Tuesday 4 August 2020

ಕಲಿಯುಗದ ಕಾಮಧೇನು ಮಂತ್ರಾಲಯ ಗುರುರಾಯರ ಆರಾಧನೆ

ಕಲಿಯುಗದ ಕಾಮಧೇನು ಮಂತ್ರಾಲಯ ಗುರುರಾಯರ ಆರಾಧನೆ :

ಮಂತ್ರಾಲಯ source image

Source images
ರಾಮಮಂದಿರ source image
Source images... 

ಅಜ್ಞಾನವೆಂಬ ಕತ್ತಲೆಯಿಂದ ಕುರುಡಾದ ಈ ಜಗತ್ತನ್ನು ಜ್ಞಾನವೆಂಬ ದೀಪಜ್ವಾಲೆಯಿಂದ ತೆರೆಸಿದ ಗುರುವೆಂಬ ಮಹಾನ್ ಶಕ್ತಿಗೆ ನಮಸ್ಕಾರಗಳು🙏

ಇಂದಿನಿಂದ ಮೂರು ದಿನಗಳ ಕಾಲ ರಾಯರ ಆರಾಧನೆ ನಡೆಯಲಿದೆ. ಇಂದು ರಾಯರ ಪೂರ್ವಾರಾಧನೆ.‌ ಈ ಬಾರಿ ೩೪೯ನೆಯ  ಆರಾಧನಾ ಮಹೋತ್ಸವ ಹಾಗೂ ಸಪ್ತರಾತ್ರೋತ್ಸವ ಕಾರ್ಯಕ್ರಮಗಳು ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ಸರಳವಾಗಿ ಆರಂಭವಾಗಿವೆ. ಕರೋನಾ ಹಾವಳಿಯಿಂದ ಭಕ್ತಾದಿಗಳು ಮಂತ್ರಾಲಯಕ್ಕೆ ಹೋಗುವ ಸೌಭಾಗ್ಯದಿಂದ ವಂಚಿತರಾಗಿದ್ದಾರೆ. ಆಂಧ್ರ ಸರ್ಕಾರವು ಭಕ್ತಾದಿಗಳಿಗೆ ಪ್ರವೇಶಕ್ಕೆ ನಿಷೇಧ ಹೇರಿದೆ. ಆದರೂ ನೆನದಲ್ಲಿ ಬರುವ, ಮನದಲ್ಲೇ‌ ನೆಲೆಸಿರುವ ನಮ್ಮ ರಾಯರ ಆರಾಧನೆಗೆ ಭಕ್ತಿ ಶ್ರದ್ಧೆಯೇ ಈ ಬಾರಿ ಪ್ರಮುಖವಾಗುವುದು.‌

ಈ ವಿಶೇಷ ಸಂಧರ್ಭದಲ್ಲಿ ಶ್ರೀರಾಘವೇಂದ್ರ ಸ್ವಾಮೀಜಿ ಮೂಲ ಬೃಂದಾವನಕ್ಕೆ ಮಹಾ ಅಭಿಷೇಕ ಹಾಗೂ ವಿಶೇಷ ಅಲಂಕಾರ ಮಾಡಲಾಗುವುದು.‌ ಮಠದ ಪ್ರಾಕಾರದಲ್ಲಿ ದವಸ ಧಾನ್ಯ ಪೂಜೆ ನೆರವೇರಿಸಲಾಗುವುದು. ಶ್ರೀಮೂಲರಾಮದೇವರ ಪೂಜೆ ಹಾಗೂ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆಯನ್ನು ಶ್ರೀಸುಬುಧೇಂದ್ರ ತೀರ್ಥರು ನೆರವೇರಿಸುವರು. ಪಂಚಾಮೃತ ಅಭಿಷೇಕ, ಪರಿಮಳ‌ ಪ್ರಸಾದ ಹಂಚಲಾಗುವುದು.‌ ನಾಳೆಯ ದಿನ ಸುದಿನ. ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ಕೈಂಕರ್ಯ ನಡೆಯಲಿದೆ. ಐತಿಹಾಸಿಕ ವಿಸ್ಮಯಕ್ಕೆ ಕ್ಷಣಗಣನೆ ಶುರುವಾಗಿದೆ. ಎಲ್ಲಲ್ಲೂ ಜೈ ಶ್ರೀರಾಮ ಘೋಷವಾಕ್ಯಗಳು ಮೊಳಗಿವೆ. ದೀಪಾವಳಿ ತರಹದಲ್ಲೇ ಅಯೋಧ್ಯೆಯ ಸರಯೂ ನದಿ ತಟದಲ್ಲಿ ದೀಪೋತ್ಸವ ನಡೆಯುತ್ತಿದೆ.. ಪ್ರಧಾನ ಮಂತ್ರಿಗಳು, ಉತ್ತರ ಪ್ರದೇಶದ ಮು.ಮಂ ಯೋಗಿ ಆದಿತ್ಯನಾಥ್ ಅವರು ಸೇರಿದಂತೆ ಅನೇಕಾ ಗಣ್ಯಾತಿಗಣ್ಯರು, ಸಾಧುಸಂತರು ಭಾಗಿಯಾಗುವರು.

ಶ್ರೀರಾಮ ಸ್ತೋತ್ರ

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇದಸೆ
ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ

ರಾಯರ ಅನುಗ್ರಹ ಎಲ್ಲ ಭಕ್ತಾದಿಗಳ‌ ಮೇಲಿರಲಿ. ಸರಳ ಸ್ತೋತ್ರವನ್ನು ಎಲ್ಲರೂ ಪಠಿಸಿರಿ.

ಪೂಜ್ಯಾಯ ರಾಘವೇಂದ್ರಾಯ
ಸತ್ಯಧರ್ಮರತಾಯ ಚ |
ಭಜತಾಂ ಕಲ್ಪವೃಕ್ಷಾಯ
ನಮತಾಂ ಕಾಮಧೇನುವೇ ||
ಸತ್ಯ ಮತ್ತು ಧಾರ್ಮಿಕ ಮಾರ್ಗದಲ್ಲಿ ಸದಾ‌ ನಿರತರಾದ,‌ಕಷ್ಟ ಎಂದು ನೆನೆದವರಿಗೆ ಕಲ್ಪವೃಕ್ಷ, ಕಾಮಧೇನುವಿನಂತೆ  ಬೇಡಿದ್ದನ್ನು ನೀಡುವ ಪೂಜ್ಯರಾದ ಶ್ರೀ ರಾಘವೇಂದ್ರ ಗುರುಗಳಿಗೆ ನಮಸ್ಕಾರಗಳು🙏

- ಸಿಂಧು ಭಾರ್ಗವ್ | ಬೆಂಗಳೂರು-೨೧