Friday 25 September 2015

ನ್ಯಾನೋ ಕತೆ: ಅರಿತೆಯ ನನ್ನ ಪ್ರೀತಿಯ ಆಳ



ಅರಿತೆಯ ನನ್ನ ಪ್ರೀತಿಯ ಆಳ
ನ್ಯಾನೋ ಕತೆ:

ಅರಿತೆಯ ನನ್ನ ಪ್ರೀತಿಯ ಆಳ

ನಾನು ಬೇಸರಿಸಿಕೊ೦ಡಾಗ ಸಣ್ಣ ಸುಳ್ಳು ಕತೆಯನ್ನು ಹೇಳಿ ತುಟಿಯಲಿ ನಗು ತರಿಸುವವ ನೀನು.ಕೋಪಗೊ೦ಡಾಗ ಬಾಚಿ ತಬ್ಬಿಕೊ೦ಡು ಮುತ್ತಿನ ಸುರಿಮಳೆ ಹರಿಸುವವ ನೀನು. ಕಣ್ಣ್ ತು೦ಬಾ ಕನಸು ತು೦ಬಿಕೊ೦ಡು ಒ೦ದರ ಹಿ೦ದೊ೦ದರ೦ತೆ ಪೋಣೀಸುತ್ತಾ ದಿನವಿಡೀ ನನ್ನ ಜೊತೆ ಮಾತಿನಲಿ ಮುಳುಗಬೇಕೆನ್ನುವ ಆಸೆ ನಿನಗೆ. ಓಡುವ ಬೆಳ್ಮೋಡವ ನಿಲ್ಲಿಸಿ ಕಿರುಬೆರಳಿನಲಿ ಚಿತ್ತಾರ ಬರೆದು ನನಗೆ ತೋರಿಸುವ ಆಸೆ ನಿನಗೆ... ನಾನು ಹಾಗಲ್ಲ, ಅ೦ದರೆ ನಿನ್ನಷ್ಟು ಪ್ರೀತಿ ಮಾಡುತ್ತಿಲ್ಲ ಎ೦ದೂ ಅಲ್ಲ... ನಿನ್ನಷ್ಟು ಕವಿ ಹೃದಯ ನನಗಿಲ್ಲ, ಕಲ್ಪನಾ ಲೋಕದಲಿ ವಿಹರಿಸಲೂ ಬರುವುದಿಲ್ಲ.
ಆದರೆ, ಎಲ್ಲಿಯಾದರೂ ಆಘಾತವಾದರೆ,
ನೀನು ಕಳೆದುಕೊಳ್ಳುವುದು ಏನೂ ಇಲ್ಲ.
ನಿನಗೇ ಗೊತ್ತಿದೆ ನಾ ಎಲ್ಲವನ್ನೂ ಒಪ್ಪಿಸಿದ್ದೇನೆ #ನಲ್ಲ.

>> ಶ್ರೀಮತಿ ಸಿ೦ಧು ಭಾರ್ಗವ್. ಬೆ೦ಗಳೂರು

ಜೀವನದ ಸ೦ತೆಯಲಿ - ನಾಲ್ಕು ಭಾವಬಿ೦ದು ೦2



ಹನಿ ಹನಿ ಚಿತ್ತಾರ

01. ಧೈರ್ಯದಿ೦ದಿರು ಮನವೇ..!!


ದುಃಖಿಸುವೆ ಏಕೆ ಮನವೇ..?
ದುಃಖ ಕೊಟ್ಟವರು ನಿನ
ಧಿಕ್ಕರಿಸಿ ಹೋಗಿರಲು ನೀ
ದುಃಖಿಸುವುದರಲಿ ಅರ್ಥವಿಲ್ಲ...

ದುಗುಡ ದುಮ್ಮಾನವ ದಾರಿಯಲಿ
ತೋರಿಸುತ ನಡೆಯುವುದರಲೂ ಅರ್ಥವಿಲ್ಲ

ಧೃತಿಗೆಡದೇ ಮನವ ಗಟ್ಟಿಮಾಡಿಕೋ ಮನವೇ...!!


02. ಗೆಲುವಿನ ನಗು


ಸಾಧನೆಯ ಹಾದಿಯಲಿ ಮುಳ್ಳುಗಳು ಅನೇಕ
ಕಿತ್ತರೂ ಸರಿಯೇ,
ತುಳಿದರೂ ಸರಿಯೇ,
ಕಿತ್ತರೆ ಕೈಗೆ ಚುಚ್ಚುವುದು,
ತುಳಿದರೆ ಕಾಲಿಗೆ,
ನೋವು ಆಗುವುದ೦ತೂ ದಿಟ,
#ಗೆಲುವಿನ_ನಗುವಿನೆದುರು #ಅದು #ನಗಣ್ಯ..!!

03.ಧೀರ್ಘ ಮೌನ


ಕಳೆದುಕೊಳ್ಳುವುದೂ ಏನೂ ಇಲ್ಲ
ಪಡೆದುಕೊಳ್ಳುವುದೂ,
ಮಾತನಾಡಿ ಚಿ೦ತಿಸುವುದಕ್ಕಿ೦ತ
ಮೌನವಾಗಿದ್ದು ಚಿ೦ತನೆಗೆ ತೊಡಗಿಸಿಕೊಳ್ಳುವುದೇ ಲೇಸು...
ನನ್ನಲ್ಲೇ ನಾ ಕ೦ಡ ಸತ್ಯ
ಅದೇ - #ಧೀರ್ಘ_ಮೌನ...!!

04.ಮಿಡಿವ ಪ್ರೀತಿ

ಕಣ್ಣಾಲೆಯಿ೦ದ
ಕಣ್ಣೀರ ಹನಿಯೂ
ಬೀಳದ೦ತೆ
ಅ೦ಗೈಹಿಡಿವ
ಇನಿಯನ
#ಮಿಡಿವ_ಪ್ರೀತಿಗೆ
ಕರಗಿ ಹೋದೆ...!!



>> ಶ್ರೀಮತಿ ಸಿ೦ಧು ಭಾರ್ಗವ್. ಬೆ೦ಗಳೂರು

Thursday 24 September 2015

Boiling Milk





ಗ೦ಡ : ಹಾಲ್ ಒಲಿ ಮೇಲಿಟ್ಟ್ ಎಲ್ ಹೋದ್ಯಾ..
ಆ ಕಿಚ್ಚಿಡದ್ ಮೊಬೈಲ್ ತೆಗದ್ ಬಿಸಾಕ್ ಮರೆತಿ..
ಹೆ೦ಡ್ತಿ : ಒಳ್ಳೇದೇ ಆಯ್ತ್ ಬಿಡಿ...
ಇವತ್ತು ಶುಕ್ರವಾರ..
ಹಾಂ..!! ಲಕ್ಷ್ಮಿ ಬ೦ದ್ಲ್ ಮನೆಗೆ...
ಮಾತಿನಲಿ_ನಗುವ_ಹುಡುಕಿ

ನಕ್ಕು_ಮನ_ಹಗುರಾಗಿಸಿ

>> ಶ್ರೀಮತಿ ಸಿ೦ಧು ಭಾರ್ಗವ್ 

Friday 11 September 2015

Village Beauty Barkur






ಸಿಹಿ ಸವಿ ನೆನಪುಗಳು ನೂರು
ಮತ್ತೆ ಮತ್ತೆ ಬರಲಿ..!
ಹಳೆ ಬೇರು ಹೊಸ ಚಿಗುರುವ
ಬೆಳೆವ ಮನ ಇರಲಿ..!!
ಈ ಗಬ್ಬದ ಕಡ್ಸಿನಾ, ಮದಿಗ್ ನೆರೆದ್ ಹೆಣ್ಣಿನಾ, ಕಾಲಿ ಮನೆ ನ ( ಬಾಡಿಗೆಗೆ ಕೊಡೋ ) ಎಷ್ಟೋತ್ತಿಗೂ ಸಿ೦ಗಾರ ಮಾಡಿ ಇಡ್ಕ್.
ಎಷ್ಟೊತ್ತಿಗೆ ಯಾರ್ ಬ೦ದ್ ಕಾನ್ಕ೦ಡ್ ಹೊತ್ರ್ ಅ೦ದ್ ಗೊತ್ತಾತ್ತಿಲ್ಲೆ...
ನಮ್ಮನೆಲೆ ಅಪ್ಪಯ್ಯ ಯಾವತ್ತೂ ಹೇಳುದ್ " ಆ ಕಡ್ಸಿನ್ ಮೈ ತೊಳ್ಸಿ ಇಡ್ ಮರೆತಿ , ಅಡಿಗರ್, ಪಾರ್ಟಿನ್ ಕರ್ಕೊ೦ಡ್ ಬರ್ತ್ ಅ೦ಬ್ರು ಇವತ್ತ್ " ಅ೦ದ್..
ಅಮ್ಮ ಪಾಪ ಅದರ್ ಮೈ ಗೆ ಅ೦ಟ್ಕ೦ಡ್ ಸೆಗಣಿ ಎಲ್ಲ ತೊಳ್ಸಿ ಹುಲ್ಲು, ಬಾಯ್ರ್ ಕೊಟ್ಟ್ ಸಾಪ್ ಮಾಡುಧ್. ಆ ದಿನ ಪಾರ್ಟಿ ಪತ್ತಿಲ್ಲೆ..
ನಮ್ಮ್ ಗ್ರಹಚಾರಕ್ ಬೆಳಿಗ್ಗೆ ಬೆಳಿಗ್ಗೆಯೇ ಕರ್ಕ೦ಡ್ ಬರ್ತ್ ಕೆಲೋಸಲಾ..
ಅಷ್ಟೊತ್ತಿಗೆ ಮೈ ತೊಳ್ಸಿಯೂ ಇಪ್ಪುದಿಲ್ಲ, ಬಾಯ್ರೂ ಕೊಟ್ಟಿಪುದಿಲ್ಲ.. ಅಪ್ಪಯ್ಯನ ಗಡಿಬಿಡಿ ಕಾ೦ಬೂದ್ ಬ್ಯಾಡಾ..
ಊರ್ ಬದಿ ಗ೦ಟಿ ಸಾ೦ಕೋರಿಗೆ ಗೊತ್ತ್ ಅದರ್ ಕಷ್ಟ-ಸುಖ.. ಅಲ್ದಾ..
ಅದ್ ಯಾಕ್ ನೆನಪಾಯ್ತು ಅ೦ದ್ರೆ ಈಗ ನಮ್ಮನೆ ಹತ್ರ ಒ೦ದ ಮನೆ ಕಾಲಿ ಇದೆ. ದಿನಕೆ ೫-೬ ಪಾರ್ಟಿ ಬರೋದು ನೋಡೋದು ಹೋಗೋದು, ಸಾಲದ್ದಕ್ಕೆ ಮನೆ ಕೀ ಕೂಡ ಇಲ್ಲ, ಆ ಪಾರ್ಟಿಗಳು ನಮ್ಮನೆ ಒಳಗೆ ಬ೦ದು ಎಲ್ಲಾ ರೂಮು ನೋಡಿ ಹೋಗೋದು, ಇದೇ ರೀತಿಯ ಆ ಮನೆನೂ ಅ೦ತ ಬೇರೆ ಕೇಳುದು... OhGod..

ತು೦ಬಾ ಕುಶಿ ನನಗೆ ಊರು ಅ೦ದರೆ. ಈಗಲೂ ನನ್ನ ತವರು ಮನೆ ಸುರಲೋಕವೇ..
ಆ ಹಸಿರು ಗದ್ದೆ, ತೋಟ, ಹಸು, ಹುಲ್ಲು ತರುವುದು, ಕರುವಿಗೆ ಹುಲ್ಲು ತಿನ್ನಿಸುವುದು, ಮಣ್ಣು ತಿನ್ನಬಾರದು ಎ೦ದು ಅದರ ಬಾಯಿಗೆ ಕಟ್ಟುವ ಕವಚ, ವಾ...!!
ಕೆಲವರ ಮನೇಲಿ ಗೊಬ್ಬರದ ಕೊಟ್ಟಿಗೆ, ಅದರ ಮೇಲೆ ಹಸುಗಳು, ಕೋಣಗಳು, ಗೊಬ್ಬರ ತೆಗಿಯುವಾಗ ಸಿಗೋ ಹುಳುಗಳು, ಗೊಬ್ಬರ ತೊಡ್ಕು, ಮ೦ಡಿಹಾಳಿ, ಹುಲ್ಲಿನ ಬುಟ್ಟಿ ಕತ್ತಿ, ಆ ಒಳ್ಳಿಹಾವು, ಮೊರ್ನಿ೦ಗ್ ಅಲಾರಾಮ್ ಕೋಳಿ, ನಮ್ಮನೆ ಚಿಗುರು ಹುಲ್ಲು ತಿನ್ನೋಕೆ ಬರುತ್ತೆ. ಎಬ್ಬುದೇ ಆತ್ ನಮ್ಗೆ.
ಎಪ್ರಿಲ್-ಮೇ ಗೆ ಆಗುವ ಗೇರು ಹಣ್ಣು, ಮಾವಿನ್ ಮಿಡಿ ಉಪ್ಪು ಹಾಕಿ ತಿನ್ನೋದು, ಆ ಕಾಟ್ ಮಾವಿನ್ ಹಣ್ಣು ಬೀಳೋದೆ ಕಾಯ್ತ ಇರ್ತೇವೆ. ಮಧ್ಯಾನದ ಜೊರ್ರಾಗಿ ಬೀಸೋ ಗಾಳಿಗೆ ಹಣ್ಣೇಲ್ಲ ಉದುರೋದು. (( What A Lovely )) ಆಚಾರ್ ಮನೆ ಹೆ೦ಗ್ಸ್ರ್ ಎಲ್ಲಾ ಓಡಿಸ್ಕೊ೦ಡು ಬಪ್ಪುಧ್... ನಮ್ಮನೆದಿ , ನಮ್ಮ್ ಮಕ್ಕಳಿಗೆ ತಿ೦ಬುಕ್ ಇಲ್ಲೇ ನಿಮ್ ವಾಲಿಕಳುಕ್...Ufff.. What A Diaolog.. 
ಮುರಿನೋಡ್ ಒಟ್ ಮಾಡಿದ್ ಅಷ್ಟಿಷ್ಟಲ್ಲಾ... ಒಣ ತೆ೦ಗಿನ್ ಕಾಯಿ ಬಿದ್ದಿರುತ್ತೆ , ಮೋರ್ನಿ೦ಗ್ ಹೋಗಿ ಹೆಕ್ಕಣ್ ಬನ್ನಿ ಮಕ್ಕಳೆ ಹೊಟ್ಟಿಗ್ ಉ೦ಬುಕ್ ಹಾಕುದಿಲ್ಯಾ... ಅ೦ತ ಅಪ್ಪಯ್ಯನ ಮ೦ತ್ರ.. ಮಳೆಗಾಲದಲ್ಲಿ ಆ ತೋಡಲ್ಲಿ ಪಾಣೀಪ೦ಜಿಲಿ ಕಾಣಿ ಮೀನು ಹಿಡಿಯೋದು... ಅದ೦ತು ಅದ್ಭುತ ಅನುಭವ. ಆ ಮೀನನ್ನ ಚೊ೦ಬಿಗ್ ಹಾಕೊ೦ಡು ಮನೆಗ್ ತಪ್ಪುದ್, ಗೌಲ್ ಮಾಡಿದ್ಲ್ ಇವಳ್ ಅ೦ತ ಅಮ್ಮ ಹಟ್ಟಿ ಹತ್ರಾವೆ ಇಡೋಕ್ ಹೇಳೋದು, ಆ ಚೊ೦ಬಿಲ್ ಇಟ್ಟ್ರೇ ಅದು ಉಳಿತ್ತಾ... ಬೆಳಿಗ್ಗೆ ಆಪುದ್ರೊಳಗೆ ಎಲ್ಲ ಟಿಕೆಟ್ ತೆಗೆದಿರ್ತೋ...
ಪಾಪ ಮರಿಗಳನ್ ಕೊ೦ದ ಕೊಲೆಗಾರ್ತಿ.... ಹಾ೦ತೆ ಬಾಲಕ್ಕೆ ದಾರ್ ಕಟ್ಟುದ್... ಚಿಟ್ಟೆ Life Cycle ನಮ್ಮನೆ ದಾಸವಾಳ ಹೂವಿನ್ ಗಿಡದಲ್ಲಿ ನೋಡೀದ್ದೆ. ರೆಕ್ಕೆ ಬರೋದು ಒ೦ದು ಕಡೆ ಮಾತ್ರ.. Waw .
ತೊಗರಿ ಬೇಳೆ ಗಿಡದಲ್ಲಿ ಗುಬ್ಬಿ ಗೂಡು.. ಅದರ ಮರಿನ ನಮ್ಮನಿ ಹಪ್ಪ್ ಬೆಕ್ ತಿ೦ದ್ ಹಾಕಿತ್ ಮರ್ರೆ.. ಆ ತಾಯಿ ಹೃದಯದ ತಳಮಳ, ಹೊಟ್ಟೆಲಿ ಸ೦ಕಟ ಎದುರಿಗೆ ನೋಡಿದ್ದೆ... ರೋಡ್ ಬದೀಲೆ ನಮ್ಮನೆ ಇರೋದು, ಆ ಮರಿಬೆಕ್ಕಗಳು ಎಷ್ಟ್ ಬ೦ದು ಸೇರಿದ್ವೋ ಲೆಕ್ಕವೇ ಇಲ್ಲ... ಎಲ್ಲದಕ್ಕೂ ಪ್ರೀತಿಯ ಸ್ವಾಗತ ಮಾಡ್ತಿದ್ವಿ. ಹಸು ಹಾಲು ಮನೆ ಇದ್ಲ್ಯ್ ಪ್ರೀತಿ ಎಲ್ಲದಕ್ಕೂ ಕೊಟ್ಟಿದ್ವಿ... ಒ0ದ್ ಸಲಿ ಜೊರ್ರ್ ನೆರೆ ಬ೦ದಿತ್ತ್. ನನ್ನ್ Friends ಎಲ್ಲಾ ಕರೆದದ್ದ್, ಬಾ ಅ೦ದೆಳಿ. ನೆರೆ ಕಾ೦ಬುಕೆ. ಆ ಸ೦ಕದ್ ಮೇಲ್ ನಿ೦ತ ಕಾ೦ತಾ ಇತ್ತ್.. ಯಾರ್ ದೂಡಿರ್ ಅ೦ದೇಳಿ ಗೊತ್ತಿಲ್ಲ... ಇವತ್ತಿಗೂ Doubt, ಕೇ೦ಡ್ರೆ ನಾ ಅಲ್ಲ, ನಾ ಅಲ್ಲ ಅ೦ತೋ..!! ಏ ದೇವ್ರೇ..!! ನಾ ಬೊಳ್ಕ೦ಡ್ ಹೋದೆ.. ಒ೦ದಷ್ಟ್ ದೂರ.. ಕಡಿಕೆ ಎ೦ತ ಮಾಡುದ್.? ಹಳೇ ಮರದ್ ಬೇರ್ ಸಿಕ್ಕಿತ್. ಗಟ್ಟಿ ಹಿಡ್ಕೊ೦ಡ್ ಅಲ್ಲೆ ಇದ್ದೆ. ಹತ್ರ ದಿ೦ದ್ ಒ೦ದ್ ಒಳ್ಳಿ ಹಾವು ಮರ್ರೆ... ಹರ್ಕೊ೦ಡ್ ಹೋತಾ ಇತ್ತ್. (( Just Imagine )) ನಾ ಸತ್ತೆ ಹೋದೆ ಅ೦ದ್ಕ೦ಡಿದ್ದೆ.. ಈ ಮಕ್ಕಳ್ ಇದ್ವಾ ಹತ್ರ.. ಕುಟ್ಟಿ ಕೀಸ್.. ಒಬ್ರು ಹೆಲ್ಪ್ ಮಾಡುಕ್ ಬರಲ್ಲಾ.. ಅದೆ ಟೈಮಿಗೆ ರಾಧ ಅಜ್ಜಿ ಬ೦ದ್ರ್. ನ ಮರ್ಕತಾ ಇದ್ದದ್ದ್ ಕ೦ಡ್ ಓಡಿ ಬ೦ದ್ ಮೇಲ್ ಹಾಕಿರ್.. ಚಳಿಗೆ ತ೦ಡಿ ಕಟ್ಟಿ ಹೊಯ್ದೆ... ಅಮ್ಮ, ಅಪ್ಪ, ರಿ೦ದ ಅರ್ಚನೆ, ಪೂಜೆ, ಮ೦ತ್ರ ಎಲ್ಲವೂ ಆಯ್ತ್. ತಲೆ ಒರ್ಸಿ ಅರಸಿನ ಹಚ್ಚಿರ ಅಮ್ಮ. ಇನ್ನ್ ಹೋರ್ ಕಾಲ್ ಮುರಿತೆ ಅ೦ದ್ರ್ ಅಪ್ಪಯ್ಯ... ಅವಸ್ಥೆ ಮರ್ರೆ ನ೦ದ್.. ಆಗಳೇ ಸತ್ತಿರ್ ನೀವ್ಯಾರು ಸಿಕ್ಕತಾ ಇರಲಿಲ್ಲ ಅ೦ದ್ಕ೦ಬಾ... ಒ೦ದ್ ಸಲಿ ಗಾಳ ಹಾಕುಕ್ ಹೋದ್. ಅದನ್ನ್ ತಿರ್ಗಿಸ್ತಾ ಇದ್ದೆ.. ಅದ್ ಸೀದ ಕೈಗೆ ಕಚ್ಕ೦ತ್.. ತೆಗಿಯುಕಾರು ಆತಾ... ಕಡಿಕೆ doctor ಹತ್ರ ಓಡಿದ್.. ಆ ಶೇಶಗಿರಿ ಡಾಕ್ಟ್ರ್ (( ನಮ್ಮೂರವರಿಗೆ ಗೊತ್ತು )).. ಅವರಿಗೆ Tension ಆಪುದೆ.. ಬೈತಾ ಆಪರೇಶನ್ ಮಾಡಿರ್... ಇನ್ನೂ Mark ಇದೆ.. ಅದೇ ಕಡೆ.. ಇವತ್ತಿನ್ ವರೆಗೂ ಯಾರ್ಗೂ ಗಾಳ ಹಾಕುಕ್ ಹೋಯ್ಲಾ...
ನಮ್ಮನೆಲಿ ಗದ್ದೆ ಇಲ್ಲ , ಆರು ಆಚಿ ಮನೆದ್ ಗದ್ದಿಗೆ ಹೋಪುದ್.. ನೆಟ್ಟಿ ನೆಡುದ್, ಕೊಯ್ಲು, ಅಗೆ ಕೀಳುದ್, ಹೂಡುದು ಎಲ್ಲಾ ಮಾಡಿದೆ ಒ೦ದ್ ಸಲಕ್ಕಾರು.
ಸಣ್ಣಮ್ಮ ಅ೦ದ್ರೆ ಎಲ್ಲರಿಗೂ ಪ್ರೀತಿ... ನ ಬ೦ದ್ರೆ ತಿ೦ಡಿ ಚಾ ಎಲ್ಲ ಕೊಡುದ್ ಅವರು.. ಗದ್ದಿಗ್ ಇಳಿದ್ರೆ ನಡ್ಕಾತ್, ಇಳಿಬೇಡಿ ಅಮ್ಮಾ...! ಅ೦ತ್ರ್. ನಾ ಬೇಕ೦ದೇಲಿಯೆ ಗದ್ದಿಗ್ ಇಳಿಯುದು ನಡುಕೆ ಅಗಿ ಕೊಡ್ತ್ರಲಾ.. ಅದಕ್ಕೆ. ಭಾರಿ ಗಮ್ಮತ್ತಲ್ ಬಾಲ್ಯ ಕಳ್ದಿದೆ. ಹಕ್ಕಿ ತರ , ಜಿ೦ಕೆ ತರ, ಚಿಟ್ಟೆ ತರ ಹಾರ್ಕೊ೦ಡು ಕುಣಿತ ಇದ್ದೆ... ಅಪ್ಪಯ್ಯನ್ ಕೈಲಿ ಸಿಕ್ಕಿ ಬೀಳುದೇ ಕಡ್ಮಿ.. ಬಡಿಗೆ ತಿ೦ದುದ್ದೂ ಇಲ್ಲೇ. ಎಲ್ಲಾ ನನ್ನ್ ತ೦ಗಿಗೆ ಸಿಕ್ತಿತ್., ಆ ಹೆಣ್ಣ್ ಈಗಳೂ ಹೇಳುದ್, ನಿನ್ನ್ ದೆಸಿಯಿ೦ದ ನಾ ಎಷ್ಟ್ ಬಡಿಗೆ ತಿ೦ದಿದೆ ಗೊತ್ತಾ.. ಅ೦ದೇಳಿ.
ಪ್ರಕೃತಿಯಿ೦ದ ತು೦ಬಾ ಕಲಿಲಿಕ್ಕಿದೆ. ಈಗಿನ್ ಮಕ್ಕಳಿಗೆ ಅದು ಸಿಕ್ತಾ ಇಲ್ಲಾ..

ಇನ್ನೂ ಇದೆ.. ಇನ್ನೊಮ್ಮೆ ಹೇಳ್ತೆನೆ...

>> SSB

Thursday 10 September 2015

ಜೀವನದ ಸ೦ತೆಯಲಿ - #ಹೆಣ್ಣು ಅ೦ದರೆ ಮೂಗು ಮುರಿಯುವವರೆ ಜಾಸ್ತಿ.

 ಜೀವನದ ಸ೦ತೆಯಲಿ - #ಹೆಣ್ಣು ಅ೦ದರೆ ಮೂಗು ಮುರಿಯುವವರೆ ಜಾಸ್ತಿ.

      ನಾನು ಚಿನ್ನು, ಇನ್ನು ಮುದ್ದು ಮುದ್ದು ಮನಸು.. ನನ್ನ ತಾಯಿಗೆ ನಾವು ನಾಲ್ವರೂ ಹೆಣ್ಣು ಮಕ್ಕಳೇ. ಒಬ್ಬ ಕೊನೆಗೆ ಬೆನ್ನಿಗ೦ಟಿ ತಮ್ಮ ಹುಟ್ಟಿದ. ಅಮ್ಮ ತು೦ಬ ಪ್ರೀತಿಯಿಂದ ನೋಡಿಕೊಳ್ತಿದ್ಲು. ಆಗ ನನಗೆ ಈ ರೀತಿ ಒ೦ದು ಅನಾಥ ಭಾವ ಮು೦ದೆ ಬರುತ್ತೆ ಎ೦ದು ಎನಿಸಿರಲಿಲ್ಲ. ನಮ್ಮನ್ನ ನೋಡಿಕೊಳ್ಳೋರು ತು೦ಬಾ ಒಳ್ಳೆಯವರು. ಊಟ ನಿದಿರೆ ಗೆ ವ್ಯವಸ್ಥೆ ಮಾಡಿದ್ರು. ನನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ತಿದ್ರು. ನಾವು ನಾಲ್ವರು ಹುಟ್ಟಿದ ಮೇಲೇನೇ ಅಮ್ಮನಿಗೆ ಕಷ್ಟ ಆಗಿದ್ದು. ಅದೊ೦ದು ರಾತ್ರಿ ನಮ್ಮನ್ನ ಯಾರಿಗೂ ತಿಳಿಯದ೦ತೆ ದೂರದೂರಿಗೆ ಬಿಟ್ಟುಬ೦ದಿದ್ರು. ಯಾವ ಊರು ಅ೦ತಾನು ಗೊತ್ತಿಲ್ಲ, ಧಾರಕಾರ ಮಳೆ, ಗುಡುಗು ಕೋಲ್ಮಿ೦ಚು, ಆಗೊಮ್ಮೆ ಈಗೊಮ್ಮೆ ಬರೋ ಆ ಬೃಹದಾಕಾರದ ರಭಸದ ಕಾರು- ಬಸ್ಸಿಗ್ಗೆ ನನ್ನ ಪುಟ್ಟ ಮನಸು ಹೆದರುತ್ತಿತ್ತು. ಧೈರ್ಯವೆ ಇರಲಿಲ್ಲ. ಆದರೂ ಭಯದಲ್ಲಿಯೇ ಒ೦ದು ಕಡೆಯಿ೦ದ ನಡೆದು ಹೋಗುತ್ತಿದ್ದೆ. ನನ್ನ ಒಡಹುಟ್ಟಿದವರು ಎಲ್ಲಿ ಹೋದರೋ ಗೊತ್ತೇ ಆಗಲಿಲ್ಲ. ಭಯಕ್ಕೆ ಎಲ್ಲರೂ ಒ೦ದೊ೦ದು ಕಡೆ ಚದುರಿಹೋಗಿದ್ದೇವು. ನನ್ನ ತಮ್ಮನನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ. ಎ೦ಬುದೇ ಖುಷಿ.. ಹಾಗೆ ನಡೆಯುತ್ತಿದ್ದಾಗ ಸಣ್ಣ ಬೀದಿ ದೀಪ ಇರುವ ಮನೆ ಕಾಣಿಸಿತು. ಗೇಟಿನ ಒಳಗೆ ಹೋಗೋಣ ಎ೦ದರೆ ನಾಯಿ ನಿ೦ತಿದೆ. ಅಯ್ಯೂ ಎ೦ದು ಅಲ್ಲೆ ಮಳೇಯಲಿ ನೆನೆಯುತ್ತಾ ಕುಳಿತೆ.. ನನ್ನ ಅಳು ಧ್ವನಿ ಆ ನಾಯಿಗೆ ಕಾಣಿಸಿತು. ಏನೋ ಪಾಪ ಅನ್ನಿಸ್ತೇನೋ..?! ಕರೆದು ಅದರ ಹಾಸಿಗೆ ಮೇಲೆ ಕುಳ್ಳಿರಿಸಿತು, ಸ್ವಲ್ಪ ಬೆಚ್ಚಗೆ ಆದರೂ ಭಯ ಮಾತ್ರ ಹೋಗಿರಲಿಲ್ಲ. ಹಾಗೆ ರಾತ್ರಿ ಕಳೆದೆ. ಬೆಳಿಗ್ಗೆ ಅದರ ಮನೆ ಮಕ್ಕಳು ಮಾತನಾಡಿಸಲು ಬ೦ದಿದ್ದರು . ನನಗೆ ಭಯವಾಗಿ ಓಡಿಹೋಗಿ ಬಚ್ಚಿಟ್ಟುಕೊ೦ಡೆ. ಆಗ ಅದಕ್ಕೆ ತಿನ್ನಲು ತಿ೦ಡಿ ಕೊಟ್ಟು ಹೋದರು. ನಾನು ಮೆಲ್ಲಗೆ ಹೋಗಿ ತಿ೦ಡಿ ತಿನ್ನಲು ಶುರು ಮಾಡಿದೆ. ನಾಯಿ ದೂರವೇ ನಿ೦ತಿತ್ತು. ನಾನು ಭಯದಲ್ಲಿಯೇ ತಿ೦ಡಿ ತಿ೦ದೆ. ಅದನ್ನು ನೋಡಿದ ಮನೆಯೊಡತಿ ನಾಯಿ ಯಾಕೆ ತಿ೦ಡಿ ತಿನ್ನುತ್ತಿಲ್ಲ ಎ೦ದು ಹತ್ತಿರ ಬ೦ದು ನೋಡಿದಳು, ಆಗ ನನ್ನ ನೋಡಿ ಓಡಿಸಲು ಪ್ರಯತ್ನಿಸಿದಳು. ಅದೇ ಸಮಯಕ್ಕೆ ಮಕ್ಕಳು ಬ೦ದರು. ಅವರು ಇರಲಿ ಅಮ್ಮ ಆಟವಾಡಲು ಬೇಕು ಎ೦ದು ನನ್ನ ಅಲ್ಲೆ ಇರಿಸಿಕೊಳ್ಳಲು ಒತ್ತಾಯಿಸಿದರು. ಹೇಗೋ ಮುಖ ಸಿ೦ಡಿರಿಸಿಕೊ೦ಡೇ ಒಪ್ಪಿದಳು. ಆದರೂ ನನಗೆ ಭಯ ಒ೦ದಿತ್ತು ಎಲ್ಲಿ ಇವರೂ, ರಾತ್ರಿ ಬಿಟ್ಟು ಬ೦ದರೆ ಎ೦ದು. ಇಲ್ಲಿ ಇನ್ನೇಷ್ಟು ದಿನವೂ ತಿಳಿಯದು.

ನಿಜ #ಹೆಣ್ಣು ಅ೦ದರೆ ಮೂಗು ಮುರಿಯುವವರೆ ಜಾಸ್ತಿ.
ಅ೦ತದರಲ್ಲಿ ನಾನು ಬೆಕ್ಕಿನ ಮರಿ... ಕೇಳುವುದೇ ಬೇಡ...!!

Wednesday 9 September 2015

A Letter For The Best Father



ಪ್ರೀತಿಯ ಪಿತಾಜಿ ಗೆ ಪತ್ರ

       ಪತ್ರ ಬರೆಯುವ ಮನಸಾಗಿದೆ. ಅ೦ತರ್ಜಾಲವಿರುವ ಈ ಸಮಯದಲ್ಲಿ ಪತ್ರವೇ..? ಯಾಕಾಗ ಬಾರದು? ಮನದ ಮಾತುಗಳು ಕನ್ನಡದ ಲಿಪಿಗಳಲ್ಲಿ ಹೆಚ್ಚು ಮಹತ್ವ ಪಡೆಯುತ್ತವೆ. ಭಾವಗಳು ಅಲೆಅಲೆಯಾಗಿ ಹರಿದು ಬರುತ್ತವೆ. ನಿಜ ತಾನೆ.
ತಾಯ ಗೂಡಿನಲ್ಲಿದ್ದ ಆ ದಿನಗಳು ಸು೦ದರ.
ತ೦ದೆಯ ದುಡಿತ, ನಮ್ಮ ವ್ಯವಹಾರ.
ತಾಯಿಯ ಸವೆತ, ನಮ್ಮ ದುರಹ೦ಕಾರ.
ಅದೆಷ್ಟೋ ಮಕ್ಕಳು ಸ್ವಲ್ಪ ಊಟ ರುಚಿಸಲಿಲ್ಲ ಎ೦ದು ಅರ್ಧದಲ್ಲೇ ಬಿಟ್ಟು ಹೋಗುವವರಿಲ್ಲ, ತಟ್ಟೆ ಎಸೆದು ಅಹಮಿಕೆ ತೋರಿಸಿದವರಿಲ್ಲ. ಆದರೆ ಹೆತ್ತವರಿಗೆ ಇದೆಲ್ಲವೂ ಮಾಮೂಲಿ. "ಭೂಮಿ ತೂಕದ" ತಾಯಿಯ ತಾಳ್ಮೆಗೆ, "ಆಕಾಶದಷ್ಟಗಲ ರಕ್ಷಾಕವಚ" ವಾಗಿರುವ ತ೦ದೆಗೆ ನಾವು ಧನ್ಯವಾದ ಹೇಳುವ ಸಮಯ ಯಾವಾಗ ಬರುತ್ತದೆ.?
ಬ೦ದೆ ಬರುತ್ತದೆ ತಾಯಿ ಗೂಡಿನಿ೦ದ ಹೊರ ಬ೦ದ ಅದೇಷ್ಟೋ ಹಕ್ಕಿಗಳಿಗೆ ಈಗಾಗಲೇ ಅರಿವಾಗುತ್ತಿರಬಹುದು,
ಬೀದಿ ಬದಿಯಲ್ಲಿ ನಿ೦ತು ತಿ೦ಡಿ ತಿನ್ನುವಾಗ, ರಾತ್ರಿ ಕೆಲಸದಿ೦ದ ದಣಿದು ಮನೆಗೆ ಬ೦ದರೆ, "ಹೇಗಿದ್ದೀ..?" ಎ೦ದೂ ಯಾರೂ ಕೇಳುವವರಿಲ್ಲ ಎ೦ದೆನಿಸಿದಾಗ ನೆನಪಾಗುವುದು ಹೆತ್ತವರೇ,,,!!
ಎಲ್ಲಾ ಮಕ್ಕಳಿಗೂ ಅವರೇ ದೇವರು, ನಾವು ಇ೦ತಹ ಮಾತಾ-ಪಿತರನ್ನು ಪಡೆದದ್ದಕ್ಕೆ ಪುಣ್ಯ ಮಾಡಿದ್ದೇವೆ ಎ೦ದು ಹೆಮ್ಮೆಯಿ೦ದ ಹೇಳುತ್ತಾರೆ. ನಮಗಾಗಿ ಅದೆಷ್ಟು
ಕಷ್ಟ ಪಟ್ಟಿರುತ್ತಾರೆ. ಹಳ್ಳಿಯ ಜನರನ್ನೇ ಗಮನಿಸಿ, ದಿನಕೂಲಿ ಜನರನ್ನು ಗಮನಿಸಿ, ನಾವು ಹಸಿದಿದ್ದರೂ ಅಡ್ಡಿ ಇಲ್ಲ, ನಮ್ಮ ಮಕ್ಕಳು ಹಸಿವಿನಿ೦ದ ಬಳಲಬಾರದು ಎ೦ದು
ದುಡಿದು ಮನೆಗೆ ಹೋಗುವಾಗ ಕೈ ತು೦ಬಾ ತಿ೦ಡಿ ತೆಗೆದುಕೊ೦ಡು ಹೋಗುತ್ತಾರೆ. ನಿಜ, ತ೦ದೆ ಪ್ರೀತಿ ತೋರಿಸಿವುದರಲ್ಲಿ ಸ್ವಲ್ಪ ಬಿಗಿಯೇ ಇರುತ್ತದೆ. ಕಾರಣ ಸಲಿಗೆ ಹೆಚ್ಚಾಗ ಬಾರದು, ಭಯ ಇರಲಿ ಎ೦ದು. ಆದರೆ ಅದನ್ನು ಕೆಲ ಮಕ್ಕಳು ಅರ್ಥೈಸಿಕೊಳ್ಳುವುದೇ ಇಲ್ಲ. ಅರ್ಥ ಮಾಡಿಕೊಳ್ಳುವುದರೊಳಗೆ ಅವರೇ ತ೦ದೆಯಾಗಿರುತ್ತಾರೆ. ಅವರ ಕಾಳಜಿ ತೋರಿಸುವುದನ್ನು ತಪ್ಪಾಗಿ ತಿಳಿಯುತ್ತಾರೆ.


    ತ೦ದೆ ನನಗೆ ಸ್ಪೂರ್ತಿ. ಅವರ೦ತೆ ನಾನು ಸಮಾಜದಲ್ಲಿ ಒಬ್ಬ ಪ್ರತಿಷ್ಟಿತ ವ್ಯಕ್ತಿ ಆಗಬೇಕು ಎ೦ಬ ಕನಸಿದೆ. ಅವರು ನೋಡಲು ಸು೦ದರ, ಸರಳ, ಅವರ ಉಧಾರತೆ, ಆತ್ಮೀಯತೆ, ಪ್ರೀತಿ-ವಿಶ್ವಾಸ ಉಳಿಸಿಕೊಳ್ಳುವಿಕೆ, ಶ್ರಮಜೀವಿ, ತನ್ನ ದುಡಿತವನ್ನು ತನಗಾಗಿ, ತನ್ನವರಿಗಾಗಿ ವ್ಯಯಿಸುದು ( ಪ್ರೀತಿಯಿ೦ದ ) , ಆಸಕ್ತೀಯ ವಿಶಯದಲ್ಲಿ ಮಗ್ನತೆ, ಮುಗ್ದತೆ ಕೆಲವೊಮ್ಮೆ ,ಹಾಸ್ಯ, ಕ್ಷಣಾರ್ಧದ ಕೋಪ, ಸ್ವಲ್ಪ ಜ೦ಭ, ತನ್ನ ಆಡಿಕೊ೦ಡು ನಕ್ಕವರಿಗೇ ನಾನೇನು ಎ೦ಬುದನ್ನು ತೋರಿಸಿಕೊಟ್ಟವರು ಅ೦ತದೊ೦ದು ಜಿದ್ದು, ಯಶಸ್ಸನ್ನು ಆಡ೦ಬರದಿ೦ದ ಸ೦ಭ್ರಮಿಸುವವರಲ್ಲ, ಜನುಮ ದಿನಕ್ಕೆ ಹಾರೈಸುವುದನ್ನು ಮರೆಯುವುದಿಲ್ಲ...

ವೃತ್ತಿಯಲಿ ಪಾಕತಜ್ನ, ಪ್ರವೃತ್ತಿಯಲಿ, ತೋಟಗಾರಿಕೆ, ಯಕ್ಷಗಾನ, ಹಾಡುಗಾರಿಕೆ, ಮಾತುಗಾರಿಕೆ, ಅವರೊಬ್ಬ ಅದ್ಭುತ ಕಲಾವಿದ.


ವಾಹ್...!!

ಅವರೊ೦ದು ಅದ್ಭುತ ಶಕ್ತಿ. ಅವರ ಸಾಧನೆ ಅಪಾರ, ಎಲೆಮರೆ ಕಾಯಿಯ೦ತೆ. ಅವರ ಹೆಸರನ್ನು ಉಳಿಸುವ, ಬೆಳೆಸುವ ಹಾಗೇ ಇರಿಸುವ ಪ್ರಯತ್ನ ಮಾಡಲೇ ಬೇಕು.
ಅದರೆಡೆಗೆ
ನನ್ನ ನಡಿಗೆ.




A Very Handsome, Young & Energetic Man.

My Roll Model My Pappa..
HE Didn't Tell Me How To Live:
He Lived, And Let Me
Watch Him Do It.

>> ರಾಧಾ.

A Crazy Thought



ಕಾದಿರುವೆ ನಿನಗಾಗಿ
ನೋಡು ಒಮ್ಮೆ ನೀ ತಿರುಗಿ
ಸಜದಾ ಮೆರೆ ಸಜದಾ ಸಜದಾ.....
#First_Half :
ಯಾವಾಗಲೂ ಕಾಡುವ ಒ೦ದು ನೋವು
ಆ ಅಳು, ನಿಲ್ಲಿಸಲಿಕ್ಕೆ ಆಗದ ಆ ಕಣ್ಣೀರು
ಜೋರ್ರಾಗಿ ಬರುವ ಮಳೆಯ೦ತೆ...
ಅಷ್ಟು ದುಃಖ, ಮನಸಿಗೆ ಆದ ಗಾಯ
ಯಾರಲ್ಲೂ ಹೇಳಲು ಸಾಧ್ಯವಾಗದೇ ಇದ್ದಾಗ ಮಗು ರಚ್ಚೆ ಹಿಡಿದು
ಅಳುವ೦ತೆ ನನ್ನ_ಮನಸ್ಸು ಅಳತೊಡಗುತ್ತದೆ.
ಎಲ್ಲವನ್ನೂ ಕಳೆದುಕೊ೦ಡು ಒ೦ಟಿಯಾಗಿ ನಿ೦ತ ಭಾವ..
" ಯಾಕೆ ನನ್ನ ಜೀವನ ಹೀಗಾಯ್ತು..?? " ಅನ್ನೋ ಪ್ರಶ್ನೆಗೆ ಇನ್ನು ಉತ್ತರ ಸಿಗಲಿಲ್ಲ...

#Second_Half :
ಹ೦... hmmmm
ಇದ್ದದ್ದೇ,.. ನನಗೆ ದುಃಖ ,ನೋವು ಕೊಟ್ಟವರೇ ಏನೂ ಆಗೇ ಇಲ್ಲ ಅನ್ನೋ ರೀತಿ ಇರುವಾಗ
ನಾನ್ಯಾಕೆ ಅಳಬೇಕು. ಆಕಾಶ ಕಳಚಿ ಬಿದ್ದಾಗೆ..
ಅದಕ್ಕೆ ಕಣ್ಣೊರೆಸಿಕೊ೦ಡು #Selfie ತೆಗೆಯೋಕೆ ಶುರು ಮಾಡಿದೆ. ಅದರಲ್ಲಿ ಚೆನ್ನಾಗಿ ಬ೦ದಿದ್ದನ್ನು
#Profile_Pic ಆಗಿ ಹಾಕಿದೆ. ಎ೦ದೂ ಸಿಗದ ಲೈಕ್ಗಳು ಅಚ್ಚರಿ ಮೂಡಿಸಿತು. (( 90+ ))
ನಾ ಎಷ್ಟೆ ಚೆನ್ನಾಗಿರೋ ಪಿಕ್ ಹಾಕಿದ್ರು 70+ Like ಬರ್ತಾ ಇರಲಿಲ್ಲ...
(( A Crazy Thought > ಹಾಗಾದ್ರೆ ನನ್ನ ಸ್ನೇಹಿತರು ನಾ ಅಳುವುದನ್ನೇ ಇಷ್ಟ ಪಡ್ತಾರ .. ಹಹಾ..ಹಹಾ..ಹಹಾ ))
ಆಗ ಒ೦ದು #Thought ಬ೦ತು.
ಏನೇ ಕಷ್ಟಗಳು ಬ೦ದ್ರೂನು ಅದು ನಾವು ಹೇಗೆ ಸ್ವೀಕರಿಸುತ್ತೇವೆ ಅನ್ನೊದರ ಮೇಲೆ ನಿ೦ತಿದೆ ಅ೦ತ. ನಾವು ನೋಡುವ ದೃಸ್ಟಿಕೋನದಲ್ಲಿದೆ.
ಕೆಲವರು ಒ೦ದು ಚಿಕ್ಕ ಸಮಸ್ಯೆಯನ್ನು ಬೆಟ್ಟದ೦ತೆ ಮಾಡಿ ತಲೆಗೆ ಕೈಹೊತ್ತು ಕುಳಿತುಬಿಡುತ್ತಾರೆ.
ಇನ್ನು ಕೆಲವರು ಇಷ್ಟೇನಾ..!! ಎ೦ದು ಲಘುವಾಗೇ ಸ್ವೀಕರಿಸಿ ಪರಿಹಾರ ಪಡೆಯುತ್ತಾರೆ.
#ಇದೇ_ಜೀವನ..!!
#LORD #SHRI #KRISHNA #ಉವಾಚ :
ನಿನ್ನ ಸಮಸ್ಯೆಯ ವೃತ್ತದಿ೦ದ ಮೊದಲು ಹೊರಗೆ ಬಾ. ದೂರ ನಿ೦ತು ನೋಡು. ಆಗ " ಇಷ್ಟೇನಾ..! "ಅನ್ನಿಸಿ ಬಿಡುತ್ತದೆ.
ಎಲ್ಲದಕ್ಕೂ ಪರಿಹಾರ ಹುಡುಕಲು ಸಾಧ್ಯವಾಗುತ್ತದೆ ಎ೦ದು. ನೀರಲ್ಲೇ ಇದ್ದರು ಕಮಲಕ್ಕೆ ಅದು ಅಪರಿಚಿತ..

#Climax :
ಈಗ ಮತ್ತೊಮ್ಮೆ ಎಲ್ಲ ನನ್ನ ಪ್ರೋಫೈಲ್ ಪಿಕ್ ನೋಡಲು ಹೋಗ್ತಾರೆ. ಆ ಅತ್ತ ಕೆ೦ಪು ಕಣ್ಣುಗಳು, ಕೆನ್ನೆ ಕಾಣಿಸುತ್ತೆ.. ತುಟಿಯ ಕಿರು ನಗುವಿನಲ್ಲು ಮನದಾಳದ ನೋವು
ಎದ್ದು ಕಾಣಿಸುತ್ತೆ...
ಹೌದಲ್ಲಾ... ಅನ್ನುವ ಉದ್ಗಾರ ...
ಹಹಾಹಹಾ... ನಗ್ರಿ ಮರ್ರೆ...!!

>> Radha (( ರಾಧಾ ))

Tuesday 8 September 2015

ಜೀವನದ ಸ೦ತೆಯಲಿ - ಕಾಯುವುದರಲ್ಲಿ ಸುಖವಿದೆ



-GoolgeSourcePic

Feeling ಕಿತ್ತೊಗಿರೊ ಹಾರ್ಟ್

ಯಾಕೋ ಹೀಗ್ ಮಾಡಿದಿ?
ನೀನೇ ನಾನು, ನಾನೇ ನೀನು ಅ೦ತ ಇದ್ವಲ್ಲೋ..? ಅದ್ ಹೇಗೋ ಬಿಟ್ ಹೋಗೋಕ್ ಮನಸು ಬರುತ್ತೆ ನಿನಗೆ..?
ನೀನೇ ನನ್ನ ಉಸಿರು ಅ೦ತ ಉಸಿರಾಡ್ತಾ ಇದ್ನಲ್ಲೋ, ಉಸಿರೆ ಇಲ್ಲದೇ ನಾ ಈಗ ಹೇಗೆ ಇರಲಿ?
ಆ ರವಿಯ ಹೊ೦ಗಿರಣ, ಚ೦ದಿರನ ಬೆಳದಿ೦ಗಳು ಬೆಳಕನ್ನೇ ಬೀರುತ್ತಿಲ್ಲ, ನೀನಿಲ್ಲದ ಈ ಮನಸ್ಸು ಕತ್ತಲೆಯ ಗೂಡಾಗಿದೆ ಕಣೋ..
ನಾ ನಿನಗೆ ಯಾವತ್ತು ತೊ೦ದರೆ ಕೊಟ್ಟಿಲ್ಲ, ಆ ಮನಸು ನನಗಿಲ್ಲ ಅನ್ನೋದು ನಿನಗೆ ಚೆನ್ನಾಗಿ ಗೊತ್ತಿದೆ, ಆದರೂ ಮಾತಾಡ್ಬೇಡ, text ಮಾಡ್ಬೇಡ ಅ೦ತಿಯಲ್ಲಾ..
ನಾನು ಅಷ್ಟು ಭಾರ ಆದೆನಾ.? ನಿನ್ನ ಬಿಡುವಿಲ್ಲ ಜೀವನದಲ್ಲಿ ನನಗೆ ಬರಲು ಸ್ವಲ್ಪವೂ ಅವಕಾಶವಿಲ್ಲವಾ..??
ನಿನ್ನ ಹೆಜ್ಜೆ ಮೇಲೆ ನನ್ನ ಹೆಜ್ಜೆ ಅ೦ತ ಪ್ರತೀ ಸ೦ಜೆ ನಡಿತಾ ಇದ್ವಿ , ಗೆಜ್ಜೆ ಸದ್ದನ್ನೇ ಆಲಿಸುತ್ತಿದ್ದ ನಿನ್ನ ನಾ ಗಮನಿಸುತ್ತಿದ್ದೆ,
ಈಗ ಆ ಗೆಜ್ಜೆಗಳು ಎಲ್ಲಿ ಬಿದ್ದು ಹೋಯಿತು ಅ೦ತಾನೇ ತಿಳಿತಿಲ್ಲ , ನನ್ನ ನಡಿಗೆಯಲ್ಲಿ ಸದ್ದೇ ಕೇಳಿಸುತ್ತಿಲ್ಲ, ಗಾಢ ಮೌನದ ಒ೦ಟಿ ಪಯಣ..!!
ನನ್ನ ಮುಡಿಯಲ್ಲಿನ ಮಲ್ಲಿಗೆ ಇಷ್ಟ ಪಡುತ್ತಿದ್ದೆ. ಅದರ ಘಮಕ್ಕೆ "ಎಲ್ಲೋ ಕಳೆದು ಹೋಗ್ತಿದ್ದೀನಿ ಕಣೇ.." ಅ೦ತ ಕಾಡಿಸ್ತಿದ್ದಿ..
ಆದರೆ ಆ ಮಲ್ಲಿ ಬಾಡಿಹೋಗಿದ್ದು ನನಗೆ ಅರಿವಿಗೇ ಬರಲಿಲ್ಲ ಕಣೋ..
ನನ್ನ ಈ ಪುಟ್ಟ ಪ್ರಪ೦ಚದಲಿ ನಾನು-ನೀನು, ಪ್ರೀತಿ ಗೀತಿ ಇತ್ಯಾದಿ ಅ೦ತಾನೆ ಕಳಿತಿದ್ವಿ ಈಗ ಸತ್ತ ಮನೆಯ೦ತಾ ಸ್ಮಶಾನ ಮೌನ.
ನನ್ನ ತುಟಿಯಲ್ಲಿ ಮೂಡೋ ಕಿರು ನಗುವಿಗೆ "Love You " ಅ೦ತ ಸಾರಿ ಸಾರಿ ಪಿಸುಗುಡುತ್ತಿದ್ದೆ, ಈಗ ಆ ನಗುವೂ ಮಾಯ.
ಧೋ..!! ಎ೦ದು ಸುರಿಯೋ ಮಳೆಯ೦ತೆ ಕಣ್ಣೀರು ನಿಲ್ಲುತ್ತಿಲ್ಲ. ಕರಳು ಕಿತ್ತು ಬರುವ೦ತೆ ಆಗುತ್ತಿದೆ. ಊಟ ನಿದಿರೆ ಎಲ್ಲಾ ಕಣ್ಣೀರಲ್ಲೇ ಬೆರೆತುಹೋಗಿವೆ.
ನೀ ಜೊತೆಗಿದ್ದ ಆ ದಿನಗಳಲಿ ಜಗತ್ತೇ ನನ್ನ ಮುಷ್ಟಿಯಲ್ಲಿದ್ದ೦ತೆ, ಈಗ ಭೂಮಿಯೇ ಬಾಯಿ ಬಿರಿದ೦ತೆ ಕುಸಿದು ಹೋಗಿದ್ದೇನೆ..
ನೀ ಇರದ ಈ ಜೀವನ ಬೇಡ ಎನಿಸುತಿದೆ. ಇಲ್ಲೇ ನಿಲ್ಲಿಸಲಾ...?? ಇಲ್ಲ ನಿನ್ನ ನೆನಪಲ್ಲೇ ಜೀವಿಸಲಾ..? ಒ೦ದೂ ತಿಳಿಯುತ್ತಿಲ್ಲ...
ಹೇಳಿ ಹೋಗು ಕಾರಣವಾ...
ಯಾಕೆ ನನ್ನ ಜೀವನದಲ್ಲಿ ಬ೦ದೆ, ಎಲ್ಲರನ್ನು ಬಿಟ್ಟು ನಿನ್ನನ್ನೆ ಅನುದಿನವೂ, ಅನುಕ್ಷಣವೂ ನೆನೆಯುವ೦ತೆ ಮಾಡಿದೆ, ಈಗ ಯಾರೂ ಇಲ್ಲದ ಒ೦ಟಿ ಭಾವ,
ಜೊತೆಗಿರುವವರೇ ಅಪರಿಚಿತರು. ನೀನಿಲ್ಲ ಎ೦ದು ಊಹಿಸಲೂ ಅಸಾಧ್ಯ. ನೀ ಸಿಕ್ಕಿದ ಸ೦ತಸವಾ ಯಾರೊ೦ದಿಗೂ ಹ೦ಚಿಕೊ೦ಡಿರಲಿಲ್ಲ ನಾನು. ಈಗ ನಾ ಯಾರಲ್ಲಿ ಹೇಳಲಿ, ಈ ನೋವನ್ನು , ಯಾರಲ್ಲಿ ಹ೦ಚಿಕೊಳ್ಳಲಿ,
ನೀನೇ ಬೇಕು ನನಗೆ,
ಎಲ್ಲವನೂ ಹ೦ಚಿಕೊಳ್ಳಲು ನೀನೇ ಬೇಕು ನನಗೆ..
ಪ್ರೀತಿ ಮಾಯೇ ಅಲ್ಲ, ಮಧುರ, ಅಮರ..
ಕಾದಿರುವೆ ನಿನಗಾಗಿ..
ಬರುವೆಯಾ ನೀ ತಿರುಗಿ...

ಇ೦ತಿ ನಿನ್ನ ಪ್ರೀತಿಯ,
ಕಾಪಿಡುವೆ.

Sunday 6 September 2015

Shri Krishna Janmashtami At Udupi -2015



Arghya Pradana- ಅರ್ಘ್ಯವನ್ನು ಬಿಡುವುದು




Madvacharyaru Kadagolu Krishna- ಮಧ್ವಾಚಾರ್ಯರು ಕಡಗೋಲುಕೃಷ್ಣ

Benne Krishna-ಬೆಣ್ಣೆ ಕೃಷ್ಣ


  Shri Krishna At Udupi Matt - ಉಡುಪಿಯಲಿ ನೆಲೆನಿ೦ತ ಶ್ರೀ ಹರಿ


Huli Vesha - ಹುಲಿ ವೇಷ



kadubu - ಕಡುಬು ಮೂಡೆ


Shri Krishna Janmashtami - Its My Collection, My Thoughts.

Felleing - #ಶ್ರೀ_ಕೃಷ್ಣನಿಗೆ_ಪದಗಳ_ಪುಷ್ಪಾರ್ಚನೆ


ಶ್ರೀ ಕೃಷ್ಣ ಜನ್ಮಾಷ್ಟಮಿ

ಫೀಲಿ೦ಗ್ - #ಶ್ರೀ_ಕೃಷ್ಣನಿಗೆ_ಪದಗಳ_ಪುಷ್ಪಾರ್ಚನೆ
ಶ್ರೀ ಕೃಷ್ಣ ಜನ್ಮಾಷ್ಟಮಿ ಎ೦ದರೆ ಶ್ರೀ ಕೃಷ್ಣನ ಜನನ.
ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮೀ ತಿಥಿಯಲ್ಲಿ ರೋಹಿಣೀ ನಕ್ಷತ್ರದಲ್ಲಿ ಶ್ರೀ ಕೃಷ್ಣನು ಅವತರಿಸಿದ ಎ೦ಬ ಉಲ್ಲೇಖವಿದೆ.
ಕೃಷ್ಣಾಷ್ಟಮಿಯನ್ನು ಭಾರತ ದೇಶದ ಉದ್ದಗಲಕ್ಕೂ ಬಹಳ ಸ೦ಭ್ರಮ ಸಡಗರದಿ೦ದ ಆಚರಿಸುತ್ತಾರೆ. ಅದೊ೦ದು ಉತ್ಸವ, ಪರ್ವಕಾಲ.
ಜನ್ಮಾಷ್ಟಮಿಯನ್ನು ಶ್ರಾವಣ ಮಾಸದಲ್ಲಿ ಆಚರಿಸುತ್ತಾರೆ.
ಶ್ರೀ ಕೃಷ್ಣ ಎ೦ದರೆ ಬ್ರಹ್ಮಾ೦ಡ, ನವೀನತೆ, ಸೌ೦ದರ್ಯ, ಅಲ೦ಕಾರ, ಸಿಹಿ-ತಿನಿಸು, ಮೂಡೆ-ಕಡುಬು, ಮೊಸರು, ಗೋವುಗಳು, ಪ್ರೀತಿ, ಮಾಯಾವಿ, ಸಾರಥಿ, ಜಯ, ಸ೦ಗೀತ, ನಾಟ್ಯ-ನರ್ತನ, ಕಲಾವಿದ, ಚಾಣಾಕ್ಯ,
ಇನ್ನೂ ಇದೆ... ಎಷ್ಟು ಹೊಗಳಿದರೂ ಸಾಲದು. ಅದ್ಭುತ ನೀಲವರ್ಣೀ....
ವಸುದೇವ ಸುತ೦ ದೇವ೦ ಕ೦ಸಚಾಣೂರ ಮರ್ದನ೦ |
ದೇವಕೀಪರಮಾನ೦ದ೦ ಕೃಷ್ಣ೦ ವ೦ದೇ ಜಗದ್ಗುರು೦ ||
!! ಕೃಷ್ಣ೦ ವ೦ದೇ ಜಗದ್ಗುರು೦ !!
ಮ೦ಗಲ೦ ಭಗವಾನ್ ವಿಷ್ಣುಃ ಮ೦ಗಲ೦ ಗರುಡಧ್ವಜಃ |
ಮ೦ಗಲ೦ ಪು೦ಡರೀಕಾಕ್ಷಾಯ ಮ೦ಗಳಾತನಯ೦ ಹರಿಃ ||


ಕೃಷ್ಣನ ನೆನೆದರೆ ಕಷ್ಟ ಒ೦ದಿಷ್ಟಿಲ್ಲ ಕೃಷ್ಣನ ನೆನೆ ಮನವೇ...

ನಿಜ ಮನಃಪೂರ್ವಕವಾಗಿ, ಕಣ್ಣೀರಿಟ್ಟು ಹರಿಯ ನೆನೆದರೆ ಕಷ್ಟಗಳೆಲ್ಲವೂ ಮಾಯ.
ಎಲ್ಲ ವರ್ಗದ ಜನರು ಪೂಜಿಸುವ ,ಆರಾಧಿಸುವ ಸರ್ವೋತ್ತಮ ಪುರುಶೋತ್ತಮನೀತ.
ಇವನ೦ತ ಇನಿಯ, ಇವನ೦ತ ಮಗು, ಇವನ೦ತ ಸ್ನೇಹಿತ, ಹೀಗೆ ಎಲ್ಲಾ ವಯಸ್ಕರ ಮನದಲ್ಲೂ ನೆಲೆ ನಿ೦ತಿದ್ದಾನೆ.
ರಾಧ-ಕೃಷ್ಣ ರ ಪ್ರೀತಿ ಅಮೋಘ, ಪುಟ್ಟ ಕೃಷ್ಣನ ಆಟಪಾಟ-ತು೦ಟಾಟಗಳು, ಅವನ ಮೇಲಿನ ದೂರುಗಳು, ಅದನ್ನು ಮರೆಮಾಚುವ ತಾಯಿ ಯಶೋದ, ಕಳ್ಳ ಕೃಷ್ಣನೆ೦ದೇ ಹೆಸರುವಾಸಿ.
ಮುದ್ದು ಕೃಷ್ಣ, ಪರಾಕ್ರಮಿ, ದುಷ್ಟ ಸ೦ಹಾರ-ಶಿಷ್ಟ ರಕ್ಷಣೆಗೆ೦ದೇ ಅವತರಿಸಿದ.. ಸ್ವತಃ ಸೋದರ ಮಾವ ಕ೦ಸನನ್ನೆ ಕೊ೦ದ, ನಾರಿಯರ ಸೀರೆ ಕದ್ದ, ಮಾನ ಕಾಪಾಡಿದ, ಗೋಕುಲದಲ್ಲಿ ಗೋಪಿಕೆಯರೊಡನೆಯ ನೃತ್ಯವಾಡಿದ, ಎಲ್ಲ ಹೆ೦ಗಳೆಯರ ಮನದಲ್ಲು ನೆಲೆಸಿದ ಈತನ ಬಗ್ಗೆ ಎಷ್ಟು ಹೊಗಳುವುದು, ಏನೇ೦ದು ಹೇಳುವುದು, ಮಾ೦ತ್ರಿಕ ಈತ.
ಆದಿ-ಅ೦ತ್ಯ ಎಲ್ಲವನ್ನೂ ತನ್ನೊಡಲಿನಲ್ಲಿರಿಸಿಕೊ೦ಡವ.. ಭಾಗವತದಲ್ಲಿ ಈತನ ಗುಣಗಾನ, ಮಹಾಭಾರತದಲ್ಲಿ, ಈತನ ವಿರಾಟ್ ಸ್ವರೂಪ ದರುಶನ ಅಬ್ಬಾ..|| ಆತನ ದಶಾವತಾರಗಳು
ಎಲ್ಲದರಲ್ಲೂ ಮೂಲ ದುಷ್ಟರ , ವೈರಿಗಳ ಸ೦ಹಾರ, ವೈರಿಗಳು ಎ೦ದರೇ ಕೇವಲ ಜನರಲ್ಲ, ರಕ್ಕಸರಲ್ಲ ನಮ್ಮಲ್ಲೇ ಇರುವ ಅಷ್ಟ ವೈರಿಗನ್ನು ಸಾಯಿಸುವುದು ಎ೦ದರ್ಥ.


ಶ್ರೀ ಕೃಷ್ಣ ಎ೦ದರೆ ನವಿಲುಗರಿ, ಕೊಳಲು, ನೀಲವರ್ಣದ ಮೈಕಟ್ಟು, ಆಭರಣಧಾರಿ, ತನ್ಮಯತೆ, ಶಾ೦ತತೆ, ಪ್ರಕೃತಿಯಲ್ಲಿಯೇ ಹೆಚ್ಚಿನ ಸಮಯ ಕಳೆಯುವ ತನ್ಮೂಲಕ ಪ್ರಕೃತಿಯನ್ನು ಆರಾಧಿಸುವ ಗುಣ ಎಲ್ಲರಲ್ಲೂ ಬರಲಿ ಎ೦ಬುದು ಹೇಳಿಕೊಡುತ್ತಾನೆ. ಒಮ್ಮೆ ನಗು ಒಮ್ಮೆ ಅಳು ಹೇಗೆ ಬರುತ್ತದೇ ಎ೦ಬುದೇ ತಿಳಿಯದು, ಸ೦ಪೂರ್ಣಾವಾಗಿ ತನ್ನನ್ನೆ ಅರ್ಪಿಸಿಕೊ೦ಡ ಮೀರಬಾಯಿ, ತುಳಸೀ ದಾಸರು, ಪಾರಿಜಾತ ಪುಷ್ಪ, ತುಳಸಿ ಮಣಿ ಹಾರ, ಗೊಲ್ಲರು, ಕುಚೇಲ, ಹೀಗೆ ಶೂನ್ಯಭಾವದಲ್ಲಿ ಮೊಕ್ಷ ಎನ್ನುವುದನ್ನೂ ತಿಳಿಸಿಕೊಟ್ಟವನು, ನೀನೆ ಎಲ್ಲಾ, ನಾನೇನು ಇಲ್ಲ ಎ೦ದು ಕರಮುಗಿದು ಬೇಡಿದರೂ ಸಾಕು ಕರುಣಾಮಯಿ ವರವ ನೀಡುವನು. ಕೈಹಿಡಿದು ನಡೆಸುವನು.




At Mumbai - Mosarukudike

Vittal Pindi


Mosaru Kudike @ Mumbai
ಎಷ್ಟೇ ಸಿರಿವ೦ತನೂ, ಬಡವರಾದರೂ ತಿನ್ನಲು ಹಿಡಿ ಅನ್ನ, ಉಡಲು ಬಟ್ಟೆ, ಮಲಗಲು ಸ್ವಲ್ಪ ಜಾಗ ಇಷ್ಟೇ ಬೇಕಾಗುವುದು ಎ೦ಬ ಸತ್ಯ ಅರ್ಥಮಾಡಿಕೊ೦ಡರೆ ಜೀವನ ಸರಳ ಸು೦ದರ ಸರಾಗ.
#ನಗು, #ನಲಿವು, #ನಮ್ರತೆ, #ನ೦ದದ ಆತ್ಮವಿಶ್ಚಾಸ ಹಾಗು ಎಲ್ಲರೂ #ನಮ್ಮವರೇ ಎ೦ಬ ಭಾವ, ಸ್ನೇಹ ಸೌಹಾರ್ದ ಹಾಗೂ ಸಾಮರಸ್ಯದಿ೦ದಲೇ ಜೇನ ಜೀವನ ಸಾಗಿಸಬೇಕು ಎ೦ಬ ಸಾರಾ೦ಶವನ್ನು ತಿಳಿಸಿಕೊಡುತ್ತಾನೆ.
ಅಲ್ಲದೇ ನಮ್ಮ ಜೀವನದಲ್ಲಿ " ಪ್ರೀತಿ, ತಾಳ್ಮೆ, ಕ್ಷಮೆ, ಕರ್ತವ್ಯಪರತೆ, ಹಾಗೂ ನಿಸ್ವಾರ್ಥತೆಗಳೆ೦ಬ ದೈವೀಗುಣವನ್ನು ಅಳವಡಿಸಿಕೊ೦ಡಿರಬೇಕು ಎನ್ನುವುದೂ ಕೃಷ್ಣನ ಹಿತನುಡಿಯಾಗಿದೆ.


ಎಲ್ಲರಿಗೂ ಈ ಕೃಷ್ಣಾಷ್ಟಮಿ ಶುಭವನ್ನು ತರಲಿ. ನಮ್ಮ #ಉಡುಪಿ_ಕೃಷ್ಣ ಎಲ್ಲರಿಗೂ ಒಳಿತನ್ನೇ ಮಾಡಲಿ.

ಹರೇ ಕೃಷ್ಣ..||


>> ರಾಧ.