಳಿ ಉತ್ಸವ" ಬಹಳ ಸಂಭ್ರಮದಿಂದ ನಡೆಯಿತು. ಅಚ್ಚುಕಟ್ಟಾಗಿ ಎಲ್ಲೂ ಜನಜಂಗುಳಿ ಎನಿಸದೆ ಕಾರ್ಟೂನ್ ಸಂತೆ(ಸತೀಶ್ ಆಚಾರ್ಯ,ರಘುಪತಿ ಶೃಂಗೇರಿ ect..  ಛಾಯಾಚಿತ್ರ ಪ್ರದರ್ಶನ, ಗಾಳಿಪಟಗಳು, ನಮ್ಮೂರ ಸಂತೆ (ಅಲಸಂಡೆ, ಗುಳ್ಳ, ಸೌತೆಕಾಯಿ ಇನ್ನೂ ಅನೇಕ), ಹೆಂಗಳೆಯರಿಗೆ ಶಾಪಿಂಗ್ , ಲಾವಂಚ ಬೇರಿನಿಂದ ಮಾಡಿದ ಕಲಾಕೃತಿಗಳು, ಮಂಡೆಹಾಳೆ, ಕರಾವಳಿಯ ರುಚಿಕರ ಖಾದ್ಯ ಅಲ್ಲಿನ ಬಾಣಸಿಗರು  (ಹಾಲುಬಾಯಿ,ಪತ್ರೊಡೆ, ಸುಕ್ರುಂಡೆ,ನೀರ್ದೋಸೆ, ಹಾಗೂ ಸೀಫುಡ್ ), ಚರುಮುರಿ, ಕಬ್ಬಿನಹಾಲು, ನಮ್ಮೂರ ಗ್ರಾಮೀಣಕ್ರೀಡೆ(ಕಂಬಳ ಓಟ, ಚುಕ್ಕ ಮಕ್ಕಳಿಗೆ ಒಂಟಿಕಾಲಿನ ಓಟ, ತೆಂಗಿನ ಗರಿಯಿಂದ ಕೈಚಳಕ ತೋರಿಸುವುದು, ಸಪ್ತಪದಿ, ಆದರ್ಶ ದಂಪತಿ, ಹಗ್ಗ ಜಗ್ಗಾಟ ಹತ್ತು ಹಲವಾರು ಆಟಗಳು ಮನಸ್ಸಿಗೆ ಮುದನೀಡಿತ್ತು. ಎಲ್ಲಾ ವಿಭಾಗದಲ್ಲೂ ಜನರು ಬಹಳ ಕುತೂಹಲ ಭರಿತ ಕಣ್ಗಳಿಂದ ನೋಡುತ್ತಿದ್ದದು ವಿಶೇಷ. ಅಲ್ಲದೇ ಸಂಜೆ ಸಮಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಂಗಳೂರಿಗರನ್ನೂ ಆಕರ್ಷಿಸುವಲ್ಲಿ ಯಶಸ್ವೀಯಾಯಿತು. ಹೀಗೆ ೫೦-೬೦ಸಾವಿರ ಜನರನ್ನು ಒಂದೇ ಕಡೆಗೆ ಕೇಂದ್ರೀಕರಿಸಲು ನಮ್ಮೂರಹಬ್ಬ ಸಾಕ್ಷಿಯಾಯಿತು. ಸ್ವಯಂ ಸೇವಕರು ಬಹಳ ಉತ್ಸಾಹದಿಂದಿದ್ದರು. ಎಲ್ಲೆಡೆ ಕುಂದಗನ್ನಡ ಮೊಳಗಿತ್ತು. ನಮ್ಮೂರ ಹಬ್ಬದ ಡೋಲು,ಕೊಳಲಿನ ಸದ್ದು ಇನ್ನೂ ಕಿವಿಯಲ್ಲಿ ಗುಯ್ಗುಡುತ್ತಿದೆ..
#ThankyouVery #NammooraHabba2017
#ನಮ್ಮೂರಹಬ್ಬ೨೦೧೯
#ಕರಾವಳಿಉತ್ಸವ

ಲೇಖನ : ಬದುಕು ಬದಲಿಸಬಹುದು

ಲೇಖನ : ಬದುಕು ಬದಲಿಸಬಹುದು

ಅದೊಂದು ಸಂಜೆ ಏಕಾಂತದಲಿ ಕುಳಿತ ರಾಜೇಶ್ ಏನೋ ಯೋಚನೆ ಮಾಡುತ್ತಾ ಮುಳುಗಿ ಹೋಗಿದ್ದರು. "ಮದುವೆ ಆಗಿ ಮೂವತ್ತು ವರುಷವೇ ಆಗಿಹೋಯ್ತು. ಸವೆದ ದೇಹದ ಜಾಂಟ್ಗಳಿಂದ ಕರಕರ ಸದ್ದು ಬರತೊಡಗಿದೆ. ಮತ್ತೆ ಗ್ರೀಸ್ ಹಚ್ಚಲು ಹೆಂಡತಿಯ ಕರೆಯಬೇಕು. ಮೊನ್ನೆ ಮೊನ್ನೆ ರವಿ ನನ್ನ ವಯಸ್ಸಿನವನೇ ಹೇಳದೇ ಕೇಳದೇ ನಮ್ಮನ್ನೆಲ್ಲಾ ಬಿಟ್ಟು ಹೋದ. ಅವನ ಹೆಂಡತಿ ಮಕ್ಕಳ ಕತೆ ಏನು. ನಾನು ಹೆಂಡತಿಯ ಹತ್ತಿರ ಕುಳಿತು ಅದೆಷ್ಟು ಭಾರಿ ಹೇಳಬಯಸಿದ್ದೆ. ನಾಳೆ ನಾನು ಸತ್ತರೆ....!! ಛೇ.. ಬಿಡ್ತು ಅನ್ನಿ ಈ ಸಂಜೆಗೆ ಇದೆಂತಾ ಮಾತು ಎಂದು ಬಾಯಿ‌ ಮುಚ್ಚಿಸುತ್ತಿದ್ದಳು. ನಿಜವಾಗಿಯೂ ನಾಳೆ‌ ನಾನಿಲ್ಲದ ಅವಳ ಜೀವನ ಹೇಗಿರಬಹುದು.? ನನಗೆ ಅವಳು ಅವಳಿಗೆ ನಾನು. ನಮ್ಮ ಜೀವನ‌ ಮಕ್ಕಳಿಲ್ಲದಿದ್ದರೂ ಹಂಚಿಕೊಂಡು ನಡೆಯುತ್ತಿದೆ. ಆದರೆ ನನ್ನ ಬಾಳ ಸಂಗಾತಿ?! " ಎಂದು ಕಣ್ಣೀರು ಸುರಿಸಿದ.. ಭಾವನಾತ್ಮಕವಾಗಿ ಬೆಸೆದ ಜೀವವನ್ನು ಬಿಟ್ಟು ಹೋಗುವುದು ಅಷ್ಟು ಸುಲಭವಲ್ಲ. ಅದೊಂದು ಕಡೆಯಾದರೆ ಇನ್ನೊಂದು ವ್ಯವಹಾರ.? ವ್ಯಾವಹಾರಿಕವಾಗಿ ಆಕೆ ಒಂದು ದಿನವೂ ತಲೆಹಾಕಲಿಲ್ಲ. ನಾನು ಎಷ್ಟು ದುಡಿಯುವೆ? ಎಷ್ಟು LIC ಪಾಲಿಸಿ ಮಾಡಿರುವೆ. ಎಲ್ಲೆಲ್ಲಾ ಸಾಲ ಕೊಟ್ಟಿದ್ದೇನೆ? ನನ್ನ ಆಸ್ತಿ ಎಷ್ಟು? ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ.. ATM password , ಸಾಲ ಪಡೆದಿದ್ದೇನಾ?! ಇದ್ಯಾವುದೂ ಅವಳಿಗೆ ತಿಳಿದಿಲ್ಲ. ‌ನಾನು ದುಡಿದು ತಂದಿದ್ದರಲ್ಲೇ ಅಚ್ಚುಕಟ್ಟಾಗಿ ಮನೆ ನಿರ್ವಹಿಸಿಕೊಂಡು ಹೋಗುತ್ತಿದ್ದಾಳೆ. ಇಲ್ಲ. ಇವತ್ತಾದರೂ ಹೇಳಲೇ ಬೇಕು. ಎಂದು ಹೆಂಡತಿಯ ಕರೆದ. ಮತ್ತೆ ಅದೇ ಮಾತನ್ನಾಡಲು ಹೋದಾಗ ತಡೆದಳು. ••
ನಿಜ. ಸಾವು ಕಠೋರ. ನಾವು ಬದುಕಿರುವ ವರೆಗೂ ಅದನ್ನು ಕೇಳಿಸಿಕೊಳ್ಳಲೂ ಮನಸ್ಸು ಮಾಡುವುದಿಲ್ಲ. ನಮ್ಮ ಜೀವನ ನೀರ ಮೇಲಿನ ಗುಳ್ಳೆಯಂತೆ. ಇಂದೋ?ನಾಳೆಯೋ ತಿಳಿಯದು. ಬದುಕಿರುವಾಗಲೇ ವಿಲ್ ಬರೆದೋ ಇಲ್ಲಾ ವ್ಯವಹಾರದ ಬಗ್ಗೆ ಒಂದು ಬಿಳಿಹಾಳೆಯಲ್ಲಿ ಬರೆದು ಇಟ್ಟಿರುವುದೇ ಒಳ್ಳೆಯದು. ಎಂದು ಅವಳಿರದ ಸಮಯದಲ್ಲಿ ವಿಲ್ ಬರೆದ..

ನೇಮೀಚಂದ್ರ ಅವರು ಬರೆದ ನಾಳೆ ಎಂಬುದು ನನಗಿಲ್ಲ. ಕಥೆಯ ಸಾರ..
(ಪುಸ್ತಕ: ಬದುಕು ಬದಲಿಸಬಹುದು ಭಾಗ-೩
ಸೋಲೆಂಬುದು ಅಲ್ಪವಿರಾಮ)

ಹಾಡು : ಯಾರು ಈ ಹುಡುಗ

ಹಾಡು: ಯಾರು ಈ ಹುಡುಗ..

ಯಾರು ಯಾರು ಈ ಹುಡುಗ
ಊಟ ನಿದಿರೆ ಕದ್ದಿಹನು..
ಒಂದೇ ಒಂದು ನೋಟದಲಿ
ತನ್ನ ಕಡೆಗೆ ಸೆಳೆದಿಹನು..

ಮನದ ಅಂಗಳದಲ್ಲಿ
ಹೂವ ಹಾಸಿರುವೆ ಗೆಳೆಯಾ
ಬಲಗಾಲಿಟ್ಟು ಒಳಗೆಬಾ..

ಸುತ್ತಮುತ್ತಲಿನ ಜನರು
ಕದ್ದು ನೋಡುವ ಮೊದಲು
ಮುತ್ತೊಂದ ನೀ ನೀಡುಬಾ..

||ಯಾರು||
ಕನಸಿನಲಿ ಬಂದು ನೀನು
ಕಚಗುಳಿಯಿಡುವ ಪರಿಯ
ಕನವರಿಸುತ ನಾ ಹೇಳುವೆ..

ಊರೆಲ್ಲಾ ಸುತ್ತಿದರೂ
ಸಾವಿರ ಜನರ ಸೇರಿದರೂ
ನಿನ್ನ ಕಣ್ಗಳಾ ಗುರುತಿಸುವೆ..
||ಯಾರು||

- ಸಿಂಧುಭಾರ್ಗವ್ 🍁

Tuesday 24 January 2017

ನ್ಯಾನೋ ಕಥೆಗಳು


ಸಣ್ಣ ಪುಟ್ಟ ಕಥೆ : (ನ್ಯಾನೋ ಕಥೆಗಳು)
*
#ದಗೆ_ಬಿಡುತ್ತಾ ಓಡೋಡಿ ಬಂದು ತಿಳಿನೀರಿನಲ್ಲಿ ನೀರುಕುಡಿಯಲು ಬಾಯಿಕೊಟ್ಟ ಮರಿಮೇಕೆಗೆ ,ನೀರಿನಲ್ಲಿ ತನ್ನ ನೆರಳು ನೋಡಿಯೇ ಭಯವಾಯಿತು. ಕಾರಣ ತಾಯಿಮೇಕೆಯನ್ನು ಈಗಷ್ಟೆ ಕಟುಕ ಸಾವಿನ ದಾರಿ ತೋರಿಸಿದ್ದ..

**
#ಪಿಕವೊಂದು ಹಾಡುವುದ ಕಂಡು ಕಾಕಮರಿಗೆ ಮತ್ಸರ.
ತಾನೂ ಕಡಿಮೆಯೇನಿಲ್ಲವೆಂದು ಹಾಡಲು ಶುರುಮಾಡಿ ಜನರಿಂದ  ಬೈಸಿಕೊಂಡಿತು..

***
#ಅವನನ್ನು ಬಹಳ ಚಿಕ್ಕವಯಸ್ಸಿನಿಂದಲೇ
ಧರ್ಮ-ಕರ್ಮವೆಂದು ಕಲೆಸಿ ಕಟ್ಟಿದ ಗೋಡೆಗೆ ಮೊಳೆಹೊಡೆದು ತೂಗುಹಾಕಿದ್ದಾರೆ..

****
#ತನ್ನ_ಮನೆಯ ಮಲ್ಲಿಗೆ ತೋಟಕೆ ಬಾಯಿಹಾಕಿದ ಹಸುವಿನ ಕರುವಿಗೆ ಬಾಸುಂಡೆ ಬರುವ ಹಾಗೆ ಹೊಡೆದ ಗೃಹಿಣಿ, ಅದೇ ಹಸುವಿನ ಹಾಲನ್ನು ತನ್ನ ಬಾಣಂತಿ ಮಗಳಿಗಾಗಿ ಬೇಡಿ ತರುತ್ತಿದ್ದಾಳೆ..

*****
#ಸಂಪನ ಸಂಪತ್ತು ಹೇರಳವಾಗಿದ್ದರೂ/ಇಲ್ಲದಿದ್ದರೂ,
ದೋಸೆಗೆ ಚಟ್ನಿಯಂತೆ ಇಲ್ಲಾ ಭರಣಿಯ‌ ಉಪ್ಪಿನಕಾಯಿಯಂತೆ ನೆಂಚಿ ತಿನ್ನುವ ಮಲ್ಲಿಗೆ ಸುಖವಾಗಿದ್ದಾಳೆ...

#ಸಂಪನ_ಮನದರಸಿ_ಮಲ್ಲಿ...

#ಸಿಂಧುಭಾರ್ಗವ್. 🍁

Thursday 5 January 2017

ಕವಿತೆ : ಅಪ್ಪ ಸೂಕ್ಷ್ಮತೆಯ ಜೀವಾಳ

ಕವನ :ಅಪ್ಪ :.

ಅಪ್ಪನ ಅಡುಗೆ ರುಚಿ
ತಿನ್ನಲು ಪುಣ್ಯಬೇಕು,
ಅವರ ಸವೆದ ಚಪ್ಪಲಿ ಹಾಕಿ
ನಾಲ್ಕ್ ಹೆಜ್ಜೆ ನಡೆಯಬೇಕು..

ಅಮ್ಮನೋ ನೋವು ,ಅಳುವನು
ಒಂದೇ ತಕ್ಕಡಿಯಲಿ ತೂಗುವಳು.
ಅದಕ್ಕೆಂದೇ ಸೆರಗನು
ಕೈಯಲ್ಲೇ ಹಿಡಿದಿಹಳು..

ಅಪ್ಪನ ಮನದ ನೋವ
ನೋಡಿದಿರಾ ನೀವು.?!
ದುಃಖ ಉಮ್ಮಳಿಸಿ ಬಂದರೂ
ಕಣ್ಣಂಚಿನಲೇ ತುಂಬಿಕೊಂಡಿರುವರು..

ಚಳಿಗೆ ನಡುಗುವಾಗ ಬಂದು
ಹೊದಿಕೆ ಹೊದಿಸುವರು..
ಸುಖನಿದಿರೆ ಮಾಡೆಂದು
ತಲೆ ಸವರಿ ಹೋಗುವರು..

ಪರೀಕ್ಷೆಯಲಿ ಫೇಲಾದರೆ
ಹುಸಿಕೋಪಗೊಳ್ಳುವರು..
ಅಳಬೇಡ ಇನ್ನೊಮ್ಮೆ
ನೋಡು ಎನ್ನುವರು..

ಭುಜದ ಮೇಲೆ ಹೊತ್ತು
ಜಾತ್ರೆ ತೋರಿಸುವರು..
ಬೇಕು-ಬೇಡಗಳ ಪೂರೈಸುತಲೇ
ಹೀರೋ ಆಗುವರು.

ಅಮ್ಮನ ಹೊಗಳುವವರೇ ಎಲ್ಲಾ..
ಅಪ್ಪನ ಸವೆತ ಗಮನಿಸಿದವರಿಲ್ಲ..

ಅಪ್ಪನ ಮಗುಮನಸ್ಸ ಅರಿತವರೇ ವಿರಳ..
ಅಪ್ಪ ಸೂಕ್ಷ್ಮತೆಯ ಜೀವಾಳ..

- #ಸಿಂಧುಭಾರ್ಗವ್ 🍁

ಲೇಖನ : ನಮ್ಮೂರು ನಮಗೇ ಚಂದ


Google source pic

GoogleSourcepic



ಕಥೆ: ನಮ್ಮೂರು ನಮಗೇ ಚಂದ

ಚಿಕ್ಕವರಿದ್ದಾಗ ಅಮ್ಮನ ಕೈಲಿ ಬೈಸಿಕೊಂಡದ್ದು , ಅಪ್ಪನ ಜೇಬಿನಿಂದ ಹಣ ಕದ್ದದ್ದು, ಅಪ್ಪನ ಸೈಕಲ್ಲಿನ ಮುಂದಿನ ಚಿಕ್ಕ ಸೀಟಿನಲ್ಲಿ  ಕುಳಿದು ಮೈಲಿ ಗಟ್ಟಲೆ ದೂರ ಸಾಗಿ ಸಿನೇಮಾ‌ ನೋಡಿ ಬರುತ್ತಿದ್ದದ್ದು. ಅಮ್ಮ  ಕೂಡಿಟ್ಟ ಹಣದಿಂದ ದೀಪಾವಳಿಗೆ ಹೊಸಬಟ್ಟೆ ಕೊಡಿಸಿದ್ದು.. ತೋಡಿನಲ್ಲಿ ಮೀನು, ಏಡಿ ಹಿಡಿಯುತ್ತಿದ್ದುದು, ಕೆರೆಯಲ್ಲಿ ತಾವರೆ ಕೀಳಲು ಹೋಗಿ‌  ಕೆಸರಿನಲ್ಲಿ‌ ಕಾಲು ಹೂತು ಹೋದದ್ದು. ಅಜ್ಜಿ ತೀರಿಹೋದ ರಾತ್ರಿ ಅವರನ್ನು ಸುಡುವುದ ಮರೆಮಾಚಿ ನೋಡಿದ್ದು. ನಮ್ಮ ಮನೆಯ ಹಟ್ಟಿಯಲ್ಲಿ ದಾಸಿ ಕರು ಹಾಕಿದ್ದು, ಗಿಣ್ಣು ಹಾಲು ಕುಡಿದದ್ದು. ತೋಟದ ಕೆಲಸಕ್ಕೆ ಬರುವ ರಾಧಾ, ರೇವತಿ ಜೊತೆಗೆ ನಾನು‌ ಕುಳಿತು ಚಾತಿಂಡಿ ತಿನ್ನುತ್ತಾ ಹರಟೆ ಹೊಡೆಯುತ್ತಿದುದು, ಗದ್ದೆ, ನಟ್ಟಿ  ನಡುವುದು, ಕೊಯ್ಲು, ದೀಪಾವಳಿ, ಸಂಕ್ರಾಂತಿ, ಯುಗಾದಿ ,ಹೊಸ್ತು ಹಬ್ಬ ಹೀಗೆ ಹಳ್ಳಿಗರಾದ ನಮಗೆ ಹಬ್ಬಗಳದ್ದೇ ಸಂಭ್ರಮ. ಇವೆಲ್ಲ ಸಾವಿರದ ಸವಿನೆನಪುಗಳು
**
ಹಚ್ಚಹಸುರಿನಿಂದ ಕೂಡಿರುವ ಕರಾವಳಿಯಲ್ಲಿ (ಉಡುಪಿ ಜಿಲ್ಲೆಯ ಬಾರಕೂರು) ನೀರಿಗೇನು ಬರವಿಲ್ಲ, ಎಲ್ಲಿ ಬಾವಿ ತೋಡಿದರೂ ನೀರು ಸಿಗುತ್ತದೆ. ಹಾಗಾಗಿ ಕೃಷಿ, ಹೈನುಗಾರಿಕೆಯೇ ಜೀವನಾಧಾರವಾಗಿದೆ. ತೆಂಗು, ಅಡಿಕೆ, ಬಾಳೆ, ವೀಳ್ಯದೆಲೆ, ಕಾಳುಮೆಣಸು, ಬೇಸಿಗೆಯಲ್ಲಿ ಉದ್ದು, ಹೆಸರುಕಾಳು, ಅವಡೆ ಬೆಳೆ ಬೆಳೆಯುತ್ತಾರೆ..ಅಲ್ಲದೇ ಅದರ ಜೊತೆಗೆ ಚಿಕ್ಕು, ಮಾವು, ಹಲಸು, ಪುನರ್ಪುಳಿ, ಹೆಬ್ಬಲಸು, ಕೆಸುವಿನ ಎಲೆ , ಅಮ್ಟೆಕಾಯಿ, ಹರಿವೆ ಸೊಪ್ಪು , ಬಸಲೆ ಸೊಪ್ಪು ಎಲ್ಲರ ಮನೆಯಲ್ಲಿ ಹಿತ್ತಲ‌ಮಿತ್ರನಂತೆ ಹುಲುಸಾಗಿ ಬೆಳೆದಿರುತ್ತದೆ. ಪರಊರಿನಿಂದ ಬೇಸಿಗೆ ರಜೆಗೆ ಮಕ್ಕಳು, ಮೊಮ್ಮಕ್ಕಳು ಊರಿಗೆ ಬಂದರೆ ಹೊಟ್ಟೆ ತುಂಬಾ ತಿನ್ನಲು ಹಣ್ಣುಗಳು ಯತೇಶ್ಚವಾಗಿ ಸಿಗುತ್ತದೆ. ಕುಂದಗನ್ನಡ ಮಾತನಾಡುವುದೆಂದರೆ ಪಂಚಪ್ರಾಣ. ನಮ್ಮ ಮಾತೃಭಾಷೆಯೇ ಅದಾದ ಕಾರಣ ಎಲ್ಲರೂ ನಗೆಯ ಚಟಾಕಿ, ತಮಾಷೆ ಮಾಡುತ್ತಾ ನಗುಮುಖದಿಂದಲೇ ಹೊಸಬರನ್ನು ಸ್ವಾಗತಿಸುತ್ತೇವೆ. ಎಲ್ಲಿ ಹೋದರೂ ನಮ್ಮ ಭಾಷೆಯಿಂದಲೇ ಜನ ಗುರುತಿಸುತ್ತಾರೆ ಎಂಬುದೇ ವಿಷೇಶ. ಕಡಲ ಮಕ್ಕಳಾದ ಕಾರಣ ಹೆಂಗಳೆಯರು ನೋಡಲು ಸುಂದರವಾಗಿರುತ್ತಾರೆ. ಅವರ ಅಂದಕ್ಕೆ  ಮನಸೋಲುವವರೇ ಜಾಸ್ತಿ. ಅಲ್ಲದೇ ಬಲು ಘಾಟಿ ಕೂಡ. ಹೆಣ್ಮಕ್ಕಳು ಯಾರಿಗೂ ಸ್ವಲ್ಪವೂ ಸಡಿಲ ಬಿಡದೇ ಎಲ್ಲಿ ಬೇಕಾದರೂ ಹೋಗಿ (ಕಛೇರಿಗಳಲ್ಲಿ) ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಬರುವಷ್ಟು ಧೈರ್ಯವಂತರು. ದುಡಿಮೆಯೇ ಜೀವಾಳ. ಯಾರೂ ಸುಖಾಸುಮ್ಮನೆ ಹರಟೆ ಹೊಡೆಯುತ್ತಾ ಕಾಲಹರಣ ಮಾಡುವುದಿಲ್ಲ. ಏನಾದರೊಂದು ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ನಮ್ಮೂರು ಬಾರಕೂರು ಒಂದು ಸರ್ವಧರ್ಮಗಳ ಸಮ್ಮಿಲನವಾಗಿದೆ ಎಂದು ಹೆಮ್ಮೆಯಿಂದ ಹೇಳಬಹುದು. ಜಾತಿ,ಮತ ಧರ್ಮದ ಹಂಗು ತೊರೆದು ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಸ್ನೇಹ ಸೌಹಾರ್ದತೆಯಿಂದ ಜೀವನ ನಡೆಸುತ್ತಾ ಇದ್ದಾರೆ. ಹಾಗೆ ಮುಖ್ಯವಾಗಿ ನಾಟ್ಯಕಲೆ, ಯಕ್ಷಗಾನ , ಸಾಹಿತ್ಯ,  ಭಾಷಣ, ವಿಧ್ಯಾಭ್ಯಾಸದಲ್ಲಿಯೂ, ವಿವಿಧ ಕ್ಷೇತ್ರಗಳಲ್ಲಿಯ ಉದ್ಯೋಗದಲ್ಲಿಯೂ ಮುಂಚೂಣಿಯಲ್ಲಿರುತ್ತಾರೆ. ದೇಶವಿದೇಶಗಳಲ್ಲಿ ತಮ್ಮ ಶಕ್ತಿ ಮತ್ತು ಯುಕ್ತಿ ಪ್ರದರ್ಶನದಿಂದ ಊರಿಗೆ ಹೆಸರು, ಕೀರ್ತಿ ತಂದುಕೊಟ್ಟಿದ್ದಾರೆ.

- ಸಿಂಧುಭಾರ್ಗವ್ 🍁

ಹಾಡು : ಸಂಜೆಗೆಂಪು ಮೂಡಿತು




‌ಚಿತ್ರಕ್ಕೊಂದು ಕವಿತೆ ೦೨ : ಸಂಜೆಗೆಂಪು ಮೂಡಿತು.
ಚಿತ್ರಕೃಪೆ: ವರದರಾಜ್ ಬ್ಯಾಲ್ಯ ಸರ್..
~~~~~~~~~~~~~~~~~
ಸಂಜೆಗೆಂಪು‌ ಮೂಡಿತು,
ಕೆರೆಯು ತಂಪುಗಟ್ಟಿತು..
ಹಾರೋ ಹಕ್ಕಿ ಗೂಡು ಸೇರಿ
ನಿದಿರೆಗೆ ಜಾರಿತು..

ಕೆಲಸ ಮುಗಿಸಿ ರೈತರು
ಮನೆಯ ಕಡೆಗೆ ನಡೆದರು..
ಬಿಸಿಯ ಮುದ್ದೆ ತಿಂದು
ತೇಗಿ ಹರುಷಗೊಂಡರು..
••
ಶಶಿಯು ಮೇಲೆ ಬಂದನು,
ಮನಕೆ ಮುದವ ತಂದನು..
ಜೀರುಂಡೆ ಹಾಡು ಕೇಳಿ
ಉಲ್ಲಾಸಗೊಂಡೆನು..

ಕನಸು ಕಾಣೋ ಸಮಯವು
ಹೊದಿಕೆ ಹೊದೆಯೊ ತವಕವು..
ತಂಗಾಳಿ ಮೈಸೋಕಿ
ಇನಿಯನ ನೆನೆಸಿತು ..
••
ಪಿಸುಗುಡುವ ಇನಿಯನು
ಮಾತು‌ ನಿಲ್ಲಿಸಲೆನ್ನಲು..
ಕೆನ್ನೆ ಕೆಂಪಾಗಿ ನಾನು ಅಪ್ಪಿಕೊಂಡೆ
ತನುವನು..

ಮತ್ತೆ ರವಿಯು ಬೆಳಗಲು
ಹಕ್ಕಿ ಗೂಡು ಬಿಟ್ಟಿತು..
ರಂಗವಲ್ಲಿ ಮನೆಯ ಎದುರು
ಕಿಲಕಿಲನೆ‌ ನಕ್ಕಿತು..
•••
- #ಸಿಂಧುಭಾರ್ಗವ್ 🍁