Monday 27 June 2016

ವಾರದ ಕಥೆ :: ಮರಿಯಪ್ಪನ ಪಾರ್ಕ್ ನಲ್ಲಿ ಆ ಸಂಜೆ‌







ವಾರದ ಕಥೆ :: ಮರಿಯಪ್ಪನ ಪಾರ್ಕ್ ನಲ್ಲಿ ಆ ಸಂಜೆ‌ 
*******
ನಾವು ಪಾರ್ಕಿಗೆ ಹೋಗುವುದು ವಾರಾಂತ್ಯದ ಅತಿಥಿಗಳಂತೆ.. ಅದೂ ಮಗುವಿನ ಒತ್ತಾಯಕ್ಕೆ, ಸಮಯ ಸಿಕ್ಕಾಗ, ಮಳೆಬರುವುದೆಂಬ ನೆಪ, ಹೀಗೆ ಇಲ್ಲ ಸಲ್ಲದ ನೆಪವೊಡ್ಡಿ ತಪ್ಪಿಸಿಕೊಳ್ಳುವುದು.. ಕಾರಣ ನನಗೆ ಇಷ್ಟವಿಲ್ಲ. ಅನ್ನುವುದಕ್ಕಿಂತಲೂ ಹಸಿರನ್ನೇ ಹೊದ್ದು ಮಲಗಿರುವ ಪ್ರಕೃತಿ ಮಾತೆ ಮಡಿಲಿನಲಿ ಬೆಳೆದ ನನಗೆ ಇದು ಕೃತಕವೆನಿಸುತ್ತದೆ.. ಹಸಿರನ್ನು ನೋಡಲೆಂದೇ ಒಂದು ಕಡೆ ಹೋಗಬೇಕು ಎಂದಾಗ ಮನಸ್ಸಿಗೆ ಬೇಸರದ ಛಾಯೆ. ನಮ್ಮ ಕರಾವಳಿಯ ಸೊಬಗು, ಸಾಲುಮರಗಳು,ಪಶುಪಕ್ಷಿಗಳ ಸುಪ್ರಭಾತ ರಾತ್ರಿ ಮಲಗುವಾಗ ಜೋಗುಳ ,ನಗುವಾಗ ಗೆಳತಿ, ಅಳುವಾಗ ಜೊತೆಗಾತಿ ಹೀಗೆ ಉಸಿರಾಗಿರುವ ಅವಳನ್ನು ಬಿಟ್ಟು ಬಂದು ನಾನು ಅನಾಥೆಯಾದಂತಹ ಭಾವ.
***
ಆದರೂ ಮಗುವಿಗೆ . ಅವನಿಗೆ ಇದಲ್ಲದೇ ಬೇರೆ ಏನಿದೆ ಮರಗಿಡ, ಪಕ್ಷಿಗಳೆಂದು ತೋರಿಸಲು..
ಅದಕ್ಕಾದರೂ ಹೋಗುವುದು. ಹತ್ತಿರವಾಗಿದ್ದರೆ ದಿನವೂ ಹೋಗಬಹುದಿತ್ತು. ಬಸ್ಸಿನಲ್ಲೇ ಇಲ್ಲಾ ಆಟೋದಿಂದ ಹೋಗಬೇಕೆಂದು ಬೇಜಾರು.ಅದಕ್ಕೆ ಅಪರೂಪಕ್ಕೆ ಬೇಟಿ ನೀಡುವುದು. ಮೊನ್ನೆ ರವಿವಾರ ಸಂಜೆ ಮಳೆಯೂ ಸಹ ಕಡಿಮೆ ಇತ್ತು.. ಮನಸ್ಸು ಮಾಡಿ ಹೋಗಿದ್ದೆವು. ಇಷ್ಟೆಲ್ಲಾ ಇದ್ದರೂ ಆ ಹಸಿರನ್ನು ನೋಡಿದರೇ ನನ್ನೇ ನಾ ಮರೆಯುವುದಂತು ನಿಜ. ತಿಳಿಯದೇನೆ ಬಾಲ್ಯಕ್ಕೆ ಸಾಗುವೆ..‪#‎ಮಗು‬ ಅವನಷ್ಟಕ್ಕೆ ಮುದ್ದಾಗಿ ಹೆಜ್ಜೆ ಇಡುತ್ತಿದ್ದ. ‪#‎ಇವರು‬ಸ್ವಲ್ಪ ಹೊಟ್ಟೆ ಬಂದಿದೆ ಕರಗಿಸಿಕೊಳ್ಳಬೇಕು , ದಿನ ಇಲ್ಲಿಗೆ ಬರಬೇಕು ಎಂದು ಆರಂಭಶೂರರಂತೆ ಮಾತು ಉದುರಿಸಿದರು.. ನಾನೋ ಯಾವುದೋ ಕನಸಿನ ಲೋಕಕ್ಕೆ ತೇಲಿದೆ. ಒಂದು ಸುತ್ತು ಬಂದು ಕುಳಿತೆ. ಮಗುವನ್ನು ಆಡಿಸಲು ಕರೆದುಕೊಂಡು ಹೋದರು..
ಹಾಗೆ ಸುತ್ತ ಕಣ್ಣಾಡಿಸಿದೆ....
***

ಜೋಕಾಲಿಯಲಿ ಜೀಕುವ ಮಕ್ಕಳು, ಆನೆ ಸೋಂಡಿಲಿನ ಜಾರು ಬಂಡಿಯಲ್ಲಿ ಜಾರುವ ಮಕ್ಕಳು, ಕೆಲವು ಮಕ್ಕಳಂತೂ ಹೆತ್ತವರ ಎದುರು ಧೈರ್ಯ ಪ್ರದರ್ಶಿಸುವುದು, ಕೆಲವು ಮಕ್ಕಳು ಒಂದು ಹೆಜ್ಜೆ ಮುಂದಿಡಲೂ ಭಯಗೊಳ್ಳುತ್ತಿದ್ದವು.. ನಿಜ. ಹುಟ್ಟಿನಿಂದಲೇ ಈ ಧೈರ್ಯ, ಭಯವೆಲ್ಲ ಬರುವಂತದ್ದು ಅನ್ನಿಸಿತು. ಕೆಲವು ಅಪ್ಪದಿರು ಉತ್ಸಾಹದಿಂದಿದ್ದರು, ಕೆಲವರು ಮುಖ ಸಿಂಡರಿಸಿಕೊಂಡಿದ್ದರು, ಕೆಲವರಿಗೆ ಹೊಟ್ಟೆ ಭಾರ ಬಾಗಲೂ ಆಗುತ್ತಿರಲಿಲ್ಲ. ಕೆಲವು ಮಕ್ಕಳು ಬಿದ್ದು ಅಳುವುದು, ಅಣ್ಣನು ಆಡುವುದನ್ನು ನೋಡಿ ಕೇಕೆ ಹಾಕಿ ನಗುವ ಪುಟ್ಟಮಗು, ಕೆಲ ಹಿರಿಯರು ತಮ್ಮ ವೃತ್ತಿ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಕೆಲವರು ಹಿರಿಯ ಮಹಿಳೆಯರು ಸೊಸೆಯಂದಿರ ದೂರು ಹೇಳುತ್ತಲೇ ೩-೪ಸುತ್ತು ಸುತ್ತಿದರು. ಕೆಲವರಂತು ಕಿವಿಗೆ ಸಂಗೀತ ಸಿಕ್ಕಿಸಿಕೊಂಡು ನಡೆಯುತ್ತಿದ್ದರು. ಕೆಲವು ಹುಡುಗರು ಓಡುವುದು, ಶೆಟಲ್ ಆಟ ಒಂದು ಕಡೆ.. ಬಲೂನು ಮಾರುವಾತ ತನ್ನೆಲ್ಲ ಉಸಿರನ್ನು ಬಲೂನೊಳಗೆ ತುಂಬಿಸಿ ಮಾರಾಟಕ್ಕಿಟ್ಟಿದ್ದ... ಅದನ್ನು ಪಡೆಯಲು ಮಕ್ಕಳ ಹಠ, ತಾಯಿಯಂದಿರ ಸಿಡುಕು. ಹಕ್ಕಿಗಳೆಲ್ಲ ತಮ್ತಮ್ಮ ಗೂಡು ಸೇರುತ್ತಿದ್ದವು, ಕೆಲವು ನೆನೆದ ಜೋಡಿ ಹಕ್ಕಿಗಳು ಅಂಟಿಕೊಂಡು ಕುಳಿತು ಮೈಬಿಸಿ ಮಾಡಿಕೊಳ್ಳುತ್ತಿದ್ದವು. 
ಹಾಸ್ಯ ಮಾಡುತ್ತ ಗೆಳೆಯರ ಕಾಲ್ ಎಳೆಯುವವರ ಗುಂಪು, ಏನೋ ತಾಳ ತಪ್ಪಿತೆಂದು ಗೆಳೆಯನ ಹತ್ತಿರ ಹೇಳಿ ಅಳುತ್ತಿರುವ ಹುಡುಗಿ.. ಮನೆಮನೆ ಕಥೆ , ಪೆನ್ನು ಪೇಪರ್ ಹಿಡಿದು ಬರೆಯುತ್ತಿದ್ದ ಯುವಕವಿ. ಪಾನಿಪುರಿ ಮಾರುವಾತ. ಕೆಲವರು ತಮ್ಮ ನಾಯಿಯ ಜೊತೆ ನಡಿಗೆ, ಅದಕ್ಕೆ ಪ್ರತಿಸ್ಪರ್ಧಿ ಯಂತೆ ಬೀದಿನಾಯಿಗಳು ಸುತ್ತು ಬರುತ್ತಿದ್ದವು. ನಾರ್ಥ್ ಈಸ್ಟ್ , ತಮಿಳರು, ತೆಲುಗು ಜನರು, ಮಾರ್ವಾಡಿಗಳು, ಕನ್ನಡಿಗರು, ಮುಸಲ್ಮಾನರು, ಹಿರಿಯರು ಕಿರಿಯರು, ಎಲ್ಲರ ಸಮಾಗಮ.. 
**


ಗೇಟಿನಿಂದ ಹೊರಗೆ ಒಂದಷ್ಟು ಸ್ವಂತವಾಹನಗಳು ಕಾಯುತ್ತ ನಿಂತಿದ್ದವು, ಕೆಲವರು ಕಾರಿನಲ್ಲಿ ಬಂದು "ಅಯ್ಯೋ ಕೆಸರಾಗುತ್ತೆ, ಮಳೆ ಬೇರೆ ಬಂದಿದೆ , ಬೇಡ ಇಳಿಯುವುದು .." ಎಂದು ವಾಪಾಸ್ಸಾದರು. ಸುತ್ತ ತಿಂಡಿ ತಿನಿಸಿನ ವ್ಯಾಪಾರಿ ಅಂಗಡಿಗಳು... ಒಂದಕ್ಕೆ ಎರಡು ರೇಟು, ಬೇಡವೆಂದರೂ ಮಕ್ಕಳ ಹಠಕ್ಕೆ ತೆಗೆದುಕೊಳ್ಳುವುದು... ಜಾತಿ ಧರ್ಮ ದ , ಗಡಿರೇಖೆಯ ಎಲ್ಲೆ ಮೀರಿದ ಆ ಮುಗ್ಧ‌ಮಕ್ಕಳು ಜೊತೆಗೆ ಆಡುವುದನ್ನು ನೋಡುವುದೇ ಮನಸ್ಸಿಗೆ ಹಿತ.. 
ಅಬ್ಬಾ ಒಂದಾ.. ಎರಡಾ. ನಾನು ಮನದಲ್ಲೆ ಎಲ್ಲವನ್ನು ಸವಿಯುತ್ತಾ ಹಕ್ಕಿಗಳಿಗೆ ಶುಭರಾತ್ರಿ ಹೇಳಿ ಅಲ್ಲಿಂದ ಹೊರಟೆ .. 
.
ಸಿಂಧು ಭಾರ್ಗವ್ ‌..



Friday 24 June 2016

ಕವಿತೆ - ನನ್ನ ಪ್ರೀತಿ ನೌಕೆ



*(@)*
ನನ್ನದೇ‌‌ ಪ್ರೀತಿಯ‌ ನೌಕೆ
ಸಾಗುತಿದೆ ಎಂದಿನಂತೆ...
ಗಾಳಿ ಬಿರುಗಾಳಿ ಬಂದರೂನು
ಇಲ್ಲ ನನಗೆ ಚಿಂತೆ...
😊😍😊
ಹುಟ್ಟು ಸಾವು ನಗುವು ಅಳುವು,
ಒಂದೇ ನಾಣ್ಯದ ಎರಡು ಮೊಗವು...
ನೇಹ-ಪ್ರೀತಿ ಜೊತೆಗೆ ಇರೆ
ಆಗುವುದು ಮನಸ್ಸು ಮಗುವು..
😟😟
ನೆಮ್ಮದಿ ಕದಡುವ ಸುಳಿವು
ಹತ್ತಿರದಲ್ಲೇ ಇದೆ...
ನೌಕೆ  ಮುಳುಗುವ ಸೂಚನೆ
ಸಿಕ್ಕ ಹಾಗಿದೆ...
😍😊😍
ನಾಕು ದಿನದ ಜೀವನಕೆ ಜೊತೆಯಾದ ಪ್ರೀತಿ...
ಉಸಿರಲಿ ಬೆರತ ಮೇಲೆ
ನನಗಿಲ್ಲ ಭೀತಿ...
😊😍😊

- #ಸಿಂಧು ಭಾರ್ಗವ್ .


ಕವಿತೆ - ನನ್ನ ಪ್ರೀತಿ ನೌಕೆ



*(@)*
ನನ್ನದೇ‌‌ ಪ್ರೀತಿಯ‌ ನೌಕೆ
ಸಾಗುತಿದೆ ಎಂದಿನಂತೆ...
ಗಾಳಿ ಬಿರುಗಾಳಿ ಬಂದರೂನು
ಇಲ್ಲ ನನಗೆ ಚಿಂತೆ...
😊😍😊
ಹುಟ್ಟು ಸಾವು ನಗುವು ಅಳುವು,
ಒಂದೇ ನಾಣ್ಯದ ಎರಡು ಮೊಗವು...
ನೇಹ-ಪ್ರೀತಿ ಜೊತೆಗೆ ಇರೆ
ಆಗುವುದು ಮನಸ್ಸು ಮಗುವು..
😟😟
ನೆಮ್ಮದಿ ಕದಡುವ ಸುಳಿವು
ಹತ್ತಿರದಲ್ಲೇ ಇದೆ...
ನೌಕೆ  ಮುಳುಗುವ ಸೂಚನೆ
ಸಿಕ್ಕ ಹಾಗಿದೆ...
😍😊😍
ನಾಕು ದಿನದ ಜೀವನಕೆ ಜೊತೆಯಾದ ಪ್ರೀತಿ...
ಉಸಿರಲಿ ಬೆರತ ಮೇಲೆ
ನನಗಿಲ್ಲ ಭೀತಿ...
😊😍😊

- #ಸಿಂಧು ಭಾರ್ಗವ್ .


ಭಟ್ಟರ ಸಾಲುಗಳು ೦೨

(@)(
"ಭಟ್ರು ಪಿಚ್ಚರ್ ನೋಡಿದ್ರೆ ಏನೇನೋThoughts ಬರುತ್ತೆ
ಬೇಡ ಅ೦ದ್ರೂ ಪೆನ್ನು ಗೀಚೋಕೆ ಶುರುಮಾಡ್ತದೆ...
Dull ಆಗಿರೊ ಮನಸ್ಸಲ್ಲಿ ಉತ್ಸಾಹ ಚಿಮ್ಮುತ್ತೆ...
Life ಇಷ್ಟೇನಾ...?! ಅ೦ತ Easy ಆಗ್ ತಗೋಬೇಕ್ ಆನ್ಸುತ್ತೆ.."


(@)(
ಹನ್ನೊ೦ದು ವರ್ಷಕ್ಕೆಲ್ಲ ಗ೦ಡ್_ಹೈಕ್ಳಿಗೆ ಮೀಸೆ ಬರ್ತದೆ,
ಇನ್ನೊ೦ದು ವರ್ಷ ಕಾಯೋದ್ರೊಳಗೆ ಲವ್ವಲ್ಲಿ ಬೀಳ್ತವೆ,
ಪಿ.ಯೂ.ಸಿ ಮುಗಿಸೋದ್ರೊಳಗೆ ಕೈಗೆ ಮಗಿನ ಕೊಡ್ತವೆ,
Genaration ಇಷ್ಟು Fast ಆಗೋಯ್ತಾ ಸಿವನೇ... ಅ೦ತ ಅಜ್ಜ ಅಳ್ತವ್ನೆ..


(@)(
ಕಸ ಆದ್ರೂ ಕೂಡ ನೀರಲ್ಲಿ ತೇಲಿ ಬರ್ತಾ ಇರುತ್ತೆ..
ಕಷ್ಟಗಳು ಹಾಗೆ ಕಣ್ರಪ್ಪಾ... ನಮ್ಮ ಜೀವನದಲ್ಲಿ ತೇಲಿ ಹೋಗ್ತಾ ಇರ್ತವೆ...
(( ಏನಿದ್ರು Light ಆಗ್ ತಗೊಬೇಕು ))


(@)(
ಪಿಜ್ಜಾ ಮೇಲೆ ಚೆನ್ನಾಗಿ ಜೋಡಿಸಿರೋ ಹಸಿಬಿಸಿ
ಟೋಮೆಟೊ, ಆನಿಯನ್ ತರಾನೆ,
ನಮ್ಮ ನಡುವೆ ಚೆನ್ನಾಗಿ ಅಲ೦ಕಾರ ಮಾಡಿಕೊ೦ಡಿರೊ
ಅರೆಬರೆ ಬೆ೦ದ ಮನಸ್ಸುಗಳು ಇದ್ದೇ ಇರ್ತವೆ...


(@)(
ನೂರಾರು ನೋವುಗಳಿದ್ರು ಮುಖವನ್ನ Cauliflower  ತರ ಅರಳಿಸ್ಕೊ೦ಡಿರಿ,
ಇಲ್ಲಾ೦ದ್ರೆ ಕಾಲಿ ಒಣಗಿದ Flower ತರ ಆಗ್ ಬಿಡುತ್ತೆ Life...


(@)(
ಅಪ್ಪ-ಅಮ್ಮ Life ನ ಹೇಗೆ Lead ಮಾಡ್ಬೇಕು ಅ೦ತ ಹೇಳಿಕೊಡದಿದ್ರೂ ಅಡ್ಡಿಲ್ಲ
ಬ೦ದ ಹಾಗೇ Problems ನ Face ಮಾಡ್ಕೊ೦ಡು ಹೋದ್ರೆ ಸಾಕು...


(@)(
ಚೆನ್ನಾಗಿ ಉರಿತಾ ಇರೋ ಬೀದಿದೀಪಗಳ ನಡುವೆ ಪಕ್-ಪಕ್ ಅ೦ತ
Starting Trouble ನಲ್ಲಿ ಇರೋ ದೀಪ ಒ೦ದು ಇದ್ದೇ ಇರುತ್ತೆ...
(( Don't Worry aa ; Take It Easy ಈ ಸಲಿ Chance Miss ಆದ್ರೆ ಇನ್ನೊಮ್ಮೆ ಸಿಗುತ್ತೆ ))

(@)(

ಹುಟ್ಟಿದ್ದು ತಪ್ಪಲ್ಲ, ಏನೂ ಮಾಡದೇ ಸಾಯ್ತಾರಲ್ಲ ಅದು ದೊಡ್ಡ ತಪ್ಪು...
ನಿ೦ತ ನೀರಲ್ಲಿ ಹುಳಗಳು ತಲೆ ಎತ್ತುತ್ವೆ... ಹರ್ಕೊ೦ಡ್ ಹೋಗ್ತಾ ಇರ್ಬೇಕು...

(( ಸಾಯೊದ್ರೊಳಗೆ ಏನಾದರೂ ಸಾಧಿಸಿ, ಹೆಜ್ಜೆಗುರುತು ಬಿಟ್ಟು ಹೋಗ್ಬೇಕು ))

ಶಿವನೇ ಚೊ೦ಬೇಸ್ವರಾ...


‌(( (( -ಸಿ೦ಧು_ಭಾರ್ಗವ್- )) ))

ಭಟ್ಟರ ಸಾಲುಗಳು

:: 😍😂😉😊😍😂😉
ಯೋಗರಾಜ್ ಭಟ್ರಿಂದ ಸ್ಪೂರ್ತಿ ಪಡೆದ ಸಿಂಧು ಭಟ್ರು...
😍😂😉😊😍😂😉 ::

(1)(
ಮೊಗ್ಗು ಅರಳುತ್ತೋ? ಇಲ್ವೋ? ಆದ್ರೆ ದುಂಬಿ ಮಾತ್ರ ಕಾಯ್ತಾ ಇರುತ್ತೆ....
(2)(
ಸೂತ್ರವಿಲ್ಲದ ಕನಸುಗಳನ್ನು ಆಗಸದಲ್ಲಿ ಹಾರಬಿಡುವ ಹುಡುಗರು....
(3)(
ಊರಿನಲ್ಲಿ ಚಿಟ್ಟೆಗಳ ಸಂಖ್ಯೆ ಜಾಸ್ತಿಯಾಗಿದೆ ಎಂದು ಮನದಲ್ಲಿ ಹೂದೋಟ ಆರಂಭಿಸಲು ಹೊರಟ ಹುಡುಗರು...

(@)(@)(@)
Dove ರಾಣಿ Dialogues :
(1)(
ನಿನ್ನೆ ವರೆಗಿನ ಪ್ರೀತಿ ಯಾಕೋ ಬೋರ್ ಆಗ್ತಾ ಇದೆ. ಬಿಟ್ಬಿಡ್ಲಾ...?!
(2)(
ಇಲ್ಲೊಬ್ಬ ಸೈಡ್ ಲಿ ನನ್ನ ನೋಡಿ ರಂಗೋಲಿ ಹಾಕ್ತಾ ಇದ್ದಾನೆ. ಹೋಗಿ ಬಣ್ಣ ತುಂಬ್ಲಾ.. ?!
(3)(
ಮೋಡ ಕಪ್ಪುಗಟ್ಟಿದೆ ..  ಬರೋ ಮಳೆಗೆ ಹಳೇ ಲವ್ ಜೊತೆ ಡ್ಯುಯೆಟ್ ಹಾಡ್ಲಾ...?!
(4)(
ಪಂಚರ್ ಆಗಿರೋ ಕನಸುಗಳನ್ನು ಇಲ್ಲೇ ಬಿಟ್ಟು, ಆಟೋ ಹತ್ಲಾ..?!
.  😉😊😂😇😉😉😊😉😂  .

- ಸಿ೦ಧು ಭಾರ್ಗವ್ <3

ವಾರದ ಸಣ್ಣ ಕಥೆ :: ಹೆತ್ತವರ ನೋಡಿದ್ದೇವೆ.. ಅವರಲ್ಲಿನ ಗಂಡಹೆಂಡಿರನ್ನಲ್ಲ....

ವಾರದ ಸಣ್ಣ ಕಥೆ :: ಹೆತ್ತವರ ನೋಡಿದ್ದೇವೆ.. ಅವರಲ್ಲಿನ ಗಂಡಹೆಂಡಿರನ್ನಲ್ಲ....
ಗಾಢ ಮೌನವಾಗಿದ್ದ ರೂಮಿನಿಂದ ಹೊರ ಬಂದವಳೇ ಗಂಡನನ್ನು ಹುಡುಕಿದಳು.... ಸೋಫಾದಲ್ಲೇ ಇದ್ದವರು ಅಲ್ಲಿ ಕಾಣಿಸದಾಗ ಹೆಸರು ಕೂಗುತ್ತಾ ಹುಡುಕತೊಡಗಿದಳು...
ಆತ ಗಾರ್ಡನ್ನಿನ ಒಂದು ಮೂಲೆಯಲ್ಲಿ ‌ಭಾರವಾದ ಮನಸ್ಸಿ ನಿಂದ ಅರಳೋ ಹೂವನ್ನು ನೋಡುತ್ತ ನಿಂತಿದ್ದ......
****
'' ನಾನು ತಾಯಿ ಮನೆಯಲ್ಲಿ ರಾಣಿ ತರ ಇದ್ದೇ... ಯಾವುದೂ ಕುಂದು ಕೊರತೆ ಇಲ್ಲದ ಹಾಗೆ ನನ್ನ ಅಪ್ಪ ಅಮ್ಮ ನೋಡ್ಕೊಂಡಿದ್ದಾರೆ ಗೊತ್ತಾ.... ನೀವು ನೋಡಿದರೆ ಕೈಯಲ್ಲಿ ಕಾಸಿಲ್ಲ ಅಂತ ಅಳ್ತೀರ.... ತಿಂಗಳು ಕೊನೆಗೆ ತೂತು ಬಿದ್ದ ಜೇನನ್ನು ನಾಚಿಕೆ ಇಲ್ಲದೇ ನನ್ನ ಎದುರು ತೋರಿಸ್ತೀರಾ.... ಮಹಾರಾಣಿ ತರ ಬೆಳೆದವಳು ನಾನು, ನೀವು ಒಳ್ಳೆಯ ಉದ್ಯೋಗದಲ್ಲಿದ್ದೀರಿ ಅಂತ ತಾನೇ ನಿಮಗೆ ಹೆಣ್ಣು ಕೊಟ್ಟಿದ್ದು??
ಮುಂಜಾನೆಯ ಒಗ್ಗರಣೆಯಂತೆ ಗಂಡನಿಗೆ ಬೈದು ಕೋಣೆ ಒಳಗೆ ಹೋಗಿ ಅಪ್ಪ ಅಮ್ಮನ ಫೋಟೋ ನೋಡುತ್ತ ಅಳಲು ಶುರುಮಾಡಿದಳು ಶಿಲ್ಪಾ.....
ಅದೇನೋ ನೆರಳು ಹಿಂದಿನಿಂದ ಬಂದಂತಾಯಿತು.... ತಿರುಗಿ ನೋಡಿದರೆ ಅಮ್ಮ...
" ಯಾಕೆ ಹೀಗೆ ಮಾಡ್ತಾ ಇದ್ದೀಯಾ... ನಾವು ನಿನಗೆ ಇದನ್ನೇ ಕಲಿಸಿಕೊಟ್ಟಿದ್ದಾ...?
ನಿನಗೇನೇ ಗೊತ್ತು.. ನಿನ್ನ ದೊಡ್ಡದು ಮಾಡಲು ನಾವು ಎಷ್ಟು ಕಷ್ಟ ಪಟ್ಟಿದ್ದೇವೆ ಎಂದು?
ಹರಿದ ಸೀರೆಯನ್ನು ಬುಡಮೇಲು ಮಾಡಿ ಉಟ್ಟು, ನಿನಗೆ ಹಬ್ಬಕ್ಕೆಂದು ಹೊಸ ಬಟ್ಟೆ ಕೊಡಿಸಿದ್ದೇವೆ...
ನಡು ರಾತ್ರಿ ಅಪ್ಪ ಕೆಲಸದಿಂದ ಬಂದು ಬಾಗಿಲು ಬಡಿದಾಗ, ಸಂಜೆ ಏನೂ ತಿನ್ನಲಿಲ್ಲ ಕಣೇ, ತುಂಬಾ ಕೆಲಸವಿತ್ತು ... ಹೊಟ್ಟೆ ಹಸಿಯುತ್ತಿದೆ ಎನ್ನುವಾಗೆಲ್ಲಾ ಕರುಳು ಚುರುಕ್ ಅನ್ನುತ್ತಿತ್ತು.... ನೀನು ಗಡತ್ತಾಗಿ ನಿದ್ರೆಯಲ್ಲಿರುತ್ತಿದ್ದೆ..
ಕೂಡಿಸಿಟ್ಟ ಹಣದಲ್ಲಿ ನಿನಗಾಗೇ ಓದಲು ರೂಮಿನ ವ್ಯವಸ್ಥೆ ಮಾಡಿದ್ದೆವು.. ಬೆಳಿಗ್ಗೆ ಬಿಸಿಬಿಸಿ ತಿಂಡಿಮಾಡಿ ಕೊಟ್ಟು ನಾನು ತಂಗಳ ತಿನ್ನುತ್ತಿದ್ದೆ.. ಅದನ್ನರಿಯದ ನೀನು ಕಾಲೇಜು ಹುಡುಗರೆಲ್ಲ ಮದ್ಯಾಹ್ನ ಊಟಕ್ಕೆ ಕ್ಯಾಂಟನ್ ಗೆ ಹೋಗುತ್ತಾರೆ, ನಾನೊಬ್ಬಳೇ ಈ ತಣಿದ ತಿಂಡಿ ತಿನ್ನಬೇಕು ಎಂದಾಗ ಅದಕ್ಕೂ ಹಣ ಕೊಡುತ್ತಿದ್ದೆ..
ಹೌದು, ತಪ್ಪು ನಮ್ಮದೇ.. ನಿನಗೆ ಹೆತ್ತವರಾಗಿ ಮಹಾರಾಣಿಯಂತೆ ನೋಡಿಕೊಂಡೆವು.. ಆದರೆ ಗಂಡ-ಹೆಂಡಿರಾಗಿ ನಾವು ಹೇಗಿದ್ದೆವು ಎಂದು ನಿನಗೆ ತೋರಿಸಿಕೊಡಲಿಲ್ಲ.. ನೆರಮನೆ ಕನಕಳ ತರ ನನ್ನ ಗಂಡ ಬಡವ, ಏನೂ ತರುವುದಿಲ್ಲ, ಮನೆಗಾಗಿ ಏನೂ ಮಾಡುವುದಿಲ್ಲ ಎಂದು ಮಕ್ಕಳೆದುರು ಅತ್ತುಕರೆದು ಅಪ್ಪ ಒಬ್ಬ ನಿಶ್ಪ್ರಯೋಜಕ ಎಂಬಂತೆ ಮಾಡಿಬಿಟ್ಟಿದ್ದಳು..
ಹಾಗೆ ನಿನ್ನೆದುರು ಅಳಬೇಕಿತ್ತು ಅಲ್ವಾ..??
ಆಗ ಇಷ್ಟು ದೊಡ್ಡ ಕನಸನ್ನು ನೀನು ಕಾಣುತ್ತಲೂ ಇರಲಿಲ್ಲ, ತಂದೆ ಮೇಲೆ ಗೌರವವೂ ಇರುತ್ತಿರಲಿಲ್ಲ....
ಜೀವನ ಹೀಗೆ. ಮಗಳಾಗಿ ರಾಣಿ ಹಾಗೆ ಇರಬಹುದು.. ಹೆಂಡತಿಯಾಗಿ ತ್ಯಾಗಮಯಿ ಆಗಲೇಬೇಕು. ಅದನ್ನು ಅರ್ಥ ಮಾಡಿಕೋ..
ಯಾರಿಗಾಗಿ ಇದೆಲ್ಲಾ ಮಾಡುವೆ? ನಿನ್ನ ಮಕ್ಕಳು, ಗಂಡನಿಗೇ ತಾನೆ...?
ಆಗಲೇ ನೀ ಈಗ ಹೇಳಿದ ಮಾತು ನಿನ್ನ ಮಕ್ಕಳು ಹೇಳಲು ಸಾಧ್ಯ.. ಗೌರವಿಸಲು ಸಾಧ್ಯ....
**
‪#‎ಸಿಂಧು‬_ಭಾರ್ಗವ್...

ಕವನ : ಕಾಣಿಕೆ

: ಕಾಣಿಕೆ :
ವಾರಕ್ಕೊಂದು ಕಥೆ,
ವಾರಕ್ಕೊಂದು ಕವಿತೆ,
ಶಾರದಾ ಮಾತೆಗೆ
ನನ್ನ ಪುಟ್ಟ ಕಾಣಿಕೆ...
*
ಬುದ್ಧಿಮಾತ ಹೇಳುವಷ್ಟು
ದೊಡ್ಡವಳು ನಾನಲ್ಲ,
ಸಲಹೆ ಸೂಚನೆ ಬರಬೇಕೆಂಬ ಹಂಬಲ...
*
ನಡೆದು ಬಂದ ಹಾದಿ,
ಪಾಠ ಕಲಿತ ರೀತಿ,
ಮುದ್ದು ಹುಡುಗನ ಪ್ರೀತಿ,
ಇವೇ ಬರಹದ ಜೀವಾಳ...
*
ನಗುವುದು,ಅಳುವುದು,
ಕನವರಿಕೆ ,ಹಾರೈಕೆ
ಪದಗಳ ರೂಪದಲಿ
ಚಿಮ್ಮುವುದು ಮನಸಾರ...!!

ಸಿಂಧು ಭಾರ್ಗವ್ .. <3

ವಾರಕ್ಕೊಂದು ಸಣ್ಣ ಕಥೆ :: ನೆಮ್ಮದಿಯ ಅರಸುತ್ತ ...

ವಾರಕ್ಕೊಂದು ಸಣ್ಣ ಕಥೆ :: ನೆಮ್ಮದಿಯ ಅರಸುತ್ತ ...
***
#ಪ್ರತಿಭಾ ಹೆಸರಿಗೆ ತಕ್ಕಹಾಗೆ ಬಹುಮುಖ ಪ್ರತಿಭೆಯುಳ್ಳ ಹುಡುಗಿ. ಯಾವುದಕ್ಕೂ ಸೈ. ಗಂಡು ಮಕ್ಕಳಂತೆ ಹೊರಗಿನ ಕೆಲಸಕ್ಕೂ , ಹೆಣ್ಣುಮಕ್ಕಳಂತೆ ತಾಯಿ ಜೊತೆ ಅಡುಗೆ ಮನೆಯಲ್ಲೂ ಸರಾಗವಾಗಿ ಓಡಾಡಿಕೊಂಡಿದ್ದಳು. ನೃತ್ಯ, ಸಂಗೀತ, ಆಟ-ಪಾಠ ಎಲ್ಲದರಲ್ಲೂ ತರಗತಿಯಲ್ಲಿ ಮೊದಲಿಗಳು. ಶಾಲೆಗೂ, ಹೆತ್ತವರಿಗೂ ಕೀರ್ತಿ ತಂದಿದ್ದಳು.
*
ಡಿಗ್ರಿ ಮುಗಿಸಿ ಒಳ್ಳೆಯ ಉದ್ಯೋಗಕ್ಕೆ ಸೇರಿಕೊಂಡಳು. ಹೆತ್ತವರಿಗೂ ನೆಮ್ಮದಿ. ಅವಳಿಗೂ ಖುಷಿ. ಬಿಡುವಿರದ ಕೆಲಸ. ಅವಳಿಂದ ಜವಾಬ್ದಾರಿಯುತವಾಗಿ ನಿಭಾಯಿಸಲು ಸಾಧ್ಯವೆಂದು ಅರಿತೇ ಮ್ಯಾನೇಜರ್ ಆ ಹುದ್ದೆಗೆ ಆಯ್ಕೆ ಮಾಡಿದ್ದರು. ಹಗಲೂ-ಇರುಳೆನ್ನದೇ ಊಟ-ನಿದಿರೆಯಿಲ್ಲದೇ ಕಿಂಚಿತ್ತು ಲೋಪದೋಷ ಬರದಂತೆ ಕರ್ತವ್ಯ ನಿರ್ವಹಿಸುತ್ತಿದ್ದಳು..
**
ಅಮ್ಮ ಒತ್ತಾಯಿಸಿದಕ್ಕೆ ಒಮ್ಮೆ ಬಿಡುವು ಮಾಡಿಕೊಂಡು ದೇವಸ್ಥಾನಕ್ಕೆ ಹೋಗುತ್ತಾಳೆ. ಅಲ್ಲಿ ಕಾಲೇಜಿನಲ್ಲಿದ್ದಾಗಿನ  ಜೀವದಗೆಳತಿ #ಕಲಾ ಸಿಕ್ಕಿ ಭಾವೋದ್ವೇಗಕ್ಕೊಳಗಾಗುತ್ತಾಳೆ.. ಅವಳೂ ಪ್ರತಿಭಾವಂತೆ, ಕಾಲೇಜಿನಲ್ಲಿ ಎಲ್ಲದರಲ್ಲೂ ಪ್ರತಿಸ್ಪರ್ಧಿ ಯಾಗಿದ್ದಳು. ಉದ್ಯೋಗಕ್ಕೂ ಹೋಗುತ್ತಿದ್ದಳು. ಆದರೆ ಹೆತ್ತವರ ಮಾತಿನಂತೆ ಮದುವೆಯಾಗಿ ಮುದ್ದಾದ ಯುವರಾಣಿಯ ಆರೈಕೆಯಲ್ಲಿ ಬಿಜಿಯಾಗಿದ್ದಳು .. ಅದರ ಜೊತೆಗೆ ತಾನು ಕಲಿತ ಭರತನಾಟ್ಯ, ಸಂಗೀತವನ್ನು ಪುಟ್ಟ ಮಕ್ಕಳಿಗೆ ಧಾರೆಯೆರೆಯುತ್ತಿದ್ದಳು.. ಅಲ್ಲಿಯೂ ಹಣ ಬರುತ್ತಿತ್ತು.. ಜೊತೆಗೆ ಗೌರವ , ನೆಮ್ಮದಿಯ ಜೀವನ ಅವಳದು. ಅಲ್ಲದೆ ಅವಳಲ್ಲಿನ ಕಲೆಯನ್ನು ಪ್ರೋತ್ಸಾಹಿಸುವ ಗಂಡ, ಅತ್ತೆ-ಮಾವ . ಎಂದೆಲ್ಲಾ ತನ್ನ ಖುಷಿಯನ್ನು ವಿಧವಿಧವಾಗಿ ಹಂಚಿಕೊಳ್ಳುತ್ತಿದ್ದಳು.
ಆಗ ಪ್ರತಿಭಾಳ ಒದ್ದಾಟದ ಜೀವನ ಎಣಿಸಿ ತಾಯಿಕರುಳಿಗೆ ಸಂಕಟವಾಗುತ್ತಿತ್ತು. ಪ್ರತಿಭಾಳಿಗೂ ಏನೇನೋ ಗೊಂದಲ,ಅಸ್ಪಸ್ಟತೆ ಎದುರಾಗತೊಡಗಿತು. ನಾನು ಯಾಕಾಗಿ ಒದ್ದಾಡುತ್ತಿರುವೆ.? ಒಂದು ನಿಮಿಷವೂ ಬಿಡುವಿಲ್ಲದಂತೆ ಯಾಕೆ ದುಡಿಯಬೇಕು?! ಯಾರಿಗಾಗಿ ಈ ಹೆಸರು ಕೀರ್ತಿ.!? ಎಂದು ಕುಸಿದು ಬಿಟ್ಟಳು. ನಿಧಾನಕ್ಕೆ ತಾಯಿ ಮಾತುಗಳೆಲ್ಲವೂ ಅವಳ ಸುತ್ತ ಸುತ್ತತೊಡಗಿತು. ಪ್ರೀತಿಸಿದವನ
..
" ಮದುವೆಯಾಗಲು ಒಪ್ಪುವೆಯಾ.? ವರನ ಕಡೆಯವರು ತುಂಬಾ  ಒತ್ತಾಯಿಸುತ್ತ ಇದ್ದಾರೆ.?! ಆ ಹುಡುಗ ನಿನಗಾಗಿಯೇ ಕಾಯುತ್ತಿದ್ದಾನೆ. ನಿನ್ನ ಸಂಗೀತದ ವೀಣೆ ರೂಮಿನಲ್ಲಿ ಧೂಳು ತಿನ್ನುತ್ತಿದೆ ನೋಡಿದೆಯಾ?! ನಾಟ್ಯ ಗೆಜ್ಜೆಗಳು ಸದ್ದುಮಾಡದೇ ಮೌನ ತಳೆದಿವೆ ಗಮನಿಸಿದೆಯಾ!? ನೀನು ಎಲ್ಲಿರುವೆ ಎಂದು ಒಮ್ಮೆ ಯೋಚಿಸಿದ್ದೀಯಾ..?! "
ಹ್ಮ.....!!
ಎತ್ತರೆತ್ತರ ಏರುವ ಹುಮ್ಮಸ್ಸಿನಲ್ಲಿ ಸಣ್ಣ ಸಣ್ಣ ಖುಷಿಗಳನ್ನೇ ಕೊಂದಿರುತ್ತೇವೆ. ಅದನ್ನೇ ತಮ್ಮ ಮೆಟ್ಟಲನ್ನಾಗಿಸಿಕೊಂಡಿರುತ್ತೇವೆ.. ಆದರೆ ಹೆಣ್ಣು ಹೆಣ್ಣೇ... ಮಾಡಬೇಕಾದ ಕರ್ತವ್ಯವನ್ನು ಮಾಡಲೇಬೇಕು. ಇನ್ನೂ ಕಾಲ ಮಿಂಚಿಲ್ಲ ಎಂದೆಣಿಸಿದವಳೇ ಯಾಂತ್ರಿಕ ಜೀವನದಿಂದ ಹೊರಬಂದು ಮತ್ತೆ ಹೊಸ ಜೀವನ ಆರಂಭಿಸಿದಳು. ಅವಳಿಗಾಗಿಯೇ ಕಾಯುತ್ತಿದ್ದ ಹೆಸರಾಂತ ಭರತನಾಟ್ಯಗಾರನ ಕೈಹಿಡಿದಳು. ತನ್ನ ಕಲೆಗೆ ಮತ್ತೆ ಜೀವ ನೀಡಿದಳು. ಮೌನಿಯಾಗಿದ್ದ ಗೆಜ್ಜೆಗಳಿಗೆ ಸ್ವರತುಂಬಿಸಿದಳು. ಕಲಾರಾಧನೆಯಿಂದ ಅವರ ಮನೆ ತುಂಬಿಹೋಗಿತ್ತು.....

- ಸಿಂಧು ಭಾರ್ಗವ್ ...

Wednesday 15 June 2016

ತವರು ಸಿರಿ kavite



ಮಸಿಹಿಡಿದ ಮಾಡಿನಲಿ
ಅಪ್ಪ ಬೈದ ನೆನಪಿದೆ,
ಒಲೆದ೦ಡೆ ಮೂಲೆಯಲಿ
ಬೆಕ್ಕು ಮರಿಹಾಕಿದೆ...!!

ಮೊಳೆತ ಅಣಬೆ ಹುಡುಕಲು
ಕೊರಗ ಬ೦ದಿಹನು,
ಮರಕೆಸುವು ತಲೆ ಎತ್ತಿ
ಅರಳಿ ನಿ೦ತಿಹುದು...!!

ಕಾಣಿ ಮೀನು
ತೋಡಿಗೀಗ ಹೊಸಬನ೦ತೆ,
ಅ೦ಚುಕಟ್ಟಿನಲಿ
ಸೋಣೆಹೂ ನಗುತನಿ೦ತಿದೆ...!!

ಗದ್ದೆಗಿಳಿದಿವೆ ಕೋಣಗಳು
ಮಾಲೀಕನ ಜೊತೆಗೆ,
ಕೆಸರಿನಲಿ ನಟ್ಟಿನೆಡುವ
ಕಾಯಕ ಹೆ೦ಗಸರಿಗೆ...!!

ಮೋಡಕಟ್ಟಿದೆ ಇನ್ನೇನು
ಮಳೆಬರುವ ಚಿ೦ತೆ,
ಬಿಸಿಬಿಸಿ ಚಾತಿ೦ಡಿ
ಜೊತೆ ಮಾತುಕತೆ...!!

ಕೊಕ್ಕರೆಯು ಜೊತೆಗೂಡಿ
ಮಾತಿಗಿಳಿದಿದೆ,
ಹುಳುಹುಪ್ಪಟೆ ತಿ೦ದು
ತೇಗುತಲಿದೆ...!!

ಸ೦ಜೆಯಾಯ್ತು ಹೆ೦ಗಸರು
ಕೆಲಸ ಮುಗಿಸಿದ ನೋಟ,
ಸ೦ಬಳ ಸೆರಗಲಿ ಕಟ್ಟಿ
ಮನೆಕಡೆಗೆ ಓಟ..

ಹಸಿರು ಮೈತು೦ಬಿ
ನಗುವ ನಮ್ಮ ಪ್ರಕೃತಿ...
ಕವಿಹೃದಯಕೆ ಇವಳು
ಸೋಜಿಗದ ಸ೦ಗತಿ...!!


- ಸಿ೦ಧು ಭಾರ್ಗವ್ ...

ಕೆಟ್ಟ ಕನಸು kavite


ಕೆಟ್ಟ ಕನಸು

(@)
ಬಿರುಕುಬಿಟ್ಟ ಭೂಮಿಯಲ್ಲಿ
ನೀರು ಹುಡುಕುವ ಜನರು,
ಬುಡವಿಲ್ಲದ ಬಳ್ಳಿಯಿ೦ದ
ಹೂವು ಹುಡುಕುವ ಜನರು...!!
*
ಬೇರು ಸುಟ್ಟ ಮರದಿ೦ದ
ಚಿಗುರು ಹುಡುಕುವ ಜನರು,
ನೀರಿಲ್ಲದ ನದಿಯಲ್ಲಿ
ದೋಣಿ ನಡೆಸುವ ಜನರು...!!
*
ಮೋಡಗಳೆ ಇಲ್ಲದೇ
ಕಾಯುವರು ಮಳೆಗಾಗಿ,
ಚಿಗುರೆಲ್ಲ ಹೋಗಿವೆ
ಬಿಸಿಲಿಗೆ ಒಣಗಿ...!!
*
ಅರೆಸತ್ತ ಮೀನು
ಹೊಡಕಾಡುತಿದೆ ನೀರಿಗಾಗಿ ,
ಮಗುವಿನ ಮೂಳೆ
ಬಾಯ್ಬಿಡುತಿದೆ ಆಹಾರಕ್ಕಾಗಿ...!!
*
ಹಸುಗಳು ಹಸಿರಿಲ್ಲದೇ
ಏದುಸಿರು ಬಿಡುತಿವೆ,
ಬಿಸಿಗಾಳಿ ಉಸಿರುಗಟ್ಟಿ
ಜೀವವ ಹಿ೦ಡುತಿದೆ...!!
*
ಕತ್ತಲೆಯಾವರಿಸಿ ಮನಕೀಗ
ಮುಸುಕು ಕಟ್ಟಿದೆ,
ಏನಾಗುತಿದೆ ಭೂಮಿಯಲಿ?
ಒ೦ದೂ ತಿಳಿಯದಾಗಿದೆ...!!

- ಸಿ೦ಧು ಭಾರ್ಗವ್ ..

Friday 10 June 2016

ವಾರದ ಸಣ್ಣ ಕಥೆ - ಅವರವರ ಪಾಲಿಗೆ - Story For Kannada Short Film





   ಅ೦ತಹ ಬಿರು ಬೇಸಿಗೆ ಕಾಲದಲ್ಲಿ ಖಾರ-ಕರಿದ ತಿ೦ಡಿ ತಿನ್ನಲು ಯಾರೂ ಮನಸ್ಸು ಮಾಡುವುದಿಲ್ಲ.. ಅ೦ತದ್ದರಲ್ಲಿ ಆ ಅಜ್ಜಿ ಅವನ ಅ೦ಗಡಿಗೆ ಹೋಗಿ ಬಿಸಿಬಿಸಿ ಬಜ್ಜಿ ಖರೀದಿಸಿ ಒಳ್ಳೆಯದಾಗಲಿ ಎ೦ದು ಹರಸಿದ್ದಳು..



ಅದೊ೦ದು ಸ೦ಜೆ ಚುಮುಚುಮು ಮಳೆ ಹಿತವಾಗಿ ಬರುತ್ತಿತ್ತು.. ಬೇಡವೆ೦ದರೂ ಜೋಡೀಹಕ್ಕಿಗಳಿಗೆ ಬೆಚ್ಚಗೆ ತಬ್ಬಿಕೊ೦ಡು ಮಲಗುವ ಮನಸ್ಸು.. ಕನಸುಗಳ ಹೆಣೆಯುತ್ತ ಕತ್ತಲೆಕೋಣೆಯಲಿ ಹೊದ್ದು ಮಲಗಿರುವ ಜೋಡಿಗಳು.. ಪಿಸುಮಾತು, ಗುಸುಗುಸುನಗು .. ಅವರಿಗೇನೋ ರಸಮಯ ಕ್ಷಣ.. ಮನೆಯಿ೦ದ ಹೊರಕ್ಕೆ ಇದ್ದವರ ಗತಿ? ಹ್ಮ... ಅಲ್ಲೆ ಸಮೀಪದಲ್ಲಿ ಮಾರುಕಟ್ಟೆಯೊ೦ದಿದೆ.. ಅಲ್ಲಿರುವವರೆಲ್ಲರೂ ಸ್ವಾಭಿಮಾನಿಗಳೇ.. ಯಾಕೆ ಕೇಳಿ? ಮುದಿವಯಸ್ಸಿನ ಅಜ್ಜ-ಅಜ್ಜಿ ಎನ್ನದೇ ಎಲ್ಲರೂ ಹಣ್ಣು-ಹೂವು-ತರಕಾರಿಯನ್ನು ರಾಶಿ ಹಾಕಿಕೊ೦ಡು ನ್ಯಾಯವಾಗಿ ಮಾರುತ್ತಿದ್ದರು.. ವಯಸ್ಸಾದರೂ ತಮ್ಮ ಮಕ್ಕಳ ಕೈನೋಡಬಾರದು ಎ೦ದು ಬಿಸಿಲು ಮಳೆಚಳಿಗೂ ಹೆದರದೇ ವ್ಯಪಾರದಲ್ಲಿ ತೊಡಗಿರುವುದು ಸ್ವಾಭಿಮಾನದ ಸ೦ಕೇತವೇ ತಾನೆ.. ಮೋಡ ಕವಿದು ಐದು ಗ೦ಟೆಗಾಗಲೇ ಕತ್ತಲೇ ಆವರಿಸಿತ್ತು.. ಬೀಸುವ ಗಾಳಿಗೆ ಮೈನಡುಗುತ್ತಿತ್ತು ..ಆ ಬೀದಿಯಲ್ಲಿ ಅಜ್ಜಿ ಹಣ್ಣನ್ನು ಗುಡ್ಡೆಹಾಕಿಕೊ೦ಡು ಮಾರಲು ಕುಣಿತಿದ್ದಳು.. ಹಾದಿ ತಿರುವಿನಿ೦ದ ಬರುವ ಪ್ರತಿಯೊಬ್ಬ ಜನರನ್ನೂ ಕಣ್ಣು ಮುಚ್ಚದೇ ನೋಡುತ್ತಿದ್ದಳು.. ಹರಕು ಛತ್ರಿ ಜೊತೆಗೆ ನಡುಗುತ್ತಾ ಯಾರ ಕಾಲುಗಳು ಅವಳ ಅ೦ಗಡಿ ಎದುರು ನಿಲ್ಲುತ್ತವೋ ಎ೦ದು ನಿರೀಕ್ಷಿಸುತ್ತಿದ್ದಳು..ಇಲ್ಲ.. ಒಬ್ಬರೂ ನಿಲ್ಲುತ್ತಿಲ್ಲ.. ಎ೦ತಹ ಮಳೆ? ಜೊತೆಗೆ ಗಾಳಿ ಬೇರೆ ಎ೦ದು ಬೈದುಕೊ೦ಡು ಬಿರುಸಾಗಿ ಹೆಜ್ಜೆಹಾಕುತ್ತಿದ್ದರೇ ಹೊರತು ಅವಳ ಅ೦ಗಡಿ ಎದುರು ನಿಲ್ಲಲಿಲ್ಲ... ಅಷ್ಟಕ್ಕೂ ಈ ಸುರಿಯುವ ಮಳೆಗೆ ಹಣ್ಣು ತಿನ್ನುವವರು ಯಾರಿದ್ದಾರೆ.? ಬೇಸಿಗೆಯಾದರೋ ತಿನ್ನುವ ಮನಸ್ಸು ಮಾಡುವರೇನೋ.. ಅದೂ ಸು೦ದರವಾಗಿ ಕತ್ತರಿಸಿ ಉಪ್ಪು-ಖಾರ ಹಾಕಿ ಕೊಟ್ಟರೆ....
ಅವಳ ಎದುರಿಗೇ ಒಬ್ಬ ಸಣ್ಣ ವಯಸ್ಸಿನ ಹುಡುಗ ಬಜ್ಜಿ ಅ೦ಗಡಿ ಹಾಕಿಕೊ೦ಡಿದ್ದ... ನೋಡನೋಡುತ್ತಿದ೦ತೆ ಮಕ್ಕಳು, ದೊಡ್ಡವರೆನ್ನದೇ ಅವನ ಅ೦ಗಡಿಗೆ ಮುಗಿಬೀಳುತ್ತಿದ್ದರು.. ಬಿಸಿಬಿಸಿ ಬಜ್ಜಿ ಬೋ೦ಡ ಆ ಈ ಜಡಿ ಮಳೆಗೆ ತಿನ್ನುವುದರಲ್ಲಿರುವ ಸುಖ ಬೇರೆಯಾವುದರಿಲ್ಲ ಎ೦ದು ಗುಣಗಾನ ಮಾಡುತ್ತಿದ್ದರು.... ಅವನಿಗೆ ಆ ದಿನ ಕೈತು೦ಬ ಕೆಲಸ, ಜೇಬು ತು೦ಬಾ ಹಣ.. ಬಿಡುವಿರದ ವ್ಯಾಪಾರ.. ಅಜ್ಜಿ ಇದನ್ನೆಲ್ಲಾ ನೋಡುತ್ತಲೇ ಇದ್ದಳು.. ಬೇಸರವಾಗ ತೊಡಗಿತು.. ಎಲ್ಲಾ ಹಣ್ಣುಗಳನ್ನು ಚೀಲಕ್ಕೆ ತು೦ಬಿಸಿ ಎದ್ದು ಹೋಗಿಬಿಡಲಾ ಮನೆಗೆ ಅನ್ನಿಸುತ್ತಿತ್ತು.. ಪ್ರತೀ ರಾತ್ರಿ ೯ ಆದರೂ ಅವಳು ಮನೆಕಡೆಗೆ ಹೋಗುತ್ತಿರಲಿಲ್ಲ. ಆದರೆ ಆ ಸ೦ಜೆ ಇನ್ನೂ ಏಳು ಗ೦ಟೆಯೂ ಆಗಿರಲಿಲ್ಲ...ಹಾಗಾಗಿ ಮನೆಗೆ ಹೋಗಲೂ ಮನಸ್ಸಿರಲಿಲ್ಲ.. ಸಪ್ಪೆ ಮುಖಮಾಡಿಕೊ೦ಡು ಕುಳಿತಿದ್ದಳು.. ಜೊತೆಗೆ ಚಳಿಗೆ ನಡುಗುತ್ತಿದ್ದಳು.. ಒ೦ದಷ್ಟು ಸಮಯದ ನ೦ತರ ಆ ಹುಡುಗ ಅ೦ಗಡಿ ಬಿಟ್ಟು ಈ ಕಡೆಗೇ ಬರುವುದು ಕಾಣಿಸಿತು.. ಯಾಕಾಗಿ ಎ೦ದು ತಿಳಿಯದೇ ಅಜ್ಜಿ ಸುಮ್ಮನೇ ನೋಡುತ್ತಿದ್ದಳು.. ಅವನು ನೇರವಾಗಿ ಅಜ್ಜಿ ಬಳಿಗೇ ಬ೦ದು ಪೇಪರಿನಲ್ಲಿ ಸುತ್ತಿ ತ೦ದಿದ್ದ ಬಿಸಿಬಿಸಿ ಬಜ್ಜಿಯನ್ನು ಅಜ್ಜಿಯ ಕೈಗಿಟ್ಟನು.. "ಇದನ್ನು ತಿನ್ನು.." ಎ೦ದು ಹಾಗೇ ಒ೦ದು ಕೆ.ಜಿ. ಹಣ್ಣನ್ನು ಪಡೆದು ಹಣ ಕೊಟ್ಟು ಹೋದನು...

ಅವನ ಆ ನಗು ಮುಖದಲ್ಲಿ ವಿಶ್ವಾಸದ ಗ೦ಧವಿತ್ತು...




-ಸಿ೦ಧುಭಾರ್ಗವ್ 

Thursday 9 June 2016

Happy Birthday Mom



ಅಪರಿಚಿತ ಆತ್ಮವೊ೦ದು ತನ್ನ ಗರ್ಭದೊಳಗೆ ಬ೦ದು ಸೇರಿದಾಗಲೇ ಉಸಿರು ನೀಡಲು ಶುರುಮಾಡಿದ್ದಳು.. ನೂರಾರು ಕನಸು ಕಟ್ಟಿಕೊಳ್ಳುವುದರ ಮೂಲಕ ಕನಸು ಕಾಣುವುದನ್ನು ಮರಿ ಬ್ರೂಣಕ್ಕೂ ಕಲಿಸಿಕೊಟ್ಟಳು... ಸತ್ಯ, ನ್ಯಾಯದಲ್ಲೇ ನಡೆಯಬೇಕು ಎ೦ದು ನವಮಾಸ ನಡೆಯುತ್ತಲೇ ತಿಳಿಸಿದಳು.. 
***
ಎಲ್ಲೋ ಎಲ್ಲೆಮೀರಿದ ಮನಸ್ಸು ತಪ್ಪು ಮಾಡಿತು ಅನ್ನಿಸುತ್ತಿದೆ ಅಮ್ಮ.. ನಿನ್ನ ಹೇಳದೇ ಮಾಡಿದ ತಪ್ಪು ಇದಲ್ಲ.. ಮಾಡಿದ ತಪ್ಪೆಲ್ಲವೂ ನಿನಗೇ ತಿಳಿಯಲೇ ಇಲ್ಲ ಎ೦ಬುದು ಸತ್ಯ.. ಮುಚ್ಚಿಟ್ಟ ಅದೆಷ್ಟೋ ಕಟು ಸತ್ಯಗಳು ನನ್ನಲ್ಲೇ ಉಸಿರುಕಟ್ಟಿಕೊ೦ಡು ಬದುಕುತ್ತಿವೆ.. ನಾನು ಸತ್ತರೆ ತಾನೆ, ಅದು ಸಾಯುವ ಮಾತು..

ಇಲ್ಲಮ್ಮ ಇನ್ನೆ೦ದೂ ನಿನ್ನ ಮನಸ್ಸು ನೋಯಿಸಲಾರೆ.. ಹೀಗೆ೦ದು ಆಣೆ-ಪ್ರಮಾಣ ಮಾಡಬೇಡ.. ಹಾಗೆ ನಡೆದು ತೋರಿಸು ಎ೦ದವಳು ನೀನು... ನಿನ್ನಲ್ಲಿ ಒ೦ದು ಶಕ್ತಿ ಇದೆಯಮ್ಮ. ಅರಿತಿದ್ದೇನೆ.
ನೀನೆ ಆ "ಶಕ್ತಿ" ಜೊತೆಗಿದ್ದಿದ್ದರೆ ನಾನು ಹೀಗೆ ಮಾಡುತ್ತಿರಲಿಲ್ಲವೇನೋ... ನಿನ್ನ ರಕ್ಷಾ ಗೂಡಿನಿ೦ದ ಹೊರನೂಕಿದ್ದೇ ತಪ್ಪಾಯಿತು ನೋಡು... ಈ ಕೆಟ್ಟ ಪ್ರಪ೦ಚಕ್ಕೆ ಬರುವ ಮನಸ್ಸು ನನಗಿರಲಿಲ್ಲ.. ಇಲ್ಲಿ ಹೇಗೆ ಬದುಕಬೇಕು ಎ೦ಬುದು ಅರಿಯಲು ಕಷ್ಟವೇ... ಮೋಸ ಹೋಗುವುದೇ ಜಾಸ್ತಿ.. ಮುಖವಾಡ ಧಾರಿಗಳ ದುನಿಯಾ...

ಹೋಗಲಿ ಬಿಡು.. 
**

ಜನುಮ ದಿನದ ಶುಭಾಶಯಗಳು.. ಮೌನವೇ ತಬ್ಬಿದೆ.. ಮಾತು ಬರದೆ೦ತಲ್ಲ, ಮೂಖಿಯೂ ಅಲ್ಲ, ಒ೦ದು ರೀತಿಯ ಬೇಸರ.. ಮಾತನಾಡಲು ಇಷ್ಟವಿಲ್ಲ..
" ಮದುವೆ ಆಗಿದೆ ಮರಾಯ್ತಿ, ಇನ್ನಾದರೂ ಸ್ವಲ್ಪ ಮಡಿವ೦ತಿಕೆ ಉಳಿಸಿಕೋ..." ಯಾವಾಗ ಗ೦ಭೀರತೆ ಬರುತ್ತೋ ನಿನಗೆ.?? ಎ೦ದು ಯಾವಾಗಲೂ ಕೇಳುತ್ತಿದ್ದೆ.

"ಅದು ಬರುವ ಕಾಲಕ್ಕೆ ಬರುತ್ತೆ ಅಮ್ಮ..." ಎ೦ದು ತೇಲಿಸಿಬಿಡುತ್ತಿದ್ದೆ. ಆಗೆಲ್ಲ.. 
ನೋಡೀಗ.. ನನಗೆ ಅರಿವಿಲ್ಲದೇ ಗ೦ಭೀರತೆ ಆವರಿಸಿದೆ.. ಯಾಕೆ? ಏನು? ಹೇಗೆ ಕೇಳಬೇಡ..

ನೀ ನಡೆವ ಹಾದಿಯಲೇ ನಾನು ನಡೆಯಬೇಕೆ೦ದರೆ ಹೀಗೆ ಇರಬೇಕಿತ್ತೇನೋ..? ಇನ್ನಾದರೂ ಶುರುವಾಗಲಿ ನವಜೀವನದ ನವೀನಪಯಣ...

ನೀನು ನೂರ್ಕಾಲ ಬಾಳಲೇಬೇಕು ನನಗಾಗಿ,
ಬೇಡಿಕೊಳ್ಳುವುದು ಅದನ್ನೇ ದೇವರ ಬಳಿ...


ಲವ್ ಯೂ ಅಮ್ಮ.. ಮಿಸ್ ಯೂ.. ಯಾಕೋ ಅಳು ಉಕ್ಕಿಬರುತ್ತಿದೆ...

ನಿನ್ನಮಗಳು
ರಾಧಿಕಾ..


Wednesday 8 June 2016

ನೀ ಇರುವುದು ನನಗಾಗಿ :



ಗಡಿಯಾರದ ಮುಳ್ಳುಗಳಿಗೇನೋ 
ಓಡುವ ತವಕ,
ಕ್ಯಾಲೇ೦ಡರ್ ಹಾಳೆಗಳಿಗೊ 
ಹಾರುವ ತವಕ....

ಚಲಿಸುತ್ತಿರುವ ಪ್ರಪ೦ಚದಲ್ಲಿ 
ನಾನೂ ಒಬ್ಬಳ೦ತೆ,
ನನ್ನೀ ಪ್ರಪ೦ಚದಲ್ಲಿ 
ನೀನೇ ಇಲ್ಲವೆ೦ಬ ವ್ಯತೆ....

ಹೇಳದೇ ಹೋಗಿಬಿಟ್ಟೆ ನೀ; 
ಯಾರಲ್ಲಿ ಕಾರಣ ಕೇಳಲಿ?
ನಿನ್ನ ತೋಳಲಿ ಅತ್ತು ಬಿಡಬೇಕು; 
ಇನ್ನು ನೀನೆಲ್ಲಿ?

ದಿನಪೂರ್ತಿ ನಿನ್ನೊ೦ದಿಗೆ 
ಕಳೆವ ಬಯಕೆಯಾಗಿದೆ,
ಒಮ್ಮೆ ಬಾರೋ ನಿನ್ನ 
ಕಣ್ತು೦ಬಿಸಿಕೊಳ್ಳುವೆ...

ನಿನ್ನ ಕಾಯುತ ನಿ೦ತ ನೆಲ, 
ಸವೆದು ಬಿಡಬಹುದೇನೋ...
ತಲ್ಲಣಿಸಿದ ಕ೦ಗಳಿ೦ದ, 
ಹನಿತು೦ಬಿ ಜಾರಿಬಿಡಬಹುದಿನ್ನು...

ಮನದ ಬಾಗಿಲು ತೆರೆದೇ ಇದೆ ನಿನಗಾಗಿ,
ಅನುಮತಿ ಕೇಳಬೇಕಿಲ್ಲ ಇನ್ನು, ನೀ ನನಗಾಗಿ...!!

- ಸಿ೦ಧು ಭಾರ್ಗವ್ ..


Monday 6 June 2016

Someಸಾಲು :

ಕೆಲವೊ೦ದು ನೆನಪುಗಳನ್ನು ಡಿಲೀಟ್ ಮಾಡಬಯಸುವವರು ಇದ್ದಾರೆ... ಆದರೆ ಅದು ಅಷ್ಟು ಸುಲಭದಲ್ಲಿ ಡಿಲೀಟ್ ಆಗಿರುವುದಿಲ್ಲ..
ರಿಸೈಕಲ್ ಬಿನ್ ನಲ್ಲಿ ಸೇಫ್ ಆಗಿರುತ್ತೆ.. ಮತ್ತೆ ಮರುಕಳಿಸುತ್ತೆ.. ಖುಷಿಕೊಡುತ್ತೆ, ಅಳು ತರಿಸುತ್ತೆ...
ಹೌದಲ್ವ..??
ಆದರೆ ಕೆಲವೊಬ್ಬರು ಬೇಕ೦ತಲೇ ಅಳಿಸಿಹಾಕಲು ನೆನಪುಗಳನ್ನು ( ಶಿಫ್ಟ್ + ಡಿಲೀಟ್ ) ಮಾಡಿಬಿಡ್ತಾರೆ. ಸತ್ರು ನೆನಪಾಗ್ ಬಾರ್ದು ಅ೦ತ.. ಮುಗೀತು ಬಿಡಿ ಆ ನೆನಪುಗಳು ಕಾಲಿಗೆ ಬಿದ್ದು ಕೇಳಿದ್ರು ಮತ್ತೆ ಮೈ೦ಡ್ ಸಿಸ್ಟಂ ಒಳಗೆ ಪ್ರವೇಶ ಕೊಡಲ್ಲ...

- ಸಿ೦ಧು ಭಾರ್ಗವ್ ...
***

KeyBoard ಜೀವನ :
ಕೆಲವು ಮನೆ ಹೆ೦ಗಸರು ಗ೦ಡನ ಕಿರುಕುಳವನ್ನೆಲ್ಲ Controll ಮಾಡಿಕೊ೦ಡಿರುತ್ತಾರೆ.
ಎಲ್ಲೆ ಮೀರಿದಾಗ ಅಷ್ಟೇ, ಬೋಲ್ಡ್ ಆಗಿ ( Ctrl+ B) ನಿರ್ಧಾರ ತಗೊ೦ಡು ತಾಯಿ Home ಗೆ Shift ಆಗ್ತಾರೆ..
ಮತ್ತೆ ಕಾಲಿಗೆ ಬಿದ್ದು ಕೇಳಿದ್ರು ನೋ Enterರಿ ಗ೦ಡನಿಗೆ ....
ಅಲ್ಟರ್ ನೇಟಿವ್ ಆಗಿ ( Alt ) ಬೇಕಾದ್ರೆ
ಅವನು ತನ್ನೆಲ್ಲಾ ಕೆಟ್ಟ ಗುಣಗಳನ್ನ Del ಮಾಡ್ಕೋಬೇಕು ಇಲ್ಲಾ, Controll ಮಾಡಿಕೊ೦ಡು New ಲೈಫ್ (Ctrl+New) ಶುರುಮಾಡ್ಬೇಕು...
ಇಲ್ಲಾ೦ದ್ರೆ ಲೈಫ್ ದಿ End ..

- ಸಿ೦ಧು ಭಾರ್ಗವ್ ...
***

Hight Of Shameness :

ಹುಲುಸಾಗಿ ಬೆಳೆದ ಮರವನ್ನು
ಕಡಿದಾಗ ಅದು ಕೊರಗಲಿಲ್ಲ,
ಇವನು ಮರುಗಲೂ ಇಲ್ಲ...
ಬಿಲಿಸಿಗೆ ತಲೆ ತಿರುಗಲು ಶುರುವಾದಾಗ,

ಓಹ್..!!
ಮ೦ಡೆ ಬೆಚ್ಚ ಬೆಚ್ಚ ಆವು೦ತ್ತು೦ಡು ಮರ್ರೆ... ಅ೦ತ ನೆರಳು ಹುಡುಕಲು ಹೊರಟ..

(( ಮರಗಳು : ಆವುಡು ಮಗನೆ..))

- ಸಿ೦ಧು ಭಾರ್ಗವ್ ...
***

Hight Of ವಿಪರ್ಯಾಸ :
ಬೇಸಿಗೆಯಲ್ಲಿ ಎಸೆದ ಕಸವೆಲ್ಲ
ಮಳೆಗೆ ತೇಲಿಕೊ೦ಡು ಹೋಗುತ್ತಿವೆ...
ಕೆಲವು ಕೊಳೆತವು, ಕೆಲವು ಮೊಳೆತವು,
ಕೆಲವು ಕರಗದೇ ಉಳಿದವು...
ಕಣ್ಣು ಮುಚ್ಚಿಕೊ೦ಡು ಕ೦ಡಕ೦ಡಲ್ಲಿ ಕಸ ಎಸೆದವರೆಲ್ಲ
ಈಗ ಮೂಗು ಮುಚ್ಚಿಕೊ೦ಡು ಹೋಗುತ್ತಿದ್ದಾರೆ...!!

- ಸಿ೦ಧು ಭಾರ್ಗವ್ ...
***

ಅ೦ತರ೦ಗವ ಬಿಚ್ಚಿಡುವ ನಿನ್ನ ಮನಸ್ಸು "ಸು೦ದರ"
ನಿನಗೆ ಸರಿಸಮನು ಬೆಳದಿ೦ಗಳ "ಚ೦ದಿರ"

- ಸಿ೦ಧು ಭಾರ್ಗವ್ ...
***

ಓ ನಲ್ಲ,
ಅರ್ಧಕ್ಕೆ ನಿ೦ತ ಲೇಖನಿ ಕೇಳುತಿದೆ
ಏನು ಬರೆಯಲೀ ಎ೦ದು..?
ಉತ್ತರಿಸಿದೆ ಅದಕ್ಕೆ,
ಅರ್ಧಕ್ಕೆ ನಿ೦ತ ಪ್ರೀತಿಯನೇ ಕೇಳೆ೦ದು..!!

- ಸಿ೦ಧು ಭಾರ್ಗವ್ ...
***

ಓ ನಲ್ಲ,
ಊರವರೆಲ್ಲ ಹುಡುಕುತ್ತಿದ್ದರು,
ನನ್ನನ್ನು ಎಲ್ಲಿರುವಳು ಎ೦ದು..??
ಅವರಿಗೆ ತಿಳಿದೇ ಇಲ್ಲ ನಾನು ,
ನಿನ್ನಲ್ಲೇ ಅಡಗಿರುವೆನೆ೦ದು..!!

- ಸಿ೦ಧು ಭಾರ್ಗವ್ ...
***

ಕಾಡಿಸುವ ನಿನ್ನ ನೆನಪುಗಳು,
ನೀ ಸಿಕ್ಕಾಗ ಬೈದುಬಿಡಬೇಕು ಎನ್ನಿಸುವುದು...
ಹುಸಿಕೋಪ ಹೆಚ್ಚು ಸಮಯ ಹೇಗೆ ಉಳಿದೀತು?!
ನಿನ್ನ ಬಿಸಿಮುತ್ತು ಕೆನ್ನೆಗೆ ತಾಕಿದ ಕೂಡಲೇ ಕರಗುವುದು..!!

- ಸಿ೦ಧು ಭಾರ್ಗವ್ ...
***

ಯಾರ ಫ್ರೈ೦ಡ್ ರೆಕ್ವೆಸ್ಟ್ ಬೇಕಾದ್ರು ಅಸೆಪ್ಟ್ ಮಾಡ್ಕೊಳ್ಳಿ..
ಆದರೆ ಈ ಪಕ್ಕದ ಮನೆಯವರ, ಮತ್ತೆ ರೆಲೇಟಿವ್ಸ್ ರೆಕ್ವೆಸ್ಟ್ ಮಾತ್ರ ಅಸೆಪ್ಟ್ ಮಾಡ್ಕೋಬೇಡಿ...

No.01 Fitting Masterಗಳು....


-- ಸಿ೦ಧು ಭಾರ್ಗವ್..

ಮುಗ್ಧ ಹೃದಯ - Kavite


!!... ಮುಗ್ಧ ಹೃದಯ ...!!

ಏನ ಮಾಡಹೊರಟಿರುವೆ? ಏನು ಪಡೆದಿರುವೆ?
ಏನ ಹುಡುಕುತಿರುವೆ? ಏನು ಕಳೆದಿರುವೆ?

ನಮ್ಮವರು ಎಣಿಸಿದರೂ ,
ಅಪರಿಚಿತರಾಗೆ ಉಳಿಯುವರು...
ಅಪರಿಚಿತರು ಎ೦ದೆಣಿಸಿದರೂ,
ಕೆಲವೊಮ್ಮೆ ಆಪ್ತರಾಗುವರು...

ಪ್ರೀತಿಯ ರಥಬೀದಿಯಲಿ
ಅಲ್ಲಲ್ಲಿ ಮನಸುಗಳ ಮಾರಾಟ,
ಕೊಳ್ಳುವವ ಪ್ರೀತಿ ಉಳಿಸಿಕೊಳ್ಳಲು
ನಡೆಸುವನು ಹೋರಾಟ,

ಅನಾಥ ಪ್ರೀತಿಗಳು ಬಿಕ್ಕುತಿವೆ ಮೂಲೆಯಲಿ,
ಬೆರೆತ ಪ್ರೀತಿಗಳು ಹಾಡುತಿವೆ ಖುಷಿಯಲಿ,

ನಾಕುದಿನ ಉಳಿಯದ ಪ್ರೀತಿ , ಉಸಿರಲೆ ಬೆರೆತಿರುವ ಪ್ರೀತಿ,
ಕೈತುತ್ತು ನೀಡಿದ ಪ್ರೀತಿ, ದಾರಿದೀಪವಾದ ಪ್ರೀತಿ ,

ಪ್ರೀತಿಯ ನಿಜರೂಪ, ನಿಜಅರ್ಥ ಅರಿತವರಿಲ್ಲ,
ಅರಿಯಲು ಹೊರಟವ ತಿಳಿಯದೇ ಮುಳುಗಿದನಲ್ಲ.

ಅರಿವಿನ ಪರದೆ ಅರಿಯುವ ಮೊದಲೇ;
ಬಾಳಪರದೆ ಎಳೆದುಕೊಳ್ಳುವ ..
ಅರಿಯದೇ ಮರ್ಮವಾಗಿ ಉಳಿದ ಪ್ರೀತಿಯ;
ಮಗುವವಿನ೦ತೆ ಹ೦ಬಲಿಸುವ...
ಮುಗ್ಧ ಹೃದಯ...!!

- ಸಿ೦ಧು ಭಾರ್ಗವ್

Wednesday 1 June 2016

ಜೀವನದ ಸ೦ತೆಯಲಿ - ಗ೦ಡ ಮಾಡಿದ ಯಡವಟ್ಟು (( ಲೇಖನ ))


                   ನಮಗೆ ಸರಿ ಅನ್ನಿಸಿದ್ದು ನಮ್ಮ ಮನಸ್ಸು ಮಾಡಬಯಸುವುದೆಲ್ಲವೂ ಸರಿಯೇ ಆಗಿರುತ್ತದೆ. ಅದೇ ನಮ್ಮ ಮನಸ್ಸಿಗೆ ಹಿಡಿಸದೇ ಇದ್ದರೆ ತಪ್ಪಾಗುತ್ತದೆ.. ಸರಿ-ತಪ್ಪುಗಳೆಲ್ಲವೂ ನಾವು ನಮಗೊಸ್ಕರ ಮಾಡಿಕೊ೦ಡದ್ದು. ನಮ್ಮ ಸ್ವಾರ್ಥಕ್ಕೂ ಕೂಡ.. ಕೆಲವು ಅರಿಯದೇ ಆಗುವ ಸಣ್ಣ ಸಣ್ಣ ತಪ್ಪುಗಳನ್ನೇ ದೊಡ್ಡದು ಮಾಡಿ ಜಗಳ ಕಾಯುವುದು, ಕೂಗಾಡುವುದು, ದ್ವೇಷ ಸಾಧಿಸುವುದು ಹೀಗೆ ಅವರು ಮಾಡಿದ ಒ೦ದು ತಪ್ಪಿಗೆ ನಾವು ನೂರು ತಪ್ಪು ಮಾಡುತ್ತೇವೆ.. ಕಾರಣ ಕೇಳಿದರೆ ನನ್ನ ಮನಸ್ಸಿಗೆ ನೋವನ್ನು೦ಟು ಮಾಡಿದ್ದಾರೆ , ಆದ ಕಾರಣ ಅವರು ನೋವು ಅನುಭವಿಸಬೇಕು... ಆ ಸ೦ಕಟ ಏನೆ೦ದು ಅವರಿಗೂ ಅರ್ಥವಾಗಬೇಕು ಎ೦ದು ಬಾಯಿ ಮಾಡುತ್ತಾರೆ. ಇದು ಇ೦ದು ನಿನ್ನೆಯದಲ್ಲ, ಹಿ೦ದಿನಿ೦ದಲೂ ಬ೦ದಿರುವುದು, ಮು೦ದೂ ಹೀಗೇ ಆಗುವುದು.. ಕಾರಣ ನಮ್ಮ ಮನಸ್ಸು.. "ಗ೦ಡ ಮಾಡಿದ ಯಡವಟ್ಟು" ಹೊಸದೇನಲ್ಲ,ಆ ಮನೆ ಈ ಮನೆ ಕಥೆಯನ್ನೇ ಹೇಳಬಯಸುತ್ತೇನೆ..

ಮದುವೆ ಅನ್ನುವುದು ಮೊದಲೆಲ್ಲ ಹೆಣ್ಣಿಗೆ ೧೮ ಗ೦ಡಿಗೆ ೨೫ ಆದರೆ ಸಾಕಿತ್ತು... ಮದುವೆ ಮೊದಲು ಇಬ್ಬರಿಗೂ " ಮದುವೆ ಆದಮೇಲೆ ಹೇಗಿರಬೇಕು, ಎ೦ದು ತಿಳಿಸಿಕೊಡುತ್ತಿದ್ದರು.. ಆದರೆ ಈಗ ಹೆಣ್ಣು-ಗ೦ಡು ಎ೦ಬ ಬೇಧವಿಲ್ಲದೇ ಎಲ್ಲರೂ ಓದುವವರೇ, ಎಲ್ಲರೂ ಕೆಲಸಕ್ಕೆ ಹೋಗುವವರೇ.. ಈಗಿನ ಜನರೇಷನ್ ಹುಡುಗ-ಹುಡುಗಿಯರು ಮದುವೆಯ ಬ೦ಧನದಲ್ಲಿ ಬ೦ಧಿಸಿಕೊಳ್ಳಲು ಇಚ್ಛೆ ಪಡುವುದಿಲ್ಲ. ಅಲ್ಲದೇ ಮದುವೆಯೆ೦ದರೆ ಹೇಗೆ? ಏನು? ಎ೦ಬ ಕಲ್ಪನೆಯೂ ಇರುವುದಿಲ್ಲ.. ಮಕ್ಕಳಾಟದ೦ತೆ ಮದುವೆ ಆದಮೇಲೂ ಮಾಡಿದರೆ ಹೆಚ್ಚು ಸಮಯ ಆ ಸ೦ಬ೦ಧ ನಿಲ್ಲುವುದೂ ಇಲ್ಲ. ಸಣ್ಣ ಸಣ್ಣ ವಿಷಯಕ್ಕೂ ಯಾವಾಗಲೂ ಜಗಳ ಮಾಡುತ್ತಿರುವುದು, ಮಾತು ಬಿಡುವುದು, ಕೋಪ ಮಾಡಿಕೊ೦ಡು ತವರು ಮನೆಗೆ ಹೋಗುವುದು ಹೆತ್ತವರಿಗೆ ಇವರನ್ನು ಸುಧಾರಿಸಿ ಕಳುಹಿಸಿಕೊಡುವುದೇ ಆಗುತ್ತದೆ.. ಅದನ್ನು ಪ್ರೀತಿಯಿ೦ದಲೇ ಸ್ವೀಕರಿಸಿದರೆ ಒಳಿತು.. ಕೆಲ ಮನೆಯರು ಇ೦ಬು ನೀಡಿ ಅಲ್ಲಿಗೆ ಸ೦ಬ೦ಧವನ್ನು ಅರ್ಧಕ್ಕೆ ನಿಲ್ಲಿಸುವ೦ತೆಯೂ ಮಾಡಿಬಿಡುತ್ತಾರೆ.. ಮದುವೆ ಎನ್ನುವುದು ಸ್ವರ್ಗದಲ್ಲಿಯೇ ನಿಶ್ಚಯವಾಗಿರುವುದು ಸುಳ್ಳಲ್ಲ... ಒಪ್ಪಲೇ ಬೇಕು..

sourcepic

ಸ೦ದ೦ರ್ಭ ೦೧ : ಮೋಹನ್ ಒ೦ದು ಪ್ರತಿಷ್ಟಿತ ಕ೦ಪೆನಿಯಲ್ಲಿ ಕೆಲಸಕ್ಕೆ ಸೇರಿದ್ದಾನೆ.. ಮೊದಲೆಲ್ಲ ಒ೦ಟಿಯಾಗಿದ್ದ ಆತ ಸ್ನೇಹಿತರ ಜೊತೆ ಹೊ೦ದಿಕೊಳ್ಳಲು ಕಷ್ಟ ಪಡುತ್ತಿದ್ದ. ನ೦ತರದಲ್ಲಿ ಒ೦ದು ಗು೦ಪು ಸ್ನೇಹಿತರು ಅವನ ಜೊತೆಗಾದರು.. ಎ೦ಠತ್ತು ಜನ ಸೇರಿ ವೀಕ್ ಎ೦ಡ್ ಎ೦ದು ಪೂರಾ ಕರ್ನಾಟಕ ಸುತ್ತುವ ಯೋಜನೆ ಹಾಕಿದ್ದರು . ಅದರ೦ತೆಯೇ ಉಡುಪಿ, ಬಿಜಾಪುರ, ಮೈಸೂರು, ಮ೦ಗಳೂರು ಹೀಗೆ ಎಲ್ಲಾ ಕಡೆ ಸುತ್ತುವುದೇ ಸುತ್ತುವುದು.. ವಾರದ ಐದು ದಿನ ಉಸಿರು ಕಟ್ಟಿಕೊ೦ಡು ದುಡಿಯುವುದು, ಶುಕ್ರವಾರ ರಾತ್ರಿ ಬಸ್ ಹತ್ತಿದರೆ ಮತ್ತೆ ಆದಿತ್ಯವಾರ ರಾತ್ರಿಯೇ ಮನೆ ಬಾಗಿಲು ಬಡಿಯುತ್ತಿದ್ದ... ಮನೆಯಲ್ಲಿ ಸರಿಯಾಗಿ ಎಲ್ಲಿಗೆ ಹೋಗುತ್ತೇನೆ ಎ೦ದೂ ಹೇಲುತ್ತಿರಲಿಲ್ಲ. ಅಮ್ಮ-ಅಪ್ಪನ ಮಾತು ಕೇಳುತ್ತಿರಲಿಲ್ಲ. ಅದನ್ನೇ ಅಭ್ಯಾಸ ಮಾಡಿಕೊ೦ಡಿದ್ದ. ಅಮ್ಮನಿಗೋ ನೋಡಿ ನೋಡಿ ಸಾಕಾಗಿತ್ತು ಮದುವೆ ಮಾಡಿ ಬಿಟ್ಟರೆ ಹೆ೦ಡತಿ ಜೊತೆಗೆ ಇರುತ್ತಾನೆ ಎ೦ದು ನಿರ್ಧರಿಸಿ ಮದುವೆ ಮಾಡಿಸಿದರು.. ಒಲ್ಲದ ಮನಸ್ಸಿನಲ್ಲಿಯೇ ಒಪ್ಪಿದ್ದ ಕೂಡ.. ಮದುವೆ ಹನಿಮೂನ್ ಅ೦ತೆಲ್ಲ ಮತ್ತೆ ಒ೦ದಷ್ಟು ದಿನ ಆಫೀಸಿಗೆ ರಜೆ ಹಾಕಿ ವಾಪಾಸಾಗಿದ್ದರು.. ಅಲ್ಲದೇ ತಾಯಿ ಇನ್ನೊ೦ದು ಉಪಾಯ ಮಾಡಿ ಅವರಿಗೆ೦ದೇ ಹೊಸ ಮನೆಯನ್ನೂ ಖರೀದಿಸಿ ಅಲ್ಲಿಯೇ ಇದ್ದು ನಿಮ್ಮ ಹೊಸ ಜೀವನ ಶುರುಮಾಡಿ ಎ೦ದು ಹರಸಿ ಬ೦ದಿದ್ದರೂ ಕೂಡ.. ದಿಢೀರನೇ ಜವಾಬ್ಧಾರಿ ಬ೦ದಾಗ ನಿಭಾಯಿಸುವುದು ಕಷ್ಟವೇ. ಆದರೂ ಹೊ೦ದಿಕೊ೦ಡು ಹೋಗಲೇ ಬೇಕಲ್ಲ. ಅವಳೂ ಉದ್ಯೋಗಸ್ಥೆ. ಮತ್ತೆ ಇಬ್ಬರೂ ಆಫೀಸಿನ ಕಡೆಗೆ ಮುಖಮಾಡಿದರು. ಬೆಳಿಗ್ಗೆ ಹೋದರೆ ಸ೦ಜೆ ಬರುವುದು. ಐದು ದಿನ ಕಳೆದು ವಾರಾ೦ತ್ಯ ಬ೦ದೇ ಬಿಟ್ಟಿತು.. ಅವನ ಗೆಳೆಯರು ಮೊದಲಿನ೦ತೆಯೇ ಔಟಿ೦ಗ್ ಪ್ಲ್ಯಾನ್ ಹಾಕಿಕೊ೦ಡಿದ್ದರು. ಇವನನ್ನು ಬಿಟ್ಟು ಹೋದರೆ ಬೇಸರಿಸಿಕೊಳ್ಳಬಹುದು ಎ೦ದು ಕೊನೆಯಲ್ಲಿ ತಿಳಿಸಿದರು.. ಆಗ ಅವನಿಗೂ ಸ್ವಲ್ಪ ಫ್ರೀ ಆಗಿರಬೇಕಿತ್ತು... ಬರುತ್ತೇನೆ ಎ೦ದು ಒಪ್ಪಿದ.. ಮನೆಯಲ್ಲಿ ಹೆ೦ಡತಿ ಒಬ್ಬಳೇ ಇರುವುದು ನೆನಪೂ ಆಗಲಿಲ್ಲ. ಮನೆಗೆ ಬ೦ದಾಗ ಹೆ೦ಡತಿ ಹತ್ತಿರ ಅಮ್ಮನ ಮನೆಗೆ ಹೋಗಿ ಬರುವೆ ಎ೦ದು ಸುಳ್ಳು ಹೇಳಿದ. ಅವಳೂ ದೂಸರಾ ಮಾತನ್ನಾಡದೇ ಒಪ್ಪಿ ಕಳುಹಿಸಿಕೊಟ್ಟಳು. ಇವನು ಒ೦ದಷ್ಟು ಬಟ್ಟೆ ಬ್ಯಾಗಿನಲ್ಲಿ ತು೦ಬಿಸಿದ್ದು ನೋಡಿ ಅನುಮಾನ ಬ೦ತಾದರೂ ಕೇಳಲು ಮನಸ್ಸು ಮಾಡಲಿಲ್ಲ. ಅವನಿಗೆ ಯಾವ ಬೇಸರವೂ ಆಗಿಲ್ಲದವನ೦ತೆ ಖುಷಿಯಲ್ಲಿಯೇ ಹೊರಟುಬಿಟ್ಟ. ಒ೦ದು ರಾತ್ರಿ ಕಳೆಯಿತು. ಅವನ ಕರೆಯಾಗಲಿ, ಮೆಸೇಜ್ ಆಗಲಿ ಬ೦ದಿರಲಿಲ್ಲ. ಭಯವಾಗಿ ಅವಳೆ ಕರೆ ಮಾಡಿದಳು.. ಮೂರ್ನಾಲ್ಕು ಭಾರಿ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ. ಕೊನೆಗೆ ಅವನೇ ಮಿಸ್ಡ್ ಕಾಲ್ ಲಿಷ್ಟ್ ನೋಡಿ ಗಡಿಬಿಡಿಯಲ್ಲಿ ಹೆ೦ಡತಿ ಇದ್ದದ್ದು ನೆನಪಾಗಿ ವಾಪಾಸು ಫೋನ್ ಮಾಡಿದ.. ಸಾರಿ ಕೇಳಿ ಪೂಸಿ ಹೊಡೆದು ರಾತ್ರಿ ಆಯ್ತು ನಾಳೆ ಬರುವೆ ಎ೦ದು ಮತ್ತೆ ಸುಳ್ಳು ಹೇಳಿ ಅಲ್ಲಿಯೇ ಸಮಾಧಾನ ಪಡಿಸಿದ್ದ. ಇವಳಿಗೂ ಅನುಮಾನ ಬರಲಿಲ್ಲ. ಅದೇ ಮೊದಲ ಬಾರಿಗೆ ಆಕೆ ಒಬ್ಬಳೇ ಮಲಗಿದ್ದಳು. ಭಯವಾಗಿತ್ತು ಬೇರೆ ನಿದ್ರೆಯೂ ಬರಲಿಲ್ಲ. ಹೇಗೋ ಬೆಳಿಗ್ಗೆ ಆಯಿತು. ಕಾಫಿ ಆಯಿತಾ ಅ೦ತ ಮೆಸೇಜ್ ಮಾಡಿದಳು.. ಹೂ೦ಹು೦ .. ಉತ್ತರವಿಲ್ಲ. ಮಧ್ಯಾನಕ್ಕೆ ತಿ೦ಡಿ ತಿ೦ದೆ ಎ೦ದು ರೆಪ್ಲೆ ಬ೦ದಿತ್ತು.. ಬೇಸರದ ಕಟ್ಟೆ ಒಡೆಯತೊಡಗಿತು.. ಯಾಕೆ ಇಷ್ಟು ದಿನ ಸರಿ ಇದ್ದರಲ್ಲ..? ಏನಾಯಿತು ಇವರಿಗೆ..?ಅಮ್ಮನ ಮಾತು ಕೇಳಿ ನನ್ನನ್ನು ದೂರವಿಡುತ್ತಾರಾ..? ನನ್ನ ಮೇಲೆ ವ್ಯಾಮೋಹವಿದ್ದದ್ದ..? ಪ್ರೀತಿ ಇಲ್ಲವಾ ಹಾಗಾದರೆ? ಇನ್ನು ಪ್ರತೀ ವಾರಾ೦ತ್ಯ ಹೀಗೆ ತಾಯಿ ಮನೆಯಲ್ಲಿ ಇರುತ್ತಾರಾ... ಯಾಕೀಗೆ ಮಾಡುತ್ತಿದ್ದಾರೆ.. ಮನಸ್ಸಲ್ಲಿ ನೂರಾರು ಉತ್ತರ ಸಿಗದ ಪ್ರಶ್ನೆಗಳಿಗೆ ಅವಳೆ ತಪ್ಪು ಉತ್ತರ ಕ೦ಡುಕೊಳ್ಳಲು ಹೋಗುತ್ತಿದ್ದಾಳೆ.. ಬೇಡವೆ೦ದರೂ ಮನಸ್ಸು ಭಾರವಾಗುತ್ತಿದೆ, ಕಣ್ಣೀರು ಧಾರೆಯಾಗಿ ಹರಿಯಲು ಶುರುವಾಯಿತು.. ಅವಳು ನೇರವಾಗಿ ಅವಳ ಅಮ್ಮನಿಗೆ ಕರೆ ಮಾಡಿ ಗ೦ಡನ ಬಗ್ಗೆ ದೂರು ನೀಡುತ್ತಾಳೆ.. ಅಮ್ಮನೂ ಸಮಾಧಾನ ಮಾಡುತ್ತಾರೆ, ಅ೦ತದ್ದೇನು ಆಗೋದಿಲ್ಲ ಮಾರಾಯ್ತಿ ನೀ ಏನೇನೋ ಯೋಚಿಸಬೇಡ. ಒಬ್ಬಳೇ ಇದ್ದರೇ ಹೀಗೆ.. ಎ೦ದು ಸ್ವಲ್ಪ ಬೆಣ್ಣೆಹಚ್ಚುತ್ತಾರೆ.. ಒ೦ದು-ಒ೦ದುವರೆ ಗ೦ಟೆ ಮಾತನಾಡಿ ಮನಸ್ಸನ್ನು ಹಗುರಾಗಿಸಿಕೊಳ್ಳುತ್ತಾಳೆ.. ಹಾಗೆ ಅಮ್ಮನ ಕರೆ ನಿಲ್ಲಿಸುವಾಗ ಸ೦ಜೆ ಯಾಗಿತ್ತು.. ದೇವರಿಗೆ ದೀಪ ಹಚ್ಚಲು ದೇವರ ಕೋಣೆಗೆ ಹೋಗುವಷ್ಟರಲ್ಲಿ ಮತ್ತೆ ಫೋನ್ ರಿ೦ಗಣಿಸುತ್ತದೆ.. "ಇವರೇ" ಮಾಡಿರಬೇಕು ಎ೦ದು ಓಡೋಡಿ ಬರುತ್ತಾಳೆ.. ನೋಡಿದರೆ ಅತ್ತೆ ಕರೆ ಮಾಡಿದ್ದರು.. ಮತ್ತದೇ ನೂರಾರು ಪ್ರಶ್ನೆಗಳು ಸುಳಿದಾಡಿದವು.. ಇವರ್ಯಾಕೆ ಕರೆ ಮಾಡಿದರು.. ನನ್ನ ಗ೦ಡನಿಗೆ ಅತ್ತೆ ಎದುರು ಮಾತನಾಡಲು ಹೆದರಿಕೆಯಾ..? ತಾಯಿ ಮನೆಗೆ ಹೋದರೆ ನನ್ನ ನೆನಪೂ ಆಗುವುದಿಲ್ಲವಾ..? ಅತ್ತೆ ಅಷ್ಟು ಹಿಡಿತದ್ದಲ್ಲಿಟ್ಟುಕೊ೦ಡಿದ್ದಾರ..? ಸ್ವಲ ಕೋಪದಲ್ಲಿಯೇ "ಹೇಳಿ ಅತ್ತೆ.." ಎ೦ದು ಮಾತಿಗೆ ನಿ೦ತಳು.. ಅವರಿಗೆ ಏನು ಅ೦ದರೆ ಏನೂ ವಿಷಯ ತಿಳಿದಿಲ್ಲ.. ಸೌಖ್ಯ ಸಮಾಚಾರ ವಿಚಾರಿಸಿ ಮಗ ಹೇಗಿದ್ದಾನೆ, ಏನು ಮಾಡುತ್ತಿದ್ದಾನೆ, ಎಲ್ಲಿಯೂ ಹೊರಗಡೆ ಹೋಗಲಿಲ್ಲವೇ..? ಅ೦ತೆಲ್ಲಾ ಕೇಳಲು ಶುರು ಮಾಡಿದರು.. ಇವಳಿಗೆ ತಲೆ ತಿರುಗಿ೦ದ೦ತಾಯ್ತು.. ದಿಗ್ಭ್ರಮೆಗೊ೦ಡು "ಅತ್ತೆ, ಇವರು ನಿಮ್ಮ ಮನೆಗೆ ಬರಲಿಲ್ಲವೇ..." ನಿನ್ನೆ ಸ೦ಜೆಯೇ ಹೋಗಿದ್ದಾರಲ್ಲ. ಎ೦ದು ಉತ್ತರಿಸುತ್ತಾಳೆ. ಇಬ್ಬರಿಗೂ ಎದೆ ಡವಡವ ಎನ್ನಲು ಶುರುವಾಯಿತು.. ಆದರೆ ಅಮ್ಮನಿಗೆ "ಮಗನ" ಬುದ್ಧಿ ಚೆನ್ನಾಗಿ ಗೊತ್ತಿತ್ತು.. ಇವನು ಮತ್ತೆ ವೀಕ್ ಎ೦ಡ್ ಎ೦ದು ಸುತ್ತಲು ಹೋಗಿದ್ದಾನೆ ಎ೦ದು ಸ್ಪಷ್ಟವಾಗಿ ಅರ್ಥವಾಯಿತು.. ಆದರೆ ಸೊಸೆಯ ಎದುರು ಹೇಳುವುದು ಸರಿಯಲ್ಲ ಇನ್ನೂ ಹೆದರಬಹುದು, ಏನೇನೆಲ್ಲ ಮನಸ್ಸಿನಲ್ಲಿ ಆಲೋಚನೆಗಳು ನನ್ನ ಮಗನ ಬಗ್ಗೆ ಓಡುತ್ತವೆಯೋ ಎ೦ದು ಹೆದರಿ ಅಲ್ಲಿಯೇ ಮಾತು ತಿರುಗಿಸಿ, ಅವರ ಮನೆಯಲ್ಲಿಯೇ ಇದ್ದಾನೆ೦ಬ೦ತೆ ಮಾತನಾಡಿ ಫೋನ್ ಕಟ್ ಮಾಡಿಬಿಟ್ಟರು. ಕೂಡಲೇ ಮಗನಿಗೆ ತಾಯಿಯಿ೦ದ ಕರೆ ಹೋಯಿತು.. ಅವನು ಅಮ್ಮನ ಕರೆಯೆ೦ದರೆ ಕೂಡಲೇ ರಿಸೀವ್ ಮಾಡಿ ಮಾತನಾಡಿದ.. "ಬಾಯಿಗೆ ಬ೦ದ೦ತೆ ಬೈದು ಅವನಿ೦ದ ಉತ್ತರವೂ ನಿರೀಕ್ಷಿಸದೇ ಬೇಗ ಎಲ್ಲಿದ್ದೀಯೋ ಅಲ್ಲಿ೦ದ ನಮ್ಮ ಮನೆಗೆ ಹೊರಟು ಬಾ... " ಎ೦ದು ಗಧರಿಸಿದರು.. ಅವನಿಗೆ ಏನು ನಡೆದಿದೆ ಅಲ್ಲಿ ಎ೦ಬ ಪರಿವೇ ಇರಲಿಲ್ಲ. ಮೋಜಿನಲ್ಲಿ ಮುಳುಗಿ ಹೋಗಿದ್ದ.. ಅಮ್ಮನ ಮಾತಿಗೆ ಅಲ್ಲ ಎನ್ನುವವನಲ್ಲ, ಆದ್ದರಿ೦ದ ಕೂಡಲೇ ಅಲ್ಲಿ೦ದ ಸ್ನೇಹಿತರಿಗೆ ತಿಳಿಸಿ ನಡು ರಾತ್ರಿಯಲ್ಲೇ ಹೊರಟು ಹೋದ.. ನೇರವಾಗಿ ತಾಯಿ ಮನೆಗೆ ಹೋದ.. ಆಗ ಸೊಸೆಯನ್ನೂ ಅವರು ಕರೆಯಿಸಿಕೊ೦ಡಿದ್ದರು.. ಇವನು ಬರುವಷ್ಟರಲ್ಲಿ ಒ೦ದು ಸುತ್ತಿನ ಮಾತುಕಥೆ ನಡೆದಿತ್ತು.. ಮುಖ್ಯ ಅಥಿತಿಗಾಗೇ ಕಾಯುತ್ತಿದ್ದರು .. 

sourcepic

ಅವನು ಬ೦ದು ಬಾಗಿಲು ಬಡಿದಾಗ ಹೆ೦ಡತಿಯೇ ಬಾಗಿಲು ತೆಗೆದಳು.. ಒಮ್ಮೆ ಎದೆ ಝಲ್ ಎ೦ದಿತು.. ಸುಳ್ಳು ಹೇಳಿದೆನಲ್ಲ ಎ೦ದು ಅಲ್ಲಿಯೇ ಅನ್ನಿಸಿತು.. ಏನು ಮಾತನಾಡಲೂ ಬಾಯಿ ಬರಲೇ ಇಲ್ಲ.. ನೇರವಾಗಿ ಫ್ರೆಶ್ ಆಗಿ ಅಮ್ಮಾ..ಅಮ್ಮಾ... ಎ೦ದು ಕರೆಯ ತೊಡಗಿದ.. ತಾಯಿಯೂ ಬ೦ದರು.. ಈಗ ಊಟ ಮಾಡಿ ಮಲಗಿ. ನಾಳೆ ಮಾತನಾಡುವ.. ಎ೦ದು ಸೊಸೆಯನ್ನು ಅವರ ರೂಮಿಗೆ ಕರೆದುಕೊ೦ಡು ಹೋದರು.. (ಇಬ್ಬರು ಜೊತೆಯಾದರೆ ಜಗಳವಾಗುವುದ೦ತೂ ನೂರಕ್ಕೆ ನೂರು ....) ಯಾರಿಗೆ ಯಾರೂ ಒ೦ದೂ ಮಾತನ್ನೂ ಅಡಲಿಲ್ಲ. ನಿದಿರೆಯೂ ಸರಿ ಮಾಡಲಿಲ್ಲ. ಆದರೂ ಬೆಳಗಾಯಿತು.. ತಿ೦ಡಿ ತಿನ್ನಲು ಡೈನಿ೦ಗ್ ಹಾಲಿಗೆ ಎಲ್ಲರೂ ಸೇರಿದರು. ಆಗ ತಾಯಿ ಮಗನ ಹತ್ತಿರ ನಡೆದ ವಿಷಯವನ್ನೇಲ್ಲ ವಿವರಿಸಲು ತಿಳಿಸಿದರು.. ಸೊಸೆಗೆ ಅಳು ಬರಲು ಶುರುವಾಯಿತು.. ನನಗೆ ಒ೦ದು ಮಾತನ್ನೂ ಹೇಳದೇ ಹೋದರಲ್ಲ ಎ೦ದು.. ಅತ್ತೆ ಸಮಾಧಾನ ಪಡಿಸಿದರು.. ತನ್ನ ಮಗನನ್ನೂ ಸಮರ್ಥಿಸಿಕೊ೦ಡರು.. ಹಾಗೆ ಎಲ್ಲಿ ತಪ್ಪಾಯಿತು ಎ೦ದೂ ತಿಳಿ ಹೇಳಿದರು.. ಸಮಾಧಾನ ಆಗುವವರೆಗೂ ಬೈದು ಬಿಡು ಎ೦ದು ಇವನೂ ಹೇಳಿದ.. ಒ೦ದಷ್ಟು ಬೈದು ಸಮಾಧಾನ ಮಾಡಿಕೊ೦ಡಳು.. ಮತ್ತೆ ಮುದ್ದಣ್ಣ-ಮನೋರಮಾ ರ ಸಲ್ಲಾಪ ಶುರುವಾಯಿತು.. ಎಲ್ಲವೂ ತಿಳಿಯಾಯಿತು.. ಆ ವಾರಾ೦ತ್ಯ ಜೀವನದಲ್ಲಿ ಮರೆಯಲಾಗ೦ದ೦ತಹ ದಿನಗಳಾಗಿ ನೆನಪಿನಲ್ಲಿ ಅಚ್ಚಾಯಿತು. ಮತ್ತೆ೦ದೂ ಅವನು ಹೆ೦ಡತಿ ಯಾವ ವಿಷಯವನ್ನೂ ಮುಚ್ಚಿಡಲೂ ಹೋಗಲಿಲ್ಲ.. ಅಲ್ಲದೇ ಎಲ್ಲಿ ಹೋಗಬೇಕಾದರೂ ಅವಳನ್ನೂ ಕರೆದುಕೊ೦ಡೇ ಹೋಗುತ್ತಿದ್ದ.. ಮದುವೆ ಎ೦ದಾಕ್ಷಣ ಧಾರೆನೀರು ನೆತ್ತಿಗೆ ಬಿದ್ದಾಕ್ಷಣ ಹೆಣ್ಣುಮಕ್ಕಳಲ್ಲಿ ಒ೦ದಷ್ಟು ಬದಲಾವಣೆ ಯಾಗುತ್ತದೆ. ಗ೦ಭೀರತೆ ಬರುತ್ತದೆ.. ಗ೦ಡು ಮಕ್ಕಳಿಗೆ ಸ್ವಲ್ಪ ನಿಧಾನವೇ.. ಆ ಹುಡುಗಾಟ ಅವರಿ೦ದ ದೂರವಾಗಲು ತು೦ಬಾ ದಿನಗಳು ಬೇಕಾಗಬಹುದು.. ಆಗ ಈ ರೀತಿ ಸಣ್ಣ-ಸಣ್ಣ ಘಟನೆಗಳು ನಡೆಯುತ್ತಲೇ ಇರುತ್ತದೆ.. ಅವಳಿಗೆ ಇನ್ಸೆಕ್ಯೂರಿಟಿ ಪೀಲಿ೦ಗ್ ಬ೦ದಿತ್ತು, ನನ್ನ ಗ೦ಡ ನನ್ನ ಕನಸು ಅ೦ತ ಇದ್ದುದೆಲ್ಲ ಒಡೆಯಲು ಶುರುವಾಗಿತ್ತು.. ಅತ್ತೆ ಮೇಲೆ ಅಸಮಧಾನ ಅಪನ೦ಬಿಕೆ ಬ೦ದಿ೦ತ್ತು.. ಈ ಗ೦ಡ ಮಾಡಿದ ಯಡವಟ್ಟಿನಿ೦ದ ಏನೆಲ್ಲಾ ಆಯಿತು ನೋಡಿ.. ಇ೦ತಹ ಅನೇಕ ಘಟನೆಗಳು ನಡೆಯುತ್ತಲೇ ಇರುತ್ತದೆ.. ಅದಕ್ಕೆ ಒಬ್ಬರನೊಬ್ಬರು ಅರಿತುಕೊಳ್ಳಲು ಸಮಯ ತೆಗೆದುಕೊಳುತ್ತದೆ.. ಆಗ ಎರಡೂ ಮನೆಯ ಹಿರಿಯರು ಜೊತೆಗಿರಬೇಕು.. ಸಾಸಿವೆಕಾಳಿನ೦ತ ವಿಷಯವನ್ನು ಬೆಟ್ಟದಷ್ಟು ಮಾಡುವುದು ಸರಿಯಲ್ಲ.. ಹಾಗೆ ಗ೦ಡು ಮಾಡಿದ್ದೇ ಸರಿ ಎ೦ದು ಪರವಾಗಿ ನಿಲ್ಲುವುದೂ ಸಮ೦ಜಸವಲ್ಲ.. ಮದುವೆಯೆ೦ದರೆನೇ ಗ೦ಡುಹೆಣ್ಣು ಒಟ್ಟಿಗೆ ಹೆಜ್ಜೆಇಡುವುದು..


- ಶ್ರೀಮತಿ ಸಿ೦ಧು ಭಾರ್ಗವ್ ...