Monday 16 December 2019

ಭೂಮಿ ಪ್ರತಿಷ್ಠಾನ ಧಾರವಾಡ ಪುಸ್ತಕ ಬಿಡುಗಡೆ ಕಾರ್ಯಕ್ರಮ

🌿🌿🌿🌿🌿🌿🌿🌿🌿🌿

" ಭೂಮಿ ಪ್ರತಿಷ್ಠಾನ " ದ ಎಲ್ಲ ಸಹೄದಯ ಸಾಹಿತ್ಯ ಮನಸ್ಸುಗಳಿಗೂ ನಮಸ್ಕಾರಗಳು! ನಿನ್ನೆಯ ಡಿಸೆಂಬರ್ ೧೫-೨೦೧೯ ರವಿವಾರದಂದು ನಡೆದ ಕಾರ್ಯಕ್ರಮವನ್ನು ನಾನು ತಪ್ಪಿಸಿಕೊಂಡಿದ್ದರೆ ಬಹುಶಃ ಜೀವನದ ಬಹು ದೊಡ್ಡ ಸುಸಮಯವನ್ನು ಕಳೆದುಕೊಂಡಂತಾಗುತ್ತಿತ್ತು!
🌿 ಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿ ನಡೆಯಿತು!
🌿 ಅನುಭವಿಗಳಿಂದ, ಪ್ರಾಜ್ಞಃರಿಂದ ನಡೆಸಿಕೊಟ್ಟ ಉಪನ್ಯಾಸಗಳಂತೂ ಸದಾ ಮನನೀಯ !
🌿 ಭೂಮಿ ಪ್ರತಿಷ್ಠಾನದ ಎಲ್ಲ ಸದಸ್ಯರೂ ಸಹೄದಯತೆಯಿಂದ ನಡೆದುಕೊಂಡರು ಮತ್ತು ಕಾರ್ಯಕ್ರಮದ ಅಚ್ಚುಕಟ್ಟಿಗಾಗಿ ಶ್ರಮಿಸಿದ್ದಾರೆ.
🌿 ಆತಿಥ್ಯ ಕೂಡ ಚೆನ್ನಾಗಿತ್ತು.
🌿 ಅನುಭವಿಗಳಂತೆ ನೀವೆಲ್ಲ ಬಹಳ ಸುಂದರವಾಗಿ, ಅಚ್ಚುಕಟ್ಟಾಗಿ, ಸ್ಮರಣೀಯವಾಗಿ ಕಾರ್ಯಕ್ರಮ ನಡೆಸಿ ಕೊಟ್ಟಿರಿ!
🌿ಯಾರಿಗೂ ಯಾವುದೇ ರೀತಿಯ ಅಸಹನೆಯುಂಟಾಗದಂತೆ ನಡೆಸಿದಿರಿ.
🌿 ಪ್ರಭುದ್ಧ ಭಾಷಣಗಳು ಮನಸೆಳೆದವು.
🌿 " ಮಲ್ಲಿಗೆಯ ಮಾಲೆ" ಕವನ ಸಂಕಲನದ ಹೊರ ವಿನ್ಯಾಸ, ಒಳಗಿನ ತಿರುಳು , ಉತ್ತಮ ಮಟ್ಟದ ಕಾಗದ ಸೂಪರ್!
🌿 ನಿಮ್ಮ ಈ ಕಾರ್ಯಕ್ರಮ ಬಹಳಷ್ಟು ಜನರಿಗೆ ಅನುಕರಣೀಯವಾಗಿತ್ತು.
ಈ ನಿಮ್ಮ ಶ್ರಮಕ್ಕೆ, ಸಾಧನೆಗೆ ನನ್ನ ಮನದಾಳದ ಹಾರೈಕೆಗಳು🙏💐
🍁🍀 ಮುಂಜಾನೆಯಿಂದ ರಾತ್ರಿ ತನಕ ಕಾರ್ಯಕ್ರಮದ ಜವಾಬ್ದಾರಿ, ಹಾಗೆಯೇ ಕವನವನ್ನು ಕಳುಹಿಸಲು ಆಹ್ವಾನ ನೀಡಿದ ದಿನದಿಂದ ಮುದ್ರಣ ಪುಸ್ತಕ ಕೈಗೆ ಬರುವ ತನಕವೂ ನುನ್ನೆಯ ಕಾರ್ಯಕ್ರಮ ಮುಗಿಯುವ ತನಕ ಶ್ರಮಿಸಿದ ಎಲ್ಕರಿಗೂ ಅಭಿನಂದನೆಗಳ ಅರ್ಪಿಸುವೆನು.
🍁🍀 ನನಗೆ ಕವನ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ದೊರೆತಿದ್ದು ಅಚ್ಚರಿ ಅಲ್ಲದೇ ಸಂತಸದ ವಿಷಯವಾಗಿತ್ತು. ಧಾರವಾಡಕ್ಕೆ ಬೇಂದ್ರೆ ಅಜ್ಜನ ಊರಿಗೆ ಬಂದದ್ದು ತುಂಬಾ ಸಂತೋಷ‌ವಾಯಿತು. ಭೂಮಿ ಕಾವ್ಯ ಪುರಸ್ಕಾರ ಪಡೆದ ಕ್ಷಣ ಎಂದೂ ಮರೆಯಲಾಗದು.

ಒಳ್ಳೆಯ ಕಾರ್ಯಕ್ರಮ ಹಲವಾರು ವರ್ಷ ಸದಾ ನೆನಪಿನಲ್ಲಿ ಉಳಿಯುವಂತಹುದು, ಮನಸ್ಸಿನಿಂದ ಮರೆಯಾಗಲಾರದಂತಹುದು!
ವಿ.ಸೂ:
( ಇಲ್ಲಿನ ಮಾಹಿತಿ ಮತ್ತು ಕೆಲವು ಚಿತ್ರಕೃಪೆಗಳು ವಾಟ್ಸ್ ಆಪ್ ಗ್ರೂಪಿನಿಂದ ಮತ್ತು ಭೂಮಿ ಪ್ರತಿಷ್ಠಾನ ಧಾರವಾಡದಿಂದ ವಂದನೆಗಳು💐)
💐💐💐💐💐💐💐💐💐






















💐ಶುಭಹಾರೈಕೆಗಳು💐


Monday 2 December 2019

Warm welcome to December



ಸ್ನೇಹಿತರೇ,
ಶ್ರೀಮತಿ ನಂದಾ ಪ್ರೇಮಕುಮಾರ್ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡ ಪತ್ರಲೇಖನಗಳ ಸಂಕಲನ "ಹೆತ್ತವರಿಗೊಂದು ಪತ್ರ" ನಿನ್ನೆಯ ದಿನ ಅಂದರೆ ಡಿಸೆಂಬರ್ ೦೧ ರಂದು ಸಿರಿಗನ್ನಡ ವೇದಿಕೆ ಮಹಿಳಾಘಟಕ ಶಿವಮೊಗ್ಗ ದಲ್ಲಿ ಲೋಕಾರ್ಪಣೆಗೊಂಡಿತು. ಅದರಲ್ಲಿ ನಾನು ಬರೆದ ಲೇಖನ "-ಪಿತಾಜಿಗೊಂದು ಪತ್ರ" ಕೂಡ ಪ್ರಕಟವಾಗಿದೆ ಎನ್ನಲು ಸಂತೋಷವಾಗುತ್ತಿದೆ. ಅವಕಾಶ ನೀಡಿದ ಸಂಪಾದಕರಿಗೆ ವಂದನೆಗಳನ್ನು ತಿಳಿಸುವೆನು. ಸಿಂಧು ಭಾರ್ಗವ್ | ಬೆಂಗಳೂರು #thanksgiving
#ಹೆತ್ತವರಿಗೊಂದುಪತ್ರ #ಲೇಖನಸಂಕಲನ #ಸಿರಿಗನ್ನಡವೇದಿಕೆ #ಶಿವಮೊಗ್ಗ  #Sindhubhargavquotes #sindhubhargav #kannadaarticle #kannadastories #kannadapoems #shivmoga #sagara #decembermonth of book #kannadaliterature 
ಕೆಲವು ಚಿತ್ರಪಟಗಳು ನೋಡಿರಿ.
ಧನ್ಯವಾದಗಳು💐
**(@)**
**
*










Tuesday 4 June 2019

Navaparva Foundation_ನವಪರ್ವ ಫೌಂಡೇಷನ್ ಬೆಂಗಳೂರು

*ನವ ಪರ್ವ ಫೌಂಡೇಷನ್ನಿನ ಗುರಿ ಮತ್ತು ಉದ್ದೇಶಗಳು.*

೧) ನವ ಪರ್ವ ಫೌಂಡೇಷನ್  ವತಿಯಿಂದ ವಿಧ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸುವ ಯೋಜನೆಯಿದೆ.

೨) ನವ ಪರ್ವ ಫೌಂಡೇಷನ್ ವತಿಯಿಂದ ಪ್ರಾಥಮಿಕ ಶಾಲಾ ಮಕ್ಕಳಿಂದ ಹಿಡಿದು ಇಂಜಿನಿಯರಿಂಗ್ ಕಾಲೇಜನಲ್ಲಿ ಶಿಕ್ಷಣ ಪಡೆಯುತ್ತಿರುವ ವಿಧ್ಯಾರ್ಥಿಗಳ ವರೆಗೂ ಸಾಹಿತ್ಯದಲ್ಲಿ ಆಸಕ್ತಿ, ಕವನ ಸ್ಪರ್ಧೆ, ಕವನ ವಾಚನ, ಅಲ್ಲದೇ ಕಥೆ, ಕವನ, ಲೇಖನಗಳನ್ನು ಹೇಗೆ ಬರೆಯಬಹುದು ಎಂಬ ಸಣ್ಣ ಕಾರ್ಯಾಗಾರವನ್ನು ನಡೆಸುವ ಯೋಜನೆಯಿದೆ. ಹಾಗೆ ಭಾಗವಹಿಸಿದ ವಿಧ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡುವೆವು.

೩) ಹಾಗೆಯೇ ತಿಂಗಳಿಗೊಮ್ಮೆ ಕವನವಾಚನ ,ಕವಿಗೋಷ್ಠಿ ನಡೆಸುವ ಮೂಲಕ ವಿಧ್ಯಾರ್ಥಿಗಳು ಸಾಹಿತ್ಯದ ಕಡೆಗೂ ಒಲವು ತೋರಿಸುವ ಪ್ರಯತ್ನ ನಮ್ಮದಾಗಿದೆ.

೪) ಅಲ್ಲದೇ ಆನ್ಲೈನ್ ಕವಿಗೋಷ್ಠಿ, ಹಾಗೂ ರಾಜ್ಯ ಮಟ್ಟದ ಕವನ ಸ್ಪರ್ಧೆ ನಡೆಸಿ ಬಹುಮಾನ, ಪ್ರಶಸ್ತಿ ಪತ್ರ ನೀಡಿ ಗೌರವಿಸಬೇಕೆಂದಿದ್ದೇವೆ. ಮೆಚ್ಚುಗೆ ಪಡೆದ ಕವನಗಳಿಗೆ ನೆನಪಿನ ಕಾಣಿಕೆ, ಅಭಿನಂದನಾ ಪತ್ರ ನೀಡಿ ಗೌರವಿಸುವೆವು.

೫) ಹಾಗೆಯೇ ಸಾಹಿತ್ಯೇತರ ಚಟುವಟಿಕೆಗಳಾಗಿ ಅನಾಥಾಶ್ರಮಕ್ಕೆ , ವೃದ್ಧಾಶ್ರಮಕ್ಕೆ ಬೇಟಿ ನೀಡಿ ಅಲ್ಲಿಯವರಿಗೆ ನಮ್ಮ ಕೈಲಾದ ಸಹಾಯ ಮಾಡಬೇಕೆಂದಿದ್ದೇವೆ. (ಜನ್ಮದಿನವನ್ನು ಆಚರಿಸಿಕೊಳ್ಳುವುದು, ಹಣ್ಣಹಂಪಲು, ಅಕ್ಕಿ- ಬೇಳೆ ವಿತರಣೆ)

೬) ಪರಿಸರದ ಬಗೆಗೆ ಕಾಳಜಿ ವಹಿಸಿ ಶಾಲೆಗಳಿಗೆ ಭೇಟಿ ನೀಡಿ ಗಿಡ ನೆಟ್ಟು ಹಾಗೆ ಅದರ ಬಗ್ಗೆ ಜಾಗೃತಿ ಮೂಡಿಸುವ ಯೋಜನೆಯಿದೆ.

೭) ಮಕ್ಕಳ ಕಥಾ ಪುಸ್ತಕ, ಹಾಗೂ ಶಿಶುಗೀತೆಯ ಪುಸ್ತಕವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರ್ಥಮಿಕ ಶಾಲೆಗೆ ಭೇಟಿ ಮಾಡಿ ಆದಷ್ಟು ಶಾಲಾ ಪುಟ್ಟ ಮಕ್ಕಳಿಗೆ ನೀಡಿ ಓದಿನಲ್ಲಿ ಆಸಕ್ತಿ ಮೂಡಿಸುವ ಹಾಗೆ ಮಾಡುವುದು.

೮)  ಪರಿಸರ ಸಂರಕ್ಷಣೆಯ ಬಗೆಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುವುದು.ಕಿರುಚಿತ್ರಗಳನ್ನು ತೆಗೆದು (short film) ಶಾಲೆಗೆ ಭೇಟಿ ನೀಡಿ ಅದನ್ನು ಪ್ರದರ್ಶಿಸುವುದು.

೯) ಮಕ್ಕಳಲ್ಲಿ ಚಿತ್ರಕಲೆ, ಭಾಷಣ ಮಾಡುವ ಕಲೆ, ನಾಟಕಗಳಲ್ಲಿ ಭಾಗವಹಿಸಲು ಸಣ್ಣಪುಟ್ಟ ಕಾರ್ಯಾಗಾರವನ್ನು ನಡೆಸುವುದು.

೧೦) ಜೀವ ವೈವಿಧ್ಯಮಯ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವುದು.

೧೧) ಟ್ರಸ್ಟ್ ನ  ವತಿಯಿಂದ ಪರಿಸರ ಮಾಲಿನ್ಯ ಹಾಗೂ ಅದರ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು. (ವೀಡಿಯೋ ಮೂಲಕ‌.)

೧೨) ಮಳೆ ನೀರಿನ ಸಂರಕ್ಷಣೆ ಬಗ್ಗೆ ಮಕ್ಕಳಲ್ಲಿ ಹಾಗೂ ಪೋಷಕ ರಲ್ಲಿ ಅರಿವು ಮೂಡಿಸುವುದು.

೧೩) ಮಕ್ಕಳ ಸಾಹಿತ್ಯ ಸಮ್ಮೇಳನದ ಮೂಲಕ ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸುವ ಪ್ರಯತ್ನ ಮಾಡುವುದು.

೧೪) ಹಾಗೆಯೇ ಮುಂಬರುವ ವರುಷಗಳಲ್ಲಿ ನಮ್ಮದೆ ಸಂಸ್ಥೆಯಡಿಯಲ್ಲಿ ಶೈಕ್ಷಣಿಕ ಸಂಸ್ಥೆಯನ್ನು ತೆರೆಯುವ ಯೋಜನೆಯಿದೆ.

೧೫) ವಿಧ್ಯಾರ್ಥಿಗಳಿಂದ  ಕಥೆ, ಕವನ ಲೇಖನಗಳನ್ನು ಆಹ್ವಾನಿಸಿ ಕೃತಿರೂಪ ಕೊಟ್ಟು ಲೋಕಾರ್ಪಣೆ ಮಾಡುವ ಯೋಜನೆಯಿದೆ.

*✍ ಮುರುಳೀಧರ್ ಕೆ.ಎಸ್*
*ಅಧ್ಯಕ್ಷರು. (ನವ ಪರ್ವ ಫೌಂಡೇಷನ್‌)*

Friday 31 May 2019

Tulasi Naveen's Interview to Yourquote Kannada










Yourquote Kannada (ಇಂದಿರಾನಗರ ಬೆಂಗಳೂರು) ಇವರು‌ ನಡೆಸಿದ ಸಂದರ್ಶನದಲ್ಲಿ ನಮ್ಮ ತುಳಸಿ ಭಟ್. ಶುಭಹಾರೈಕೆಗಳು💐
ಯುವರ್ಕೋಟ್ ನಲ್ಲಿ ೬೦೦ಕ್ಕೂ ಹೆಚ್ಚು ಕೋಟಗಳನ್ನು ಮತ್ತು ಅದಲ್ಲದೆ ೧೨೦೦ಕ್ಕೂ ಹೆಚ್ಚು ಸಹಬರಹಗಳನ್ನು ಬರೆದಿರುವ ನಮ್ಮ ಹೆಮ್ಮೆಯ ಬರಹಗಾರ್ತಿ TULASI NAVEEN (ಸಿಂಧು ಭಾರ್ಗವ್) ಅವರ ಮನದಾಳದ ಮಾತುಗಳನ್ನು ಅರಿಯೋಣ ಬನ್ನಿ*.
*ಸಂಗಮೇಶ* : ನಮಸ್ತೆ! ತುಳಸಿ ಮೇಡಂ ಅವರೇ, ನಿಮ್ಮ ಅಮೂಲ್ಯ ಸಮಯದಿಂದ ಸ್ವಲ್ಪ ಸಮಯವನ್ನು ಕೊಟ್ಟಿದ್ದಕ್ಕಾಗಿ ನಾನು ಬಹಳ ಕೃತಜ್ಞನಾಗಿದ್ದೇನೆ. ಮೊದಲನೆಯದಾಗಿ, ನೀವು ನಿಮ್ಮ ಪರಿಚಯವನ್ನು ಪರಿಚಯಿಸಿ ಕೊಡಿ, ಹಾಗೆಯೇ ಒಂದು ಹವ್ಯಾಸವನ್ನು ಆದ್ಯತೆಯಾಗಿ ನಿರ್ವಹಿಸುವುದು ಹೇಗೆಂದು ತಿಳಿಸಿಕೊಡಿ.
ಇದರಿಂದ ನಾವು, ನಿಮ್ಮ ಹಿಂದಿನ ಜೀವನದ ಸ್ಪಷ್ಟ ಚಿತ್ರಣವನ್ನು ಮತ್ತು ನಿಮ್ಮ ಜೀವನದ ಪ್ರಸ್ತುತತೆಯನ್ನು ಅರಿಯಬಹುದು!
*ತುಳಸಿ ನವೀನ* : ಎಲ್ಲರಿಗೂ ನಮಸ್ಕರಿಸಿ, ನಾನು ತುಳಸಿ ಭಟ್. ಪೊಡವಿಗೊಡೆಯ ಶ್ರೀಕೃಷ್ಣನ ನೆಲೆಬೀಡಾದ ಕರಾವಳಿಯ ಕಡಲತೀರದ ಉಡುಪಿಯಲ್ಲಿ ನನ್ನ ಜನನ. ತಂದೆ ಶ್ರೀ. ಚಂಡೆ ನರಸಿಂಹ ಭಟ್. ತಾಯಿ ಶ್ರೀಮತಿ ವಸಂತಿ.ಎನ್.ಭಟ್. ನಾವು ಮೂವರು ಹೆಣ್ಣುಮಕ್ಕಳು. ಅಕ್ಕ-ತಂಗಿಯ ನಡುವೆ ಪ್ರೀತಿಯ ರಾಧಿಕಾ ನಾನು.(ಮನೆಯಲ್ಲಿ ಕರೆಯುವ ಹೆಸರು). ವಿದ್ಯಾಭ್ಯಾಸ ನ್ಯಾಶನಲ್ ಜೂನಿಯರ್ ಕಾಲೇಜು ಬಾರಕೂರಿನಲ್ಲಿ ಪಿ.ಯೂ. ಮುಗಿಸಿ ತದನಂತರ ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ಯನ್ನು ಉಡುಪಿಯ ಕಡಿಯಾಳಿ ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ನಲ್ಲಿ ಮಾಡಿ ಮುಗಿಸಿದೆ. ನಂತರ ಕ್ಯಾಂಪಸ್ ಇಂಟರ್ವೀವ್ ಮುಖಾಂತರ BHEL ನಲ್ಲಿ ಒಂದುವರ್ಷ HR ವಿಭಾಗದಲ್ಲಿ Traineeಆಗಿ ಕೆಲಸಕ್ಕೆ ಆಯ್ಕೆಯಾದೆ.ಆಮೇಲೆ ಮದುವೆ ಮಕ್ಕಳು. ಜೊತೆಗೆ ನನ್ನ ಬರವಣಿಗೆ. ಹೀಗೆ ನಡೆಯುತ್ತಲಿದೆ ಜೀವನ. ನಮಗಿರುವ ಆಸಕ್ತಿ ಅಭಿರುಚಿಗಳಿಗೆ ಪುಷ್ಠಿ ನೀಡಿ ಅದರ ಬಗೆಗೆ ನಿರಂತರ ಅಧ್ಯಯನ ನಡೆಸುತ್ತಾ ಇದ್ದರೆ ಯಶಸ್ಸು ಕಟ್ಟಿಟ್ಟಬುತ್ತಿ. ಹಾಗೆಯೇ ಏನಾದರೂ ಸಾಧನೆ ಮಾಡಬಹುದು ಎಂದು ಹೇಳಬಯಸುವೆ.
*ಸಂಗಮೇಶ* : ನೀವು ಹೇಗೆ ಬರೆಯಲು ಪ್ರಾರಂಭಿಸಿದ್ದು ?
*ತುಳಸಿ ನವೀನ* : ಮೊದಲಿನಿಂದಲು ಏನಾದರೂ ಹೊಸದಾಗಿ ವಿಭಿನ್ನವಾಗಿ ಮಾಡುವ ನನಗೆ ಈ ಯುವರ್ ಕೋಟ್ ತುಂಬಾ ಸಹಾಯವಾಗಿದೆ. ನಮ್ಮ ಹವ್ಯಾಸ ಕ್ಕೆ ಅಭಿರುಚಿಗೆ ವೇದಿಕೆ ನಿರ್ಮಿಸಿಕೊಟ್ಟಿದೆ. ಮೊದಲಿಗೆ ಮನದಾಳದ ವಂದನೆಗಳನ್ನು ಅರ್ಪಿಸುವೆನು. ನಾನು ಚಿಕ್ಕವಳಿದ್ದಾಗಿನಿಂದ ನನ್ನ ಗೆಳತಿಯರಿಗೆ ಜನ್ಮದಿನದ ಹಾರೈಕೆಗೆಂದು ಇಲ್ಲ ಆಟೋಗ್ರಾಫ್ ಬುಕ್ ನಲ್ಲಿಯೋ ನನ್ನದೇ ಆದ ನಾಲ್ಕುಸಾಲುಗಳ ಚುಟುಕು ಬರೆದು ಶುಭಹಾರೈಸುತ್ತಿದ್ದೆ. ಅವರಿವರು ಮಾಡಿದ ಹಾಗೆ ನನಗೆ ಮಾಡಲು ಇಷ್ಟವಿರಲಿಲ್ಲ. ಅಲ್ಲದೇ ಆಗಾಗ ಗೆಳತಿಯರಿಗೆ ಪತ್ರ ಬರೆಯುತ್ತಿದ್ದೆ. ಆಗಲೇ ನನಗರಿವಿಲ್ಲದೇ ಪುಟಗಟ್ಟಲೆ ಬರೆಯುವ ಗುಣ ಮೈಗೂಡಿಕೊಂಡಿತು ಎನ್ನಬಹುದು. ಬರವಣಿಗೆ ಎಂದರೇನೆ ನಮ್ಮ ಭಾವನೆಗಳನ್ನು, ಅಭಿಪ್ರಾಯಗಳನ್ನು ಹೊರಹಾಕುವ ಮಾಧ್ಯಮ ತಾನೆ. ಹಾಗೆ ಬರವಣಿಗೆ ಶುರುವಾಯಿತು. ಸಾಹಿತ್ಯ ಲೋಕದಲ್ಲಿ ಬರೆಯಲು  ಆರಂಭಿಸಿದ್ದು 2011 ಅಕ್ಟೋಬರ್ ತಿಂಗಳಲ್ಲಿ. ನನ್ನ ಮುಖಪುಟದ ಗೆಳೆಯ ಪ್ರಸಾದ್ ತುಂಬಾ ಪ್ರಭಾವ ಬೀರಿದ್ದ. ಅವನಿಂದಲೇ ಕವಿತೆ ಬರೆಯಲು ಶುರುಮಾಡಿದೆ. ಇಲ್ಲಿಯ ತನಕ ಬರೆಯುತ್ತಲೇ ಇರುವೆ (ಸಣ್ಣನಗು).
*ಸಂಗಮೇಶ* : ನಿಮ್ಮ ಮತ್ತು ಯುವರ್ಕೋಟ್ ನಂಟು ಹೇಗೆ ಶುರುವಾಗಿದ್ದು?
*ತುಳಸಿ ನವೀನ* : ಯಾರೆಂದು ಸರಿಯಾಗಿ ನೆನಪಿಗೆ ಬರುತ್ತಾ ಇಲ್ಲ. ಮುಖಪುಟದ ಗೆಳೆಯರು ಯಾರೋ ದಿನವೂ ಸಣ್ಣ ಸಣ್ಣ ಕೋಟ್ ಬರೆದು ಪೋಸ್ಟ್ ಮಾಡುತ್ತಾ ಇದ್ದರು. ಅದರಲ್ಲಿ YourQuote.in logo ಕಾಣಿಸಿತ್ತು. ಅದನ್ನು ಗೂಗಲ್ ಲಿ ಹುಡುಕಿ Play store ನಿಂದ ಡೌನ್‌ಲೋಡ್ ಮಾಡಿಕೊಂಡೆ. ಕಾರಣ ಅದೇ ಕ್ರಿಯೇಟಿವ್ ಬುದ್ಧಿ. ನನಗೆ ಅದೊಂದು ಹುಚ್ಚು. ಏನಾದರೂ ಬರೆಯುವುದನ್ನು ಒಂದು ಇಮೇಜ್(ಫ್ರೇಮ್ ನಲ್ಲಿ) ಫೈಲ್ ಮಾಡಿ ಎಲ್ಲರಿಗೂ ಸೆಂಡ್ ಮಾಡುವುದು‌ ಹಾಗಾಗಿ ಇದನ್ನು ಹಿಂಬಾಲಿಸಿದೆ.
*ಸಂಗಮೇಶ* : ನಿಮ್ಮ ಪೆನ್ / ಬ್ಲಾಗ್ ಹೆಸರಿನ ಹಿಂದಿನ ಕಥೆ ಯಾವುದು?
*ತುಳಸಿ ನವೀನ* : ನಾನು ಮೂರ್ನಾಲ್ಕು ಬ್ಲಾಗ್ ಹೊಂದಿರುವೆ. ಒಂದು ಮಕ್ಕಳ ಕಥೆಗಾಗಿ, ನನ್ನ ಕವನಗಳಿಗಾಗಿ, ಆರೋಗ್ಯಕ್ಕಾಗಿ, ಕಲಾವಿದರಿಗಾಗಿ. ಅದರಲ್ಲಿ ಆರೋಗ್ಯ ದೀಪಿಕಾ - ಬಸುರಿ ಮತ್ತು ಬಾಣಂತಿಯ ಆರೋಗ್ಯಕ್ಕಾಗಿ ಸಲಹೆ ಸೂಚನೆಗಳನ್ನು ನಮ್ಮ ಅನುಭವಗಳನ್ನು ಕೆಲವು ಔಷದೋಪಚಾರಗಳನ್ನು ಬರೆದಿರುವೆನು. ಅದು ಲಕ್ಷಾಂತರ ಜನರು ಸರ್ಚ್ ಮಾಡಿ ಓದಿದ್ದಾರೆ. ಹೆಮ್ಮೆ ಅನ್ನಿಸುತ್ತದೆ.
https://www.tulasinac6.blogspot.com
ಅಲ್ಲದೇ ಮಕ್ಕಳ ದಿನಕ್ಕೊಂದು ಕಥೆ, ಹಾಗೂ ಜೀವನದ ಸಂತೆಯಲಿ - ಭಾವಬಿಂದು ಹರಿದಳಾಗಿ ಕಾವ್ಯಸಿಂಧು ಇದರಲ್ಲಿ ಸುಮಾರು ನಾಲ್ಕುನೂರು ಬರಹಗಳ ಸಂಗ್ರಹವಿದೆ , ಹಾಗೇ ಕಾಲಾಭಿಮಾನಿ, ಭಕ್ತಿ ಸೇತು ಈಗಲೂ ಬರೆಯುತ್ತಿರುವೆನು.  https://sindhubhargavbengaluru.blogspot.com  
ಇನ್ನೂ ಮುಖಪುಟದಲ್ಲಿ ನನ್ನ ಅಭಿರುಚಿ  ಫೋಟೋಗ್ರಫಿ ಗೆ ಒತ್ತುಕೊಟ್ಟು ಒಂದು ಪೇಜ್ ತೆರೆದಿರುವೆ. VillageBeauty - https://www.facebook.com/karavalikampu ಸುಮಾರು ಮೂರುಸಾವಿರ ಜನ ಲೈಕ್ ಮಾಡಿದ್ದಾರೆ.
ವಿ.ಸೂ: ನನ್ನ ಎಲ್ಲ ಬರಹಗಳನ್ನು ಸಿಂಧು ಭಾರ್ಗವ್ ಕಾವ್ಯನಾಮದಡಿಯಲ್ಲಿಯೇ ಬರೆಯುವುದು.
*ಸಂಗಮೇಶ* : ಯುವ ಬರಹಗಾರರಿಗೆ ಯುವರ್ಕೋಟ್ ಸೂಚಿಸುವುದಾದರೆ ಹೇಗೆ ಮತ್ತೆ ಅದಕ್ಕೆ ಕಾರಣವೇನು ?
*ತುಳಸಿ ನವೀನ* : ಯುವರ್ಕೋಟ್ ಹೆಸರೇ ಹೇಳುವ ಹಾಗೆ ಇದು ನಿಮ್ಮ ಕೋಟ್. ನಿಮ್ಮ ನುಡಿಗಳನ್ನು ಮುದ್ರಿಸುವ ವಾಹಿನಿ. ನೀವು ಓದಿರುತ್ತೀರಿ "ಸ್ವಾಮಿ ವಿವೇಕಾನಂದರ ನುಡಿಗಳು, ಅಬ್ದುಲ್‌ ಕಲಾಂ ಅವರ ನುಡಿಗಳು" ಇಂದಿಗೂ ಜೀವಂತ. ಹಾಗೆಯೇ ಒಂದು ವಾಕ್ಯದಲ್ಲಿ ನೀವು ಬರೆಯಬಹುದು. ನಿಮ್ಮ ನುಡಿಗಳು ಕೂಡ ಇತರರಿಗೆ ಸ್ಪೂರ್ತಿಯಾಗಬಹುದು. ಅಲ್ಲದೇ ನೀವು ಗಮನಿಸಿರಬಹುದು ಇಲ್ಲಿ ಕೇವಲ ಬರವಣಿಗೆಗೆ ಮಾತ್ರ ಒತ್ತು ನೀಡಿಲ್ಲ. ಬದಲಾಗಿ ನಿಮ್ಮ ಬಹುಮುಖ ಪ್ರತಿಭೆಗೊಂದು ಮಹಾಸಭಾಂಗಣವನ್ನೇ ಕಲ್ಪಿಸಿಕೊಟ್ಟಿದ್ದಾರೆ. ಇಲ್ಲಿ ನೀವು ಹಾಡಬಹುದು, ಗಿಟಾರ್ ನುಡಿಸಬಹುದು, ಸಂಭಾಷಣೆ ನಡೆಸಿದ ವೀಡಿಯೋವನ್ನು ದಾಖಲಿಸಬಹುದು. ತೆರೆದ ವೇದಿಕೆ ನಿಮಗಾಗಿಯೇ ಇದೆ. ನಿಮ್ಮ ಪ್ರತಿಭೆಯನ್ನು ಜಗತ್ತಿಗೆ ತೋರಿಸಿ. ಕಲೆ‌ ಎಲ್ಲರಲ್ಲಿಯೂ ಇದೆ. ಆದರೆ ಅದನ್ನು ಗುರುತಿಸುವವರು ಬೇಕು. ಇಲ್ಲದಿದ್ದರೆ ಅವಕಾಶ ವಂಚಿತರಾಗಿ ಪ್ರತಿಭೆಗಳು ಮರುಗುತ್ತಾರೆ. ಅದಕ್ಕಾಗಿಯೇ ಯುವರ್ಕೋಟ್ ಇದೆ. ವಯಸ್ಸಿನ ಪರಿಮಿತಿಯಿಲ್ಲ. ಎಲ್ಲರೂ ಭಾಗವಹಿಸಬಹುದು. ಹಾಗೆಯೇ ಇದರ ಇನ್ನೊಂದು ವಿಶೇಷತೆ ಕೊಲ್ಯಾಬ್ ಮಾಡಿ ಖುಷಿ ಪಡುವುದು. ನಿಮ್ಮ ಸಾಲಿಗೆ ನನ್ನೆರೆಡು ಸಾಲು ಸೇರಿಸಿ ಜುಗಲ್ ಬಂದಿ ತರಹ ಓದಿ ಆನಂದಿಸುವುದು.
*ಸಂಗಮೇಶ* :  ನಿಮ್ಮ ಜೀವನವನ್ನು ಬದಲಿಸಿದ ಕಥೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ?
*ತುಳಸಿ ನವೀನ* : ನಾನು ಪಿ.ಯೂ.ಸಿ ಯಲ್ಲಿರುವಾಗ ನರ್ಸ್ ಆಗಬೇಕಂತಿದ್ದೆ. ಡಾ.ತುಳಸಿ ಎಂದು ಕರೆಯಬೇಕು ಎಂಬ ಆಸೆಯಿತ್ತು. ಆದರೆ ಅದು ಸಾಧ್ಯವಿಲ್ಲ ಅಂತ ಗೊತ್ತಾಗಿ ನರ್ಸ್ ಆದರೂ ಆಗಬೇಕು ಎಂದೆನಿಸಿದೆ. ಅದೇ ಕ್ಷೇತ್ರದಲ್ಲಿರಬಹುದಲ್ಲ ಎಂದು. ನರ್ಸಿಂಗ್ ಕೆಲಸ ನನಗೆ ತುಂಬಾ ಇಷ್ಟ‌ . ಆದರೆ ನಿಜವಾಗಿ ಹೇಳಬೇಕೆಂದರೆ ಅದಕ್ಕೆ ಬೇಕಾದಷ್ಟು ಓದಲಿಲ್ಲ. ಕನ್ನಡ ಮೀಡಿಯಂ ನಲ್ಲಿ ಓದಿದ ನಮಗೆ ಏಕಾಏಕಿ ಎಲ್ಲ ವಿಷಯವು ಇಂಗ್ಲೀಷಿನಲ್ಲೇ ಇರುವುದು ಎಂದಾಗ ಕಷ್ಟವಾಗಿತ್ತು. ಕಷ್ಟಪಟ್ಟು ಓದಬೇಕಿತ್ತು. ಆದರೆ ಒತ್ತಡ, ಭಯದಿಂದಲೇ ಇದ್ದೆ. ಪರಿಣಾಮವಾಗಿ ಪಿ.ಯೂ ನಲ್ಲಿ ಫೇಲ್ ಆದೆ.  ಅಮ್ಮನಿಗೆ ತುಂಬಾ ತಲೆಬಿಸಿಯಾಗಿ "ಇವಳ ಭವಿಷ್ಯ ಹೇಗೆ" ಎಂದು ಯೋಚಿಸಿದರು. ಕೂಡಲೇ ಎಸ್.ಎಸ್.ಎಲ್.ಸಿ ಯಲ್ಲಿ ಪಡೆದ ಅಂಕದಿಂದ ಡಿಪ್ಲೋಮಾ ಇಲ್ಲ ಐ.ಟಿ.ಐ ಓದಬಹುದು‌ ಎಂದು ಹಿತೈಷಿಗಳು ಸಲಹೆ ನೀಡಿದರು‌ .ಆಗ ಕಡಿಯಾಳಿ ಪಾಲಿಟೆಕ್ನಿಕ್ ಗೆ ಸೇರಿದೆ. ಅಲ್ಲಿಂದ ಜೀವನದ ಹಾದಿಯೇ ಬದಲಾಯಿತು.
ಯಾಕೆ ನನ್ನ ವೈಫಲ್ಯವನ್ನೂ ಇಷ್ಟು ವಿಸ್ತಾರವಾಗಿ ಹೇಳಿದೆನೆಂದರೆ, "ಕೇವಲ ನನಗೆ ಹಾಗಾಗ ಬೇಕು ಹೀಗಾಗ ಬೇಕು ಎಂಬ ಆಸೆ ಇದ್ದರೆ ಸಾಲದು ಅದನ್ನು ಸಾಕಾರಗೊಳಿಸಲು ಶ್ರದ್ಧೆ, ಛಲ ನಮ್ಮಲ್ಲಿರಬೇಕು. ಆಗಲೇ ಯಶಸ್ಸು ಸಿಗುವುದು". ವಿದ್ಯಾರ್ಥಿ ಜೀವನ ಹಾಳು ಮಾಡಿಕೊಳ್ಳಬೇಡಿ‌ ಎಂದು ಈ ಮೂಲಕ ಕೇಳಿಕೊಳ್ಳುವೆ.ಹಾಗೆಯೆ ಮಕ್ಕಳ ಸೋಲಿನಲ್ಲಿ ಹೆತ್ತವರ ಜೊತೆಗಾರಿಕೆ, ಧೈರ್ಯದ ನುಡಿಗಳು ಸದಾ ಬೇಕು.
*ಸಂಗಮೇಶ* : ಬರಹಗಾರರಾಗಿ ನಿಮ್ಮನ್ನು ಪ್ರೇರೇಪಿಸುವಂತಹ ವಿಷಯಗಳು ಯಾವುವು? ನೀವು ಉತ್ತಮವಾಗಿ ಬರೆಯಲು ಅಥವಾ ಪ್ರೇರಣೆ ಪಡೆಯಲು ಸಹಾಯ ಮಾಡುವ ವಿಷಯಗಳು ಯಾವುವು?
*ತುಳಸಿ ನವೀನ* : ನಾನು  ಮೊದಲು ಸಣ್ಣ ಸಣ್ಣ ಚುಟುಕು ಬರೆಯುತಲಿದ್ದೆ. ಜೊತೆಗೆ ಕವನ ಬರೆಯಲು ಪ್ರಾರಂಭಿಸಿದೆ‌ ಆದರೆ ಅದು ಗದ್ಯ ರೂಪ ಪಡೆಯುತಲಿತ್ತು. ಇದು ಸರಿ ಕಾಣದು ಎಂದು ಲೇಖನಗಳ ಬರೆಯಲು ಶುರು ಮಾಡಿದೆ. ನಿಜ ಘಟನೆಗಳನ್ನೇ ಆಧಾರವಾಗಿಸಿಕೊಂಡು ಕಥೆಗಳನ್ನು ಬರೆದೆ. ಕಾರಣ ನನ್ನಲ್ಲಿ ತುಂಬಾ ವಿಚಾರಗಳಿದ್ದವು. ಅದನ್ನು ಕವಿತೆಯಲ್ಲಿ ಹಿಡಿದಿಡಲು ಸಾಧ್ಯವಾಗುತ್ತ ಇರಲಿಲ್ಲ. ಹಾಗಾಗಿ ಲೇಖನವನ್ನು ಬರೆಯತೊಡಗಿದೆ. ಕವಿತೆ ಬರೆಯುವಾಗ ಕೃಷ್ಣಪ್ರಸಾದ್ ಸರ್ (ಈಗ ಆಸ್ಟ್ರೇಲಿಯಾ ದಲ್ಲಿದ್ದಾರೆ) ನನಗೆ ಮಾರ್ಗದರ್ಶನವನ್ನು ನೀಡಿದರು. ರಾಗ ತಾಳ ಪ್ರಾಸಬದ್ಧವಾಗಿಯೇ ಬರೆಯಬೇಕು. ಬರೆದರೆ ಅದರಲ್ಲಿ ಲಯವಿರಬೇಕು. ಹಾಡುವಂತಿರಬೇಕು. ಅದೇ ಕವಿತೆಯಾಗುವುದು ಎಂದು ಹೇಳಿಕೊಟ್ಟರು. ಅವರ ಮಾರ್ಗದರ್ಶನದಲ್ಲಿ ಈಗಲೂ ಬರೆಯುತ್ತಾ ಇದ್ದೇನೆ. "ಯಾವ ಮೋಹನ ಮುರಳಿ ಕರೆಯಿತೋ.." "ಕಾಣದ ಕಡಲಿಗೆ ಹಂಬಲಿಸಿದೆ ಮನ.." "ನಿಂಬೀಯಾ ಬನಾದ ಮ್ಯಾಗಲ.." ಹೀಗೆ ಅನೇಕ ಹಾಡುಗಳು ಇನ್ನೂ ಜೀವಂತವಾಗಿವೆ ಅಂದರೆ ಅದು ಲಯಬದ್ಧವಾಗಿ ಬರೆದ ಕಾರಣವೇ ತಾನೆ? ಗದ್ಯರೂಪದಲ್ಲಿ ಬರೆಯಿರಿ.ಆದರೆ ಆದಷ್ಟು ಕಡಿಮೆಮಾಡಿ.
*ಸಂಗಮೇಶ* : ಲೇಖನ /ಕಥೆ / ಕವಿತೆ / ಚುಟುಕುಗಳಲ್ಲಿ ನಿಮಗೆ ಯಾವುದು ಪ್ರಮುಖವಾದುದು?
*ತುಳಸಿ ನವೀನ* : ಲೇಖನ, ಕಥೆಗಳು, ಹಾಗೆ ಕವಿತೆಗಳನ್ನು ಹೆಚ್ಚಾಗಿ ಬರೆಯುತ್ತೇನೆ.
*ಸಂಗಮೇಶ* : ನಿಮ್ಮ ಬರವಣಿಗೆಗೆ ಬಂದಾಗ ನೀವು ಮಾಡಲು ಬಯಸುವ ಸುಧಾರಣೆಗಳು ಯಾವುವು? / ಬರಹಗಾರ / ಕವಿಯಾಗಿ ನೀವು ಪ್ರಯೋಗಿಸಲು ಬಯಸುವ ವಿಷಯಗಳನ್ನು ಯಾವುದು? / ಬರಹಗಾರ / ಕವಿಯಾಗಿ ನಿಮ್ಮ ಗುರಿಗಳು ಯಾವುವು?
*ತುಳಸಿ ನವೀನ* : ನನ್ನ ಬರವಣಿಗೆ ಎಂದಾಗ ಹೊಸಹೊಸ ಪದಗಳ ಬಳಕೆಮಾಡಿ ವಾಕ್ಯಕ್ಕೆ ಇನ್ನೂ ಹೊಳಪು ನೀಡಬೇಕೆಂಬ ಆಸೆಯಿದೆ. ಶಿಶು ಗೀತೆ, ಮಕ್ಕಳ ಕಥೆಗೆ ಹೆಚ್ಚು ಒತ್ತು ನೀಡಬೇಕೆಂಬ ಆಸೆಯಿದೆ.ಪ್ರಕೃತಿ ಬಗೆಗೆ, ಸಮಾಜಮುಖಿಯಾಗಿ ಬರೆಯವುದು ನನಗಿಷ್ಟ.
ಒಬ್ಬ ಕವಯಿತ್ರಿಯಾಗಿ ಈಗಾಗಲೇ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿರುವೆನು. ಕಳೆದ ಹತ್ತು ವರುಷಗಳಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವೆನು. ಅನೇಕ ಮ್ಯಾಗಜೀನ್ ಗಳಲ್ಲಿ, ದಿನಪತ್ರಿಕೆಗಳಲ್ಲಿ, ಆನ್ಲೈನ್ ಬ್ಲಾಗ್ ಗಳಲ್ಲಿ ವಾರ್ತಾಪತ್ರಿಕೆಗಳಲ್ಲಿ, ಹಾಗೆಯೇ ಅನೇಕ ಕೃತಿಗಳಲ್ಲಿಯೂ (ಸುಮಾರು ೧೦ ಕೃತಿಗಳಲ್ಲಿ) ನನ್ನ ಬರಹಗಳು ಪ್ರಕಟವಾಗಿವೆ. ಪ್ರಸಕ್ತ ಸಾಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ ಯುಗಾದಿ ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಕರೆದಿದ್ದರು. ನಾನೂ ಭಾಗಿಯಾಗಿದ್ದೆ. ಅಲ್ಲದೇ ಸಾಹಿತ್ಯ ಸೇವೆಯನ್ನು ಗುರುತಿಸಿ ಪತ್ರಿಕಾ ಲೇಖಕರ ವಿಭಾಗದಲ್ಲಿ "ಕನ್ನಡ ಸೇವಾರತ್ನ" ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಈಗ ಜವಾಬ್ದಾರಿ ಜಾಸ್ತಿಯಾಗಿದೆ.ಇನ್ನಷ್ಟು ಸಾಹಿತ್ಯ ಲೋಕದಲ್ಲಿ ಕೆಲಸಮಾಡಬೇಕಿದೆ‌. "ನವಪರ್ವ ಫೌಂಡೇಶನ್" ಅನ್ನು ಸ್ಥಾಪನೆಮಾಡಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಬಗೆಗೆ ಆಸಕ್ತಿ ಮೂಡಿಸುವ ಹಾಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸುವ ಆಲೋಚನೆಯಿದೆ. ಅದಕ್ಕೆ ಮುರುಳೀಧರ್ ಗೌಡ ಅವರು ಅಧ್ಯಕ್ಷರಾಗಿದ್ದಾರೆ. ನಾನು ಉಪಾಧ್ಯಕ್ಷೆ. ಅಲ್ಲದೇ "ಜೀವನದ ಸಂತೆಯಲಿ- ಕವನ ಸಂಕಲನ ಬಿಡುಗಡೆ ಮಾಡಬೇಕೆಂದಿರುವೆ. ಮಕ್ಕಳ ಕಥಾ ಪುಸ್ತಕ, ಶಿಶುಗೀತೆ ಪುಸ್ತಕ ಪ್ರಕಟವಾಗಬೇಕು.
*ಸಂಗಮೇಶ* : ಯುವರ್ಕೋಟ್ ನಲ್ಲಿ ನಿಮ್ಮ ಮೆಚ್ಚಿನ ಬರಹಗಾರರು ಯಾರು?
*ತುಳಸಿ ನವೀನ* :  ನಾಗೇಶ್ ಜಿ ಅವರ ತಲೆಯೊಳಗೆ ಸಾಕಷ್ಟು ವಿಷಯಗಳಿವೆ. ಅವರೊಬ್ಬ ಯೋಗಿಯಂತೆ ಕಾಣುತ್ತಾರೆ.ವಾಸ್ತವವನ್ನು ಸರಳವಾಗಿ ಹೇಳುತ್ತಾರೆ.
ಪ್ರಮೋದ್ ಶೇಕರ್ ಅವರಿಗೆ ತುಂಬಾ ಜ್ಞಾನವಿದೆ. ಕಥೆ ಕಾದಂಬರಿಗಳನ್ನು ಓದುವ ಕಾರಣ ಪದಗಳ ಪ್ರಯೋಗ ಉತ್ತಮವಾಗಿರುತ್ತದೆ.
ಪ್ರವೀರ ಆಚಾರ್ಯ ಅವರು ಒಂದು ಅಕ್ಷರ ಹಿಡಿದು ಅದರಿಂದ ಮೂಡಿಬರುವ ಅನೇಕ ಪದಗಳನ್ನೇ ವಾಕ್ಯವಾಗಿಸುವ ಚಾಕಚಕ್ಯತೆ &ಜಾಣ್ಮೆ ಗೆ ನಾನು ಅಚ್ಚರಿಗೊಂಡಿದ್ದೆ.
ಇನ್ನುಳಿದಂತೆ Naresh Kamath, ಅಭಿಜ್ಞಾ ಪಿ.ಎಮ್ ಗೌಡ, Nikhil Honnalli, ಶ್ರೀಕಾಂತ್ ಭಟ್, Shashikant Desai, Sudarshan Harnalli, ಗೀತಾಂಜಲಿ ಮೇಡಮ್, ಸಂಗಮೇಶ ಸಜ್ಜನ್,  ಹಂಸಪ್ರಿಯ ಅವರು, ಹಾಲಸಿದ್ದಪ್ಪ ಪುಜೇರಿ ಅವರು, ಡಾ.ಮಲ್ಲಿನಾಥ ಶಿ. ತಳವಾರ ಅವರು, ಅಶೋಕ್ ದೇಸಾಯಿ ಅವರು, ಸುಹಾ ಸು ಅವರು, ವೈಶಾಲಿ ಎಮ್.ಸುಮ ಮೇಡಮ್, ಕನಸು ಜೈನ್ ಅವರು, ನವೀನ್ ಕುಮಾರ್ ಕಲಾಲ್ ಹೀಗೆ ತುಂಬಾ ಜನ ಸ್ನೇಹಿತರು ಒಬ್ಬರಿಗಿಂತ ಒಬ್ಬರು ಉತ್ತಮವಾಗಿ ಬರೆಯುತ್ತಾರೆ.
*ಸಂಗಮೇಶ* : ನಿಮಗಾಗಿ ಅತ್ಯುತ್ತಮವಾದ ವೈಯಕ್ತಿಕ ಆವಿಷ್ಕಾರ ಯಾವುದು?
*ತುಳಸಿ ನವೀನ* : ನಾನು ಬರೆಯುತ್ತಾ ಹೋದ ಹಾಗೆ ಅಚ್ಚರಿಯಾದದ್ದು ಒಂದೆರಡು ಪುಟಗಳಲ್ಲ, ಸುಮಾರು ಆರೇಳು ಪುಟಗಳಷ್ಟು ಬರೆಯುವ ಶಕ್ತಿ ನನ್ನ ಲೇಖನಿಗಿದೆ ಎಂದು. ಹಾಗೆಯೆ ನನ್ನ ಮಗ ಚಂದನ್ ಗೆ ದಿನವೂ ನಾನೇ ಕಲ್ಪಿಸಿ ಹೇಳುವ ಮಕ್ಕಳ ಕಥೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಅದನ್ನೆ ಮರುದಿನ ಬರೆಯುವೆ.
*ಸಂಗಮೇಶ* : ನಿಮ್ಮ ಪ್ರಕಾರ ಬರಹಕ್ಕೂ ಅನುಭವಕ್ಕೂ ಹೇಗೆ ಸಂಬಂಧವಿದೆ?
*ತುಳಸಿ ನವೀನ* : ಸಂಬಂಧ ಅಂತ ಅಲ್ಲ, ನಮ್ಮ ಅನುಭವಗಳನ್ನು ಬರೆಯಬಹುದು. ಆತ್ಮಕಥೆ ಯಲ್ಲಿ ಕವಿಗಳು, ಸಾಹಿತಿಗಳು ಬರೆಯುತ್ತಾರೆ‌. ಕೆಲವರು ಬರೆಯುವುದಿಲ್ಲ. ಆದರೆ ಭಾವನೆಗಳಿಗೆ ನೇರ ನಂಟಿದೆ. ನಮ್ಮ ಭಾವನೆಗಳನ್ನು, ಅಭಿಪ್ರಾಯಗಳನ್ನು ಹೊರಹಾಕಲು ಬರವಣಿಗೆ ಮಾಧ್ಯಮವಾಗಿದೆ.
*ಸಂಗಮೇಶ* : ಯುವರ್ಕೋಟ್ ನಲ್ಲಿ ನೀವು ಬರೆದ 5 ಉತ್ತಮ ಬರಹಗಳನ್ನು ಆರಿಸಿ ?
*ತುಳಸಿ ನವೀನ* : a)ವಿಶ್ವಗುಬ್ಬಚ್ಚಿದಿನಕ್ಕೆ ಬರೆದ ಕವಿತೆ, b)ಮುಂದಿನ ಜನ್ಮದಲ್ಲಿ ಏನಾಗ ಬಯಸುತ್ತೀರಿ ಎಂದು ಕೇಳಿದ್ದರು. ಕಲಾವಿದನಾಗ ಬಯಸುವೆ ಎಂದು ಬರೆದಿದ್ದೆ. c) ಹೆಣ್ಣು ಜಗದ ಕಣ್ಣು d) ಪ್ರೀತಿ ಅದರ ನೀತಿ e) ಬೀದಿದೀಪ ಹೀಗೆ. f)ಅರಣ್ಯಕ್ಕೆ ಬೆಂಕಿಬಿದ್ದಾಗ ಬರೆದ ಕವಿತೆ ಇನ್ನೂ ಇದೆ.
*ಸಂಗೇಶ* : ನಿಮ್ಮ ಆಟೋ ಹಿಂದಿನ ಬರಹಕ್ಕೆ ಪ್ರೇರೇಪಣೆ ಯಾರು??ಹಾಗೂ ಈ ನಿಮ್ಮ ಬರಹಗಳಿಗೆ ಸ್ಫೂರ್ತಿ ಯಾರು??
*ತುಳಸಿ ನವೀನ* : ಆಟೋ ಹಿಂದಿನ ಸಾಲು- ಇದು ದಿ.ಶಂಕರ್ ನಾಗ್ ಅವರ ನೆನಪಿಗಾಗಿ ನಾನು ಬರೆಯಲು ಶುರುಮಾಡಿದೆ. ರಮೇಶ್ ಭಟ್ ಅವರು ಒಂದು ಸಂದರ್ಶನದಲ್ಲಿ ಶಂಕರ್ ನಾಗ್ ಅವರ ಬಗೆಗೆ ವಿವರಿಸಿದ್ದರು. "ಅವರೊಬ್ಬ ಧನಾತ್ಮಕ ಶಕ್ತಿ. ಬೆಂಕಿಯ ಕಿಡಿ. ಪಾದರಸದಂತೆ ಇದ್ದರಂತೆ. ಬೆಂಗಳೂರಿನ ಬಗೆಗೆ ಅನೇಕ ಕನಸುಗಳನ್ನು ಕಟ್ಟಿಕೊಂಡಿದ್ದರಂತೆ. ಹಾಗಾಗಿ ಅವರು ಒಂದು ರೀತಿಯಲ್ಲಿ ಸ್ಪೂರ್ತಿ ನನಗೆ. ಕ್ರಿಯೇಟಿವ್ ಆಗಿ ಏನಾದರೂ ಮಾಡಬೇಕು ಎಂಬ ಆಸೆ. ಹಾಗಾಗಿ. ಯಾವಾಗಲೂ ಆಟೋ ಹಿಂದೆ ಸಾಲುಗಳನ್ನು ಬರೆದಿರುವುದು ನಾನು ನೋಡಿದ್ದೆ. ನಾನ್ಯಾಕೆ ಬರೆಯಬಾರದು ಎಂದು ಒಂದಷ್ಟು ಆಟೋಗಳ ಚಿತ್ರಗಳನ್ನು ಡೌನ್‌ಲೋಡ್ ಮಾಡಿ ಅದರ ಹಿಂದೆ ನನ್ನ ಒಂದು ವಾಕ್ಯದ ಕೋಟ್ ಗಳನ್ನು ಬರೆಯಲು ಶುರುಮಾಡಿದೆ. ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಓದುಗರು ಈ ದಿನ ಯಾವ ಆಟೋ ಬರುತ್ತದೆ ಎಂದು ಕಾಯುತ್ತಾ ಇದ್ದರು.  ಅಲ್ಲದೇ "ಸಿಂಹನೋಟ- ದಿನಪತ್ರಿಕೆಯ" ಸಂಪಾದಕರಿಗೆ ಅಚ್ಚರಿಯಾಗಿ ಅದನ್ನು ತಮ್ಮ ಪತ್ರಿಕೆಯಲ್ಲಿ ದಿನವೂ ಪ್ರಕಟಿಸುತ್ತಾ ಇದ್ದರು.
ವಿದ್ಯಾರ್ಥಿ ಜೀವನದಲ್ಲಿ ಓದಿ ಗುಡ್ಡೆಹಾಕಿದ್ದು ಏನೂ ಇಲ್ಲ ಎಂದು ಅರ್ಥವಾಗಿ ಮದುವೆಯಾದ ಮೇಲೆ ಮನಸ್ಸಿನಲ್ಲಿ ಒಂದು ಹಠ ಬಂದಿತು. ಓದುವಾಗ ಕಷ್ಟಪಟ್ಟು ಓದಿ ನನ್ನ ಕನಸನ್ನು ನನಸಾಗಿಸಿಕೊಳ್ಳಲಿಲ್ಲ. ನಾನು ಯಾವುದಕ್ಕೂ ಪ್ರಯೋಜನ ಇಲ್ಲದವಳು ಎಂದಾಗಬಾರದು ,ಕೇವಲ ಮದುವೆ ಮಕ್ಕಳು ಮನೆಯ ಸೇವೆಯಲ್ಲಿ ಮುಳುಗಬಾರದು. ಹೆಣ್ಮಕ್ಕಳು ಮದುವೆಯಾದ ಮೇಲೂ ತಮ್ಮ ಆಸಕ್ತಿ ಅಭಿರುಚಿಗಳಿಗೆ ಪುಷ್ಠಿಕೊಡಬಹುದು ಎಂದು ಜಿದ್ದಿಗೆ ಬಿದ್ದು ಸಾಹಿತ್ಯ ಲೋಕದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಈ ಸಾಹಿತ್ಯ ಕೃಷಿಯಲ್ಲಿ ನನ್ನನ್ನು ತೊಡಗಿಸಿಕೊಂಡೆ. ಅದಕ್ಕೆ ಮನೆಯವರ ಸಹಕಾರವೂ ಸಿಕ್ಕಿದೆ. ಇದೇ ಹಾದಿಯಲ್ಲಿ ಮುಂದುವರಿಯುತ್ತಾ ಇದ್ದೇನೆ.
*ಸಂಗಮೇಶ* : ಇತ್ತೀಚಿಗೆ ನಿಮಗೆ ಕನ್ನಡ ಸೇವಾರತ್ನ ಪ್ರಶಸ್ತಿ ದೊರಕಿದೆ. ಅದರ ಬಗ್ಗೆ ತಿಳಿಸಿರಿ?
*ತುಳಸಿ ನವೀನ* : ಆ ಹಠವೇ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿತು‌. ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೆಳಕು ಸಂಸ್ಥೆಗೆ ಧನ್ಯವಾದಗಳನ್ನು ಹೇಳಬಯಸುವೆ. ಸಾಧನೆ ಎನ್ನುವುದು ತಪಸ್ಸು. ನಮ್ಮ ಗುರಿಯ ಕಡೆಗೆ ಮಾತ್ರ ಗಮನ ಕೊಡಬೇಕು. ಮನಸ್ಸು ಸ್ವಲ್ಪ ಚಂಚಲವಾದರೂ , ಉದಾಸೀನತೆ ಬಂದರೂ ಯಶಸ್ಸು ಸಿಗಲು ಸಾಧ್ಯವಿಲ್ಲ. ಹಾಗಾಗಿ ಕನ್ನಡ ನಮ್ಮ ಮಾತೃಭಾಷೆ. ಕನ್ನಡ ಉಳಿಸಿ ಉಳಿಸಿ ಎಂದು ಬೊಬ್ಬೆ ಹಾಕುತ್ತಾರೆ ಜನ. ಆದರೆ ನಾವೇ ಏಕೆ ಕನ್ನಡವ ಬೆಳೆಸುವ ಪ್ರಯತ್ನ ಮಾಡಬಾರದು. ಇದು ಕೂಡ ಒಂದು ಸೇವೆ. ಸಾಹಿತ್ಯ ಸೇವೆ. ಕನ್ನಡವ ಬೆಳೆಸುವ ನಮ್ಮ ಪ್ರಯತ್ನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಗುರುತಿಸಿ ಪ್ರಶಸ್ತಿ ನೀಡಿತು‌. ತುಂಬಾ ಸಂತಸದ ಕ್ಷಣವದು. ಹೆತ್ತವರಿಗೆ, ನಾನು ಕಲಿತ ಶಾಲೆಗೆ, ಸ್ನೇಹಿತರಿಗೆ ಹೆಮ್ಮೆ ತರುವ ಕೆಲಸ ಮಾಡಬೇಕು ಎಂಬುದು ನನ್ನ ಕನಸಾಗಿತ್ತು.
*ಸಂಗಮೇಶ* : ನಿಮಗೆ ಸಾಹಿತ್ಯ ಬಿಟ್ಟು ಬೇರೆ ಏನೆಲ್ಲ ಹವ್ಯಾಸಗಳಿವೆ ?
*ತುಳಸಿ ನವೀನ* : ಸಾಹಿತ್ಯ ಬಿಟ್ಟು ಓದುವುದು ಆಗಾಗ ಚಿತ್ರಬಿಡಿಸುವುದು, ಮನೆಯಲ್ಲಿ ಹೂದೋಟ ಬೆಳೆಸುವುದು , ಅಲ್ಲದೇ ಆಧ್ಯಾತ್ಮದ ಕಡೆಗೆ ಒಲವು ಜಾಸ್ತಿ. ಒಮ್ಮೆ ಶೇರ್ ಚಾಟ್ ಕನ್ನಡ ದಲ್ಲಿ ಮಹಿಳಾದಿನದ ಪ್ರಯುಕ್ತ ನಡೆಸಿದ ಲಕ್ಕಿ ವಿನ್ನರ್ ಗಳಲ್ಲಿ ನಾನು ಕೂಡ ಆಯ್ಕೆಯಾಗಿದ್ದೆ. Mother&Womb ಚಿತ್ರ ಬಿಡಿಸಿ ಕವನ ಬರೆದಿದ್ದೆ. ಆಯ್ಕೆಯಾಗಿದ್ದು ಒಂದು ಸರ್ಪ್ರೈಸ್ ನ್ಯೂಸ್ ನನಗೆ. ಖುಷಿಯಾಗಿತ್ತು.
*ಸಂಗಮೇಶ* : ಕೊನೆಯದಾಗಿ ಯುವರ್ಕೋಟ್ ನಲ್ಲಿ ಬರೆಯುತ್ತಿರುವ ಬರಹಗಾರರಿಗೆ ಏನೆಂದು ಹೇಳಬಯಸುವಿರಿ ?
*ತುಳಸಿ ನವೀನ* : ನಾನು ಮೊದಲೇ ಹೇಳಿದ ಹಾಗೆ ಯುವರ್ಕೋಟ್ ಒಂದು ಉತ್ತಮ ವೇದಿಕೆ. ನಮ್ಮ ಪ್ರತಿಭೆಯ ಅನಾವರಣಕ್ಕೆ ಎಲ್ಲೆಲ್ಲ ಅವಕಾಶಗಳು ಸಿಗುತ್ತವೆಯೋ ಅದನ್ನು ಸದುಪಯೋಗ ಪಡಿಸಿಕೊಂಡರೇ ಮಾತ್ರ ನಮಗೆ ಯಶಸ್ಸು ಸಿಗುತ್ತದೆ. ಹಾಗೆ "ಅವರಿವರು ಬರೆಯುತ್ತಾರೆ ಎಂದು ನಾನೂ ಬರೆಯುವೆ", "ನಾನು ಏನು ಎಂದು ನನಗೇ ಗೊತ್ತಿಲ್ಲ, ಗೊತ್ತಾದ ಮೇಲೆ ನಿಮಗೆ ಹೇಳುವೆ", "ತೋಚಿದ್ದು ಗೀಚುವೆ", ಸಮಯ ಕಳೆಯಲು ಬರೆಯುವೆನು" ಇಂತಹ ಬಾಲಿಶ ನುಡಿಗಳನ್ನು ಆಡುವುದು ಬಿಟ್ಟು "ಸಾಹಿತ್ಯಕ್ಕೆ ನಿಜವಾಗಿಯೂ ಸೇವೆ ಸಲ್ಲಿಸಬೇಕು. ನಿಲ್ಲಿ ನೆಲೆನಿಲ್ಲಬೇಕು" ಎಂದು ಧೃಡ ನಿರ್ಧಾರ ಮಾಡಿ ಬರೆಯಲು ಶುರುಮಾಡಿ. ಜೊತೆಗೆ ಗಾಂಭಿರ್ಯತೆ ಇರಲಿ. ಯಾವ ಕ್ಷೇತ್ರವನ್ನೂ ಕೇವಲವಾಗಿ ನೋಡಬೇಡಿ‌. ಶುಭವಾಗಲಿ💐
TULASI NAVEEN ಅವರ ಬರಹವನ್ನು ಓದಲು YourQuote ನಲ್ಲಿ ಹಿಂಬಾಲಿಸಿ. ❤


#yqinterviews #yqjogi #kannadainterview #ಕನ್ನಡ #ಸಂದರ್ಶನ #sajjan_dairies, Sindhubhargavquotes
Dedicating a #testimonial to TULASI NAVEEN.

Read Sangamesh Sajjan's thoughts on the YourQuote app at https://www.yourquote.in/sangamesh-sajjan-xkzy/quotes/sjjn-qynon

Tuesday 21 May 2019

School reopened ಮಕ್ಕಳ ಹಾಡು ಶಾಲೆಗೆ ಹೊರಟೆನು

Googleimage
*****
ಮಕ್ಕಳ ಹಾಡು: ಶಾಲೆಗೆ ಹೊರಟೆನು


ಶಾಲೆಗೆ ಹೊರಟೆನು ಅಮ್ಮ ನಾನು ಶಾಲೆಗೆ ಹೊರಟೆನು
ಗೆಳೆಯರ ನೋಡದೇ ತಿಂಗಳೇ ಕಳೆದಿದೆ
ಹರಟೆ ಹೊಡೆಯದೇ ಬೇಸರವಾಗಿದೆ
ಯುನಿಫಾರ್ಮ್ ಧರಿಸುವ ಆಸೆಯಾಗಿದೆ
ಪಾಠೀಚೀಲವು ನನ್ನನೇ ಕರೆದಿದೆ
ಶಾಲೆಗೆ ಹೊರಟೆನು ಅಮ್ಮ ನಾನು ಶಾಲೆಗೆ ಹೊರಟೆನು!


ಕೂಡಿಸಿ ಕಳೆಯಲು ಗಣಿತದ ತರಗತಿ
ಹಾಡಿ ಕುಣಿಯಲು ಕನ್ನಡವು
ಸೋಜಿಗ ಮೂಡಿಸೊ ವಿಜ್ಞಾನದ ತರಗತಿ
ಇತಿಹಾಸವ ಅರಿಯಲು ಸಾಮಾಜವು
ಎಲ್ಲವನೂ ಕಲಿಯುವ ಆತುರವಮ್ಮ ಕ್ಲಾಸಿಗೆ ಮೊದಲು ಬರುವೆನಮ್ಮ!
ಶಾಲೆಗೆ ಹೊರಟೆನು ಅಮ್ಮ ನಾನು ಶಾಲೆಗೆ ಹೊರಟೆನು!


ಗದರಿಸಿರಿ ಕಲಿಸುವ ಶಿಕ್ಷಕರು ನಮ್ಮನು ತಿದ್ದುವ ಶಿಲ್ಪಿಗಳು
ಮಮತೆಯ ತೋರಿಸಿ ಓದಿಸುತ ತಾಯಿಯ ಸ್ಥಾನವ ತುಂಬುವರು
ಬೇಧಭಾವವಿಲ್ಲವಮ್ಮ ನಾವೆಲ್ಲರೂ ಒಂದೇ ಎಂದೆಂದೂ
ಯಾವ ಬಣ್ಣ ದ್ವೇಷವಿಲ್ಲ ನಾವು ಗೆಳೆಯರು ಎಂದೆಂದೂ
ಒಗ್ಗಟ್ಟಿನ ಮಂತ್ರವ ಸಾರಲು, ಶಾಲೆಯೇ ಮೊದಲ ಗುಡಿಯಮ್ಮ
ದೇಶಕೆ ಉತ್ತಮ ಪ್ರಜೆಯಾಗಿ ನಾನು ಬಾಳುವೆ ಸರಿಯಮ್ಮ!
ಶಾಲೆಗೆ ಹೊರಟೆನು ಅಮ್ಮ ನಾನು ಶಾಲೆಗೆ ಹೊರಟೆನು!



ಸಿಂಧು ಭಾರ್ಗವ್.

Monday 20 May 2019

ಐದು ಪದಗಳ ಸಮಾಜ ಸಂದೇಶ








ಹೂವಿಗೊಂದು ಪತ್ರ

Source pick_googleimages

Source picg_oogleimages

ಆತ್ಮೀಯ ಹೂವೇ,
     ನೀನೆಂದರೆ ನನಗೆ #ಸ್ಪೂರ್ತಿ. ಮುಂಜಾನೆ ಅರಳಿ ಸಂಜೆ ಬೀಳುವ ನೀನು, ಗಾಳಿ, ಮಳೆ, ಉರಿ ಬಿಸಿಲಿಗೂ ಬಾಡದೇ ನಗುತ ನಿಂತಿರುವುದು ನನಗಂತಲ್ಲ ಎಲ್ಲರಿಗೂ ಸ್ಪೂರ್ತಿಯ ಸೆಲೆಯೇ ತಾನೆ. ಬುಡದಲಿ ನೀರು ಹಾಕಿ ಆರೈಕೆ ಮಾಡಿದರೆ ಸಾಕು ನೀನು ರಾಶಿ ರಾಶಿ ಹೂವ ನೀಡುವುದರ ಮೂಲಕ ನಿನ್ನ #ಪ್ರೀತಿ_ವಿಶ್ವಾಸವ ತೋರಿಸುವೆ. ಬೇಸಿಗೆ ಕಾಲದಲಿ ಉಸಿರ ಬಿಗಿ ಹಿಡಿದು ಕಾದು ಮಳೆಗಾಲದಲ್ಲಿ ಸಾಧ್ಯವಾಗುವಷ್ಟು ನೀರು ಕುಡಿದು ಬೆಳೆದು ಮತ್ತೆ ಉಸಿರಾಡುವೆ. ಏನೇ ಕಷ್ಟ ಬಂದರೂ ನಿನ್ನ #ಪ್ರಯತ್ನವ ನೀನು ಬಿಡುವುದಿಲ್ಲ.
     ಸಂಜೆಯೇ ಮೊಗ್ಗು ಅರಳಿಸಿಕೊಂಡು ಘಮವ ಹರಡಲು ಶುರು ಮಾಡುವೆ. ಎಲ್ಲರನೂ ತನ್ನತ್ತ ಸೆಳೆದುಕೊಳ್ಳುವೆ. ವಿಕಾರ ಮನಸ್ಸಿನ ಜನರಿಂದಾಗಿ ರಕ್ಷಿಸಿಕ್ಕೊಳಲು ಮುಳ್ಳುಗಳಿಂದ ರಕ್ಷಣೆ ಪಡೆಯುವೆ.
    ನಿಜ ನಿನ್ನನ್ನು ಹೆಣ್ಣಿಗೆ ಹೋಲಿಸುವರು. ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕು ಎಂದು ನೀನು ಸಾರಿಸಾರಿ ಹೇಳುತಿರುವೆ ನೋಡು. ಹೂವೇ, ಎಲ್ಲರಿಗೂ ಮೆಚ್ಚುಗೆಯಾಗುವ ನೀನು ಪ್ರಕೃತಿಯ ಮಡಿಲಿನಲಿ ಸದಾ ಸುಖಿಯಾಗಿರು.

ಇಂತೀ ಪ್ರೀತಿಯ,
ಸಿಂಧು

Kannada SevaRatna Award ಕನ್ನಡ ಸೇವಾರತ್ನ ಪ್ರಶಸ್ತಿ

Dear Friends,
On the occasion of Yugadi Kavitha in Bangalore Urbun Dist, I was honored with the Kannada Seva Ratna Award for promoting Kannada Language. 
🌷🍁🌷🍁🌷🍁💞💕💞💕💖💞
ನಿಮಗೊಂದು ಸಿಹಿಸುದ್ಧಿ ತಿಳಿಸಲು ಕೊಂಚ ವಿಳಂಬವಾಗಿದೆ.
ನನಗೆ ಪ್ರಸಕ್ತ ಸಾಲಿನಲ್ಲಿ ಕ.ಸಾ.ಪ ದಿಂದ ( ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ನಗರಜಿಲ್ಲೆ ಚಾಮರಾಜಪೇಟೆ ) 

"ಕನ್ನಡಸೇವಾರತ್ನ_ಪ್ರಶಸ್ತಿ" -೨೦೧೯ ದೊರಕಿದೆ.
#ಕಸಾಪಬೆಂಗಳೂರುನಗರ ಜಿಲ್ಲೆ
#ಕನ್ನಡಸೇವಾರತ್ನ_ಪ್ರಶಸ್ತಿ  #ಯುಗಾದಿಕವಿಗೋಷ್ಠಿ
#sindhubhargavquotes #kannadasevaratna_award
*******

ನನ್ನ ಪತಿರಾಯರು (ನವೀನ್ ಭಟ್ ) ನನ್ನ ಬೆನ್ನೆಲುಬು. ನನ್ನ ಆಸಕ್ತಿ ಅಭಿರುಚಿಗಳಿಗೆ ಪ್ರೋತ್ಸಾಹ ನೀಡುವವರು.

Kannada Sevaratna awad2019
ಕನ್ನಡ_ಸೇವಾರತ್ನ_ಪ್ರಶಸ್ತಿ


ಯುಗಾದಿ ಕವಿಗೋಷ್ಟಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿ ಪಡೆದ ಸಂಭ್ರಮದಲ್ಲಿ....



ಚಿನ್ಮಯ ಮುಖ್ಯಪ್ರಾಣನ ಬಂಟ. ನನ್ನ ಬರವಣಿಗೆಗೆ ಸ್ಪೂರ್ತಿ.









()********()
()*****()
()***()
(**)
(*)
()