Tuesday 20 July 2021

Writer Sindhu Bhargav Autobiography ಆತ್ಮಕಥೆ

 Writer Sindhu Bhargav Autobiography 2021

ಮೂವತ್ತ ಮೂರು


ಮೂ - ಮೂರು ಸುತ್ತಿನ ಬದುಕಿದು

ವ - ವರುಷಗಳು ಉರುಳುವುದೇ ತಿಳಿಯದು

ತ್ತ - ತತ್ತರಿಸಿದಿರಿ ಕಷ್ಟನಷ್ಟ, ಅವಮಾನಗಳಿಗೆ

ಮೂ - ಮೂಖವೇದನೆ ಪಡದೆ ಸಹನೆಯಿಂದಿರಿ

ರು - ರುಮಾಲು ಧರಿಸಲು ಮುಂಬರುವರು, ಸಾಧನೆಯ ಹಾದಿ ನಿಮ್ಮದಾಗಿರಲು!!

(ರುಮಾಲು ಅಂದರೆ ಇಲ್ಲಿ ಪೇಟ.)

***

ತನ್ನ ಲೇಖನಗಳ ಮೂಲಕ ಓದುಗರ ಮನಗೆದ್ದ, ನೀತಿಕತೆಗಳ ಮೂಲಕ ಮಕ್ಕಳನ್ನೂ ರಂಜಿಸುವ ಅಪಾರ ಸ್ನೇಹಬಳಗವನ್ನು ಸಂಪಾದಿಸಿರುವ ಲೇಖಕಿ , ಸಂಪಾದಕಿ, ಉತ್ತಮ ಸಾಹಿತ್ಯ ಸಂಘಟಕರು ಹಾಗೆಯೇ ಸಾಹಿತ್ಯ ಲೋಕದಲ್ಲಿ  ಸಿಂಧು ಭಾರ್ಗವ್ ಎಂದೇ ಖ್ಯಾತರಾದ ಶ್ರೀಮತಿ ತುಳಸಿ ನವೀನ್ ಭಟ್, ಅವರ ಒಂದಷ್ಟು ಪರಿಚಯ ಮಾಡಿಕೊಳ್ಳೋಣ. ನಾನು ನಿಮ್ಮೆಲ್ಲರ ನೆಚ್ಚಿನ ಬರಹಗಾರ್ತಿ, ಶಿಕ್ಷಕಿ ಶ್ರೀಮತಿ ಚಂದ್ರಿಕಾ ರಾಘವೇಂದ್ರ ಬಾಯಿರಿ. 

ಇವರು ಕರಾವಳಿ ಭಾಗದ ಬಾರಕೂರಿನ ಹೇರಾಡಿ ಗ್ರಾಮದ ಚಂಡೆ ಎಂಬ ಪುಟ್ಟ ಹಳ್ಳಿಯಲ್ಲಿ ಶ್ರೀ ನರಸಿಂಹ ಭಟ್ ಚಂಡೆ ಹಾಗೂ ಶ್ರೀಮತಿ ವಸಂತಿ.ಎನ್ ಭಟ್ ಇವರ ಎರಡನೇ ಮುದ್ದಿನ ಮಗಳಾಗಿ ಅಗಸ್ಟ್ ಮಾಸದಲ್ಲಿ ಜನಿಸಿದರು. ಅದೇ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ನ್ಯಾಷನಲ್ ಜೂನಿಯರ್ ಕಾಲೇಜು ಬಾರಕೂರು ಇಲ್ಲಿ ಪ್ರೌಢಶಿಕ್ಷಣ ಹಾಗೂ ಕಾಲೇಜು ಶಿಕ್ಷಣವನ್ನು ಮುಗಿಸಿದರು. ನಂತರ ISRP ಕಡಿಯಾಳಿಯಲ್ಲಿ ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್ ಪದವಿ ಪಡೆದು ದೂರದ ಬೆಂಗಳೂರಿನ BHEL ನಲ್ಲಿ ಇಂಟರ್ನ್ಶಿಪ್ ಕೋರ್ಸ್ ಮಾಡಲು ಬಂದಿದ್ದರು. ‌ಆಗಲೇ ಉಡುಪಿಯ ನವೀನ್ ಭಟ್ ಎಂಬುವವರೊಂದಿಗೆ ಮದುವೆಯಾಯಿತು. ನಂತರದಲ್ಲಿ ಬೆಂಗಳೂರಿನಲ್ಲಿ ನೆಲೆಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಏನಾದರೂ ಸಾಧನೆ‌ಮಾಡಬೇಕೆಂಬ ತುಡಿತದಿಂದ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸಾಮಾನ್ಯ ಗೃಹಿಣಿಯಾದ ಇವರು ಮಕ್ಕಳನ್ನು ಸಾಕಿ ಸಲಹುವ ಜೊತೆಗೆ ಒಂದಷ್ಟು ಸಾಧನೆ ಮಾಡಲು ಹೇಗೆ ಸಾಧ್ಯವಾಯಿತು ಎಂದು ಅವರನ್ನೇ ಕೇಳೋಣ ಬನ್ನಿ.


ನಮಸ್ತೆ ಮೇಡಂ, 

* ಒಂದು ಕುತೂಹಲ ಭರಿತ ಪ್ರಶ್ನೆ. ನೀವು ಏಕೆ ಕಾವ್ಯನಾಮದಲ್ಲಿ ಸಂಪೂರ್ಣ ಹೆಸರನ್ನೇ ಬದಲಾಯಿಸಿದಿರಿ? ಇದಕ್ಕೆ ಏನಾದರು ಹಿನ್ನೆಲೆಯಿದೆಯೇ?


 ಕಾಲೇಜು ಜೀವನ ಮುಗಿಸಿ ಹೊರ ಪ್ರಪಂಚಕ್ಕೆ ಬಂದ ಮೇಲೆ ಸ್ನೇಹಿತರೊಬ್ಬರು ಪರಿಚಯವಾದರು. ಅವರಿಗೆ ತಾಯಿ ಇರಲಿಲ್ಲ. ಬಾಲ್ಯದಲ್ಲಿಯೇ ಹೆತ್ತವರ ಪ್ರೀತಿಯಿಂದ ವಂಚಿತರಾದವರು. ವಿಧಿ ಅದೆಷ್ಟು ಕ್ರೂರಿ ಎಂದು ಮನಸ್ಸಿಗೆ ತುಂಬಾ ನೋವಾಗಿತ್ತು. ಚಿಂತನೆ ನಡೆಸಲು ದಾರಿ ಮಾಡಿಕೊಟ್ಟಿತು. ಅವರ ತಾಯಿಯ ಹೆಸರು "ಸಿಂಧು". ಅದೇ ನೆನಪಿಗಾಗಿ ಅವರ ತಾಯಿಯ ಹೆಸರನಿಂದ ಬರೆಯಲು ಪ್ರಾರಂಭಿಸಿದೆ. ನಮ್ಮದು "ಭಾರ್ಗವ" ಗೋತ್ರ. ಹಾಗೆ ತುಳಸಿ ನವೀನ್ ಅವರು ಲೇಖಕಿ "ಸಿಂಧು ಭಾರ್ಗವ" ಆಗಿ ಬದಲಾಗಿದ್ದು.


* ನಿಮಗೆ ಕತೆ, ಕವಿತೆಗಳನ್ನು ಬರೆಯಲು ಪ್ರೇರಣೆ ನೀಡಿದ ಗುರುಗಳು ಯಾರು?

ಹಿರಿಯರು ಹೇಳಿದ ಗಾದೆ ಮಾತೊಂದಿದೆ. ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂದು. ನಾನು ಪುಸ್ತಕಗಳ ಓದಿದ್ದು ಕಡಿಮೆ. ಆದರೆ ಸ್ನೇಹಜೀವಿಯಾದ ನಾನು ದೇಶ ಅಲ್ಲದಿದ್ದರೂ ಊರೂರು ಸುತ್ತಿದ್ದೇನೆ. ಬಾಲ್ಯದಲ್ಲಿ ಅನೇಕ ಜಾತಿ, ಅನ್ಯಧರ್ಮದ ಜನರ ಮನೆಗೆ ಭೇಟಿ ಮಾಡಿದ್ದೆ. ಅವರ ಜೀವನ, ಬದುಕುವ ರೀತಿ,ಮನದಾಳದ ನೋವಿನ ಮಾತುಗಳು, ಕಷ್ಟ ನಷ್ಟಗಳು, ಕೆಲವರು ಕಡುಬಡವರು, ಕೆಲವರು ಶ್ರೀಮಂತರು. ಕೆಲವರು ವಿಕಲಾಂಗ ಚೇತನರು, ಬದುಕಿಗಾಗಿ ಹೋರಾಡುವ ಒಂಟಿ ಮಹಿಳೆ, ಒಬ್ಬಿಬ್ಬರಲ್ಲ... ಈ ಪ್ರಪಂಚದಲ್ಲಿ ಎಲ್ಲರೂ ಬದುಕಬೇಕಾಗಿದೆ. ನಮ್ಮ ತಾಯಿಯ ಮೌಲ್ಯಾಧಾರಿತ ಹಿತನುಡಿಗಳು, ತಂದೆಯ ಕಷ್ಟದ ಜೀವನ ಹೀಗೆ ಇವರೆಲ್ಲರು ತುಂಬಾ ಪ್ರಭಾವ ಬೀರಿದರು. ಅದೇ ನನ್ನನ್ನು ಸರಳವಾಗಿ ಬದುಕಲು ಪ್ರೇರೇಪಿಸಿತು. ಬರವಣಿಗೆಯ ಮೂಲಕ್ಕೆ ನಾಂದಿಯಾಯಿತು. ವಿದ್ಯಾರ್ಥಿ ಜೀವನದಲ್ಲಿ ಚುಟುಕು ಬರೆಯುತ್ತಿದ್ದೆ. ಹಾಗೆಯೇ ಸಾಹಿತ್ಯ ಲೋಕದಲ್ಲಿ ಬರೆಯಲು  ಆರಂಭಿಸಿದ್ದು 2011 ಅಕ್ಟೋಬರ್ ತಿಂಗಳಲ್ಲಿ. ನನ್ನ ಮುಖಪುಟದ ಗೆಳೆಯ ಪ್ರಸಾದ್ ಮೈಸೂರು ತುಂಬಾ ಪ್ರಭಾವ ಬೀರಿದ್ದ. ಅವನು ಕವಿತೆ ಬರೆಯುವ ಶೈಲಿ ಅಚ್ಚರಿ ಮೂಡಿಸುತಿತ್ತು. ಅವನಿಂದಲೇ ಕವಿತೆ ಬರೆಯಲು ಶುರುಮಾಡಿದೆ. ಪ್ರಥಮದಲ್ಲಿ ಗದ್ಯರೂಪದಲ್ಲಿ ಬರೆಯುವಾಗ ಶ್ರೀ. ಕೃಷ್ಣ ಪ್ರಸಾದ್ ರವರು ಲಯಬದ್ಧವಾಗಿ ಬರೆಯಲು ತಿಳಿಸಿಕೊಟ್ಟರು‌. ಒಂದು ರಾಗ ಹಾಕಿ, ಪ್ರಾಸಭರಿತವಾಗಿ ಬರೆಯಬೇಕು ಎಂದು ಹೇಳಿದರು. ಹಾಗೆಯೇ ನನ್ನ ಕವಿತೆಯಲ್ಲಿ ಬದಲಾವಣೆ ಮಾಡಿಕೊಂಡು ಬರೆಯತೊಡಗಿದೆ. ಸರಿಸುಮಾರು ಹತ್ತು ವರ್ಷಗಳ ಬರಹಲೋಕದ ಪ್ರಯಾಣ. ಇಲ್ಲಿಯ ತನಕ ಬರೆಯುತ್ತಲೇ ಇರುವೆ. ಇದಕ್ಕೆಲ್ಲ ಪತ್ರಿಕೆಯ ಸಂಪಾದಕರು, ಹಿರಿಯರು, ಸ್ನೇಹಿತರ ಸಹಕಾರ ಕಾರಣವಾಗಿದೆ. 

* ನಿಮ್ಮ ಬರಹಗಳು ಎಲ್ಲಿಯಾದರೂ ಪ್ರಕಟಗೊಂಡಿವೆಯೇ?

ನನ್ನ ಬರಹಗಳು ಅಂದರೆ ವೈಚಾರಿಕ ಲೇಖನ , ಕತೆ ಪ್ರಪ್ರಥಮ ಬಾರಿಗೆ ಯುಗಪುರುಷ ಕಿನ್ನಿಗೋಳಿ, ಮಾಸಪತ್ರಿಕೆಯಲ್ಲಿ ೨೦೧೩ ನೇ ಇಸವಿಯಲ್ಲಿ ಪ್ರಕಟವಾಗಿತ್ತು. ಹೊಸ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಅಲ್ಲಿನ ಸಂಪಾದಕರ ಗುಣ ಶ್ಲಾಘನೀಯ. ತದನಂತರ ವಿಜಯ ಕರ್ನಾಟಕ, ಕರ್ಮವೀರ, ವಾರ್ತಾಭಾರತಿ, ನಿಮ್ಮೆಲ್ಲರ ಮಾನಸ, ಹರ್ಷವಾಣಿ, ಯುಗಪುರುಷ ಕಿನ್ನಿಗೋಳಿ, ಅನುಪಮ ಮಹಿಳಾ ಮಾಸಿಕ, ಪಂಜು ಪತ್ರಿಕೆ, ಸಂಗಾತಿ, ಇಸ್ಸನಿ,ನುಡಿಜೇನು ಕಾರವಾರ, ಕಡಲವಾಣಿ ಕಾರವಾರ, ಜನಮಿಡಿತ ದಾವಣಗೆರೆ, ಪ್ರತಿನಿಧಿದಿನಪತ್ರಿಕೆ ಹಾಸನ,  ಮಿಡಿತ ತ್ರೈಮಾಸಿಕ, ಸ್ತ್ರೀ ಜಾಗೃತಿ ಮಹಿಳಾ‌ ಮಾಸಿಮ, ಸಂಗಾತಿ, ವಿಶ್ವವಾಣಿ ದಿನಪತ್ರಿಕೆ, ಸಿಡಿದೆದ್ದ ಸಿಂಹ ಕೊಪ್ಪಳ, ಆಲದ ನೆರಳು ಅಂತರ್ಜಾಲ ಪಾಕ್ಷಿಕದಲ್ಲಿ ಹೀಗೆ ಜಿಲ್ಲಾಮಟ್ಟದ ಹಾಗು ರಾಜ್ಯಮಟ್ಟದ ಹತ್ತಾರು ಮಾಸಪತ್ರಿಕೆಗಳಲ್ಲಿ, ದಿನಪತ್ರಿಕೆಯಲ್ಲಿ, ಅಂತರ್ಜಾಲ ಪಾಕ್ಷಿಕ, ದ್ವೈಮಾಸಿಕ, ತ್ರೈಮಾಸಿಕ ಪತ್ರಿಕೆಗಳಲ್ಲಿಯೂ ಕೂಡ ಕವಿತೆ-ಲೇಖನ-ಕಥೆಗಳು-ಮಕ್ಕಳ ಕತೆಗಳು ಪ್ರಕಟಗೊಳ್ಳುತ್ತಲಿವೆ. 

ನನ್ನದೇ ಸಾಹಿತ್ಯದಲ್ಲಿ ಎರಡು ಭಾವಗೀತೆಗಳ ಹಾಡುಗಳು ಬಿಡುಗಡೆಯಾಗಿವೆ. 

ಮಕ್ಕಳ ಸಾಹಿತ್ಯ ಹಾಗೂ ಜನಪದ ಸಾಹಿತ್ಯಗಳು ಮೂಲೆಗುಂಪಾಗಿರುವ ಈ ಸಮಯದಲ್ಲಿ ಅವುಗಳನ್ನು ಮುಖ್ಯ ವೇದಿಕೆಗೆ ತರುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಮಕ್ಕಳ ಸಾಹಿತ್ಯವನ್ನು ಬರೆಯುತ್ತಿದ್ದೇನೆ. ಮಕ್ಕಳ ಸಾಹಿತ್ಯದ ಬಗ್ಗೆ ಸಂಶೋಧನಾ ಲೇಖನವನ್ನು ಬರೆದಿರುವೆನು. 

ಹಾಗೆಯೇ ಸರಿಸುಮಾರು ೨೩+ ಸಂಪಾದಕತ್ವ ಕೃತಿಗಳಲ್ಲಿ ನಾನು ಬರೆದ ಬರಹಗಳು ಪ್ರಕಟವಾಗಿದೆ. 

📚 ಫೇಸ್ ಬುಕ್ಕಾದಾಗ (೨೦೧೩) ಕತೆಕವನಗಳ ಸಂಕಲನ

📚 

📚 

📚 

📚 

ನಮ್ಮದೇ ಸಂಪಾದಕತ್ವದಲ್ಲಿ ನಾಲ್ಕು ಕೃತಿಗಳು ಬಿಡುಗಡೆಯಾಗಿವೆ. 

🌹ಪ್ರೊ. ಮುರುಳೀಧರ್ ಕೆ. ಎಸ್. ಹಾಗೂ

🌹ತುಳಸಿ ಭಟ್ ( ಸಿಂಧು ಭಾರ್ಗವ್ ) ಅವರ ಸಂಪಾದಕತ್ವದಡಿಯಲ್ಲಿ ನಾಲ್ಕು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.

📌  ಬೆಟ್ಟದ ಹಾದಿಯಲ್ಲಿ (ಕಥಾ ಸಂಕಲನ ೨೦೨೦) ಬೆಳಕು ಪ್ರಕಾಶನ ಬೆಂಗಳೂರು

📌  ನವಿಲ ಹೆಜ್ಜೆ (ಕವನ ಸಂಕಲನ ೨೦೨೦) ಬೆಳಕು ಪ್ರಕಾಶನ

📌  ಕೌಸ್ತುಭ (ವೈಚಾರಿಕ ಲೇಖನಗಳು ೨೦೨೦)  ಬೆಳಕು ಪ್ರಕಾಶನ ಬೆಂಗಳೂರು

📌  ಕೂಸುಮರಿ ( ಮಕ್ಕಳ ಸಾಹಿತ್ಯ ೨೦೨೧) (HSRA ಪ್ರಕಾಶನ, ಬೆಂಗಳೂರು)


ಈಗ ನಮ್ಮದೇ ಆದ  "ಆಲದ ನೆರಳು- ಅಂತರ್ಜಾಲ ಪಾಕ್ಷಿಕ"ದ ಸಂಪಾದಕಿಯಾಗಿರುವೆನು. 


*ನಿಮಗೆ ಸಂದ ಪ್ರಶಸ್ತಿಗಳು ಯಾವುವು?

🚩 ವಿವಿಧ  ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವವರ ಗುರುತಿಸಿ ೨೦೧೯ರ ಯುಗಾದಿ ಹೊಸ ವರುಷದ ಅಂಗವಾಗಿ "ಕನ್ನಡ ಸೇವಾರತ್ನ ಪ್ರಶಸ್ತಿ"ಯನ್ನು "ಪತ್ರಿಕಾ ಲೇಖಕರ ವಿಭಾಗದಲ್ಲಿ" ಬೆಂಗಳೂರು ನಗರಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ ಇವರು ನೀಡಿ ಗೌರವಿಸಿದ್ದಾರೆ.

🚩 ೨೦೧೯ ರಲ್ಲಿ ಮೈಸೂರಿನ ಅಭಿರುಚಿ ಬಳಗದಿಂದ "ಅಭಿರುಚಿ ಸಾಧನಾ ಶ್ರೀ" ಪ್ರಶಸ್ತಿ ಕೂಡ ದೊರಕಿದೆ.

🚩 64ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ೨೦೧೯ ರಲ್ಲಿ "ಕನ್ನಡ ಕವಿವಾಣಿ ಪತ್ರಿಕೆ- ಚಿಂತಾಮಣಿ" ಇವರ ವತಿಯಿಂದ "ಕಾವ್ಯಸಿರಿ ಪ್ರಶಸ್ತಿ" ಲಭಿಸಿದೆ.

🚩 ಭೂಮಿ ಪ್ರತಿಷ್ಠಾನ, ಧಾರವಾಡ ಇದರ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ "ಭೂಮಿ ಕಾವ್ಯ ಪುರಸ್ಕಾರ"ಕ್ಕೆ ೨೦೧೯ ರಲ್ಲಿ ಭಾಜನವಾಗಿದೆ. 

🚩 ನವಪರ್ವ ಫೌಂಡೇಶನ್ (ರಿ.) ಬೆಂಗಳೂರು ಇದರ ವತಿಯಿಂದ ಸತತ ಎರಡು ಬಾರಿ " ನವಪರ್ವ ನಕ್ಷತ್ರ ಪ್ರಶಸ್ತಿ " ನೀಡಿ ಗೌರವಿಸಲಾಗಿದೆ.

🚩 ಭೂಮಿ ಪ್ರತಿಷ್ಠಾನ ಧಾರವಾಡ, "ಪುನರ್ನವ ಸಂಶೋಧನಾ ಕೃತಿ ಭಾಗ ೧& ಭಾಗ‌ ೨ ರಲ್ಲಿ" - ನಾನು ಬರೆದ "ಕೋಟ‌ ಶಿವರಾಮ ಕಾರಂತರ ಕಾದಂಬರಿಗಳು:ಜೀವನಕ್ಕೆ ಹಿಡಿದ ಕೈಗನ್ನಡಿ" ಲೇಖನವು ಪ್ರಕಟವಾಗಿದೆ.

ಸಾಹಿತ್ಯಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಲಭಿಸಿದೆ. 

* ಪ್ರಸ್ತುತ ನಿಮ್ಮ ಸಾಹಿತ್ಯ ಚಟುವಟಿಕೆ ಬಗ್ಗೆ ತಿಳಿಸಿರಿ.

ನಾನು ಕಳೆದ ಎರಡು ವರ್ಷಗಳ ಕಾಲ ನವಪರ್ವ ಫೌಂಡೇಶನ್ (ರಿ.) ಬೆಂಗಳೂರು ಇದರ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದೆ. ಆ ಸುಸಂದರ್ಭದಲ್ಲಿ

🌹ಪ್ರೊ. ಮುರುಳೀಧರ್ ಕೆ. ಎಸ್.
🌹ತುಳಸಿ ಭಟ್ ( ಸಿಂಧು ಭಾರ್ಗವ್ ) ಅವರ ಸಂಪಾದಕತ್ವದಡಿಯಲ್ಲಿ ನಾಲ್ಕು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
📚✍️📚✍️📚✍️📚✍️📚✍️📚✍️📚

📌 ಬೆಟ್ಟದ ಹಾದಿಯಲ್ಲಿ (ಕಥಾ ಸಂಕಲನ)

📌 ನವಿಲ ಹೆಜ್ಜೆ (ಕವನ ಸಂಕಲನ)

📌 ಕೌಸ್ತುಭ (ವೈಚಾರಿಕ ಲೇಖನಗಳು) 

📌 ಕೂಸುಮರಿ (ಮಕ್ಕಳ ಸಾಹಿತ್ಯ)


ನಮ್ಮ‌ಕೆಲಸವನ್ನು ಗುರುತಿಸಿ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ಸೇರಿ ನವಪರ್ವ ನಕ್ಷತ್ರ ಎಂಬ ಪ್ರಶಸ್ತಿ ನೀಡಿ ಗೌರವಿಸಿದ್ದರು. ನಂತರ ರಾಜಿನಾಮೆ ನೀಡಿ ಹಿರಿಯರ ಸಹಕಾರ, ಮಾರ್ಗದರ್ಶನದ ಮೇರೆಗೆ ನಮ್ಮದೇ ಆದ ಹೊಸ "ಬತ್ತದ ತೊರೆ ಸ್ನೇಹ ಬಳಗ" ಸಾಹಿತ್ಯ ತಂಡ ರಚಿಸಿದೆವು‌. ಹರಿನರಸಿಂಹ ಉಪಾಧ್ಯಾಯ, ಹಾಗೂ  ಚಂದ್ರಿಕಾ ಆರ್ ಬಾಯಿರಿ ಅವರು ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


* ನೀವು ಒಬ್ಬ ಉತ್ತಮ ಸಂಘಟನಾಕಾರರು ಎಂದು ಕೇಳ್ಪಟ್ಟೆ. ಅದು ಹೇಗೆ ಸಾಧ್ಯವಾಯಿತು?

ನಾವು ಕರುನಾಡಿನಲ್ಲಿ ಜನಿಸಿರುವುದೇ ಪುಣ್ಯ. ಕನ್ನಡದವರಾಗಿಕ ನ್ನಡಮ್ಮನ ಸೇವೆ ಮಾಡುವ ಮನೋಭಾವ ಎಲ್ಲರಿಗೂ ಇರಬೇಕು. ಕನ್ನಡ ಭಾಷೆ ಉಳಿಸಿ ಎಂದು ಬೊಬ್ಬಿಡುವ ಬದಲು ನಿಮ್ಮದೇ ಹಾದಿಯನ್ನು ಹಿಡಿದು ಆ ಪ್ರಕ್ರಿಯೆಯಲ್ಲಿ ನಡೆಯಬೇಕು. ಇದಕ್ಕೆ ಕನ್ನಡ ಸಾಹಿತ್ಯ ಸ್ವಲ್ಪ ಹತ್ತಿರವಿರುವ ವಿಧಾನ. ಹೊಸ ಹೊಸ ಬರಹಗಾರರನ್ನು ಗುರುತಿಸುವುದು, ಬರೆಯಲು ಪ್ರೋತ್ಸಾಹ ನೀಡುವುದು, ಸ್ಪರ್ಧೆ, ಕವಿಗೋಷ್ಠಿ ನಡೆಸಿ ಬಹುಮಾನ ನೀಡಿ ಗೌರವಿಸುವ ಕೆಲಸ ನಮ್ಮ ಬತ್ತದ ತೊರೆ ಸ್ನೇಹ ಬಳಗದಿಂದ ನಡೆಯುತ್ತಿದೆ. ಹಾಗೆಯೇ ಶಾಲಾಮಕ್ಕಳಲ್ಲಿ ಕನ್ನಡಸಾಹಿತ್ಯ, ಬರವಣಿಗೆಯಲ್ಲಿ ಅಭಿರುಚಿ ಮೂಡಿಸಲು ಪ್ರಯತ್ನ ನಡೆಯುತ್ತಿದೆ.


*ನೀವು ಇಷ್ಟೊಂದು ಸೊಗಸಾಗಿ ಮಕ್ಕಳ ಕತೆಯನ್ನು  ಬರೆಯಲು ಪ್ರೇರಣೆ ಏನು?!

 ನನ್ನ ಮಕ್ಕಳೇ ಪ್ರೇರಣೆ. ಅವರಿಗೆ ಪ್ರತಿ ರಾತ್ರಿ ಮಲಗುವಾಗ ಒಂದೊಂದು ಕತೆಯನ್ನು ಹೇಳುತ್ತೇನೆ. ಆಗ ಪ್ರಶ್ನೆಗಳನ್ನು ಕೇಳಿದರೆ ಅದಕ್ಕೆ ಉತ್ತರಿಸುತ್ತೇನೆ. ನಂತರ ಅದನ್ನೇ ವಿಸ್ತಾರವಾಗಿ ಕತೆಯನ್ನಾಗಿಸುತ್ತೇನೆ. ಪ್ರಥಮ ಪ್ರಯೋಗ ನನ್ನ ಮಕ್ಕಳ ಮೇಲೆಯೇ. (ನಗು) ಅವರಿಗೆ ಮೆಚ್ಚುಗೆಯಾದರೆ ನನಗೂ ಬರೆದುದಕ್ಕೆ ಖುಷಿಯಾಗುತ್ತದೆ.


* ನಿಮ್ಮ ಮುಂದಿನ ಯೋಜನೆಗಳೇನು?

ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಕತೆ, ಲೇಖನ, ಕವಿತೆಗಳು, ಹನಿಗವನ, ಉಲ್ಲೇಖಗಳು, ಮಕ್ಕಳ ನೀತಿ ಕತೆ ಹಾಗೂ ಮಕ್ಕಳ ಪದ್ಯಗಳು ಬರೆದದ್ದು ಇದೆ. ಅದನ್ನು ಪುಸ್ತಕ ರೂಪದಲ್ಲಿ ಹೊರತರಬೇಕು. ಭಾವಗೀತೆಗಳ ಧ್ವನಿಮುದ್ರಣ ತರಬೇಕು. ಸಂಪಾದಕತ್ವ ಕೃತಿ ಬಿಡುಗಡೆ ಮಾಡುವುದು.