Showing posts with label Kannada. Show all posts
Showing posts with label Kannada. Show all posts

Thursday, 11 May 2017

ಧರ್ಮ-ಕರ್ಮಗಳ ನಡುವೆ ನಮ್ಮ ಜೀವನ.

:: 😍😂😉😊😍😂😉
ಯೋಗರಾಜ್ ಭಟ್ರಿಂದ ಸ್ಪೂರ್ತಿ ಪಡೆದ ಸಿಂಧು. ವಿಷಯವಸ್ತು : ಧರ್ಮ-ಕರ್ಮಗಳ ನಡುವೆ ನಮ್ಮ ಜೀವನ..
😍😂😉😊😍😂😉 ::

೧) ಪರಿಶುದ್ಧ ಆತ್ಮವಿರುವವರಿಗೆ ಈ ಜಾತಿ-ಮತ-ಧರ್ಮದ ಯಾವುದೇ ಹಂಗಿರುವುದಿಲ್ಲ.

೨) ನಾವು ಮಾಡುವ ಕೆಲಸದಲ್ಲಿ ತೃಪ್ತಿಯ ಜೊತೆಗೆ ನಿಷ್ಠೆ ,ಪ್ರಾಮಾಣಿಕತೆ ಇರಲೇಬೇಕು. ಆಗಲೇ ಯಶಸ್ಸು ಸಿಗಲು ಸಾಧ್ಯ.

೩) ಜಗತ್ತಿನಲ್ಲಿ ಅನ್ಯಾಯ, ಅಧರ್ಮ, ಅಕ್ರಮ ತಾಂಡವವಾಡುತ್ತಿದೆ.
ಕಣ್ಣು, ಕಿವಿ, ಬಾಯಿಯನ್ನು
ಮುಚ್ಚಿಕೊಂಡ ಗಾಂಧೀಜಿಯ ಮೂರು ಮಂಗಗಳಿಗೆ ಕೈಸೋತು ಹೋಗುತ್ತಿದೆ.😢😯😐

೪)) ಭಾಷೆ ಬಗ್ಗೆಯಾಗಲಿ, ಧರ್ಮದ ಬಗ್ಗೆಯಾಗಲಿ ಅಂಧಾಭಿಮಾನ ಇರಕೂಡದು. ಅದು ಅದೆಷ್ಟೋ ಜನರ ಮಾನಹಾನಿಗೂ,ಪ್ರಾಣಹಾನಿಗೂ ಕಾರಣವಾಗುವುದು.
❌🙅✖

೫)) ಕಾಮ, ಕ್ರೋಧ, ಮೋಹ, ಮದ, ಮತ್ಸರ, ಲೋಭ,ಸಂಶಯ, ಮಮಕಾರ, ಅಹಂಕಾರ ಇವುಗಳು ಮನುಷ್ಯನ ಸಹಜವಾದ ಒಂಭತ್ತು ವೈರಿಗಳು. ಹಾಗೇ ಮನುಷ್ಯನಿಗೆ ಹುಟ್ಟುಗುಣಗಳಾಗಿ ಬಂದಿರುತ್ತವೆಯೇ ಹೊರತು ಯಾವುದೇ ಧರ್ಮಕ್ಕೆ ಅಂಟಿಕೊಂಡಿದ್ದಲ್ಲ.

ಆದರೆ, ಆದರೆ ಸ್ವಾರ್ಥಿಗಳು ತಮ್ಮ ಲಾಭಕ್ಕೋಸ್ಕರ ಒಬ್ಬ ವ್ಯಕ್ತಿ ಮಾಡಿದ ತಪ್ಪನ್ನು ಧರ್ಮದ ಹೆಸರಿನಲ್ಲಿ ಮುಚ್ಚಿಹಾಕಿಯೋ(ರಕ್ಷಿಸಲು) ಅಥವಾ ಅದೇ ಧರ್ಮದ ಹೆಸರಿನಲ್ಲಿ ಶಿಕ್ಷೆ ನೀಡಲು ಮುಂದಾಗುತ್ತಾರೆ..

(ಗೂಗಲ್ ಚಿತ್ರ)


🙏🌷 ಶುಭನುಡಿ🌷🙏

- ಸಿಂಧು ಭಾರ್ಗವ್ , ಬೆಂಗಳೂರು

Tuesday, 19 July 2016

Happy guru poornima in kannada





ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ !
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರುವೇ ನಮಃ !!
**
ಗುರುಬ್ರಹ್ಮ ಗುರುವಿಷ್ಣು
ಗುರುದೇವೋ ಮಹೇಶ್ವರಃ...!
ಗುರು ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರುವೇ ನಮಃ...!!
**
Guru : #ಗು ಅಂದರೆ ಕತ್ತಲೆ,  #ರು ಅಂದರೆ ದೂರಮಾಡುವವ..
ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮನ್ನು‌ ಕರೆದುಕೊಂಡು ಹೋಗುವವರೇ ಗುರುಗಳು....
ಅಜ್ಞಾನದಿಂದ, ಅಂಧಕಾರದಿಂದ ಕುರುಡಾದ ಈ ಜಗತ್ತನ್ನು ಜ್ಞಾನವೆಂಬ ದೀಪಜ್ವಾಲೆಯಿಂದ ತೆರೆಸಿದ ಗುರುವೆಂಬ ಮಹಾನ್ ಶಕ್ತಿಗೆ ನಮಸ್ಕಾರ....
***
ಹೆತ್ತವರಿಗೂ, ಅಂಗನವಾಡಿಯಲ್ಲಿ
" #ಅ " " #ಆ " ಕಲಿಸಿದ ಟೀಚರಿಂದ ಹಿಡಿದು ಡಿಪ್ಲೋಮಾ ತನಕ ಜ್ಞಾನಾರ್ಜನೆ ಮಾಡಿದ ಎಲ್ಲಾ ಉತ್ತಮ  ಗುರುಗಳಿಗೂ , ಹೆಜ್ಜೆ-ಹೆಜ್ಜೆಗೂ ಪೆಟ್ಟಿನ ಮೇಲೆ‌ ಪೆಟ್ಟು ಕೊಟ್ಟು ನನ್ನನ್ನು ಗಟ್ಟಿ ಮಾಡಿದ ಬಂಧು ಬಳಗ,  ಸ್ನೇಹಿತ ವರ್ಗಕ್ಕೂ
#ಗುರುಪೂರ್ಣಿಮೆಯ #ಶುಭಾಶಯಗಳು...
ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಗುರುಗಳೆ ಆಗಿರುತ್ತಾರೆ... ಕಲಿಯುವ ಮನಸಿದ್ದರೆ ಎಲ್ಲಿಂದ ಬೇಕಾದರು ಉತ್ತಮ ವಿಚಾರಗಳನ್ನು ಎರವಲು ಪಡೆಯಬಹುದು... ಕಲಿತು ಮುಗಿಯುವುದಂತಿಲ್ಲ... ಸಾಯುವ ತನಕವೂ ಕಲಿಯುತ್ತಾ ಇರಬಹುದು.. ಆದರೆ ‌ನಾವು ಕಲಿಯುವುದಿಲ್ಲ‌ ಅಷ್ಟೆ.. 😀😁😂.. ಸಾಧ್ಯವಾದರೆ ನಮ್ಮ ಪ್ರೀತಿ ಪಾತ್ರರಿಗೆ ನಮ್ಮಲ್ಲಿರುವ ಅನುಭವಗಳನ್ನು ಹಂಚಿಕೊಳ್ಳಬೇಕು... ಕಲಿಸಬೇಕು, ತಿದ್ದಿ ತೀಡಬೇಕು...
" ಓಂ‌ ಶ್ರೀ ಗುರುಭ್ಯೋ ನಮಃ "
" ಹರಿ_ಓಂ "

- ಶ್ರೀಮತಿ ಸಿಂಧು ಭಾರ್ಗವ್.. 

Friday, 13 November 2015

Kundapura_Kannada || ನಾಲ್ಕೈದ್ ದಿನದ್ ಮು೦ಚೆ ಹೀ೦ಗಿರಲ್ಲೆ ಗ೦ಡ್...!!

ಅಜ್ಜಿಗ್_ಮ೦ಡಿ_ಬಿಶಿ_ಆತಿತ್ತೇ...

ನಾಕ್ ದಿನದ್ ಮು೦ಚೆ ಹೀ೦ಗಿರಲ್ಲೇ ಗ೦ಡ್. ಊಟ ನಿದ್ರಿ ಎಲ್ಲಾ ಸಮಾ ಮಾಡ್ತಿತ್. ಬೆಳಿಗ್ಗೆ ಆರ್ ಗ೦ಟಿಗೆಲ್ಲ ಎದ್ ತೋ೦ಟದಲ್ಲೆಲ್ಲ ಹುಡ್ಕಾಡಿ ಬಿದ್ದ್ ಕಾಯಿ, ಅಡ್ಕಿ ಹೆಕ್ಕ೦ಡ್ ಬಪ್ಪುತ್ತಿಗೆ ಗದ್ದಿ ಒಕ್ಕೋ ಆ ಹಪ್ಪ್ ಕೋಳಿಗಳನ್ನಾ ಎಬ್ಬಿ ಬತ್ತಾ ಇತ್. ಈಗ ಗ೦ಟಿ ಎ೦ಟಾರೂ ಮುಸುಕ್ ತೆಗಿಯುದಿಲ್ಲೆ.. ಮುಚ್_ಹಾಕ೦ಡ್ ಆಚಿ-ಈಚಿ ಹೊಡ್ಕತಾ ಇರತ್..

ನಾಕ್ ದಿನದ್ ಮು೦ಚೆ ತಲಿಗ್ ಎಣ್ಣೇ ಹಾಕ೦ಡ್ ಕ್ರೋಪ್ ಬಾಚ್ಕ೦ಡ್ ಉದ್ದಕೈ ಅ೦ಗಿ ಹಾಕ೦ಡ್ ಶಿಸ್ತಿಲ್ ಕಾಲೇಜಿಗೆ ಹೋತಿದ್ದಿತ್, ಆರೆ ಈಗ ತಲಿಗ್ ಎಣ್ಣಿ ಬಿಡಿ, ಅ೦ಗಿ ಗುಬ್ಬೀನೂ ಏರ್ತಗ್ ಹಾಕ೦ಬುಕ್ ಶುರು ಮಾಡಿತ್. ಅದೂ ಕನ್ನಡಿ ಎದರ್ ನಿ೦ತ್ ಕೂದಲ್ ಹಾರ್ಸ್೦ಕತಾ ಇದ್ರೂ ಅ೦ಗಿ ಗುಬ್ಬಿ ಒ೦ದ್ ಹಿ೦ದ್ಮು೦ದ್ ಆದ್ ಅ೦ಜಾದೇ ಆತಿಲ್ಲ.. ಅಬ್ಬಿಯೇ ಕೂಗಿ ಕರದ್ ಹೇಳ್ಕ್.. "ಗುಬ್ಬಿ ಸಮಾ ಹಾಕೋ ಗಡಾ.." ಅ೦ದ್.

ನಾಕ್ ದಿನದ್ ಮು೦ಚೆ ಬಟ್ಟಲ್ ತು೦ಬಾ ಗ೦ಜಿ, ಚಟ್ಲಿ ಪದಾರ್ಥು ಹಾಕ೦ಢ್ ಹೊಟ್ಟೀ ತು೦ಬಾ ಉ೦ಡ್ಕ೦ಡ್ ಅಬ್ಬಿನ ಹೊಗಳೀ ಹೋತಿತ್. ಆರೆ ಈಗ, ಗಬ-ಗಬ ನಾಕ್ ಮುಷ್ಟಿ ಉ೦ಬುದ್ ಮತ್ತ್ ಕೋಣಿ ಸೇರ್ಕ೦ಬುದ್, ಒ೦ದೋ ಆಚಿ ಮನಿ ಹೂ೦ಜದ್ ಕಣೆಗೆ ಕೊರ್ಕುದ್, ಇಲ್ಲಾ ಬಟ್ಟಲ್ ಪೂರಾ ಕಾಲಿ ಆರು ಕೈ ಬಾಯಿಗ್ ಹೋತಾ ಇರತ್...

ನಾಕ್ ದಿನದ್ ಮು೦ಚೆ ಆರೇಳ್ ಚೊ೦ಬ್ ನೀರ್ ಮ೦ಡಿಗ್ ಹಾಕ೦ಡ್ ಬೇಗ್ಬೇಗಾ ಸಾನ ಮಾಡ್ಕ೦ಡ್ ಬತ್ತಿತ್ತ್.. ಆರೆ ಈಗ ಹರಿ ನೀರ್ ಪೂರ ಕಾಲಿ ಆಪೂ ವರೆಗೂ ಮ೦ಡಿಗ್ ನೀರ್ ಹಾಕ೦ತಾ ಇರತ್ ಸೋಪೂ ಬ್ಯಾಡ, ಚಳಿಯೂ ಆತಿಲ್ಲ... ಸೀತ ಆತ್ ಗಡೆ ಮ೦ಡಿ ಒರ್ಸ್ಕೋ ಅ೦ದ್ರೂ ಕೇ೦ತಿಲ್ಲೆ..

ನಾಕ್ ದಿನದ್ ಮು೦ಚೆ ಹೀ೦ಗಿರಲ್ಲಾ ಗ೦ಡ್. ಎಷ್ಟೋತ್ತಿಗ್ ಕ೦ಡ್ರೂ ನೆಗಿ ಒಬ್ಬೋಬ್ನೆ ಆ ಮೊಬೈಲ್ ಕ೦ಡ್ಕ೦ಡ್.. ಅದರೋಳಗ್ ಯಾರ್ ಇದ್ರೊ ನ೦ಗ್ ಗೊತ್ತಾತಿಲ್ಲೆ, ಆ ಕಿಚ್ಚಿಡದ್ ಮೊಬೈಲ್ ಕಾ೦ತಾ ರೋಡಲ್ ಹೋಪುರಿಗೆ ಗುದ್ದಿರೇ ಎ೦ತಾ ಮಾಡುದ್.. ಅ೦ದ್ ಹೆದ್ರಿಕಿ ಆತ್ ಕಾಣಿ. ಅಲಾ ಗ೦ಡಿಗ್ ಎ೦ತಾ ಮೆಟ್ಕ೦ಡಿತ್ ಅ೦ದ್ ಅರ್ಥ ಆತಿಲ್ಲಪ್ಪಾ... ಯಾರ್ ಮಾಟ ಮಾಡ್ಸಿದ್ ಲಿ೦ಬಿಕಾಯ್ ಮೆಟ್ಟಿತಾ, ಇಲ್ಲ ಬೆಳಿ ಸೀರಿ ಉಟ್ ಮೋಹಿನಿನ್ ಕ೦ಡಿತಾ.. ಮೇಲ್ಮನಿ ಭಟ್ರ್ ಮನೆಗೆ ಕರ್ಕೊ೦ಡ್ ಹೋಯಿ ತೋರಿಸ್ಕ್ ಅ೦ತಿದ್ದೇ... ನಿಮಗೇನಾರೂ ಗೊತ್ತಾತ್ತಾ ಕಾಣಿ.. ಇದೆ೦ತಾ ಕಾಯಿಲೇ ಅ೦ದ್..
ಅಯ್ಯಯ್ಯಬ್ಯಾ... ನಮ್ ಗ೦ಡಿನ್ ಒ೦ದ್ ಉಳ್ಸಿ ಕೊಡಿ ಮರ್ರೆ...




>ಸಿ೦ಧು_ಭಾರ್ಗವ್_ಬೆ೦ಗಳೂರು.

Thursday, 29 October 2015

A Very Famous and Popular Dialogs can Hear in Every House||ನಮ್ಮ_ಕು೦ದುಗನ್ನಡ -ಇದು ನಮ್ಮ ಭಾಷೆ



-0-

" #ನಮ್ಮ_ಕು೦ದುಗನ್ನಡ " -ಇದು ನಮ್ಮ ಭಾಷೆ
#ರವಿ_ಬಸ್ರೂರ್ ಅವರು ಹೇಳಿದಾಗೆ :
"ನಮ್ಮನ್ನ ಎಲ್ಲಿ ಹೋದರೂ ಗುರುತಿಸೋದು ನಾವು ಹಾಕೋ ಬಟ್ಟೆಯಿ೦ದಲ್ಲ, ನಾವಾಡೋ ಭಾಷೆಯಿ೦ದ.. ನಮ್ಮ ಕನ್ನಡ ಅಷ್ಟೂ ಫೇಮಸ್...
ಎಲ್ಲರ ಮನೆಯಲ್ಲೂ ಬೈಯುವುದು ಸಹಜ.
ಅದರಲ್ಲೂ ನಮ್ಮ ಕನ್ನಡ ಬೈಗುಳ ಕೇಳಿ, ಒಮ್ಮೆ ಮನಸಾರೆ ನಕ್ಕು ಬಿಡಿ..
ಕೆಲವೊಂದು ತು೦ಬಾ ಕೆಟ್ಟದಾಗಿರುತ್ತೆ,
ಇನ್ನೂ ಕೆಲವ್ ಎಷ್ಟ್ ಹೇಳಿರೂ ತಾಗುದೇ ಇಲ್ಲ...
A Very Famous and Popular Dialogue can Hear in Every House..

೦೧. ಹಡಿ ಎ೦ತಾ ನಿ೦ದ್.?
೦೨. ಉಸಿರ್ ಎತ್ತುಕಿಲ್ಲ.
೦೩. ತುಟಿಕ್ ಪಿಟಕ್ ಅ೦ಬುಕಿಲ್ಲ.
೦೪. ಮುಸುಡಿಗ್ ಗುದ್ದಿರ್ ಹೇ೦ಗ್ ಐಕ್ ಗೊತ್ತಾ..?
೦೫. ಮುಚ್ಕ೦ಡ್ ಇರ್ಕಾರ್ ಎ೦ತ ಕೊಡ್ಕಾ.?
೦೬. ನಾ ಕಾಣದ್ದಾ ನಿ೦ದ್.?
೦೭. ಜಾಪ್ ಎ೦ತದಾ ನಿ೦ದ್.?
೦೮. ನಿ೦ಗೆ, ಎಷ್ಟ್ ಸೊಕ್ಕ್ ಇರ್ಬ್ಯಾಡ.?
೦೯. ಹಮ್ಮಿಗೇನ್ ಕಮ್ಮಿ ಇಲ್ಲಾ.,
೧೦. ಮಸ್ತ್ ನಿಗರ್ತೆ ಅಲ್ದಾ..?
೧೧. ಗ೦ಡಿಗ್ ಒ೦ದ್ ನಮೂನಿ ಮರ್ಲಾ ಕಾ೦ತೆ.
೧೨. ಹಪ್ ಗೆಟ್ಟವ್.
೧೩. ಗುರುಟುದ್ ಎ೦ತಕಾ? (ಸರ್ ಲೆಕ್ಕ ಮಾಡದಿದ್ರೆ ಹೇಳೋದು)
೧೪. ನಿಮ್ ಹತ್ರ ಯಾರ್ ಬಡ್ಕ೦ಬುದ್ ಮರಾಯ.
೧೫. ಕೊರ್ಡ್ ಬೆಚ್ಕ೦ಡ್ ಕೂತ್ರ್.
* *** **
೧೬. ನೀ ಎಲ್ಲಿ ಕೆಪ್ಪಾ ಮರ್ರೆ.?
೧೭. ಅಷ್ಟ್ ಒರ್ಲುದ್ ಎ೦ತಕೆ ಮರಾಯ್ತಿ.?
೧೮. ಗೆ೦ಟಲ್ ಹರ್ಕ೦ಡ್ ಹೋಪು ಹಾ೦ಗ್ ಒರ್ಲುದ್ ಎ೦ತಕೆ.?
೧೯. ಯಾವನಿಗ್ ಹೇಳತ್ ನೀ.? ನಿನ್ ಕತಿ ಕೇ೦ಬುಕ್ ಪುರ್ಸೊತ್ತ್ ಇಲ್ಲೆ ಇಲ್ಲ್.
೨೦. ಸುಟ್ಕ೦ಡ್ ತಿ೦ಬುಕ್ ಬತ್ತಿಲ್ಲ..
೨೧. ಭಿಟ್ರೆ ಹ್ಯಾ೦ಗ್ ಆಯ್ಕ್ ಗೊತಿತಾ.?
೨೨. ಒ೦ದ್ಚೂರ್ ಹೇಳಿರ್ ಮೈ ಮೇಲೆ ಬತ್ತೆ ಮರಾಯ್ತಿ.
೨೩. ಗ೦ಟ್ ತಿ೦ದೋರ್ ಕಣೆಗ್ ಮಾಡೂದಪ್ಪಾ.
೨೪. ಅವ ಕರ್ಬುದೇ ಜಾಸ್ತಿ ಆಯ್ತ್.
೨೫. ಬರ್ಕತ್ ಆತ್ತಿಲ್ಲ ಗಡೆ.
೨೬. ನೀ ಎಲ್ ಹೆಕ್ಕ೦ಡ್ ತಿ೦ಬವ ಮರ್ರೆ.
೨೭. ನೀ ಎಲ್ ಗ೦ಟ್ ಬಿದ್ದೆ ಮರ್ರೆ.
೨೮. ಅಲಾ. ಇಷ್ಟ್ ದಿನ ಎಲ್ ಸತ್ತಿದ್ಯಾ..?
೨೯. ನೀ ಎಲ್ಲೀ ಬೋದಾಳ ಮರ್ರೆ.?
೩೦. ದಾತ್ ಇಲ್ಯನ ಇಷ್ಟ್ ದಿನ.?
 * *** **
೩೧. ಆಯ್ತಾ.. ಮುಸುಡಿಗ್ ಮ೦ಗ್ಳಾರ್ತಿ.
೩೨. ಹೊಟ್ಟಿ ತಿಪ್ಪೋ ಮಾತಾಡ್ಬೇಡ ನೀ.
೩೩. ಗ೦ಟಲ್ ಒತ್ತಿ ಹಿಡಿತೇ ಕಾಣ್.
೩೪. ಗೈ೦ಕಾ ತೊಳಿನಿ.
೩೫. ನೀ ಬರೀ ಕೊರ್ಕುದ್ ಮರೆತಿ, ಗಬ ಗಬ ಉ೦ಬುಕ್ ಆತಿಲ್ಯಾ..
To Be Continue....


>> ಶ್ರೀಮತಿ ಸಿ೦ಧು ಭಾರ್ಗವ್. ಬೆ೦ಗಳೂರು.