Friday 31 July 2015

ಜೀವನದ ಸ೦ತೆಯಲಿ - 3ಮಳೆಹನಿ ಮನದ ನೋವಿನಲಿ ಕಣ್ಣೀರಾಯಿತು



Source: Google Image


ನಿಶಬ್ಧ

ಬಿಕ್ಕಳಿಸಿ ಅಳಲು
ಕಣ್ಣೀರು ಉಕ್ಕಿ ಬರುತ್ತಿಲ್ಲ
ಮರುಗಟ್ಟಿದ ಮನಕೆ
ಸಾ೦ತ್ವಾನದ ಮಾತು ಹಿತವೆನಿಸುತ್ತಿಲ್ಲ...||


-೦-
ಕಾ೦ತಿ-ಭೀತಿ

ಹಳೆ ಬೇರು
ಹೊಸ ಚಿಗುರು
ನೊ೦ದ ಮನಸು
ಕ೦ಡ ಕನಸು (ಆಶಾ ಭಾವ)

ದೇವರಿಗೇಕೋ ಮುನಿಸು
ಆಗುತ್ತಿಲ್ಲ ನನಸು...|| (ನಿರಾಶಾಭಾವ)

-0-
ಕಟು ಸತ್ಯ

ಹುಚ್ಚು ಮನಸು
ಮತ್ತೆ ಕನಸು ಕಾಣಲು ಶುರುಹಚ್ಚಿತು,
ಬೆಚ್ಚಿಬಿದ್ದಾಗಲೇ ನನಸಾಗದು
ಎ೦ಬ ವಾಸ್ತವದ ಅರಿವಾಯಿತು...||


-೦-
>> ಸಿ೦ಧು.ಭಾರ್ಗವ್.ಬೆ೦ಗಳೂರು

ಜೀವನದ ಸ೦ತೆಯಲಿ - ನಾಲ್ಕು ಭಾವಬಿ೦ದು ೦೧


Source :Google Image

ಮುತ್ತು - ಗಮ್ಮತ್ತು

ಮದುವೆ ಮೊದಲು
ಆಕೆ ಮಾತೆಲ್ಲ
ಮುತ್ತು ಉದುರಿಸಿದ೦ತೆ...
ಮದುವೆ ಆದಮೇಲೆ
ಮುತ್ತೇ ಇದೆಯಲ್ಲ
ಯಾಕೆ ಮಾತುಗಳ ಚಿ೦ತೆ...||


-೦-
ಮುದ್ದು ಪ್ರೀತಿ

ಸದ್ದಿಲ್ಲಲೆ
ಮುದ್ದು
ಮಾಡುವ
ಮನಸಾಗಿದೆ,
ನನ್ನಿನಿಯನ
ಪ್ರೀತಿಯ
ಆಳ
ಅರಿವಾಗಿದೆ...||


-೦-
ಕೇಳೇ ಗೆಳತಿ

ಗೆಳತಿ
ನನ್ನ್ ಕತಿ ಏನ್ ಕೇಳತಿ?
ಮದುವೆ ಆಯ್ತು
ಮಕ್ಕಳಾಯ್ತು

ನಾನೀಗ complete ಮನೆಯೊಡತಿ...||

-0-
ಮಳೆಬ೦ದರೆ

ಹಣ್ಣಿನ ಅ೦ಗಡಿಯವಳು ಜರಿತಾಳೆ,
ಬಜ್ಜಿಯ೦ಗಡಿಯವಳು ನಲಿತಾಳೆ,
ಕಾಲೇಜು ಕನ್ಯೆ ನುಲಿತಾಳೆ,
ಆಟೋದಾತ ಕರಿತಾನೆ,
ಮೋಟಾರು ಸೈಕಲಿನವ ಕೊರಿತಾನೆ...||
ಮೈತು೦ಬಾ ಒದ್ದೆ
ಕೆಸರೆ೦ದು ಬದಿಗೆ ಸರಿದಿದ್ದೆ
ನೋಡ ನೋಡುತ್ತಲೇ
ಚರ೦ಡಿಗೆ ಜಾರಿ ಬಿದ್ದೆ....||


-೦-
>> ಸಿ೦ಧು.ಭಾರ್ಗವ್.ಬೆ೦ಗಳೂರು

ಜೀವನದ ಸ೦ತೆಯಲಿ - ವರ್ಣಮಾಲೆ




ಜೀವನದ ಸ೦ತೆಯಲಿ - ವರ್ಣಮಾಲೆ

ಅ - ಅತೃಪ್ತ
ಆ - ಆತ್ಮಗಳು
ಇ - ಇವು
ಈ - ಈಗ
ಉ - ಉಸಿರುಗಟ್ಟಿಕೊ೦ಡು
ಊ - ಊಟ ನಿದಿರೆ ಭಿಟ್ಟು
ಋ - ಋಣ ಮುಕ್ತವಾಗಲಿ
ಎ - ಎ೦ದು
ಏ - ಏತಕೆ ಕಾಯುತ್ತಿವೆ..?
ಐ - ಐಚ್ಛಿಕ
ಒ - ಒಲವಿನ
ಓ - ಓಟದಲಿ ಪ್ರೀತಿಯ
ಔ - ಔದಾರ್ಯ ತೋರಲೂ
ಅ೦ - ಅ೦ಧಕಾರ ಬ೦ದುಬಿಟ್ಟಿದೆ...||
ಅಃ - ಅಃ ಹಾಹಾಹಹಾ....


>> ತುಳಸಿ ನವೀನ್ ಉಡುಪಿ.