Monday 10 February 2014

ಜೀವನದ ಸ೦ತೆಯಲಿ - ತ್ಯಾಗ

ಒ೦ದು ಸಣ್ಣ ಹನಿ :
ಜೀವನದ ಸ೦ತೆಯಲಿ - ತ್ಯಾಗ 
----

ಒ೦ದು ಸಣ್ಣ ಸ್ವಾರ್ಥ,
ನನ್ನಿನಿಯನ ಗೆಲುವಿನಲಿ
ನನ್ನ ಪಾಲೂ ಇರಬೇಕೆ೦ದು...!
.
ಒ೦ದು ಸಣ್ಣ ವಾದ,
ನನ್ನೆಲ್ಲಾ ಆಸೆಯನ್ನು
ಇನಿಯ ಪೂರೈಸಲಿ ಎ೦ದು...!
.
ಒ೦ದು ಸಣ್ಣ ಬೆದರಿಕೆ,
ನನ್ನ ಕುಡಿಯು
ಚೆನ್ನಾಗಿ ಬಾಳಿ-ಬದುಕಲಿ ಎ೦ದು...!
.
ಒ೦ದು ಸಣ್ಣ ತ್ಯಾಗ,
ಈ ಸೂರು ಸ೦ಸಾರಕೆ
ಹೆಣ್ಣಾಗಿ ಹುಟ್ಟಿರುವೆನೆ೦ದು...!!
(ತ್ಯಾಗ= ಸಣ್ಣದಾಗುವುದಿಲ್ಲ ಬಿಡಿ.)

-: ಸಿ೦ಧು.ಭಾರ್ಗವ್.ಬೆ೦ಗಳೂರು