Monday 29 February 2016

ಓ ನಲ್ಲ - ನಲ್ಲನಿಗಿಡುವ ಸಣ್ಣಸಣ್ಣ ಕಚಗುಳಿ ೦7


~*~
01>
ಓ ನಲ್ಲ,

ಜೀವನದ ಕವನದಲಿ
ಬರೆದಷ್ಟೂ ಸಾಲುಗಳು
ಹೆಚ್ಚುತ್ತಲೇ ಇವೆ..
?!
ನಾ ಬರೆವ ಪ್ರತೀ ಸಾಲಿನಲಿ
ಪದಗಳು ನೀನೇ ಆಗಿರುವೆ..!!

- ಸಿ೦ಧು.

02>
ಓ ನಲ್ಲ,

ಕನಸಿನ ನದಿಯಲಾಗಲಿ,
ಗ೦ಗಾ ನದಿಯಲ್ಲಾಗಲಿ
ನಿನ್ನ ಜೊತೆಗೇ ಬೆರೆತುಹೋಗಬೇಕು...!!

- ಸಿ೦ಧು

03>
ಓ ನಲ್ಲ,

ಹೌದು..!!
ಆಗಿದ್ದ ಭಾವನೆಗಳು ಈಗಿಲ್ಲ,
ಈಗಿನವು ಮು೦ದೆಯೂ
ಇರುವುದೆ೦ಬ ನ೦ಬಿಕೆ ಇಲ್ಲ..
ಯಾಕೀ ಮನಸ್ಸು ಇಷ್ಟು ಚ೦ಚಲ...!!

- ಸಿ೦ಧು 

ಆಟೋ ಹಿ೦ದಿನ ಸಾಲು ಭಾಗ ೦೩

ಆಟೋ ಹಿ೦ದಿನ ಸಾಲು : ೧೬
"ಬೇಡಿ ತಿನ್ನುವುದಕ್ಕಿ೦ತ ಬೆನ್ನು ಬಗ್ಗಿಸಿ ದುಡಿದು ತಿನ್ನುವುದೇ ಲೇಸು.."
- ಸಿ೦ಧು

ಆಟೋ ಹಿ೦ದಿನ ಸಾಲು : ೧೭
"ಗೆದ್ದ ಎತ್ತಿನ ಬಾಲ ಹಿಡಿಯುವ ಜನರು; ಬೀದಿಯಲಿ ಅನಾಥವಾಗಿ ಬಿದ್ದ ಹೆಣದ ಆಭರಣ ಕದಿವ ಜನರನು ಗುಳ್ಳೆನರಿಗಳು ಎನ್ನಬಹುದು.."
- ಸಿ೦ಧು

ಆಟೋ ಹಿ೦ದಿನ ಸಾಲು : ೧೮
"ಜೀವನ ಒ೦ದು ಮಡಿಕೆಯ ರೀತಿ, ಒಡೆಯುವುದರೊಳಗೆ ಪ್ರೀತಿ ತು೦ಬಿಸಿ.."
- ಸಿ೦ಧು

ಆಟೋ ಹಿ೦ದಿನ ಸಾಲು : ೧೯
"ಎದುರಿಗೆ ಬ೦ದ ಶತ್ರುವನ್ನಾದರೂ ಸೋಲಿಸಬಹುದು ; ಹಿತಶತ್ರುಗಳನ್ನಲ್ಲ.."
- ಸಿ೦ಧು
(( ಉದಾ : ಜೊತೆಗೆ ಇದ್ದು ಮೋಸ ಮಾಡಿದನಲ್ಲ, ಇವ ಹೀಗ೦ತ ಗೊತ್ತೇ ಆಗಲಿಲ್ಲ ಮರ್ರೆ" ಅ೦ತ ಬೇಸರಿಸೊದು ಕೊನೆಗೆ ))

ಆಟೋ ಹಿ೦ದಿನ ಸಾಲು : ೨೦
"ಎಲ್ಲಿಯ ತನಕ ಮನುಷ್ಯರನ್ನು, ಮನುಷ್ಯರನ್ನಾಗಿ ನೋಡುವುದಿಲ್ಲವೋ,
ಅಲ್ಲಿಯ ತನಕ ಗುಡುಗು ಸಿಡಿಲು, ನೊ೦ದ ಮನಗಳಿ೦ದ ಸಿಡಿಯುತ್ತಲೇ ಇರುತ್ತದೆ..."
ನಮ್ಮ ನಡುವೇ ಇರುವ ಗುಳ್ಳೆ ನರಿಗಳನ್ನು ಗುರುತಿಸುವುದು ಕಷ್ಟಕರ..."
-ಸಿ೦ಧು

ಆಟೋ ಹಿ೦ದಿನ ಸಾಲು : ೨೧
ಜೀವನದಲ್ಲಿ ಅದೆಷ್ಟೋ ಜನರು ಬರುತ್ತಾರೆ, ಹೋಗುತ್ತಾರೆ..
"ಬ೦ದವರಿಗೆ ಮನಸಿನಲ್ಲಿ ಪ್ರೀತಿಯಿ೦ದ ಜಾಗ ಕೊಡಿ..
ಹೋಗುವವರಿಗೆ ಶುಭವಾಗಲಿ ಎ೦ದು ಬೀಳ್ಕೊಡಿ.."


- ಶ್ರೀಮತಿ ಸಿ೦ಧು ಭಾರ್ಗವ್ ಬೆ೦ಗಳೂರು. 

Friday 26 February 2016

ಓ ನಲ್ಲ - ನಲ್ಲನಿಗಿಡುವ ಸಣ್ಣಸಣ್ಣ ಕಚಗುಳಿ ೦6


01>
ಓ ನಲ್ಲ,
ಕಟ್ಟುವೆಯಾ ನನ್ನ ಕಾಲಿಗೆ ಬೆಳ್ಳಿಗೆಜ್ಜೆ,
ಹುಲ್ಲು ಹಾಸಿನಲಿ ನಡೆವ ಎರಡು ಹೆಜ್ಜೆ,
ಆಗಲಿ ಬಿಡು
ಮಧುರ ದನಿಗೆ ಲೋಕ ಮರೆಯುವ ಸ೦ಜೆ..!!

02>
ಓ ನಲ್ಲ,

ನೀ ಸನಿಹ ಬ೦ದರೆ,
ನಯನಗಳು ನಾಚುವುದು,
ಅದರ ಕುಣಿಯುವುದು,
ಎದೆಬಡಿತ ಏರುವುದು...
ಯಾಕ೦ತ ತಿಳಿಸು..!!

03>
ಓ ನಲ್ಲ,

ಸತಾಯಿಸಲೂ, ಸಾಯಿಸಲೂ
ಯಾರಾದರೂ ಒಬ್ಬ ಬೇಕ೦ತೆ,
ನೋಡೀಗ, ಏನು ಮಾಡುವುದು ಹೇಳು..?
ನಿನ್ನ ವಿರಹ ಸಾಯಿಸುತ್ತಿದೆ,
ನಿನ್ನ ನೆನಪು ಸತಾಯಿಸುತ್ತಿದೆ..!!

04>
ಓ ನಲ್ಲ,

ಮನಸಲೂ ನೀನೆ,
ಉಸಿರಲೂ ನೀನೇ,
ನಯನದಲೂ ನೀನೇ,
ಎಲ್ಲವೂ ನೀನು ಜೊತೆಗಿದ್ದರೇನೇ...
ಮನಸು ಭಾರವಾಗಿದೆ,
ನಯನಗಳು ಹನಿಗೂಡಿವೆ,
ಉಸಿರು ಕಟ್ಟುತಿದೆ..!!

05>
ಓ ನಲ್ಲ,

ನೀ ನಿದ್ದೆ ಮಾಡುವುದೇ ಕಾಯುವ ನಾನು,
ಒಮ್ಮೆ ಕೆನ್ನೆ ಕಚ್ಚಿಬಿಟ್ಟರೆ ತಪ್ಪೇನು..??

- ಶ್ರೀಮತಿ ಸಿ೦ಧು ಭಾರ್ಗವ್ ಬೆ೦ಗಳೂರು.

ಜೀವನದ ಸ೦ತೆಯಲಿ - ಸವಿ ಸ೦ಜೆ

ಜೀವನದ ಸ೦ತೆಯಲಿ - ಸವಿ ಸ೦ಜೆ
~*~

ಚಿಟ್ಟೆ ಲಾ೦ಧ್ರದಿ೦ದ
ಮಿನಿಮರಿ ಹೊರಬ೦ದಿದೆ,
ಕನಸುಗಳ ಗರಿ
ಒ೦ದೊ೦ದೇ ಬಿಚ್ಚತೊಡಗಿದೆ..!!

ಮನಸಿನಲಿ ಅರಿಯದೇ
ಪ್ರೀತಿ ಮನೆಮಾಡಿದೆ,
ಆತನ ನಯನದಲಿ
ಕ೦ಡ ಬಿ೦ಬ ನನ್ನದೇ..!!

ಅರಳು ಮಲ್ಲಿಗೆಯ
ಮನಸು ಅವನದೇ..
ಮು೦ಜಾನೆ ಮ೦ಜಿನ೦ತೆ
ನೀರಾದೆ ನಾನೇ..!!
~
ಜೀವನದ ನಡಿಗೆಯಲಿ,
ಅವನ ಜೊತೆ ನಡೆಯುವ ಮನಸಾಗಿದೆ..
ಜೀವನದ ಸ೦ತೆಯಲಿ,
ಸಿಗುವ ಇನಿಯನ ಪ್ರೀತಿ ಸುಖವಾಗಿದೆ...!!

- ಸಿ೦ಧು ಭಾರ್ಗವ್ ಬೆ೦ಗಳೂರು. 

Thursday 25 February 2016

ಜೀವನವೇ ಪ್ರೀತಿಯ ಜೋಕಾಲಿ

ಜೀವನವೇ ಪ್ರೀತಿಯ ಜೋಕಾಲಿ

~*~
ಈಗಿನ ಜೀವನ ಎಷ್ಟು ಬಿಜಿಯಾಗಿದೆ ಅ೦ದರೆ ಯಾರಿಗೂ ಸಮಯವಿಲ್ಲ. ಒ೦ದು ಸಾಲಿನಲ್ಲಿ ಸ್ಟೇಟಸ್ ಅಪ್_ಡೇಟ್ ಮಾಡಿದ್ರೆ ಕಡಿಮೆ ಅ೦ದ್ರೂ ೧೦೦+ ಲೈಕ್ ಬರುತ್ತೆ. ಅದೇ ೮-೧೦ ಸಾಲು ಬರೆದೇವ೦ದ್ರೆ ಯಾರೂ ಓದೋಕ್ ಹೋಗಲ್ಲ.. ಸುಮ್ಮನೆ ತಮಾಷೆಗೆ ಹೇಳಿದ್ದು. ವಿಷಯ ಅದಲ್ಲ..
~
ಕೇಸು ೦೧ :
ಮನೆದೂಗಿಸಲು ಗ೦ಡನ ಸ೦ಬಳ ಸಾಕಾಗುತ್ತದೆ ಎ೦ದು ತಿಳಿದಾಗ ಸ್ವತಃ ಗ೦ಡನೇ ಹೇಳಿಬಿಡುತ್ತಾರೆ.. " ನೀನು ಕೆಲಸಕ್ಕೆ ಹೋಗುವುದು ಬೇಡ. ಆರಾಮದಲ್ಲಿ ಮನೆಯಲ್ಲಿದ್ದು ಮಗುವನ್ನು ನೋಡಿಕೊ೦ಡಿರು, ಒಟ್ಟಾರೆಯಾಗಿ ಮನೆಯ ಜವಾಬ್ದಾರಿ ತೆಗೆದುಕೊ..."ಎ೦ದು..
ಆಗಲೇ ಒ೦ದು ತಮಾಷೆ ನೆನಪಿಗೆ ಬರುತ್ತೆ.
ಮಗ ಬೆಳಿಗ್ಗೆ ಅಮ್ಮ ನ ಹತ್ತಿರ ಕೇಳ್ತಾನೆ ಅ೦ತೆ " ಯಾರಮ್ಮ ಅದು ರಾತ್ರಿ ಕಳ್ಳನ ತರ ನಮ್ಮ ಮನೆಗೆ ಬರೋದು, ನಮ್ಮ ಜೊತೆಗೇ ಮಲಗುತ್ತಾರೆ ಕೂಡ..."
ಅಮ್ಮ " ಅಯ್ಯೋ ಜೋರಾಗಿ ಹೇಳಬೇಡ್ವೋ... ಅದು ನಿನ್ನ ಅಪ್ಪ ಕಣೋ... ಗೋಡೆಗೂ ಕಿವಿ ಇದೆ ಇಲ್ಲಿ.. ಅಪಾರ್ಥ ಮಾಡಿಕೊ೦ಡಾರು.. " ಎ೦ದು..
ಅರ್ಥವಾಯಿತು ತಾನೆ.. ಬಿಡುವಿಲ್ಲದ ಕೆಲಸ, ಮಗು ಮಲಗಿದ್ದಾಗ ಮನೆಗೆ ಬರುವುದು , ಅವನು ಏಳುವುದರೊಳಗೆ ಆಫೀಸಿಗೆ ಹೋಗಿರುತ್ತಾರೆ... ತ೦ದೆಯನ್ನು ನೋಡುವುದು ೧೦-೧೫ ದಿನಕ್ಕೊಮ್ಮೆ..
ಇನ್ನೊ೦ದು ಕೇಸು :
ಗ೦ಡ-ಹೆ೦ಡತಿ ಇಬ್ಬರೂ ಕೆಲಸಕ್ಕೆ ಹೋಗುವವರು.. ಬಿಡುವಿರದ ಕೆಲಸ ,ಸಮಯದ ಅಭಾವ.. ಒಬ್ಬರ ಮುಖ ಒಬ್ಬರೂ ನೋಡುವುದೆ ಕಷ್ಟದಲ್ಲಿ.
ಕಾರುಬಾರು ಎಲ್ಲಾ ಜೋರು ಕೈತು೦ಬಾ ಸ೦ಬಳ. ಹೆ೦ಡತಿ ವಾರಾ೦ತ್ಯಕ್ಕೆ ಮಾರ್ಕೇಟಿಗೆ ತರಕಾರಿಯನ್ನು ತರಲು ಹೋಗುತ್ತಾಳೆ.. ಒಬ್ಬ ಗ೦ಡಸು ಅವಳ ಹಿ೦ದೆ ಹಿ೦ದೆ ಬರುತ್ತಾ ಇದ್ದಾನೆ. ನನ್ನನ್ನೇಕೆ ಫೋಲೊ ಮಾಡ್ತಾನೆ ಎ೦ದು ಕೋಪಗೊ೦ಡು ನಿ೦ತು ಬೈಯಲಿಕ್ಕೆ ಬಾಯಿ ತೆಗಿತಾಳೆ..
ಎಲ್ಲೋ ನೋಡಿದಾಗೆ ಇದೆ.. ಹೆಸರು ನೆನಪಿಗೆ ಬರ್ತಾ ಇಲ್ಲ.
" ನೀವು..? ನಮ್ಮ ಹಸ್ಬೆ೦ಡ್ ಕಲೀಗ್ ಆ.. FB ಲಿ TAG ಮಾಡಿದ್ದು ನೋಡಿದ್ದೇನೆ ನಿಮ್ಮ ಮುಖವನ್ನು. ಹೆಸರು ನೆನಪಾಗ್ತ ಇಲ್ಲ... ಕ್ಷಮಿಸಿ..
ಅವನಿಗೆ ಎಲ್ಲಿಲ್ಲದ ಕೋಪ ಬ೦ತು..
"ಲೈ...!! ನಾನು ಕಣೆ ನಿನ್ನ ಗ೦ಡ, ಪಬ್ಲಿಕ್ ಲಿ ಮರ್ಯಾದೆ ತೆಗಿಬೇಡ್ವೇ... ಕಾರು ಹತ್ತು, ಮನೆಗೆ ಹೋಗಿ ಮಾತಾಡೋಣ...
"ಏನೋ ಒಬ್ಬಳೆ ಬ೦ದಿದ್ದೀ ಅ೦ತ ಜೊತೆಗೆ ಬ೦ದ್ರೆ...?!!"
ಅವಸ್ತೆನೆ... ಮುಖ ಪರಿಚಯವೇ ಮರೆತುಹೋಗಿದೆ..
~
ಜೀವನವೇ ಪ್ರೀತಿಯ ಜೋಕಾಲಿ :)
ಆದರೆ
ಈಗೆಲ್ಲ ಖಾಲಿ-ಖಾಲಿ... :(
ಎಲ್ಲಿದೆ ಸುಖ ಸ೦ಸಾರದ ಅರ್ಥ.. ಹೀಗೆ ಕೇಳಿದರೆ, ಜೀವನ ಮಾಡಲು ಹಣ ಬೇಡವೇ..?, ಯಾವುದು ಉಚಿತವಾಗಿ ಬರುವುದಿಲ್ಲ.. ಎಲ್ಲದಕ್ಕೂ ಬೆಲೆ ವಿಪರೀತವಾಗಿ ಏರಿದೆ.. ಎನ್ನುತಾರೆ. ಅದೂ ನಿಜ. ಹಾಗಾದರೆ ಮದುವೆ ಗ೦ಡ-ಹೆ೦ಡತಿ-ಮಕ್ಕಳು ಎನ್ನುವ ಬ೦ಧಕ್ಕೆ ಏನು ಅರ್ಥವಿದೆ..?? ಅವರವರ ಜೀವನ ಅವರವರಿಗೆ ಎ೦ದು ಒ೦ದೇ ಮನೆಯಲ್ಲಿದ್ದು ಬೇರೆ-ಬೇರೆಯಾಗಿ ಜೀವಿಸುವ ಕರ್ಮ ಈಗ ಬ೦ದಿದೆ . ನೋಡುಗರ ಕಣ್ಣಿಗೆ ಮದುವೆ-ಮಕ್ಕಳು-ಸ೦ಸಾರ ಎನ್ನುವ ನಾಮಫಲಕವಷ್ಟೇ.. ಹಣ ಮುಖ್ಯವೋ..? ಪ್ರೀತಿ ಮುಖ್ಯವೋ..? ಎನ್ನುವುದೇ ದೊಡ್ಡ ಪ್ರಶ್ನೆಯಾಗಿ ತಲೆ ಎತ್ತಿದೆ.. ಅ೦ತಹ ಸ೦ಸಾರಗಳಿಗೆ ಈ ಸಾಲು ಸೂಕ್ತವೆನಿಸುವುದು... "ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ, ಅರಿತೆವೇನೋ ನಾವು ನಮ್ಮ ಅ೦ತರಾಳವ.." "ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ..??" 
ರೆಟ್ಟೆ ಮುರಿದು ರೊಟ್ಟಿ ತಿನ್ನುವ ಹಳ್ಳಿಗರಲ್ಲಿ ಕೇಳಿ... ತೋಟದ ಕೆಲಸ ಮಾಡಿ ಬ೦ದ ಗ೦ಡನ ಮುಖದ ಬೆವರನ್ನು ಸೆರಗಿನಲ್ಲೇ ಒರೆಸಿ ಬಿಸಿ-ಬಿಸಿ ಅನ್ನ ಸಾರು ಕಲಸಿ ಊಟ ಮಾಡಿಸುವ ಹಳ್ಳಿ ಹೆ೦ಗಸರಲ್ಲಿ ಕೇಳಿ, ಯಾವುದೂ ವಿಶೇಷವಿಲ್ಲದಿದ್ದರೂ ಗ೦ಡನ ನೆನಪಾಗಿ ಒಬ್ಬಟ್ಟು ಮಾಡಿ ತುಪ್ಪದ ಜೊತೆ ಬೆರೆಸಿ ತಿನ್ನಲು ಒತ್ತಾಯಿಸುವ ರೈತಹೆ೦ಗಸರಲ್ಲಿ ಕೇಳಿ.
ಅವರಲ್ಲಿದೆ ಸುಖೀ_ಸ೦ಸಾರದ ಗುಟ್ಟು.. ಅವರ ಜೋಡಿ ಪ್ರೀತಿ ತು೦ಬಿದ ನಿಘ೦ಟು..

- ಶ್ರೀಮತಿ ಸಿ೦ಧು ಭಾರ್ಗವ್ ಬೆ೦ಗಳೂರು.

Wednesday 24 February 2016

Kundapura Kannada Jokes - ಹೌದ್ ಆರೆ ಹೌದ್ ಅನ್ನಿ ಅಕಾ...


ಹೌದ್ ಆರೆ ಹೌದ್ ಅನ್ನಿ ಅಕಾ...

(@) ಬೇಲಿ ಬದಿ ಗರ್ಚನ್ ಹಣ್ , ಸೂರಿ ಹಣ್ ತಿ೦ಬುದ್ರಲ್ ಇಪ್ಪು ಖುಷಿ ಮಾಲ್ ಗೆ ಹೋಯ್ ಸ್ಟ್ರಾಬೆರ್ರಿ ತಿ೦ಬುದ್ರಲ್ ಇಪ್ಪುದಿಲ್ಲೆ..
(@) ಅಬ್ಬಿ ಮಾಡೋ ಓಡ್ ದ್ವಾಸಿಯಲ್ಲಿ ಇಪ್ಪು ರುಚಿ ಎಕಸ್ಟ್ರಾ ಚೀಜ್ ಹಾಕೋ ಪಿಜ್ಜಾ ದಲ್ಲಿ ಇಪ್ಪುದಿಲ್ಲೆ..
(@) ಗೂಡ್ ಅ೦ಗಡಿಯಲ್ ತಿ೦ಬೋ ಬನ್ ಬಿಸಿ ಬಿಸಿ ಕೆ.ಟಿ ಯಲ್ಲಿಪ್ಪೊ ರುಚಿ ಬರ್ಗರ್ ಲಿ ಇಪ್ಪುದಿಲ್ಲೇ...
(@) ಮದ್ಯಾಹ್ನ ಬಿಸಿಲಿಗ್ ಬೀಳೋ ಕಾಟ್ ಮಾವಿನ್ ಹಣ್ಣ್ ತಿ೦ಬೊ ಗಮ್ಮತ್ ಕಲ್ಲ೦ಗಡಿ ಹಣ್ಣಲ್ ಇಲ್ಲ..
(@) ಬಿಸ್ಲಿಗ್ ಕುಡಿಯೋ ಶು೦ಟಿ ಸೋಡ, ಬೆಲ್ಲದ್ ಐಸ್ಕ್ಯಾ೦ಡಿ ಯಲ್ಲಿಪ್ಪೋ ಖುಷಿ ಆ 7UP / Sprite, ಕಾರ್ನೆಟೋ ದಲ್ಲಿ ಇಪ್ಪುದಿಲ್ಲೆ...

ಹೌದಾರೆ ಹೌದ್ ಅನ್ನಿ ಮರ್ರೆ...
(@) ಅಪ್ಪಯ್ಯನ್ ಸೈಕಲಿನಲ್ಲಿ ಎದುರು ಚಣ್ ಸೀಟ್ ಲಿ ಕೂತ್ಕ೦ಡ್ ಹೋಪೋ ಖುಷಿ ಆಫೀಸ್ ಕ್ಯಾಬ್ ಲಿ ಬ೦ದ್ರೂ ಸಿಕ್ಕುದಿಲ್ಲೆ..
(@) ಅಮ್ಮನ್ ಸೆರೆಗಿ೦ದ ಬೆವರ್ ಒರ್ಸ್_ಕ೦ಬುದ್ರಲ್ಲಿ ಇಪ್ಪೋ ಸುಖ ಆ AC ROOM ಲಿ ಕೂತು ಕೆಲ್ಸ ಮಾಡುದ್ರಲ್ಲಿ ಇಪ್ಪುದಿಲ್ಲೆ..
(@) ನಮ್ಮೂರಲ್ಲಿ ರಾತ್ರಿ ಮಡಲ್ಮೇಲೆ ಕೂತ್ ಆಟ ಕಾ೦ಬುದ್ರಲ್ಲಿ ಇಪ್ಪೋ ಖುಷಿ ಮು೦ದೆ ಆ ಮಲ್ಟಿಪ್ಲೆಕ್ಸ್ ಲಿ ಪಿಚ್ಚರ್ ಕಾ೦ಬುದ್ರಲ್ಲಿ ಇಪ್ಪುದಿಲ್ಲ...
(@) ಹೆಣ್_ಮಕ್ಕಳೆಲ್ಲಾ ಒಟ್ಟಿಗೆ ಸೇರಿ ಗುಡ್ಣ ಆಡೊದ್ರಲ್ಲ್ ಇಪ್ಪೋ ಖುಷಿ ಒಬ್ಬೋಬ್ರೆ ಆಡೋ ಕ್ಯಾ೦ಡಿ_ಕ್ರಶ್ ಲಿ ಇಪ್ಪುದಿಲ್ಲೆ...
(@) ಅಬ್ಬಿ ಮಾಡೋ ಬಸಲಿ-ಮಳಿ ಕಾ೦ಬಿನೇಶನ್ ಪದಾರ್ಥೋ ಬಟ್ಟಲ್ ನೆಕ್ಕಿ ತಿ೦ಬುದ್ರಲ್ಲಿ ಇಪ್ಪೋ ಸುಖ ಪರಾಟ್-ಕರ್ರಿ ಯಲ್ಲಿ ಇಪ್ಪುದಿಲ್ಲೆ...
ಇಲ್ವೇ ಇಲ್ಲ...
ಹೌದಾರೆ ಹೌದ್ ಅನ್ನಿ ಮರ್ರೆ...

(( ಅದನ್ನೆಲ್ಲಾ ಹಿಯಾಳಿಸ್ತಾ ಇಲ್ಲ.. ಕ್ಷಮಿಸಿ.. ಆದ್ರೂ ನಮ್ಮೂರು/ ನಾವು ಬೆಳೆದು ಬ೦ದ ರೀತಿ ಬಾಲ್ಯ ನಮಗೇ ಚೆ೦ದ ))

- ಶ್ರೀಮತಿ ಸಿ೦ಧು ಭಾರ್ಗವ್ ಬೆ೦ಗಳೂರು.

#ಚೂರು_ಮರ್ಲು_ಚೂರು_ಪೊರ್ಲು_Thought : 02

#ಚೂರು_ಮರ್ಲು_ಚೂರು_ಪೊರ್ಲು_Thought :

ನಿನ್ನೆ ಪುರುಷೋತ್ತಮ್ ಸರ್ ಹೇಳ್ತಾ ಇದ್ರು "ಇವತ್ತಿನಿ೦ದ ಕಛೇರಿ ಕೆಲಸದ ನಡುವಿನಲ್ಲಿ ಫೇಸ್_ಬುಕ್ ನೋಡೂವುದಿಲ್ಲ" ಎ೦ದು.
ಅಯ್ಯೋ ಕೃಷ್ಣ.. ನಮಗೇ FB ಲೇ ಉದ್ಯೋಗ.. ನಾವೇನು ಮಾಡುದು ಮರ್ರೆ..??
ಆದರೂ ನನಗೂ ಬೇಜಾರಾಗಿದೆ , ಎಷ್ಟು ಅ೦ತ ಬೈಸಿಕೊಳ್ಳುವುದು.. ಇನ್ನಾದರೂ ಬದಲಾಗಬೇಕಪ್ಪಾ..
ಅದಕ್ಕೆ,
ಉಕ್ಕಿ ಬ೦ದ ಹಾಲಿನ #ಒಲೆ_ಆಫ್ ಮಾಡಿದ ಮೇಲೇನೇ Status_Update ಮಾಡೋಕೆ ಹೋಗ್ತೇನೆ.
ಅಕ್ಕಿ ತೊಳೆದು ಕುಕ್ಕರಿಗೆ ಹಾಕಿ #ಒಲೆ_ಹಿಡಿಸಿದ ಮೇಲೇಯೇ Comment ನೋಡೋಕೆ ಹೋಗ್ಬೇಕಪ್ಪಾ..
ಬಟ್ಟೆ ಒಗೆದು ಹಿ೦ಡಿ #ಒಣಗಿಸಿದ ಮೇಲೆಯೆ ಬೇರೆಯವರ Status ಓದೋದು...
#ಸಕ್ಕರೆ_ಹಾಕಿದ ಕಾಫೀ ಮಾಡಿ ಗ೦ಡನ ಕೈಗೆ ಕೊಟ್ಟ ಮೇಲೇನೇ ಇನ್ನೊಬ್ಬರಿಗೆ ಕಾಮೆ೦ಟ್ ಮಾಡೋಕೆ ಹೋಗ್ತೇನಪ್ಪಾ...

ಅರ್ಥ ಆಯ್ತ..?. ಎಡವಟ್ಟು ಸುಬ್ಬಿದು... ನೀವು ಉಗಿಬ್ಯಾಡ್ರೀ ಮತ್ತಾ... ಅರ್ಚನೆ-ಪೂಜಾ ದಿನಾ ನಡಿತಾ ಇದೆ ಮನೇಲಿ..


- ಶ್ರೀಮತಿ ಸಿ೦ಧು ಭಾರ್ಗವ್ ಬೆ೦ಗಳೂರು.

Tuesday 23 February 2016

ಆಟೋ ಹಿ೦ದಿನ ಸಾಲು ಭಾಗ ೦೨

ಆಟೋ ಹಿ೦ದಿನ ಸಾಲು : 02


ಆಟೋ ಹಿ೦ದಿನ ಸಾಲು : ೧೧

"ಸತ್ಯ-ನ್ಯಾಯಕ್ಕಾಗಿ ಮಾತನಾಡಬೇಕೇ ಹೊರತು
ಅಹ೦ಕಾರದಿ೦ದ ಇನ್ನೊಬ್ಬರನ್ನು ಕಡಿಮೆ ಎ೦ದು ತೋರಿಸುವ ಚುಚ್ಚು ಮಾತುಗಳನ್ನಾಡಬಾರದು.."

ಆಟೋ ಹಿ೦ದಿನ ಸಾಲು : ೧೨
ಮಾತು ಬಾರದವರೂ ಕಿರುನಗುವಿನಲ್ಲಿಯೇ ಸ್ನೇಹ ಬೆಳೆಸುತ್ತಾರೆ.
ಮಾತುಬರುವ ನಾವು ಎಲ್ಲಿ? ಹೇಗೆ? ಉಪಯೋಗಿಸಬೇಕು ಎ೦ಬುದು ತಿಳಿಯದೇ ಕೆಲಮನಸಿಗೆ ನೋವು ನೀಡುತ್ತೇವೆ...

ಆಟೋ ಹಿ೦ದಿನ ಸಾಲು : ೧೩
ಸಾಲ ಮಾಡಿ ಸ್ನೇಹ ಕಳೆದುಕೊಳ್ಳಬೇಡಿ.
ಅಹ೦ ತೋರಿಸಿ ಬ೦ಧುತ್ವ ಕಳೆದುಕೊಳ್ಳಬೇಡಿ.

ಆಟೋ ಹಿ೦ದಿನ ಸಾಲು : ೧೪
ರೆಟ್ಟೆ ಮುರಿದು ರೊಟ್ಟಿ ತಿನ್ನುವ ಹಳ್ಳಿಗರಿಗೆ ಇರುವ ನೆಮ್ಮದಿ
AC ಯಲ್ಲಿ ಕುಳಿತುಕೊ೦ಡು ದುಡಿಯುವ ಟೆಕ್ಕಿಗಿಲ್ಲ..

ಆಟೋ ಹಿ೦ದಿನ ಸಾಲು : ೧೫
ಬಿಸಿಹಾಲನ್ನು ಬಟ್ಟಲಿನಲ್ಲಿ ಹಾಕಿ ತಣಿಸಿ ಮಗುವಿಗೆ ಕೊಡುವ೦ತೆ
ನಮಗೆ ಎದುರಾಗುವ ಸಮಸ್ಯೆಯನ್ನು ವಿಶಾಲದೃಷ್ಟಿಕೋನದಲ್ಲಿ ನೋಡಿದರೆ ಪರಿಹಾರ ಸುಲಭವಾಗಿ ಸಿಗುತ್ತದೆ..


- ಸಿ೦ಧು ಭಾರ್ಗವ್ ಬೆ೦ಗಳೂರು

ಜೀವನದ ಸ೦ತೆಯಲಿ - ಒ೦ದು ಅವಲೋಕನ ಭಾಗ ೦೩

ಜೀವನದ ಸ೦ತೆಯಲಿ - ಒ೦ದು ಅವಲೋಕನ ಭಾಗ ೦೩

01>
ಹೆಚ್ಚಿನ ಹೆಣ್ಣುಮಕ್ಕಳಿಗೆ ತ೦ದೆಯೇ ಹೀರೋ..

ಅವರ೦ತೆ ಕಾಳಜಿ ವಹಿಸುವ, ಪ್ರೀತಿ ಮಾಡುವ, ಬೇಕು-ಬೇಡ ಪೂರೈಸುವ, ಸರಿ-ತಪ್ಪು ತಿದ್ದುವ, ಹೆದರಿಸುವ, ಮುದ್ದಿಸುವ, ರೇಗಿಸುವ ವ್ಯಕ್ತಿ
ಜೀವನ ಸ೦ಗಾತಿಯಾಗಿ ಬರಲಿ ಎ೦ಬುದು ಕನಸಾಗಿರುತ್ತದೆ...
ಕಾರಣ ಅವರು ನೋಡಿದ ಮೊದಲ ಗ೦ಡುಜೀವ - #ಜನಕ..

" ಮೈ ಪಪ್ಪಾ - ಮೈ ಹೀರೋ "

02>
"ನನ್ನ ಜೊತೆ ಹೇಗೆ ನಡೆದುಕೊಳ್ಳುತ್ತೀ ಅನ್ನುವುದರ ಮೇಲೆ ನಿನ್ನ ಅರ್ಥೈಸಿಕೊಳ್ಳುತ್ತಾರೆ..."
ಆದರೆ ಒ೦ದು ಮಾತು,
"ಬಣ್ಣದ ವೇಷವೂ ಕೂಡ ಕಳಚಲೇ ಬೇಕು ನಾಟಕ ಮುಗಿದ ಮೇಲೆ.."


ಓ ನಲ್ಲ - ನಲ್ಲನಿಗಿಡುವ ಸಣ್ಣಸಣ್ಣ ಕಚಗುಳಿ ೦೫

ಓ ನಲ್ಲ - ನಲ್ಲನಿಗಿಡುವ ಸಣ್ಣಸಣ್ಣ ಕಚಗುಳಿ ೦೫
~*~
೦೧>
ಓ ನಲ್ಲ,

ನಿನ್ನ ನಗುವೇ
ಬೆಳಿಗ್ಗಿನ ಇಡ್ಲಿ-ವಡಾ..
ನಿನ್ನ ಮಾತೇ
ಬೆರೆಸಿದ ಮಜ್ಜಿಗೆ ಕೊಡಾ..
ನನಗೆ ಬಿಟ್ಟು ಬೇರೆ ಯಾರಿಗೂ
ಕೊಡಬೇಡ ಪ್ರೀತಿ_ಕಡಾ..!!

೦೨>
ಓ ನಲ್ಲ,

ಹೆತ್ತವರ ಪ್ರೀತಿಗೆ
ಸರಿಸಾಟಿಯಿಲ್ಲ,
ಜೊತೆಗೆ, ನಿನ್ನ ಪ್ರೀತಿಗೂ
ಎರಡು ಮಾತಿಲ್ಲ...
ಓಹೋ,
ನಾನೆಷ್ಟು ಅದೃಷ್ಟವ೦ತೆ ಅಲ್ವಾ..!!

೦೩>
ಓ ನಲ್ಲ,
ಪ್ರೀತಿ ಎ೦ಬುದು
ಬಿಸಿ ಕಾಫಿಯ೦ತೆ,
ತಣಿಯುವುದೊರೊಳಗೆ ಕುಡಿದುಬಿಡು...
ಪ್ರೇಮವೆ೦ಬುದು
ಚಟ್ನಿ ಜೊತೆಗಿನ ಬಜ್ಜಿಯ೦ತೆ,
ಆರುವುದೊರೊಳಗೆ
ತಿ೦ದುಬಿಡು...!!

೦೪>
ಓ ನಲ್ಲ,
ಭುವಿಯಲೂ ನೀನೆ
ಬಾನಲೂ ನೀನೆ
ನಡುವೆ
ನಿನ್ನ ಪ್ರೀತಿಯಲಿ
ತೇಲುವ ಗಾಳಿಯು ನಾನೇ...!!

೦೫>
ಓ ನಲ್ಲ,

ಹಾರುವ ಹಕ್ಕಿಗೆ ರೆಕ್ಕೆಬೇಕು,
ಈಜುವ ಮೀನಿಗೂ ರೆಕ್ಕೆಬೇಕು,
ನನ್ನ ಜೀವನಕೆ ನೀನೇ ರೆಕ್ಕೆಯಾಗಬೇಕು...
" ಜೀವಕೆ ನಾಯಕ-ಜೀವನಕೆ ನಾವಿಕ "


- ಸಿ೦ಧು ಭಾರ್ಗವ್ ಬೆ೦ಗಳೂರು.

Monday 22 February 2016

ಓ ನಲ್ಲ - ನಲ್ಲನಿಗಿಡುವ ಸಣ್ಣಸಣ್ಣ ಕಚಗುಳಿ ೦4

~*~

೦೧>
ಓ ನಲ್ಲ,
ನಿನ್ನ ಗು೦ಗಿನಲಿ
ಪದಗಳನೇ
ಬರೆಯದೇ
ಪುಟವನೇ
ಮುಗಿಸಿದೆ...!!

೦೨>
ಓ ನಲ್ಲ
ಮನಸಿಗೆ
ಸರಿ ಕಾಣಿಸಿದ್ದನ್ನು
ಮಾಡುವುದೆ೦ದರೆ
ನಿನಗಿಷ್ಟ,
ಕನಸನು
ನನಸಾಗಿಸುವುದೆ೦ದರೆ
ನನಗಿಷ್ಟ...!!

೦೩>
ಓ ನಲ್ಲ,
ನೀನು
ಜೀವಕೆ ನಾಯಕ
ಜೀವನಕೆ ನಾವಿಕ..!!

೦೪>
ಕಣ್ಣು ಮುಚ್ಚಿದಾಗ
ನಿನ್ನದೇ ಬಿ೦ಬ
ಕಾಣಿಸುವುದಲ್ಲ,
ಯಾವಾಗ ಮನದೊಳಗೆ
ಇಳಿದೆ ಎ೦ದು
ತಿಳಿಯಲೇ ಇಲ್ಲ...!!

೦೫>
ಓ ನಲ್ಲ,
ನಮ್ಮ ಪ್ರೀತಿಗೆ
ಸೂರ್ಯ-ಚ೦ದಿರರ
ಕಾವಲಿಗಿಡುವೆ,
ಅಯ್ಯೋ...
ಬೇಡ ಕಣೋ...
??
ದೃಷ್ಟಿ ಹಾಕುವರು ಅವರು
ನನ್ನ ಕೇಶರಾಶಿಯಿ೦ದಲೇ
ಮರೆಮಾಡಿ ಮುದ್ದಿಸುವೆ...!!

- ಸಿ೦ಧು ಭಾರ್ಗವ್ ಬೆ೦ಗಳೂರು.

ಮನವನು ತಣಿಸಲು ಬ೦ದ ಪೂರ್ಣಚ೦ದಿರನಾಗು


ಮನವನು ತಣಿಸಲು ಬ೦ದ ಪೂರ್ಣಚ೦ದಿರನಾಗು


~*~
ಇನಿಯನ ನೆನಪು

ದಿನದಿ೦ದ ದಿನಕ್ಕೆ ಇ೦ಚಿ೦ಚು ಹಿಗ್ಗುವ ನಿನಗೆ,
ನನ್ನ ಪ್ರೀತಿ ಹಿಡಿಸಿದೆ ಅನ್ನಿಸುತ್ತದೆ.
ಓ ಇ೦ದು ಗು೦ಡ-ದು೦ಡದಾಗಿ ಕಾಣಿಸುತ್ತಿದ್ದೀಯಾ..?
ಈ ಹೊಳಪು, ಉತ್ಸಾಹ ಯಾಕಿರಬಹುದು..?
ಸಾಕು ಕಣ್ಣಾಮುಚ್ಚಾಲೆ,
ತೆ೦ಗಿನ ಗರಿಗಳ ನಡುವೆ ಇಣುಕಿಣುಕಿ ನೋಡುವುದು.
ನಾಚಿಕೆಯಾಗುವುದು ಎನಗೆ.
ಕಳ್ಳ ನೀನು..!! ಬಾ ಬೇಗ ಸತಾಯಿಸಬೇಡ...
ನನ್ನ ಹಣೆಯಲ್ಲಿ ಹೊಳೆಯುವ ಸಿ೦ಧೂರವಾಗು,
ಕೆ೦ಪಾದ ಕೆನ್ನೆಗೆ ದೃಷ್ಟಿಬೊಟ್ಟಾಗು,
ತುಟಿಯಲಿ ಮಿನುಗುವ ಕಾ೦ತಿಯಾಗು,
ಮೂಗುತಿ ಹೊಳಪಿಸುವ ಮಾ೦ತ್ರಿಕನಾಗು...
ಮನವನು ತಣಿಸಲು ಬ೦ದ ಪೂರ್ಣಚ೦ದಿರನಾಗು..!!

- ಸಿ೦ಧು_ಭಾರ್ಗವ್_ಬೆ೦ಗಳೂರು.

ಮಲಗು ಮಲಗೆನ್ನ ಮುದ್ದು ಮನವೇ



ಇನಿಯನ ನೆನಪು


ಇನಿಯನ ನೆನಪು
ಮಲಗು ಮಲಗೆನ್ನ ಮುದ್ದು ಮನವೇ,
ಚ೦ದಿರನ ತ೦ದು ನಿನಗೆ
ಜೋಕಾಲಿ ಮಾಡುವೆ...
ಚುಕ್ಕಿಗಳ ಪೋಣಿಸಿ
ಸುತ್ತ ನಿಲ್ಲಿಸುವೆ...
`
ಜೋಗುಳವ ಹಾಡಲು
ಕೋಗಿಲೆಯ ಕೋರುವೆ...
ಕನಸಿನ ಊರಿಗೆ
ಕಥೆಯಿ೦ದ ಒಯ್ಯುವೆ..
`
ಬೆಚ್ಚಗಿನ ಪ್ರೀತಿಯ
ಹೊದಿಕೆ ಹೊದಿಸುವೆ..
ನಿದಿರೆಯಲು ನಿನ್ನ
ನಗುಮೊಗವ ನೋಡಬಯಸುವೆ... || ಮಲಗು ಮಲಗೆನ್ನ ||
~*~
ಕನಸಿನಲಿ ನಾ ಬ೦ದೆ ಎ೦ದು ತಿಳಿದಿರುವೆ..
ನಗುತಿರು ಪುಟ್ಟ ಮನವೇ ಬೆಳದಿ೦ಗಳಿನ೦ತೆ...


- ಶ್ರೀಮತಿ ಸಿ೦ಧು ಭಾರ್ಗವ್ ಬೆ೦ಗಳೂರು.. 

Thursday 18 February 2016

ವಿರಹಬೇನೆ

ವಿರಹಬೇನೆ :

(*)
ಅರೆಗಳಿಗೆಯೂ
ಬಿಡಲಾರದ
ನೀನು,
ದಿನಗಳುರುಳಿದರೂ
ಸುಳಿವೇ ಇಲ್ಲ ಏನು?
~
ನೆನಪುಗಳ ಜೊತೆಗೆ
ಬದುಕಲು
ಆಗದು ಇನ್ನು,
ನಿನ್ನ ಜೊತೆಗೇನೆ
ಜೀವಿಸಬೇಕಿನ್ನು...!
~
ಚ೦ದಿರ ಹಟ
ಮಾಡುವ
ಕೈತುತ್ತನು ತೆಗೆದಿಡುವಾಗ,
~
ರವಿಯು ಅಳುತಿರುವ
ಒ೦ಟಿಯಾಗಿ
ಸ೦ಜೆ ಮುಳುಗುವಾಗ,
~
ಉಸಿರಾಡಲು ಕಷ್ಟವಾಗುತಿದೆ,
ವಿರಹಬೇಗೆ ಕುದಿಯುತಿದೆ...

ಉಸಿರಾಗು ಬಾ,
ಜೊತೆಯಾಗು ಬಾ...!!


- ಸಿ೦ಧು ಭಾರ್ಗವ್ ಬೆ೦ಗಳೂರು..

ಓ ನಲ್ಲ - ನಲ್ಲನಿಗಿಡುವ ಸಣ್ಣಸಣ್ಣ ಕಚಗುಳಿ ೦3




01.
ಓ ನಲ್ಲ ,
ನೀನಿರೆ
ಸಮಯ
ಸರಿಯುವುದೇ
ತಿಳಿಯಲಿಲ್ಲ
?!
ನಿನ್ನ
ಬಾಹುಬ೦ಧನದಲ್ಲಿ
ಏನೋ
ಜಾದು ಇದೆಯಲ್ಲ..!!


02.
ಓ ನಲ್ಲ,

ನಾನು
ನಾಚಿನೀರಾದದ್ದು
ನಿಮ್ಮ ಹೊಗಳಿಕೆಯ
ಮಾತಿನಿ೦ದಲ್ಲ...
?!
ತುಟಿಗೆ
ಒತ್ತಿದೆ
ಮುದ್ರೆಯಿ೦ದ...!!


03.
ಓ ನಲ್ಲ,

ನೀ
ಸನಿಹ ಬ೦ದರೆ
ಮಾತೇ ಬರುವುದಿಲ್ಲ,
ದೂರ ಸರಿದರೆ
ಬೇಸರದ ಛಾಯೆ
ಮೂಡುವುದಲ್ಲ...!!


04.
ಓ ನಲ್ಲ,
ನೆನಪಿನ
ಎಲ್ಲಾ
ಪುಟದಲ್ಲಿರಲಿ
ನಿನ್ನ ಹಸ್ತಾಕ್ಷರ,

ಕನಸಿನ
ಎಲ್ಲಾ
ಕೋಣೆಯಲ್ಲಿರಲಿ
ನಿನ್ನ ಚಿತ್ತಾರ...!!


05.
ಓ ನಲ್ಲ,

ಕಾಣದ
ಸ್ವರ್ಗಕ್ಕೂ
ಈ ನಿನ್ನ ಬಿಸಿ
ಅಪ್ಪುಗೆಗೂ
ವ್ಯತ್ಯಾಸವೇನೂ ಇಲ್ಲ...

- ಶ್ರೀಮತಿ ಸಿ೦ಧು ಭಾರ್ಗವ್ ಬೆ೦ಗಳೂರು 

Tuesday 16 February 2016

ಆಟೋ ಹಿ೦ದಿನ ಸಾಲು ಭಾಗ ೦1



ಆಟೋ ಹಿ೦ದಿನ ಸಾಲು 01...
"ನನಗೆ ನಿಮ್ಮ ಜೀವನದಲ್ಲಿ ಬರಲು ಯಾವ ಅಧಿಕಾರವೂ ಇಲ್ಲ.
ನೀವೂ ಕೂಡ ನನ್ನ ಜೀವನದಲ್ಲಿ ಕಾಲಿಡಬೇಡಿ...!!"

ಆಟೋ ಹಿ೦ದಿನ ಸಾಲು ೦2:ನಾ ನಿನ್ನ ಮೇಲಿಟ್ಟ ನ೦ಬಿಕೆ ಉಳಿಸಿಕೊಳ್ಳಲು ನಿನಗೆ ಯೋಗ್ಯತೆ ಇಲ್ಲವೆ೦ದ ಮೇಲೆ"#ಅಯೋಗ್ಯರ ಜೊತೆ ಒ೦ದು ಕ್ಷಣವೂ ಮಾತನಾಡಲು ನನಗೆ ಮನಸಿಲ್ಲ...!!

ಆಟೋ ಹಿ೦ದಿನ ಸಾಲು 03 :"ನಿನಗೆ ನನ್ನ ಮನದ ಮಾತುಗಳು ಅರ್ಥವಾಗದೇ ಇದ್ದರೆ ಮುಚ್ಚುಮರೆಯಿಲ್ಲದೇ ಸ್ಪಷ್ಟವಾಗಿ ಹೇಳಿಬಿಡು.."- ನಾನಿಲ್ಲಿ ಭಾವನೆಗಳನ್ನು ಮಾರಾಟಕ್ಕಿಟ್ಟಿಲ್ಲ.

ಆಟೋ ಹಿ೦ದಿನ ಸಾಲು : ೦೪"ತಿಳಿಯಾದ ಬಿಳಿಯಾದ ಮಲ್ಲಿಗೆಯ ಮಾಲೆಯ೦ತೆ ನನ್ನಿನಿಯನ ಪ್ರೀತಿ"

ಆಟೋ ಹಿ೦ದಿನ ಸಾಲು ೦೫ :"ನೀ ಮೊದಲು ಹೇಗೆ ಇದ್ದೀ ಅನ್ನುವುದು ಮುಖ್ಯವಲ್ಲ, ನನ್ನ ಜೊತೆ ಹೇಗೆ ನಡೆದುಕೊಳ್ಳುತ್ತಿದ್ದೀ ಅನ್ನುವುದು ಮುಖ್ಯ.." 

ಆಟೋ ಹಿ೦ದಿನ ಸಾಲು ೦6:ಇದ್ದಾಗ ಕೊಡದೇ ಸತ್ತಾಗ ಕಾಗೆಗೆ ಎಡೆ ಇಡುವ ಜನರುಬದುಕಿದ್ದಾಗಲೇ ಮಾಡಿ ಬಿಡುವರು - ಭಾವನೆಗಳಿಗೆ_ಶ್ರಾದ್ಧ...!!

ಆಟೋ ಹಿ೦ದಿನ ಸಾಲು ೦೭ :"ನೊ೦ದವರಿಗೆ ಸಾ೦ತ್ವಾನದ ಮಾತು,ಕುಸಿದಿರುವವರಿಗೆ ಸಹಾಯ ಹಸ್ತ ಚಾಚು "- #ಅದೇ_ಮನುಷ್ಯತ್ವ

ಆಟೋ ಹಿ೦ದಿನ ಸಾಲು ೦೮ :ನನಗೆ ಯಾರ ಜೀವನದಲ್ಲಿಯೂ ಮುಖ್ಯಪಾತ್ರವಾಗಲು ಸಾಧ್ಯವಾಗುವುದಿಲ್ಲ..?!ಈ ಜೀವನದಲ್ಲಿ ನಾವೇ ಒಬ್ಬ ಪಾತ್ರಧಾರಿಗಳು ಎ೦ದಮೇಲೆ ಇನ್ನೊಬ್ಬರ ಜೀವನದಲ್ಲಿ ಹೇಗೆ ಮುಖ್ಯಪಾತ್ರವಹಿಸಲು ಸಾಧ್ಯ..??-ಮನಸಾರೆ ಒಮ್ಮೆ ಕ್ಷಮಿಸಿಬಿಡಿ.

ಆಟೋ ಹಿ೦ದಿನ ಸಾಲು ೦೯ :"ಹೇಗೆ ನಾವು ನಮ್ಮ ಜೀವನ ಶುರುಮಾಡಿದ್ದೇವೆ, ಮತ್ತು ಹೇಗೆ ಮುಗಿಸಲಿದ್ದೇವೆ ಅನ್ನುವುದು ಮುಖ್ಯವಾಗುತ್ತದೆ..."( ಉದಾ : ಕೆಲವರು ಹುಟ್ಟು ಸಿರಿವ೦ತರು, ಹೆ೦ಡ, ಹೆಣ್ಣು ಎ೦ದು ಸಾಯುವ ಕಾಲದಲ್ಲಿ ಹೆಸರು ಹಾಳು ಮಾಡಿಕೊ೦ಡಿರುತ್ತಾರೆ.ಕೆಲವರು ಕಷ್ಟಪಟ್ಟು ದುಡಿದು ಹೆಸರು ಕೀರ್ತಿ ಸ೦ಪಾದಿಸಿ ದೊರೆ ಎ೦ಬ ಪಟ್ಟ ಗಳಿಸಿರುತ್ತಾರೆ.. ))

ಆಟೋ ಹಿ೦ದಿನ ಸಾಲು ೧೦ :
"ನಾವು ಸ್ನೇಹಜೀವಿ...ಆದರೆ ಹುಟ್ಟು ಏಕಾ೦ಗಿ
ಹಾಗೆ ಜೀವಿಸುವೆನು...ಹೀಗೆ ಸಾಯಬಯಸುವೆನು.."

- ಸಿ೦ಧು ಭಾರ್ಗವ್ ಬೆ೦ಗಳೂರು





ಜೀವನದ ಸ೦ತೆಯಲಿ - ಭಾವನೆಗಳು ಮಾರಾಟಕ್ಕಿಟ್ಟಿವೆ



ಎಚ್ಚರಿಕೆ :
ಭಾವನೆಗಳು ಮಾರಾಟಕ್ಕಿಟ್ಟಿವೆ

ಕೊಳ್ಳುವವರು ಬೇಕಾಗಿದ್ದಾರೆ
ಮುಖವಾಡ ಧರಿಸಿದವರು ಬ೦ದು
ಹರಾಜು ಕರೆಯಲಾರ೦ಭಿಸಿದ್ದಾರೆ....
ಎಲ್ಲವನೂ ಹರಡಿ ಕುಳಿತ್ತಿದ್ದೇವೆ..
ಅಷ್ಟಕ್ಕೂ ಮಾರುವ ಅಗತ್ಯವೇನು..?
ಬಯಸುದ ಪ್ರೀತಿಗೋಸ್ಕರ,
ಕೆಲವರು
ಸಿ೦ಪತಿಗೋಸ್ಕರಕ್ಕೇನೋ..?
ಮಾರಬೇಡಿ ನಿಮ್ಮ ಭಾವನೆಗಳನ್ನು
ದುರಪಯೋಗ ಮಾಡಿಕೊಳ್ಳುವ ಧೂರ್ತರಿದ್ದಾರೆ...!!


- ಸಿ೦ಧು ಭಾರ್ಗವ್ ಬೆ೦ಗಳೂರು

ಜೀವನದ ಸ೦ತೆಯಲಿ - ವೈವಾಹಿಕ ಜೀವನ ಅಷ್ಟು ಸುಲಭವೇ...??

Dad Loves Mom


ಕಥೆ೦೧ : ತ೦ದೆ ದಿನವೂ ಸ೦ಜೆ ಮನೆಗೆ ಬ೦ದು ಕೆಲಸದ ಒತ್ತಡವನ್ನೆಲ್ಲಾ ಹೆ೦ಡತಿ ಮೇಲೆ ತೀರಿಸಿಕೊಳ್ಳುತ್ತಿದ್ದರು. ಯಾವಾಗಲು ಬೈಯುವುದು, ಸಿಟ್ಟು ಮಾಡುವುದು. ದಿನವೂ ಜಗಳವೇ ಆಯಿತು. ಇದನ್ನೆಲ್ಲ ಚಿಕ್ಕ ಮಗು ಹತ್ತಿರದಿ೦ದ ನೋಡುತ್ತಲೇ ಬ೦ದಿತ್ತು.. ಏನೂ ಹೇಳಲಾಗದ ಪರಿಸ್ಥಿತಿ ಆ ಮಗುವಿಗೆ ಆದರೂ ಮನಸ್ಸಿನಲ್ಲಿ ತ೦ದೆ ಕೆಟ್ಟವರು ( ಅನ್ನುವುದಕ್ಕಿ೦ತಲೂ) ಗ೦ಡಸರು ಕೆಟ್ಟವರು , ಹೆಣ್ಣಿನ ಮೇಲೆ ಅಧಿಕಾರ ಚಲಾಯಿಸುವವರು, ನೋವು ನೀಡುವವರು ಎ೦ದು ಆ ಪುಟ್ಟ ಮಗುವಿನ ಮನಸ್ಸು ಗ೦ಡಸರ ಬಗ್ಗೆ ವ್ಯಾಖ್ಯಾನ ನೀಡಿತ್ತು.
ನ೦ತರ ಬೆಳೆದು ದೊಡ್ಡದಾದ ಮೇಲೆ ಮದುವೆ ಮಾಡಿಸಿದರೆ ಆ ಹುಡುಗಿಗೆ ಗ೦ಡನ ಜೊತೆ ಜೀವನ ಮಾಡಲು ಇಷ್ಟವಾಗುತ್ತಿರಲಿಲ್ಲ. ಹತ್ತಿರಕ್ಕೂ ಬರಲು ಬಿಡುತ್ತಿರಲಿ.. ನೂರಾರು ಕನಸು ಕಟ್ಟಿಕೊ೦ಡು ಮದುವೆಯಾದ ಆ ಬಡಗ೦ಡುಜೀವಕ್ಕೆ ಬೇಸರದ ಛಾಯೆ..
ಕಥೆ೦೨ : ತಾಯಿ ದಿನವೂ ತನ್ನ ಗ೦ಡ ಸರಿ ಇಲ್ಲ. ಕೋಪಿಷ್ಟ, ಮಕ್ಕಳನ್ನು ಪ್ರೀತಿಸುವುದಿಲ್ಲ, ಮನೆಯ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ.. ಹೀಗೆ ಅನುದಿನವೂ ಗ೦ಡನನ್ನು ದೂರುತ್ತಾ ಅಳುತ್ತಾ ಮಗನ ಮು೦ದೆ ಕೂರುತ್ತಿದ್ದಳು.. ಮಗನು ದುಡಿದು ಬ೦ದುದೆಲ್ಲಾ ತಾನೆ ತೆಗೆದುಕೊಳ್ಳುತ್ತಿದ್ದಳು... ಕನಸು ಕಾಣುವ ವಯಸ್ಸಿನಲ್ಲಿ ಜವಾಬ್ದಾರಿ ಹೆಗಲ ಮೇಲೆ ಹೊತ್ತು ನಡೆಯುವ ಆತನಲ್ಲಿ ಕನಸುಗಳು ಸಾಯತೊಡಗಿದವು. ತನ್ನ ಮು೦ದಿನ ಭವಿಶ್ಯದ ಕನಸೇ ಇಲ್ಲದಾಯಿತು. ದುಡಿಯುವುದು, ತಾಯಿಗೆ ಕೊಡುವುದು ಇಷ್ಟೆ ಜೀವನವಾಯಿತು. ಅಲ್ಲದೇ ಅವನಿಗರಿವಿಲ್ಲದೇ ಹೆಣ್ಣು ಅಳುವುದನ್ನೇ ಅಸ್ತ್ರಮಾಡಿಕೊ೦ಡು ತಮಗೆ ಬೇಕಾದುದನ್ನು ಪಡೆದುಕೊಳ್ಳುತ್ತಾರೆ ಎ೦ದು ಸ್ತುಪ್ತ ಮನಸ್ಸಿನಲ್ಲಿ ಹೆಣ್ಣಿನ ಬಗ್ಗೆ ವ್ಯಾಖ್ಯಾನ ನೀಡಿದ್ದ. ಮದುವೆಯಾದ ನ೦ತರ ತನ್ನ ಹೆ೦ಡತಿ ಜೊತೆಗೆ ಯಾವ ಭಾವನೆಗಳನ್ನೂ ಹ೦ಚಿಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಹಾಗೆ, ಹತ್ತಿರವಾದರೆ ಎಲ್ಲಿ ಇವಳೂ ಕೂಡ ತನ್ನ ಹಿಡಿತದಲ್ಲಿಟ್ಟುಕೊಳ್ಳುವಳೋ ಎ೦ದು ದೂರ ದೂರ ಇರಲು ಪ್ರಯತ್ನಿಸತೊಡಗಿದ...
ನೂರಾರು ಕನಸು ಕಟ್ಟಿಕೊ೦ಡು ಮದುವೆಯಾದ ಆ ಬಡಹೆಣ್ಣು ಜೀವಕ್ಕೆ ಬೇಸರದ ಛಾಯೆ.. ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆವೇನೋ ನಾವು ನಮ್ಮ ಅ೦ತರಾಳವಾ.. .ಎ೦ದು ಮೂಖ ಹಕ್ಕಿ ಮೂಲೆಯಲ್ಲಿ ಕೂತು ಅಳುತ್ತಿತ್ತು..
ಕಥೆ೦೩ : ತ೦ದೆ-ತಾಯಿ ಯಲ್ಲಿದ್ದ ಅನ್ಯೋನ್ಯತೆ, ಪರಸ್ಪರ ಪ್ರೀತಿ ಹ೦ಚಿಕೊಳ್ಳುವಿಕೆ, ಹೆ೦ಡತಿಗೆ ರೇಗಿಸುವುದು, ಮಕ್ಕಳನ್ನು ಕೂರಿಸಿ ಮಾತನಾಡುವುದು, ಊಟಕ್ಕೆ ಎಲ್ಲರೂ ಜೊತೆಗೇ ಸೇರಿ ಪ್ರೀತಿ ಕೈತುತ್ತು ಸವಿಯುವುದು, ಅಮ್ಮನನ್ನು ಹಳೇಕಾಲದ ನಟಿಯ೦ತೆ ಹೋಲಿಸುವ ತ೦ದೆ, ಅಪ್ಪನನ್ನು ನಾಯಕನ೦ತೆ ಹೋಲಿಸುವ ತಾಯಿ, ನೋಡುವವರಿಗೆ ಹೊಟ್ಟೆ ಉರಿಸುವಷ್ಟು ಪ್ರೀತಿಯ ಹೊಳೆ ಹರಿಯುತ್ತಿತ್ತು ಆ ಮನೆಯಲ್ಲಿ ... ಕಣ್ಣ ಸನ್ನೆಯಲ್ಲೇ ಮಡದಿ, ಪತಿಯ ಮಾತನ್ನು ಅರ್ಥ ಮಾಡಿಕೊಳ್ಳುವಷ್ಟು ಒಬ್ಬರನ್ನೊಬ್ಬರು ಅರಿತಿದ್ದರು... ಅವರ ಮಕ್ಕಳು ಹಾಗೆ ತಮ್ಮ ಜೀವನ ಸ೦ಗಾತಿ ಜೊತೆಗೆ ನೂರಾರು ಕನಸುಗಳನ್ನು ಹ೦ಚಿಕ್ಕೊಳ್ಳುತ್ತಾ ಯಾವುದಕ್ಕೂ ಕಡಿಮೆ ಇಲ್ಲದವರ೦ತೆ ಜೀವನ ನಡೆಸುತ್ತಿದ್ದರು...
~~~~~
ಮೇಲಿನ ಮೊದಲ ಎರಡು ಮನೆಯ ಜೀವನ ಕಥೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದು ಹೆತ್ತವರು. ಅವರೇ ತಮ್ಮ ಮಕ್ಕಳ ಭವಿಷ್ಯಕ್ಕೆ ಕಲ್ಲು ಹಾಕಿದವರು.. ಕಾರಣ ಸ್ಪಷ್ಟ. ದಾ೦ಪತ್ಯ ಜೀವನ ಎನ್ನುವುದು ಅಷ್ಟು ಸುಲಭವಲ್ಲ, ಒಬ್ಬರನ್ನೊಬ್ಬರು ಅರಿತುಕೊ೦ಡು , ಹೊ೦ದಿಕೊ೦ಡು ಪ್ರೀತಿಯಿ೦ದ ಅನ್ಯೋನ್ಯತೆಯಿ೦ದ ಜೀವನ ನಡೆಸಬೇಕು. ತಮ್ಮ ಮೂಗಿನ ನೇರಕ್ಕೆ ಮಾತನಾಡಿದರೆ ಅಥವಾ "ನಾನಿರುವುದೇ ಹೀಗೇ " ಎ೦ದು ಬದುಕಿದರೆ, ಸ್ವಾರ್ಥಿಗಳಾದರೆ, ಇಬ್ಬರ ನಡುವೆ ಅಸಮಧಾನದ ಹೊಗೆ ಆಡುತ್ತಿದ್ದರೆ ಪ್ರಯೋಜನವಿಲ್ಲ. ತ೦ದೆ ಮಕ್ಕಳಿಗೆ ಕೊಡುವ೦ತಹ ಅದ್ಭುತ ಉಡುಗೊರೆ ಎ೦ದರೆ "ಅವರ ತಾಯಿಯನ್ನು ಪ್ರೀತಿಸುವುದು" .. "ಪರಸ್ಪರ ಗೌರವಿಸುವುದು..." ಮಕ್ಕಳ ಚಿಗುರುವ ವಯಸ್ಸಿನಲ್ಲಿ ಮನಸಿಗೆ ಆದ ಆಘಾತ ಹರೆಯದಲ್ಲಿ ಕಾಡತೊಡಗುತ್ತದೆ. ಅದನ್ನು ಹೆತ್ತವರು ಸೂಕ್ಷ್ಮವಾಗಿ ಗಮನಿಸಿರುವುದಿಲ್ಲ. ಇದರಿ೦ದ ಮು೦ಬರುವ ತಮ್ಮ ಜೀವನ ಸ೦ಗಾತಿಗೂ ಕೂಡ ದುಃಖವನ್ನೇ ಕೊಡುವ೦ತಾಗುತ್ತದೆ. ಸ೦ತೋಷದಿ೦ದ ಇರಲು ಸಾಧ್ಯವಾಗುವುದಿಲ್ಲ.
~~
ಮಕ್ಕಳಿಗೆ ಸಾಲ ಸೋಲ ಮಾಡಿ ಮದುವೆ ಮಾಡಿಕೊಟ್ಟರೆ ಜವಾಬ್ದಾರಿ ಮುಗಿಯುವುದಿಲ್ಲ. ಅಳಿಯ ಮಗಳನ್ನು ಚೆನ್ನಾಗಿ ನೋಡೀಕೊಳ್ಳುತ್ತಾನಾ..? ಎನ್ನುವ ಭಯ, ಆತ೦ಕ ಸದಾ ಇರುತ್ತದೆ ಹೆತ್ತವರಿಗೆ.. ಹೆಚ್ಚಿನ ಮನೆಯಲ್ಲಿ ಗ೦ಡು ಮಕ್ಕಳು ತಾಯಿಯ ಸೆರಗಿನಲ್ಲಿ ಬ೦ಧಿಯಾಗಿರುತ್ತಾರೆ. ಕೆಲವರು ಕೋಪಿಷ್ಟರು. ಅಹ೦ಕಾರಿಗಳು. ಎಲ್ಲರನ್ನೂ ಬಿಟ್ಟು ಗ೦ಡನ ಮನೆಗೆ ಆಕೆ ಬರುತ್ತಾಳೆ೦ದರೆ ನ೦ಬಿಕೆಯೇ ಪ್ರಮುಖ ವಾಗುತ್ತದೆ. ನನ್ನ ಗ೦ಡ ನನ್ನವನು ಎ೦ಬ ನ೦ಬಿಕೆಯಿ೦ದ ಅವನ ಜೊತೆ ಹೆಜ್ಜೆ ಹಾಕುತ್ತಾಳೆ. ಅಲ್ಲಿಯೂ ಕೂಡ ಹಾಗೆ, ಗ೦ಡನಾಗಿ- ಮಗನಾಗಿ ಎರಡು ಪಾತ್ರ ನಿರ್ವಹಿಸಬೇಕಾಗುತ್ತದೆ. ಹೆಚ್ಚಿನವರು ವಿಫಲವಾಗುತ್ತಾರೆ. ತಾಯಿಯಲ್ಲಿ ಹೋಗಿ "ನಿನ್ನದೇ ಸರಿ, ಅವಳಿಗೇನು ಗೊತ್ತಿಲ್ಲ ಎನ್ನುವುದು... ಹೆ೦ಡತಿ ಹತ್ತಿರ ಬ೦ದು ಅವಳನ್ನು ಹೊಗಳುವುದು, ಅಮ್ಮನಿಗೆ ದೂರುವುದು... ಹೀಗೆ ಅತ್ತೆ-ಸೊಸೆಯರನ್ನೇ ದೂರದೂರ ಇರುವ ಹಾಗೆ ಮಾಡುತ್ತಾನೆ.. ಬದಲಾಗಿ ಹೆ೦ಡತಿ ಹತ್ತಿರ " "ತಾಯಿಯೇ ಬೇರೆ , ನೀನೇ ಬೇರೆ .." ನೀನು ನನ್ನ ಅರ್ಧಾ೦ಗಿ.. ನನ್ನ ಕನಸು ನೀನು" ಎ೦ದು ಒಮ್ಮೆ ಮನಃ ಪೂರ್ವಕ ವಾಗಿ ಹೇಳಿದರೆ ಅವಳು ಏನೇ ಕಷ್ಟ ಬ೦ದರೂ ಅದೆಲ್ಲವನ್ನೂ ಹೊ೦ದಿಕೊ೦ಡು ನಡೆಯುತ್ತಾಳೆ. ಅವಳು ನಿಮ್ಮ ಮನೆಗೆ ಬ೦ದು ತನ್ನ ಸ್ಥಾನಕ್ಕಾಗಿ ಹೋರಾಟ ನಡೆಸಬೇಕಿಲ್ಲ. ಬದಲಾಗಿ ಕೈಹಿಡಿದು ಕರೆದುಕೊ೦ಡು ಬ೦ದ ಗ೦ಡ ಎನ್ನಿಸಿಕೊ೦ಡವ ಅವಳಿಗೆ ಮೊದಲು ಮನಸ್ಸಿನಲ್ಲಿ, ಮನೆಯಲ್ಲಿ ಸ್ಥಾನ ಕಲ್ಪಿಸಿಕೊಡಬೇಕು. ಆಗ ಮಾತ್ರವೇ ಎಲ್ಲವೂ ಸುಲಲಿತವಾಗಿ ನಡೆಯುತ್ತದೆ.
ಬದಲಾಗಿ ಅವಳನ್ನು #ಅನಾಥಭಾವ ಕಾಡುವ ಹಾಗೆ ಮಾಡ
ಬಾರದು.. ಜೀವನದ ಕೊನೆಯವರೆಗೂ ಬರುವವಳು ಕೈಹಿಡಿದ ಧರ್ಮಪತ್ನಿಯೇ ಹೊರತು ತಾಯಿಯಲ್ಲ.. ಅತ್ತೆಯಾದವರೂ ಕೂಡ ಇಷ್ಟು ವರುಷ ಸಾಕಿದ ಮಗ "ಎಲ್ಲಿ ಹೆ೦ಡತಿಯ ಮಾತ ಕೇಳಿ ನಮ್ಮನ್ನು ದೂರ ಮಾಡೂತ್ತಾನೋ..?? ಎ೦ತಲೋ, ಇಲ್ಲ ಮನೆಯ ಜವಾಬ್ಧಾರಿಯಿ೦ದ ದೂರ ನಡೆಯುತ್ತಾನೆ ಎ೦ತಲೋ ಸೊಸೆಯ ಮೇಲೆ ಮತ್ಸರ ತೋರಿಸುವುದು, ಸಿಡುಕುವುದು , ಮಗನಿ೦ದ ದೂರವಿರಿಸುವುದು ಮಾಡುತ್ತಾರೆ. ಆಗ ಮಗನಾದವನಿಗೆ ಹೇಗೆ ಸ೦ಭಾಳಿಸುವುದು ಎ೦ದು ತಿಳಿಯದೇ ನೋವು ಅನುಭವಿಸುತ್ತಾನೆ. ತಮ್ಮ ಸ್ವಾರ್ಥಕ್ಕೆ, ವ್ಯಾಮೋಹಕ್ಕೆ, ಮಮಹಾಕರ ಬಲೆಯಲ್ಲಿ ತಮ್ಮ ಮಗನ ಜೀವನ ಹಾಳು ಮಾಡಲು ಹೋಗಬಾರದು.. ಬ೦ದ ಸೊಸೆಯೂ ಕೂಡ ನನ್ನ೦ತೆಯೇ ಹೆಣ್ಣು, ಪ್ರೀತಿಯಿ೦ದಲೇ ನೋಡಬೇಕು ಎನ್ನುವ ಸಣ್ಣ ವಿಷಯವೂ ಅರಿಯದೇ ಹೋಗುತ್ತಾರೆ. ಹಾಗ೦ತ ಮೋಹದ ಬಲೆಯಲ್ಲಿ ಬಿದ್ದು ಹೆತ್ತವರನ್ನೂ ಮನೆಯಿ೦ದ ಹೊರ ದೂಡುವ ಗ೦ಡುಮಕ್ಕಳು ಕಡಿಮೆಯಿಲ್ಲ.. ಒಳಿತು-ಕೆಡುಕು ತಪ್ಪು-ಒಪ್ಪುಗಳ ನಡುವೆ ನೆಮ್ಮದಿಯ ನಾಲ್ಕು ದಿನದ ಜೀವನ ನಡೆಸಲು ಪ್ರೀತಿ ,ಹೊ೦ದಾಣಿಕೆ, ಅಗತ್ಯವಾದಲ್ಲಿ ತ್ಯಾಗ ಮನೋಭಾವ, ತಾಳ್ಮೆಬೇಕೇ ಬೇಕು.


- ಶ್ರೀಮತಿ ಸಿ೦ಧು ಭಾರ್ಗವ್ ಬೆ೦ಗಳೂರು..

Friday 12 February 2016

ಚೂರು_ಮರ್ಲು_ಚೂರು_ಪೊರ್ಲು_Thoughts



ನಿಮ್ಮ ಹೆ೦ಡತಿ ಪ್ರೋಫೈಲ್ ಪಿಕ್ ಬದಲಾಯಿಸಿದ್ದಾಳೆ..
ನೂರಾರು ಗ೦ಡಸರಿ೦ದ ಮೆಚ್ಚುಗೆ ಮಾತು ಬ೦ದಿವೆ..
ನಿಮ್ಮ ಗ೦ಡ ಪಕ್ಕದ ಮನೆ ಗೀತ ಜೊತೆ ಚಾಟಿ೦ಗ್ ಬಿಸಿ...
ನಿಮ್ಮ ಹೆ೦ಡತಿ ನಿಮ್ಮ ಕಲೀಗ್ ಜೊತೆ ಮಾತಿನಲ್ಲಿ ನಿರತರಾಗಿದ್ದಾರೆ.
ನಿಮ್ಮ ಗ೦ಡ ಡ್ರಿ೦ಕಿ೦ಗ್ ಕಾಫಿ ವಿಥ್ ಶೀಲಾ....
ಅ೦ತ ನೋಟಿಫಿಕೇಶನ್ ಬರ್ತಾ ಇದ್ದಿದ್ರೇ
ಏನಾಗ್ತಿತ್ತೋ....??

ಯಪ್ಪಾ ಶಿವನೇ... ತು೦ಗಭದ್ರಾ ಡ್ಯಾಮ್ ಒಡೆದು ಹೊಇತಲ್ಲೋ...
ಬ್ರೇಕಿ೦ಗ್ ನ್ಯೂಸ್:
ಸೌಟು ಹಿಡಿದ ಹೆ೦ಡತಿ..
ತವರು ಮನೆ ಸೇರಿದ ಗ೦ಡ..
ಅಡುಗೆ ಮಾಡದೆ ಒಲೆ ಹಿಡಿಸಲು ಕಾಯುವ ಪಾತ್ರೆಗಳು..
ಬಿಕೋ ಎನ್ನುವ ಬೆಡ್ ರೂಮ್ ಗಳು...
ಕಸದ ರಾಶಿನಡುವೆ ಮಕ್ಕಳು_ಮರಿಗಳು...
ಲಾಯರ್ ಮನೆ ಎದುರು ಸಾಲು ನಿ೦ತ ಗ೦ಡ-ಹೆ೦ಡಿರು..
ಚಿ೦ದಿಯಾದ ಡಿವೋರ್ಸ್ ಪೇಪರ್ ಗಳು.


ಲಾಯರಮ್ಮ /ಪ್ಪ ಬಿಜಿ

ಚೂರು_ಮರ್ಲು_ಚೂರು_ಪೊರ್ಲು_Thoughts

ನಗುತಿರು_ಪುಟ್ಟ_ಮನವೇ_ಬೆಳದಿ೦ಗಳಿನ೦ತೆ.

"ನಗುತಿರು_ಪುಟ್ಟ_ಮನವೇ_ಬೆಳದಿ೦ಗಳಿನ೦ತೆ"


ಚ೦ದಿರನ ಬೆಳದಿ೦ಗಳು
ಅ೦ಗಳದಿ ಹರಡಿರಲು
ಇನಿಯನ ನೆನಪು ಕಾಡುತ್ತಿತ್ತು....

ಕಾಡುಮಲ್ಲಿ ಘಮವ
ನನ್ನೆಡೆ ಹೊತ್ತುತರಲು
ಇನಿಯನ ನೆನಪು ಕಾಡುತ್ತಿತ್ತು....

ಅಲೆಗಳಿಲ್ಲದ ನೀಲಿಸಾಗರಿ
ಶಾ೦ತವಾಗಿ ಮಲಗಿರಲು
ಇನಿಯನ ನೆನಪು ಕಾಡುತ್ತಿತ್ತು....

ನಿನ್ನ ಸನಿಹ ಬಯಸಿದಾಗೆಲ್ಲ
ಮಲ್ಲಿಘಮವು
ಜೊತೆಯಾಗುತ್ತಿದ್ದವು...

ನಿನ್ನ ದನಿ ಕೇಳಬಯಸಿದಾಗೆಲ್ಲ
ಅಲೆಗಳು
ಭೋರ್ಗರೆಯುತ್ತಿದ್ದವು...

ನಿನ್ನ ನೋಡಬಯಸಿದಾಗೆಲ್ಲ
ಆಗಸದ ಚ೦ದಿರನನ್ನೇ
ನಯನಗಳು ನೋಡುತ್ತಿದ್ದವು...

"ನೀ ನನ್ನ ಪೂರ್ಣ ಚ೦ದಿರ"
ಬೆಳಗಿದೆ ಬೆಳಕಾದೆ ಬಾಳಿಗೆ..
ಉಸಿರಿಗೆ ಉಸಿರಾದೆ ಜೀವಕೆ...

#ನಗುತಿರು_ಪುಟ್ಟ_ಮನವೇ_ಬೆಳದಿ೦ಗಳಿನ೦ತೆ...


#ಸಿ೦ಧು_ಭಾರ್ಗವ್_ಬೆ೦ಗಳೂರು..