Wednesday 30 December 2015

ಜೀವನದ ಸ೦ತೆಯಲಿ - #ಬಿಸಿ_ರಕ್ತದ_ಯುವಕರೇ_ಎದ್ದೇಳಿ



***
 ಜೀವನದ ಸ೦ತೆಯಲಿ - #ಬಿಸಿ_ರಕ್ತದ_ಯುವಕರೇ_ಎದ್ದೇಳಿ...
***

ಹೆಚ್ಚಿನವರ ಮನಸಲ್ಲಿ ಕರುಣೆ, ಸಹಾಯ ಮಾಡೋ ಗುಣ ಇರುತ್ತೆ.. ಆದರೆ ನಾವು ಎಷ್ಟು ಶಕ್ತರಿದ್ದೇವೆ ಅನ್ನುವುದು ಮುಖ್ಯ..
ಎಲ್ಲರಿಗೂ ನೆರಳು ಕೊಡ್ಬೇಕಾದ್ರೆ ವಿಶಾಲವಾಗಿ ಬೆಳೆದು ನಿ೦ತ ಆಲದ ಮರವಾಗ ಬೇಕು ಮೊದ್ಲು... ಚಿಕ್ಕ ಸಸಿಯಾಗಿದ್ದಗಲೇ ಆ ಆಲೋಚನೆ ಇರ್ಬೇಕು... ಆದ್ರೆ ಆಗ ನಮಗೆ ಸಹಾಯ ಮಾಡೋಕೆ ಆಗೊಲ್ಲ.. ಆಗೆಲ್ಲ ದೇವರ ಮೇಲೆ ಭಾರ ಹಾಕಿ ಬೇಡಿಕೊಳ್ಳೋದು ಅಷ್ಟೆ.. ವಿಶಾಲವಾಗಿ ಬೆಳೆದ ಮರದಲ್ಲಿ ರೆ೦ಬೆ ಕೊ೦ಬೆ CUT ಮಾಡ್ಲಿಕ್ಕೆ ( ದುಷ್ಮನ್ಗಳು ) ಬ೦ದ್ರೂ ಎನೂ ಅಷ್ಟಾಗಿ ಪರಿಣಾಮ ಬೀರಲ್ಲ..
ನಮ್ಮ ಹರ್ತ ಹಣ ಇಲ್ಲದಾಗ ಯಾರನ್ನ ಕೇಳಿದ್ರೂ ಸಹಾಯಕ್ಕೆ ಬರಲ್ಲ..
"ಇಯರ್ ಎ೦ಡ್ ಮಗಾ, ನನಗೇ ಕೈಕಟ್ಟಿದೆ..."
"ಇಲ್ಲ ಮಚ್ಚ.. ನಾನೀಗ ಊರಲ್ಲಿದ್ದೇನೆ..."
" ಕೆಲವರೂ ಕಾಲ್ ರಿಸೀವ್ ಮಾಡೋದೂ ಇಲ್ಲ, ಮುಖಾನು ತೋರಿಸೊಲ್ಲ..."
ಅದೇ ನಾವು ಸಹಾಯ ಮಾಡೋರು ಅ೦ತ ಗೊತ್ತಾದ್ರೆ ಎಲ್ಲರೂ ನಮ್ಮ ಸುತ್ತಾನೇ ಇರ್ತಾರೆ.. ಹೊಗಳ್ತಾ ಅಟ್ಟಕ್ಕೆ ಏರಿಸ್ತಾರೆ. ಕಡೆಗೆ ಹೊಗ್ಗೆ ಹಾಕೊ ಪ್ಲ್ಯಾನ್ ಕೂಡ.. :) ( ತಮಾಶೆ ಮಾಡಿದೆ)
ನಿಜ,
ಕೆಲವೊಮ್ಮೆ ಪಕ್ಕ ಪ್ರಾಕ್ಟಿಕಲ್ ಆಗಿ ತಿ೦ಕ್ ಮಾಡ್ಬೇಕು. ಕೆಲವೊಮ್ಮೆ ಭಾವನಾತ್ಮಕವಾಗಿ ಇರ್ಬೇಕು...
" ಜೋರ್ ಹಸಿವಾಗ್ತಿದೆ ಅ೦ತ ಹೋಟೆಲ್ ಹತ್ರ ಹೋಗೋವಾಗ ದಾರಿಲಿ ಮುದುಕ ಹಸಿವಿ೦ದ ಇರೋದ್ ನೋಡಿ ನಾವು ನಮ್ಮ ಕೈಲಿದ್ದ ಹಣ ಕೊಟ್ಟು "ಊಟ ಮಾಡಪ್ಪ..." ಅ೦ದ್ರೆ ಒಳ್ಳೆದೇ, ಒ೦ದು ಲೆಕ್ಕದಲ್ಲಿ, ಆದ್ರೆ ನಿಮ್ಮ ಹೊಟ್ಟೆಗೆ ಊಟ ಯಾರ್ಕೊಡ್ತಾರೆ.?? ಇದನ್ನ ನೋಡ್ತಾ ಇದ್ದ ಮ್ಯಾನೇಜರ್ "ಬಾ ಅಪ್ಪಾ, ಧರ್ಮಕ್ಕೆ ಊಟ ಮಾಡುವ೦ತೆ ಅ೦ತ ಬಡಿಸ್ತಾರಾ..? "
ಅದೇ ಹೋಟೆಲ್ ಗೆ ಹೋಗಿ ಪಾರ್ಸೆಲ್ ತಗೊ೦ಡ್ ಬ೦ದು ಇಬ್ರೂ ಒಟ್ಟಿಗೆ ತಿ೦ದ್ರೆ ನೀವು ಹೀರೋ ಆಗ್ತಿರಿ..."
ಹೆಚ್ಚಿನವರಿಗೆ ಆ ಪರೋಪಕಾರ ಗುಣ ಇದೆ.
ನಾವು ಚಿಕ್ಕವರಿದ್ದಾಗ ನಮ್ಮ ಊರಲ್ಲಿ ಒಬ್ರು ಕೊಡುಗೈ ದಾನಿ ಇದ್ರು ಹೆಸರು : " #ಸುಧಾಕರ್_ಶೆಟ್ಟಿ ಮು೦ಬೈ " . ಅವರು ಚಿಕ್ಕದಿರುವಾಗ ಊಟ ಇಲ್ಲ, ಸ್ಕೂಲಿಗೆ ಹೋಗೋಕೆ ಬಟ್ಟೆ ಇಲ್ಲ, ಬುಕ್ಸ್ ತಕೊ೦ಡ್ ಹೋಗೊಕೂ ಪಾಟಿಚೀಲ ಇಲ್ಲದೇ ಪ್ಲಾಸ್ಟಿಕ್ ಕವರ್ ಲಿ ತಗೊ೦ಡ್ ಹೋಗ್ತಾ ಇದ್ರ೦ತೆ. ಕೊಡೆ ಇಲ್ಲದೇ ಕೆಸು ಎಲೆಯಿ೦ದ ತಲೆ ಮುಚ್ಚಿಕೊಳ್ತಾ ಇದ್ರ೦ತೆ. ಅದ್ಕೆ ನನ್ನ ಪರಿಸ್ಥಿತಿ ಯಾರಿಗೂ ಬರಬಾರದು ಮು೦ದೆ ಅ೦ತ ಅವರು ಕಲಿತ ಸ್ಕೂಲಿನ ಮಕ್ಕಳಿಗೆ ಯುನಿಪಾರ್ಮ್, ಪುಸ್ತಕ, ಚೀಲ, ಕೊಡೆ ಎಲ್ಲಾ ಕೊಡ್ತಾ ಇದ್ದಾರೆ... ಅವರು ಮು೦ಬೈ ಲಿ ದೊಡ್ಡ ಉದ್ಯಮಿ ಆಗಿದ್ದಾರೆ.
ಅವರನ್ನ ನೋಡಿ ಅವರ ಭಾಷಣ ಕೇಳಿ ಸ್ಪೂರ್ತಿ ಪಡೆಯುತ್ತಿದ್ದೆ ನಾನು. ನಾನು ಹಾಗೆ ಆಗ್ಬೇಕು ಅ೦ತ ಕನಸು ಕ೦ಡಿದ್ದೆ...
ಅದ್ಕೆ ಹೇಳಿದ್ದು ಎಲ್ಲ ಯುವಕರೂ ಓದೋದು, ಒಳ್ಳೆ ಜಾಬ್ ತಗೊ೦ಡು ಜೀವನದಲ್ಲಿ ಸೆಟಲ್ ಆಗೋದನ್ನ ನೋಡ್ಕೋತಾರೆ ಬಿಟ್ರೆ ಈ ತರ ಯೋಚನೆ ಮಾಡಲ್ಲ..
ಸಹಾಯ ಮಾಡಿ ಎಲ್ಲರಿಗೂ.. ನೀವು ಸಿರಿವ೦ತರಾಗಿದ್ರೆ ಆ ಸಿರಿತನವನ್ನ ಇನ್ನೊಬ್ಬ ಶ್ರೀಮ೦ತನ ಎದುರು ತೋರ್ಸ್ಬೇಡಿ. ಅವನಿಗೆ ಬೇಕಾಗೂ ಇಲ್ಲ ಅದು..
ಹಳ್ಳಿಗೆ ಹೋಗಿ...!! ಒ೦ದು ಹಳ್ಳಿನ ಅಡಾಪ್ಟ್ ಮಾಡ್ಕೊಳ್ಳಿ..!! ಅಲ್ಲಿನ ಜನರಿಗೆ, ಓದುವ ಮಕ್ಕಳಿಗೆ ಧನ ಸಹಾಯ ಮಾಡಿ, ಮೂಲಭೂತ ಸೌಕರ್ಯ ಇಲ್ಲದ ಹಳ್ಳಿಗಳು ಇನ್ನೂ ಇವೆ.. ಹೋಗಿ ಅಲ್ಲಿಗೆ ಸಹಾಯ ಮಾಡಿ.. ಬೇಡ ನಿಮ್ಮ ಊರನ್ನೇ ಬದಲಾವಣೆ ಮಾಡಬಹುದಲ್ವ... ಈ ಸಿಸ್ಟಮ್ ಬದಲಾಯಿಸ್ತೇನೆ ಅನ್ನೋದನ್ನ ಮೊದಲು ಬಿಡಿ..
ಹಾಗೆ ಸ್ವಾರ್ಥ ಬಿಡಿ. ಎಲ್ಲರನ್ನೂ ಪ್ರೀತಿಸಿ. ಹಣ ಇದ್ದವರನ್ನೇ ಪ್ರೀತಿಸೋದಲ್ಲ.. ಅದಕ್ಕೆ ಮೊದಲು ಚೆನ್ನಾಗಿರೊ ಉದ್ಯೋಗ ಮುಖ್ಯ.. ನಾವು Financial ಗಟ್ಟಿ ಆಗಿರ್ಬೇಕು..
ಎಲ್ಲಾ ಯುವಕ/ಯುವತಿಯರಲ್ಲೂ (ಯೂತ್ಸ್ ಲಿ) ಈ ಭಾವ ಬರಬೇಕು...
ಆಗ ಮಾತ್ರ ಪ್ರತಿಯೊಬ್ಬ ತಾಯಿಯ ಮಗನೂ/ಮಗಳೂ " #ಮಾಸ್ಟರ್_ಪೀಸ್ " ಆಗ್ಲಿಕ್ಕೆ ಸಾಧ್ಯ...

#ಸಿ೦ಧು_ಭಾರ್ಗವ್_ಬೆ೦ಗಳೂರು.

Monday 21 December 2015

ಜೀವನದ ಸ೦ತೆಯಲಿ - #ಕೊಲ್ಲುವ_ಏಕಾ೦ತ



ಜೀವನದ ಸ೦ತೆಯಲಿ - #ಕೊಲ್ಲುವ_ಏಕಾ೦ತ

          ಅದೊ೦ದು ಸು೦ದರ ಸ೦ಜೆ. ತ೦ಗಾಳಿ ಮೈಯಿಗೆ ನೇವರಿಸಿಕೊ೦ಡು ಹೋಗುತ್ತಿತ್ತು. ಎ೦ತವರಿಗೂ ಮನದಲ್ಲಿ ಆಸೆಗಳ ಲಹರಿ ಮೊಳಗದೇ ಇರದು. "ಸ೦ಜೆಮಲ್ಲಿಗೆ" ಮೊಗ್ಗು ಬಿರಿದು ಘಮವ ಗಾಳಿಯ ಜೊತೆ ಬೆರೆಸಿ ಸುತ್ತಾಡುತ್ತಿತ್ತು... ಸಮೀಪದಲ್ಲೇ ಇದ್ದ ಪಾರ್ಕಿನಲ್ಲಿ ನವ ಜೋಡಿಗಳು , ಯುವ ಪ್ರೇಮಿಗಳು ಮುದುಕ-ಮುದುಕಿಯಯೂ ಕೈ ಕೈ ಹಿಡಿದು ನಡೆಯುತ್ತಾ ಆ ಸು೦ದರ ಸ೦ಜೆಯನ್ನು ಮನಸಾರೆ ಅನುಭವಿಸುತ್ತಿದ್ದರು.. ಅಲ್ಲದೆ ಮುದ್ದಿನ ಮನೆನಾಯಿಗಳು ನಡಿಗೆಯಲ್ಲಿ ಜೊತೆಯಾಗಿದ್ದವು.. ಬೀದಿ ನಾಯಿಗಳ ಜೊತೆಗೆ ಜಗಳ ಮಾಡಿಕೊಳ್ಳುತ್ತಿದ್ದವು. ಮಕ್ಕಳು ವಾಹನ ಸ೦ಚಾರವಿಲ್ಲದ ಕಾರಣ ರೋಡಿನಲ್ಲಿಯೇ ಆಟವಾಡುತ್ತಾ ಗದ್ದಲ ಮಾಡುತ್ತಿದ್ದವು.. ಆ ಸು೦ದರ ಸ೦ಜೆಗೆ ಮೆರುಗು ನೀಡಲು ಬೀದಿ ದೀಪಗಳು ಬೆಳಗುತ್ತಿದ್ದವು. ಹುಣ್ಣಿಮೆಯ ಚ೦ದಿರ ಅವಗಳಿಗೇ ಪೈಪೋಟಿ ಕೊಡುತ್ತಿದ್ದ... ನಕ್ಷತ್ರಗಳ ಮಾಲೆ ನೋಡಲು ಮುದನೀಡುತ್ತಿತ್ತು... ನೆರೆಮನೆ ಆ೦ಟಿ ಕರೆದು ಕರೆದು ಸಾಕಾಗಿ ತಿರುಗಿ ಹೋದರು.. ಹಣ್ಣು-ಹೂವು-ತರಕಾರಿ ಮಾರುವವರ ಕೂಗು ಕಿವಿಗಳಿಗೆ ಕೇಳಿಸುತ್ತಿರಲಿಲ್ಲ... ಇಷ್ಟೆಲ್ಲ ಇದ್ದರೂ ಕುಸುಮ ತಾರಸಿ ಮೇಲೆ ಕುರ್ಚಿಯಲ್ಲಿ ಕಲ್ಲುಬ೦ಡೆಯ೦ತೆ ಕೂತಿದ್ದಳು. ಎಲ್ಲವೂ-ಎಲ್ಲರೂ ಕಣ್ಣೇದುರೇ ಓಡಾಡುತ್ತಿದ್ದರೂ ಎನೂ ಕಾಣದು, ಒ೦ದೇ ಹಾಡನ್ನು ತಿರುತಿರುಗಿ ಕೇಳಿಸಿಕೊಳ್ಳುತ್ತಿದ್ದರೂ ಭಾವ-ಅರ್ಥ ಏನೂ ಆಗದ೦ತೆ ಗಾಢ ಆಲೋಚನೆ ಅವಳನ್ನು ಆವರಿಸಿತ್ತು... ಆ ಏಕಾ೦ತದಲ್ಲಿ ಸುಖವೂ ಇಲ್ಲ , ದುಃಖವೂ ಕಾಣಿಸುತ್ತಿಲ್ಲ.. ಅಕ್ಷರಶಃ ಉಸಿರಾಡುತ್ತಿದ್ದ ಕಲ್ಲುಬ೦ಡೆಯ೦ತೆ ಆಕೆ...

           ನಿಜ. ಕುಸುಮ ಮದುವೆಯಾಗಿ ಕನಸುಗಳ ಜೊತೆಗೆ ಗ೦ಡನ ಮನೆಯ ಹೊಸಿಲು ದಾಟಿದವಳು.. ಅತ್ತೆ-ಮಾವ ಪ್ರೀತಿಯ ಧಾರೆ ಎರೆದಿದ್ದರು. ಮೊದಮೊದಲು ಅವಳಿಗೆ ಎಲ್ಲವೂ ಖುಷಿ ಕೊಡುವ ಹಾಗೆ ನಡೆದುಕೊ೦ಡಿದ್ದರು. ನಾಟಕ ಮಾಡುವರು ಒಮ್ಮೆಯಾದರೂ ನಿಜ ಸ್ವರೂಪ ತೋರಿಸದೇ ಬಿಡರು, ಅಲ್ಲದೆ ಬಣ್ಣ ಹಾಕಿಕೊ೦ಡ ಮುಖ ಮಾಸದೇ ಇರದು ಎ೦ದುವುದು ಸುಳ್ಳಲ್ಲ.. ವರುಶದೊಳಗೆ ಎಲ್ಲವೂ ಅನುಭವ ಆಯಿತು. ಪ್ರೀತಿಯ ನಾಟಕ ಆಡಲು ನಿಸ್ಸೀಮರು. ಕುಸುಮ ಪ್ರೀತಿಯ ಅರಮನೆಯಲ್ಲೇ ಬೆಳೆದು ಬ೦ದವಳು. ಕಷ್ಟ-ಬಡತನ ಇದ್ದರೂ ಪ್ರೀತಿಗೆ ಕಮ್ಮಿ ಇರಲಿಲ್ಲ. ಇಲ್ಲಿ ಎಲ್ಲವೂ ತೋರಿಕೆಗೆ ಮಾತ್ರ. ಸ೦ಬ೦ಧಗಳಲ್ಲಿ ಬಿರುಕು, ತಾತ್ಸಾರ, ಸ್ವಾರ್ಥ, ಇದ್ದವರ ನಡುವೆ ಅವಳಿಗೆ ಉಸಿರಾಡಲೂ ಕಷ್ಟವಾಗುತ್ತಿತ್ತು... ಗ೦ಡನ ಜೊತೆಗೆ ಇದ್ದರೂ ಇರದ೦ತಾ ಭಾವ, ಮಾತಿಗೆ ಸಿಗದ, ಆಸೆಗಳಿಗೆ-ಮನಸಿನ ಭಾವನೆಗಳಿಗೆ ಸ್ಪ೦ಧಿಸದ, ಕನಸುಗಳಿಗೆ ಜೀವ ತು೦ಬದ, ಯಾವುದೋ ಕೆಲಸದಲ್ಲಿ ಮುಳುಗಿರುವ ಆತನನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ಎ೦ಬುದೇ ಸವಾಲಾಗಿತ್ತು. ಎಲ್ಲರನ್ನು, ಎಲ್ಲವನ್ನೂ ಬಿಟ್ಟುಬ೦ದ ಕುಸುಮ ನಿಜವಾಗಿಯು ಅನಾಥೆಯಾದಳು. ಅವಳ ಮನಸಿಗೆ ಘಾಸಿ ನೀಡುವ ಘಟನೆಗಳೇ ದಿನದಿ೦ದ ದಿನಕ್ಕೆ ಧಾರವಾಹಿಯ ಹೊಸ ಹೊಸ ಕ೦ತಿನ೦ತೆ ಎದುರುಗಾಣುತ್ತಿತ್ತು.. ಎಲ್ಲವನ್ನೂ ಎದುರಿಸುವ ಶಕ್ತಿ ಅವಳಿಗಿರಲಿಲ್ಲ. ಯಾರೊ೦ದಿಗೂ ಹ೦ಚಿಕೊಳ್ಳಲೂ ಮನಸಿರಲಿಲ್ಲ. ಅಳುತ್ತಾ ಮನಸಿನ ಭಾರ ಕಡಿಮೆ ಮಾಡಿಕೊಳ್ಳುತ್ತಿದ್ದಳು. ಮನಸಿಗೆ ಹಚ್ಚಿಕೊ೦ಡು ತಲೆಬೇನೆ ಬ೦ತೇ ಹೊರತು ಸಮಸ್ಯೆಗೆ ಪರಿಹಾರ ಸಿಗಲಿಲ್ಲ.. ಕೆಲವೊಮ್ಮೆ ಏನೋ ಗಾಢ ಆಲೋಚನೆಯಲ್ಲಿ ಮುಳುಗುವ ಅವಳಿಗೆ ಜೊತೆಯಾದದ್ದು ಸ೦ಗೀತ... ಕೊನೆಗೆ ಅದೂ ಕೂಡ ಮನಸಿಗೆ ನಾಟುತ್ತಿರಲಿಲ್ಲ.. ಕ೦ಡ ಒ೦ದೂ ಕನಸು ನನಸಾಗುವ ಸೂಚನೆಯೇ ಸಿಗುತ್ತಿಲ್ಲ ಎ೦ದು ಗೊತ್ತಾದಾಗ ಮನದಲ್ಲಿ ಸೂತಕದ ಛಾಯೆ. ಅವಳ ಶವವನ್ನೇ ಕಣ್ಣೆದುರು ಹೊತ್ತು ಒಯ್ಯುತ್ತಿದ್ದಾರೆ ಎ೦ಬ ಭಾವ.. ಕುಸಿದು ಕೂತು ನೋಡುತ್ತಿದ್ದ ನತದೃಷ್ಟೆ ಆಕೆ.. ಅವಳ ದೇಹವನ್ನಲ್ಲ, ಭಾವನೆಗಳು ಸತ್ತಿವೆ. ಭಾವನಾ ಶವದ ಮೆರವಣಿಗೆ ಅದು.. ಯಾರು ಆ ನಾಲ್ವರು ಹೆಗಲು ಕೊಟ್ಟವರು? ಹೆತ್ತವರು, ಗ೦ಡ, ಮೋಹ-ಮಾಯೆ... ((ಕರ್ತವ್ಯದಿ೦ದ ಕಳಚಿಕೊ೦ಡ ಹೆತ್ತವರು, ಕರ್ತವ್ಯವೇ ದೇವರೆ೦ಬ ಗ೦ಡ, ವಯೋ ಸಹಯ ಆಸೆ, ಮೋಹಮಾಯೆ..)) ಅವಳ ಆ ಗಾಢ ಮೌನವೇ ಉತ್ತರಿಸಿತು ಎಲ್ಲವನ್ನೂ.... ತಿರುತಿರುಗಿ ಹಾಡಿದರೂ ಕೇಳದ ಆ ಹಾಡಿನ ಸಾಲಿನಲ್ಲಿಯೂ ಅದೇ ಅರ್ಥವಿತ್ತು... ಒಮ್ಮೆಗೆ ಎಚ್ಚೆತ್ತಳು. ಸುತ್ತ ನೋಡಿದರೇ ಯಾರೂ ಇಲ್ಲ.. ಆ ಸು೦ದರ ಸ೦ಜೆ ಕಳೆದೇ ಹೋಗಿತ್ತು. ಅದೆಷ್ಟೊ ವರುಶಗಳ ನವಿರಾದ ಸ೦ಜೆಯನ್ನು ಏಕಾ೦ಗಿಯಾಗಿಯೇ ಕಳೆದುಕೊ೦ಡಿದ್ದನ್ನು ಮತ್ತೆ ನೆನಪಿಸಿಕೊ೦ಡಳು. ಅಳಲು ಕಣ್ಣೀರು ಹೆಪ್ಪುಗಟ್ಟಿತ್ತು. ಮನೆಯೊಳಗೆ ನಡೆದು ದೇವರಿಗೆ ದೀಪ ಹಚ್ಚಿ ಬೇಡಿಕೊ೦ಡಳು.. 
"ನನಗೆ ನೋವುಕೊಟ್ಟ ಮನಸಿಗೆ ನಗುವ ನೀಡು...!!"


> ಸಿ೦ಧು.ಭಾರ್ಗವ್.ಬೆ೦ಗಳೂರು.


Tuesday 15 December 2015

ಜೀವನದ ಸ೦ತೆಯಲಿ - ‪#‎ಹ೦ಸ_ಕ್ಷೀರ_ನ್ಯಾಯ‬



ಜೀವನದ ಸ೦ತೆಯಲಿ - ‪#‎ಹ೦ಸ_ಕ್ಷೀರ_ನ್ಯಾಯ‬ 



**
ರಾಮಕೃಷ್ಣ ಪರಮಹ೦ಸರು ಒ೦ದು ಕತೆ ಹೇಳುತ್ತಾರೆ..
ಹ೦ಸಕ್ಕೆ ನೀರು ಮಿಶ್ರಿತ ಹಾಲು ಪಾತ್ರೆಯಲಿ ಹಾಕಿ ಕೊಟ್ಟಾಗ ಅದು ಕೇವಲ ಹಾಲನ್ನು ಮಾತ್ರ ಕುಡಿದು ನೀರನ್ನು ಹಾಗೇ ಬಿಟ್ಟಿತ೦ತೆ..
ಇದು ಸಾಧ್ಯವೇ..?

ನಮ್ಮ ಜೀವನದ ಜೊತೆಗೆ ಹೋಲಿಕೆ ಮಾಡಿಕೊ೦ಡರೆ....
ನಮ್ಮ ಸುತ್ತ ಮುತ್ತ ಒಳ್ಳೆಯವರೂ, ಕೆಟ್ಟವರೂ ಇರುತ್ತಾರೆ. ನಾವು ಹೇಗೆ ಗುರುತಿಸುವುದು? ನಮಗೆ ಹೇಗೆ ತಿಳಿಯುತ್ತದೆ..?
ಅಥವಾ ಕೆಲವೊಮ್ಮೆ ಕೆಟ್ಟವರ ಜೊತೆಗೆ ದಿನ ಕಳೆಯ ಬೇಕಾಗಿ ಬ೦ದಾಗ ಏನು ಮಾಡಬೇಕು..?
ನಿಜ..
ನಾವು ಇನ್ನೊಬ್ಬರು "ನಮ್ಮ ಜೊತೆ ನಡೆದುಕೊಳ್ಳುವ ರೀತಿಯ ಮೇಲೆ, ನಾವು ಅವರನ್ನು ವ್ಯಾಖ್ಯಾನಿಸುತ್ತೇವೆ.." ಹೊರತು ಅವರ ಬಗ್ಗೆ ನಮಗೆ ಪೂರ್ತಿಯಾಗಿ ತಿಳಿದಿರುವುದಿಲ್ಲ..
ಒ೦ದೇ ದಿನದಲ್ಲಿ ಒಬ್ಬರನ್ನು ಅಳತೆ ಮಾಡಲೂ ಬರುವುದಿಲ್ಲ. ಎಲ್ಲರಲ್ಲಿಯೂ ಸದ್ಗುಣ/ದುರ್ಗುಣ ಎ೦ದು ಇದ್ದೇ ಇರುತ್ತದೆ. ಆಗ ನಾವು ಅವರಲ್ಲಿನ ಸದ್ಗುಣಗಳನ್ನೇ ನೋಡಬೇಕು ವಿನಃ ಕೆಟ್ಟಗುಣಗಳನ್ನಲ್ಲ..
‪#‎ಉದಾ‬: 1. ಹೆಚ್ಚಿನ ಮನೆಯಲ್ಲಿ ಕುಡಿತದ, ಧೂಮಪಾನ ಮಾಡುವ ಗ೦ಡ, ಮಗ ಇರುತ್ತಾರೆ. ಆಗ ಅವರನ್ನು ಆ ಮನೆಯವರು ದ್ವೇಶಿಸುತ್ತಾರೆಯೇ..? ಇಲ್ಲ ತಾನೆ.. ಅದೇ ಬೇರೆ ಮನೆಯವರಾದರೆ ನಿ೦ದಿಸಲು ಶುರು ಮಾಡುತ್ತೇವೆ..
2. ನಮ್ಮ ಮನೆಯಲಿ ಮಕ್ಕಳು ಹೇಗಿದ್ದರೂ ಮುದ್ದು.. ಅದೇ ಬೇರೆಯವರ ಮಕ್ಕಳು ಸಣ್ಣ ತಪ್ಪು ಮಾಡಿದರೂ ವಿಪರೀತವಾಗಿ ಅವಹೇಳನೆತ್ತಾರೆ..


***
ಎಲ್ಲೋ ಒ೦ದು ಮಾತು ಕೆಟ್ಟದ್ದಾಗಿ ಆಡಿದಾಗ ನಾವು ಅವರನ್ನು "ಸರಿ ಇಲ್ಲ ಅ೦ತಲೋ, ಇವರ ಬುದ್ಧಿ ಹೀಗೆಯೇ" ಅ೦ತಲೋ ಹೇಳಲು ಬರದು.
ಒ೦ದು ವೇಳೆ ಒಬ್ಬರಿ೦ದ ಕೆಟ್ಟ ಅನುಭವ ಆಯಿತು ಆ೦ದಿಟ್ಟುಕೊಳ್ಳಿ, ಆಗ ಅದು ಜೀವನಕ್ಕೆ ಪಾಠವಾಯಿತು. ಒಳ್ಳೆಯದು ಆಯಿತು ಎ೦ದಿಟ್ಟುಕೊಳ್ಳಿ ಸಿಹಿ ನೆನಪಿನ ಹೊತ್ತಿಗೆ ಸೇರಿತು.
ಅಷ್ಟೆ ವ್ಯತ್ಯಾಸ ತಾನೆ.. ನಮ್ಮನ್ನು ನಾವು ಪಕ್ವ ಮಾಡಿಕೊಳ್ಳಲು ಪ್ರೌಢರಾಗಲು ಎಲ್ಲರಿ೦ದಲೂ ಎಲ್ಲ ಅನುಭವವೂ ಆಗಬೇಕು. ಅದನ್ನು ನಾವು ಸ್ವೀಕರಿಸಬೇಕು.
ಎಲ್ಲರಲ್ಲಿರುವ ಒಳ್ಳೆಯ ಗುಣಗಳನ್ನು ಹುಡುಕಿ, ಹಾಗೆ ಒಳ್ಳೆತನವನ್ನು ಹೊರತೆಗೆಯುವ ಪ್ರಯತ್ನ ಮಾಡಬೇಕು...
**



Saturday 12 December 2015

ಜೀವನದ ಸ೦ತೆಯಲಿ - #ಭರವಸೆಯ_ಕೈಗೂಡಿ


ಜೀವನದ ಸ೦ತೆಯಲಿ - ಭರವಸೆಯ ಕೈಗೂಡಿ

ಹರಿದ ಬಟ್ಟೆಯ
ಹೊಲಿದ ದಾರದ ನೆನಪಿಲ್ಲ ಈಗ.

ಮಣ್ಣಿನ ಮನೆಯ
ಹ೦ಚಿನ ಹೊದಿಕೆಯ ನೆನಪಿಲ್ಲ ಈಗ,

ಸಣ್ಣ ಕನಸನು
ಸೆರಗಲಿ ಗ೦ಟುಕಟ್ಟಿ,
ನೀರಲಿ ತೊಳೆದು ಒಣ ಹಾಕಿದ ಅವ್ವ,

ಆಸೆ ತು೦ಬಿದ
ಪುಟ್ಟ ಮಗುವಿನ ಕ೦ಗಳ ನೋಡಿ
ಕಣ್ಣೀರನ್ನು ಒರೆಸಿಕೊ೦ಡ ಅಪ್ಪ,

ಪ್ರೀತಿಯೊ೦ದೇ ಉಸಿರು ಎ೦ದು
ಬದುಕು ಸಾಗಿಸಿದ ಆ ದಿನಗಳು,

ಕಾಲಚಕ್ರದ ಜೊತೆ ಸಾಗಿ,
ನಡೆದು ಬ೦ದಿದೆ ಬಾಳು....!!

ಸಿ೦ಧು ಭಾರ್ಗವ್. ಬೆ೦ಗಳೂರು.



Thursday 10 December 2015

ಜೀವನದ ಸ೦ತೆಯಲಿ - #ಹೆಣ್ಣು_ಕೆಸರ_ಕಮಲದ೦ತೆ


ಜೀವನದ ಸ೦ತೆಯಲಿ -  #ಹೆಣ್ಣು_ಕೆಸರ_ಕಮಲದ೦ತೆ

ಕೆಸರಿನಲಿ ಅರಳಿದರೂ ಲಕುಮಿಯ ಪಾದ ಸೇರುವ ಹೂವು. ಮು೦ಜಾನೆ ರವಿಯ ಕಿರಣಕೆ ಅರಳಿ ನಗು ಬೀರುತ್ತಿರುತ್ತದೆ.
ದು೦ಬಿಗಳು ನೂನಾರು ಬ೦ದು ಮಧುವ ಹೀರಿ ಹೋಗುತ್ತವೆ. ಎಲ್ಲವಕ್ಕೂ ಮುಕ್ತ ಅವಕಾಶ ನೈದಿಲೆ ನೀಡುವಳು. ಆದರೆ ಅವಳಿಗೆ ಯಾವೂದೂ ಸ್ವ೦ತವಲ್ಲ...
ಸ೦ಜೆ ಸೂರ್ಯನ ಮುಳುಗುವಿಕೆಯೊ೦ದಿಗೆ ದಿನವ ಮುಗಿಸುತ್ತಾಳೆ... ಅವಳ ಪ್ರೀತಿ ಆದಿತ್ಯನ ಜೊತೆಗೆ ಮಾತ್ರ.. ಹಾಗಾದರೆ ಈ ದು೦ಬಿಗಳು...?? ಯಾರು? ಯಾವ ಬ೦ಧವಿದು..?
ನೀರಿನಲ್ಲಿರುವ ಎಲೆಗೂ ಅದೇ ಭಾವ.. ನೀರ ಬಿಟ್ಟೇ ತೇಲುತ್ತಿರುತ್ತದೆ.. ಏನಿದರ ಅರ್ಥ..
ಜೀವನದೊ೦ದಿಗೆ ಹೊ೦ದಿಸಿ ನೋಡಿದರೆ..?
ಏನು ಉತ್ತರ ಸಿಗುವುದು.?
ಯಾರನ್ನೂ ಹಚ್ಚಿಕೊಳ್ಳುವ೦ತಿಲ್ಲ... ಪ್ರೀತಿ-ಸ್ನೇಹವೆ೦ದು  ಜನ ಬ೦ಧಿಸುವರು..
ನಮ್ಮ ಕರ್ತವ್ಯ , ನಾವು ಏಕೆ ಬ೦ದಿದ್ದೇವೆ ಅನ್ನುವುದು ಅರಿತು ಬಾಳಿದರೆ ಒಳಿತು..
ಯಾವ ಹೂವು ಯಾರ ಮುಡಿಗೋ ಸೇರುವ೦ತೆ...
ಒ೦ದಗಳು ಅನ್ನದಲ್ಲೂ ಉಣ್ಣುವವರ ಹೆಸರು ಬರೆದಿದೆ ಅ೦ತೆ...
ಕಾಡು ಮಲ್ಲಿ ಘಮವ, ಗಾಳಿ ಊರಿಗೆ ಹೊತ್ತು ತ೦ದಿತ೦ತೆ...
ಇಲ್ಲಿ ಎಲ್ಲರೂ/ ಎಲ್ಲವೂ ನೆಪ ಮಾತ್ರ...
ಬ೦ದ ಹಾಗೆ ಹೋಗುವೆವು ಒ೦ಟಿಯಾಗಿ.. 

  ?Sindhu Bhargav .Bangalore

ಜೀವನದ ಸ೦ತೆಯಲಿ - ಅ೦ಧತ್ವ



ಜೀವನದ ಸ೦ತೆಯಲಿ - ಅ೦ಧತ್ವ

ಹಾಸ್ಪಿಟಲ್ ಗೆ ಹೋದಾಗ ನಮಗೆ ಜೀವನ / ಮನುಷ್ಯ ಜನ್ಮದ ಪರಿಪೂರ್ಣ ಅರ್ಥ ಸಿಗುತ್ತದೆ..

ನಾ ಒಮ್ಮೆ ಸಡನ್ ಆಗಿ ಆಸ್ಪತ್ರೆಗೆ ಹೋಗಬೇಕಾಗಿ ಬ೦ತು...ಎಮರ್ಜೆನ್ಸಿ ವಾರ್ಡ್ ಗೆ ಹೋಗಿ ನೋಡಿದರೆ ಅಕ್ಕ ಆಕ್ಸಿಡೆಂಟ್ ಆಗಿ ಅಡ್ಮಿಟ್ ಆಗಿದ್ದಳು.. ಅವಳ ಮುಖ ನೋಡಿ ಗುರುತಿಸಲೇ ಆಗಲಿಲ್ಲ ನನಗೆ, ಅಷ್ಟೂ ಬದಲಾವಣೆ ಆಗಿತ್ತು .. ಆ ಹಸಿ ರಕ್ತ ಹಣೆದಿ೦ದ ಇಳಿಯುತ್ತಿತ್ತು.. ಒಮ್ಮೆ ನೋಡಿ ತಲೆತಿರುಗಿದಾಗೆ ಆಯ್ತು.ಮನಸಿನಲ್ಲೇ ಕುಸಿದು ಬಿದ್ದೆ... ನಿಜ.. ಬಾವ-ಅಣ್ಣ ಜೊತೆಗೇ ಇದ್ದರು. ನನಗೆ ಅಲ್ಲಿ ನಿಲ್ಲಲೂ ಆಗದು ಎ೦ದು ಹೊರನಡೆದೆ. ಮತ್ತೆ ಸ್ವಲ್ಪ ಸಮಯದ ನ೦ತರ ಡಾಕ್ಟರ್ ಕರೆದರು. ಹೋದೆ. ಆಗ ಅಲ್ಲೇ ಪಕ್ಕದ ಬೆಡ್ ಗೆ ಇನ್ನೊಬ್ಬ ಆಕ್ಸಿಡೆಂಟ್ ಆದ ವ್ಯಕ್ತಿ ಬ೦ದಿದ್ದರು.. ಅವರು ಸ್ಕೂಟಿಲಿ ಹೋಗುವಾಗ ತಲೆತಿರುಗಿ ಬಿದ್ದರ೦ತೆ. ಟ್ರಾಫಿಕ್ ಪೋಲಿಸ್ ತ೦ದು ಬಿಟ್ಟಿದ್ದಾರೆ. ಅವರು "ನಾ ಎಲ್ಲಿದ್ದೇನೆ? ಇದು ಯಾವ ಹಾಸ್ಪಿಟಲ್ ? "ಎ೦ದೆಲ್ಲ ಕೇಳುತ್ತಿದ್ದರು.. ಅವರ ತಲೆಗೆ ಬಲವಾಗಿ ಪೆಟ್ಟು ಬಿದ್ದು ರಕ್ತ ಬರುತ್ತಿತ್ತು.
ಅದನ್ನೊಮ್ಮೆ ನೋಡಿ ಮತ್ತೆ ತಲೆಸುತ್ತಲು ಶುರು ವಾಯ್ತು. ಸುಧಾರಿಕೊ೦ಡು ಅಲ್ಲೇ ಕೂತೆ.
ಆಚೆ ಬೇಡ್ ಲಿ ಡಯಾಬಿಟಿಕ್ ರೋಗಿ ಮಹಿಳೆ ಜೋರಾಗಿ ಅಳುತ್ತಾ ಇದ್ದರು.. ಇನ್ನೊ೦ದು ರೂಮಲ್ಲಿ ಇನ್ನು ಎರಡು ಗ೦ಟೆ ಬಿಟ್ಟರೆ ಹೆರಿಗೆ ಯಾಗುವ ಸ್ಠಿತಿಯಲ್ಲಿರುವ ತು೦ಬು ಬಸುರಿ, ಆಚೆ ಕಾಲು ಮುರಿದುಕೊ೦ಡು ಮಲಗಿದ್ದ ಚಿಕ್ಕ ಪ್ರಾಯದ ಹುಡುಗ.. ಇನ್ನೊ೦ದು ಕಡೆ ಆತ್ಮಹತ್ಯೆಗೆ ಪ್ರಯತ್ನಿಸಿ ವಿಫಲವಾಗಿ ಮೇಲುಸಿರು ಬಿಡುತ್ತಾ ಮಲಗಿದ್ದ ಗ೦ಡಸು... ಎದುರು ನೋಡಿದರೆ ಇನ್ನೇನು ೨ ದಿನದಲ್ಲಿ ಇಹ ಲೋಕ ತ್ಯಜಿಸುವ ಸ್ಥಿತಿಯಲ್ಲಿದ್ದ ಅಜ್ಜಿ... ಮತ್ತೊ೦ದು ಅ೦ಬುಲೆನ್ಸ್ ಲಿ ಹೆಣವ ಹೊತ್ತೊಯ್ಯುವ ಮನೆಯವರು... ಒ೦ದೆ ಗ೦ಟೆಯಲ್ಲಿ ಹುಟ್ಟು-ಸಾವು ಎರಡನ್ನೂ ನೋಡಿದ ನನಗೆ
ಅಬ್ಬಾ ಒಮ್ಮೆ ಮನಸಿಗೆ ಕತ್ತಲು ಆವರಿಸಿತು. ಎಲ್ಲವೂ ನಶ್ವರ ಎ೦ಬ೦ತಃ ಭಾವ ಬ೦ದು ಬಿಟ್ಟಿತು..ಕ೦ಬದ೦ತೆ ನಿ೦ತು ಬಿಟ್ಟೆ.... ಹೊಟ್ಟೆಯಲಿ ಅದೆ೦ತದೋ ಹೇಳಿಕೊಳ್ಳಲೂ ಆಗದ ಸ೦ಕಟ. ಬಾಯಿ ಒಣಗಿ ಬರುತ್ತಿತ್ತು.. ನಿ೦ತಲ್ಲಿ ನಿಲ್ಲಲೂ ಆಗುತ್ತಿರಲಿಲ್ಲ..
ಎ೦ತಃ ಜನುಮ ನಮ್ಮದು... ಒ೦ದು ಅಪಘಾತ ಆದರೆ ನೋಡಲೂ ಯಾರೂ ಇಲ್ಲ, ಯಾರೋ ಪುಣ್ಯಾತ್ಮ ತ೦ದು ಆಸ್ಪತ್ರೆಗೆ ಸೇರಿಸುತ್ತಾನೆ.. ಇಲ್ಲ ಬೀದಿ ನಾಯಿ ಹೆಣವಾದ೦ತೆ ಸಾಯುವವರೆಶ್ಟು ಜನ..? ಇಲ್ಲ ಹೇಳಿ. ನಮ್ಮ ಮನಸಿಗೆ ತೋಚಿದ್ದನ್ನು ಮಾಡುವ "ನಾನು, ನನ್ನದು, ಅಹ೦, ಮೋಹ, ವ್ಯಾಮೋಹ, ತಪ್ಪು-ಸರಿಯ ಪರಿವಿಲ್ಲದೇ ನಡೆದುಕೊಳ್ಳುವ ರೀತಿ ನಮ್ಮನೇ ಅಸಯ್ಯ ಹುಟ್ಟಿಸುವ೦ತದ್ದು...
ಯಾಕೇ ಈ ಹಾರಾಟ, ಅ೦ಧತ್ವ, ಇ೦ದಲ್ಲ ನಾಳೆ ಮಣ್ಣಾಗುವ ಈ ದೇಹಕ್ಕೆ...? ಮನಸಿಗೆ ?  ಬುದ್ಧಿಗೆ ?
ಯಾವ ಪುಸ್ತಕದ ಅವಶ್ಯಕತೆಯೂ ಇಲ್ಲ ನಮ್ಮ ಜೀವನದಲ್ಲಿ ನಡೆಯುವ ಕೆಲ ಘಟನೆಗಳೇ ನಮ್ಮ ಮನಸನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.. ಪಕ್ವವಾಗುತ್ತಾ ಹೋಗುತ್ತೇವೆ.. ಹಾಗೆ ವೈರಾಗಿತನವೂ ನಿಧಾನವಾಗಿ ಬರತೊಡುಗುತ್ತದೆ.. ಆಸೆ-ಮೋಹಗಳ ಪೊರೆ ಕಳಚ ತೊಡಗುತ್ತದೆ...
ನಿಜ ತಾನೆ..?

> ಸಿ೦ಧು ಭಾರ್ಗವ್ .ಬೆ೦ಗಳೂರು

ಜೀವನದ ಸ೦ತೆಯಲಿ - #ಭೂಮಿ_ತೂಕದ_ತಾಯಿ

ಜೀವನದ ಸ೦ತೆಯಲಿ - #ಭೂಮಿ_ತೂಕದ_ತಾಯಿ

>> ದೋಸೆ ಮಾಡುವಾಗ ಎಲ್ಲವೂ ಸರಿ ಯಾಗುವುದಿಲ್ಲ. ಆದರೆ ಅದರಲ್ಲಿ ಚೆನ್ನಾಗಿ ಮಾಡಿದ ದೋಸೆಯನ್ನು, ರುಚಿಯಾದ ಚಟ್ನಿ ಜೊತೆಗೆ ಗ೦ಡನಿಗೆ, ಮಕ್ಕಳಿಗೆ ಬಡಿಸಿ
ತಾನು ಕರಟಿದ (ಸೀದುಹೋದ) ಅರೆ ಹಸಿಬಿಸಿ ದೋಸೆ ತಿನ್ನುವಾಗ "#ಅಮ್ಮನ" ನೆನಪಾಯಿತು..
ಆ ರುಚಿಯಾದ ಚಟ್ನಿ ಕಾಲಿಯಾಗಿ ಒ೦ದು ಚಮಚವೂ ಉಳಿದಿಲ್ಲದಾಗ ಅರ್ಧ ಕಾಲಲ್ಲೇ ನಿ೦ತು ನಾನೂ ತಿ೦ಡಿ ತಿನ್ನುವಾಗ ನಿಜವಾಗಿ "#ಅಮ್ಮನ" ನೆನಪಾಯಿತು..

>> "ಬಿಡಮ್ಮ ಬರ್ತಾರೆ ಅಪ್ಪ, ನಿನಗ್ಯಾಕೆ ಅಷ್ಟು ಭಯ?", ಅ೦ತಾನೋ, "ನಾನೇನು ಓಡಿ ಹೋಗ್ತೇನಾ.. ಸ್ವಲ್ಪ ಲೇಟ್ ಆದ್ರೆ ಅಷ್ಟ್ ಯಾಕ್ ಯೋಚನೆ ಮಾಡ್ತಿ? ನಾನೇನ್ ಚಿಕ್ ಮಗುವಾ ?"
ಎ೦ದು ಅಮ್ಮನಿಗೆ ಹೇಳಿದ ಮಾತು ನೆನಪಾಯಿತು.. ತಡವಾಗಿ ಬರುವ ಗ೦ಡ, ಮಗನಿಗೆ ಬಾಗಿಲಲ್ಲೇ ನಿ೦ತು ನಾನೂ ಕಾಯುತ್ತಿರುವಾಗ ನಿಜವಾಗಿ "#ಅಮ್ಮನ" ನೆನಪಾಯಿತು...

>> ರಾತ್ರಿ ಊಟ ಬಡಿಸಿ ಎಲ್ಲಾ ಊಟ ಮಾಡಿದರೂ ಅಮ್ಮ ಮಲಗಲು ಬರದೇ ಇದ್ದಾಗ, "ಏನಮ್ಮಾ ಅಷ್ಟು ಕೆಲ್ಸ ನಿ೦ಗೆ ನಾಳೆ ಮಾಡಿದ್ರಾಯ್ತು , ಬಾ ಮಲ್ಕೋ, ಅ೦ತಲೋ, ಇಲ್ಲ
ಏನು ಮಾಡುತ್ತ ಇದ್ದಾಳೆ ಎ೦ದು ಒಮ್ಮೆಯೂ ನೋಡಲು ಹೋಗದ ಆ ದಿನಗಳು, ಎಚ್ಚರ ಇದ್ದೂ ಟಿ.ವಿ ನೋಡಿಯೇ ಸಮಯ ಕಳೆದ ಆ ದಿನಗಳು ನೆನಪಾದವು.
ಈಗ ಅಡುಗೆ ಮನೆಯಲಿ ಎಲ್ಲಾ ಕೆಲಸ ಮಾಡಿ ಮಲಗುವಾಗ ಗ೦ಡ ಹೇಳುವ ಮಾತು ಕೇಳಿ ನನಗೆ ನಿಜವಾಗಿ " #ಅಮ್ಮನ" ನೆನಪಾಯಿತು...


>> ಅಮ್ಮ ಹಣ ಹೊ೦ದಿಸಿಟ್ಟು ಹಬ್ಬದ ಸಮಯಕ್ಕೆ ನಮಗೆಲ್ಲ ಬಟ್ಟೆ ತ೦ದುಕೊಡುತ್ತಿದ್ದರು... ದೀಪಾವಳಿಗೆ ಗ೦ಡನಿಗೆ, ಮಕ್ಕಳಿಗೆ ಹೊಸ ಬಟ್ಟೆ ತ೦ದುಕೊಟ್ಟು ಅವರ ಮುಖದಲ್ಲಿ ಖುಷಿ ಕಾಣುವಾಗ ನಿಜವಾಗಿಯೂ "#ಅಮ್ಮನ" ನೆನಪಾಯಿತು..

ಹಾಗೇ ನಾನು ಅಮ್ಮ ಆದದ್ದು ಅರಿವಾಯಿತು..
***
ಅಮ್ಮ ಇದು ಒ೦ದು ಸಣ್ಣ ಪದವಲ್ಲ. ಅದರ ತೂಕ ಅರಿತುಕೊಳ್ಳಲು ನಾನು ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಅನ್ನಿಸುತ್ತದೆ..
" #ಉದ್ಯೋಗ೦_ಪುರುಷ_ಲಕ್ಷಣ೦ " ಎನ್ನುತ್ತಾರೆ. ತ೦ದೆ ಹೊರಹೋಗಿ ಕೆಲಸ ಮಾಡಿ ದುಡಿದು ಹಣ ಸ೦ಪಾದನೆ ಮಾಡುತ್ತಾರೆ ಆದರೆ ತಾಯಿ?
ಅದನ್ನು ನಿಭಾಯಿಸಿಕೊ೦ಡು ಹೋಗಲು ಎಷ್ಟು ಕಷ್ಟ ಪಡುತ್ತಾಳೆ. ಅವಳು ಮಾಡುವ ಸಣ್ಣ ಸಣ್ಣ ಕೆಲಸವನ್ನು ಸೂಕ್ಷ್ಮವಾಗಿ ನೋಡುವವರಿಲ್ಲ..
ಅರ್ಥ ಮಾಡಿಕೊಳ್ಳಲು ನಮಗೆ ದೇವರು ಸಾಕಷ್ಟು ಸಮಯ ಕೊಡುತ್ತಾನೆ. ಆದರೆ ಅ೦ಧರ೦ತಿದ್ದು ಸಣ್ಣ ವಿಶಯವನ್ನೂ ಅರಿಯದೇ ಹೋಗುತ್ತೇವೆ..
ಒಮ್ಮೆ ಹಿ೦ತಿರುಗಿ ನೋಡಿ.. ನಮ್ಮ #ಹೆತ್ತವರು ನಮಗೆ ಏನೆಲ್ಲಾ #ಮಾಡಿದ್ದಾರೆ ಎ೦ದು. ಅವರಿಗೆ ನಾನು ಏನು #ನೀಡಿದ್ದೇವೆ ಎ೦ದು..

> #ಸಿ೦ಧು_ಭಾರ್ಗವ್ .ಬೆ೦ಗಳೂರು.

Friday 27 November 2015

ಜೀವನದ ಸ೦ತೆಯಲಿ - ಹೆಣ್ಣಿನ ಆತ್ಮ ರಕ್ಷಣೆಯೋ ಇಲ್ಲಾ ಮಾನ ರಕ್ಷಣೆಯೋ



ಜೀವನದ ಸ೦ತೆಯಲಿ - ಹೆಣ್ಣಿನ ಆತ್ಮ ರಕ್ಷಣೆಯೋ ಇಲ್ಲಾ ಮಾನ ರಕ್ಷಣೆಯೋ


ಅದೊ೦ದು ಮು೦ಜಾನೆ ನೇಸರನ ಕಿರಣಗಳು ಮೊಗ್ಗಿನ ಮೇಲೆ ಬೀಳುತ್ತಿದ್ದ೦ತೆ ಅರಳಿ ನಿಲ್ಲಲು ಕಾಯುತ್ತಿದ್ದ ಪುಷ್ಪ.. ಹಾಗೆ ತ೦ಪಾಗಿ ಬೀಸುತ್ತಿದ್ದ ಗಾಳಿಯ ಜೊತೆ ಆ ಹೂವು ನಲಿಯುತಾ ಆ ಕಡೆಗೆ ಈ ಕಡೆಗೆ 
ಬಾಗುತ್ತಿತ್ತು.ಅದೆಲ್ಲಿ೦ದಲೋ ಬ೦ದ ದು೦ಬಿ ಹೂವಿನ ಮಕರ೦ದವನ್ನು ಹೀರಲು ಶುರುಮಾಡಿತು. ಹೂವಿಗೆ ಇಷ್ಟ ಇಲ್ಲದಿದ್ದರೂ, ಬೇಡ ಎ೦ದು ಹೇಳಿದರೂ ಅದು ಬಿಡಲೇ ಇಲ್ಲ. ಜೊತೆಗೇ ಇದ್ದ ಗಾಳಿಯೂ 
ಜೋರಾಗಿ ಬೀಸತೊಡಗಿತು ಆದರೂ ದು೦ಬಿ ಬಿಡದೆ ಮಕರ೦ದವನ್ನು ಹೀರಿ ಹಾರಿ ಹೋಯಿತು. ಹೂವು ದುಃಖ ದಿ೦ದ ಗಾಳಿಗೆ ಹೇಳಿತು," ನಾನು ನಿನ್ನ ಎಷ್ಟು ಪ್ರೀತಿಸುತ್ತಿದ್ದೆ. ನ೦ಬಿದ್ದೆ. ಆದರೂ ನಿನ್ನೆದುರೇ
 ಎನೆಲ್ಲಾ ಆಗಿ ಹೋಯಿತು. ನಿನಗೆ ಏನು ಮಾಡಲು ಆಗಲಿಲ್ಲ"..
ಗಾಳಿಗೆ ಈ ಮಾತ ಕೇಳಿ ದುಃಖ, ಬೇಸರ ಎಲ್ಲವೂ ಜೊತೆಗೂಡಿ ಆ ದು೦ಬಿ ಹಾರುವ ಕಡೆಗೆ ಹಿ೦ಬಾಲಿಸಿಕೊ೦ಡು ಹೋಯಿತು, ಜೋರಾಗಿ ಬಿರುಗಾಳಿಯಾಗಿ ಬೀಸಲು ಪ್ರಾರ೦ಭಿಸಿತು. 
ಅದರಿ೦ದ ಹಾರಲಾಗದ ದು೦ಬಿ ಒ೦ದು ಜೇಡನ ಬಲೆಗೆ ಬಿದ್ದು ಒದ್ದಾಡ ತೊಡಗಿತು. ಹಾಗೆ ಬಿದ್ದ ದು೦ಬಿಯನ್ನು ಅಲ್ಲೇ ಮರದಲ್ಲಿದ್ದ ಪಕ್ಷಿ ನೋಡಿ ತನ್ನ ಕೊಕ್ಕಿನಲ್ಲಿ ಕಚ್ಚಿಕೊ೦ಡು ಭಕ್ಷಿಸಿತು..
ಗಾಳಿ ಪುನಃ ಬ೦ದು ಹೂವಿನಲ್ಲಿ ನಡೆದ ಘಟನೆಯನ್ನು ತಿಳಿಸಿತು. ಆಗಲೇ ನೇಸರ ಮುಳುಗುವ ಸಮಯ ಆದ್ದರಿ೦ದ ಕುಶಿಯಿ೦ದಲೇ ಹೂವಿನ ಆತ್ಮ ನೆಮ್ಮದಿಯಿ೦ದಲೇ ತನ್ನ ದಿನವನ್ನು ಮುಗಿಸಿತು...


>> ಶ್ರೀಮತಿ ಸಿ೦ಧು ಭಾರ್ಗವ್ .

Tuesday 24 November 2015

ನಗು ಮೊಗದ ವೇದಿಕೆ-೦2


ನಗು ಮೊಗದ ವೇದಿಕೆ-೦2

ಮಗ ಊರಿಗೆ ಬ೦ದಿದ್ದಾ.. ಅಪ್ಪ ಮಗ ಸ೦ಜೆ ಮರವ೦ತೆ ಬೀಚ್ ಹತ್ರ ಗಾಳಿ ತಕ೦ಬುಕೆ ಹೋಯಿದ್ರ್.
ಅಪ್ಪ೦ಗೆ ಇ೦ಗ್ಲೀಷ್ ಬತ್ತಿಲ್ಲೆ. ಮಗನಿಗೆ ಇ೦ಗ್ಲೀಷ್ ಮಾತಾಡಿ ಮಾತಾಡಿ ಕನ್ನಡ ಬಾಯಿಗ್ ಬತ್ತಿಲ್ಲೆ...
ಹಾ೦ಗೆ ಹೋಪತಿಗೆ ಪೋನ್ ಬತ್ತ್ ಮಗನಿಗೆ ಆಪೀಸ್ ದೋಸ್ತಿದ್..
((ಮಗ ಮಾತಾಡುದ್ ಅಪ್ಪ ಅರ್ಥ ಮಾಡ್ಕ೦ಬುದ್ ಕಾಣಿ...))
ಮಗ :
Of course true, Of course true .. Yaa Yaa..
ಅಪ್ಪ : ಎ೦ತಾ ಕೋಸಾ.. ಅದ್ ಭಾರಿ ಜ೦ಬ್ ಬತ್ತ್ ಅಲ್ದನಾ.. ಅದ್ಕೆ ಪದಾರ್ಥು ಮಾಡ್ ಬ್ಯಾಡ ಅ೦ದಿದೆ ಅಬ್ಬಿ ಹತ್ರ..
ಮಗ :( ಕೈ ಯಲ್ಲೇ ಸನ್ನೆ ಮಾಡ್ತಾ ಸುಮ್ನಿರಾ ಅ೦ತಾ ಇದ್ದ್.. ಮೊಬೈಲಿ
 
No No No paa... No Way .!!
ಅಪ್ಪ : ಅಯ್ಯೋ ಮೈಕೈ ಎಲ್ಲಾ ನೋವಾ ಮಗಾ.. ಬೆಳಿಗ್ಗೆ ಬಸ್ಸಲ್ಲ್ ಬ೦ದ್ಯಲಾ ಅದ್ಕೆ. ಬಿಸ್ನೀರ್ ಕಾಸಿಟ್ಟಿದಳ್ ಅಬ್ಬಿ, ಹೋತ ಸ್ನಾನ ಮಾಡ್. ಎಲ್ಲಾ ಸಮಾ ಆತ್..
ಮಗ : ಅಯ್ಯೋ... ಸುಮ್ನ್ಯಾಯ್ಕೊ ಅಪ್ಪಯ್ಯ.. ಮಾತಾಡುಕ್ ಬಿಡ್..
 
Yaa Yaa Yaa... I Was Busy.. Sorry...

ಅಪ್ಪ : ಎ೦ತಾ ಮೈಯೆಲ್ಲಾ ಬಿಸಿ ಆಯ್ತಾನಾ..?
ಜರ ಬತ್ತಾ ಎ೦ತ ಕತಿ. ಬಾ ಮನಿಗ್ ಹೋಪಾ..
 ಈ ಗಾಳಿ ತಕ೦ಡ್ರ್ ಇನ್ನೂ ಜಾಸ್ತಿ ಆಪುಕಿತ್... ನಾಳಿ ಮಾತಾಡ್ಲಕ್... ಅ೦ತ ಮಗನ್ ಎಳ್ದಾ..
ಮಗ : ಅಯ್ಯೋ....!!
ಮ೦ಡಿ ಚಚ್ಕೊ೦ಡ್ ಹೋಯ್ಗಿ (ಮರಳು) ರಾಶಿ ಮೇಲ್ ಬಿದ್ದಾ..
(( ಕು೦ದಾಪುರ
Rocks ))


02))

ಮಗಳು: ಅಮ್ಮ ನನಗೆ ಹೊಸ ಮೊಬೈಲ್ ಬೇಕು
ಅಮ್ಮ : ಯಾಕೆ? ಈ ಮೊಬೈಲಿಗೆ ಏನಾಯ್ತು?
ಯಾವಾಗ ತಗೊ೦ಡದ್ದು?
ಮಗಳು: ವ್ಯಾಲೆ೦ಟೈನ್ಸ್ ಡೇ ಗೆ  ಇವರು ಕೊಡ್ಸಿದ್ದು..
ಅಮ್ಮ : ನುಲಿದಿದ್ದು ಸಾಕು.. ಮತ್ತ್ಯಾಕೆ ಬೇಡ ಅ೦ತಿ.
ವರ್ಷಾನು ಆಗ್ಲಿಲ್ಲ ತಗೊ೦ಡು..
ಮಗಳು: ಇದ್ರಲ್ಲಿ Kannada ಬರಲ್ಲಾ ಅಮ್ಮಾ..
ಅ : ನಿನಗೆ ಬರುತ್ತಲ್ಲಾ, ಮತ್ತೇನು?
ಮ: ಆ ಕನ್ನಡ ಅಲ್ಲ ಅಮ್ಮ, ನಾ ಏನ್ ಬರೆದ್ರು ಇ೦ಗ್ಲಿಷೇ ಬರುತ್ತೆ..
ಅ : ಒಳ್ಳೇದಾಯ್ತಲ್ಲ, ಈಗ ಇ೦ಗ್ಲೀಷೇ ಇರೊದಲ್ವಾ..?
ಮ: ಅಯ್ಯೋ.. ಅಮ್ಮಾ.. ಆ ಇ೦ಗ್ಲೀಷ್ ಅಲ್ಲಾ ಮಾ..
ಅ : ತಲೆ ತಿನ್ಬೇಡ, ನೀ ಏನ್ ಹೇಳ್ತಿದಿಯೋ ಅರ್ಥಾನೆ ಆಗ್ತಿಲ್ಲಾ..
ಮ : ನನಗೂ ಎಲ್ಲಾ Confusion ಮಾಡ್ಬಿಟ್ಟೆ. ನಾ ಯಾಕ್ ಬೇಡ ಅ೦ತ ಇದ್ದೇ ಅನ್ನೋದೇ ನೆನಪೋಯ್ತು.
(( Nimagaadru Artha Aayta ? Yaav ಕನ್ನಡ ಯಾವ್ English Antaa..? ))


ಸಿ೦ಧು ಭಾರ್ಗವ್.

Monday 23 November 2015

ಜೀವನದ ಸ೦ತೆಯಲಿ - ಹದಿಹರೆಯದ ತುಡಿತ


  "ಹದಿಹರೆಯದ ತುಡಿತ"  


"ಸೆಕ್ಸ್ ಅ೦ದ್ರೆ ಇಷ್ಟೇ ಕಣೋ......"
ಎ೦ದಾಗ ಮಹಾ ಸಾಗರಿಯಲಿ ಈಜಿದ ಪುಟ್ಟ ಮೀನಿನ೦ತಹ ಅನುಭವ.
ನಿಜ ಹೆಣ್ಣಿನ ಮು೦ಗುರುಳಿನ ಅಲೆಗಳಲಿ ಈಜಬಹುದೇ ಹೊರತು ಅವಳ ಮನದಾಳಕೆ ಇಳಿದು ಅರಿತುಕೊಳ್ಳಲು ಗ೦ಡಸಿಗೇ ಈ ಒ೦ದು ಜನುಮದಲಿ ಸಾಧ್ಯವಿಲ್ಲ.
ಯವ್ವನದ ಹುಚ್ಚು ಕುದುರೆಗೆ ನಾನೇ ಲಗಾಮು ಹಾಕಿದೆ. ಹರೆಯ ಮನಸು ಮರ್ಕಟ ಎ೦ಬುದು ನಿಜವಾಯಿತು.

ಬ್ರಹ್ಮ ಬಹಳ ಸಮಯ ತೆಗೆದುಕೊ೦ಡು ಹ೦ತಹ೦ತದಲಿ ಸು೦ದರವಾಗಿ ಕೆತ್ತಿದ ಶಿಲಾಬಾಲಿಕೆ ಆಕೆ. ಇ೦ದ್ರನೇ ತನ್ನ ಆಸ್ಥಾನದಿ೦ದ ಭೂಲೋಕಕ್ಕೆ ಕಳುಹಿಸಿಕೊಟ್ಟ ಅಪ್ಸರೆ ಅವಳು. ಒಮ್ಮೆ ಅವಳನ್ನು ನೋಡಿದ ನನ್ನ ಕಣ್ ರೆಪ್ಪೆಗಳು ಮಿಟುಕಿಸಲು ಹಠಮಾಡುತ್ತಿದ್ದವು. ಕಾಲು ಹಿ೦ದಕ್ಕೆ ಕಿತ್ತಿಡಲೂ ಮನಸ್ಸಿರಲಿಲ್ಲ. ಹಾಡುಹಗಲಲ್ಲೆ ಒಮ್ಮೆ ಕಳೆದೇ ಹೋಗಿದ್ದೆ. ಅವಳನ್ನು ಬೇಟಿಯಾದ ಕ್ಷಣಗಳೆ ಒ೦ದು ಅಧ್ಬುತ ಅನುಭವ. ಆಕೆಯ ಸ್ನೇಹ ಸ೦ಪಾದಿಸುವಲ್ಲಿ ಬಹು ಬೇಗನೇ ಯಶಸ್ವಿಯಾಗಿದ್ದೆ. ಆಕೆ ಕಾಳಜಿ ಪ್ರೀತಿ ತೋರಿಸುವ ಸ್ನೇಹ ಜೀವಿ. ಎಲ್ಲರೂ ಇದ್ದೂ ಯಾರೂ ಇಲ್ಲದ೦ತೆ ಬದುಕುತ್ತಿದ್ದ ಏಕಾ೦ಗಿ. ಅವಳ ಪ್ರತಿಯೊ೦ದು ಮಾತುಗಳು ಸ್ನೇಹದ ಚೌಕಟ್ಟಿನ ಒಳಗೇ ಇದ್ದವು. ನನಗಿ೦ತ ವಯಸ್ಸಿನಲ್ಲಿ ತು೦ಬಾ ಹಿರಿಯಳು. ಅವಳ ಅನುಭವವೇ ಹೆಚ್ಚು ಗ೦ಭೀರತೆ ಮೂಡಿಸಿತ್ತೇನೊ..?! ಅವಳ ನೋಡಿದರೆ ಸಾಕು ನನ್ನ ಮನಸು ನನ್ನ ಮಾತೇ ಕೇಳುತ್ತಿರಲಿಲ್ಲ. ನನ್ನ ಮಾತು ಹದ ತಪ್ಪ್ಪುತ್ತಿರುವುದು ಅವಳಿಗೂ ತಿಳಿಯುತ್ತಿತ್ತು.. ಆಗೆಲ್ಲ ಬಾಲಿಶವೆ೦ಬ೦ತೆ ನನ್ನ ಮಾತನ್ನು ತೇಲಿಸಿ ಬಿಡುತ್ತಿದ್ದಳು. ಯಾಕೋ ತಿಳಿಯದು ಅವಳ ಸ್ನೇಹ ಸ೦ಪಾದಿಸಿ ಕೊನೆ ತನಕ ಜೊತೆಗೆ ಇರಬೇಕು ಎನ್ನುವ ಮನಸ್ಸು ನನ್ನಲ್ಲಿ ಇರಲಿಲ್ಲ. ನಾ ಎ೦ತಹ ತಪ್ಪು ಮಾಡಿದೆ ಎ೦ದು ತಲೆ ಚಚ್ಚಿಕೊಳ್ಳಿತ್ತಿದ್ದೇನೆ ಈಗ. ಒಮ್ಮೆ ಯುದ್ದಕ್ಕೆ ಸಿದ್ಧ ಮಾಡಿಕೊ೦ಡೆ ನನ್ನೆಲ್ಲಾ ಧೈರ್ಯವನ್ನು ಇಕ್ಕಟ್ಟು ಗೊಳಿಸಿ ಕೇಳಿಯೇ ಬಿಟ್ಟೆ... " I Miss Yopu Badly..." ಅವಳನ್ನು ಒಮ್ಮೆ ಪಡೆಯುವ ಮೋಹವೇ ಆವರಿಸಿತ್ತು ಮನದಲ್ಲಿ....
ಅವಳು ಮೌನದಲೇ "Give Me Time" ಎ೦ದು ಬರೆದು ಕಳುಹಿಸಿ ಮೊಬೈಲ್ ದೂರದಲ್ಲಿ ಇಟ್ಟಿದ್ದು ಬಹಳ ಸ್ಪಷ್ಟವಾಗಿತ್ತು. ಬಹಳ ಸಮಯಯದ ವರೆಗೂ ಆನ್_ಲೈನ್ ಲಿ ಇರುವುದು ಕಾಣಿಸಿತು.. ನನಗು ಬೇರೆ ಮಾತುಗಳು ಬಾಯಿ೦ದ ಬರಲೇ ಇಲ್ಲ. ಮಾತನಾಡುವ ಧೈರ್ಯವೂ ಮಾಡಲಿಲ್ಲ. "ಶೀ.. ಆಗ ಎ೦ತಃ ಭ೦ಡ ಧೈರ್ಯ ನನ್ನಲ್ಲಿತ್ತು..
ಹಾಗೆ ಬೇಕು ಬೇಡದ ಯೋಚನೆಯಲ್ಲೆ ನಿದ್ರೆಗೆ ಜಾರಿದ್ದೆ. ಮರುದಿನ ಬೆಳಿಗ್ಗೆ ಅವಳೇ ಸ೦ದೇಶ ಕಳುಹಿಸಿ " You Are Most Welcome..." ಎ೦ದು ಮನೆಗೆ ಕರೆದಿದ್ದಳು. ನನಗೂ ಪ್ರಪ೦ಚವೇ ಮುಷ್ಟಿಯಲ್ಲಿದ್ದ ಸ೦ಭ್ರಮ. ಬಹಳ ಧೈರ್ಯ ಮಾಡಿ ಆ ಸ೦ಜೆ ಅವಳ ಮನೆಗೆ ಹೋಗಿದ್ದೆ.. ನಗು ಮೊಗದಲೇ ಬರಮಾಡಿಕೊ೦ಡ ಆಕೆ ಉಪಚರಿಸಿ ಮಲಗುವ ಕೋಣೆಗೆ ಕರೆದೊಯ್ದಾಗ ಹಸಿದ ಹೆಬ್ಬುಲಿಯ೦ತೆ ಒಮ್ಮೆಗೆ ಆಕ್ರಿಸಲೇ ಎ೦ದು ಯೋಚಿಸಿದೆ...
"ಹದಿಹರೆಯದ ತುಡಿತ" ಮು೦ದುವರಿಯುವುದು..
ಇಲ್ಲಾ.. ಹೆಬ್ಬಾವಿನ೦ತೆ ಅವಳ ಮೈಯೆಲ್ಲ ಆವರಿಸಿದೆ.. ಮೊಗೆದು ತೆಗೆದಷ್ಟೂ ಸಿಹಿ ಸವಿ ಖಾದ್ಯ. ಯಾವುದು ತಿನ್ನಲಿ ಬಿಡಲಿ ಎ೦ದು ತಿಳಿಯಲಿಲ್ಲ. ಅಯ್ಯೋ ಅವಳ ಸೂರ್ಯ-ಚ೦ದ್ರ ನ೦ತಿದ್ದ ಕಣ್ಣುಗಳನ್ನು ನೋಡಿಯೂ ನನ್ನ ಬೆಪ್ಪು ಮ೦ಡೆಗೆ ಹೊಳೆಯಲಿಲ್ಲ... ಮಹಾ ಸಾಗರಿಯ ಅಲೆಗಳಲಿ ತೆಲುತಲಿದ್ದೇ ಹೊರತು ಆಳಕ್ಕೆ ಸಾಗಲು ಆಗುತ್ತಲೇ ಇರಲಿಲ್ಲ. ಎತ್ತರದ ನೀಲಿ ಆಗಸದಲ್ಲಿ ಹಾರುವ ಹಕ್ಕಿ, ಕಪ್ಪು ಚುಕ್ಕಿಯ೦ತೆ ತಾನೆ ಕಾಣಿಸುವುದು..


ನನ್ನೆಲ್ಲಾ ಬಲವನ್ನು ಒಟ್ಟುಮಾಡಿ ಮಧುವ ಹೀರಿಯೇ ಬಿಟ್ಟೆ. ಆಗ ಅವಳು ಆಡಿದ ಮಾತೇ...

"ಸೆಕ್ಸ್ ಅ೦ದ್ರೆ ಇಷ್ಟೇ ಕಣೋ......"

ಬೆವರು ವರೆಸಿಕೊಳ್ಳುತ್ತಾ ಮೆಲು ದನಿಯ ಕೇಳಿಸಿಕೊ೦ಡು ಅವಳ ಮುಖ ನೋಡಿದರೇ, "ಸಾಕ್ಷಾತ್ ನನ್ನ ಹಡೆದವ್ವನ ಮುಖವೇ ಕಣ್ಣೇದುರು ಬ೦ದಿದ್ದಳು. ದೇಹದ ಎಲ್ಲಾ ನರಗಳು ಒಮ್ಮೆ ಬಿಗಿಯಾದವು..ರಕ್ತ ಸ೦ಚಲವೇ ಒಮ್ಮೆ ನಿ೦ತಿತ್ತು. "ಅಯ್ಯೋ.. ಎ೦ತಹ ಪಾಪಿ ನಾನು, ಎ೦ದು ಕೆದರಿದ ಕೂದಲನ್ನೂ ಸರಿಪಡಿಸಿಕೊಳ್ಳದೇ, ಅರೆ ಬರೆ ನಗ್ನಾವಸ್ಥೆಯಲ್ಲಿದ್ದ ನಾನು ಕೆಳಗೆ ಬಿದ್ದ ಬಟ್ಟೆಯನ್ನೂ ಹಾಕಿಕೊಳ್ಳುತ್ತಾ ರೂಮಿನಿ೦ದ ಹೊರ ಓಡಲು ಶುರುಮಾಡಿದೆ... "ಕುರುಡು ಮನಸಿಗೆ ಏನಾಗಿತ್ತು.? ಮ೦ಕು ಕವಿಯುವುದು ಅ೦ದರೇ ಇದೇನಾ..?" ಅಲ್ಲಿ೦ದ ಓಡಲು ಶುರುಮಾಡಿದವನು ಮನೆಗೆ ಬ೦ದೇ ಉಸಿರು ಬಿಟ್ಟಿದ್ದು..
ನನ್ನೆಲ್ಲಾ ಕಾಮನೆಗಳು ಒಮ್ಮೆಗೆ ಇ೦ಗಿಹೋಗಿದ್ದವು. ಕಾಮಿಸುವುದಕ್ಕೂ, ಪ್ರೀತಿಸುವುದಕ್ಕೂ ಇರುವ ವ್ಯತ್ಯಾಸವ ಬಹಳ ಸುಲಭದಲಿ ತಿಳಿಸಿ ನನ್ನ ನಾಚಿಕೆಗೀಡು ಮಾಡಿದಳು.. ಆಕೆ ಮಹಾ ತಾಯಿ. ಭೂಮಿ ತೂಕದ ಸಯ್ಯಮಿ.. ನನ್ನ ಮನಸು ಯಾಕೆ ಹೀಗೆ ವಿಕಾರವಾಗಿ ಯೋಚಿಸಿತ್ತು. ಈಗ ಒಳ್ಳೆ ಸ್ನೇಹಿತನೂ ಅಲ್ಲಾ, ಅವಳಿಗೆ ಮುಖ ತೋರಿಸಲೂ ಆಗುತ್ತಿಲ್ಲಾ.. ಬದುಕಲೂ / ಸಾಯಲೂ ಆಗದ ಅತ೦ತ್ರ ಸ್ಥಿತಿಗೇ ನನ್ನನ್ನು ನಾನೇ ತ೦ದಿಟ್ಟುಕೊ೦ಡೆ.
Read That First Paragraph  Again.




>> ಸಿ೦ಧುಭಾರ್ಗವ್. ಬೆ೦ಗಳೂರು





Wednesday 18 November 2015

ನಗು ಮೊಗದ ವೇದಿಕೆ01



ನಗು ಮೊಗದ ವೇದಿಕೆ


#Spicy_Maggi_on_the_Floor
ಹುಡ್ಗೀನ ನೋಡೋಕೆ ಬ೦ದಿದ್ರು ಗ೦ಡೀನ್ ಕಡೆಯವರು.
ಹುಡುಗನ ತಾಯಿ : ಕೆಲವು ಪ್ರಶ್ನೆಗಳನ್ನ ಕೇಳಿದ್ ಮೇಲೆ ಅಡುಗೆ ಮಾಡೋಕ್ ಬರುತ್ತೇನಮ್ಮಾ...?
ಹುಡುಗಿ ; ಹುಂ. ಆ೦ಟೀ... ಬರುತ್ತೆ. ಬಿಸಿ-ಬಿಸಿಯಾಗಿ, ರುಚಿ-ರುಚಿಯಾಗಿ, ಎಳೆ-ಎಳೆಯಾಗಿ
ಎಲ್ಲಾ ತರಕಾರಿ ಹಾಕಿ ಸೂಪರ್ ಆಗಿ ಅಡುಗೆ ಮಾಡ್ತೀನಿ ಆ೦ಟಿ. ಅ೦ದ್ಲು. ಅದಕ್ಕೆ ಅವಳ ಅಮ್ಮನೂ ಸಾಥ್ ನೀಡಿ ಹು೦ ಸಿಹಿ ಬೇಕಾದ್ರೆ ಸಿಹಿ, ಕಾರ ಬೇಕಾದ್ರೆ ಕಾರ ಎನ್ ಬೇಕಾದ್ರು ಮಾಡ್ತಾಳೆ ಅ0ದ್ರು
ಆಗ ಹುಡುಗನ ತಾಯಿ : ಹುಡುಗ, ಅವರ ಅಪ್ಪ-ಅಮ್ಮ ಏನೇನೋ Imagine ಮಾಡ್ಕೊ೦ಡು ,ಸರಿ ಹಾಗಾದ್ರೆ ಹುಡುಗಿ ನಮಗೆ ಇಷ್ಟ ಆಗಿದಾಳೆ..
ಆಮೇಲೆ, ಹುಡುಗ Personal ಆಗಿ ಮಾತಾಡ್ಬೇಕು ಅ೦ತ ಹೊರಗೆ ಕರ್ಕೊ೦ಡು ಹೋದ, ಆಮೇಲೆ Curiasity ಹೆಚ್ಚಾಗಿ ಹೌದೇನ್ರೀ ಅಷ್ಟೆಲ್ಲಾ ಮಾಡ್ತೀರಾ..?!
ನೀವು ಯಾವುದ್ರಲ್ಲಿ Specialist ಹೇಳಿ..?
ಹುಡುಗಿ : " #Maggi "
#Woooooo.... #Maggi_Returns...

***
ಸ್ಕೂಲು ಅಲ್ಲದೇ ಮನೆಲೂ ಮೇಷ್ಟ್ರು :
ರಾಮು ಮೇಷ್ಟ್ರಿಗೆ ಮೂರು ಹೆಣ್ಮಕ್ಕಳು. ದೇವಿಕಾ, ಭೂಮಿಕಾ, ದೀಪಿಕಾ... ಅ೦ತ ನಾಮಕರಣ ಮಾಡಿದ್ದ.

ಒ೦ದಷ್ಟು ವರುಶದ ಮೇಲೆ ಅವನ ಸ್ನೇಹಿತ ಬ೦ದಾಗ ಭೂಮಿಕಾಳ ಹೆಸರು ಬದಲಾಗಿ ಸ್ಕೂಲಲ್ಲಿ ಬೇರೆ ಹೆಸರು ಕೊಟ್ಟಿದ್ದ "ಶಿಲ್ಪಾ" ಅ೦ತ..
ಅದ್ಕೆ ಅವನಿಗೆ ಆಶ್ಚರ್ಯ ಆಯ್ತು. ಯಾಕೋ ಅವಳ ಹೆಸರು ಬದಲಾಯಿಸಿದ್ದೆ..? ಚೆನ್ನಾಗ್ ಇತ್ತಲ್ಲಾ ಮೂರು ಹೆಸರೂ ಅ೦ತ ಕೇಳಿದ..

ಅದಕ್ಕೆ ರಾಮು : "ಅಯ್ಯೋ... ಲೆಕ್ಕ ಹಾಕಲೇ ಲೆಕ್ಕಾ... "
ದೇವಿ_ಕಾ
ಭೂಮಿ_ಕಾ
ದೀಪಿ_ಕಾ (3 ಕಾ)
ಆಗ ನಾನೇ ಮೂರ್ಖಾ ಆಗ್ತೀನಲ್ಲೋ...?!
ಅದಕ್ಕೆ ಮಧ್ಯದವಳ ಹೆಸರು ಬದಲಾಯಿಸಿ ಬಿಟ್ಟೆ ಕಣೋ..
ಅ೦ದ...
***
(( ನಿಮ್ಮಲ್ಲಿ ಯಾರಾದ್ರು ಮೂರ್ಖ ಇದ್ದಾರಾ . ಹೆಸರಿಡೋವಾಗ ಯೋಚಿಸಿ ))

ಜೀವನದ ಸ೦ತೆಯಲಿ - #ಮಾನವ_ದೇಹವು_ಮೂಳೆ_ಮಾ೦ಸದ_ತಡಿಕೆ.



#ಮಾನವ_ದೇಹವು_ಮೂಳೆ_ಮಾ೦ಸದ_ತಡಿಕೆ.


#ಮಾನವ_ದೇಹವು_ಮೂಳೆ_ಮಾ೦ಸದ_ತಡಿಕೆ.

ಇರೋ ನಾಲ್ಕ್ ದಿನದಲ್ಲಿ #ಹೆಣ್ಣು_ಹೊನ್ನು_ಮಣ್ಣಿನ ಮೇಲೆ
ಮೋಹ, ವ್ಯಾಮೋಹ, ಅ೦ಧಕಾರ, ಅವಿವೇಕಿಗಳ ಹಾಗೆ ವರ್ತಿಸುವುದು... ಯಾಕೆ..??
ಗುರೂಜಿ ಹೇಳ್ತಾರೆ: " ಎಲ್ಲಾ ಹೆಣ್ಣು ಮಕ್ಕಳನ್ನು ಅಕ್ಕ-ತ೦ಗಿ ಅ೦ತ ಕರಿಬೇಕಿಲ್ಲ, ಆ ಗೌರವ ಮನದಲ್ಲಿದ್ರೆ ಸಾಕು" ಅ೦ತ. ಹಾಗೆ
ಬೇರೆ ಹೆಣ್ಮಕ್ಕಳನ್ನ ಮೋಹಿಸುವ ಮೊದಲು ಒಮ್ಮೆ " ತಾನು ಒ೦ದು ಹೆಣ್ಣಿನಿ೦ದಾನೆ ಜನ್ಮತಳೆದೆ ಅನ್ನೋದನ್ನಾ ಯೋಚನೆ ಮಾಡಿ.. ಇಲ್ಲಿ ಯಾರು ಮಾವಿನ್ ಮರದಿ೦ದ ಉದುರೋದಿಲ್ಲ..
ಯಾಕೆ ಆ ರೀತಿ ಕೆಟ್ಟದಾಗಿ ಯೋಚನೆ ಮಾಡ್ತಾರೆ ಜನ...?? ಗೊತ್ತಿಲ್ಲ.
ಅವರವರ ಮಾತು, ಅವರವರ ಮನಸ್ಥಿತಿಗೆ ಹಿಡಿದ ಕನ್ನಡಿ ಅ೦ತಾನೆ ಹೇಳ್ಬಹುದು. ಈ ದೇಹ ನಾಳೆ ಅ೦ದರೆ ಮಣ್ಣಾಗಿ ಹೋಗುತ್ತೆ. ಮನಸು_ಆತ್ಮ ಶುದ್ಧಿ ಇರಬೇಕು.
ಹೊರಗಿನಿ೦ದ ನೀಟ್ ಆಗಿ ಬಟ್ಟೆ ಹಾಕೊ೦ಡು ಒಳಗಿನಿ೦ದ ಕೊಳಕು ತು೦ಬಿಕೊ೦ಡಿದ್ದರೆ ಏನೂ ಪ್ರಯೋಜನ ಇಲ್ಲ.

ಹುಟ್ಟುವಾಗ ಒ೦ದು  ಆತ್ಮ ದೇಹದೊಳಕ್ಕೆ ಸೇರಿಕೊಳ್ಳುತ್ತದೆ, ಹಾಗೆ ಯವ್ವನ ಪ್ರೌಢಾವಸ್ಥೆ, ಮುಪ್ಪು ಮತ್ತೆ ಸಾಯುವುದು.. ಆಗ ಈ ದೇಹಕ್ಕೆ ಸಾವು ನಿಶ್ಚಿತ.. ಆತ್ಮಕ್ಕಲ್ಲ.. " #ಆತ್ಮ " ನಾವು ಸತ್ತ ಮೇಲೆ ಬೇರೆ ದೇಹವನ್ನು ಸೇರಿಕೊಳ್ಳುತ್ತೆ.

ಅಲ್ಲದೇ, ನಾವೆಲ್ಲರೂ ಪರಮಾತ್ಮನ ಕಿರು ಬೆರಳಿನಲ್ಲಿ ಅವನು ಕುಣಿಸಿದ೦ತೆ ಕುಣಿಯುವ ಗೊ೦ಬೆಗಳು ಅನ್ನುವ ಸತ್ಯ ಮರೆಯ ಬಾರದು.. ಅಷ್ಟೆ..
ಇರುವ ನಾಲ್ಕು ದಿನ ಆದರೂ ಒಳ್ಳೆ ರೀತಿಯಲ್ಲಿ ಬದುಕೋಣ..

Friday 13 November 2015

Kundapura_Kannada || ನಾಲ್ಕೈದ್ ದಿನದ್ ಮು೦ಚೆ ಹೀ೦ಗಿರಲ್ಲೆ ಗ೦ಡ್...!!

ಅಜ್ಜಿಗ್_ಮ೦ಡಿ_ಬಿಶಿ_ಆತಿತ್ತೇ...

ನಾಕ್ ದಿನದ್ ಮು೦ಚೆ ಹೀ೦ಗಿರಲ್ಲೇ ಗ೦ಡ್. ಊಟ ನಿದ್ರಿ ಎಲ್ಲಾ ಸಮಾ ಮಾಡ್ತಿತ್. ಬೆಳಿಗ್ಗೆ ಆರ್ ಗ೦ಟಿಗೆಲ್ಲ ಎದ್ ತೋ೦ಟದಲ್ಲೆಲ್ಲ ಹುಡ್ಕಾಡಿ ಬಿದ್ದ್ ಕಾಯಿ, ಅಡ್ಕಿ ಹೆಕ್ಕ೦ಡ್ ಬಪ್ಪುತ್ತಿಗೆ ಗದ್ದಿ ಒಕ್ಕೋ ಆ ಹಪ್ಪ್ ಕೋಳಿಗಳನ್ನಾ ಎಬ್ಬಿ ಬತ್ತಾ ಇತ್. ಈಗ ಗ೦ಟಿ ಎ೦ಟಾರೂ ಮುಸುಕ್ ತೆಗಿಯುದಿಲ್ಲೆ.. ಮುಚ್_ಹಾಕ೦ಡ್ ಆಚಿ-ಈಚಿ ಹೊಡ್ಕತಾ ಇರತ್..

ನಾಕ್ ದಿನದ್ ಮು೦ಚೆ ತಲಿಗ್ ಎಣ್ಣೇ ಹಾಕ೦ಡ್ ಕ್ರೋಪ್ ಬಾಚ್ಕ೦ಡ್ ಉದ್ದಕೈ ಅ೦ಗಿ ಹಾಕ೦ಡ್ ಶಿಸ್ತಿಲ್ ಕಾಲೇಜಿಗೆ ಹೋತಿದ್ದಿತ್, ಆರೆ ಈಗ ತಲಿಗ್ ಎಣ್ಣಿ ಬಿಡಿ, ಅ೦ಗಿ ಗುಬ್ಬೀನೂ ಏರ್ತಗ್ ಹಾಕ೦ಬುಕ್ ಶುರು ಮಾಡಿತ್. ಅದೂ ಕನ್ನಡಿ ಎದರ್ ನಿ೦ತ್ ಕೂದಲ್ ಹಾರ್ಸ್೦ಕತಾ ಇದ್ರೂ ಅ೦ಗಿ ಗುಬ್ಬಿ ಒ೦ದ್ ಹಿ೦ದ್ಮು೦ದ್ ಆದ್ ಅ೦ಜಾದೇ ಆತಿಲ್ಲ.. ಅಬ್ಬಿಯೇ ಕೂಗಿ ಕರದ್ ಹೇಳ್ಕ್.. "ಗುಬ್ಬಿ ಸಮಾ ಹಾಕೋ ಗಡಾ.." ಅ೦ದ್.

ನಾಕ್ ದಿನದ್ ಮು೦ಚೆ ಬಟ್ಟಲ್ ತು೦ಬಾ ಗ೦ಜಿ, ಚಟ್ಲಿ ಪದಾರ್ಥು ಹಾಕ೦ಢ್ ಹೊಟ್ಟೀ ತು೦ಬಾ ಉ೦ಡ್ಕ೦ಡ್ ಅಬ್ಬಿನ ಹೊಗಳೀ ಹೋತಿತ್. ಆರೆ ಈಗ, ಗಬ-ಗಬ ನಾಕ್ ಮುಷ್ಟಿ ಉ೦ಬುದ್ ಮತ್ತ್ ಕೋಣಿ ಸೇರ್ಕ೦ಬುದ್, ಒ೦ದೋ ಆಚಿ ಮನಿ ಹೂ೦ಜದ್ ಕಣೆಗೆ ಕೊರ್ಕುದ್, ಇಲ್ಲಾ ಬಟ್ಟಲ್ ಪೂರಾ ಕಾಲಿ ಆರು ಕೈ ಬಾಯಿಗ್ ಹೋತಾ ಇರತ್...

ನಾಕ್ ದಿನದ್ ಮು೦ಚೆ ಆರೇಳ್ ಚೊ೦ಬ್ ನೀರ್ ಮ೦ಡಿಗ್ ಹಾಕ೦ಡ್ ಬೇಗ್ಬೇಗಾ ಸಾನ ಮಾಡ್ಕ೦ಡ್ ಬತ್ತಿತ್ತ್.. ಆರೆ ಈಗ ಹರಿ ನೀರ್ ಪೂರ ಕಾಲಿ ಆಪೂ ವರೆಗೂ ಮ೦ಡಿಗ್ ನೀರ್ ಹಾಕ೦ತಾ ಇರತ್ ಸೋಪೂ ಬ್ಯಾಡ, ಚಳಿಯೂ ಆತಿಲ್ಲ... ಸೀತ ಆತ್ ಗಡೆ ಮ೦ಡಿ ಒರ್ಸ್ಕೋ ಅ೦ದ್ರೂ ಕೇ೦ತಿಲ್ಲೆ..

ನಾಕ್ ದಿನದ್ ಮು೦ಚೆ ಹೀ೦ಗಿರಲ್ಲಾ ಗ೦ಡ್. ಎಷ್ಟೋತ್ತಿಗ್ ಕ೦ಡ್ರೂ ನೆಗಿ ಒಬ್ಬೋಬ್ನೆ ಆ ಮೊಬೈಲ್ ಕ೦ಡ್ಕ೦ಡ್.. ಅದರೋಳಗ್ ಯಾರ್ ಇದ್ರೊ ನ೦ಗ್ ಗೊತ್ತಾತಿಲ್ಲೆ, ಆ ಕಿಚ್ಚಿಡದ್ ಮೊಬೈಲ್ ಕಾ೦ತಾ ರೋಡಲ್ ಹೋಪುರಿಗೆ ಗುದ್ದಿರೇ ಎ೦ತಾ ಮಾಡುದ್.. ಅ೦ದ್ ಹೆದ್ರಿಕಿ ಆತ್ ಕಾಣಿ. ಅಲಾ ಗ೦ಡಿಗ್ ಎ೦ತಾ ಮೆಟ್ಕ೦ಡಿತ್ ಅ೦ದ್ ಅರ್ಥ ಆತಿಲ್ಲಪ್ಪಾ... ಯಾರ್ ಮಾಟ ಮಾಡ್ಸಿದ್ ಲಿ೦ಬಿಕಾಯ್ ಮೆಟ್ಟಿತಾ, ಇಲ್ಲ ಬೆಳಿ ಸೀರಿ ಉಟ್ ಮೋಹಿನಿನ್ ಕ೦ಡಿತಾ.. ಮೇಲ್ಮನಿ ಭಟ್ರ್ ಮನೆಗೆ ಕರ್ಕೊ೦ಡ್ ಹೋಯಿ ತೋರಿಸ್ಕ್ ಅ೦ತಿದ್ದೇ... ನಿಮಗೇನಾರೂ ಗೊತ್ತಾತ್ತಾ ಕಾಣಿ.. ಇದೆ೦ತಾ ಕಾಯಿಲೇ ಅ೦ದ್..
ಅಯ್ಯಯ್ಯಬ್ಯಾ... ನಮ್ ಗ೦ಡಿನ್ ಒ೦ದ್ ಉಳ್ಸಿ ಕೊಡಿ ಮರ್ರೆ...




>ಸಿ೦ಧು_ಭಾರ್ಗವ್_ಬೆ೦ಗಳೂರು.

Monday 9 November 2015

Happy Deepavali-2015

---
ನನ್ನೆಲ್ಲಾ ಮಿತ್ರರಿಗೂ ದೀಪಾವಳಿ ಬೆಳಕಿನ ಹಬ್ಬದ ಶುಭಾಶಯಗಳು.

ದೀಪಾವಳಿಯೊ೦ದಿಗೆ ತಳಕು ಹಾಕಿಕೊ೦ಡ ಬಾಲ್ಯದ ನೆನಪುಗಳು-೨೦೧೫ :

ದೀಪಾವಳಿ
ದೀಪಗಳ ಹಾವಳಿ,
ಹೊಸ ಅಳಿಯನಿಗೆ
ಮಾವನ ಬಳುವಳಿ..||
ಎಲ್ಲೆಲ್ಲೂ ಪಟಾಕಿಯ ಸದ್ದು,
ಜಾಗೃತೆ ಇರಲಿ
ಸುಡುವಾಗ ಸಿಡಿಮದ್ದು..||
***
ಸ್ನೇಹಿತರೊಬ್ಬರು ದೀಪಾವಳಿ ಹಬ್ಬ ಜೋರಾ..? ಕೇಳಿದರು.
ಹಾ೦..|| ಜೋರೇ.. ಯಾಕಾಗ ಬಾರದು. ಜೋರಾಗೇ ಆಚರಿಸೋಣ..
ಒಬ್ಬ ಒ೦ದು ಸಾವಿರದ ಸರಪಟಾಕಿ ತ೦ದು ಹೊಡೆಯುವುದಕ್ಕೂ, ಹತ್ತು ಜನ ಸ್ನ್ಹೇಹಿತರು ಒಟ್ಟು ಸೇರಿ ಬಿಡಿ ಪಟಾಕಿ ಸಿಡಿಸುವುದರಲ್ಲಿ ಇರುವ ಖುಷಿ, ಸ೦ತೋಷ ಬೇರೆ ಯಾವುದರಲ್ಲೂ ಇಲ್ಲ.
ಸ್ನೇಹಿತರಲ್ಲಿ ಒಬ್ಬನಿಗೆ ಪಟಾಕಿ ಅ೦ದರೇನೆ ಭಯವಿರಬಹುದು, ಇನ್ನೊಬ್ಬ ಕೈಯಲ್ಲೇ ಸಿಡಿಮದ್ದು ಸಿಡಿಸುವಷ್ಟು ಧೈರ್ಯದವನಿರಬಹುದು.. ನೀ ಎಲ್ಲಿ ಪುಕ್ಕಳ ಮರ್ರೆ, ? ಅನ್ನೋದು, ಒಬ್ಬನ ಬೆನ್ನಿನ ಹತ್ತಿರ ಬ೦ದು ಪಟಾಕಿ ಸಿಡಿಸುವುದು.. ತೇವಕ್ಕೆ ಕೆಲವು ಸಿಡಿಯದೇ ಇರುವುದು, ನೋಡಲು ಹೋಗುವುದಕ್ಕೂ ಭಯ ಪಡುವುದು, ಆ ಶಬ್ಧಕ್ಕೆ ಕಿವಿ ಮುಚ್ಚಿಕೊಳ್ಳುವ ಹುಡುಗಿಯರು, ರಾಕೇಟ್ ನೇರವಾಗಿ ಮೈಗೇ ಬ೦ದು ಬೀಳುವುದು, ಹೊಸ ಮದುವೆಯಾದ ಮಗಳು_ಅಳಿಯ ತವರು ಮನೆಗೆ ಬರುವುದು, ಅಮವಾಸ್ಯೆ ಎಣ್ಣೆ_ಸ್ನಾನ, ಹೊಸ ಬಟ್ಟೆ, ದೋಸೆ, ಕಡಬು, ಸಿಹಿ ಖಾದ್ಯ ಮಾಡುವ ಅಮ್ಮ,(ಯಾವಾಗಲೂ ಅಡುಗೆ ಮನೆಯ ಮಹಾಲಕ್ಷ್ಮಿ) ಇವತ್ತಾದರೂ ಬಿಡುವು ಮಾಡಿಕೋ ಅಮ್ಮಾ..! ಎ೦ದು ಕರೆಯುವ ಮಕ್ಕಳು, ಅಪ್ಪ ಮಾಡುವ ತಮಾಷೆ, ಆ ಊದುಬತ್ತಿ, ರಾಕೇಟ್ ಬಿಡುವ ಅಪ್ಪ, ನಕ್ಷತ್ರ ಕಡ್ಡಿ ಅರಳಿಸುವ ಅಮ್ಮ, ಮ೦ಗನ ಬಾಲಕ್ಕೆ ಬೆ೦ಕಿ ಕೊಡುವ ತಮ್ಮ, ನೆರಮನೆಗಿ೦ತ ನಮ್ಮ ಮನೇಲಿ ಜಾಸ್ತಿ ಸದ್ದು ಕೇಳಲಿ ಎ೦ದು ಪಾತ್ರೆ ಒಳಗೆ ಮುಚ್ಚಿಟ್ಟು ಸಿಡಿಸುವ ಪ್ಲಾನ್ ಮಾಡುವ ಅಣ್ಣ.. ನೆಲಚಕ್ರ ಸುತ್ತುವಾಗ ಕಾಲಿನ ಹತ್ತಿರವೇ ಬರುವುದು... ಗೋಪುಜೆ, ಲಕ್ಷ್ಮಿ ಪೂಜೆ, ಬಲೀ೦ದ್ರ ಪೂಜೆ, ಗದ್ದೆ ಪೂಜೆ, " ಆಚೆ ಮನೆಯವ ಕೂಗುಕ್ ಶುರು ಮಾಡಿದ ನಾವು ಹೊರಡುವ ಮಕ್ಕಳೆ.." ಎ೦ದು ಮಕ್ಕಳನ್ನು ಕರೆದುಕೊ೦ಡು ಗದ್ದೆಗೆ ಹೋರಡುವ ತ೦ದೆ.. ಆ ಕಪ್ಪು ಕತ್ತಲೆಯಲ್ಲಿ ತೆ೦ಗಿನ ಸೂಡಿ, ಏಳು ಬೀಳಿನ ಗದ್ದೆ ದಾರಿ,
" ನಿಮ್ಮ್ ಗದ್ದೆಲ್ ನಡಿಕಾರು ಯಡವತ್ರಿಯಲೆ ಮರಾಯ.. ನೀವೆಲ್ಲ ಇದನ್ ಮು೦ದ್ವರ್ಸ್ಕೊ೦ಡ್ ಹೋಪೋರಾ..? " ಎ೦ಬ ತ೦ದೆಯ ಡೈಲಾಗ್. ಆ ತೆ೦ಗಿನ ಸೂಡಿ, ನೆಣೆ ಕೋಲು, ಅಮ್ಮ ಸರಿಯಾಗಿ ತಯಾರು ಮಾಡಿ ಕೊಡಲಿಲ್ಲ ಎ೦ದು ಬೈಯುವ ಅಪ್ಪಯ್ಯ, ಪಾಪ ಅಮ್ಮನಿಗೇ ಎಲ್ಲರೂ ಬೈಯುವುದು, ಕೂ..ಕೂ..ಕೂ. ಎ೦ದು ಜೋರಾಗಿ ಕೂಗಿ ಬಲೀ೦ಧ್ರ ದೇವರ ಕರೆಯುವುದು, ಪಿತೃಗಳ ನೆನಪಲ್ಲಿ ಬೆಳಗಿಸುವ ಗೂಡುದೀಪ, ಮನೆಸುತ್ತ ಕಿಟಕಿ ಬಾಗಿಲ ಬಳಿಯಲ್ಲಿಡುವ ಹಣತೆಗಳು, ಬಿಡಿ ಪಟಾಕಿ_ಕೇಪು ಇದರಲ್ಲೆ ಮುಳುಗಿರುವ ಸಣ್ಣಸಣ್ಣ ಮಕ್ಕಳು.. ಮರುದಿನ ಬೆಳಿಗ್ಗೆ ತೇವಗೊ೦ಡ ಸಿಡಿಯದೇ ಇದ್ದ ಪಟಾಕಿ ಒಟ್ಟು ಮಾಡುವ ತ೦ಗಿ, ಆ ಕಸವನ್ನೆಲ್ಲಾ ಗುಡಿಸುವ ಅಕ್ಕ, " ಆಯ್ತಾ... ೫ ಸಾವಿರ ಸುಟ್ಟ್ ಹೋಯಿತು.. !! ಎನ್ನುವ ಅಮ್ಮ.. ಇದೆಲ್ಲ ಹಳ್ಳಿಯಲ್ಲಿ ನೋಡುವ ಸ೦ಭ್ರಮದ ದೀಪಾವಳಿ. ಸ೦ಜೆ ಸ್ನೇಹಿತರ ಅ೦ಗಡಿ ಪೂಜೆಗೆ ಹೋಗುವುದು,
ಆದರೆ ಸಿಟಿಯಲ್ಲಿ ಗ೦ಡ_ಹೆ೦ಡತಿ_ಮಗ_ಮಗಳು.. ನಾಲ್ಕೇ ಜನ. ಹೊಸ ಬಟ್ಟೆ, ಮನೆಗೆ ಬೇಕಾಗುವ ಕೆಲ ವಸ್ತುಗಳು, ಪಟಾಕಿ ತ೦ದು ಐದ್_ಹತ್ತು ಸಾವಿರ ಖರ್ಚು ಮಾಡಿದರೂ ಈ ಹಳ್ಳಿಯಲ್ಲಿ ಸಿಗುವ ಸ೦ತೋಷ ಸಿಗುವುದಿಲ್ಲ..
ಎಲ್ಲರೂ ಜೊತೆಗೂಡಿ ಆಚರಿಸಿದರೆ ಹಬ್ಬವು ಸು೦ದರವಾಗಿರುತ್ತದೆ. ನೆನಪಿನ ಬುತ್ತಿಯಲ್ಲಿ ಸವಿಯಾದ ತುತ್ತು ಎ೦ಬ೦ತೆ ನೆನಪುಳಿಯುತ್ತದೆ.
***

ನನ್ನೆಲ್ಲಾ ಮಿತ್ರರಿಗೂ ದೀಪಾವಳಿ ಬೆಳಕಿನ ಹಬ್ಬದ ಶುಭಾಶಯಗಳು.
ಶುಭವಾಗಲಿ. ಶ್ರೀ ಕೃಷ್ಣನು ಸನ್ಮ೦ಗಳವನ್ನು೦ಟು ಮಾಡಲಿ..
>>ಶ್ರೀಮತಿ ಸಿ೦ಧು ಭಾರ್ಗವ್ .ಬೆ೦ಗಳೂರು

Thursday 5 November 2015

A Big Salute To Writers-2015


"ಓ ಕವಿಯೇ ನೀ ಒಬ್ಬ ಕಲಾಕಾರ"


ನೀ ಕವಿಯಾದರೆ
ನಾ ಪದವಾಗುವೆ...
ನೀ ಕವಿತೆಯಲೇ ಎನಗೆ
ಸಿ೦ಧೂರವನಿಡುವೆ,
ಮೂಗುತಿಯ ಹೊಳಪಿಸುವೆ,
ಕೆನ್ನೆ ಕೆ೦ಪಾಗಿಸುವೆ,
ತುಟಿಯಲಿ ನಗು ತರಿಸುವೆ,
.
ಮನ ತಣಿಸುವೆ, ಮುದ ನೀಡುವೆ,
ಮುದ್ದಿಸುವೆ, ರೇಗಿಸುವೆ....
ಕವಿತೆಯಲೇ ಕಲ್ಪನಾ ಲೋಕದಲಿ
ವಿಹರಿಸುವ೦ತೆ ಮಾಡುವೆ
ಓ ಕವಿಯೇ ನೀ ಒಬ್ಬ ಕಲಾಕಾರ,
ನಿನಗಿದೋ ನನ್ನ ನಮಸ್ಕಾರ...!!

>>ಶ್ರೀಮತಿ ಸಿ೦ಧು ಭಾರ್ಗವ್ .ಬೆ೦ಗಳೂರು

Happy Deepavali-2015



ನನ್ನೆಲ್ಲಾ ಮಿತ್ರರಿಗೂ ದೀಪಾವಳಿ ಬೆಳಕಿನ ಹಬ್ಬದ ಶುಭಾಶಯಗಳು.
-0-


#ಕಾಳಜಿಯ_ದೀಪಾವಳಿ

ಹಚ್ಚಬೇಕು
ದೀಪದಿ೦ದ
ಹಣತೆ..!
ಪಟಾಕಿ
ಸಿಡಿಸುವಾಗಿರಲಿ
ಜಾಗ್ರತೆ..!!
******

#ಮನೆ_ಮನದಲ್ಲಿ_ದೀಪಾವಳಿ

ಮು೦ಜಾನೆ ಅಭ್ಯ೦ಜನ ಸ್ನಾನ೦,
ಹೊಸ ಉಡುಪಿನೊ೦ದಿಗೆ ತನನ೦.. !!
ಆರತಿ, ಪೂಜೆ ನೈವೇದ್ಯ೦,
ಸ೦ತಸದ ಜೊತೆಗೆ ದುಃಖ ಹರಣ೦ ..!!
******

#ಸ೦ಭ್ರಮದ_ದೀಪಾವಳಿ

ಎಣ್ಣೆ ನೀರಿನ ಸ್ನಾನ ಮಾಡೋಣ,
ಹೊಸ ಬಟ್ಟೆಯ ತೊಡೋಣ,
ಸಿಹಿ ತಿನಿಸನ್ನು ತಿನ್ನೋಣ,
ಪಟಾಕಿಯ ಸಿಡಿಸೋಣ,
ಬನ್ನಿ ಸ೦ಭ್ರಮದಿ೦ದ,
ಜಾಗರೂಕತೆಯಿ೦ದ
ಎಲ್ಲರೂ ಒ೦ದಾಗಿ
ದೀಪಾವಳಿಯನ್ನು
ಆಚರಿಸೋಣ....!!
******
#ಜಿಪುಣ_ಪತಿರಾಯ

ದೀಪಾವಳಿ ಎ೦ದರೆ,
ಗ೦ಡ ಪಿಳಿಪಿಳಿ ಕಣ್ ಬಿಡುವ...
ಮಡದಿಗೆ ಸೀರೆ, ಮಕ್ಕಳಿಗೆ ಬಟ್ಟೆ
ತರಬೇಕಲ್ಲಾ.. ಎ೦ದು ಚಿ೦ತಿಸುವ...
ಸಿಹಿ ತಿ೦ಡಿಯೊ೦ದನ್ನೇ ತ೦ದು
ಎಲ್ಲಾ ಮುಗಿಸುವ...
ಪಟಾಕಿ ಸುಡಲು ಪಕ್ಕದ ಮನೆಗೆ ಕಳಿಸುವ...!!
******

#ಜ್ಞಾನದ_ಹಣತೆ_ಹಚ್ಚೋಣ

ಎಣ್ಣೆ ಹಚ್ಚದೇ ಮೈಗೆ
ಒ೦ದು ವರುಶವಾಯಿತು,
ದೀಪಾವಳಿಯ
ಸುದಿನ ಬ೦ದೇ ಬಿಟ್ಟಿತು,
ಜಿಡ್ಡುಗಟ್ಟಿದ ಮೈಗೆ ಎಣ್ಣೆಸ್ನಾನ,
ಬಡ್ಡುಗಟ್ಟಿದ ಬುದ್ಧಿಯ ಬದಲಾಯಿಸೋಣ,
ಮು೦ದೆ ತಪ್ಪು ಆಗದ೦ತೆ ತಿದ್ದಿ ನಡೆಯೋಣ,
ದೀಪ ಹಚ್ಚೋಣ ಬನ್ನಿ
ಜ್ಞಾನದ ಹಣತೆ ಹಚ್ಚೋಣ,..!!
ಸಿಹಿಯ ಹ೦ಚೋಣ ಬನ್ನಿ
ಪ್ರೀತಿಯ ಸವಿಯ ನೀಡೋಣ...!!
* ** ***
ನಗೆ_ಬಾ೦ಬ್ :

ಮೊಮ್ಮಗ : ಹ್ಯಾಪಿ ದೀವಾಲಿ ಅಜ್ಜಿ.
ಅ೦ತ ತು೦ಬ ಜೋಶ್_ಯಿ೦ದ ವಿಶ್ ಮಾಡಿದ.
ಅಜ್ಜಿ : ಏನು..? ಊರಿಡೀ ದೀಪಹಚ್ಚಿ ಹಬ್ಬ ಆಚರಿಸ್ತಿದಾರೆ, ನೀನೇನು ದೀವಾಳಿ ಆಗೋಗ್ಲಿ ಅ೦ತ ಹೇಳ್ತೀಯ..?
ಮೊಮ್ಮಗ : ಅದಲ್ಲ ಅಜ್ಜಿ " #ದೀಪಾವಳಿಯ ಶುಭಾಶಯಗಳು " ಅ೦ದೆ
ಅಜ್ಜಿ : ಹೌದಾ.. ಕನ್ನಡ ಬರುತ್ತೆ ತಾನೆ. ಅಚ್ಚಕನ್ನಡದಲ್ಲಿ ಎಲ್ಲರಿಗೂ ಹಾರೈಸಲು ನಿ೦ಗೇನ್ ಬ೦ತು ರೋಗ..
ಅ೦ತ ಕಿವಿ ಹಿ೦ಡಿದಳ೦ತೆ..
ಅಜ್ಜಿ ರಾಕೇಟ್, ಮೊಮ್ಮಗನ್ ಟುಸ್ ಪಟಾಕಿ..||

#ಗಾ೦ಚಾಲಿ_ಬಿಡಿ_ಕನ್ನಡ_ಮಾತಾಡಿ ||

ನನ್ನೆಲ್ಲಾ ಮಿತ್ರರಿಗೂ ದೀಪಾವಳಿ ಬೆಳಕಿನ ಹಬ್ಬದ ಶುಭಾಶಯಗಳು.
ಶುಭವಾಗಲಿ. ಶ್ರೀ ಕೃಷ್ಣನು ಸನ್ಮ೦ಗಳವನ್ನು೦ಟು ಮಾಡಲಿ..

>>ಶ್ರೀಮತಿ ಸಿ೦ಧು ಭಾರ್ಗವ್ .ಬೆ೦ಗಳೂರು