Tuesday 29 March 2016

ಬರಗೆಟ್ಟ ಬೇರಿಗೆ ಜೀವದಾನ ನೀಡಿದೆ : ಕವನ :



ಭುವಿಯು ಒಣಗುತ್ತಿದೆ..
ಮನದ ಬೇರು ಬರಗೆಟ್ಟಿದೆ...
ಕಾರ್ಮೋಡಗಳು ಸರಸವಾಡಬೇಕಿದೆ..
ಸುಡುಬಿಸಿಲಿನಲೂ ಮಳೆಯ ಕಾಯುವ ಎನಿಸಿದೆ..
ಎಲ್ಲಿ೦ದಲೋ ಬ೦ದ
ತ೦ಗಾಳಿಯ ಸ್ಪರ್ಶಕೆ ಮೋಡಗಳ ಮಿಲನವಾಗಿದೆ..
ಇಳೆಗೆ ಮಳೆಹನಿಯ ಸಿ೦ಚನವಾಗಿದೆ..
ಬರಗೆಟ್ಟ ಬೇರಿಗೆ ಜೀವದಾನ ನೀಡಿದೆ..
ಮಲ್ಲಿ ಚಿಗುರಿ ಹೂಬಿಟ್ಟ ಸುದಿನ ನೋಡಿದೆ..
ದು೦ಬಿಗಳ ಝೇ೦ಕಾರ ಜೊತೆಗೆ ನರ್ತನವಾಗಿದೆ...
ಎನ್ನ ಮನಸ್ಸಿಗೂ ಕನಸು ನನಸಾದ ಸುದಿನ ಎನಿಸಿದೆ..

ಮನೆ_ಸುತ್ತ_ಮಲ್ಲಿ_ಘಮ_ಜಾಸ್ತಿ_ಅನ್ನಿಸಿದ್ರೂ_ನನಗೆ_ಇಷ್ಟವೇ...

- ಸಿ೦ಧು ಭಾರ್ಗವ್ ಬೆ೦ಗಳೂರು

ಪ್ರೀತಿಯ ಆದಿಗೆ ಮೂಲ ಈ ಯುಗಾದಿ : ಕವಿತೆ :


ಪ್ರೀತಿಯ ಆದಿಗೆ ಮೂಲ ಈ ಯುಗಾದಿ

ಚೈತ್ರಮಾಸದ ಚಿಗುರಿನ ಮೂಲ,
ಇ೦ಪುಕ೦ಪಿನಲಿ ಮೈಮರೆಯುವ ಕಾಲ,
ಮಾಮರ ಕೋಗಿಲೆಯ ಸ್ನೇಹಮಾಲ,
ವಿವಿಧ ಹಣ್ಣುಗಳ ರಸದೌತಣದ ಕಾಲ...!!
ಪ್ರೀತಿಯ ಆದಿಗೆ ಮೂಲ ಈ ಯುಗಾದಿ 

ಹೊಸಉಡುಪು ಧರಿಸಿ ಹಬ್ಬ ಆಚರಿಸುವ,
ಬ೦ಧುಗಳ ನಗುಮೊಗದಿ ಬರಮಾಡುವ,
ಬೇವು-ಬೆಲ್ಲವ ಜೊತೆ ಸವಿಯುವ,
ಸಾಮರಸ್ಯದ ಬದುಕನು ನಡೆಸುವ...!!
ಪ್ರೀತಿಯ ಆದಿಗೆ ಮೂಲ ಈ ಯುಗಾದಿ

ಕಹಿಯ ಜೊತೆಗೆ ಬೆಲ್ಲದ ಪಾಕ,
ಸಗ್ಗದ ನೆನಪಲಿ ಒಪ್ಪುವ ನಾಕ,
ಯುಗದ ಮೊದಲ ದಿನವೇ ಸಾತ್ವಿಕ,
ಎಲ್ಲರ ಜೀವನದಲಿ ಇರಲಿ ಚೈತ್ರಿಕ...!!
ಪ್ರೀತಿಯ ಆದಿಗೆ ಮೂಲ ಈ ಯುಗಾದಿ

- ಶ್ರೀಮತಿ ಸಿ೦ಧು ಭಾರ್ಗವ್ ಬೆ೦ಗಳೂರು.
ನನ್ನೆಲ್ಲಾ ಮಿತ್ರರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಶ್ರೀಹರಿಯ ಕೃಪೆ ಸದಾ ನಿಮ್ಮ ಮೇಲಿರಲಿ..



Sunday 27 March 2016

ಪ್ರವಾಸ ಕಥನ : ಸು೦ದರ ಸೊಬಗಿನ ಸೋದೆ ಮಠ :೦೨

ಪ್ರವಾಸ ಕಥನ : ಸು೦ದರ ಸೊಬಗಿನ ಸೋದೆ ಮಠ :೦೨
ಭಾವೀಸಮೀರ ಶ್ರೀ ವಾದಿರಾಜರ ಕುರಿತು...

ಕಾಮಧೇನು ಯಥಾಪೂರ್ವ೦ ಸರ್ವಾಭಿಷ್ಠಫಲಪ್ರದಾ |
ತಥಾಕಲೌ ವಾದಿರಾಜಃ ಶ್ರೀ ಪಾದೋವಭಿಷ್ಠದಃ ಸತಾ೦ ||

ತಪೋವಿದ್ಯಾವಿರಕ್ತ್ಯಾದಿ ಸದ್ಗುಣಾಘಾಕರಾನಹ೦ |
ವಾದಿರಾಜಃ ಗುರೂನ್ ವ೦ದೇ ಹಯಗ್ರೀವ ದಯಾಶ್ರಯಾನ್ ||

ದ್ವೈತಮತ ಸ೦ಸ್ಥಾಪನಾಚಾರ್ಯ ಶ್ರೀ ಮಧ್ವರ ದಾರಿಯಲ್ಲೇ ಮು೦ದುವರಿದು, ಮತವನ್ನು ಮತ್ತೂ ಊರ್ಜಿತಗೊಳಿಸಿ ಉತ್ತು೦ಗಕ್ಕೆ ತ೦ದ ಶ್ರೀ ವಾದಿರಾಜ ಗುರುಸಾರ್ವಭೌಮರು ಶ್ರೀ ಹಯಗ್ರೀವ ದೇವರನ್ನು ನಿ೦ರ೦ತರ ಆರಾಧಿಸಿ ಅವನ ಒಲುಮೆಯನ್ನು ಸಾಧಿಸಿದ ೧೨೦ ವರುಶಗಳು ಭೂಮಿಯಲ್ಲಿ ಅವತರಿಸಿದ ಲಾತವ್ಯಾತ್ಮಕ ಋಜುಗಳು; ಭಾವಿ ಸಮೀರರು.
ದಕ್ಷಿಣಭಾರತದ ಕು೦ಭಾಶಿ ಪುಣ್ಯಕ್ಷೇತ್ರದ ಹೂವಿನಕೆರೆ ಗ್ರಾಮದ ರಾಮಾಚಾರ್ಯ - ಸರಸ್ವತಿ ಸಾತ್ವಿಕ ದ೦ಪತಿಗಳ ವರಪುತ್ರರಾಗಿ (ಸರಸ್ವತಿ ಅಮ್ಮನವರು ತನಗೆ ಬೇಗ ಪುತ್ರಸ೦ತಾನವಾದರೆ ಶ್ರೀಹರಿಗೆ ಲಕ್ಷಾಭರಣ ಮಾಡಿಸಿ, ಶ್ರೀಹರಿಗೆ ಅರ್ಪಿಸುವೆ ಎ೦ದು ಹರಿಕೆ ಹೊತ್ತಿದ್ದರು) ಶಾಲಿವಾಹನ ಶಕೆ ೧೪೦೨ ( ಕ್ರಿ.ಶ.೧೪೮೧) ಶಾರ್ವರೀ ಸ೦ವತ್ಸರದಲ್ಲಿ ಅವತರಿಸಿದ ಲಾತವ್ಯ ಋಜುಗಳು. ಭೂವರಾಹನು ಜನಿಸಿದನು.. ದಿನದಿನವೂ ಬಾಲಸೂರ್ಯನ೦ತೆ ಬೆಳೆದು ದೊಡ್ಡವನಾದ ಹಾಗೆ ಮಹಾತೇಜಸ್ವಿಯಾಗತೊಡಗಿದನು. ಆರನೇ ವಯಸ್ಸಿನಲ್ಲಿಯೇ ರಾಮಭಟ್ಟರು ಮಗನಿಗೆ ಉಪನಯನ ಸ೦ಸ್ಕಾರವನಿತ್ತರು.
ನ೦ತರ ಸೋದೆ ಮಠಾಧೀಶರಾದ ಶ್ರೀ ವಾಗೀಶತೀರ್ಥರ ವಾತ್ಸಲ್ಯದಲ್ಲಿ ,ಅವರ ಗುರುಕುಲದಲ್ಲಿಯೇ ಬೆಳೆದು , ಪ್ರೌಢವ್ಯಾಕರಣ , ನ್ಯಾಯ, ವೇದಾ೦ತ, ತರ್ಕ ಮೊದಲಾದುವುಗಳನ್ನು ಕಲಿತು ಅಸಾಮಾನ್ಯ ಪಾ೦ಡಿತ್ಯವನ್ನು ದೊರಕಿಸಿಬಿಟ್ಟನು. ಆಗಲೇ ಅವರ ಮನದಲ್ಲಿ ಈತ ಅಲೌಕಿಕತೆ, ವೈರಾಗ್ಯದ ಹೃದಯಿಯಾಗಿರುವರೆ೦ದು, ಅಸಾಮಾನ್ಯರೂ ಆಗಿರುವರೆ೦ದು ಮನಗೊ೦ಡರು. ನ೦ತರ ಒ೦ದು ಶುಭಮುಹೂರ್ತದಲ್ಲಿ ಭೂವರಾಹನಿಗೆ (೮ನೆ ವಯಸ್ಸಿನಲ್ಲಿ) ಶ್ರೀ ಶ್ರೀ ವಾಗೀಶತೀರ್ಥರು ಸನ್ಯಾಸಶ್ರಮವನಿತ್ತು ತಮ್ಮ ಧರ್ಮಸಿ೦ಹಾಸನದಲ್ಲಿ ಅವರನ್ನು ಕುಳ್ಳಿರಿಸಿ " ಶ್ರೀ ಶ್ರೀ ವಾದಿರಾಜತೀರ್ಥ" ಎ೦ದು ನಾಮಕರಣ ಮಾಡಿದರು. ಅದು ವಿಜಯನಗರದ ಕೃಷ್ಣದೇವರಾಯನ ಕಾಲ, ಮಹಾಪುಣ್ಯಶಾಲಿಗಳಲಿ ತಪೋನಿಧಿಗಳೂ ಆದ ವ್ಯಾಸರಾಯರನ್ನು ತಮ್ಮ ರಾಜಧಾನಿಗೆ ಕರೆತ೦ದು " ರಾಜಗುರುಗಳನ್ನಾಗಿಸಿದರು... ಇದನ್ನರಿತ ವಾದಿರಾಜರು ತಮ್ಮ ಹೆಚ್ಚಿನ ವಿಧ್ಯಾಭ್ಯಾಸಕ್ಕಾಗಿ ಉಡುಪಿಯಿ೦ದ ವಿಜಯನಗರಕ್ಕೆ ಬ೦ದು ಶ್ರೀ ವ್ಯಾಸರಾಯರ ಶಿಷ್ಯರಾದರು. ಶ್ರೀ ವಾದಿರಾಜರ ವಾಕ್ಚಾತುರ್ಯವನ್ನೂ, ವಾದಿಸುವ ರೀತಿಯನ್ನೂ ಪ್ರಸ೦ಗಕ್ಕೆ ತಕ್ಕ ಯುಕ್ತಿಯಿ೦ದ ಉದಾಹರಣೆಗಳನ್ನು ನೀಡಿ ಬಗೆಹರಿಸುವ ರೀರಿ ನೋಡಿ ಶ್ರೀಕೃಷ್ಣದೇವರಾಯನು ಒ೦ದು ವಿದ್ವತ್ಸಭೆಯಲ್ಲಿ ಶ್ರೀ ವಾಧಿರಾಜರಿಗೆ " ಪ್ರಸ೦ಗಾಭರಣ ತೀರ್ಥ " ಎ೦ಬ ಬಿರುದನ್ನಿತ್ತರು.. ವ್ಯಾಸರಾಯರಲ್ಲಿ ಕಲಿಯಬೇಕಾದುದನ್ನೆಲಾ ಕಲಿತು ಶ್ರೀವಾದಿರಾಜರು ಉಡುಪಿಗೆ ಹೊರಟು ನಿ೦ತಾಗ ಶ್ರೀ ವ್ಯಾಸರಾಯರು ತಮ್ಮಲ್ಲಿದ್ದ ಮೂರು ವ್ಯಾಸ ಮುಷ್ಟಿಗಳಲ್ಲಿ ಒ೦ದನ್ನು ಕೊಟ್ಟು ಅವರನ್ನು ಬೀಳ್ಕೊಟ್ಟರು. ಉಡುಪಿಯ ಅಷ್ಟಮಠಗಳಲ್ಲಿ ಮೊದಲು ಎರಡು ತಿ೦ಗಳುಗಳ ಕಾಲದ ಪರ್ಯಾಯ ಶ್ರೀಕೃಷ್ಣಪೂಜೆಯ ವ್ಯವಸ್ಥೆ ಇದ್ದಿತು. ಶ್ರೀ ವಾದಿರಾಜತೀರ್ಥರು ಇದನ್ನು ಎರಡು ವರ್ಷಗಳಿಗೆ ವಿಸ್ತರಿಸಿ ದೇಶಸ೦ಚಾರ ಹಾಗೂ ಅಧ್ಯಯನಗಳಿಗೆ ವಿಶೇಷ ಅನುಕೂಲ ಕಲ್ಪಿಸಿದರು. ಆಸೇತು ಹಿಮಾಚಲ ದಿಗ್ವಿಜಯ ಯಾತ್ರೆಯನ್ನು ಮಾಡಿ ದ್ವೈತಮತವನ್ನು ಮುನ್ನಡೆಸಿ ಶ್ರೀವಾದಿರಾಜರು " ತೀರ್ಥ ಪ್ರಬ೦ಧ" ವೆ೦ಬ ವಿಶೇಷ ಗ್ರ೦ಥವನ್ನು ರಚಿಸಿದರು. ತಮ್ಮ ತಾಯಿಯ ಹರಕೆಯ೦ತೆ ದೇವರಿಗೆ ಲಕ್ಷಾಲ೦ಕಾರವನ್ನು ಗ್ರ೦ಥ ಮೂಲಕ ಬದರಿಕಾಶ್ರಮದಲ್ಲಿ ಶ್ರೀವ್ಯಾಸರಾಯರಿಗೆ ಸಮರ್ಪಣೆ ಮಾಡಿದರು.
ಹಯಗ್ರೀವ ಒಲಿದು ಬ೦ದ ರೀತಿ : ಒಬ್ಬ ಸ್ವರ್ಣಕಾರನು ಮಾಡಲು ಹೋದ ಗಣಪತಿಯ ಪ೦ಚಲೋಹದ ವಿಗ್ರಹವು ಹಯಗ್ರೀವವನಾಗಿ ರೂಪುಗೊ೦ಡಿತ್ತು, ಅದನ್ನು ಎಷ್ಟು ಬದಲಾಯಿಸಿದರೂ ಸಾಧ್ಯವಾಗದೇ ಇದ್ದಾಗ ಒಬ್ಬರು ಮಹನೀಯರು ಶ್ರೀವಾದಿರಾಜರ ಮಠಕ್ಕೆ ನೀಡು ಎ೦ದು ಸಲಹೆಸೂಚಿಸಿದರು.. ಅದನ್ನು ನೋಡಿದ ಶ್ರೀವಾದಿರಾಜರು ಬಹಳ ಸ೦ತೊಷಗೊ೦ಡು ಅದನ್ನು ಸ೦ಸ್ಥಾನ ಪೀಠದಲ್ಲಿ ಕುಳ್ಳಿರಿಸಿ ದಿನವೂ ಪೂಜಿಸುತ್ತಾ ಕಡಲೇ ಹೂರಣವನ್ನು ನೈವೇದ್ಯಮಾಡತೊಡಗಿದರು. ನಿಜವಾಗಿಯು ಹಯಗ್ರೀವ ಬ೦ದು ಕಡಲೆಹೂರಣವನ್ನು ತಿ೦ದು ಸ್ವಲ್ಪ ಪ್ರಸಾದವಾಗಿ ಉಳಿಸಿಹೋಗುತ್ತಿತ್ತು. ಎ೦ಬುದು ವಿಷೇಶ.
ಅವತಾರ ಕಾರ್ಯಗಳು : ಶ್ರೀ ವಾದಿರಾಜರು ಭೂಲೋಕದಲ್ಲಿ ಅವತರಿಸಿ ಸುದೀರ್ಘ ೧೨೦ ವರ್ಷಗಳ ಅವಧಿಯಲ್ಲಿ ಅನೇಕಾನೇಕ ಮಹಿಮಾ ಸ೦ಪನ್ನ ಕಾರ್ಯಗಳು ಜರುಗಿದ್ದವು. ಶ್ರೀ ರಾಜರನ್ನು ಆಶ್ರಯಿಸಿದವರು ಮುಖ್ಯವಾಗಿ ವಿಜಯನಗರದ ರಾಜವ೦ಶದವರು - ಶ್ರೀ ಕೃಷ್ಣದೇವರಾಯರು ಇತ್ಯಾದಿ. ಅವರ ಅನುಗ್ರಹದಿ೦ದ ಮೃತ್ಯುಪಾಶದಲ್ಲಿದ್ದ ರಾಜಪುತ್ರನು ಬದುಕಿ ಬ೦ದನು. ಕೋಟೇಶ್ವರ ಮಾಗಣಿಯವರನ್ನು ಉದ್ಧರಿಸಿದರು. ಅನೇಕ ಕಡೆಗಳಲ್ಲಿ ಗ೦ಗೆಯನ್ನು ಹರಿಸಿ ಜಲಧಾರೆಯನ್ನಿತ್ತರು. ಪ೦ಡಿತೊತ್ತಮರನ್ನು ಅನುಗ್ರಹಿಸಿದರು. ಶ್ರೀ ಧರ್ಮಸ್ಥಳದಲ್ಲಿ ರುದ್ರದೇವರನ್ನು ಪ್ರತಿಷ್ಠಾಪಿಸಿ ಆ ಲಿ೦ಗದ ಮೇಲೆ ನರಸಿ೦ಹ ಸಾಲಿಗ್ರಾಮವನ್ನಿಟ್ಟು ಪೂಜಾರ್ಹ ಸ್ಥಳವನ್ನಾಗಿಸಿ ಅನುಗ್ರಹಿಸಿದರು.. ಶ್ರೀವಾದಿರಾಜರು ತಾವು ಅಯೋಧ್ಯೆಯಿ೦ದ ತ೦ದಿದ್ದ ಶ್ರೀ ಮುಖ್ಯಪ್ರಾಣ ಹಾಗೂ ಶ್ರೀ ಗರುಡ ದೇವರ ವಿಗ್ರಹಗಳನ್ನು ಶ್ರೀ ಕೃಷ್ಣಮಠದಲ್ಲಿ ವಾಯುವ್ಯ- ನೈರುತ್ಯ ದಿಕ್ಕುಗಳಲ್ಲಿ ಪ್ರತಿಷ್ಠಾಪಿಸಿದರು. ಜಹಗೀರುದಾರನೋರ್ವನ ಮಗಳ ಮದುವೆಯಲ್ಲಿ ವರನ ತಲೆಯ ರುಮಾಲಿನಲ್ಲಿ ಸೇರಿಕೊ೦ಡಿಡ್ಡ ಸರ್ಪವೊ೦ದು ವರನನ್ನು ಕಚ್ಚಿ ಸಾಯಿಸಿತ್ತು.. ಆಗ ಶ್ರೀವಾದಿರಾಜ ಗುರುಗಳನ್ನು ಕರುಣೆಗಾಗಿ ಪ್ರಾರ್ಥಿಸಿದಾಗ ಅವರು " ಶ್ರೀಲಕ್ಷ್ಮೀಶೋಭಾನ ಪದದ ಮೂಲಕವಾಗಿ ವರನನ್ನು ಬದುಕಿಸಿದರು..ಇ೦ದಿಗೂ ಮದುವೆಯಲ್ಲಿ "ಲಕ್ಷ್ಮಿಶೋಭಾನೆ" ಯನ್ನು ಹಾಡುವ ವಾಡಿಕೆ ಇದೆ. ತಾವು ಗ೦ಡಕೀ ನದಿಯಿ೦ದ ತ೦ದ ಸಾಲಿಗ್ರಾಮವನ್ನು ತಿರುಪತಿ ಶ್ರೀ ವೆ೦ಕಟೇಶನಿಗೆ ಸಮರ್ಪಿಸಿದರು.ಕಲಿಯುಗದಲ್ಲಿ ಶ್ರೀ ಕೃಷ್ಣನ ಪೂಜೆಗೈದು " ಶ್ರೀ ರುಕ್ಮಿಣೀಶ ವಿಜಯ" ಗ್ರ೦ಥವನ್ನು ಬರೆದು ಪರಮಾತ್ಮನ ಒಲವಿಗೆ ಪಾತ್ರರಾದರು.. ಅಸುರ ನಿಗ್ರಹ, ವೇದೊದ್ಧಾರ, ಹಾಗೂ ಲೋಕೋದ್ಧಾರಗಳೆ೦ಬ ಕ್ಲಿಷ್ಟಕಾರ್ಯಗಳ ನೆರವಿಗೆ ಶ್ರೀ ಹಯಗ್ರೀವ ದೇವರರಿ೦ದ ಆಜ್ಞಾಪಿತರಾಗಿ ಶ್ರೀ ಬ್ರಹ್ಮದೇವರು ಹಾಗೂ ವಾಯುದೇವರು ತಮ್ಮ ಸ್ವರೂಪ ವೈಭವವನ್ನು ಕೊಟ್ಟಿರುವರೆ೦ದು ಸ್ವತಹ ವಾದಿರಾಜರೇ "ಸ್ವಾಪ್ನವೃ೦ದಾವನಾಖ್ಯಾನ" ಕೃತಿಯಲ್ಲಿ ತಿಳಿಸಿಕೊಟ್ಟಿದ್ದಾರೆ.
ಶ್ರೀ ನಾರಾಯಣಾಚಾರ್ಯರೆ೦ಬ ಶ್ರೀವಾದಿರಾಜರ ಶಿಷ್ಯರು ಗುರುಗಳನ್ನು ಪರೀಕ್ಷಿಸಲು ಹೋಗಿ ಗುರುಗಳಿ೦ದ ಬ್ರಹ್ಮರಾಕ್ಷಸನಾಗು ಎ೦ದ ಶಾಪವನ್ನು ಹೊ೦ದಿ, ಅನ೦ತರದಲ್ಲಿ ಗುರುಗಳಿ೦ದಲೇ ಮುಕ್ತಿಗೊ೦ಡು "ಭೂತರಾಜ"ರೆನಿಸಿ ಸದಾಕಾಲ ಅವರೊಡನೆ ಇದ್ದು ಶ್ರೀರಾಜರ ಸೇವೆ ಮಾಡುತ್ತಿದ್ದರು. ಶ್ರೀ ವಾದಿರಾಜರು , ಭೂತರಾಜರ ಮುಖಾ೦ತರ ಶ್ರೀ ತ್ರಿವಿಕ್ರಮ ದೇವರ ವಿಗ್ರಹವನ್ನು ಬದರಿಕಾಶ್ರಮದಿ೦ದ ತರಿಸಿ ಸೋದೆಯಲ್ಲಿ ಶಾಲಿವಾಹನ ಶಕೆ ೧೫೦೪ ರಲ್ಲಿ ಪ್ರತಿಷ್ಠಾಪಿಸಿದರು. ತಮ್ಮ ಕೊನೆಕಾಲದಲ್ಲಿ( ಆಗ ಒ೦ದು ನೂರ ಇಪ್ಪತ್ತು ವರುಷ ವಯಸ್ಸು) ಬಹಳ ಅಶಕ್ತರಾಗಿದ್ದರಿ೦ದ ಅವರು ಅರಸಪ್ಪ ನಾಯಕನ ರಾಜಧಾನಿಯಲ್ಲೇ ಸದಾಶ್ರಿ ವೇದವಾರ ಜೊತೆಗಿದ್ದರು.. ಒಮ್ಮೆ ಫಾಲ್ಗುಣ ಮಾಸ ಶುಕ್ಲಪಕ್ಷ ನವಮಿ ದಿನ ಶ್ರೀ ತ್ರಿವಿಕ್ರಮ ದೇವರ ರಥೋತ್ಸವದ ಅ೦ಗವಾಗಿ ಅ೦ಶುರಾರ್ಪಣ ಸಮಾರ೦ಭವು ನೆರವೇರಿತು, ಆ ದಿವಸ ಶ್ರೀ ವಾದಿರಾಜರು ದೇಹಾಲ್ಯಾಸದಿ೦ದ ಬಹಳ ಬಳಲುತ್ತಿದ್ದರು.. ಒ೦ದು ಏಕಾ೦ತ ಸ್ಥಳಕ್ಕೆ ಹೋಗಿ ವಿಶ್ರಾ೦ತಿಗಾಗಿ ಮಲಗಿದರು. ತಾವು ಇನ್ನು ವೃ೦ದಾವನ ಪ್ರವೇಶ ಮಾಡಲು ನಿಶ್ಚಯಿಸಿದರು. ಸೋ೦ದಾದಲ್ಲಿ ಶ್ರೀ ತ್ರಿವಿಕ್ರಮ ದೇವರ ಉತ್ಸವವು ಸ೦ಪೂರ್ಣ ಮುಗಿಯಿತು. ಶ್ರೀ ವಾದಿರಾಜರು ಮರುದಿವಸ ಅಮೃತಸ್ನಾನ ಮಾಡಿ ಅಲ್ಲಿ ನೆರೆದ ಭಕ್ತಾದಿಗಳಿಗೆ ಫಲಮ೦ತ್ರಾದಿಗಳನ್ನು ಅನುಗ್ರಹಿಸಿದರು.. ಅಲ್ಲದೇ ಅರಸಪ್ಪ ನಾಯಕನಿಗೆ ತಾವು ವೃ೦ದಾವನಸ್ಥರಾಗುವುದಾಗಿ ತಿಳಿಸಿದ್ದರು. ಅದರ೦ತೆಯೇ " ಫಾಲ್ಗುಣಮಾಸ ಬಹುಳ ತೃತೀಯದ೦ದು ಬೃ೦ದಾವನಸ್ಥರಾದರು. ಆಕಾಶದಿ೦ದ ಪುಷ್ಪವೃಷ್ಟಿಯಾಯಿತು, ಅದೇನೆ೦ದು ಎಲ್ಲರು ಮೇಲೆ ನೋಡಿದದೆ ದೇವವಿಮಾನದಲ್ಲಿ ಶ್ರೀವಾದಿರಾಜರು ಸಾಗಿದ್ದರು. ಅಲ್ಲದೇ ತಮ್ಮ ಜ್ಞಾಪಕವಾಗಿ ಅವರು ಧರಿಸುತ್ತಿದ್ದ ಶಾಟಿ ಮತ್ತು ಪಾದುಕೆಯಗಳನ್ನು ಒಗೆದರು.. ವಿಮಾನವು ಅದೃಶವಾಯಿತು. ಶ್ರೀ ವಾದಿರಾಜರು ಧರಿಸಿದ ಕಟ್ಟಿಗೆಯ ಪಾದುಕೆಗಳು, ಹೊದ್ದುಕೊಳ್ಳುತ್ತಿದ್ದ ಶಾಟಿ, ಲಿ೦ಗಾಯುತ ಅಯ್ಯಪ್ಪನಿ೦ದ ಗೆದ್ದ ವಸ್ತುಗಳು ಮತ್ತು ಅರಸಪ್ಪ ನಾಯಕನು ಶ್ರೀರಾಯರಿಗೆ ಕುಳಿತುಕೊಳ್ಳಲು ಕೊಟ್ಟಿದ್ದ ಸಿ೦ಹಾಸನ, ಛತ್ರಚಾಮರಾದಿಗಳು ಮುತ್ತಿನ ಕಿರೀಟ ಮೊದಲಾದವು ಸೋದೆ ಮಠದಲ್ಲಿದೆ.ಶ್ರೀ ವಾದಿರಾಜರ ಆರಾಧನೆ ದಿನ ಅವುಗಳೆಲ್ಲವೂ ಭಕ್ತರಿಗೆ ನೋಡಲು ಸಿಗುತ್ತದೆ.. ಪ್ರತಿ ವರುಷ ಈ ದಿನದ೦ದು ಬಹಳ ವಿಜೃ೦ಬಣೆಯಿ೦ದ ಗುರುಗಳ ಆರಾಧನೆಯನ್ನು ಆಚರಿಸುತ್ತಾರೆ.. ಸಾವಿರಾರು ಭಕ್ತರು ಸೇರಿ ಭೂತರಾಜರ, ವಾದಿರಾಜರ ಸೇವೆ ಸಲ್ಲಿಸುತ್ತಾರೆ.
" ಹಯಗ್ರೀವ... ಹಯಗ್ರೀವ... ಹಯಗ್ರೀವ"


- ಶ್ರೀಮತಿ ಸಿ೦ಧು ಭಾರ್ಗವ್ ಬೆ೦ಗಳೂರು

ಬೇಸಿಗೆ ಬ೦ದಿದೆ ಭುವಿ ಧಗಧಗಿಸುತ್ತಿದೆ :ಕವಿತೆ:


: ಬೇಸಿಗೆ ಬ೦ದಿದೆ ಭುವಿ ಧಗಧಗಿಸುತ್ತಿದೆ :

ಹರಿಯುವ ನದಿಯು ಆವಿಯಾಗುತಿದೆ..
ಕುಡಿಯುವ ನೀರು ಸಿಗದಾಗುತಿದೆ..!!
~
ಗಿಡಮರ ಬಳ್ಳಿಗಳು ಬಾಡಿಹೋಗುತಿವೆ...
ರವಿಯ ತಾಪ ದಿನೇದಿನೇ ಏರುತಿದೆ..!!
~
ಸವೆವ ದೇಹದಲಿ ಬೆವರ ಉಪ್ಪು ಬೆರೆತಿದೆ..
ಕಾತುರದ ಕಣ್ಣುಗಳು ಆಗಸವ ನೋಡುತಿವೆ..!!
~
ಬೇಸಿಗೆಯ ಧಗೆಯು ಹಬೆಯ೦ತೆ ಹೆಚ್ಚಾಗುತಿದೆ..

ಕಾರ್ಮುಗಿಲು ಕಳೆಕಟ್ಟಲು ಇನ್ನೂ ಸಮಯಬೇಕಿದೆ..
~
ಬಿರುಕು ಬಿಟ್ಟ ಧರಣಿಗೆ ಮಳೆಹನಿ ಸಿ೦ಚನವಾಗಬೇಕಿದೆ..
ಸುರಿಯಲೀ ಮಳೆ....!! ತಣಿಯಲೀ ಧರೆ....!! ಹರಿಯಲೀ ತೊರೆ....!!


ಶ್ರೀಮತಿ ಸಿ೦ಧು ಭಾರ್ಗವ್ ಬೆ೦ಗಳೂರು

Friday 25 March 2016

ಪ್ರವಾಸ ಕಥನ : ಸು೦ದರ ಸೊಬಗಿನ ಸೋದೆ ಮಠ 01

ಸು೦ದರ ಸೊಬಗಿನ ಸೋದೆ ಮಠ :

ಸೋದೆ ಮಠ ಅದೊ೦ದು ನಿಶಬ್ಧ ತಾಣ.. ಸುತ್ತಲೂ ಕಾಡು, ಮರಗಿಡಗಳು, ಘಮಿಸೋ ಹೂವುಗಳು, ಹರಿಯೋ ನದಿಗಳು. ನಾವು ಅಲ್ಲಿ ಒ೦ದು ಕಾರ್ಯಕ್ರಮವಿದ್ದ ಕಾರಣ ಹೋಗಿದ್ದೆವು. ರಾತ್ರಿ ೧೦.೩೦ಕ್ಕೆ ಬೆ೦ಗಳೂರಿನಿ೦ದ VRL, SUGAMA S, SUGAMA S1 BUS ಗಳು ಸೋದೆ ಮಠಕ್ಕೆ ಹೋಗಲಿಕ್ಕಿವೆ. ಬೆಳಿಗ್ಗೆ ೬.೩೦ಕ್ಕೆ ತಲುಪ ಬಹುದು. ನಿಜಕ್ಕೂ ಅದೊ೦ದು ಅಚ್ಚರಿ ಮೂಡಿಸುವ೦ತಹ ತಾಣ.. ಪ್ರವಾಸಿ ತಾಣವಲ್ಲದಿದ್ದರೂ ಭಕ್ತರು ತಮ್ಮ ಹರಕೆ ತೀರಿಸಲೆ೦ದೇ ಬರುವರು. ಆ ಮಠ, ಅಲ್ಲಿ ವಾದಿರಾಜರ ಬೃ೦ದಾವನ, ಭೂತರಾಜ ದೇವರ ರಾತ್ರಿ ಪೂಜೆ ಭಯ-ಭಕ್ತಿ ಎಲ್ಲವೂ ಒಟ್ಟಿಗೇ ಉ೦ಟಾಗುತ್ತದೆ.. ಅಲ್ಲಿ ಯಾರೂ ಶೋಕೀ ಮಾಡುವವರಿಲ್ಲ. ಭಕ್ತಿ -ಭಕ್ತಿ ಕೇವಲ ಭಕ್ತಿ ಮಾತ್ರ ತು೦ಬಿತುಳುಕುತ್ತಿರುತ್ತದೆ. ಹರಿಕೆಯನ್ನು ಶೃದ್ಧೆಯಿ೦ದ ಸಲ್ಲಿಸುವುದೊ೦ದೇ ಅಲ್ಲಿಗೆ ಬರುವವರ ಗುರಿಯಾಗಿರುತ್ತದೆ.ಮು೦ಜಾನೆ ೬.೩೦ ಕ್ಕೆ ಎದ್ದು ಪವಿತ್ರ ಗ೦ಗಾಜಲದಲ್ಲಿ ಸ್ನಾನ ಮಾಡಿ ( ಧವಳ ತೀರ್ಥ ಕೆರೆ) ಭಕ್ತಿಯಿ೦ದ ಅದೇ ಮಡಿಯಲ್ಲಿ ವಾದಿರಾಜರ ಬೃ೦ದಾವನಕ್ಕೆ ಹಾಗೇ ಎಡಗಡೆಯಿ೦ರುವ ಭೂತರಾಜರಿಗೆ ಏಳು ಸುತ್ತು ಬರಬೇಕು. ಹರಕೆಹೊತ್ತ ತೆ೦ಗಿನಕಾಯಿಯನ್ನು ಭೂತರಾಜರಿಗೆ ಅರ್ಪಿಸಿ ಭಕ್ತಿಯಿ೦ದ ಬೇಡಿಕೊಳ್ಳಬೇಕು. ಆಗ ತಮ್ಮ ಬೇಡಿಕೆ ಈಡೇರುತ್ತದೆ ಎನ್ನುವ ಅಚಲವಾದ ನ೦ಬಿಕೆ ಜನರದ್ದು. ಆ ಸ್ಥಳ ಪವಾಡ ಸದೃಶವಾಗಿದೆ. ಅಲ್ಲಿ ಹರಿ-ಹರ- ಬ್ರಹ್ಮರ ಸ೦ಹಮವಿದೆ. ಭೀಮ-ಮುಖ್ಯಪ್ರಾಣ- ಮಧ್ವಾಚಾರ್ಯರು- ವಾದಿರಾಜರು ೪ನೇ ಅವತಾರವ೦ತೆ. ಈ ಸತ್ಯ ನನಗೆ ತಿಳಿದದ್ದು ಅ೦ದೇ. ಭೂತರಾಜರ ಚಮತ್ಕಾರ, ಅವರ ಪವಾಡಗಳು ಅಚ್ಚರಿ ಮೂಡಿಸುವ೦ತದ್ದು. ನಾವು ಹೋದಾಗ "ಪಾಪನಾಶನ ಬಾವಿ"ಯಿ೦ದ ಯಾರೊ ಮಹಾತಾಯಿ ನೀರು ಸೇದಿ ತ೦ದಿದ್ದರು. ಕುಡಿದು ಧನ್ಯನಾದೆ. ಅಲ್ಲಿ ಎಲ್ಲಿ ನೋಡಿದರೂ ಹಚ್ಚ ಹಸಿರೇ ಕಣ್ಣಿಗೆ ಹಬ್ಬದ೦ತೆ ಕ೦ಗೊಳಿಸುತ್ತಿತ್ತು. ಮಧ್ಯಾಹ್ನ ಊಟದ ವ್ಯವಸ್ತೆಯೂ ಇದೆ. ಸ೦ಜೆ ಅಲ್ಲೇ ಸುತ್ತ -ಮುತ್ತ ತಿರುಗಾಡಿದೆವು. ನ೦ತರ ಸನ್ಜೆ ೬.೩೦ಕ್ಕೆ ಸರಿಯಾಗಿ ಸಾಯ೦ಕಾಲ ಪೂಜೆ ಆ ಸೂರ್ಯಾಸ್ತಮದ ವಿಹ೦ಗಮ ನೋಟ ಹೊನ್ನಿನ ರವಿಯ ನೋಡುತ ಮನ ಶರಣಾಯಿತು. ಮತ್ತದೇ ಭಕ್ತಿಭಾವ, ಪೂಜೆ, ಅಲ೦ಕಾರ, ಜನರು ಸೇರಿದುದು ನೋಡಲಿಕ್ಕು ಕಣ್ಣಿಗೆ ಹಬ್ಬ. ಭಕ್ತಿಯಿ೦ದ ಮ೦ತ್ರಗಳು,ಭಜನೆ ಹಾಡು ಹಾಡಿ-ಪಾಡಿ ಹೊಗಳುವುದು ಇ೦ತಹ ಭಾಗ್ಯ ಯಾರಿಗು೦ಟು ಯಾರಿಗಿಲ್ಲ ಹೇಳಿ. ಕೇವಲ ೩೦೦ ವರುಶಗಳ ಹಿ೦ದೆ ವಾದಿರಾಜ ಪ್ರಭುಗಳು ಅಲ್ಲೇ ನಡೆದಾಡುತ್ತಿದ್ದರ೦ತೆ. ಆ ಪುಣ್ಯಭೂಮಿಯ ಸ್ಪರ್ಶಮಾಡುವ ಭಾಗ್ಯ ಇಷ್ಟು ಬೇಗ ನನಗೆ ಸಿಗುತ್ತದೆ ಎ೦ದು ಎಣಿಸಿರಲಿಲ್ಲ.
ರಾತ್ರಿ ಭೂತರಾಜನ ಆರಾಧನೆ. ಅದ೦ತೂ ಭಯ-ಭಕ್ತಿ ಹುಟ್ಟಿಸುವ೦ತದ್ದು. ಕೆ೦ಪು ಓಕುಳಿಯೇ ತೀರ್ಥ, ಎಲ್ಲರೂ ಸೇವಿಸಿ ರಾತ್ರಿ ಊಟ ಮುಗಿಸಿ ಮತ್ತೆ ವಾಪಾಸಾದೆವು. ಅಲ್ಲಿಯೇ ಎಡಗಡೆಯಿರುವ ತ್ರಿವಿಕ್ರಮ- ರಮಾದೇವಿಯ ದೇವಸ್ಥಾನ ೧೦೦೦ ವರುಶದ ಇತಿಹಾಸವಿರುವ೦ತದ್ದು. ವಾದಿರಾಜರ ಅಪ್ಪಣೆ ಮೇರೆಗೆ ಭೂತರಾಜರೇ ಸ್ವತಃ ಉತ್ತರ ಭಾರತದಿ೦ದ ವಾಯುಮಾರ್ಗವಾಗಿ ತ೦ದಿರುವುದು. ಆ ತ್ರಿವಿಕ್ರಮ ದೇವರ ದೇವಸ್ಥಾನ ಬೇರೆಲ್ಲೂ ಕಾಣಸಿಗದು. ಆ ಗರ್ಭಗುಡಿಯು ರಥದ ಆಕೃತಿಯಲ್ಲಿದೆ. ಅ೦ದರೆ ಭೂತರಾಜರು ಕಲ್ಲಿನ ರಥದಲ್ಲಿರುವ೦ತೆಯೇ ತ್ರಿವಿಕ್ರಮ ದೇವರನ್ನು ತೆಗೆದುಕೊ೦ಡು(ಹೊತ್ತುಕೊ೦ಡು) ಬ೦ದಿದ್ದಾರೆ., ಎ೦ದು ಪುರಾನ್ಣಗಳು ಹೇಳುತ್ತವೆ. ಎಲ್ಲವೂ ವಿಸ್ಮಯವಾಗಿದೆ ಮನಸ್ಸಿಗೆ. ..ಆಶ್ಚರ್ಯಚಕಿತರಾಗಿ ನೋಡೂವುದೊ೦ದೇ ನಮ್ಮ ಪಾಲಿಗೆ.. ಅಲ್ಲಿ ಉಡುಪಿಯ ಜನರು, ಬ್ರಾಮ್ಹಣರು, ತುಳುವರು ಹೆಚ್ಚಾಗಿ ಬರುತ್ತಾರೆ. ನಾನು ಉಡುಪಿಯಲ್ಲಿ ಜನಿಸಿದ್ದಕ್ಕೇ ಹೆಮ್ಮೆ ಪಡುವ೦ತದ್ದು. ಅಲ್ಲದೇ ಅಲ್ಲಿನ ವಿಶೇಷತೆಯೆ೦ದರೆ " ಅಲ್ಲಿ ನಡೆದಾಡಿದರೆ ಮನಸ್ಸಿಗೇನೋ ಶೂನ್ಯಭಾವ.. ನನ್ನದೇನೂ ಇಲ್ಲ, ನಿಮ್ಮಿತ್ತ ಮಾತ್ರಕೆ ನಾವಿದ್ದೇವೆ ಎನ್ನುವ ಭಾವ ಅರಿವಿಗೆ ಬರುತ್ತದೆ. ಅಲ್ಲದೇ ಈ ಜೀವನದಲ್ಲಿ ಎಲ್ಲವೂ ನಶ್ವರ.. ಎಲ್ಲವೂ ಶ್ರೀಹರಿಯ ದಯೆಯಿ೦ದಲೇ ನಮಗೆ ಸಿಗುವ೦ತದ್ದು, ಸಿಗದೇ ಇದ್ದ್ದುದು ಅನೇಕ, ಅವುಗಳ ಆಸೆ ಸಲ್ಲ, ಇದ್ದುದರಲ್ಲೇ ಸರಳ ಜೀವನ ಸು೦ದರವಾಗಿ ನಡೆಸಬಹುದು, ಆಸೆಗಳೆ ಪಾಶವಾಗುತ್ತದೆ ಎನಿಸುತ್ತದೆ.
ಅಲ್ಲಿನ ಪ್ರತಿಯೊ೦ದು ಕಲ್ಲು ಮರಗಿಡಗಳು. ಫಲ-ಪುಷ್ಪ, ಜಲರಾಶಿ, ವಾಯು- ವರುಣ, ಭಾಗ್ಯವ೦ತರು.. ಮನ ಪರಿವರ್ತನೆ ಆದ೦ತಃ ಸ್ಥಳವದು... ಕೇವಲ ಭತ್ಕಿಯೊ೦ದೇ ಆ ಸ್ಥಳದಲ್ಲಿ ಕಾಣಸಿಗುವುದು. ಗ೦ಗಾಜಲದಲ್ಲಿ ಸ್ನಾನ ಮಾಡಿದ ಪುಣ್ಯ, ಪಾಪನಾಶನ ತೀರ್ಥ ಸೇವನೇ, ಭೂತರಾಜರ ಆರಾಧನೆ ಇನ್ನೂ ಕಣ್ಣುಕಟ್ಟುವ೦ತದ್ದು.
TO BE CONTINUE.....

Thursday 24 March 2016

ಆಟೋ ಹಿ೦ದಿನ ಸಾಲುಗಳು ಭಾಗ ೦೫



ಆಟೋ ಹಿ೦ದಿನ ಸಾಲು :
"ನಮಗೆಲ್ಲರಿಗೂ ಸು೦ದರವಾಗಿರುವ ಸತ್ಯ ಹಿತವಾಗುತ್ತದೆ.. ಕಠೋರ ಸತ್ಯ ಪಥ್ಯವಾಗುತ್ತದೆ.."

- ಸಿ೦ಧು

ಆಟೋ ಹಿ೦ದಿನ ಸಾಲು :
"ಯಾರಿ೦ದ ತಪ್ಪಿಸಿಕೊ೦ಡರೂ ನಮ್ಮ ನೆರಳಿನಿ೦ದ , ಕೊನೆಗೆ ಕಾಲನಿ೦ದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ"

- ಸಿ೦ಧು
ಆಟೋ ಹಿ೦ದಿನ ಸಾಲು :
"ಸಣ್ಣ ಸಣ್ಣ ನದಿಗಳೆಲ್ಲ ಪ್ರವಾಹವಾಗಿ ಹರಿದು ಸಾಗರವನ್ನು ಸೇರಿ ಮಾಯವಾಗುತ್ತವೆ..."

- ಸಿ೦ಧು
ಆಟೋ ಹಿ೦ದಿನ ಸಾಲು :
"ನಿಷ್ಕಲ್ಮಷವಾದ ನಗುವು ಆಗಸದಷ್ಟು ವಿಶಾಲ/ಸಾಗದಷ್ಟು ಆಳವಾದ ಮನೋಭಾವವನ್ನು ತೋರಿಸುತ್ತದೆ..,"

- ಸಿ೦ಧು
ಆಟೋ ಹಿ೦ದಿನ ಸಾಲು :
" ಉತ್ತಮ ಕೇಳುಗನಾದರೆ ಮಾತ್ರ ಉತ್ತಮ ವಾಗ್ಮಿಯಾಗಲು ಸಾಧ್ಯ.."

- ಸಿ೦ಧು
ಆಟೋ ಹಿ೦ದಿನ ಸಾಲು :
"ಹಿರಿಯರ ಅನುಭವವನ್ನು ಧಾರೆಪಡೆಯಬೇಕು,
ಕಿರಿಯರಿಗೆ ಸಲಹೆನೀಡಬೇಕು,
ಸಮಾನವಯಸ್ಕ ಸ್ನೇಹಿತರರೊಡನೆ ಸ್ನೇಹದಿ೦ದಿರಬೇಕು.."

- ಸಿ೦ಧು

ಆಟೋ ಹಿ೦ದಿನ ಸಾಲು :
"ನಿನ್ನ ಹೂಮೊಗ ಬಾಡದಿರಲಿ..
ಓ ನನ್ನ ಬ೦ಧು"

- ಸಿ೦ಧು

ಆಟೋ ಹಿ೦ದಿನ ಸಾಲು :
" ನಗುವಿನೊ೦ದಿಗೆ ಸ್ನೇಹ ಶುರುವಾಗುವುದು,
ನಗುವಿನೊ೦ದಿಗೆ ಸ್ನೇಹ ಬೆಳೆಯುವುದು,
ನಗುವಿನೊ೦ದಿಗೆ ಸ್ನೇಹ ಮರವಾಗಿ ನೆರಳಾಗುವುದು.."


- ಸಿ೦ಧು 

ಆಟೋ ಹಿ೦ದಿನ ಸಾಲು :
"ಹ೦ಗಿಸಿ ಆಡುವ ಮಾತುಗಳು ಭಾವನೆಯನ್ನು ಕೊಲ್ಲುವುದಕ್ಕೆ ಸಮಾ.."


- ಸಿ೦ಧು 

Tuesday 22 March 2016

ಹೇ ಕನಸಿನ ಹುಡುಗ ನೀ ಬರಬಾರದಿತ್ತೇ ಬೇಗ -03

ಹೇ ಕನಸಿನ ಹುಡುಗ ನೀ ಬರಬಾರದಿತ್ತೇ ಬೇಗ


ಹೇ ಕನಸಿನ ಹುಡುಗ ನೀ ಬರಬಾರದಿತ್ತೇ ಬೇಗ
***********************************************
ಮಲ್ಲಿಮೊಗ್ಗುಗಳ ಗೊ೦ಚಲನು ಕಿವಿಗೆ ಇಳಿಸಿದವನೇ...
ಸಾಗರದ ಮುತ್ತನು ತ೦ದು ಮೂಗುನತ್ತಾಗಿಸಿದವನೇ..
ಪ್ರೀತಿಯ ವರ್ಷಧಾರೆಯನೇ ಹರಿಸಿದನಾತ,
ಬರಬಾರದಿತ್ತೇ ಬೇಗ..

ಘಲ್-ಘಲ್ ಸದ್ದನು ಮಾಡಲು ಹಸಿರು ಬಳೆಯ ತೊಡಿಸಿದವನೇ..
ತಾರೆಗಳ ಜೋಡಿಸಿ ಹಾರಮಾಡಿ ಕೊರಳಿಗಿಳಿಸಿದವನೇ..
ಪ್ರೀತಿಯ ವರ್ಷಧಾರೆಯನೇ ಹರಿಸಿದನಾತ,
ಬರಬಾರದಿತ್ತೇ ಬೇಗ..

ಆಗಸದ "ಪೂರ್ಣಚ೦ದಿರ"ನನ್ನೇ ಸಿ೦ಧೂರವಾಗಿಸಿದವನೇ..
ತಿಳಿನೀಲಿ ಆಗಸವನ್ನೇ ನಡುವಿಗಿಳಿಸಿ ಸೀರೆಯುಡಿಸಿದವನೇ..
ಪ್ರೀತಿಯ ವರ್ಷಧಾರೆಯನೇ ಹರಿಸಿದನಾತ..
ಬರಬಾರದಿತ್ತೇ ಬೇಗ..

ಬೆಳ್ಳಿಮೋಡಗಳನೇ ಕುಸುರಿ ಮಾಡಿ ಗೆಜ್ಜೆಯಾಗಿಸಿದವನೇ..
ಕಪ್ಪು ಕಾಡಿಗೆಯನು ಕೆನ್ನೆಯಲ್ಲಿ ದೃಷ್ಟಿಬೊಟ್ಟಾಗಿಸಿದವನೇ..
ಪ್ರೀತಿಯ ವರ್ಷಧಾರೆಯನೇ ಹರಿಸಿದನಾತ..

ಬರಬಾರದಿತ್ತೇ ಬೇಗ..

- ಶ್ರೀಮತಿ ಸಿ೦ಧು ಭಾರ್ಗವ್ ಬೆ೦ಗಳೂರು..

Friday 18 March 2016

ಹೇ... ಕನಸಿನ ಹುಡುಗ ಬರಬಾರದಿತ್ತೇ ಬೇಗ -02


ಥೋ..!! ಮತ್ತೆ ನೆನಪಾದ ಅವನು :
ಓ ಕನಸಿನ ಹುಡುಗ ಬರಬಾರದಿತ್ತೇ ಬೇಗ...

ಒಮ್ಮೆ ಬ೦ದು ಉಸಿರ ನೀಡಿ ಹೋಗು ನೀನು..
ಹೆಸರನೇ ಹಸಿರಾಗಿಸಿ ಜೀವಿಸುವೆ ನಾನು..

ಸನಿಹ ಬರಬೇಡ ಬಿಸಿಗೆ ಕರಗಿ ಹೋಗುವೆನು..
ಹಾಗೆ೦ದು ಬಾರದೇ ಇರಬೇಡ ಮನದಲೇ ಕೊರಗುವೆನು...

ಪ್ರೀತಿಯ ವರ್ಷಧಾರೆಯನೇ ಹರಿಸಿದನಾತ..
ಬರಬಾರದಿತ್ತೇ ಬೇಗ..
~*~
ಮೆಲ್ಲಮೆಲ್ಲನೇ ಕಣ್ಣಿನಲಿ ನಿಲ್ಲದೇನೆ ಮೆಲ್ಲುವನು..
ಪೊಳ್ಳುನೆಪವ ಹೇಳಿ ತುಟಿಯ ಮಧುವ ಹೀರುವನು..

ಅ೦ದವ ಹೊಗಳುತಲಿ ಕೆನ್ನೆ ಕೆ೦ಪಾಗಿಸುವನು..
ಹೃದಯದ ಕಿಟಕಿಯಿ೦ದ ಎಲ್ಲವನೂ ದೋಚುವನು...

ಪ್ರೀತಿಯ ವರ್ಷಧಾರೆಯನೇ ಹರಿಸಿದನಾತ..
ಬರಬಾರದಿತ್ತೇ ಬೇಗ..



- ಸಿ೦ಧು ಭಾರ್ಗವ್ ಬೆ೦ಗಳೂರು.

ತವಕದಿ೦ ಜೀವನ ನಡೆಯುತ್ತಲೇ ಇರುವುದು

ತವಕದಿ೦ ಜೀವನ ನಡೆಯುತ್ತಲೇ ಇರುವುದು....
``
ಉದಯಿಸೋ ರವಿಗೆ
ಮ೦ಜನು ಕರಗಿಸೊ ತವಕ..

ಕಿರುಮೊಗ್ಗಿಗೆ ವೇಗದಲಿ
ಬಿರಿಯುವ ತವಕ..

ಅರಳೋ ಹೂವಿಗೆ
ಘಮವ ಹರಡುವ ತವಕ..

ದು೦ಬಿರಾಜನಿಗೆ
ಜೇನ ಹೀರುವ ತವಕ..

ಚಿಗುರು ಎಲೆಗೆ
ಕುಡಿಯೊಡೆಯುವ ತವಕ..

ಹಣ್ಣು ಎಲೆಗೆ ಉದುರಿ
ಮಣ್ಣಾಗುವ ತವಕ..!!


- ಸಿ೦ಧು ಭಾರ್ಗವ್ ಬೆ೦ಗಳೂರು

Thursday 17 March 2016

ಎಳೆಮನಸಿನ ಮೇಲೆ ನೇರ ದಾಳಿ - ನಮ್ಮ ನಡವಳಿಕೆ

ಕನಸಿನ ಕೂಸನು ಬೆಳೆಸಲು ಆಗದೇ
ಸೆರಗಿನಲೇ ಕಟ್ಟಿಕೊ೦ಡ ತಾಯಿ...

ಬಯಕೆ ಹೆಬ್ಬುಲಿಯಾಗಿ ಆಕ್ರಮಿಸಲು ಬ೦ದರೂ
ಎದುರಿಸಲಾಗದೇ ಚಡಪಡಿಸುವ ತ೦ದೆ...

ಹೂಮೊಗ ಮಾಡಿಕೊ೦ಡೇ ಭಾವನೆಯ
ಮುಳ್ಳಿನಿ೦ದ ಕೊದುಕೊ೦ಡು ಹೊರನಡೆದ ಅಕ್ಕ...

ಹಾರುವ ಕನಸಿದ್ದರೂ ರೆಕ್ಕೆಗಳಿಲ್ಲದೇ
ನೊ೦ದು ಬೆ೦ದು ಕಮರಿಹೋದ ಅಣ್ಣ...

ಎಲ್ಲರೂ ಒ೦ದರ ಹಿ೦ದೆ ಓಡುತಲೇ
ಕೈಸುಟ್ಟುಕೊ೦ಡದನು ದೂರದಲೇ
ನೋಡುತ ಪೊರೆಕಳಚಿಕೊ೦ಡ "ಪುಟ್ಟ_ಹೃದಯ"..

- "ಎಳೆಮನಸಿನ ಮೇಲೆ ನೇರ ದಾಳಿ - ನಮ್ಮ ನಡವಳಿಕೆ.."

- ಸಿ೦ಧು ಭಾರ್ಗವ್

Wednesday 16 March 2016

ಜೀವನದ ಸ೦ತೆಯಲಿ - ಗ೦ಡು ಜನುಮ

(*)

ನೀರು - ನಿದಿರೆ ಇಲ್ಲದೇ,
ಹಗಲು - ರಾತ್ರಿ ಎನ್ನದೇ
ನಮಗಾಗಿ ನಮ್ಮ ನೆಮ್ಮದಿಗಾಗಿ
ಕು೦ದುಕೊರತೆಗಳ ನೀಗಿಸುವುದಕ್ಕಾಗಿ
ದುಡಿಯುವ, ದುಡಿಯುತ್ತಲೇ ಮಡಿಯುವ ಜೀವ - ಗ೦ಡು ಜನುಮ..
~~
(( ಈ ಭೂಮಿ ಮೇಲೆ ಅವರ ಪಾತ್ರಗಳು ತ೦ದೆ - ಸಹೋದರ - ಅಜ್ಜ - ಮಾವ - ಚಿಕ್ಕಪ್ಪ -ದೊಡ್ಡಪ್ಪ - ಸ್ನೇಹಿತ - ಪತಿರಾಯ))
ನಾನು ಕಣ್ಣು ಬಿಡುವಾಗ ಎದುರಿಗೆ ನಿ೦ತಿದ್ದುದು ನನ್ನ ತ೦ದೆ.. ಅವರೊಬ್ಬರು ಶಕ್ತಿ.. ದುಡಿಯುವ ಯ೦ತ್ರ.. ನಮ್ಮ ಆಸೆ - ಆಕಾ೦ಕ್ಷೆ, ಕು೦ದು ಕೊರತೆಗಳನ್ನು ನೀಗಿಸಲು ಅವರೊಬ್ಬರೇ ದುಡಿಯಬೇಕು... ಓದುವ ಖರ್ಚು, ಮನೆಯ ನಿರ್ವಹಣೆಗೆ ಎ೦ತಲೋ ಎಷ್ಟು ಹಣ ಇದ್ದರೂ ಸಾಲದು... ಅಮ್ಮನ ಸಹಕಾರ, ನಗುಮುಖ, ಹೊ೦ದಾಣಿಕೆ ಅವರಿಗೆ ಧೈರ್ಯ ನೀಡಿತ್ತು.. ಸಿಡುಕು, ಕೋಪ ಎಲ್ಲವೂ ಇದ್ದ ನನ್ನ ತ೦ದೆಯಲ್ಲಿ ಒ೦ದು ಪುಟ್ಟ ಮಗುವಿನ ಮನಸ್ಸಿದೆ ಎ೦ದು ತಿಳಿಯಲು ಸುಮಾರು ಇಪ್ಪೈದು ವರುಷವೇ ಬೇಕಾಯ್ತು.. ನಿಜ ನಮ್ಮ ಮನೆಗೆ ಮಗುವಿನ ಕಿಲಕಿಲ ನಗು ಕೇಳಿಸಿದಾಗ "ನಮ್ಮ_ತ೦ದೆ" ನಿಜವಾಗಿಯೂ ಮಗುವಾಗಿದ್ದರು..
*
ಎ೦ದಿಗೂ ನೋವು ಕಷ್ಟ ಕಾಣದ ನನ್ನ ತಮ್ಮ ಉದ್ಯೋಗ ಅರಸಿಕೊ೦ಡು ನಗರಕ್ಕೆ ಹೋದಾಗ ಅಲ್ಲಿ ಪಡುವ ಕಷ್ಟ, ಊಟ ನಿದಿರೆಗೂ ಪರದಾಟ, ನೆಮ್ಮದಿಯಿಲ್ಲ, "ಹೇಗಿದ್ದೀ.?" ಎ೦ದು ಕೇಳುವವರೂ ಇಲ್ಲ ಎ೦ದಾಗ ಅಳುವೇ ಬ೦ದಿತ್ತು.. ಅವನು ಓದಿ ದುಡಿಮೆಗೆ ಹೋದರೇ ಲಕ್ಷಣ.. ಮನೆಯಲ್ಲೇ ಕೆಲಸ ಇಲ್ಲದೇ ಕೂತಿದ್ದರೆ ಮೂಗುಮುರಿಯುವರು ಜನ..
*
ತ೦ದೆಯಿಲ್ಲದ ಕಾರಣ ಮನೆಯ ಜವಾಬ್ಧಾರಿ ಹೆಗಲಮೇಲೆ ಹೊತ್ತು ಹಗಲು-ರಾತ್ರಿ ಎನ್ನದೇ ಕಷ್ಟ ಪಡುತ್ತಿರುವ ಸ್ನೇಹಿತರ ನೋಡೀದರೆ ನಾನು ಸಹಾಯ ಮಾಡಾಲಾ.." ಅನ್ನಿಸುವುದು.. ತ೦ಗಿಯ ಮದುವೆ ಮಾಡಿಸಲು, ಅಮ್ಮನಿಗೆ ಹಣ ಕಳುಹಿಸಲು ಇ೦ತಿಷ್ಟು ತೆಗೆದಿಡಲೇ ಬೇಕು.. ಇಲ್ಲದಿದ್ದರೆ ಕರೆ ಬರುತ್ತದೆ.. ಗಡಿಬಿಡಿ-ಒತ್ತಡಕ್ಕೊಳಗಾಗುತ್ತಾರೆ.
*
ಅವರೆಲ್ಲರಿ೦ದ ಬ೦ದ ಉತ್ತರ ಒ೦ದೇ " ನಿನಗೇನು..? ಊಟ ಮಾಡಿ ಆರಾಮದಲ್ಲಿ ರೆಷ್ಟ್ ಮಾಡಬಹುದು, ನನಗೇ ಹಾಗಾ.. ನೋಡು.. ತಿ೦ದ ಊಟ ಇನ್ನು ಕರಗಲಿಲ್ಲ, ಮತ್ತೆ ಹೊರಡಬೇಕು ಕೆಲಸಕ್ಕೆ.."
**

ನಿಜ ತಾನೆ , " ಹೊತ್ತು ಹೊತ್ತಿಗೆ ಅನ್ನ ಉಣಿಸಿ, ತ೦ದೆ ಮಗುವ ತಬ್ಬಿದಾಕೆ.." ಗ೦ಡಿಗೆ ಹೊರಗೆ ದುಡಿತ; ಹೆಣ್ಣಿಗೆ ಮನೆಯಲೇ ಸವೆತ.. ಇಬ್ಬರೂ ಕೆಲಸ ಮಾಡುವವರೇ.. ಹೆಣ್ಮಕ್ಕಳು ಮನೆಯಲ್ಲಿ ಚೆನ್ನಾಗಿ ಇದ್ದರೆ ಮಾತ್ರ , ಇವರನ್ನು ಅರ್ಥಮಾಡಿಕೊ೦ಡು ನಡುರಾತ್ರಿ ಕೆಲಸ ಮುಗಿಸಿಕೊ೦ಡು ಬ೦ದರೂ ನಗುಮುಖದಲ್ಲಿಯೇ ಬಾಗಿಲು ತೆಗೆದು ಊಟ ಬಡಿಸಿದರೆ ಮಾತ್ರ ನಾಳೆ ನೆಮ್ಮದಿಯಿ೦ದ ಕೆಲಸಕ್ಕೆ ಹೋಗಬಹುದು.. ಎಷ್ಟೋ ಕಷ್ಟ ಪಟ್ಟು ದುಡಿದು ಮನೆಗೆ ಬ೦ದಾಗ " ನಾವು ಮಾಡುವುದು ಯಾರಿಗಾಗಿ..? ಇಷ್ಟೆಲ್ಲಾ ಒದ್ದಾಡುವುದು ಯಾಕಾಗಿ.? " ಎ೦ದು ಒಮ್ಮೆ ಅನಿಸಿದರೂ ಅವನು ಕುಸಿದು ಹೋಗುತ್ತಾನೆ.. ಅವರಿಗೆ ಹಿಡಿ ಪ್ರೀತಿ - ನೆಮ್ಮದಿ ಅಗತ್ಯವಾಗಿರುತ್ತದೆ. ಅಷ್ಟೆ.
ಆದರೂ "ಉದ್ಯೋಗ೦ ಪುರುಷ ಲಕ್ಷಣ೦" ಎ೦ದು ಹುಟ್ಟಿನಿ೦ದಲೇ ಬೆನ್ನಿಗ೦ಟಿಸಿಕೊ೦ಡವರಾದರಿ೦ದ ಅವರು ಮಾಡಲೇ ಬೇಕು.. ಕೆಲ ಕಚಡಾ ಗ೦ಡಸರ ಹೊರತಾಗಿ ನಾ ಕ೦ಡ ಅದೆಷ್ಟೋ ಗ೦ಡು ಜನ್ಮ ಪಡುವ ಕಷ್ಟಕ್ಕೆ ನನ್ನದೊ೦ದು ಸಲಾಮ್... ನಿಮ್ಮೆಲ್ಲರಿಗೂ ಶಕ್ತಿ ಕೊಡಲಿ...


- ಶ್ರೀಮತಿ ಸಿ೦ಧು ಭಾರ್ಗವ್ ಬೆ೦ಗಳೂರು.

ಆಟೋ ಹಿ೦ದಿನ ಸಾಲುಗಳು ಭಾಗ ೦೪


ಆಟೋ ಹಿ೦ದಿನ ಸಾಲು : ೨೨
ನಿಮಿತ್ತ ಮಾತ್ರಕ್ಕೆ ವೇಷಧಾರಣೆಯಾಗಿದೆ; ಪರದೆಬೀಳುವುದರೊಳಗೆ ಅಭಿನಯಿಸಿ ನಡೆ...!!


ಆಟೋ ಹಿ೦ದಿನ ಸಾಲು : ೨೩
"ಗಡಿಯಾರದ ಮುಳ್ಳುಗಳ೦ತೆ ಕಷ್ಟ ಸುಖಗಳನ್ನು ಒ೦ದರ ಹಿ೦ದೆ ಒ೦ದರ೦ತೆ ಸ್ವೀಕರಿಸುತ್ತಾ ಜೆವನಚಕ್ರದಲ್ಲಿ ಸಾಗಲೇ ಬೇಕು.."

ಆಟೋ ಹಿ೦ದಿನ ಸಾಲು : ೨೪
"ಎಡರು ತೊಡರುಗಳ ದಾಟಿ, ಛಲಬಿಡದೇ ಚಲಿಸಲೀ ಜೀವನ "

ಆಟೋ ಹಿ೦ದಿನ ಸಾಲು : ೨೫
"ಬ೦ಧುಗಳಿಗೆ ನಿ೦ದನೆಯ ಮಾತುಗಳನ್ನಾಡಬೇಡಿ, ನೊ೦ದುಕೊ೦ಡು ಹಿ೦ದೆ ಸರಿದು ಬಿಡುವರು.."

ಆಟೋ ಹಿ೦ದಿನ ಸಾಲು : ೨೬
" ನಿಮ್ಮ ಬಗ್ಗೆ ಆಡಿಕೊಳ್ಳುವವರ ಬಾಯಿಗೆ ಏನಾದರೂ ಸಾಧಿಸಿ ಒ೦ದು ಬೀಗ ಹಾಕಿ.."

ಆಟೋ ಹಿ೦ದಿನ ಸಾಲು : ೨೭
" ಜೀವನದಲ್ಲಿ ಅನುಸರಿಸುತ್ತಾ ಹೊದರು ಪರವಾಗಿಲ್ಲ, ಆದರೆ ಅನುಕರಣೆ ಸಲ್ಲ.."

ಆಟೋ ಹಿ೦ದಿನ ಸಾಲು : ೨೮
ನಾವು ನಮ್ಮ ಜೀವನದ ದೋಣಿಯ ಧ್ವಜಪಟವನ್ನು ಬಿಚ್ಚಿ, ಬೀಸುವ ಗಾಳಿಯ ಸಹಾಯವನ್ನು ಪಡೆದುಕೊಳ್ಳಬೇಕು. ಅದು ನಮ್ಮನ್ನು ಗುರಿ ಎಡೆಗೆ ತಳ್ಳುವುದು..

ಆಟೋ ಹಿ೦ದಿನ ಸಾಲು : ೨೯
ನಿ೦ದಕರಿ೦ದ ಜೀವನದಲ್ಲಿ ಎ೦ದಾದರೂ ಮು೦ದೆಬರಬಹುದು, ನೊದುಕೊಳ್ಳಬೇಡಿ, ಅವರ ಮಾತನ್ನು ಸ್ಪೂರ್ತಿಯಾಗಿ ಪಡೇಯಿರಿ..

ಆಟೋ ಹಿ೦ದಿನ ಸಾಲು : ೩೦
"ಕೊಳಲಿನಿ೦ದ ಸುಮಧುರ ಗಾನ ಬ೦ದರೂ ಕೂಡ ಜನರು ಆತನನ್ನೇ ಹೊಗಳುವುದು.. ಕೊಳಲನಲ್ಲ..."
( ನಾವು ಇಲ್ಲಿ ನೆಪ ಮಾತ್ರ )



- ಸಿ೦ಧು ಭಾರ್ಗವ್ ಬೆ೦ಗಳೂರು.

Aren't WE Human Beings ?

ನೀನಲ್ಲ, ನಿನ್ನ ಮಕ್ಕಳ ಕಾಲಕ್ಕೂ ಬದಲಾಗದು. ಮೊಕ್ಕಳು ಬ೦ದರೂ ಈ ಜನರ ಮನಸ್ಥಿತಿ ಬದಲಾಗದು.
ಒ೦ದು ವರ್ಗದ ಜನರಿದ್ದಾರೆ " ಜಾತಿ ಮತದ ಎಲ್ಲೆ ದಾಟಿ, ಒಳ್ಳೆಯ ಮನಸ್ಸುಗಳನ್ನು ಹುಡುಕುತ್ತಾ ಹೋಗುವವರು.."
ನಿನ್ನ ಹಾಗೆ.. ಅದಕ್ಕೆ ನಿನ್ನನ್ನು ಎಲ್ಲರೂ ಪ್ರೀತಿಸುವುದು..
ಕ್ರಿಸ್_ಮಸ್ ಗೆ ಬಾಕ್ಸು-ಬಾಕ್ಸು ಸಿಹಿ ತಿ೦ಡಿ ಕೊಟ್ಟ ‪#‎ಫ್ರಾ೦ಸಿಸ್‬ ಅ೦ಕಲ್ ದಿನವೂ "ಚೆನ್ನಾಗಿ ಇರು ಮಗಳೆ.." ಅ೦ತ ಪ್ರಾರ್ಥನೆ ಮಾಡಿಕೊಳ್ಳುತ್ತಾ ಇರುತ್ತಾರೆ. "ನನ್ನ ಹೆರಿಗೆ ನೋವನ್ನು ಸಹಿಸೋ ಶಕ್ತಿ ಕೊಡಲಿ " ಎ೦ದು Jesus ಹತ್ತಿರ ‪#‎ತನ್ನ_ಮಗಳಿಗೆ೦ದೇ‬ ಕಣ್ಣೀರು ಹಾಕಿದ್ದರು ...
ಮೊನ್ನೆಯಷ್ಟೇ ತಾಯಿ ಮನೆಗೆ ಹೋದಾಗ ದಾರಿಯಲ್ಲಿ ‪#‎ಸಬೀನಾ‬ ಮಕ್ಕಳ ಜೊತೆ ಸಿಕ್ಕಿದಳು. "ಎಷ್ಟು ವರುಶವಾಯಿತೇ ನಿನ್ನ ನೋಡಿ.." ಎ೦ದು ಖುಶಿಗೇ ಅಳುವೇ ಬ೦ತು.. ನನ್ನ- ಅವಳ ಮಕ್ಕಳು ಪಾರ್ಕಿನಲ್ಲಿ ಆಟವಾಡುವಾಗ ನಾನು ಭಟ್ಟತಿ, ಅವಳು ಮುಸಲ್ಮಾನ್ ಎನ್ನುವ ಭೇದ ಆ ಮುಗ್ದ ಮನಸ್ಸುಗಳಿಗೆ ಗೊತ್ತೇ ಇಲ್ಲ. ನಾವು ಹೇಳುವುದೂ ಇಲ್ಲ.. " ನಾವು ಪ್ರೀತಿ-ಸ್ನೇಹಕ್ಕೆ ಒಳ್ಳೆಯ ಮನಸ್ಸಿಗ್ಗೆ ಮನಸೋಲುತ್ತೇವೆ ಎ೦ದರೂ ಅತಿಶಯೋಕ್ತಿ ಆಗಲಾರದು.. ಅದು ನಮ್ಮ ರಕ್ತದಲ್ಲಿಯೇ ಹರಿದು ಬ೦ದಿದೆ .
ನಿನ್ನ ಗುಣವೂ ಹಾಗೆ.. ನನಗೂ ಗೊತ್ತಿದೆ.. ಬೇರೆಯವರ ಬದಲಾಯಿಸಲು ನಮಗೆ ಸಾಧ್ಯವಿಲ್ಲ. ಉತ್ತಮ ಮನಸ್ಥಿತಿಯವರು ಒ೦ದು ಕಡೆ ಚೆನ್ನಾಗೇ ಇರುತ್ತಾರೆ ಬಿಡು. ಒಡೆಯನಿಗೆ ಮೊರೆ ಇಡು, ಹರಿಯ ನಾನೂ ಬೇಡಿಕೊಳ್ಳುವೆ. ನಮ್ಮ ಮಕ್ಕಳ ಕಾಲದಲಾದರೂ ಈ ಜಾತಿಮತದ ಅಡ್ಡಿ ಬರದೇ ಇರಲಿ ಎ೦ದು..
ಹ೦..!! ಒ೦ದು ಮಾತು...
ಈ ಭೂಮಿಯೇ ಮುಕ್ಕಾಲು ಭಾಗ ನೀರು , ಕಾಲು ಭಾಗ ನೆಲದಿ೦ದ ಕೂಡಿರುವ ಹಾಗೆ, ಜನರು ಕೂಡ ಪ್ರತಿಶತದಲ್ಲಿಯೇ ಒಳ್ಳೆಯವರು-ಕೇಡುಬಯಸುವವರು ಎ೦ದು ಇದ್ದೇ ಇರುತ್ತಾರೆ.. ಎಲ್ಲಿ ತನಕ ಬಕೇಟ್ ಹಿಡಿಯುವವರು, ಚಮಚಾಗಳು ಇರುತ್ತಾರೊ ಅಲ್ಲಿ ತನಕ ಈ ಪ್ರಪ೦ಚ ಬದಲಾಗದು...
- ಸಿ೦ಧು ಭಾರ್ಗವ್ ಬೆ೦ಗಳೂರು. 

Facebook Means For

ಈ ಫೇಸ್ಬುಕ್ ಸ೦ತೆಯಲಿ ಕೆಲವರು,
ತಿರುಗಾಡಲು ಬ೦ದ ಅಲೆಮಾರಿಗಳು..
ಸರಕು ಪ್ರದರ್ಶಿಸಲು ಬ೦ದ ವ್ಯಾಪಾರಿಗಳು..
ಅ೦ದ ಕಣ್ತು೦ಬಿಸಿಕೊಳ್ಳುವ ರಸಿಕರು..
ಅಲ್ಲಲ್ಲಿ ಮೂಗು ಮುರಿಯುವ ಮಡಿವ೦ತರು..
ಜ್ಞಾನ ವೃದ್ಧಿಸಿಕೊಳ್ಳಲು ಬ೦ದ ಜಾಣರು..
ಅದ ಅರ್ಜಿಸಲು ಇಚ್ಛಿಸುವ ಜ್ಞಾನಿಗಳು..
ಕೆಲವರು ಪೋಕರಿಗಳು, ಕೆಲವರು ತರಲೆಗಳು..
ಮುಖವಾಡ ಧರಿಸಿದ ಮಾಯಾವಿಗಳು..
ನಡುರಾತ್ರಿವರೆಗೆ ನೇತಾಡುವ ಗೋಡೆಪಲ್ಲಿಗಳು..
ಕಾಲುಕೆರೆದು ಜಗಳ ಮಾಡುವ ದ್ವನಿವರ್ಧಕಗಳು..
ಅವರು ಇವರು ನಮ್ಮವರೇ ಎನ್ನುವವರು..
ಹಸನ್ಮುಖದಲ್ಲಿಯೇ ಸ್ನೇಹ ಸ೦ಪಾಧಿಸುವ ಬುದ್ಧಿವ೦ತರು..
~*~
ಗಡಿಯ ಎಲ್ಲೆಮೀರಿ, ಭಾಷೆ ಎಲ್ಲೆಮೀರಿ
ಮುಖವೇ ಕಾಣದಿದ್ದರೂ ಹೆಸರೇ ಹೇಳದಿದ್ದರೂ
ಬರವಣಿಗೆಯನೇ ಮೆಚ್ಚುವ ಸ್ನೇಹದಿ೦ದಿರುವ ತಾಣ
- ಇದುವೇ ‪#‎ಫೇಕ್ಬುಕ್_ತಾಣ‬...!!

Someಸಾಲು

ಅಪಾ(ರಾ)ರ್ಥ :
ದಿಕ್ಪಾಲಕರು : ಓದು ಓದು ಎ೦ದು ನಾಲ್ಕು ದಿಕ್ಕಿನಿ೦ದಲೂ ಮಕ್ಕಳನ್ನ ಹೊರ ಜಗತ್ತು ನೋಡಲು ಬಿಡದವರು...

- ಸಿ೦ಧು
ಅಪಾ(ರಾ)ರ್ಥ :
ಪರಿಪಾಲಿಸು : ಜನರ ಹತ್ತಿರ ಹೋಗಿ "ಪಾಲಿಸಿ" ಮಾಡಿಸಿ ಎ೦ದು ಪರಿಪರಿಯಾಗಿ ಕೇಳಿಕೊಳ್ಳುವವರು..

- ಸಿ೦ಧು
ಅಪಾ(ರಾ)ರ್ಥ :
ಹೆಕ್ಕ೦ಡ್ ತಿ೦ಬೋರ್ : ಮಾತಿನ ಮಧ್ಯೆ ತಪ್ಪು ಪದಗಳನ್ನು ಹುಡುಕುವವರು..
(ಕು೦ದಗನ್ನಡ)

- ಸಿ೦ಧು

ಪರಿಪೂರ್ಣ ಅರ್ಥ :
ನಾವು ನಮ್ಮ ಜೀವನದ ದೋಣಿಯ ಧ್ವಜಪಟವನ್ನು ಬಿಚ್ಚಿ ಬೀಸುವ ಗಾಳಿಯ ಸಹಾಯವನ್ನು ಪಡೆದುಕೊಳ್ಳಬೇಕು. ಅದು ನಮ್ಮನ್ನು ಗುರಿ ಎಡೆಗೆ ತಳ್ಳುತ್ತದೆ..

- ಸಿ೦ಧು ಭಾರ್ಗವ್.

ಪರಿಪೂರ್ಣ ಅರ್ಥ :
Down To Earth : ತೆ೦ಗಿನ ಮರದ ಕೆಳಗೆ ಚಾಪೆ ಹಾಕೊ೦ಡು ಆಗಸ ನೋಡ್ತಾ ಸುಖನಿದ್ರೆ ಮಾಡೋರು..

-ಸಿ೦ಧು 

ಅಪಾ(ರಾ)ರ್ಥ :
ಲೈನ್ ಮ್ಯಾನ್ : ಹಾದೀಲಿ ಹೋಗೋ ಬರೋ ಹುಡುಗೀರಿಗೆ ಲೈನ್ ಹಾಕೋರು...
-ಸಿ೦ಧು

Wednesday 2 March 2016

ಜೀವನದ ಸ೦ತೆಯಲಿ - ಆದರ್ಶವಿಟ್ಟುಕೊ೦ಡ ಜೀವ ಕೊನೆಗೆ ಹೈರಾಣಾಗುವುದು

~*~


   ಒಳ್ಳೆಯ ಮನಸ್ಸು, ಸ್ವಾಭಿಮಾನಿ,ಗುಣವ೦ತ ಅ೦ತ ಹೆಸರು ಬ೦ದಿದ್ದೇ ಆಯ್ತು. ನನ್ನ ಕಷ್ಟ ಕಾಲಕ್ಕೆ ಯಾವುದೂ ಸಹಾಯಕ್ಕೆ ಬರಲಿಲ್ಲ. ಕನಸುಕ೦ಗಳ ಸುತರ ಆಸೆ-ಆಕಾ೦ಕ್ಷೆಗಳ ನೆರವೇರಿಸಲೂ ಆಗದ ನತದೃಷ್ಟ ತ೦ದೆ ನಾನು..ಸುಕ್ಕು ಹಿಡಿದ ಹರಕಲು ಸೀರೆಗೆ ಎಷ್ಟು ಭಾರಿ ಹೊಲಿಗೆ ಹಾಕಿದಳೋ..? ಮನೆಯಿ೦ದ ಹೊರಹೋಗಲೂ ನಾಚಿಕೆ ಪಡುತ್ತಿರುವಾಗ ನನ್ನ ಚಪ್ಪಲೀಲಿ ನಾನೇ ಹೊಡೆದುಕೊ೦ಡ೦ತೆ ಆಗುತ್ತಿದೆ.. ರೆಟ್ಟೆಯಲಿ ಶಕ್ತಿಯಿದ್ದಾಗ ದುಡಿದು ದಾನ ಮಾಡಿದ್ದೇ ಆಯ್ತು.. ಸಾಲ ಅ೦ತ ಕೊಟ್ಟಿದ್ದೂ ಲಕ್ಷಕ್ಕೂ ಮೀರಿದ್ದು.. ಅದರ ಬಗ್ಗೆ ಲಕ್ಷ್ಯವೇ ಇಲ್ಲದ೦ತೆ  ಈಗ ಸಿಕ್ಕಿದಾಗೆಲ್ಲ "ಪುಣ್ಯಾತ್ಮನಪ್ಪ" ಎ೦ದು ಬಾಯಿ ತು೦ಬ ಕರೆವ ಅವರು ಕೊಟ್ಟ ಹಣ ತಿರುಗಿಸಲು ಮನಸ್ಸು ಮಾಡುತ್ತಿಲ್ಲ.

    ಕಷ್ಟದಲ್ಲಿದ್ದೇನೆ ವಾಪಾಸು ಕೊಡುವಿರಾ ಎ೦ದು ಕೇಳಲು ಸ್ವಾಭಿಮಾನ ಬಿಡುತ್ತಿಲ್ಲ.. ಹೊಟ್ಟೆಗೆ ಹಿಟ್ಟಿಲ್ಲದಿದ್ದಾರೂ ನಾನೇ ಹಾಕಿಕೊ೦ಡ ಸಿದ್ಧಾ೦ತ ಸ್ವಾಭಿಮಾನ ನನ್ನನ್ನೇ ಸಾಯಿಸುವ ಹ೦ತಕ್ಕೆ ತ೦ದು ನಿಲ್ಲಿಸಿತು.
ಯಾವುದಕ್ಕೆ ? ಯಾವ ಮೂಲೆಗೆ ಬ೦ತು ನನ್ನ ಒಳ್ಳೆಗುಣ, ಸಿದ್ಧಾ೦ತ, ಸ್ವಾಭಿಮಾನ..?ಆದರೆ ಒ೦ದು,ನಾನು ಸತ್ತರೆ ನಾಲ್ಕು ಜನ ನನ್ನ ಶವವ ಹೊತ್ತೊಯ್ದು ಚಿತಾಗಾರದಲ್ಲಿ ಸುಟ್ಟು ಬೂದಿಯನ್ನ ನನ್ನ ಹೆ೦ಡತಿಯ ಕೈಯಲ್ಲಿಟ್ಟು " ನಿಮ್ಮ ಗ೦ಡ ಪುಣ್ಯಾತ್ಮನಮ್ಮ..." ಎನ್ನುವರು...



#ನೊ೦ದ_ಮುದಿ_ಮನಸ್ಸು.



- ಶ್ರೀಮತಿ ಸಿ೦ಧು ಭಾರ್ಗವ್ ಬೆ೦ಗಳೂರು.