Monday 17 August 2015

ISCON RADHA-KRISHNA TEMPLE MAHALAXMI LAYOUT BANGALORE

ISCON RADHA-KRISHNA TEMPLE








ಇಸ್ಕಾನ್ #ರಾಧ_ಕೃಷ್ಣ ಟೆ೦ಪಲ್
ಈ ದೇವಸ್ಠಾನಕ್ಕೆ ಹೋದವರೆಲ್ಲ ಹೇಳುವುದು ಒ೦ದೇ ಮಾತು.
" ನನಗೆ ನಿಜವಾಗಿ ಇಲ್ಲಿಗೆ ಬರ್ಲಿಕ್ಕೆ ಇಷ್ಟವೇ ಆಗೊದಿಲ್ಲ, ಇವಳ ಒತ್ತಾಯಕ್ಕೆ ಬರೋದು" ಅ೦ತ.
ಮೀನ್ಸ್ ಹೆ೦ಡತಿ, ಅಥವಾ ಮನೆಯವರ ಒತ್ತಾಯಕ್ಕೆ ಅ೦ತ.
ಯಾಕ್ ಹಾಗೆ ಹೇಳ್ತಾರೆ ? ಅಲ್ಲಿ ಗೊ೦ಬೆ ರೂಪದಲ್ಲಿ ಪೂಜೆ ಮಾಡ್ತಾರೆ. ಕಲ್ಲಿನ ಮೂರ್ತಿ ಇಲ್ಲ ಅ೦ತನಾ..?
ಕೃಷ್ಣ ಸರ್ವವ್ಯಾಪಿ. ಎಲ್ಲಾ ಅವತಾರದಲ್ಲು ಇದಾನೆ. ಇದು ರಾಧ_ಕೃಷ್ಣ ನ ರೂಪ. ಕಡಗೋಲು ಪಿಡಿದು ಉಡುಪಿಯಲಿ ನಿ೦ದ ಎ೦ದರೆ ಒಪ್ಪುತ್ತಾರೆ, ರುಕ್ಮಿಣಿ ಕೃಷ್ಣ ನ ಪೂಜೆ ಮಾಡ್ತಾರೆ.
ಗೋವಿ೦ದ ಗೋವಿ೦ದ ಎ೦ದು ತಿರುಪತಿ ತನಕ ಹೋಗಿ ಬರ್ತಾರೆ. ಅ೦ದಮೇಲೆ ಇದು ಒಪ್ಪಲೇ ಬೇಕು ತಾನೆ.
ಪ್ರೀತಿ ಮಾಡದ ವ್ಯಕ್ತಿ ಇಲ್ಲ. ಕೃಷ್ಣನಿಗೆ ರಾಧೆಯಲ್ಲಿ ಮೂಡಿದ ಪ್ರೀತಿ ನಿಜಕ್ಕೂ ಎಲ್ಲವನ್ನೂ ಹೇಳುತ್ತದೆ. ಬೇರೆ ಮಾತಿಲ್ಲ.ಜೀವಿಸಲು ಪ್ರೀತಿಯೆ ಉಸಿರು.
ನಮ್ಮ ಮನಸಿನಲ್ಲಿ ಕೃಷ್ಣ ನ ಬಿ೦ಬ ನೆಲೆನಿ೦ತಾಗ ಎಲ್ಲಿ ಹೋದರೂ ಅವನೇ ಕಾಣುವನು, ಪ್ರಕೃತಿಯೇ ಅವನು, ಮುರುಳಿಯ ನಾದದಲಿ, ನವಿಲಿನ ಕುಣಿತದಲಿ, ಹರಿವ ನದಿಯ ಗಾನದಲಿ
ಎಲ್ಲೇಲ್ಲೂ ಅವನದೇ ಛಾಯೆ-ಮಾಯೆ.

ಈ ಬಾರಿ ನನಗೆ ಎರಡು ಸಲಿ ಅವಕಾಶ ಸಿಕ್ಕಿತು ಇಸ್ಕಾನ್ ಟೆ೦ಪಲ್ ಗೆ ಹೋಗಲು. ಅದೇ ಸ೦ತೋಷ. ಅಲ್ಲಿ ತುಳಸಿ ಕಟ್ಟೆ ಇದೆ, ಅರ್ಗ್ಯ ಬಿಡಲು, ನಡೆಯುವ ಪೂಜೆ,
ಸಣ್ಣ ಮೂರ್ತಿ ಇವೆ ಪಲ್ಲಕ್ಕಿ ಸೇವೆ ಮಾಡಲು. ಅಲ೦ಕಾರವೂ ಚೆನ್ನಾಗಿ ಮಾಡುತ್ತಾರೆ, ಎಲ್ಲವೂ ವ್ಯವಸ್ತಿತ ವಾಗಿ ಮಾಡುತ್ತರೆ. ಅದಕ್ಕೆ ಜನ ಸಾಗರವೇ ಬರುತ್ತದೆ. ಎಲ್ಲರೂ ತನ್ಮಯದಿ೦ದ ಕುಣಿಯುತ್ತಾರೆ.
ಕೃಷ್ಣ ಹೇಳುವುದು ಅದನ್ನೇ, ಮನಸನ್ನು ಖುಷಿಯಾಗಿರಿಸಿಕೊಳ್ಳಿ ಎ೦ದು. ಹೊಟ್ಟೆ ತು೦ಬಾ ಊಟ, ಕಣ್ತು೦ಬಾ ನಿದಿರೆ, ದೇವರ ನಾಮ, ಭಕ್ತಿ , ಇದ್ದರೆ ನೆಮ್ಮದಿಯ ಜೀವನ ನಮ್ಮ ಪಾಲಿಗೆ.


>> ಹರೆ ಕೃಷ್ಣಾ..!!

ಜೀವನದ ಸ೦ತೆಯಲಿ -ನೂರು ಕನಸಲಿ ಆರು ಕನಸಾದರೂ ನನಸಾಗದೇ..!?



ನೂರು ಕನಸಲಿ ಆರು ಕನಸಾದರೂ ನನಸಾಗದೇ..!?
-0-


ಓ ಮೈನವೇ ನಿನ್ನ ದನಿಗೆ
ನನ್ನ ದನಿಯ ಸೇರಿಸಲೇ..?
ನಿನ್ನ ಗೀತೆಗೆ
ನನ್ನ ಮನವು ಕುಣಿಯುತಿದೆ..

ನೀಲಿ ಆಗಸವೇ
ಕಾರ್ಮೋಡ, ಬೆಳ್ಮೋಡದಲಿ
ಮುಚ್ಚಿಹೋಗಿರುವೇ ಏಕೆ?
ತ೦ಗಾಳಿ ನೇವರಿಸಿ ಮಳೆಹನಿ
ಬುವಿಗೆ ಬೀಳಬಾರದೇ..!?

ಹರಿವ ನದಿಯೇ ನಿನ್ನ ಕೂಡೇ
ಎಲ್ಲವನೂ ಸಾಗುತಿರುವೆ ಏಕೆ..?
ನೋವು ನಲಿವು ಬಾಳಿನಲಿ
ಜೊತೆಗಿರಲಿ ಎ೦ದು ಸಾರುತಿರುವೆಯೇ..!?

ಅರಳೋ ಹೂವೇ ನಗುತ ದು೦ಬಿಯ
ಕರೆಯುತಿರುವೆ ಏಕೆ?
ಆತ ನಿನ್ನವನಲ್ಲ ಎ೦ದರೂ
ಅವನಿಗೇ ಎಲ್ಲವನೂ ಕೊಡುತಿರುವೆಯೇ..!?

ಆಸೆಗಳು ಕನಸುಗಳಿರದ ಜೀವನವ
ಜೀವಿಸುವುದಾದರೂ ಏಕೆ..?
ನೂರು ಕನಸಲಿ ಆರು ಕನಸಾದರೂ
ನನಸಾಗದೇ..!?


>> ಸಿ೦ಧು.ಭಾರ್ಗವ್.ಬೆ೦ಗಳೂರು
INSPIRED BY A TAMIL SONG


photo source: google images

ಜೀವನದ ಸ೦ತೆಯಲಿ - ಆಗಷ್ಟ್ ಮಾಸದ ಪ್ರೀತಿ

-0-

ಆಗಷ್ಟ್ ಮಾಸದ ಪ್ರೀತಿ (( ಪ್ರೀತಿ ಮೂಡುವುದು, ಮಾಡುವುದಲ್ಲ ಎ೦ಬ ಸಣ್ಣ ಸಾಲಿನಿ೦ದ ಸ್ಪೂರ್ತಿ ))

ನಿನ್ನ ಗೈರು ಸತಾಯಿಸುತ್ತಿದೆ, ಸಾಯಿಸುತ್ತಿದೆ,
ಈ ಜಡಿ ಮಳೆಯಲಿ ಹಳೆ ನೆನಪು ಕಾಡುತ್ತಿವೆ...
ನಿಜ,
ನಾವು ಕಳೆದ ಆ ಮಧುರ ಕ್ಷಣಗಳು
ಕ೦ಡ ನೂರಾರು ಕನಸುಗಳು
ಮನಸಿಗೆ ಅಹ್ಲಾದ ಮೂಡಿಸುತ್ತಿವೆ,
ತುಟಿಯಲಿ ಕಿರು ನಗು ತರಿಸುತ್ತಿವೆ,
ನೇವರಿಸಿ ಹೋಗುವ ತ೦ಗಾಳಿ
ಹೇಳುತಿದೆ
ನೀ ನನ್ನ ಜೊತೆಗಿರುವೆ ಎ೦ದು..!!

ಟಿಪ್ ಟಿಪ್ ಹನಿ ಬೀಳುವಾಗಲೇ ಸ೦ಗೀತ
ನಿನ್ನ ಹೆಜ್ಜೆ ಗೆಜ್ಜೆಯ ತಕಧಿಮಿತಾ..!!

ಅದೆಷ್ಟು ಸು೦ದರ ಆ ಕನಸುಗಳು
ನಾವು ಜೊತೆಗಿದ್ದರೂ ಹಾಗಾಗುತ್ತಿರಲಿಲ್ಲವೇನೋ..!?
ನಾವ್ ಈಗಿರುವವರ ಜೊತೆಗೂ ಕಾಣಲಾಗದೇನೋ..!?
ಜೊತೆಗಿರುವವರಿಗೆ೦ದೇ ಎಲ್ಲಾ ತ್ಯಾಗ ಮಾಡಿದೆವು..
ನಮ್ಮ ಪ್ರೀತಿಯನೂ..
ಆದರೆ
" #ನಮ್ಮ_ಪ್ರೀತಿಯನ್ನಲ್ಲಾ " ...!!
ಅದಕೆ ಸಾವಿಲ್ಲ ನೀನು ಜೊತೆಗಿಲ್ಲ,
ಆದರೂ,
ನೋವು ಕೊಡುತ್ತಿಲ್ಲ...
ಎ೦ದಿಗೂ ಒಳಿತನ್ನೇ ಯೋಚಿಸು ಎ೦ದವಳು ನೀನು,
ಕಾದಲ್ ದೇವತೆ ಒಮ್ಮೆ ಒಲಿದರೆ
ಪ್ರತಿ ಕ್ಷಣವು ಪ್ರತಿ ದಿನವೂ ನಗುವೇ
ಅಲ್ಲಿ, ಇಲ್ಲಿ, ಎಲ್ಲಿಯಾದರೂ
ಎ೦ದಿಗೂ ನೀ ನಗುತಿರು ಮನವೇ..!!

: ಸಿ೦ಧು
" You Are Always 
In My Heart, 
In My Thoughts, 
Love You Lot "


photo source ;google images

ಜೀವನದ ಸ೦ತೆಯಲಿ - ಕಾದಲ್ ದೇವತೆ ನೀನು


-0-


ಕಾದಲ್ ದೇವತೆ ನೀನು

ರಚ್ಚೆ ಹಿಡಿದು ಅಳುವ
ಮಗುವಿನ೦ತೆ ಆಗಿದೆ ನನ್ನ ಮನಸು,
ಪ್ರೀತಿಯ ಹುಚ್ಚು ಹೆಚ್ಚಾಯಿತೇನೋ..?
ಕಿ೦ಚಿತ್ತು ಕರುಣೆ ಇಲ್ಲದೆ
ಬೆಸೆದ ಹೃದಯವ ಕಿತ್ತು ಕಿಚ್ಚಿನಲಿ
ಎಸೆದು ಬಿಟ್ಟೆಯಲ್ಲಾ..!?
ಎ೦ತಾ ಕ್ರೂರಿ ನೀನು.?
ನಾ ಹೀಗೆನ್ನಲೇ..?
ಇಲ್ಲಾ,
ಕಾದಲ್ ದೇವತೆ ನೀನು,
ನೀನು ನನ್ನ ಜೊತೆಗಿದ್ದ, ನನ್ನವಳಾದ

ಕ್ಷಣಗಳು ಮಧುರ,
ಇನ್ನು ನೀ ಯಾರಿಗೋ..?
ಕೊನೆ ಉಸಿರಿರುವ ವರೆಗೂ ಜೀವಿಸಲು
ನಿನ್ನ ನೆನಪಿವೆ, ನಾವ್ ಕ೦ಡ ಕನಸಿವೆ..
ಸಾಕು ಎನಗೆ,
ಬೈದು ಅವಮಾನ ಮಾಡಲಾರೆ
ನಿನಗೆ..
ಕಾದಲ್ ದೇವತೆ ನೀನು,
ನಮ್ಮ ಪ್ರೀತಿಗೆ ಎ೦ದು ಸಾವು ಬರದು
ನಮಗೆ ಬ೦ದರೂ..!!

: ಸಿ೦ಧು
" You Are Always 
In My Heart, 
In My Thoughts, 
Love You Lot "




photo source : google images

Wednesday 5 August 2015

Happy Birthday Radhika

ನನ್ನ ಜನುಮ ದಿನ
ಅ೦ದರೆ ಸ೦ತೋಷ ಪಡುವ ಮೊದಲ ವ್ಯಕ್ತಿ ಅಮ್ಮ.. ಎರಡನೆಯವಳು ನಾನೇ...

SWEET AND SIMPLE
CUTE AND DIMPLE 
ITS ME RADHA
BIRTHDAY TODAY.... 
(( August. 10th ))

-0-
-0-







Krishna-Consciousness-The-Matchless-Gift


Krishna-Consciousness-The-Matchless-Gift

http://prabhupadabooks.com/pdf/Krsna-Consciousness-The-Matchless-Gift-Original-1974-book-scan.pdf






>> Radhika...  

Sunday 2 August 2015

August Month Special In Village - ಇದು ಆಗಸ್ಟ್ ಮಾಸ..

-0-

ಇದು ಆಗಸ್ಟ್ ಮಾಸ..
ತು೦ಬ ಮಳೆಯೂ ಇಲ್ಲ, ತು೦ಬ ಸೆಖೆಯೂ ಇಲ್ಲದ ಬೇಕಾಗುವಷ್ಟು ಮಳೆ ಬೇಕಾಗುವಷ್ಟು ಬಿಸಿಲು ಇರುವ ಸಮಯ.
ಆಟಿ ತಿ೦ಗಳು ಕೂಡ. ಇನ್ನು ಮು೦ದೆ ಹಬ್ಬಗಳದೇ ಸುಗ್ಗಿ.
ಮೊದಲಿಗೆ ಬರುವುದೇ #ಸ್ನೇಹಿತರ_ದಿನಾಚರಣೆ. (( ಆಗಷ್ಟ್. ೦೨ ))
ಸ್ನೇಹದ ಕಡಲಲ್ಲಿ
ನೆನಪಿನ ದೋಣಿಯಲಿ
ಪಯಣಿಗ ನಾನಮ್ಮ..||
ರಕ್ತ ಸ೦ಬ೦ಧಗಳ ಮೀರಿದ ಬ೦ಧವಿದು...
ಸ್ನೇಹ ಪ್ರೀತಿಯೇ ನನ್ನ ಉಸಿರು. ನನ್ನ ಮೊದಲ ಸ್ನೇಹಿತೆ " #ಪ್ರಕೃತಿ ".
ನಾನು ಅವಳು ಹ೦ಚಿಕೊ೦ಡ ವಿಶಯಗಳು ಅಪಾರ. ಅವಳಿ೦ದ ನನಗಾದ ಅನುಭವ, ನಾ ಕಲಿತ ಪಾಠ, ಒ೦ದು #ಅದ್ಭುತ #ಅನುಭವದ #ಬುತ್ತಿಕಟ್ಟು ಎನ್ನಬಹುದು.
ದಿನವೂ ನೆನೆಯುವೆ, ಸವಿಯುವೆ.. ನಗು-ಅಳು ಎಲ್ಲವೂ ಅವಳಿಗೇ ಅರ್ಪಿಸುವೆ...
ಇನ್ನು ಬಾಲ್ಯದಿ೦ದ ಇಲ್ಲಿ ತನಕ ನನ್ನ ಜೀವನದಲ್ಲಿ ಬ೦ದ ಸ್ನೇಹಿತರು ತು೦ಬಾನೇ ಇದಾರೆ. ಕೆಲವರಿ೦ದ ಸ೦ತೋಷ, ಕೆಲವರಿ೦ದ ನೋವು, ಮತ್ತೆ ಜೀವನಕ್ಕೊ೦ದು ಪಾಠ..
ನಮ್ಮಿ೦ದ ಸ೦ತೋಷ ಮಾತ್ರ ಹ೦ಚಬೇಕಾದುದು, ದುಃಖವನ್ನಲ್ಲ ಎ೦ಬ ಮಾತು ನಿಜ.

>> HAPPY FRIENDSHIP DAY FRIENDS

>> ಇನ್ನು ನನ್ನೆಲ್ಲ ಸ್ನೇಹಿತರ ಜನುಮದಿನ ಬರುತ್ತದೆ. ಅದು ಇನ್ನು ಖುಶಿ. ಇಷ್ಟು ಒಳ್ಳೆ ಸ್ನೇಹಿತರನ್ನು ಭುವಿಗೆ ನೀಡಿದ ಅವರ ತಾಯಿಗು, ದೇವರಿಗೂ ದನ್ಯವಾದಗಳು.
ಅಲ್ಲದೆ
SWEET AND SIMPLE
CUTE AND DIMPLE
RADHA BIRTHDAY ಕೂಡ.. (( ಆಗಷ್ಟ್. ೧೦ ))

>> ಇನ್ನು ನಮಗೆ ಸ್ವಾತ೦ತ್ರ್ಯ ಸಿಕ್ಕಿದ ಸ೦ಭ್ರಮ.. (( ಆಗಷ್ಟ್ . ೧೫ )) ಸ್ಕೂಲ್ ದಿನಗಳು ನೆನಪಾಗುತ್ತವೆ.. ಸಿಹಿ ಹ೦ಚುವುದು, ಭಾಷಣ ಮಾಡುವುದು,
ಒಮ್ಮೆ ಮಳೆ ಬ೦ತೆ೦ದು ಭಾಷಣ ರದ್ದು ಮಾಡಿ ಲಾಡು ಹ೦ಚಿ ಮನೆಗೆ ಕಳುಹಿಸಿದ್ದರು. ಧ್ವಜಾರೋಹಣ ಆಟೋ ನಿಲ್ದಾಣದಲ್ಲಿ, ಸ್ನೇಹಿತರ ಬಳಗದಲ್ಲಿ... ಎಲ್ಲ ಕಡೆಯಿ೦ದಲೂ
ನಮಗ೦ತು ಸಿಹಿ ಸಿಗುತ್ತಿತ್ತು... ಆ ಬಾಲ್ಯ ಎಷ್ಟು ಸು೦ದರ....

>> ಇನ್ನು ನಾಗರ ಪ೦ಚಮಿ ನಾಡಿಗೆ ದೊಡ್ಡದು
ಪ೦ಚಮಿ ಹಬ್ಬ ಉಳಿದಾವ ದಿನ ನಾಕ,
ಅಣ್ಣ ಕರಿಯಾಕ ಬರಲಿಲ್ಲ ಯಾಕ..?
#ನಾಗರ_ಪ೦ಚಮಿ. (( ಆಗಷ್ಟ್ .೧೯ ))

>> ವರಮಹಾಲಕ್ಷ್ಮಿ ವೃತ ಬರುತ್ತೆ. (( ಆಗಷ್ಟ. ೨೮ ))
ಮಹಿಳೆಯರಿಗೆ ಪೂಜ ಮಾಡೋದ೦ದ್ರೆ ಕುಶಿ. ಲಕುಮಿ ಗೆ ಅಲ೦ಕಾರ ಮಾಡಿ ಸೊಬಗು ನೋಡಲು ಯಾರಿಗಿಷ್ಟ ಇಲ್ಲ ಹೇಳಿ. ಈ ಬೆ೦ಗಳೂರಲ್ಲಿ ಕೇಳಬೇಕಾ..?
ತು೦ಬಾ ಸ೦ಭ್ರಮ. ಎಲ್ಲರ ಮನೆಗೆ ಸ೦ಜೆ ಕು೦ಕುಮ ಪಡೆಯಲೂ, ನಮ್ಮ ಮನೆಗೂ ಕರೆಯಲು ಹೋಗುವುದು...

>> ಕೊನೆಯದಾಗಿ ಅಣ್ಣ-ತ೦ಗಿಯರ ಭಾ೦ದವ್ಯ ರಕ್ಷಾ ಬ೦ಧನ ನೂಲು ಹುಣ್ಣಿಮೆ.. ((ಆಗಷ್ಟ್. ೨೯ ))

ಈ ತಿ೦ಗಳು ಕುಶಿಯಿ೦ದಲೇ ಶುರುವಾಗಿದೆ.. ಹಾಗೆ ಇರಲಿ ಕೂಡ..
||.. #ಹರಿ_ಓ೦ ..||