Wednesday 2 December 2020

Green tea uses ಗ್ರೀನ್ ಟೀ ಉಪಯೋಗ ಆರೋಗ್ಯಮಾಹಿತಿ

ಕಿರು ಲೇಖನ ಆರೋಗ್ಯ ವಿಭಾಗ : ಗ್ರೀನ್ ಟೀ ಕುಡಿದು ಆರೋಗ್ಯ ಹೆಚ್ಚಿಸಿಕೊಳ್ಳೋಣ 

ಸಿಂಧು ಭಾರ್ಗವ್  ಬೆಂಗಳೂರು-೨೧



ಹೌದು . ಇತ್ತೀಚಿಗಿನ ಟ್ರೆಂಡ್ ಗ್ರೀನ್ ಟೀ ಕುಡಿಯುವುದು. ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿದರೆ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ದಿನವಿಡೀ ದೇಹ ಹಗುರವಾದಂತೆ ಭಾಸವಾಗುತ್ತದೆ.

ಒಂದು ಜಾಹಿರಾತಿನಲ್ಲಿ ತೋರಿಸುತ್ತಾರೆ. ಹೊಟ್ಟೆ ತುಂಬಾ ಊಟ ಮಾಡಿ , ಉಬ್ಬರಿಸಿದಂತಾದರೆ, ಗ್ರೀನ್ ಟೀ ಕುಡಿದು ಸರಿಮಾಡಿಕೊಳ್ಳಬಹುದು ಎಂದು. ಅಂದರೆ ಅದರ ಅರ್ಥ ಗ್ರೀನ್ ಟೀಯಿಂದ ಕೆಟ್ಟ ಕೊಲೆಸ್ಟರಾಲ್‌ ಕಡಿಮೆಯಾಗುತ್ತದೆ. ನಿಮ್ಮ ದೇಹದ ಕೊಬ್ಬು ಕರಗಿಸುತ್ತದೆ. ಹಾಗಾಗಿ ನಿಮಗಿಷ್ಟವಾದ ಆಹಾರದ ಮೇಲೆ ಹಿಡಿತ ಸಾಧಿಸುವುದೇನು ಬೇಡ ಎಂದು ಹೇಳುತ್ತಾರೆ... ಹಾಗೆ ಹೇಳಿದರೆ ಯಾರಿಗೆ ತಾನೇ ಖುಷಿಯಾಗುವುದಿಲ್ಲ.

ನಿಜ. ಗ್ರೀನ್ ಟೀಯಲ್ಲಿ ಫ್ಲೊವೊನಾಯ್ಡ್​ ಅಂಶಗಳು ಹೇರಳವಾಗಿವೆ. ಕೆಫೀನ್ ಅಂಶ ಕಡಿಮೆಯಿದೆ. ಇದು ದೇಹದ ಉರಿಯೂತವನ್ನು ಕಡಿಮೆ ಮಾಡುವುದಲ್ಲದೆ, ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ದಿನಕ್ಕೆ ಎರಡು ಅಥವಾ ಒಂದೇ ಬಾರಿ ಈ ಗ್ರೀನ್ ಟೀ‌ ಕುಡಿಯಬೇಕು. ನೆನಪಿರಲಿ. ರಾತ್ರಿ ಸಮಯದಲ್ಲಿ ಕುಡಿಯಬೇಡಿ. ನಿರಂತರವಾಗಿ ಇದರ ಬಳಕೆಯಿಂದ ನಿದ್ರಾಹೀನತೆ ಸಮಸ್ಯೆ ಬರಬಹುದು.
ಹಾಗಾಗಿ ಹಗಲಿನಲ್ಲಿ ಒಮ್ಮೆ ಕುಡಿದರೆ ಸಾಕು.




ಮನೆಯಲ್ಲಿ ಗ್ರೀನ್ ಟೀ ತಯಾರಿಸುವುದು ಹೇಗೆ: ಒಂದು ಲೋಟ‌ ನೀರಿನ್ನು ಕುದಿಯಲು ಬಿಡಿ. ನಂತರ ಕೂಡಲೇ ೧/೨ ಅರ್ಧ ಟೀ ಚಮಚ ಚಹಾಪುಡಿ ಹಾಕಿರಿ. ಕುದಿಸಬೇಡಿ. ಕೂಡಲೇ ಲಿಂಬೆ ರಸ ಹಿಂಡಿ ಕೆಳಗಿಳಿಸಿರಿ. ಒಂದು ಟೀ-ಚಮಚ ಜೇನು ತುಪ್ಪವನ್ನು ಹಾಕಿ ಕಲಸಿ. ಬಿಸಿಬಿಸಿಯಾಗಿ ಸೇವಿಸಿರಿ.

ಇದಕ್ಕೆ ಕೆಟ್ಟ ಕೊಬ್ಬು ಕರಗಿಸುವ ಶಕ್ತಿ ಇದೆ ಎಂದರೆ ಇದರಿಂದ ದೇಹಕ್ಕೆ ಉಷ್ಣವಾಗಬಹುದು. ಹಾಗಾಗಿ ನೆನಪಿರಲಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಕುಡಿಯಬಹುದು. ಹಾಗೆಯೇ ರಾತ್ರಿ ಕುಡಿಯಬಾರದು. ಗ್ರೀನ್ ಟೀ ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಲೇಖನ ::--  ಸಿಂಧು ಭಾರ್ಗವ್ ಬೆಂಗಳೂರು-೨೧