Tuesday 4 June 2019

Navaparva Foundation_ನವಪರ್ವ ಫೌಂಡೇಷನ್ ಬೆಂಗಳೂರು

*ನವ ಪರ್ವ ಫೌಂಡೇಷನ್ನಿನ ಗುರಿ ಮತ್ತು ಉದ್ದೇಶಗಳು.*

೧) ನವ ಪರ್ವ ಫೌಂಡೇಷನ್  ವತಿಯಿಂದ ವಿಧ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸುವ ಯೋಜನೆಯಿದೆ.

೨) ನವ ಪರ್ವ ಫೌಂಡೇಷನ್ ವತಿಯಿಂದ ಪ್ರಾಥಮಿಕ ಶಾಲಾ ಮಕ್ಕಳಿಂದ ಹಿಡಿದು ಇಂಜಿನಿಯರಿಂಗ್ ಕಾಲೇಜನಲ್ಲಿ ಶಿಕ್ಷಣ ಪಡೆಯುತ್ತಿರುವ ವಿಧ್ಯಾರ್ಥಿಗಳ ವರೆಗೂ ಸಾಹಿತ್ಯದಲ್ಲಿ ಆಸಕ್ತಿ, ಕವನ ಸ್ಪರ್ಧೆ, ಕವನ ವಾಚನ, ಅಲ್ಲದೇ ಕಥೆ, ಕವನ, ಲೇಖನಗಳನ್ನು ಹೇಗೆ ಬರೆಯಬಹುದು ಎಂಬ ಸಣ್ಣ ಕಾರ್ಯಾಗಾರವನ್ನು ನಡೆಸುವ ಯೋಜನೆಯಿದೆ. ಹಾಗೆ ಭಾಗವಹಿಸಿದ ವಿಧ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡುವೆವು.

೩) ಹಾಗೆಯೇ ತಿಂಗಳಿಗೊಮ್ಮೆ ಕವನವಾಚನ ,ಕವಿಗೋಷ್ಠಿ ನಡೆಸುವ ಮೂಲಕ ವಿಧ್ಯಾರ್ಥಿಗಳು ಸಾಹಿತ್ಯದ ಕಡೆಗೂ ಒಲವು ತೋರಿಸುವ ಪ್ರಯತ್ನ ನಮ್ಮದಾಗಿದೆ.

೪) ಅಲ್ಲದೇ ಆನ್ಲೈನ್ ಕವಿಗೋಷ್ಠಿ, ಹಾಗೂ ರಾಜ್ಯ ಮಟ್ಟದ ಕವನ ಸ್ಪರ್ಧೆ ನಡೆಸಿ ಬಹುಮಾನ, ಪ್ರಶಸ್ತಿ ಪತ್ರ ನೀಡಿ ಗೌರವಿಸಬೇಕೆಂದಿದ್ದೇವೆ. ಮೆಚ್ಚುಗೆ ಪಡೆದ ಕವನಗಳಿಗೆ ನೆನಪಿನ ಕಾಣಿಕೆ, ಅಭಿನಂದನಾ ಪತ್ರ ನೀಡಿ ಗೌರವಿಸುವೆವು.

೫) ಹಾಗೆಯೇ ಸಾಹಿತ್ಯೇತರ ಚಟುವಟಿಕೆಗಳಾಗಿ ಅನಾಥಾಶ್ರಮಕ್ಕೆ , ವೃದ್ಧಾಶ್ರಮಕ್ಕೆ ಬೇಟಿ ನೀಡಿ ಅಲ್ಲಿಯವರಿಗೆ ನಮ್ಮ ಕೈಲಾದ ಸಹಾಯ ಮಾಡಬೇಕೆಂದಿದ್ದೇವೆ. (ಜನ್ಮದಿನವನ್ನು ಆಚರಿಸಿಕೊಳ್ಳುವುದು, ಹಣ್ಣಹಂಪಲು, ಅಕ್ಕಿ- ಬೇಳೆ ವಿತರಣೆ)

೬) ಪರಿಸರದ ಬಗೆಗೆ ಕಾಳಜಿ ವಹಿಸಿ ಶಾಲೆಗಳಿಗೆ ಭೇಟಿ ನೀಡಿ ಗಿಡ ನೆಟ್ಟು ಹಾಗೆ ಅದರ ಬಗ್ಗೆ ಜಾಗೃತಿ ಮೂಡಿಸುವ ಯೋಜನೆಯಿದೆ.

೭) ಮಕ್ಕಳ ಕಥಾ ಪುಸ್ತಕ, ಹಾಗೂ ಶಿಶುಗೀತೆಯ ಪುಸ್ತಕವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರ್ಥಮಿಕ ಶಾಲೆಗೆ ಭೇಟಿ ಮಾಡಿ ಆದಷ್ಟು ಶಾಲಾ ಪುಟ್ಟ ಮಕ್ಕಳಿಗೆ ನೀಡಿ ಓದಿನಲ್ಲಿ ಆಸಕ್ತಿ ಮೂಡಿಸುವ ಹಾಗೆ ಮಾಡುವುದು.

೮)  ಪರಿಸರ ಸಂರಕ್ಷಣೆಯ ಬಗೆಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುವುದು.ಕಿರುಚಿತ್ರಗಳನ್ನು ತೆಗೆದು (short film) ಶಾಲೆಗೆ ಭೇಟಿ ನೀಡಿ ಅದನ್ನು ಪ್ರದರ್ಶಿಸುವುದು.

೯) ಮಕ್ಕಳಲ್ಲಿ ಚಿತ್ರಕಲೆ, ಭಾಷಣ ಮಾಡುವ ಕಲೆ, ನಾಟಕಗಳಲ್ಲಿ ಭಾಗವಹಿಸಲು ಸಣ್ಣಪುಟ್ಟ ಕಾರ್ಯಾಗಾರವನ್ನು ನಡೆಸುವುದು.

೧೦) ಜೀವ ವೈವಿಧ್ಯಮಯ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವುದು.

೧೧) ಟ್ರಸ್ಟ್ ನ  ವತಿಯಿಂದ ಪರಿಸರ ಮಾಲಿನ್ಯ ಹಾಗೂ ಅದರ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು. (ವೀಡಿಯೋ ಮೂಲಕ‌.)

೧೨) ಮಳೆ ನೀರಿನ ಸಂರಕ್ಷಣೆ ಬಗ್ಗೆ ಮಕ್ಕಳಲ್ಲಿ ಹಾಗೂ ಪೋಷಕ ರಲ್ಲಿ ಅರಿವು ಮೂಡಿಸುವುದು.

೧೩) ಮಕ್ಕಳ ಸಾಹಿತ್ಯ ಸಮ್ಮೇಳನದ ಮೂಲಕ ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸುವ ಪ್ರಯತ್ನ ಮಾಡುವುದು.

೧೪) ಹಾಗೆಯೇ ಮುಂಬರುವ ವರುಷಗಳಲ್ಲಿ ನಮ್ಮದೆ ಸಂಸ್ಥೆಯಡಿಯಲ್ಲಿ ಶೈಕ್ಷಣಿಕ ಸಂಸ್ಥೆಯನ್ನು ತೆರೆಯುವ ಯೋಜನೆಯಿದೆ.

೧೫) ವಿಧ್ಯಾರ್ಥಿಗಳಿಂದ  ಕಥೆ, ಕವನ ಲೇಖನಗಳನ್ನು ಆಹ್ವಾನಿಸಿ ಕೃತಿರೂಪ ಕೊಟ್ಟು ಲೋಕಾರ್ಪಣೆ ಮಾಡುವ ಯೋಜನೆಯಿದೆ.

*✍ ಮುರುಳೀಧರ್ ಕೆ.ಎಸ್*
*ಅಧ್ಯಕ್ಷರು. (ನವ ಪರ್ವ ಫೌಂಡೇಷನ್‌)*