Thursday 28 July 2016

ನಮ್ಮ ನಡುವೆ ಇರುವ ಅವರು (ನಮ್ಮವರು)

ಅವನು ನಮ್ಮವನಲ್ಲ ,
ಆದರೆ ಕೆಟ್ಟವನಲ್ಲ..

ಧರಿಸುವ ಧಿರಿಸು ಬಿಳಿ,
ಮನಸ್ಸಂತೂ ತುಂಬಾ ತಿಳಿ..

ದಯೆ ಕರುಣೆಯ ಮೂರ್ತಿ ,
ಶಾಂತಿ ಸಾರುತಿರುವ ಕೀರ್ತಿ..

ಶುಕ್ರವಾರ ನಮಾಜಿಗೆ,
ಲಕ್ಷ್ಮಿ ಯ ಪೂಜೆ ನಮಗೆ.

ಸಮೂಹದಲಿ, ಅವನ ಇಷ್ಟ ಪಡದವರಿಲ್ಲ ..
ನಮ್ಮವರಿಗೆ ಅವನ ಕಂಡರಾಗುವುದಿಲ್ಲ..

ಸ್ನೇಹ ಪ್ರೀತಿಗೆ ಜೀವಕೊಡುವ,
ನಾನಿದ್ದೇನೆ ಎಂಬ ಧೈರ್ಯ ನೀಡುವ..

ಅವನು ಈ ಗಾಳಿ,ನೀರನ್ನೇ ಕುಡಿಯುವುದು ,
ನಾವೂ ಅದನ್ನೆ  ತಾನೆ ನಂಬಿರುವುದು ..

ಪ್ರಕೃತಿಗೆ ಅವನೊಂದಿಗೆ ಬೇಧವಿಲ್ಲ
ಸಮಾಜಕ್ಕೆ ನಮ್ಮವನೆನ್ನಲು ಸಮ್ಮತವಿಲ್ಲ...
**
ಯಾರು ದೂರಿದರೂ, ದೂರವಿರಿಸಿದರೂ
ಮಾನವೀಯತೆಗೆ, ಸ್ನೇಹಸೌಹಾರ್ಧಕ್ಕೆ ಬೆಲೆ ಎಂದಿಗೂ ಇದ್ದೇ ಇದೆ.
ಅಗತ್ಯ ಬೇಕಾದಾಗ ಯಾರ ರಕ್ತ ಯಾರ ಜೀವ ಸೇರುವುದೋ ಯಾರಿಗೆ ಗೊತ್ತು..?!
ಯಾರ ತೋಟದ ಹೂವು ಯಾರ ದೇವರ ಪಟ ಸೇರುವುದೋ ಯಾರಿಗೆ ಗೊತ್ತು..!? ನಮ್ಮ ಮನೆಯಲಿ ಸುಪ್ರಭಾತ ಮೊಳಗುವ ಮೊದಲೇ ದರ್ಗಾದಲ್ಲಿ ಅಲ್ಲಹು ಅಕ್ಬರ್ ಎಂಬ ಘೋಷ ಕೇಳುತ್ತಿರುತ್ತದೆ. ಪಕ್ಕದ ಮನೆಯ ಕೋಳಿಕೂಡ ಅಂಗಳಕ್ಕೆ ಬರಲು ಬಿಡದವರು ನಮ್ಮವರು. ವ್ಯಾಪಾರ ವ್ಯವಹಾರದಲ್ಲಿ ನಿಪುಣರಾದ ಕಾರಣ ಅವರಲ್ಲೇ ಹೋಗಿ ಚರ್ಚಿಸಿಯಾದರೂ ತೆಗೆದುಕೊಂಡು ಬರುವರು. ಅವರಿಗೇ ಬೈಯುವರು. ನಮ್ಮವರು ಸ್ವಾರ್ಥಿಗಳು. ಜಗಳ ತಂದು ಇಡುವವರು, ಬೇಳೆಬೇಯಿಸಿಕೊಳ್ಳುವವರು, ಉಪಯೋಗಿಸಿ ಬಿಸಾಕುವವರು, ಹೊಟ್ಟೆಕಿಚ್ಚು ಎಲ್ಲವೂ ತುಂಬಿಸಿಕೊಣ್ಡಿರುವವರು.
**
ಜಗಳ , ಕಲಹ ಯಾಕಾಗಿ ?! ಎಲ್ಲೋ ಮುಸುಕುಧಾರಿಗಳು ಗಡ್ಡಧಾರಿಗಳು, ರಕ್ತಪಾತ ನಡೆಸಿದಾಗ ಉಂಟಾಗುವ ಭಯ,
#ನಮ್ಮವರ ( ನಮ್ಮ ನಡುವೆ ಇರುವ #ಅವರ) ಮೇಲೆ ಪಡುವ ಅನುಮಾನ, ಹತ್ತಿರವಿದ್ದವರಿಗೆ ನಾವು ಮಾಡುವ ಅವಮಾನ, ನಾವು ಅಂತವರಲ್ಲ ಎನ್ನುವ ಅವರುಗಳ ಸಮರ್ಥನಾ ನುಡಿಗಳು,
ತಲೆಮಾರಿನಿಂದ  ಅವರಬಗೆಗೆ ಮೂಡಿರುವ
ಕಪ್ಪುಚುಕ್ಕೆಯ ನಾವು ಅಳಿಸಿ ಹಾಕದಿದ್ದರೆ , ಅವರೆಲ್ಲರೂ ನಮ‌್ಮ ಸ್ನೇಹಿತರು ಎಲ್ಲರೂ ಕೆಟ್ಟವರಲ್ಲ, ಅಂತಹ ಕೆಟ್ಟ ರಕ್ತಹೀರುವ ಹುಳುಗಳಿಗೆ ಅವರಲ್ಲೂ ಜಾಗವಿಲ್ಲ ,  ಅಲ್ಲಾಹುವಿನಲ್ಲೂ ಕ್ಷಮೆಯಿಲ್ಲ ಎಂದು ನಾವು ನಮ್ಮ‌ಮಕ್ಕಳಿಗೆ ತಿಳಿಹೇಳದಿದ್ದರೆ , ನಾವು ಸತ್ತಮೇಲೆ
ನಮ್ಮ‌ಮಕ್ಕಳ ಕಾಲಕ್ಕೂ ಅದು ಮುಂದುವರಿಯುತ್ತದೆ...

#ಇನ್ನಾದರೂಸಾಕುನಿಲ್ಲಿಸಿ.

ನನ್ನ ತಂದೆ ಒಬ್ಬ ಕಲೆಗಾರ

ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ ಎನ್ನುವರು. ನಿಜ ಕೂಡ.‌
ಆದರೆ ನನಗೆ ತಂದೆಯೇ
@)(
ಕೈಹಿಡಿದು ಸ್ಲೇಟಿನಲ್ಲಿ #ಅ , #ಆ ಬರೆಸಿದವರು.
@)(
ಸಿಟ್ಟು ಸಿಡುಕು ಕ್ಷಣದಲ್ಲಿ ಕರಗಿಸಿ ಪ್ರೀತಿಯ ನಗೆ ಬೀರುತ್ತಿದ್ದರು. ಕೊಳಕು , ಹಗೆ ಇಲ್ಲದ ಪರಿಶುದ್ಧ ಮಗುವಿನ ಮನಸ್ಸು.
@)(
ತೊಡುವ ಬಟ್ಟೆಯಾಗಲಿ, ನಡೆಯುವ ರೀತಿಯಾಗಲಿ ಹೇಗೆ ಇರಬೇಕು, ಎಂದು‌ ಕಲಿಸಿ‌ಕೊಡುತ್ತಿದ್ದರು. ( ಅವರಿಗೆ ಉದ್ದಲಂಗ ,ಎರಡು ಜಡೆ ಅಂದರೆ ಇಷ್ಟ.)
@)(
ಕೃಷಿಯಲ್ಲಿ , ಹೈನುಗಾರಿಕೆಯಲ್ಲಿ ಆಸಕ್ತಿ ಬರಲು ಅವರೇ ಕಾರಣ. ರೈತರ ಕಷ್ಟ, ಸಾಲ, ಕೃಷಿಯಿಂದ ನಮಗಾಗುವ  ಲಾಭ, ನಷ್ಟ, ವ್ಯವಹಾರಿಕವಾಗಿ ಮೋಸಹೋಗುವುದು  ಹೀಗೆ.
@)(
ಸ್ವಂತ ಉದ್ಯೋಗ ಮಾಡುವಾಗ ಏನೆಲ್ಲ ಸಮಸ್ಯೆ ಬರುತ್ತದೆ, ಬೆನ್ನಿಗೆ ಚೂರಿ ಹಾಕುವವರು, ಹಿತಶತ್ರುಗಳು, ಹೊಗಳುವವರು, ತೆಗಳುವವರು ಏಳ್ಗೆ ನೋಡಲಾಗದೆ ಕರುಬುವವರು ಹೀಗೆ ಅವರ ಜೊತೆ ೮-೧೦ ವರುಷ ರೈಟ್ ಹ್ಯಾಂಡ್ ಆಗಿ ಕೆಲಸಮಾಡಿದ ಅನುಭವವಿದೆ. ನನಗೆ ಅದು ಸಹಾಯಕ್ಕೆ ಬರದಿದ್ದರೂ, ನನ್ನ ಮಿತ್ರರಿಗೆ ಹೇಳಲು ಸಹಾಯವಾಗುತ್ತದೆ.
@)(
ಗಂಡ ಆದವನು ( ಹೆಂಡತಿಯ ) ತಾಯಿಯ ಪ್ರೀತಿಸಿದರೆ ಮಕ್ಕಳು ತಂದೆಯನ್ನು ಪ್ರೀತಿಸುತ್ತಾರೆ ಎನ್ನುವುದು ಸೂಕ್ಷ್ಮ ದಲ್ಲಿ ತಿಳಿಸಿದವರು.
@)(
ಇನ್ನೂ ವಿಷೇಶವೆಂದರೆ ಅಡುಗೆಮನೆಯಲ್ಲಿ ಆಸಕ್ತಿ ಬರಲು ಅವರೇ ಕಾರಣ, ಹೇಗೆ ಮಾಡಬೇಕು ಏನು ಮಾಡಬೇಕು ಎಂದು ದೂರದಲ್ಲೇ ಕೂತು ಹೇಳುವವರು, ನಾವು ಹಾಗೆ ಮಾಡುತ್ತಿದ್ದೆವು. ರುಚಿಯಾಗದಿದ್ದರು ತಾಳ್ಮೆಯಿಂದಲೇ ನಾವು ಮಾಡಿದ ಅಡುಗೆ ಉಂಡು ತಪ್ಪು ಹುಡುಕಿ ಹೇಳುತ್ತಿದ್ದರು..
@)(
ತಮಿಳ್ ಬಾಷೆಯ ಮೇಲೆ ಪ್ರೀತಿ ಬರಲು ಕಾರಣ, ಅವರ ಜೊತೆ ಕೂತು ಎಷ್ಟೋ ಸಿನಿಮಾ‌ ನೋಡಿದ್ದೇನೆ.. ಕಲೆಯದರೆ ಉಸಿರು ಅವರಿಗೆ. ಯಕ್ಷಗಾನ, ಸಂಗೀತ , ಓದುವುದು, ಲೆಕ್ಕದಲ್ಲಿ ಪರಿಣಿತರು...
@)(
ಎಲ್ಲರನ್ನೂ ನಿಸ್ವಾರ್ಥವಾಗಿ ಪ್ರೀತಿಸಲು, ಕೈಲಾದ ಸಹಾಯಮಾಡಲು ಕಷ್ಟದಲ್ಲಿಯೂ ನಗುತಿರಲು ಕಲಿಸಿಕೊಟ್ಟವರು ಅವರೇ.
@)(
ಆ ದುಡಿಯುವ ಕೈಗಳು, ಮಗುವಿನಂತಹ ಮನಸ್ಸು, ದಣಿದ ಇಳಿವಯಸ್ಸು,  ತುಂಬಾ ಪ್ರೀತಿ.
#ಅಪ್ಪಾ... ಎಂದರೆ ನಾನಂತು ತುಂಬಾ‌ ಭಾವುಕಿ.
 ಸದಾ ಆರೋಗ್ಯಕರ ಜೀವನ ಅವರಿಗಿರಲಿ..
~~
#ಅಪ್ಪನ ಮಗಳು,
  #ರಾಧಿಕಾ .

Wednesday 27 July 2016

ಯಾರನ್ನಾದರೂ ಲವ್ ಮಾಡಿ ಆದರೆ ಹುಡುಗೀರನ್ನ ಮಾತ್ರ ಲವ್ ಮಾಡ್ಬೇಡಿ

(@)

ಯಾರನ್ನ ಬೇಕಾದ್ರು ಪ್ರೀತಿ ಮಾಡಿ ಮರ್ರೆ.. ಈ ಹುಡ್ಗೀರನ್ನ ಮಾತ್ರ ಲವ್ ಮಾಡ್ಬೇಡಿ.. 😱😇
- #ಕಡ್ಡಿ_ಚಿಕ್ಕಣ್ಣ_ಉವಾಚ.
😇😱😝👏😇😱😟

ಯಾಕಲೇ...?! ಏನಾಯ್ತೋ..?!
ದಿನ ಬೆಳಗಾದ್ರೆ ಡಿಮಾಂಡ್ ಮೇಲೆ ಡಿಮಾಂಡ್. ತಲೆ ತಿಂತಾಳೆ.. ಕೇಳು.. 😟🙇

)(@) 
ಗುಡ್ ಮಾರ್ನಿಂಗ್ ಕಣೋ.. ( ಅವಳ ಮೆಸೇಜ್)
ಹೋಗೋ ನೀನು.😡
ದಿನ ನಾನೇ ಹೇಳ್ಬೇಕು GM ಅಂತ, ಒಂದಿನಾನೂ ನೀನಾಗೇ ಗುಡ್ ಮಾರ್ನಿಂಗ್ ಹೇಳಿದಿಯಾ?!
😟😇😱

)(@) 
ಲವ್ ಯೂ ಡಿಯರ್..
.
ಲವ್ ಯೂ ಹೇಳೊ...
.
.
"Love Yu Too... ಸಾಕಾ..."
ಬೇಕಾಗಿಲ್ಲ.‌ನನ್ನ ಒತ್ತಾಯಕ್ಕೆ ಹೇಳೋದು. I Hate You. 😡
😇😟😱

)(@) 
ಗಂಟೆಗೊಂದು ಸೆಲ್ಫೀ ತೆಗೆದು ಕಳ್ಸಿ, " ಹೇಗಿದೆ ಹೇಳೋ...?! 
ಇದು ಹೇಗಿದೆ.?!
ಈ ಪಿಕ್ ಚೆಂದ‌ ಬಂದಿದೆ‌ ಅಲ್ವಾ.
?
ಬೇಗ ಹೇಳು. ನಾನು ಎಫ್.ಬಿ ಗೆ ಅಪಲೋಡ್ ಮಾಡ್ಬೇಕು..
😱😇😟

)(@) 
ಯಾಕೋ ಬರೀ ಲೈಕ್ ಒತ್ತಿದೀ.
ಲವ್‌‌‌ ಸಿಂಬಲ್ ಇಲ್ವಾ ಅಲ್ಲಿ .‌ಎಷ್ಟ್ ಸಲ‌‌ ಹೇಳಿದ್ದೀನಿ. ಹಾಗೆ ರಿಯಾಕ್ಟ್ ಮಾಡ್ಬೇಕು ಅಂತ.. I Hate You.. 
😱😇😟

)(@) 
ಎಲ್ಲರೂ ಲೈಕ್‌ ಕಮೆಂಟ್ ಮಾಡಿದ್ರು . ಬೆಳಿಗ್ಗಿಂದ ಕಾಯ್ತಾ‌‌‌ ಇದ್ದೀನಿ.  ಎಲ್ಲೋ ಸತ್ತಿದ್ದಿ ನೀನು..?! 😈
😱😇😝

(@)( 
ವಾಟ್ಸ್ಅಪ್ ಸ್ಟೇಟಸ್ ಬದಲಾದ್ರೆ ಸಾಕು, 
ಯಾಕೋ ಹಾಗ್ ಬರಿದಿದ್ದೀ.. ನನಗಿಷ್ಟ ಆಗ್ಲಿಲ್ಲ. ಬದಲಾಯಿಸು ಬೇಗ. ಮಾತಾಡಲ್ಲ ನಿನ್ನ ಜೊತೆ ಇನ್ನು..
😝😇😱 😟😇😱
#ಥೋ...!!
#ಸಹವಾಸ #ಬೇಡ #ಮರ್ರೆ..


ಕವಿತೆ : ಕಾರ್ಮೋಡಗಳ ಮಿಲನ

(@)

ಕಾರ್ಮೋಡಗಳ ಮಿಲನದಿಂದ‌ ಮಳೆಬರಬಹುದೇನೋ...?!
~~~~~~~~~~~~~~~~~~~~~~~~~~~~~
ಯಾವಾಗಲೂ ನಿನ್ನೊಂದಿಗೆ
ಕಚ್ಚಾಡೋ ಆಸೆ,
ಇಂದೇಕೋ ಹುಚ್ಚು ಹೆಚ್ಚಾಗಿದೆ,
ಪ್ರೀತಿಯ ಕಿಚ್ಚು ಹಬ್ಬಿಸುವ ಮನಸಾಗಿದೆ,
ಕಚ್ಚಿ ತಿಂದ ಅರ್ಧ ಸೇಬಲಿ ರುಚಿ ಹೆಚ್ಚಿದೆ..!
*
ಸೀರೆ ನೆರಿಗೆಯ ಲೆಕ್ಕ ತಪ್ಪುತಿದೆ,
ತಂಗಾಳಿ ಮೈಯ ಆವರಿಸಿದೆ,
ಮೈಯಿಂದ ಗಂಧ ಚಿಮ್ಮುತ್ತಿದೆ,
 ಹಾಲಾಗಿ, ಹಣ್ಣಾಗಿ ನಿನ್ನ ಸೇವಿಸಬೇಕಿದೆ..!
**
ಹೂವಿನ ಹಾಸಿಗೆಯಲಿ ನಗುತೇಲುತಿದೆ,
ಬಳೆಗಳಿಗೆ ಕೆಲಸ ಕಡಿಮೆಯಾಗಿದೆ,
ಮಂದಬೆಳಕಲಿ ಜೋಡಿನೆರಳು ಕಾಣಿಸಿದೆ,
ಹಂಚಿಕೊಂಡ ಮೈಯಲ್ಲೀಗ ಬೆವರಹನಿ ಮೂಡಿದೆ..!
~~~~~~~~~~~~~~~~
😍 #ಸಿಂಧು_ಭಾರ್ಗವ್ 😍

ಹಾಯ್ಕುಗಳು

%ಹಾಯ್ಕುಗಳು%
**~~~~~~**
ಹಾರಲು ಬಯಸಿದೆ ಮನ
ರೆಕ್ಕೆ ಕಟ್ಟವರಾ ಜನ?!
ಏಳ್ಗೆ ಬಯಸದ ಮನ
ಕಾಲೆಳೆಯಲು ಕಾದಿರುವ ಜನ..!!
**
ಬಲೂನಿನಲಿ ಉಸಿರಿರಬಹುದು,
ಬಣ್ಣಬಣ್ಣದಲಿ ಜನರ ಕಣ್ಣಿರಬಹುದು,
ಮಗು ಹಠಹಿಡಿದರೆ ಮಾತ್ರ ವ್ಯಾಪಾರ...!!
**
ಸಂಗೀತ ಪ್ರೇಮಿ
 ಗಾನವ ಕೇಳುತಲೇ
ಖರ್ಚಿಲ್ಲದೆ ದೇಶ ಸುತ್ತಿದ..
**
ಲೇಖಕನ
ಲೇಖನಿಯ ಷಾಯಿ
ಓದುಗನ ಮನದಲಿ ಚೆಲ್ಲಿತ್ತು..
**
ನೃತ್ಯಗಾರ ನರ್ತಿಸುತ್ತಲೇ
 ಜನರ ಮನದಂಗಳಲಿ
ಗೆಜ್ಜೆಯೊಂದ ಬಿಟ್ಟುಹೋದ.
**
ಬಾಯಮ್ಮನ ತೋಟದ ಸಂಪಿಗೆ,
 ಕೆಲಸದಾಕೆ ಕೈಯಿಂದ
 ಭಟ್ಟರ ಮನೆ ದೇವರ ಪಟ ಸೇರಿತು..
~~~~~~~~~~~~~~~~
)( #ಸಿಂಧು_ಭಾರ್ಗವ್ )(

ಕಾಡುವ ಪದಗಳು

ನನಗೆ ಬಹಳ ಕಾಡುವಂತಹ ಪದಗಳು :
#ಕಾಡುಮಲ್ಲಿಗೆ
%ಪಾರಿಜಾತ
#ಬೇಲಿಹೂವು
%ಕೆಸರ ಕಮಲ
#ಕೆಸುವಿನ ಎಲೆ
%ಪಾತರಗಿತ್ತಿ
#ಪೂರ್ಣಚಂದಿರ
%ಕತ್ತಲಾಕೋಣೆ
#ಕಲ್ಲರಳಲಿ ಹೂವಾಗಿ
%ದೀರ್ಘಮೌನ.....
ಅದನ್ನು ಬಳಸಿ ಹೆಣ್ಣಿನ ಜೀವನಕ್ಕೆ ಹೋಲಿಸಿ ಎಷ್ಟು ಬೇಕಾದರೂ ಕಥೆ /ಕವಿತೆ ಬರೆಯಬಹುದು..

(( #ನಿಮಗೆ ಕಾಡುವ ಪದಗಳು ಯಾವುದಾದರೂ ಇದ್ದಾವಾ?! ))

ಕವಿತೆ : ಪರಮಪಾವನಿ ಗೋವುಮಾತಾ




ಪರಮಪಾವನಿ_ಗೋವು
~~~~~~~~~~~~~~
ಯಾರ ಮನೆ ಹಸುವೋ ಏನೋ
ಊರೂರು ಅಲೆದು ಹಸಿರು ಹುಲ್ಲು ತಿಂದು ಸಂಜೆ‌ಮನೆ ಸೇರುವುದು..
**
ಆಸೆ ಅತೀಯಾಗಿ ಬೇಲಿಹಾರಿ ನೆಟ್ಟ ಹುಲ್ಲನ್ನೆಲ್ಲ ಕದ್ದು ತಿಂದು ಬಾಸುಂಡೆ ಬರಿಸಿಕೊಳ್ಳುವವು..
**
ಕೊಟ್ಟಿಗೆ ಯಲ್ಲಿದ್ದ ಹಸುಗಳ ಅಹಂ ಹೆಚ್ಚಾಗಿ ಕಟ್ಟಿ ಹಾಕಿದಲ್ಲಿಂದಲೇ ಗುರಾಯಿಸುವವು...
**
ನಿಂತಲ್ಲೆ ನಿಲ್ಲುವ ಅವುಗಳ ಅಹಮಿಕೆ ನೋಡಿ, ಬೇಕಂತಲೇ ಸವಾಲು ಹಾಕಿ ಜಗಳ ಕಾಯುವವು..
**
ದಣಿದು ಬಂದ ಹಸುಗಳಿಗೆ ಹೊಟ್ಟೆತುಂಬಾ ನೀರು ಕೊಟ್ಟು ಪಾತ್ರೆ‌‌ ತುಂಬಿಸಿಕೊಳ್ಳುವ ಮನೆಯೊಡತಿ..
**
ಕಸ -ಕಡ್ಡಿ ಹಸಿರು- ಕೆಸರು ಏನೇ ತಿಂದರು ನಮಗಾಗಿ ಅಮೃತವನ್ನೇ ಕೊಡುವ ನೀನೇ ಪುಣ್ಯವತಿ..
**
ವರುಷಕ್ಕೊಂದು ಕರುವ ನೀಡಿ ಹೆಣ್ಣು-ಗಂಡು ಬೇದ ಮಾಡಿ ಮುಲಾಜಿಲ್ಲದೇ ಮಾರಿ ಬಿಡುವರು..
**
ಎಲ್ಲೇ ಹೋದರೂ ಮನೆಯೊಡೆಯನ ಮೊಗವ ನೋಡಿ ಒಮ್ಮೆ #ಅಂಬಾ ಎಂಬುದ ಮರೆಯದು..
**
ಮನಕರಗಿ ಯಾರಿಗಾದರೂ ಒಮ್ಮೆ ಕಣ್ಣೀರ್ ತರಿಸುವುದು..
ಹೇ .. ಪರಮಪಾವನಿ ಗೋಮಾತೆ ನಿನಗೆ ನನ್ನ  ವಂದನೆಗಳು...
~~~~~~~~~~~~~~~~
- ಸಿಂಧು_ಭಾರ್ಗವ್ . 

ನೆನಪಿನ ಬುತ್ತಿ

 ಚಿಕ್ಕವರಿದ್ದಾಗಿನ ಖುಷಿ ಈಗಿಲ್ಲ...
ನೆನಪಿನ ಬುತ್ತಿಯಿನ್ನು ಕಾಲಿಯಾಗಲ್ಲ...
~~~
ಇದನ್ನ ನಮ್ಮ ಕಡೆ #ತೋಡು ಅನ್ನುತ್ತೇವೆ. ಸಂಕ (ಸೇತುವೆ ) ತೋಟ-ಗದ್ದೆಯನ್ನು & ಮನೆಯನ್ನು ಸೇರಿಸಲು ಇದೆ.
ನಾವು ಚಿಕ್ಕದಿರುವಾಗ ಪಾಣಿಪಂಜಿಯಲ್ಲಿ ಕಾಣಿ ಮೀನುಗಳನ್ನು ಹಿಡಿತಾ ಇದ್ವಿ. ನೆರಮನೆ ಮರಾಠೀಮಕ್ಕಳ ಜೊತೆ. ತುಂಬಾ ಖುಷಿ ಮೀನು ಸಿಕ್ಕಿದಾಗ. ತಪ್ಪಿಸಿಕೊಂಡು ಹೋದಾಗ ಬೇಸರವಾಗೋದು. ಹಿಡಿಯದೇ ಬಿಡಬಾರದು ಅನ್ನುವಂತಹ ಹಠ ಒಂದು ರೀತಿ. ಹಿಡಿದ ಮೀನನ್ನೆಲ್ಲ ಚೊಂಬಿಗೆ ಹಾಕಿ ತೆಗೆದುಕೊಂಡು ಬಂದು ಹಟ್ಟೀ ದಂಡೆಯಲ್ಲಿ ( ಹಸುವಿನ ಕೊಟ್ಟಿಗೆ)  ಇಡೋದು. ಅಮ್ಮ ಹಟ್ಟಿ ಕೆಲ್ಸ ಮಾಡ್ತಾ ಇರ್ತಾರೆ.
" ಯಾಕಾ ತಂದೆ ಅದನ್ನ! ಸಾಯುತ್ತೆ  ಮರಾಯ್ತಿ . ಬಿಟ್ಟು ಬಾ ವಾಪಾಸ್ಸು .." ಅಂದರು ಕೇಳೋದಿಲ್ಲ.. ಮರುದಿನ ಬೆಳಿಗ್ಗೆ ಓಡಿ ಹೋಗಿ ನೋಡೋದು. ನಿದಿರೆಯೂ ಸರಿ ಮಾಡಿರೋದಿಲ್ಲ.. ಆಗ ಕೆಲವು ಸತ್ತು ಹೋಗಿ ಒಂದೆರಡು ಜೀವವಿರುತ್ತೆ. ಸತ್ತ ಮೀನಿನ ವಾಸನೆ, ಬೆಳಿಗ್ಗೆ ಅಪ್ಪಯ್ಯ ಹಟ್ಟಿ ಹತ್ತಿರ ಬಂದಾಗ.
" ಅಲ್ಲಾ. ಆ ಹೆಣ್ಣಿಗೆ ಹೇಳ್‌ ಮಾರಾಯ್ತಿ.  ಭಟ್ಟರ ಮನೆಲಿ ಮೀನ್ ವಾಸನೆ ಬಂದರೆ ಎಂತ ಎನಿಸೋದಿಲ್ಲ ಜನ.. ನಾ ಏನೂ ಹೇಳುದಿಲ್ಲ ಮರ್ಕತ್ ಅದ್... " ( ಅಳುವುದು)
ಅಂತ ಹೇಳಿ ವಾಪಾಸಾಗ್ತಿದ್ರು.
ಎಷ್ಟು ಹೇಳಿದ್ರು ನಾವು ಮಾಡೋದು ಅದನ್ನೆ....
ಅಲ್ಲದೆ ಪಾರಿಜಾತ ಹೂವಿನ ಗಿಡವನ್ನು ತಾಒಡಿನ ದಂಡೆಯಲ್ಲೇ ನಡುವುದು ಜಾಸ್ತಿ. ಬೆಳ್ಳಂಬೆಳಿಗ್ಗೆ ಅದು ನೀರಿನಲ್ಲಿ ತೇಲಿ ಬರುವುದುಮ ಅದಂತು ಅದ್ಭುತ ನವಿರಾದ ಅನುಭವ... ಗಮ್ಮತ್ ಆತಿತ್ ಚಣ್ಣಕಿಪ್ಪತಿಗೆ..(ಚಿಕ್ಕವರಿದ್ದಾಗ)
~~~

#ಅಮ್ಮನ ಮಗಳು ,
ರಾಧಿಕಾ. 😍

ವಾರದ ಸಣ್ಣ ಕತೆ : ಚಿಗುರಲಿ ಕನಸು



ವಾರದ ಸಣ್ಣ ಕತೆ: ಚಿಗುರಲಿ ಕನಸು
~~~~~
ಸಂಜೆ ಸೂರ್ಯಾಸ್ತಮಾನ, ಕೆಂಪು ಆಗಸ ನೋಡುತ ಕುಳಿತು ಬಿಟ್ಟಿದ್ದೆ. ಹದ್ದುಗಳೆಲ್ಲ ಮನೆಗೆ ಹೋಗುವುದ ಬಿಟ್ಟು ನನ್ನ ತಲೆಯ ಮೇಲೆ ಸುತ್ತುತ್ತ ಇದ್ದವು. ಸತ್ತು ಹೋಗಿದ್ದೇನೆ ಎಂದುಕೊಂಡಿರಬಹುದಾ..?! ಮತ್ತೇನು ಕಲ್ಲುಬಂಡೆಯ ಹಾಗೆ ಕದಲದೇ ಕುಳಿತಿದ್ದರೆ ಹಾಗೆ ತಾನೆ ಅರ್ಥ. ರುಮು ರುಮು ಬೀಸುವ ಗಾಳಿಯು ಕೂಡ ಅಡ್ಡದಿಂದ ಏಳಲು ಹೇಳುತ್ತಿದೆ. ಅದರ ಕಡೆಗೂ ಲಕ್ಷ್ಯ ಕೊಡದಿದ್ದಕ್ಕೆ ನನ್ನನ್ನೆ  ದೂಡಿಕೊಂಡು ಹೋಗುತ್ತಿದೆ. ಯಾಕಾಗಿ ಹೀಗೆ ಕುಳಿತಿರುವೆ..? ಸಂಜೆ ದೇವರಿಗೆ ದೀಪ ಹಚ್ಚುವ ಸಮಯದಲ್ಲಿ..
**
ಹ್ಮ... ಜೀವನ‌ ಹೀಗೆ ಎಂದು ಈವರೆಗೆ ಯಾರಿಗೂ ವ್ಯಾಖ್ಯಾನಿಸಲಾಗಲಿಲ್ಲ... ಅವರವರ ಪಾಲಿಗೆ ಬಂದದ್ದನೇ ಅರ್ಥೈಸಿ ಇನ್ನೊಬ್ಬರಿಗೆ ಹೇಳುತ್ತಿದ್ದಾರೆ. ಯಾವುದು ನಿಜವಲ್ಲ.
**
#ಸಿರಿವಂತರ‌ಮನೆ ಇಡಲು ಜಾಗವಿಲ್ಲ, ಮಗನಿಗೆ ಮದುವೆಯಾಗಿ ಎಷ್ಟು ವರುಷವಾದರು ಮಕ್ಕಳಾಗಲಿಲ್ಲ. ೫-೬,ವರುಷದ ನಂತರ ಒಂದು ಮಗು ಹುಟ್ಟುತ್ತದೆ.‌ಎಲ್ಲರಿಗೂ ಖುಷಿ. ಹಬ್ಬದ ವಾತಾವರಣ. ಆದರೆ  ಡಾಕ್ಟರ್ ಗೆ ಒಂದು ರೀತಿಯ ಕಸಿವಿಸಿ. ಈ ಮಗುವಿಗೆ ಮುಂದೆ ಸಮಸ್ಯೆ ಎದರಾಗುತ್ತದೆ‌ ಎಂದು. ಅದನ್ನು ಹೇಳಲು ಮನಸ್ಸು ಮಾಡಲಿಲ್ಲ. ಒಂದು ವರುಷದ ಮೇಲೆ ಅವರು ಎನಿಸಿದಂತೆ ಮಗು ನಡೆಯುತ್ತಿರಲಿಲ್ಲ. ತನ್ನ ಕಾಲಿನ ಸ್ವಾಧೀನ ಕಳೆದುಕೊಂಡಿತ್ತು.. ಈಗ ಎರಡು ವರುಷದ ಮೇಲಾಗಿದೆ. ಆದರೂ  ಮಗುವು ಮಲಗಿದ್ದಲ್ಲಿಯೇ. ಅಷ್ಟು ಹಣವಿದ್ದರೂ ಏನೂ ಮಾಡಲಾಗದ ಪರಿಸ್ಥಿತಿ.
**
#ಇನ್ನೊಂದು ಸಿರಿವಂತ ಕುಟುಂಬ ಕೊನೆಯ ಮಗಳಿಗೆ ಮದುವೆ ಮಾಡಿ ೧೦ವರುಷವಾಗಿದೆ. ಮಕ್ಕಳಿಲ್ಲ. ಪ್ರತಿ ಸಲಿ ಊರಿಗೆ ಬಂದು ವಾಪಾಸಾಗುವಾಗ ಅಳುತಲೇ ಹಿಂದಿರುಗುತ್ತಾಳೆ. ದತ್ತು ತೆಗೆದುಕೊಳ್ಳಲು ಅಷ್ಟು ವಯಸ್ಸಾಗಲಿಲ್ಲ. ಗಂಡಹೆಂಡಿರಿಬ್ಬರು ( ಸ್ಥೂಲಕಾಯದವರು) ದಪ್ಪ ಇದ್ದ ಕಾರಣ ಮಕ್ಕಳಾಗುವುದು ಕಷ್ಟವೆಂದು ಸ್ವತಃ ಡಾಕ್ಟರ್ ಹೇಳಿದ್ದರು.
**
#ಇನ್ನೊಬ್ಬರ ಮನೆಯಲ್ಲಿ ಮಗುವಿದೆ. ನೋಡಿಕೊಳ್ಳಲು ಯಾರಿಲ್ಲವೆಂದು ಕೆಲಸಕ್ಕೆ ಹೋಗುತ್ತಿದ್ದ ತಾಯಿ ನಿಲ್ಲಿಸಿ  ಮಗುವಿನ ಆರೈಕೆ ಮಾಡುತ್ತ ದಿನಕಳೆಯುತ್ತಿದ್ದಾಳೆ.
#ಇನ್ನೊಂದು ಮನೆಯಲ್ಲಿ ಗಂಡಹೆಂಡಿರಿಬ್ಬರು ಕೆಲಸಕ್ಕೆ ಹೋಗುವವರು. "ಇನ್ನು ಮಕ್ಕಳಾಗಲಿಲ್ಲವಾ..??" ಎಂಬ ಪ್ರಶ್ನೆಗೆ ಬಾಯಿ ಮುಚ್ಚಿಸಲು ಮನೆಯಲ್ಲಿ ಒಂದು ಮಗುವಿದೆ . ನೋಡಿಕೊಳ್ಳಲು ಯಾರಿಲ್ಲವೆಂದು ಡೇ_ಕೇರ್ ಸೆಂಟರ್ ನಲ್ಲಿ ಬಿಟ್ಟು ಕೆಲಸಕ್ಕೆ ಹೋಗುತ್ತಾರೆ.. ಆ ಮಗುವಿಗೆ ಆಯಮ್ಮನೇ ಎಲ್ಲವೂ. ಅವರ ಜೊತೆ ಖುಷಿಯಲ್ಲಿರುತ್ತದೆ. ಹೆತ್ತವರು ಬಂದಾಗ ಕಿರಿಕಿರಿ ಅಳುವುದು, ಏನೋ‌ ಒಂದು ರೀತಿಯ ಅಸಮಧಾನ ತೋರಿಸುತ್ತದೆ..
ಹ್ಮ..ಮ್..!!
ಮೊನ್ನೆ ಎಲ್ಲೋ ಓದಿದ ನೆನಪು, ಗೆಳೆಯರಿಬ್ಬರ ಮಾತು :
" ಜೀವನದಲ್ಲಿ ಏನಾದರೂ ಕಷ್ಟಪಟ್ಟು ಸಾಧನೆ ಮಾಡಬೇಕು ಕಣೋ. ನೀನೊಬ್ಬ ಎಲ್ಲದ್ದಕ್ಕೂ ಹೆದರೋದು.."
" ಹ್ಮ.. ಕಷ್ಟಪಟ್ಟಿದ್ದಕ್ಕೆ  ಇನ್ನು ನಾಲ್ಕು ತಿಂಗಳಲ್ಲಿ ನಾನು ಅಪ್ಪ ಆಗ್ತಾ ಇದ್ದೀನಿ.."
" ಥೂ.. ನಿನ್ನ ಅಪ್ಪ ಆಗೋದು, ಮಗು ಹುಟ್ಟಿಸೋದು ಒಂದು ಸಾಧನೆನಾ..?!"
"ನಿನಗೇನು ಗೊತ್ತು? ಈಗ ೧೦ಜನರಲ್ಲಿ( ಗಂಡಸರು) ೭ ಜನರು ಮಾತ್ರ ತಂದೆ ಪಟ್ಟ ಪಡೆದುಕೊಳ್ತಾ ಇದ್ದಾರೆ. ಅದರಲ್ಲಿ ನಾನೂ ಒಬ್ಬ..
**
ಮೊದಲೆಲ್ಲ ಮನೆ ತುಂಬಾ ಮಕ್ಕಳು. ಮೊದಲೆರಡು ಬಾಣಂತನಕ್ಕೆ ತಾಯಿ ತವರು ಮನೆಗೆ ಹೋಗ್ತಾರೆ. ನಂತರದ್ದೆಲ್ಲ ಮನೆಯ ಹಿರಿಯ ಮಕ್ಕಳೇ ನೋಡಿಕೊಳ್ಳೋದು. ಆದರೆ ಈಗ ಬಸುರಿ ( ಪ್ರೆಗ್ನೆಂಟ್) ಎಂದು ಗೊತ್ತಾದಾಗ ಬೆಡ್ ರೆಸ್ಟ್ ನಲ್ಲಿದ್ದವರು ಹೆರಿಗೆ ಮುಗಿಸಿ ಮನೆಗೆ ಬರುವ ತನಕವೂ ಬೆಡ್ ರೆಸ್ಟ್ ನಲ್ಲಿಯೇ, ಅದೂ ಸಿಸೇರಿಯನ್ ಮಾಡಿಯೇ ಮಗು ತೆಗಿಯಬೇಕು. ಒಂದು‌ ಮಗು ಕೈಗೆ ಬರಲು ನಡೆಸುವ ಒದ್ದಾಟ ಅಷ್ಟಿಷ್ಟಲ್ಲ.. ಅಷ್ಟಾಗಿಯೂ ಮಕ್ಕಳಿಲ್ಲ ಎಂದು ಕೊರಗುವವರು, ಹರಕೆ ಕಟ್ಟುವವರು,  ಮಗುವಿಗೋಸ್ಕರ ಜೀವನವನ್ನೇ ತ್ಯಾಗ ಮಾಡುವವರು,  ಕೆಲಸ ಬಿಡಲು ಇಚ್ಛಿಸದವರು ಆಯಮ್ಮನ ಕೈಗೆ ಮಗುವ ನೀಡುವವರು...
**
ಅವರಿವರ ಮನೆ ಕತೆ ನಮಗ್ಯಾಕೆ‌ ಹೇಳುತ್ತೀರಿ?! ನೀವ್ಯಾಕೆ ಬೇಡದ ಚಿಂತೆ ಮಾಡುತ್ತೀರಿ? ಎನ್ನುತ್ತಿರ ಬಹುದು, ಹಾಗೆ ಕಲ್ಲಾಗಿ ಕುಳಿತುಕೊಂಡದ್ದು " ಕೈಕಾಲಿನಲ್ಲಿ ಸ್ವಾದೀನ ಕಳೆದುಕೊಂಡ ಆ ಮಗುವನ್ನು ಬಹಳ‌ ಹತ್ತಿರದಿಂದ ನೋಡಿದಾಗ, ನನ್ನ ಮಗು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರ ನೀಡಲಾಗದೇ ಗಂಟಲು ಕಟ್ಟಿಬಂದಾಗ...
" ಅವನ್ಯಾಕೆ ನನ್ನ ಜೊತೆ ಆಡಲು ಬರುತ್ತಿಲ್ಲ, ನಿಲ್ಲು ಎಂದರೆ ಯಾಕೆ‌ ನಿಲ್ಲುತ್ತಿಲ್ಲ, ಯಾಕೆ ಮಾತನಾಡೋದಿಲ್ಲ ? ಯಾಕೆ ನಗೋದಿಲ್ಲ ? ಮಲಗಿಕೊಂಡೇ ಯಾಕೆ ಇರ್ತಾನೆ ?
ಹ್ಮ... ಯಾಕೆ?! ಯಾಕೆ ?! ಯಾಕೆ?!
***
"ದೇವರು ಎಲ್ಲರಿಗೂ ಎಲ್ಲವನ್ನೂ ಕರುಣಿಸುವುದಿಲ್ಲ. ಒಂದಲ್ಲ ಒಂದು ಕೊರತೆಯನ್ನು ಇಟ್ಟೇ ಇಟ್ಟಿರುತ್ತಾನೆ. ಯಾಕೆ?! ಎಲ್ಲಿ ಖುಷಿಯಲ್ಲಿ ತೇಲುತಾ ತನ್ನನ್ನು ಮರೆತುಬಿಡುವನಾ ಮನುಷ್ಯಜೀವಿ ಎಂದು..." ಮಗು/ಮಕ್ಕಳು , ಮೊದಮೊದಲು ಅದೊಂದು ಸಮಸ್ಯೆ ಎನ್ನಿಸದಿದ್ದರೂ ಕೊನೆಕೊನೆಗೆ ಕೊರಗಾಗಿ ಕಾಡುವುದಂತು ನಿಜ. ದೊರಕಿದುದರಲ್ಲೆ ತೃಪ್ತಿ ಪಟ್ಟು ಖುಷಿಯಾಗಿರಬೇಕು ಅಷ್ಟೆ...
~~~
#ಸಿಂಧು_ಭಾರ್ಗವ್. 

Tuesday 19 July 2016

Happy guru poornima in kannada





ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ !
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರುವೇ ನಮಃ !!
**
ಗುರುಬ್ರಹ್ಮ ಗುರುವಿಷ್ಣು
ಗುರುದೇವೋ ಮಹೇಶ್ವರಃ...!
ಗುರು ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರುವೇ ನಮಃ...!!
**
Guru : #ಗು ಅಂದರೆ ಕತ್ತಲೆ,  #ರು ಅಂದರೆ ದೂರಮಾಡುವವ..
ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮನ್ನು‌ ಕರೆದುಕೊಂಡು ಹೋಗುವವರೇ ಗುರುಗಳು....
ಅಜ್ಞಾನದಿಂದ, ಅಂಧಕಾರದಿಂದ ಕುರುಡಾದ ಈ ಜಗತ್ತನ್ನು ಜ್ಞಾನವೆಂಬ ದೀಪಜ್ವಾಲೆಯಿಂದ ತೆರೆಸಿದ ಗುರುವೆಂಬ ಮಹಾನ್ ಶಕ್ತಿಗೆ ನಮಸ್ಕಾರ....
***
ಹೆತ್ತವರಿಗೂ, ಅಂಗನವಾಡಿಯಲ್ಲಿ
" #ಅ " " #ಆ " ಕಲಿಸಿದ ಟೀಚರಿಂದ ಹಿಡಿದು ಡಿಪ್ಲೋಮಾ ತನಕ ಜ್ಞಾನಾರ್ಜನೆ ಮಾಡಿದ ಎಲ್ಲಾ ಉತ್ತಮ  ಗುರುಗಳಿಗೂ , ಹೆಜ್ಜೆ-ಹೆಜ್ಜೆಗೂ ಪೆಟ್ಟಿನ ಮೇಲೆ‌ ಪೆಟ್ಟು ಕೊಟ್ಟು ನನ್ನನ್ನು ಗಟ್ಟಿ ಮಾಡಿದ ಬಂಧು ಬಳಗ,  ಸ್ನೇಹಿತ ವರ್ಗಕ್ಕೂ
#ಗುರುಪೂರ್ಣಿಮೆಯ #ಶುಭಾಶಯಗಳು...
ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಗುರುಗಳೆ ಆಗಿರುತ್ತಾರೆ... ಕಲಿಯುವ ಮನಸಿದ್ದರೆ ಎಲ್ಲಿಂದ ಬೇಕಾದರು ಉತ್ತಮ ವಿಚಾರಗಳನ್ನು ಎರವಲು ಪಡೆಯಬಹುದು... ಕಲಿತು ಮುಗಿಯುವುದಂತಿಲ್ಲ... ಸಾಯುವ ತನಕವೂ ಕಲಿಯುತ್ತಾ ಇರಬಹುದು.. ಆದರೆ ‌ನಾವು ಕಲಿಯುವುದಿಲ್ಲ‌ ಅಷ್ಟೆ.. 😀😁😂.. ಸಾಧ್ಯವಾದರೆ ನಮ್ಮ ಪ್ರೀತಿ ಪಾತ್ರರಿಗೆ ನಮ್ಮಲ್ಲಿರುವ ಅನುಭವಗಳನ್ನು ಹಂಚಿಕೊಳ್ಳಬೇಕು... ಕಲಿಸಬೇಕು, ತಿದ್ದಿ ತೀಡಬೇಕು...
" ಓಂ‌ ಶ್ರೀ ಗುರುಭ್ಯೋ ನಮಃ "
" ಹರಿ_ಓಂ "

- ಶ್ರೀಮತಿ ಸಿಂಧು ಭಾರ್ಗವ್.. 

ವಾರದ ಸಣ್ಣ ಕಥೆ : ಹಿತ್ತಲಲ್ಲಿ ಅರಳಿದ ಪುಷ್ಪ



ವಾರದ ಸಣ್ಣ ಕಥೆ : ಹಿತ್ತಲಲ್ಲಿ ಅರಳಿದ ಪುಷ್ಪ
~~~~~~~~~~~~~~~~~~~~~~~~~
ಅವಳಿಗೊಂದು ರೀತಿಯ ಹುಚ್ಚು, ಕಾಡು ಮಲ್ಲಿಗೆಯನ್ನು ಮನೆ ಅಂಗಳದಲ್ಲಿ ಬೆಳೆಸಬೇಕೆಂದು. ಇಲ್ಲ ಅದು ಖುಷಿಯಿಂದ ಅರಳಿ ಘಮಿಸುತ್ತಿಲ್ಲ, ಅದರ ಮನದಲ್ಲೂ ನೋವಿರಬಹುದು ಎಂಬ ಭಾವನೆ. ಅದನ್ನರಿತು ಸಮಾಧಾನ ಮಾಡಬೇಕೆಂಬ  ಅನುಕಂಪ.
***
"ಸುಮನಾ"ಳ ಮನೆಯ ಹತ್ತಿರವೇ "ಪುಷ್ಪಳ" ಮನೆಕೂಡ... ಆದರೆ ಅದು ಮಡಿವಂತರ ಮನೆಯಲ್ಲ. ಆ ಮನೆಯಂಗಳದಲ್ಲು ರಂಗೋಲಿ ಮೂಡಿದರೂ ಯಾರೂ ನೋಡುವವರಿಲ್ಲ. ದಾರಿ ಹೋಕರೆಲ್ಲ ಬೈಯುತ್ತಲೇ ಸಾಗುವರು. ಪುಷ್ಪಳಿಗೇನು ಬೇಸರವಿಲ್ಲ . ಅವಳು ಮಾಡುವ ಕೆಲಸವೇ ಹಾಗಿದ್ದು. ಅವಳ ಮನೆಗೆ ಬರುವ ಅದೆಷ್ಟೋ ಕುಡುಕರು, ಕೆಡಪರು ಮೈಬೈಸಿ ಮಾಡಿಕೊಂಡು ಹೋಗುತ್ತಾರೆ. ಮಂಚದಲ್ಲಿ ಅಲಂಕರಿಸಿಟ್ಟ ಮಲ್ಲಿಗೆ ಹೂವಿಗೂ ಅಲ್ಲಿ ಬೆಲೆ ಇಲ್ಲ ... ಬಾಡಿದ , ಪಕಳೆಕಿತ್ತ ಹೂವನ್ನೆಲ್ಲ ಒಟ್ಟು ಮಾಡಿ ರಸ್ತೆ ಬದಿಗಿದ್ದ ಕಸದ ತೊಟ್ಟಿಗೆ ಹಾಕುವಾಗ "ಸುಮನಾ" ತನ್ನ ಮನೆಯ ಕಿಟಕಿಯಿಂದಲೇ ಕದ್ದು ನೋಡುತ್ತಿರುತ್ತಾಳೆ... ಅವಳಿಗೂ ಅರ್ಥವಾಗಿತ್ತು ಮನಸ್ಸಿಲ್ಲದ ಮನಸ್ಸಿನಿಂದ ಪುಷ್ಪಳ ಜೀವನ ನಡೆಯುತ್ತಿದೆ ಎಂದು.‌ ಒಮ್ಮೆ ಅವಳ ಜೊತೆ ಮಾತನಾಡಬೇಕು, ಅವಳ ಕತೆಯನ್ನೆಲ್ಲ ಕೇಳಬೇಕು , ಅಲ್ಲಿಂದ ಹೊರ ಪ್ರಪಂಚಕ್ಕೆ ಕರೆತರಬೇಕು ಎಂದು ನಿರ್ಧರಿಸಿದಳು. ಆದರೆ ಮಾತನಾಡುವುದು ಹೇಗೆ.?!  ಅವಳು ಬಾಗಿಲು ತೆಗೆಯುವುದೇ ಇಲ್ಲ. ಹಿತ್ತಲ ಬಾಗಿಲಿನಿಂದ ಬಂದು ಕೆಲಸ‌ಮುಗಿಸಿ ಹೋಗುವವರೇ ವಿನಃ ಎದುರೇದುರೇ ಎದುರಿಸುವ ತಾಕತ್ತಿಲ್ಲದ ಗಂಡಸರೇ ಬರುವುದಲ್ಲಿಗೆ...
ಒಮ್ಮೆ ಧೈರ್ಯಮಾಡಿ ಸುಮನಾ ಹಿತ್ತಲ ಬಾಗಿಲು ಬಡಿಯುತ್ತಾಳೆ...
**
ಯಾವುದೋ ನೆನೆದ ಹಕ್ಕಿ ಎಂದು ಬಾಗಿಲು ತೆರೆದಾಗ ಹೆಂಗಸು ನಿಂತಿರುವುದು ನೋಡಿ, ಗಾಬರಿಯಾಯಿತು. ಒಮ್ಮೆ ಬಾಗಿಲು ಮುಚ್ಚಿಬಿಟ್ಟಲು. ಜಗಳಕ್ಕೆ ಬಂದಿರಬಹುದಾ..?! ಅವಮಾನ ಮಾಡುವರಾ?! ಒಂದೂ ಅರಿವಾಗದೇ ಸ್ಥಂಭದಂತೆ ನಿಂತು ಬಿಟ್ಟಳು. ಸುಮನಾ ಮತ್ತೆ ಬಾಗಿಲು ಬಡಿದಳು. ಉಸಿರು ಕಟ್ಟಿಕೊಂಡು ಬಾಗಿಲು ತೆರೆಯುತ್ತಲೇ ಪುಷ್ಪ  ಬೈಯಲು ಶುರು ಮಾಡಿದಳು... " ನನಗೆ  ಬೈಯುವ ,ಅವಮಾನ ಮಾಡುವ ಯಾವ ಅಧಿಕಾರವೂ ನಿಮಗಿಲ್ಲ. ಇದು ನನ್ನ  ಹೊಟ್ಟೆಪಾಡು , ಹೇಗಾದರೂ ಬದುಕುತ್ತೇನೆ... ಹೊರಡಿ ಇಲ್ಲಿಂದ....." 😈😈😈
ಸುಮನಾಳ ಮೊಗದಲ್ಲಿ ನಗು ಮೂಡಿತು . ಅದು ತಂಪಾದ ತಂಗಾಳಿಯಂತೆ  ಪುಷ್ಪಾಳನ್ನು ಆವರಿಸಿತು.. ಏನೋ ಪರಿವರ್ತನಾ ಭಾವ ಮೈಮನದಲ್ಲಿ ಸಂಚಲನ...
" ಕುಳಿತುಕೊಳ್ಳಬಹುದೇ..?? "
"ಹ್ಮ್ಮ್ ... ಒಳ ಬನ್ನಿ... ಯಾಕೆ ಬಂದಿರಿ?! ನನ್ನಿಂದ ಏನಾಗಬೇಕು...?!"
" ನೀನು ಇಲ್ಲಿ ಯಾಕಿರುವೆ?! ನಿನಗೀ ಕೆಲಸ, ಜೀವನ ಇಷ್ಟವಿಲ್ಲವೆಂದು ನನಗೂ ತಿಳಿದಿದೆ.. ಸುಳ್ಳು ಹೇಳಬೇಡ.. ಮನಸಿನಲ್ಲಿದ್ದುದನ್ನು ಬಿಚ್ಚಿಡು... ನಿನ್ನ ಜೀವನ ಇದಲ್ಲ. ಹೊಸ ಪರ್ವಕ್ಕೆ ನೀನು ಅಡಿ ಇಡಬೇಕು, ಇಲ್ಲಿಂದ ಹೊರಗೆ ಬಾ... " ಎಂದಾಗ...
ಧೀರ್ಘಮೌನಕ್ಕೆ ಶರಣಾದಳು. ಹೇಳಬೇಕೋ ಬೇಡವೋ ಎಂದು ಯೋಚಿಸತೊಡಗಿದಳು. "ಹ್ಮ್ಮ್... ನನಗೂ ಸಾಕಾಗಿದೆ ಈ ನಾಟಕೀಯ ಜೀವನ. ಇಲ್ಲಿಂದ ಮುಕ್ತಿ ಸಿಗುವುದಾದರೆ ಇವರ ಹತ್ತಿರ ಎಲ್ಲವನ್ನೂ ಹೇಳಿ ಹೊರಟುಬಿಡಬೇಕು, ಹಿತ್ತಲ ಬಾಗಿಲನ್ನು ಶಾಶ್ವತವಾಗಿ‌ ಮುಚ್ಚಬೇಕು ..." ಎಂದು ಮನದಲ್ಲೇ ಎನಿಸಿ ಯಾರಿಗೂ ತಿಳಿದಿಲ್ಲದ ಕಥೆ-ವ್ಯಥೆಯನ್ನು ಎಳೆ ಎಳೆಯಾಗಿ ಬಿಡಿಸತೊಡಗಿದಳು.
**
ನಾನು ನನ್ನ ಅಮ್ಮ ಇಬ್ಬರೇ ಇದ್ದದ್ದು ಈ ಮನೆಯಲ್ಲಿ. ತಂದೆ ನಾನು ಹೆಣ್ಣು ಎಂದು ತಿಳಿದಾಗಲೆ ನಮ್ಮನ್ನು ಬಿಟ್ಟು ಹೋಗಿದ್ದ. ಇದ್ದಾನೋ‌ ಸತ್ತಿದ್ದಾನೋ‌ ತಿಳಿಯದು.. ಅಮ್ಮ ಜೀವನಕ್ಕೆ ಎಂದು ಅಲ್ಲಿ ಇಲ್ಲಿ ಮುಸುರೆ ತಿಕ್ಕಿ ನನ್ನ‌ ಸಾಕಿದಳು.. ಒಬ್ಬ ಸಿರಿವಂತನ ಪಟ್ಟದರಸಿ ಯಾದಳು.. ಆದರೆ ಹೆಂಡತಿಯಲ್ಲ. ಅವರೇ ನಮ್ಮ‌ತಾಯಿಗೆ ಕೊಟ್ಟ‌ ಮನೆಯಿದು. ಒಮ್ಮೆ ಅವರ ಹೆಂಡತಿಗೆ ವಿಷಯ ತಿಳಿದು ಜಗಳವಾಗಿ ಅವರಿಂದ ನಮ್ಮನ್ನು ದೂರ ಮಾಡಿದರು.. ಆಗ ತಾಯಿಗೆ ಅಂದಚಂದಕ್ಕೆ ಅಂಕುಡೊಂಕಿಗೆ ಮೋಹಗೊಂಡು ಸಮಾಧಾನ ಮಾಡುವ ನೆಪದಲ್ಲಿ ಮೈಮುಟ್ಟಿದವರೇ ಎಲ್ಲಾ... 😟 ಬೇಡವೆಂದರೂ ಕೇಳುವವರಲ್ಲ.. ನಾನು‌ ಚಿಕ್ಕವಳಾಗಿದ್ದೆ.. ಏನೂ ಅರ್ಥವಾಗುತ್ತಲೂ ಇರಲಿಲ್ಲ. ವರುಷಗಳೆ ಕಳೆಯಿತು.‌ಅಮ್ಮನೂ ತೀರಿಹೋದರು. ನಾನು ಮಾತ್ರ ಈ ಮನೆಯಲ್ಲಿ‌ ಇದ್ದೇನೆ. ಆದರೆ ಅಮ್ಮ ಮಾಡಿದ ಕೆಲಸಕ್ಕೆ ಎಲ್ಲರೂ ನನ್ನನ್ನೂ ಹಾಗೆ ನೋಡುತ್ತಿದ್ದಾರೆ... ಯಾರ್ಯಾರೋ ಬರುತ್ತಾರೆ.. ಎಲ್ಲರನ್ನೂ ಆ ಕೋಣೆಗೆ ಕಳುಹಿಸಿ ನಿದ್ರೆಮಾತ್ರೆ ಹಾಕಿದ ಹಾಲು ಕುಡಿಸುತ್ತೇನೆ ೨-೩ಗಂಟೆ ಮಲಗಿ‌ ಹೋಗುತ್ತಾರೆ...  ಅವರಿಗೇನೂ ಅರಿವಿಗೆ ಬರಿವುದಿಲ್ಲ.. ಅಮಲಿನಲ್ಲೇ ಮನೆ ಸೇರಿರುತ್ತಾರೆ. ಇಲ್ಲ‌ ಕಟ್ಟಿಹಾಕಿ ಬೆದರಿಕೆ ಒಡ್ಡುತ್ತೇನೆ..‌ಇಲ್ಲಿಯದು ಹೊರಗೆ ಬಾಯಿ ಬಿಡಬಾರದು ಎಂದು...
ನಾನು ಆ ರೀತಿ ಹೆಣ್ಣಲ್ಲ ಎಂದು ಯಾರ‌ ಬಳಿ ಹೋಗಿ ಕೂಗಿಕೊಳ್ಳುವುದು.. ನನಗೆ ಮಾತ್ರ ಗೊತ್ತಿದೆ ನಾನು ಪರಿಶುದ್ಧಳು ಎಂದು.. ನನ್ನನ್ನು ನೀವು ಗಮನಿಸಿದ್ದು ಯಾವಾಗಿನಿಂದ..?! ಎಲ್ಲರೂ ಬೈಯುವವರೇ ವಿನಃ ನನ್ನ‌ ಕಷ್ಟ ಕೇಳಿದವರಿಲ್ಲ... ದಯಮಾಡಿ ನನ್ನನ್ನು ಕರೆದುಕೊಂಡು ಹೋಗಿ. ಒಂದು ಕೆಲಸಕ್ಕೆ ಕೊಡಿಸಿ . ನಿಮ್ಮ   ಹೆಸರು ಹೇಳಿ ಬದುಕುತ್ತೇನೆ.. ಈ ಊರಿಂದ ದೂರ ಹೋಗಬೇಕು ನಾನು..."
**
ಸುಮನಾಳು ಎನಿಸಿದ್ದು ಸರಿಯಾಗೇ ಇತ್ತು. ಈಗಲೇ ಉಟ್ಟ ಬಟ್ಟೆಯಲ್ಲಿ ಬಂದು ಬಿಡು. ಎಂದು ಅವಳ ಬದುಕಿಗೊಂದು ದಾರಿ ತೋರಿಸಿದಳು..
ಪುಷ್ಪಳ ಹಿತ್ತಲಬಾಗಿಲು ಶಾಶ್ವತವಾಗಿ ಮುಚ್ಚಿತು.. ಮನೆಯೋ ಗಿಡಗಂಟಿಯಿಂದ ಮುಚ್ಚಿಹೋಯಿತು...
~~~~~~~~~~~~~~~~~~~~
- #ಸಿಂಧು_ಭಾರ್ಗವ್ 😍

Monday 11 July 2016

ವಾರದ ಕಥೆ :: ಜೀವನದ ಜೊತೆ ರಾಜಿ ಆದ ರಾಜಿ ( ಲೇಖನ )

ವಾರದ ಸಣ್ಣ ಕಥೆ :: ಜೀವನದ ಜೊತೆ ರಾಜಿ ಆದ ರಾಜಿ
***

ಬೇರೆಯವರ ಡೈರಿ ಓದಬಾರದೆನ್ನುತಾರೆ. ಆದರೆ ನಾನು ಅವಳ ಡೈರಿ ಓದಿದ ನಂತರ ನನಗೆ ಅವಳ ಮೇಲಿದ್ದ ಪ್ರೀತಿ ಗೌರವ ಇನ್ನಷ್ಟು ಜಾಸ್ತಿಯಾಯಿತು..
ರಾಜಿ ಮತ್ತು( ರಾಜೇಶ್ವರಿ ) ನಾನು ಬಾಲ್ಯದ ಗೆಳತಿಯರು. ಬಹಳ ವರುಷಗಳ ಬಳಿಕ ನಾನು ಅವಳ ಮನೆಗೆ  ಹೋಗಿದ್ದೆ. ಬೆಳಿಗ್ಗೆ ತಿಂಡಿ ಕೂಡ ಅಲ್ಲಿಯೇ. ಎಷ್ಟು ಮಾತನಾಡಿದರೂ ಮುಗಿಯುತ್ತಲೇ ಇಲ್ಲ.‌ ಬಾಲ್ಯದ ನೆನಪುಗಳನ್ನೆಲ್ಲ ಮೆಲುಕು ಹಾಕುತ್ತಿದ್ದೆವು. "ಗಂಟೆ  ೧೧ಆಯಿತು ಸ್ನಾನಕ್ಕೆ ಹೋಗಿ ..." ಎಂದು ಅವಳ‌ ಅಮ್ಮ ಅಡುಗೆಕೋಣೆಯಿಂದಲೇ ಹೇಳಿದರು. ಅವಳು ಬಾತ್ರೂಮ್ ಸಿಂಗರ್ .ಗಾಯನ ಕೇಳಿಸಿಕೊಳ್ಳುತ್ತ ನಗು ಬರುತ್ತಿತ್ತು. ಹಾಗೆ ಅವಳ‌‌ ಕ‌ಪಾಟಿನ ಕಡೆಗೆ ಕಣ್ಣಾಯಿತು. ಬಟ್ಟೆಗಳನ್ನೆಲ್ಲಾ ನೀಟಾಗಿ ಜೋಡಿಸಿ ಇಟ್ಟುಕೊಳ್ಳುತ್ತಾಳೆ ಆಕೆ. ಕೆಲಸಕ್ಕೆ ಹೋಗಿ ಬರುವ ಶಿಸ್ತಿನ ಜೀವನ ಅವಳದು. ನಾನಂತೂ ಕಸದ ರಾಶಿಯಲ್ಲೆ ಇರುವುದು. ಉದಾಸೀನದ ಮುದ್ದೆ. ಹಾಗೇ ನೋಡುತ್ತಿದ್ದಾಗ ಒಂದು ಡೈರಿ ಸಿಕ್ಕಿತು. ಬೇಡವೆಂದರೂ ಓದುವ ಕುತೂಹಲ ಹೆಚ್ಚಾಯಿತು. ಅದೂ ಹಳೆಯ ಡೈರಿ. ಮೊದಲ ಪುಟದಲ್ಲಿ
ಅವಳು ಬರೆದದ್ದು:
" ಎಲ್ಲಾ ಮಕ್ಕಳಿಗೂ ಪಿ.ಯೂ.ಸಿ ಜೀವನದ ಬಹುಮುಖ್ಯ ಘಟ್ಟ. ಡಾಕ್ಟರ್, ಇಂಜಿನಿಯರ್, ಅಥವಾ ಡಿಗ್ರೀ ಮಾಡಲೋ ಅದು ಬೇಕೇ ಬೇಕು. ಹಾಗಿರುವಾಗ  ಮೊದಲಿನಿಂದಲೂ ಸ್ನೇಹಿತರ ಜೊತೆಗೆ ಇದ್ದ ನಾನು ಪಿ.ಯೂ.ಸಿ. ಗೆ ಮನೆಯವರು ಸಯನ್ಸ್ ತೆಗೆಸಿಕೊಟ್ಟರು. ಬೇರೇ ಕಾಲೇಜಿಗೆ ಸೇರಿದೆ. ಎಷ್ಟು ಓದಿದರೂ ತಲೆಗೆ ಹೋಗುತ್ತಿರಲಿಲ್ಲ. ಅಕ್ಕ ಬುದ್ಧಿವಂತೆ ಎಂದು ನನಗೂ ಸಯನ್ಸ್ ತೆಗೆಸಿಕೊಟ್ಟರೇ ವಿನಃ ನನಗೆ ಆ ವಿಷಯದಲ್ಲಿ ಆಸಕ್ತಿ ಇರಲಿಲ್ಲ. ಪ್ರತಿ ಕ್ಲಾಸ್ ಟೆಸ್ಟ್ ನಲ್ಲಿಯೂ ಫೇಲ್ ಆಗುತ್ತಿದ್ದೆ. ತಂದೆಯನ್ನು ಕಾಲೇಜಿಗೆ ಕರೆಯುತ್ತಿದ್ದರು. ಆಗೆಲ್ಲ‌ ಅವರಿಗೆ  ಅವಮಾನವಾಗುವ ಹಾಗೆ ಮಾಡಿದೆನಲ್ಲ ಎಂದು ಬೇಸರವಾಗುತ್ತಿತ್ತು. ಊರವರಿಗೆಲ್ಲ‌ ವಿಷಯ ಬೇಗನೆ ತಿಳಿದುಬಿಟ್ಟಿತು. ನನ್ನ ಗೆಳತಿಯರೆಲ್ಲ ಒಮ್ಮೆ ಫೇಲ್ ಆದರೆ ಇನ್ನೊಂದು ಇಂಟರ್ನಲ್ ಲಿ ಪಾಸ್ ಆಗುತ್ತಿದ್ದರು‌.‌ಆಗ ಇನ್ನೂ ಕುಸಿದು ಹೋಗುತ್ತಿದ್ದೆ. ಅವರಿಗಿರುವ ಹಠ, ಛಲ ನನಗೆ ಇಲ್ಲವಲ್ಲ, ಮತ್ತೆ ತಂದೆಯನ್ನ ಕಾಲೇಜಿಗೆ ಕರೆಸಬೇಕೆಂದು. ಊಟ ,ನಿದಿರೆ ಮಾಡದೇ ನರಕ ಸದೃಶ ಆ ಎರಡು ವರುಷ ಕಳೆದಿದ್ದೆ‌ . ನೋಡಲು ಸಣಕಲು, ಯಾವುದರಲ್ಲೂ ಆಸಕ್ತಿ ಇರಲಿಲ್ಲ. ಮನೆಯವರ ಮುಖ ನೋಡಲೂ ಸಾಧ್ಯವಾಗುತ್ತಿರಲಿಲ್ಲ. "ನಗು" ಪದದ ಅರ್ಥ ಗೊತ್ತಿರಲಿಲ್ಲ. ಅಮ್ಮನಿಗೂ ತಲೆಬಿಸಿ ಕೊಡುತ್ತಿದ್ದೆ.. ಕ್ಲಾಸಿನಲಿ ವಿಷಯವೆಲ್ಲವೂ ಅರ್ಥವಾಗುತ್ತಿತ್ತು. ಆದರೆ ಅದನ್ನು ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಇಂಗ್ಲೀಷ್ ದೊಡ್ಡ ಭೂತದಂತೆ ತಲೆಎತ್ತಿ ನಿಂತಿತ್ತು. ಅಳುವುದೊಂದೇ ನನಗೆ ಇರುವುದು. ಒಮ್ಮೆ ಪರೀಕ್ಷೆ ಬರೆದು ಮನೆಗೆ ಬಂದಾಗ ಅಪ್ಪ ಹೇಳಿದರು " ಈ ಸಲಿ ಯಾವಾಗ ಬರಬೇಕು ಹೇಳು ಫ್ರೀ ಮಾಡಿಕೊಂಡು ಬರುತ್ತೇನೆ" ಎಂದು ಆಗ ಸತ್ತೇ ಹೋದಂತ ಅನುಭವ. ಅವರಿಗೆ ನನ್ನ ಮೇಲೆ ನಂಬಿಕೆ ಹೊರಟುಹೋಗಿದೆ. ಎಂದು ಗೊತ್ತಾಯಿತು. ಮೊದಲೇ ಮರ್ಯಾದೆ ಮೂರುಕಾಸಾಗಿದೆ. ನನಗೆ ನನ್ನ ಮೇಲೆ ನಂಬಿಕೆ‌ ಇಲ್ಲದಿರುವಾಗ ಜೀವನ  ಮುಗಿತೆಂದು ಎಣಿಸಿ ಸಾಯಲು ಹೊರಟೆ. ಹೇಗೆ ಸಾಯುವುದು ಎಂದೂ ತಿಳಿದಿಲ್ಲ. ನಂತರ ಭಯ ಒಂದು ಕಡೆ‌ ಹೀಗೆ ಅರ್ಧ ಕ್ಕೆ ಜೀವ ಕಳೆದುಕೊಂಡರೆ ಮತ್ತೆ ಹುಟ್ಟುತ್ತಾರೆ ಎಂಬ ಭಲವಾದ ನಂಬಿಕೆ. ಬೇಡ. ಎಂದು ಮನಸ್ಸು ಬದಲಾಯಿಸಿದೆ. ಹೇಗೋ ಪ್ರಥಮ  ಪಿ.ಯು. ಮುಗಿಯಿತು. ಪಾಸಾಗಿದ್ದೆ. ನನಗೆ ಅನುಮಾನ ಹೇಗೆ ಪಾಸು ಮಾಡಿದರು ಎಂದು. ಅಮೇಲೆ ದ್ವಿತೀಯ ಪಿ.ಯು.

*
ಅಲ್ಲಿಯೂ ಅದೇ ಹಣೆಬರಹ. ಅಕ್ಷರಗಳೇಲ್ಲ ಅಣಕಿಸುತ್ತಿದ್ದ ವು. ಮತ್ತದೇ ಕೆಟ್ಟ ಯೋಚನೆಗಳು. ಸಾಯುವ ವಿಫಲಯತ್ನ, ಯಾರ ಮುಖನೋಡದೆ, ಬಿಸಿಲ ಕಾಣದೇ ವರುಷ ಕಳೆದೆ. ಕಾಲೇಜಿಗೆ ಬಂಕ್ ಮಾಡುತ್ತಿದ್ದೆ.
*
ಇದ್ದೆಲ್ಲಾ ಸ್ನೇಹಿತೆಯರು ಸಿ.ಇ.ಟಿ ಪರೀಕ್ಷೆಗೆ ತಯಾರಿ ಮಾಡುತ್ತಿದ್ದರು. ಅವರಿಗೆಲ್ಲ ಒಂದು ಗುರಿ ಇತ್ತು. ನನಗೂ ಆಸೆ ಇದೆ. ಡಾಕ್ಟರ್ ಆಗಬೇಕೆಂದು. ಆದರೆ ಅದರ ಹಾದಿಯಲ್ಲಿ ಸಾಗಲು ಸಾಧ್ಯವಾಗುತ್ತಿರಲಿಲ್ಲ. ಪ್ರಯತ್ನಗಳು ಫಲಿಸುತ್ತಿರಲಿಲ್ಲ.. ಪರಿಣಾಮ ಪೇಲ್. ನೆಂಟರೆಲ್ಲ ಹಂಗಿಸಲು ಶುರು ಮಾಡಿದರು. "ಒಂದು ನಲವತ್ತು ಮಾರ್ಕ್ ತೆಗೆಯಲೂ ಆಗಲಿಲ್ಲ‌ ಅಲ್ವ ನಿನಗೆ  ?!" ಅಮ್ಮನಿಗೆ ಟೆನ್ಶನ್ ಆಯಿತು. ಅಪ್ಪ ಮದುವೆ ಮಾಡಿಸುವ ಅವಳಿಗೆ ಎಂದು ಹೇಳಿದರು. ಆಗ ಅಮ್ಮ‌ "ಇಲ್ಲ ಅವಳಿಗೆ ಸಣ್ಣ ಕೆಲಸಕ್ಕೆ ಸೇರುವ ಹಾಗೆ ಮಾಡಬೇಕು‌, ಕಂಪ್ಯೂಟರ್ ಕ್ಲಾಸಿಗೆ ಸೇರಲಿ" ಎಂದರು. ಆಮೇಲೆ‌ ನೆರೆಮನೆಯವರ ಸಹಾಯದಿಂದ ಡಿಪ್ಲೋಮಾ ಸೇರಿಸಿದಳು. ಅವಳಿಗೆ ನಾನು ಸೋಲುವುದು ಇಷ್ಟವಿರಲಿಲ್ಲ. ನಾನು ಚಿಕ್ಕದಿರುವಾಗ ಬುದ್ಧಿವಂತೆ ಯಾಗಿದ್ದ ಹುಡುಗಿ‌ ಆಮೇಲೆ ಓದಲು ಆಸಕ್ತಿ ಕಳೆದುಕೊಂಡವಳು. ಯಾಕೆ ಎನ್ನುವುದೇ ಉತ್ತರ ಸಿಗದ ಪ್ರಶ್ನೆ ಯಾಗಿತ್ತು.
ಅಲ್ಲಿನ ಹೊಸ ಗೆಳತಿಯರು ಜೀವನ ಅಂದರೆ ಹೇಗೆ ಎಂಬ ಅರ್ಥವಾಗ ತೊಡಗಿತು‌. ನಮ್ಮ ಜೀವನ ನಮ್ಮ ಕೈಲೇ ಇರುವುದು. ರೂಪಿಸಿಕೊಳ್ಳಬೇಕಾದುದು ನಾವೇ ವಿನಹ ಬೇರಾರಲ್ಲ. ಸಹಾಯಕ್ಕೆ ,ಬೆಂಬಲಕ್ಕೆ ಹೆತ್ತವರು ಸದಾ ಇರುತ್ತಾರೆ. ಈಗ ಇದ್ದ ಅವಕಾಶ ಕಳೆದುಕೊಂಡರೆ ಮುಂದೆ ಸಿಗದಿರಬಹುದು ಎನಿಸಿ ಚೆನ್ನಾಗಿ ಓದಿ ಅಮ್ಮ ನನ್ನ ಮೇಲಿಟ್ಟ ನಂಬಿಕೆ ಉಳಿಸಿದೆ. ಕೆಲಸವೂ ಸಿಕ್ಕಿತು. ಈಗ ಸಂತೋಷದಲ್ಲಿದ್ದೇನೆ. ಆಗಿನ ದಿನಗಳನ್ನು ಎಣಿಸಿದರೆ ನಗು ಬರುತ್ತದೆ. ಸರಿಯಾಗಿ ಸಾಯಲೂ ಗೊತ್ತಿಲ್ಲ ದಿದ್ದರೂ ಕೈಕೊಯ್ದುಕೊಂಡಿದ್ದೆ.  ಈಗ ಬದುಕುವ ಆಸೆ ಹೆಚ್ಚಾಗಿದೆ.‌.
ನನ್ನ ಜೀವನದ ತಿರುವು ಕಂಡ #ಗಳಿಗೆ ಅದು.
______*****______
ಹ್ಮ..ಮ್.
ಅವಳ ಡೈರಿ ಓದಿ ಮನಸ್ಸು ಮೌನಕ್ಕೆ ಶರಣಾಯಿತು. ಈ ಪ್ರಪಂಚವೇ ಹಾಗೆ. ಜನ ಗೆಲ್ಲುವ ಕುದುರೆ ಬಾಲಕ್ಕೆ ಹಣ‌ಕಟ್ಟುತ್ತಾರೆ. ವಿನಃ ಸೋಲುವ ಕುದುರೆಗಲ್ಲ. ಸಾಧನೆ ಮಾಡಿದ ವಿದ್ಯಾರ್ಥಿ ಗಳ ಹೆಸರು ಮಾಧ್ಯಮ ದ ಮುಖಪುಟ ದಲ್ಲಿ ಬರುವುದೇ ವಿನಃ ಅನುತ್ತೀರ್ಣರಾದವರದಲ್ಲ. ಗೆದ್ದ ಎತ್ತಿನ ಬಾಲ ಹಿಡಿಯುವವರೇ ಜಾಸ್ತಿ ಬಿಟ್ಟರೆ ಸೋತವರ ಮುಖ ಕೂಡ ನೋಡುವುದಿಲ್ಲ. ಮಕ್ಕಳಿಗೆ ಯಾವ ವಿಷಯದಲ್ಲಿ ಆಸಕ್ತಿ ಇದೆ ಎಂದು ಕೇಳಿ ಅವರಿಗೆ ಓದಲು ಬಿಡಬೇಕೇ ವಿನಃ ಹೆತ್ತವರಿಗೆ ಇಷ್ಟವಾಗುವ ವಿಷಯವೆಂದೋ, ಅಕ್ಕ-ಅಣ್ಣ ತೆಗೆದುಕೊಂಡರೆಂದು ಅದಕ್ಕೆ ಸೇರಿಸಬಾರದು. ಪ್ರತಿಯೊಂದು ಮಗುವು ತನ್ನದೇ ಆದ ವಿಶೇಷ ಅಭಿರುಚಿ ,ಆಸಕ್ತಿಯನ್ನು ಹೊಂದಿರುತ್ತದೆ. ಅದನ್ನು ಗುರುತಿಸಬೇಕು. ಸೋತಾಗ ಬೆಂಬಲಕ್ಕೆ ನಿಲ್ಲಬೇಕು. ಮತ್ತೂ ಚುಚ್ಚುವ ಮಾತನ್ನಾಡಿ ಕುಗ್ಗಿಸುವುದಲ್ಲ. ನೊಂದ ಮನಸ್ಸು ಕುಗ್ಗಿಹೋದಾಗ ,ಸೋಲು ಮೇಲಿಂದ ಮೇಲೆ ಎದುರಾದಾಗ ಸಾಯುವ ಯೋಚನೆ ಮಾಡುತ್ತಾರೆ... ಅವರನ್ನು ಸೂಕ್ಷ್ಮವಾಗಿ ಗಮನಿಸಿ ಧೈರ್ಯತುಂಬಬೇಕು... ಜೀವನ ದೊಡ್ಡಹಾದಿ. ಅರ್ಧಕ್ಕೆ ನಿಲ್ಲಿಸುವುದಲ್ಲ. ಸೋಲು ಎಂದಾಗ ಜೀವನ ಅಲ್ಲಿಯೇ ಕೊನೆಯಾಗುವುದಿಲ್ಲ ಎಂದು ತಿಳಿಸಿಹೇಳಬೇಕು..

- #ಸಿಂಧು ಭಾರ್ಗವ್ 😍

Saturday 9 July 2016

Brahma kamala Photo Gallery - 08th July 2016




















































ಬ್ರಹ್ಮ ಕಮಲ Brahmakamala in Kannada





Brahmakalam ಬ್ರಹ್ಮ ಕಮಲ ಹೂವು:: ವಿಶೇಷ ವಾಗಿ ರಾತ್ರಿಯಲ್ಲಿ ಅರಳುವ ಈ ಹೂವಿನ ಜಾಡು ಹಿಡಿದು ಹೊರಟಾಗ
_*_*_*_*_
ಕಮಲನಾಭ ವಿಷ್ಣುವು ತನ್ನ ದೇಹದಿಂದ ಒಂದು ಬೃಹತ್ ಕಮಲದ ಹೂವನ್ನು ಹೊರಚಾಚಿದಾಗ ಅದರ ಮೇಲೆ 'ಕಮಲಭವ' ಅಂದರೆ ಸೃಷ್ಟಿಕರ್ತನಾದ ಬ್ರಹ್ಮ ಕುಳಿತಿರುತ್ತಾನೆ ಎಂಬ ನಂಬಿಕೆ ಪುರಾಣದಲ್ಲಿದೆ. ಹೀಗಾಗಿ ಈ ಹೂವಿಗೆ '' #ಬ್ರಹ್ಮಕಮಲ '' ಎನ್ನುವ ಹೆಸರು ಬಂದಿದೆ. #ರಾತ್ರಿ_ರಾಣಿ ಎಂದೂ ಕರೆಯುತ್ತಾರೆ. ಇದರ ಮೂಲ ಹಿಮಾಲಯ,  ಉತ್ತರಖಂಡದಲ್ಲಿ ಬೆಟ್ಟಗಳ ನಡುವೆ, ಪೊದೆಗಳಲ್ಲಿ ಶೀತವಾತಾವರಣಕ್ಕೆ, ವಿಶೇಷವಾಗಿ ಚಂದಿರನ ಬೆಳಕಿಗಾಗೇ ಕಾಯುತ್ತ ಅವನಂತೆಯೆ ಬೆಳದಿಂಗಳಂತೆ ಅರಳಿ ನಿಲ್ಲುವ ಹೂವು ಇದಾಗಿದೆ. ಶುಭ್ರಬಿಳಿ ಬಣ್ಣ ಮನಸ್ಸಿಗೆ ಮುದ ನೀಡುವುದಲ್ಲದೇ ಕಣ್ಣಿಗೂ ತಂಪಾಗಿಸುತ್ತದೆ. ಈಗಂತೂ ಈ ಹೂವಿನ ಸೌಂದರ್ಯಕ್ಕೆ ಮಾರುಹೋದವರೇ ಇಲ್ಲ. ಎಲ್ಲರ ಮನೆಯ‌ಪಾಟ್ಗಳಲ್ಲೂ ಉಳಿದೆಲ್ಲ ಹೂವಿನ ಗಿಡಗಳ ನಡುವೆ ಮುಖ್ಯ ಅತಿಥಿಯಾಗಿ ಕಂಗೊಳಿಸುತ್ತಿರುತ್ತದೆ.
ಉಳಿದೆಲ್ಲ ಗಿಡಗಳಂತೆ ಬೀಜದಿಂದ ವಂಶಾಭಿವೃದ್ಧಿಕಂಡರೆ ಇದು ಕಾಂಡ ಮತ್ತು ಎಲೆಯಿಂದ ಬೆಳವಣಿಗೆ ಹೊಂದುತ್ತದೆ. ಇದರ ಕಾಂಡ ಅಥವಾ ಎಲೆಯನ್ನು  ನೆಟ್ಟು ಒಂದು- ಒಂದೂವರೆ ವರುಷ ಹಾಗೆ ಬಿಡಬೇಕು. ಒಮ್ಮೆಗೆ ನೋಡಿದರೆ ಏನೂ ಬೆಳವಣಿಗೆ ಕಾಣಿಸುತ್ತಿಲ್ಲವಲ್ಲ ಎನಿಸಿದರೂ ಅದು ಮಣ್ಣಿನೊಳಗೆ ಬೇರೂರಿ ಭದ್ರ ನೆಲೆನಿಂತಿರುತ್ತದೆ.. ಆಮೇಲೆ ಕಾಂಡವೇ ಎಲೆಯಾಗಿ ಮಾರ್ಪಾಡು ಹೊಂದಿ ಮೊಗ್ಗು ಕುಳಿತುಕೊಳ್ಳುತ್ತದೆ. ಜೂನ್ - ಅಗಷ್ಟ್ ತಿಂಗಳ ನಡುವೆ ಇದು ಹೂ ಬಿಡುವುದನ್ನು ಕಾಣಬಹುದು. ಹಾಗೆ ಸೆಪ್ಟಂಬರ್ ವರೆಗೂ ಒಂದೆರಡು ಹೂವು ಅರಳುವುದೂ ಇದೆ.ಒಮ್ಮೆಗೆ ೧೦-೧೫ ಮೊಗ್ಗು ಕುಳಿತು ವಿಸ್ಮಯ ಮೂಡಿಸುತ್ತದೆ.‌ಮೊಗ್ಗು ಕೂಡ ೧೫-೨೦ ದಿನಗಳ ಕಾಲ ಬೆಳವಣಿಗೆ ಹೊಂದಿದ ಮೇಲೆಯೇ ಹೂವು ಅರಳುವುದು.. ನೇರಳೆ ಬಣ್ಣದ ತೊಟ್ಟನ್ನು ಹೊಂದಿದ್ದು ಶುಭ್ರವಾದ ಬಿಳಿ ಬಣ್ಣದಿಂದ ಕೂಡಿದ ಹೂವಿನ ನಡುವೆ ಹಳದಿ ಬಣ್ಣದ ಶಲಾಕ ಮತ್ತು ಕೇಸರವಿದೆ. ಇದು ರಾತ್ರಿ ೮-೧೨ ಗಂಟೆಗಳ ನಡುವೆ ಅರಳುತ್ತದೆ. ಆಗಿನ ಘಮವಂತು ಅಮಲೇರಿಸುವಂತೆ ಮಾಡುತ್ತದೆ . ಆದರೆ ಸೂರ್ಯೋದಯಕ್ಕೂ ಮೊದಲು ಬಾಡಿಹೋಗುವುದಂತು ಇದರ ಇನ್ನೊಂದು ವಿಶೇಷತೆ. ನಡು ರಾತ್ರಿಯಲ್ಲಿ ಯೇ ನಾವು ಅದರ ಅರಳುವಿಕೆಗೆ ಕಾದು ಕುಳಿತು ಅದರ ಅಂದವ ಆಸ್ವಾದಿಸಬೇಕು..
ಸುಮಾರು ಎರಡರಿಂದ ಮೂರು ಅಡಿ ಉದ್ದ ಬೆಳೆಯುವ ಇದರ ಎಲೆ, ಕಾಂಡ, ಹೂವು, ಬೇರು ಎಲ್ಲವೂ ಆಯುರ್ವೇದದ ಔಷಧಗಳಲ್ಲಿ ಬಳಕೆಯಾಗುತ್ತದೆ. ಬೇರನ್ನು ತೇಯ್ದು ಗಾಯಗಳಿಗೆ ಹಚ್ಚುವುದರಿಂದ ಗಾಯ ಬೇಗನೇ ಮಾಯುತ್ತದೆ. ಹೂವಿನ ದಳದಿಂದ ಸಿದ್ಧಪಡಿಸಿದ ತೈಲವನ್ನು ಮಾನಸಿಕ ಕಾಯಿಲೆಗಳಿಗೆ ಔಷಧಿಯಾಗಿ ಬಳಸುತ್ತಾರೆ. ಸೌಂದರ್ಯಕ್ಕಿಂತಲೂ ಹೆಚ್ಚಾಗಿ ಧಾರ್ಮಿಕ ಕಾರಣಕ್ಕಾಗಿ ಇದನ್ನು ಬೆಳೆಸುವುದೇ ಹೆಚ್ಚು. ಬ್ರಹ್ಮ ಕಮಲ ಯಾರ ಮನೆಯಲ್ಲಿ ಅರಳುತ್ತದೆಯೋ ಆ ಮನೆಯ ಒಡೆಯರು ಸಂಪದ್ಭರಿತರಾಗುತ್ತಾರೆ ಎನ್ನುವ ಪ್ರತೀತಿ ಇದೆ. ಇದೊಂದು ವಿಸ್ಮಯದ ಸಸ್ಯವೆನ್ನಲು ಎರಡು ಮಾತಿಲ್ಲ...

 - 😍 ಸಿಂಧು ಭಾರ್ಗವ್ 😍

Thursday 7 July 2016

ಹಾಯ್ಕುಗಳು ೦೫

ಪ್ರೀತಿಯೊಂದು ಆಕಾಶ
ಅಲ್ಲಿ ಪ್ರೀತಿಗೆ ಮಾತ್ರ ಅವಕಾಶ..!
ನಿನ್ನ ತೋಳಿನಲೇ ಒರಗಿ
ಕಾಣಬೇಕು ನೂರು ಕನಸಾ..!!
*
ಮರಳ ಮೇಲೆ ಅಲೆಗಳು
ಕೆನ್ನೆ ಸವರಿ ಹೋಗಲು..!
ಮನದಲ್ಲಿರುವ ಪ್ರೀತಿಯ
ತೇವ ಮಾತ್ರ ಇಂಗದು..!!
*
ಅರಿತಿರದ ನಾಳೆಯಲಿ
ದಿನದಿನವೂ ಅನುಭವವು..!
ನೀ ನನ್ನ ಜೊತೆಗಿರಲು
ಬಲಗೊಂಡಂತೆ ಈ ಮನವು..!!
*
ಕಡಲಿನಾಳದಿಂದ ಮುತ್ತನು
ನಿನಗಾಗಿ ಹುಡುಕಿ ತಂದೆ..!
ನನ್ನ ದಣಿದ ಮೊಗವ ನೋಡಿ
ನೀನೆ ಮುತ್ತೊಂದ ನೀಡಿದೆ..!!
*
ಕನಸು ಕಾಣಲು ಕಾಸಿಲ್ಲವೆಂದು
 ಯಾರೋ ಮಾಡಿದ್ದರು ಉಪನ್ಯಾಸ..!
ನಿನ್ನ ಪ್ರೀತಿ ಮಾಡಿದಂದಿನಿಂದ
ಕಂಗಳಿಗೆಲ್ಲ ಉಪವಾಸ..!!
*
ಒಂದೇ ಒಂದು ಆಸೆ ಎನಗೆ
ತರಬೇಕಿಲ್ಲ ನೂರಾರು ಒಡವೆ..!
ಬದುಕಿನ ಕೊನೆವರೆಗೂ
ಈ ಕಿರುಬೆರಳ ಬಿಡದಿರು ಮುದ್ದುಮನವೇ..!!

- *ಸಿಂಧು_ಭಾರ್ಗವ್* 

ಕವಿತೆ - ನಿನ್ನೊಂದು ನೋಟದಲಿ

ನಿನ್ನೊಂದು ನೋಟದಲಿ,
ಹೃದಯದ ಸೆರೆಯಾಗಿ
ಪ್ರೀತಿಗೆ ನೆಲೆ‌ಸಿಕ್ಕಿದೆ..
ವಾಸ್ತವದ ಕೊಲೆಯಾಗಿ
ಮನ, ಕನಸಿನಲಿ ತೇಲುತಿದೆ..

ನಿನ್ನೊಂದು ಮಾತಿನಲಿ,
ನಗೆ ಅಲೆಯು ಹರಿದಂತೆ
ಮನ, ನೋವೆಲ್ಲ ಮರೆಯುತಿದೆ..
ಕಲ್ಪನೆಗೆ ಜೀವಬಂದಂತೆ
ಮನ, ಗರಿಬಿಚ್ಚಿ ಕುಣಿಯುತಿದೆ...

ಇನ್ನೊಂದು ಜನುಮಕಾಗುವಷ್ಟು
ಪ್ರೀತಿ ನೀಡಿದೆ...
ಇನ್ನೆಂದು ಕಾಣದ ಹರುಷವ
ಮನದಲಿ ತುಂಬಿದೆ...

ನನ್ನೇ ನಾ ಮರೆಯಲು
 ನೀನೇ ಕಾರಣ,
ಜೊತೆಗೆ ನೀನಿರಲು
ಬಾಳು ಕಡಲೆಹೂರಣ...
- ಸಿಂಧು ಭಾರ್ಗವ್ .

ಭಟ್ಟರ ಸಾಲುಗಳು ೦3

😍😃😊👏😍😃😊👏😍
"ಭಟ್ರು ಪಿಚ್ಚರ್ ನೋಡಿದ್ರೆ ಏನೇನೋThoughts ಬರುತ್ತೆ ...
ಬೇಡ ಅ೦ದ್ರೂ ಪೆನ್ನು ಗೀಚೋಕೆ ಶುರುಮಾಡ್ತದೆ...
Dull ಆಗಿರೊ ಮನಸ್ಸಲ್ಲಿ ಉತ್ಸಾಹ ಚಿಮ್ಮುತ್ತೆ...
Life ಇಷ್ಟೇನಾ...?! ಅ೦ತ Easy ಆಗಿ ತಗೋಬೇಕು ಆನ್ಸುತ್ತೆ....

😇😜😍 )(***)( 😇😜😍
ಮೆಳ್ಳಗಣ್ಣು , ಕಳ್ಳಗಣ್ಣು , ಅಳುವ ಕಣ್ಣು, ಅರಳೋ ಕಣ್ಣು, ಪೋಲಿ ಕಣ್ಣು, ತಾಜಾ ಕಣ್ಣು
ಆದರೆ, ಇರುವುದೆರಡೇ ಬ್ಲ್ಯಾಕ್ & ವೈಟ್ ಕಣ್ಣುಗಳು..

😞😍 )(***)( 😞😍
ಮೊದಲ ಪ್ರೀತಿಯ ನೆನಪನ್ನೆ ಹುಟ್ಟಾಗಿಸಿಕೊಂಡು
ತಮ್ಮ ಜೀವನದ ಅರ್ಧಹಾದಿಯನ್ನು ಕಳೆಯುವವರು ಅದೆಷ್ಟೋ ಮಂದಿ..

😍😊👏 )(***)( 👏😊😍
ಸಾಲು ಮರಗಳು ನೆರಳ ನೀಡಲು
ಸಾಲುದೀಪಗಳು ಬೆಳಕ ನೀಡಲು
ಸಾಲುಸಾಲಾಗಿ ಬರುವ ಕಷ್ಟಗಳು
ಜೀವನವ ಸುಂದರಗೊಳಿಸಲು..
#ಬಿ_ಪೊಸಿಟಿವ್_ಯಾವಾಗಲೂ ...

😍😜😇 )(***)( 😇😜😍
ಕದ್ದ ಹೃದಯಕ್ಕೆ ಖುಷಿಯಂತೆ
ನಾ ಪ್ರೀತಿಸಿದ್ದು ಪೆದ್ದು ಹೃದಯವನ್ನೆಂದು....

😜😇😊 )(***)( 😊😇😜
ದೋಸೆ ರೌಡ್ ಆಗಿರಲಿ, ಮೊಟ್ಟೆ ಆಕಾರಕ್ಕೆ ಬರಲಿ,
ತಿನ್ನೋದು ನಿನ್ನೆ ರೆಡಿಮಾಡಿ ಇಟ್ಟ ಹುಳಿಉದ್ದಿನ ಹಿಟ್ಟನ್ನೇ...

)(***)(
#ಸಿಂಧು_ಭಾರ್ಗವ್
😍😊😃👏😍😊😃👏😍

Monday 4 July 2016

ವಾರದ ಸಣ್ಣಕಥೆ :: ಬಾಲ್ಯದ ನೆನಪುಗಳು ಗೋಡಂಬಿ ಜೊತೆಗೆ


ವಾರದ ಸಣ್ಣಕಥೆ :: ಕಷ್ಟಕರ ಬಾಲ್ಯ
😍😃😊😍😃😊😍😃😊😍
ನಾವು ಚಿಕ್ಕವರಿದ್ದಾಗ  ಎಪ್ರಿಲ್ , ಮೇ ರಜೆ ಬಂದರೆ ಅಕ್ಕ ಮತ್ತು ನನಗೆ ಗೇರು ಹಣ್ಣು ಒಟ್ಟು ಮಾಡುವ ಕೆಲಸ. ತುಂಬಾ ಮರಗಳಿದ್ದವು. ಮೂರು ಹೊತ್ತು ತಪ್ಪದೆ ಆ ಕೆಲಸ ಮಾಡಿದರೆ ಎರಡು-ಮೂರು ತಿಂಗಳ , ಜೀವನ ನಡೆಯುತ್ತಿತ್ತು. ಕೃಷಿಕರಾದ ಕಾರಣ ತೆಂಗು ,ಅಡಿಕೆ, ಬಾಳೆ ಜೊತೆಗೆ ಕಾಳುಮೆಣಸು ,ಗೇರು ಬೆಳೆ ಇವೇ ನಮ್ಮ ಜೀವನಾಧಾರವಾಗಿತ್ತು..
ಕ್ವಿಂಟಾಲುಗಟ್ಟಲೆ ಮಾರುವಾಗ ಕೈತುಂಬಾ ಕೆಲಸವಿರುವುದು ಸಹಜವೇ. ಮಾರ್ಚ್- ಎಪ್ರಿಲ್  ಪರೀಕ್ಷಾ ಸಮಯವೂ ಹೌದು. ಓದುವುದರ ಜೊತೆಗೆ ಅದನ್ನು ಮಾಡಲೇಬೇಕು. ಇಲ್ಲದಿದ್ದರೆ ಬೈಗುಳ ಕೇಳಬೇಕು.
" ಬಿದ್ದ ಹಣ್ಣುಗಳನ್ನೆಲ್ಲ ಒಟ್ಟು ಮಾಡಿ, ಅದರ ಬೀಜ ತೆಗೆದು ತೊಳೆದು ಒಣಗಿಸಿ ೨ದಿನ ಆದ ಮೇಲೆ ಅಂಗಡಿಗೆ ಕೊಟ್ಟು ಬರುವುದು. " ಆ ಕೆಲಸ ಮಾತ್ರ ತಂದೆಗೆ.  ಅಕ್ಕ ,ರಜೆಗೆ ಅಣ್ಣಂದಿರೆಲ್ಲ ಬರುತ್ತಾರೆ ಅಜ್ಜಿ ಮನೆಗೋ, ದೊಡ್ಡಮ್ಮನ ಮನೆಗೋ ಹೋಗಬೇಕು ಎನ್ನುವ ಆಸೆ ಮುಂದಿಟ್ಟಾಗ ಅಪ್ಪ ಬಯ್ಯುತ್ತಿದ್ದರು. "ನಿನ್ನ ಸ್ಕೂಲ್ ಫೀಸ್ ಕಟ್ಟಲು ಅಜ್ಜಿ ಮನೆಯವರು ಬರುವುದಿಲ್ಲವೆಂದು.."  ಅಮ್ಮನಿಗೂ ಅಳುವ ಅಕ್ಕನ್ನು ಹೇಗೆ ಸಮಾಧಾನ ಪಡಿಸುವುದು ಎಂದು ತಿಳಿಯದೇ ಮೌನವಾಗಿರುತ್ತಿದ್ದಳು. ಅದನ್ನೆಲ್ಲ ಹತ್ತಿರದಿಂದ ನೋಡಿದ ನಾನು ಅಂತಹ ಆಸೆಗಳನ್ನು ನನ್ನಲ್ಲೆ ನುಂಗಿಕೊಳ್ಳುತ್ತಿದ್ದೆ. ಯಾರ ನೆಂಟರ ಮನೆಗೂ ಬರುವುದಿಲ್ಲ ನೀನು ಎಂಬುದು ಈಗಲೂ ನನ್ನ ಮೇಲಿರುವ ಅಪವಾದ.. ರರ ಮಕ್ಕಳ ಜೊತೆಗೆ ಆಟವಾಡಿ ರಜೆಯನ್ನು ಕಳೆಯುತ್ತಿದ್ದೆ‌ ಅಂತು ಬಿಸಿಲಿಗೆ ಕರಟಿ ಹೋಗಿ ,ಮರ ಹತ್ತಿ ಹಣ್ಣು ಕೊಯ್ದು ಮನೆ ಬಾಗಿಲಿಗೆ ತಂದು ಗುಡ್ಡೆಹಾಕುವಾಗ ಮುಖ ಕೆಂಪು ಟೊಮ್ಯಾಟೊ ಹಣ್ಣಿನಂತಾಗಿರುತ್ತಿತ್ತು. ಮೈಮಂಡೆಯೆಲ್ಲಾ ಒಂದು ರೀತಿಯ ವಾಸನೆ ಬರುವುದು. ನಮ್ಮ ಮನೆ ರಸ್ತೆ ಬದಿಗೇ ಇರುವುದರಿಂದ ಕಾರಿನಲ್ಲಿ ಹೋಗುವವರೆಲ್ಲ ಅದರಲ್ಲೂ ಕ್ರಿಸ್ತಿಯನ್ನರು ಒಮ್ಮೆ ಕಾರು  ನಿಲ್ಲಿಸಿ ತಾಜಾಹಣ್ಣು ಕೇಳಿ ತೆಗೆದುಕೊಂಡು ಹೋಗುತ್ತಿದ್ದರು.. ಆಗೆಲ್ಲ ಮನಸ್ಸಿಗೆ ಏನೋ ಒಂದು ರೀತಿಯ ಖುಷಿ ಯಾಗುತ್ತಿತ್ತು..
😍😊😃😍😊😃😍
ಇಷ್ಟಾಗಿಯೂ ಮೇ ಕೊನೆಯವರೆಗೂ ಅಮ್ಮ ಸುಮ್ಮನೇ ಇರುತ್ತಾಳೆ. ಕೊನೆಯ ಒಂದು ವಾರದ ಹಣ್ಣನ್ನೆಲ್ಲ ಒಟ್ಟುಮಾಡಿ ಆ ಒಣಗಿದ ಗೇರುಬೀಜದ ಚೀಲವನ್ನು ಆಟೋದಲ್ಲಿ ತುಂಬಿಸಿಕೊಂಡು ನಮ್ಮೂರ ದೊಡ್ಡಂಗಡಿಗೆ ಮಾರಿ , ಬಂದ ಹಣದಿಂದ ನಮಗೆ ಸ್ಕೂಲಿಗೆ ಹೋಗಲು ಒಂದು ಜೊತೆ ಬಟ್ಟೆ ಖರೀದಿಸುತ್ತಿದ್ದಳು. ಅವರು ಮೇ ತಿಂಗಳಿಗೆ ಮಾತ್ರ ಬಟ್ಟೆ ಮಾರಲು ಎಂದು ನಮ್ಮೂರಿಗೆ ಬರುವ ಮುಸ್ಲಿಂ ಅಬ್ದುಲ್ ಬಾಯ್ ಹತ್ತಿರ.  ಕಾರಣ ಅವರಲ್ಲಿ ಒಂದು ಅಂಗಿ ಖರೀದಿಸಿದರೆ ಇನ್ನೊಂದು ಉಚಿತ. ರೋಡು ಬದಿಯಲ್ಲಿಯೇ ಒಂದು ತಿಂಗಳು ವ್ಯಾಪಾರ ಮಾಡಿ ಕೊನೆಗೆ ಬೇರೆ ಊರಿಗೆ ಹೋಗುವುದು ಅವರ ವಾಡಿಕೆ.. ನಮ್ಮೂರಿನ ಅಂಗಡಿಗಳಲ್ಲಿಯೇ ಅಧಿಕ ಬೆಲೆ ಕೊಟ್ಟು ಪಡೆಯುವಷ್ಟು ಹಣ ಇರುತ್ತಿರಲಿಲ್ಲ.. ಮಿಡಿ, ಫ್ರಾಕ್ ಚೂಡಿದಾರ್ ಏನೇ ಆಗಿರಲಿ ಒಂದು ಪಡೆದರೆ ಒಂದು ಫ್ರೀ..  ಆ ಒಂದು ಜೊತೆ ಮಿಡಿ ಅಥವಾ ಫ್ರಾಕ್ನಲ್ಲೆ ಒಂದು ವರುಷ ಕಳೆಯಬೇಕಿತ್ತು... ಮಳೆಗಾಲಕ್ಕೆ ನೀರುಕಲೆ, ಸರಿಯಾಗಿ ಒಣಗಿರುವುದಿಲ್ಲ,  ವರುಷದ ನಡುವೆಯೇ ಹರಿದು ಹೋದರು ಹೊಲಿದುಕೊಂಡು ಅದನ್ನೇ ಹಾಕಿಕೊಂಡು ಹೋಗಬೇಕಿತ್ತು..
😍😃😊😍
ಈಗ ಒಂದು ಇಪ್ಪತ್ತು - ಇಪ್ಪತ್ತೈದು ವರುಷಗಳೇ ಕಳೆದಿವೆ.  ಆಯಸ್ಸು ಮುಗಿದು ಸತ್ತು ಹೋದವು, ರೋಗಬಾಧೆಗೆ ಒಳಪಟ್ಟವು,  ಕೆಲವನ್ನು ಕಡಿದುಹಾಕಿದರು ಹೀಗೆ ಗೇರುಮರಗಳು ಒಂದೋ-ಎರಡೋ ಬೆರಳೆಣಿಕೆಯಷ್ಟು ಉಳಿದಿವೆ...
ಕೆಲವು ಕಷ್ಟಗಳನ್ನೆಲ್ಲ ಹತ್ತಿರದಿಂದ ನೋಡಿ, ಅನುಭವಿಸಿ , ಬೆಳೆದು ಬಂದ ನಾವು, ಆದರೆ ನಮ್ಮ ತಂಗಿ ಅದೆಲ್ಲದರ ಗೋಜಿಗೆ ಇಲ್ಲ.. ಕಾರಣ ಆ ಕಷ್ಟ ಈಗಿಲ್ಲ..
- ಸಿಂಧು ಭಾರ್ಗವ್ .