Tuesday 30 August 2016

Yogaraaj Bhat ಯೋಗರಾಜ್ ಭಟ್ ರ ನೆನಪಲ್ಲಿ... "-ಗಳು"

ಫೇಸ್ ಬುಕ್ ಕರ್ಮಕಾಂಡ : ಯೋಗರಾಜ್ ಭಟ್ ರ ನೆನಪಲ್ಲಿ...


ಆಗಾಗ್ಗೆ ಮೂಡುವ
440Volts ಥಾಟ್ಸ್_ಗಳು..
ಗೋಡೆ ಮೇಲೆ
ಅಂಟಿಸುವ ಬರಹಗಳು..

ಸಾಲಲಿ ನಿಂತು
ಓದುವ ಜನಗಳು..
ಮೂರು ಲೈಕ್ ಗಳು
ಆರು ಕಮೆಂಟ್_ಗಳು..

ಬೇಡವೆಂದರೂ ಹೆಚ್ಚುವ
ಸ್ನೇಹಿತರ ಸಂಖ್ಯೆಗಳು..
ಇನ್ ಬಾಕ್ಸ್ ನಲ್ಲಿ
ನೂರಾರು 'ಹಾಯ್'ಗಳು..

ಉತ್ತರಿಸದಿದ್ದರೆ ಅವರಿಗೆ
ಆಗುವ ಬೇಸರಗಳು..
ನಮ್ಮಲ್ಲಿ ಮಾತನಾಡಲು
ಸಮಯದ ಅಭಾವಗಳು..

ಬೋರಾದಾಗೆಲ್ಲ ತೆರೆಮೇಲೆ
ಕುಣಿಯುವ ಸೆಲ್ಫೀಗಳು..
ಲೈಕ್ ಬರದಿದ್ದರೆ, ಮತ್ತೆ
ಡಲ್ ಆಗುವ ಮುಖಗಳು‌‌..

ಕಿರಿಕಿರಿ ,ರಗಳೆ ,ಜಗಳ,
ಕಾಲು ಎಳೆತಗಳು..
ಕೋಪದಲ್ಲಿ ಮಾಡುವ
ಬ್ಲಾಕ್ ಗಳು, ಅನ್ ಫ್ರೈಂಡ್ ಗಳು...

ಬೇಡವೆಂದರೂ
ತಳಕುಹಾಕಿಕೊಳ್ಳುವ ಗಾಸಿಪ್ ಗಳು..
ಕೊನೆಗೆ ನೆಮ್ಮದಿಗೆಂದು ತಾವಾಗೇ,
ಡಿ_ಅಕ್ಟಿವೇಟ್ ಆಗುವ ಜನಗಳು...!!


~ ಸಿಂಧುಭಾರ್ಗವ್ .ಬೆಂಗಳೂರು

ಹರೇ ಕೃಷ್ಣ. ಬಗ್ಗೆ ಭಕ್ತಿಭಾವ




ನಿಂದಕರು ಬೇಕಯ್ಯ ಮಂದೆಯೊಳಗೆ
ಮುಂದಡಿಯಿಡುವಾಗ ಹಿಂದಿಂದೆ ನಿಂದಿಸುತಾ
ಸರಿತಪ್ಪು ತಿಳಿಸುತಾ
ನಡೆವಾಗ ತಡೆಯಾಗುವ
ತಡೆದು ನಾವ್ ಮುಂದಡಿಯಿಡುವಾ...
ನಿಂದಕರು ಬೇಕಯ್ಯಾ ಮಂದೆಯೊಳಗೆ...
~
ಗುರಿಯ ಮುಟ್ಟಿದೊಡೆ
ಹಿಂತಿರುಗಿ ನೀನೋಡು ಒಮ್ಮೆ...
ನಿಂದಕರು ನಿಂತಲ್ಲೇ ಇಲ್ಲದಿರೆ ಕೇಳು ಒಮ್ಮೆ...
ನೊಂದುಕೊಳ್ಳದಿರು ಅವರ ಮಾತಿನಿಂದ
ಹಿಂದುಮುಂದು ಯೋಚಿಸುವ ಕೆಲಸ ಉಳಿಸುವರಯ್ಯ...
ನಿಂದಕರು ಬೇಕಯ್ಯ ಮಂದೆಯೊಳಗೆ....
!!...ಶ್ರೀ ಹರಿ ಕೃಷ್ಣಾರ್ಪಣ ಮಸ್ತು...!!
💐🙏💐🙏💐🙏💐🙏
ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು
💐🙏💐🙏💐🙏💐🙏
~ ಸಿಂಧುಭಾರ್ಗವ್ 

One of the romantic song which I never wrote before ( ಕವಿತೆ- ಮರೆತುಬಿಡಲೇನೋ ನನ್ನ...)

(@@@)
ಮರೆತುಬಿಡಲೇನೋ ನನ್ನ,
 ಸನಿಹದಲೇ ಕುಳಿತು ನಿನ್ನ..
ಮೈಮರೆತುಬಿಡಲೇನೋ ,
ನಿನ್ನ ಕಣ್ಗಳಲಿ ಬೆರೆತು ಚಿನ್ನ..
**
ಯಾವುದನ್ನು ಮುಚ್ಚಿಡಲಿ ಯಾವುದನ್ನು ಬಿಚ್ಚಿಡಲಿ
ನನ್ನ ಪ್ರೀತಿಯಂಗಳದಲ್ಲಿ...
ನಿನ್ನದೇ ಛಾಯೆ‌ ಮೂಡಿರುವುದು
ಈ ನನ್ನ ಕಂಗಳಲ್ಲಿ...
@
ನೀ ಸನಿಹವಿರುವೆ ಎಂಬ ನಂಬಿಕೆ ಎನಗೆ
ನೀ ದೂರಾದೂ ಚಿಂತಿಲ್ಲ ನೀನಿರುವೆ ನನ್ನೊಳಗೆ..
@
ಸಾಮಿಪ್ಯದ ನಲಿವು ಇಂದಿಲ್ಲ ಮನದಲ್ಲಿ
ನಿನ್ನ ವಿರಹದುರಿಯು ಸುಡುತಿಹುದು ತನುವಲ್ಲಿ..
@
ಜೀವವೇ ಬರುವುದು ನಿನ್ನೊಂದು ಮಾತಿಗೆ,
ಎನೆಂದು ಹೆಸರಿಡಲಿ ಈ ಭಾವಕೆ...
ಮಳೆಸುರಿಯುತಿದೆ ನಿನ್ನ‌ ಪ್ರೀತಿ ಅತಿಯಾಗಿ
ಮನಕರಗುತಿದೆ ಈಗ ಮರುಳಾಗಿ...
@
ನೀನೇ ಬೇಕು ಎಂದು ಮನ ಹಟಹಿಡಿಯುವ ಮುನ್ನ
ಸೇರಿಬಿಡು ಒಮ್ಮೆ ನನ್ನ ತೋಳನ್ನ..
ಬೇರೇನೂ ಬೇಕಿಲ್ಲ ನಿನ್ನ ವಿನಃ
ಸಿಗದಿದ್ದರೆ ಹುಟ್ಟಿ ಬರಬೇಕು ಪುನಃ
!!ಮರೆತುಬಿಡಲೇನೋ ನನ್ನ , ಸನಿಹದಲೇ‌ ಕುಳಿತು  ನಿನ್ನ..!!
@@@
~ ಸಿಂಧುಭಾರ್ಗವ್ .ಬೆಂಗಳೂರು

ಜೀವನದ ಸಂತೆಯಲಿ : ಮಂದವಾಗಿದೆ ಬೀದಿದೀಪ

ಜೀವನದ ಸಂತೆಯಲಿ : ಮಂದವಾಗಿದೆ ಬೀದಿದೀಪ

ಪ್ರತಿ ಸಂಜೆಯಾಯಿತೆಂದರೆ ಹಬ್ಬದ ವಾತಾವರಣವಿರುವ ಮಲ್ಲೇಶ್ವರಂ ಎಂಟನೇ ತಿರುವಿನಲ್ಲಿ ಸುತ್ತಾಡುವುದೇ ಕಣ್ಣಿಗೆ ಹಬ್ಬ... ಹದಿನೈದನೇ ತಿರುವಿನವರೆಗೂ ಸಣ್ಣಸಣ್ಣ  ವ್ಯಾಪಾರದಂಗಡಿಗಳು ರಸ್ತೆ ಬದಿಯಲ್ಲಿ ತುಂಬಾ ಕಾಣಸಿಗುತ್ತವೆ. ಹೂವಿನ ರಾಶಿ, ಹಣ್ಣು-ಹಂಪಲು, ಆಟಿಕೆಗಳು, ಬಟ್ಟೆ ವ್ಯಾಪಾರಿಗಳು, ಚಪ್ಪಲ್ ಅಂಗಡಿ, ಬ್ಯಾಂಗಲ್ಸ್ ,ಬ್ಯಾಗ್ ಗಳು, ತಿನ್ನಲು ಸ್ವೀಟ್ ಕಾರ್ನ್,‌ಕತ್ತರಿಸಿ ಅಲಂಕರಿಸಿಟ್ಟ ಮಾವು , ಚರುಮುರಿ, ಸಮೋಸ, ಕಚೋರಿ, ಕುಡಿಯಲು ಕಾಫಿ, ಟೀ, ಜ್ಯೂಸ್ ಏನಿದೆ ?ಏನಿಲ್ಲ ? ಕೇಳುವುದೇ‌ ಬೇಡ.‌ ಅಪರೂಪಕ್ಕಾದರೂ ಬೇಟಿ ನೀಡುವುದೆಂದರೆ ನಮಗೂ ಖುಷಿ. ತುಂಬಿದ ಜೇಬಿನೊಂದಿಗೆ ಹೋದರೆ‌ ಜೇಬು ಖಾಲಿಯಾಗಿ ಕೈತುಂಬಿಸಿಕೊಂಡು ಬರಬೇಕು..
**
ಮಳೆಗಾಲ ಬೇರೆ ಅಲ್ಲಿ ನೆಲದಲ್ಲಿ ವ್ಯಾಪಾರ ಮಾಡುವವರ ಕಷ್ಟ ಕೇಳುವುದೇ ಬೇಡ. ಜೋರಾಗಿ ಮಳೆ ಸುರಿಯಿತೆಂದರೆ, ಬಟ್ಟೆ-ಚೀಲದ ವ್ಯಾಪಾರಿಗಳು ಹೂವು ಮಾರುವ ಅಜ್ಜಿ ಎಲ್ಲರೂ ಗಡಿಬಿಡಿಯಲ್ಲಿ ಟಾರ್ಪಲ್ ಮುಚ್ಚುವುದರಲ್ಲೇ ಬಿಜಿ. ಜನರು ಮಳೆ ಬಂತು ಎಂದು ಓಡುತ್ತಾ ಸಿಕ್ಕ ಸಿಕ್ಕ ಅಂಗಡಿ ಎದುರಿನಲಿ ನಿಲ್ಲುತ್ತಿದ್ದರು.. ಒಂದಷ್ಟು ಸಮಯದ ನಂತರ ಮಳೆ ಬಿಟ್ಟಿತಾದರೂ ಮರದ ಕೊಂಬೆಯಿಂದ ಹನಿಯುತ್ತಿತ್ತು.. ಟಪ್ ಟಪ್ ತಲೆಗೆ ನೀರು ಬೀಳುತ್ತಿದ್ದರೂ ವ್ಯಾಪಾರ ನಿಲ್ಲಿಸಲಾಗದು. ಬ್ಯಾಂಗಲ್ ಅಂಗಡಿಯಾತ ಟೀ ಕುಡಿಯಲು ಹೋಗಿದ್ದ ನಾವು "ಬಳೆಗೆ ಎಷ್ಟು ?"ಎಂದು ಕೇಳಲು ಅವನಿರಲಿಲ್ಲ. ಅಲ್ಲೇ ಕೆಳಗೆ ಹೂ ಮಾರುತಲಿದ್ದ ಅಜ್ಜಿ "ಏನ್ ತಗೊಂಡ್ರು ನೂರು ರೂಪಾಯಿ" ಎಂದಳು.. ಇನ್ನೊಂದಷ್ಟು ಹೆಜ್ಜೆ ಮುಂದೆ ಹೋಗಿದ್ದೆವು ಪುಟ್ಟ ಮಗುವಿನ ಕೈಹಿಡಿದು ಅವನ ತಾಯಿಯನ್ನು ನಿಲ್ಲಿಸಿ ಕೈಗಡಿಯಾರದ ವ್ಯಾಪಾರಿ ಹಿಂದಿಯಲ್ಲಿ ಬೈಯುತಲಿದ್ದ.. ಯಾಕೆ ಕೇಳಿದರೆ ,ಆ ಮಗು ಯಾವಾಗಲು ಕದಿಯುವುದಂತೆ, ಆ ದಿನ ಕೈಗೆ ಸಿಕ್ಕಿದ. ನಾವಾಗೇ ಹೊಡೆಯುವುದು ಮಾಡಿದರೆ ದೊಡ್ಡ ಜಗಳವೇ ಆಗುತ್ತದೆ,ಜನರೆಲ್ಲ ಒಟ್ಟಾಗುವ ಹಾಗೆ ಮಗುವಿನ ತಾಯಿ ನಟಿಸುತ್ತಾಳೆ. ಅದಕ್ಕೆ ಅವನ ತಾಯಿಗೆ ಹೇಳಿದ್ದು. "ಇನ್ನೊಮ್ಮೆ ಈ ಬೀದಿಯಲ್ಲಿ ಕಾಣಿಸಿಕೊಂಡರೆ ಜಾಗೃತೆ"...ಎಂದು ಗದರಿಸಿದ. ಆ ಹುಡುಗ ವಾಚ್ ಎಳೆಯುವ ರಭಸದಲ್ಲಿ ಮೂರುನಾಲ್ಕು ವಾಚುಗಳು ಬಿದ್ದು‌ ಅದರ ಗ್ಲಾಸು ಒಡೆದುಹೋಗಿತ್ತು. ದಂಡ ತೆತ್ತುವವರ್ಯಾರು? ಅದೊಂದು ನಷ್ಟವೇ ತಾನೆ.
**
ಇನ್ನೊಂದು ಕಡೆ ಸೈಕಲ್ನಲ್ಲಿ ಸಮೋಸ ಮಾರುತ್ತಿದ್ದ ಹುಡುಗ " ಸ್ವೀಟ್ಕಾರ್ನ್ ಹುಡುಗನ ಹತ್ತಿರ ಹಣಕೊಟ್ಟು ಖರೀದಿಸಿ ತಿನ್ನುತ್ತಿದ್ದ, ಇವನು ಹಾಗೆ ಸಮೋಸವನ್ನು ಹಣ ಕೊಟ್ಟು ತಿಂದನು... ಅದನ್ನ ನೋಡಿ ನನಗೆ ಖುಷಿಯಾಗಿದ್ದು ಕಾರಣ, ವ್ಯಾಪಾರಕ್ಕೆ ವ್ಯಾಪಾರವೂ ಆಯಿತು, ಸ್ವಲ್ಪ ಹೊಟ್ಟೆಯೂ ತುಂಬಿತು... ತರಕಾರಿಗೆಲ್ಲ ನೀರುಬಿದ್ದು ಕೊಳೆಯಲು ಶುರುವಾಗಿದ್ದವು.. ಮಳೆಯಲ್ಲಿ ಶೀತಗಾಳಿಗೆ ಚರುಮುರಿ ಮುದ್ದೆಯಾಗಿತ್ತು. ಕೊಳ್ಳುವವರಿರಲಿಲ್ಲ. ಝಗಮಗಿಸುವ ಬೆಳಕಿನಲ್ಲಿ ಎ.ಸಿ.ಶೋರೂಂ ನಲ್ಲಿದ್ದ ಬಟ್ಟೆತೊಡಿಸಿದ ಗೊಂಬೆಗೆ ಚಳಿ ಶುರುವಾಗಿತ್ತು... ದುಪ್ಪಟ್ಟು ಕೊಟ್ಟಾದರೂ ಬ್ರ್ಯಾಂಡೆಡ್ ವಸ್ತುಗಳಿಗೆ ಮಾರುಹೋಗುವವರಿಗೇನು ಕಡಿಮೆಯಿಲ್ಲ..ಬೀದಿಯಲ್ಲಿದ್ದ ಬಟ್ಟೆಯೇ ಎ.ಸಿ ರೂಮಲ್ಲಿ ಮಾರಾಟ ಮಾಡಿದರೂ ಜನರಿಗೆ ತಿಳಿಯುವುದೇ ಇಲ್ಲ. ಕೆಲವೊಮ್ಮೆ ಕೊಳ್ಳುವವರಿಗೆ "ವ್ಯಾಪಾರಿಗಳ‌ ತಾಳ್ಮೆ ಪರೀಕ್ಷಿಸುವ ಕೆಟ್ಟ ಚಟ"..  ರಾತ್ರಿ ೮:೩೦ ಗಂಟೆಯಾದರೂ ಜನರೇನು ಕಡಿಮೆಯಾಗರು.  ಹಬ್ಬದ ವಾತಾವರಣವೂ ನಿಲ್ಲದು..ಆದರೂ, ಅವರಲ್ಲಿನ ಸ್ನೇಹ, ಪ್ರೀತಿ-ವಿಶ್ವಾಸ, ಸಾಮರಸ್ಯ ನೋಡಿದ ಸೂಕ್ಷ್ಮ ಮನಸ್ಸು ಅಲ್ಲೇ ಸುತ್ತುತ್ತಿದೆ.. ಅದರಲ್ಲೊಬ್ಬ ರಾತ್ರೆ ಹತ್ತಾದರೂ ಹೂವನ್ನು ಗುಡ್ಡೆಹಾಕಿಕೊಂಡು ಮಾರುತ್ತಿದ್ದ. ನೂರು ಗ್ರಾಮ್ಗೆ ಹತ್ತು ರೂಪಾಯಿ...ನೂರಕ್ಕೆ‌ ಹತ್ತು...ನೂರಕ್ಕೆ ಹತ್ತು...ಎಂದು. ಅವನ ಹೆಂಡತಿ ಮನೆ ಬಾಗಿಲಿಗೆ ಹತ್ತು ಸಲಿ ಬಂದು ಇಣುಕಿಹೋದಳು. ಒಲೆಯನ್ನು ಹಿಡಿಸಿ, ಮತ್ತೆ ಆರಿಸಿಹೋಗುತ್ತಿದ್ದಳು. ಪುಟ್ಟಮಗು ಅಪ್ಪ ತರುವ ಚಾಕಲೇಟಿಗೆ ಕಾಯುತ್ತಿತ್ತು.
ಕೊರೆಯುವ ಚಳಿ. ನಡುಗುತ್ತಲೇ ಬೊಬ್ಬೆಹಾಕುತ್ತಿದ್ದ. ಕೈಕಾಲು ತಂಡಿಗಟ್ಟಿತ್ತು. ಮಳೆರಾಯ ಬೇಕಂತಲೇ "ಧೋ..." ಎಂದು ಸುರಿಯುತ್ತ ಅವನ ಸಹನೆಯ ಜೊತೆ ಆಟವಾಡುತ್ತಿದ್ದ... ನೆನೆದ ಹೂವು ಕೆ.ಜಿ.ಗೆ ಲೆಕ್ಕ ಸಿಗದೆಂದು ಬೆಳಿಗ್ಗೆಯಿಂದ‌‌ ಯಾರು ಕೊಳ್ಳಲಿಲ್ಲ. ಆ ದಿನದ ವ್ಯಾಪಾರದಲ್ಲಿ ಹಾಲು , ಹಿಡಿಯಷ್ಟು ಅಕ್ಕಿ-ಬೇಳೆ, ನಾಲ್ಕು ತರಕಾರಿ , ಮೂರು ಮೊಟ್ಟೆ ತೆಗೆದುಕೊಂಡು ಹೋದರೆ ಮಧ್ಯರಾತ್ರೆ  ಒಂದು ಊಟಮಾಡಬಹುದು. ಈ ದಿನ ಹಣದ ಚೀಲ ತುಂಬಲಿಲ್ಲ. ಗಂಟೆಯೂ ಆಯ್ತು. ಎಲ್ಲ ಬ್ಯಾಗಿಗೆ ತುಂಬಿಸಿ ಭಾರವಾದ ಮನಸ್ಸಿನಿಂದ ಮನೆಗೆ ವಾಪಾಸ್ಸಾದ.
ಬಾಗಿಲಿನಲ್ಲಿಯೇ ಹೆಂಡತಿ ಅವನ ಕೈನೋಡಿದಳು. "ಐದು ಮೊಟ್ಟೆ ತೆಗೆದುಕೊಳ್ಳುವಷ್ಟು ವ್ಯಾಪಾರವಾಯ್ತು ಮಾರಾಯ್ತಿ.. ಇದನ್ನೆ ಆಮ್ಲೇಟ್ ಮಾಡಿ ತಿನ್ನುವ. ಬೇಸರಿಸಬೇಡ.."
"ಹ್ಮ.. ನಮಗೆ ಅಡ್ಡಿಲ್ಲ. ಮಗು..?!. ಅದು ಪದೆ ಪದೇ ಏಳುತ್ತದೆ. ಹಸಿವಾಗಿ ಹೊಟ್ಟೇಲಿ ಸಂಕಟವಾಗುತ್ತೆ. ಆಗ ನಾನೇನು ಕೊಡಲಿ.?!
ನಾನು ಕೆಲಸಕ್ಕೆ ಹೋಗುತ್ತಿದ್ದೆ. ನನ್ನಿಂದಲೇ ಇಷ್ಟೆಲ್ಲ ಕಷ್ಟ ನಿಮಗೆ.. ಕ್ಷಮಿಸಿ.."
" ಅಯ್ಯೋ... ಹುಚ್ಚಿ , ನೀ ಇಲ್ಲದಿದ್ದರೆ ನಾನು ಇಷ್ಟೂ ದುಡಿಯುತ್ತಿರಲಿಲ್ಲವೇನೋ.. ? ಈಗೊಂದು ಜವಾಬ್ದಾರಿ ಬಂದಿದೆ. ನೀನೇ ನನಗೆ ಸ್ಪೂರ್ತಿ. ನಮ್ಮ ಮನೆ ಲಕ್ಷ್ಮಿ ನೀನು... ಏನೇನೋ ಯೋಚಿಸಬೇಡ.." "ಮಗು ಒಂದಾದರೂ ಬೇಕೇ ಬೇಕು, ನಮ್ಮ ನೋವು ಮರೆಸಲು ಅವಳೇ ಪುಟ್ಟದೇವತೆಯಾಗಿ ಬಂದಿದ್ದಾಳೆ. ಎಂದು ಸಮಾಧಾನ ಮಾಡುತ್ತಿದ್ದ.. ಅಲ್ಲೇ ಹತ್ತಿರದಲ್ಲಿದ್ದ ಮಗು "ಅಪ್ಪಾ... ಚಾಕಲೇಟ್ ತರಲಿಲ್ವಾ.. ಬೇಡಬಿಡು ನಾಳೆ‌ ತಾ ಆಯ್ತಾ.." ಎಂದಾಗ ಗಂಡಹೆಂಡತಿರು ಮಗುವನ್ನು ಗಟ್ಟಿಯಾಗಿ ತಬ್ಬಿಕೊಂಡು ಅಳತೊಡಗಿದರು.
ಹಾಗೆ ಮಾಡಿದ ಆಮ್ಲೇಟನ್ನು ತಿಂದು‌ ಮಲಗಿದರು..
**
ಇಂತಹದ್ದು ಸಾವಿರಾರಿದೆ.‌ ಅಂದಂದಿನ  ದುಡಿಮೆಯಿಂದ‌ ಜೀವನ ಸಾಗಿಸುವಂತಹ ಜನರು. ಚೆನ್ನಾಗಿ ವ್ಯಾಪಾರವಾದರೆ ಹೊಟ್ಟೆತುಂಬಾ ಊಟ, ಇಲ್ಲದಿದ್ದರೆ ತಣ್ಣೀರು ಬಟ್ಟೆ. ಯಾರೂ ಗಮನಿಸಿರುವುದೇ ಇಲ್ಲ ನೋಡಿ.

ಸಿಂಧು ಭಾರ್ಗವ್.

ಕವಿತೆ- ಈಗೀಗ ನಿದಿರೆಯೂ ಇಲ್ಲ ನೀರು ಬೇಕಿಲ್ಲ


(@@@)
ಈಗೀಗ ನಿದಿರೆಯೂ ಇಲ್ಲ,
ನೀರು ಬೇಕಿಲ್ಲ,
ಹೂವನು ನೋಡಿ ನಗುತಿರುವೆ,
ರೆಕ್ಕೆಯ ಸಾಲವ ಪಡೆದಿರುವೆ,
ಅಬ್ಬಬ್ಬಾ ಈ ಸೆಳೆತವೂ ಹಿತವಾಗಿದೆ..
ಒಲವಾಗಿದೆ ಎಂಬ ಸೂಚನೆ ಇದೆ..!!
**
ಎದೆಬಡಿತ ಅತಿಯಾಗಿದೆ,
ಸನಿಹದಲಿ ಬಂದು ನಿಂತಿರಬಹುದು..
ರೆಪ್ಪೆಗಳು ಮಾತನಾಡುತಿವೆ,
ಅವನ ನೆರಳು ಸುಳಿದಿದೆ ಎಂದು...
*
ಕಾಲ್ಗಳಂತು ನಿಲ್ಲದಾಗಿದೆ,
ಓಡೋಡಿ ಅವನ ಸೇರಬೇಕೆಂದು...
ಗಾಳಿಯು ತಿಳಿಸಿಹೋಯಿತು
ಅವನು ಬರುವ ಸೂಚನೆಯೊಂದು...
*
ಕಾಯುತಲಿರುವೆ ನಿನಗಾಗಿ,
ಬರುವೆಯಾ ನೀ ನನಗಾಗಿ...
ಅದೇ ನೋಟ ಅದೇ ನಗುವು ಕಾಡುತಲಿದೆ ದಿನವು..
ಎಂದು ಬರುವುದೋ ನಿನ್ನ ಕಾಣುವ ಸುದಿನವು..
ಕಾಯುತಲಿರುವೆ ನಿನಗಾಗಿ,
ಬರುವೆಯಾ ನೀ ನನಗಾಗಿ...!!

~ ಸಿಂಧುಭಾರ್ಗವ್

ಕವಿತೆ- ನಿನ್ನ ಅರಸುತ್ತಾ

(@@@)

ಕವಿತೆ - ನಿನ್ನ ಅರಸುತ್ತಾ
********************
ನಿನ್ನ ಅರಸುತ್ತ ನೀ ತಿರುಗುತ್ತಿದ್ದ ಬೀದಿಗೊಮ್ಮೆ ಹೋಗಿದ್ದೆ...!
ಅಲ್ಲೆಲ್ಲ ಸಾವಿರಾರು ಹೆಜ್ಜೆಗುರುತುಗಳು ಅಚ್ಚಾಗಿದ್ದವೇ ಹೊರತು ನೀನೆಲ್ಲೂ ಕಾಣಿಸಲೇ ಇಲ್ಲ...!
ನಿನ್ನ ನಗು, ದನಿ ಪ್ರತಿಧ್ವನಿಸುತ್ತಲೇ ಇತ್ತು ಹೊರತು ನೀನೆಲ್ಲೂ ಕಾಣಿಸಲೇ ಇಲ್ಲ...!
ದಿನಪೂರ್ತಿ ಅಲೆದರೂ ದಣಿದೆನೇ ವಿನಃ ನೀನೆಲ್ಲೂ ಕಾಣಿಸಲೇ ಇಲ್ಲ...!

ಯಾರಿಗೂ ಕಾಣಿಸದ ನೀನು ನನ್ನ ನೆರಳಿನ ಜೊತೆ ನಡೆದುದಂತು ನಿಜ..!
ನೀನು ಸ್ಪರ್ಶಿಸಿದಂತಾಗಿ ಮೈಜುಮ್ ಎನಿಸಿದ್ದಂತು ನಿಜ..!
ನಿನ್ನ ಹೆಜ್ಜೆ ಮೇಲೆ ನಾನು ಹೆಜ್ಜೆ ಇಟ್ಟು ಮನದಲ್ಲೇ ಲಜ್ಜೆಪಟ್ಟದ್ದಂತು ನಿಜ...!
ಚಿಟಪಟ ಮಳೆಯಲಿ ನೆನೆಯುವಾಗ ನೀ ಕೊಡೆ ಹಿಡಿದಂತೆ ಭಾಸವಾದುದು ನಿಜ..!
ಪ್ರೀತಿಯ ಸವಿ ನೆನಪಿಗೆ ಆ ದಿನಪೂರ್ತಿ ಸಾಕ್ಷಿಯಾದದ್ದಂತೂ ನಿಜ..!

ಆದರೆ ನೀ ಎಲ್ಲೂ ಕಾಣಿಸಲೇ ಇಲ್ಲ...!!

 #ಪ್ಯಾರ್_ಮೆ_ಹಮ್_ಚಲ್ತೆ_ಚಲ್ತೆ.. 😊
😍#ಸಿಂಧು ಭಾರ್ಗವ್ 😍

ಅದ್ಭುತ ಸಾಲುಗಳ ಕೂಡಿಡಲೇ ಬೇಕು

ಅದ್ಭುತ #Photography,  ಯಾರಿಗೂ ಹೊಳೆಯದಂತಹ #Thoughts,  ಇದೆಲ್ಲದಕ್ಕಿಂತಲೂ ಮಿಗಿಲಾಗಿ ಶುದ್ಧ ಅಂತಃಕರಣ,, ನಿಮ್ಮ ಪ್ರತಿಭೆಗೆ ನನ್ನದೊಂದು ದೊಡ್ಡ ಸಲಾಮ್.
.
ಸಂಸಾರದೊಳಗಿನ ಎಲ್ಲಾ ಜಂಜಡಗಳ ನಡುವೆಯೂ #ಮಗುವಿನಂತೆ ಬದುಕಿಬಿಡುವುದೆಂದರೆ, ಅದೊಂಥರಾ  Capacity.  ಅದೇನೋ ಹಂಬಲ, ಹುಡುಕಾಟ, ನಿಮ್ಮ ಬರಹಗಳ ಎಡೆಯಲ್ಲಿ ಇಣುಕುತಿದೆಯಲ್ಲ, ಅದು ನಿಮ್ಮನ್ನು ಹುಡುಕಿಕೊಂಡು ಬೇಗ ಬರಲಿ. ಮತ್ತೆಂದು ನಿಮ್ಮನ್ನು ಬಿಟ್ಟು ತೆರಳದಂತೆ ಗಟ್ಟಿಯಾಗಿ ತಬ್ಬಿಕೊಂಡು ಬಿಡಲಿ. ನನ್ನ ಮೇಲಿಟ್ಟಿರುವ ಪ್ರೀತಿ ಕಾಳಜಿಗೆ ಆಭಾರಿ.

ಜನುಮ ದಿನದ ಭಾಷಣ (ಹಾಸ್ಯ ಲೇಖನ)

ಇಂದಿನ ಈ ಸುಸಂದರ್ಭದಲ್ಲಿ ಶಶಾಂಕ್ ರವರ ಒತ್ತಾಯದ‌ ಮೇರೆಗೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದೇನೆ. ಮಾತನಾಡಲೇಬೇಕು ಎಂಬ ಒತ್ತಾಯಕ್ಕೆ ಮಣಿದು ನೀವೆಲ್ಲ ಮುಖಕ್ಕೆ ಮೊಟ್ಟೆ ಎಸೆಯುವುದರೊಳಗೆ ಮೂರು ಮಾತನಾಡಿ ಮುಗಿಸಲಿದ್ದೇನೆ.. 😝
*
ಮೊದಲಿಗೆ ನಲ್ಮೆಯ ಸಹೋದರ(ರಿ)ಯರಿಗೂ ,ಸ್ನೇಹಿತ ವರ್ಗಕ್ಕೂ ಹೃತ್ಪೂರ್ವಕ ವಂದನೆಗಳು..👏 ಜನುಮ ದಿನವನ್ನು ಆಚರಿಸುವುದಿಲ್ಲ‌ ಎಂದು ಯೋಚಿಸಿದ್ದೆ. ಆದರೆ ನಿಮ್ಮೆಲ್ಲರ ಪ್ರೀತಿಯಿಂದ ಇವತ್ತು ಮನದಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ಮೂಡಿದೆ..ಉತ್ಸವ ಮೂರ್ತಿ ತರಹ. ನಿಜ. ಮೇಲ್ಮನೆಯ ಅಕ್ಕನಿಂದ(ಮಾರ್ವಾಡಿ'ಸ್) ಬೆಳಿಗ್ಗೆ ಪಲಾವ್, ಎದುರುಮನೆ ಅಕ್ಕನಿಂದ( ಕೊಂಕಣೀಸ್ ) ಮಧ್ಯಾಹ್ನ ಊಟ, ಸಂಜೆಗೆ ಪಕ್ಕದ ಮನೆ ಅಕ್ಕನಿಂದ(ತಮಿಳಿಯನ್ನರು) ಕ್ಯಾರೇಟ್ ಹಲ್ವಾ..
ಅಬ್ಬಾ.. ಎಲ್ಲರ ಮನೆಮಗಳು ನಾನು. ಊರಿಗೆ ಹೋದರು ಹೀಗೆ ಎಲ್ಲರು ಪ್ರೀತಿಯಿಂದ ಪತ್ರೊಡೆ, ಸಿಹಿಕಡುಬು, ಅಮ್ಮ,  ಅಪ್ಪ ಹೀಗೆ ಎಲ್ಲರೂ ತಿನ್ನಸುವುದೇ..
ನಿಸ್ವಾರ್ಥ ಪ್ರೀತಿ ಸ್ನೇಹವನ್ನು ಹಂಚಿದಷ್ಟು ವಾಪಾಸ್ಸು ಬರುತ್ತದೆ ಎನ್ನುವುದು ಸಾಬೀತಾಯಿತು...
ಬಹುಮುಖ್ಯವಾಗಿ ನನ್ನ ಕಡೆಯಿಂದ ಪಾರ್ಟಿ ?! ಮನೆಗೆ ಕರೆಯುವ ಅಂತ ಇದ್ದೇ. ಆದರೆ, ನನಗೆ " #ಗಂಜಿ ಹುರುಳಿ_ಚಟ್ನಿ " ಬಿಟ್ಟರೆ ಬೇರೇನು ಮಾಡಲು ಬರದು. ನಿಮಗೆ ಇಷ್ಟ ಆಗುತ್ತೋ ಇಲ್ವೋ.. 😢😖😇
ಹೋಟೆಲ್ ಗೆ ಕರೆಯುವ ಅಂದ್ರೆ " ಹೊರಗಿನ ಫುಡ್ ಆರೋಗ್ಯ ಕೆಡಿಸುತ್ತದೆ " ಎಂದು ಡಾಕ್ಟರ್ ದಿನವೂ ಟಿ.ವಿ , ಪೇಪರ್ಲಿ ಹೇಳ್ತಾ ಇರ್ತಾರೆ. ನಿಮ್ಮ ಬಗ್ಗೆ ತುಂಬಾಆಆ... ಕಾಳಜಿ ಎನಗೆ. 😝 ಸೋ ಏನುಮಾಡಲಿ ಎಂಬುದೇ ಗೊಂದಲವಾಗಿದೆ..😝👏

ಕೊನೆಯದಾಗಿ,
ಎಲ್ಲರ ಹಾರೈಕೆಗಳಿಗೂ ಲೈಕ್ ಮಾಡುತ್ತೇನೆ ಸಮಯಬೇಕು.. ಇನ್ನು ಒಂದುವಾರ ಅದೇ ಕೆಲಸ ನನಗೆ. ನನ್ನಕಡೆಯಿಂದ ಯಾವ ಪೋಸ್ಟ್ ಬರುವುದಿಲ್ಲ..
ನಿಮ್ಮೆಲ್ಲರ ಪ್ರೀತಿ ಹೀಗೆ ಇರಲಿ.
ವಂದನೆಗಳೊಂದಿಗೆ,
😍 ಸಿಂಧು_ಭಾರ್ಗವ್.. 😍

I love my parents

ನಾನು ಒಂದು ಕತೆ ಹೇಳಲಾ?!?
~~~~~~~~~~~~~~
ರೈತಾಪಿ ಕುಟುಂಬದಲ್ಲಿದ್ದ ದಂಪತಿಗಳಿಗೆ ಕೃಷಿ ಬಿಟ್ಟರೆ ಬೇರೆ ಏನೂ ತಿಳಿದಿರಲಿಲ್ಲ..
ಗಂಡ ಹೆಂಡತಿ ನಾಲ್ಕು ವರುಷದ ಮಗು ಚಿಕ್ಕ ಸಂಸಾರವಾದರು ಬಡತನವೇ ಹೊದ್ದುಕೊಂಡಿದ್ದರು. ಹಸು, ಕೊಟ್ಟಿಗೆ, ಗದ್ದೆ ಮನೆ ಕೆಲಸವೇ ಜಾಸ್ತಿಯಾಗಿತ್ತು. ಚಿಕ್ಕ ಹೋಟೆಲ್ ಬೇರೆ ಇತ್ತು. ಆ ಪುಟ್ಟ ಮಗುವನ್ನು ಕಂಬಕ್ಕೆ ಕಟ್ಟಿಹಾಕಿ ಹಸುವಿಗೆ ಒಂದು ಬುಟ್ಟಿ ಹುಲ್ಲು ತರಲು ಹೋಗಿತ್ತಿದ್ದರು ತಾಯಿ. ತಂದೆಗೂ ಮೈತುಂಬಾ ಕೆಲಸ.. ಹಾಗೆ ಎರಡನೇ ಗರ್ಭಿಣಿ ಎಂಬ ಸುದ್ಧಿ ಬಂದಿತು. ಕೆಲಸವೇನೂ ಕಡಿಮೆಯಾಗಲಿಲ್ಲ. ಬಸುರಿ ಹೆಂಗಸು ಬೆನ್ನು ಬಾಗಿಸಿ ಕೆಲಸ ಮಾಡಿದಷ್ಟು ಒಳ್ಳೆಯದು , ಹೆರಿಗೆ ಸುಲಭವಾಗುತ್ತೇ...ಎಂಬುದು ಹಿರಿಯರ ಅಂಬೋಣ.. ಅವರಿಗೂ ಹೌದೇನೋ.
?! ಎಂದು ಕೆಲಸ ಮಾಡುತ್ತಲೇ ಇದ್ದರು. ಏಳು ತಿಂಗಳ ಗರ್ಬಿಣಿಯಾಕೆ. ಒಮ್ಮೆ #ಏತದಿಂದ ನೀರು ಸೇದಿ ನಾಲೆಗೆ ಹಾಯ ಬಿಡುತ್ತಿರುವಾಗ ವಿಪರೀತ ಹೊಟ್ಟೆನೋವು ಕಾಣಿಸುತ್ತದೆ . ಬೊಬ್ಬೆ ಹಾಕಲು ಶುರುಮಾಡಿದಳು. ಗಂಡನಿಗೆ ಕೈಕಾಲು ಆಡುತ್ತಿರಲಿಲ್ಲ. ಸರ್ಕಾರಿ ಹತ್ತಿರದ ಆಸ್ಪತ್ರೆ ಗೆ ಕರೆದುಕೊಂಡು ಹೋದರು.

ವೈಧ್ಯರು ಪರೀಕ್ಷಿಸಿ "ಏನು? ತಾಯಿ-ಮಗುವನ್ನು ಸಾಯಿಸಬೇಕು ಅಂತ ಇದ್ದೀರಾ..?! ಮೊದಲ ಮಗುವಾಗುವಾಗ ಇರುವ ಕಾಳಜಿ ಎರಡನೇ ಮಗುವಿಗೆ ಯಾಕಿಲ್ಲ..?! ಇವರನ್ನು ಮನೆಗೆ ಕಳುಹಿಸಲಾಗದು? ಮಗು ಇನ್ನು ಬೆಳವಣಿಗೆ ಹೊಂದಿಲ್ಲ, ಹೆರಿಗೆಯಾಗುವ ತನಕ ಬೆಡ್ರೆಸ್ಟ್ ನಲ್ಲೆ ಇರಬೇಕು. ಇಲ್ಲದಿದ್ದರೆ ಇಬ್ಬರೂ ಸಾಯಬಹುದು.. ಎಂದು ಗದರಿಸಿದರು.
ಗಂಡನಿಗೆ ಭಯವಾಯಿತು. ಮನೆಯಲ್ಲಿ ಮಗು ಚಿಕ್ಕದು, ರಾಶಿಬಿದ್ದ ಕೆಲಸಗಳು, ಕೈಲಿ ಕಾಸಿಲ್ಲ, ಹೋಟೆಲ್ ನಡೆಸುವುದಾ!? ಇವಳನ್ನು ನೋಡಿಕೊಳ್ಳುವುದಾ? ಆ ಮಗುವನ್ನು?! ಯಾರ ಸಹಾಯವೂ ಇಲ್ಲ. ಒಮ್ಮೆಗೆ ತಲೆ ಕೆಟ್ಟು ಹೋಗುತ್ತದೆ..
ಆಯ್ತು ಎಂದು ಒಪ್ಪಿದರು. ಮಗು ಹಡೆಯುವ ತನಕ ಆಸ್ಪತ್ರೆಯಲ್ಲೇ..
 ಮೂರು ಹೊತ್ತು ತಿಂಡಿ, ಊಟ, ಹಾಲು,ಹಣ್ಣುಹಂಪಲು, ಸ್ನೇಹಿತರ ಜೊತೆ ಮಾತುಕತೆ, ಕಷ್ಟಸುಖ ಹಂಚಿಕೊಳ್ಳುವುದು, ದೇವರ ದ್ಯಾನ, ಗಂಡನ ಕಷ್ಟ ನೋಡಿ ಒಳಗೊಳಗೆ ಅಳುವುದು, ಗಂಡನ ಮೇಲೆ ಇನ್ನೂ ಹೆಚ್ಚಾದ ಪ್ರೀತಿ.. ಹೀಗೆ ಗರ್ಭದೊಳಗಿದ್ದ ಮಗುವಿಗೆ ಎಲ್ಲವೂ ಎರಕವಾಯಿತು..
ಆರೋಗ್ಯಪೂರ್ಣ, ಗುಂಡಮ್ಮ ಹುಟ್ಟಿದಳು.
ಮೊದಲ ಬಾರಿ ನೋಡಿದ ತಾಯಿ " ಅಯ್ಯೋ ಮುಖ ಒಳ್ಳೆ ಗುಂಬಳಕಾಯಿ ತರ ಇದೆ. ನನಗೆ ಬೇಡ ಈ ಮಗು ಎಂದಿದ್ದರಂತೆ.
(@@@)
ಇದು ನನ್ನ ಹೆತ್ತವರ ಕತೆ.
ಅಂದರೆ ನನ್ನದೇ ಕತೆ.
#ಕತೆಯಲ್ಲ_ಇದು_ಜೀವನ.

ಅದಕ್ಕೇ ಹೇಳೊದು..
#ಮಗುವಿಗೆ_ಜನ್ಮ
#ತಾಯಿಗೆ_ಪುನರ್ಜನ್ಮ..

~ ಸಿಂಧುಭಾರ್ಗವ್ .‌ಬೆಂಗಳೂರು

ರಾಧಾಕೃಷ್ಣ ಮಾತುಕತೆ ಕವನ ಶ್ರೀಮತಿ ಸುರಭಿ ಅವರಿಂದ

(@@@)

ಗೋಕುಲದಲ್ಲಿ ಸಖಿಯರ ಸೇರುತಲಿ 
ನಗುತ ಹಾಡುತಲಿ , ಒಲವ ತೋರುತಲಿ 
ಕೃಷ್ಣ ನ ಜೊತೆ ಸರಸವಾಡಿರಲು 
ರಾಧೆಯ ಮನ ಸುಮ್ಮನಿರುವುದೇ 
ತನು ಮನ ಬೆಂಕಿಯಾಗದೇ
*
ಗೋಪಿಕೆಯರ ಜೊತೆ ಕೂಡಿದರೇನು 
ಕಂಡದ್ದೆಲ್ಲ ನಿಜವೇನು , ಅನುಮಾನವೇನು 
ಕೃಷ್ಣನ ಮನದಲ್ಲಿ ರಾಧೆಯೇ ತುಂಬಿರಲು 
ಸಖಿಯರಲ್ಲಿ ರಾಧೆಯನ್ನು ಕಂಡಿರಲು 
ನೊಂದಳೇ ರಾಧೆ , ಕೃಷ್ಣ ನ ಅರಿಯದೇ...?

ಸುತ್ತಿರಲು ಸಖಿಯರು ಅತ್ತ , ಇತ್ತ 
ರಾಧೆಯ ಮನವು ಕೃಷ್ಣನ ನೆನೆಯುತ್ತ 
ಮರೆವನೇನೋ ಎಂಬ ಭಯದಿ ,
ಕೂತಳು ರಾಧೆಯು ಚಿಂತಿಸುತ್ತ

ನಕ್ಷತ್ರ ಗಳ ನಡುವೆ ಚಂದ್ರ ನಂತೆ 
ಸಖಿಯರ ನಡುವೆ ರಾಧೆ ನೀನಂತೆ 
ಹಿಂದು , ಮುಂದು ಅರಿಯದೇ 
ಅಪವಾದಿಸಿದಳೇ ರಾಧೆ

ಗೋಪಿಯರು ಬಂದು ಹೋಗುವರು 
ರಾಧೆಯನ್ನು ಹೋಲುವರೇ ಅವರು? 
ಹಗಲೆನ್ನದೆ , ಇರುಳೆನ್ನದೆ ಕೃಷ್ಣ ನ 
ಎದೆಯ ಕನವರಿಕೆಗಳು ರಾಧೆಯದೆ

ಕೃಷ್ಣನ ಕಮಲದಂತ ಕಾಂತಿ 
ಕಸಿದುಕೊಳ್ಳುವರೆಂದು ಭೀತಿ 
ಸಖಿಯರ ಮೋಹಕ ಸೆಳೆತ 
ನಲ್ಲನ ಸೆರೆಮಾಡಿತೆಂದು 
ರಾಧೆಯ ಎದೆಯ ಮಿಡಿತ

ಗೋಪಿಕೆಯರ ಸಂಗದಲ್ಲಿ 
ನೆನಪು ಮರೆಯಾಗದಿರಲಿ 
ಬೇಡಿದಳು ರಾಧೆ , ಕೃಷ್ಣ ನಲ್ಲಿ 
ಕೃಷ್ಣ ನು ತಬ್ಬಿ ಬರವಸೆ ಇತ್ತನು 
ರಾಧೆಗೆ ಕಣ್ಣು ಗಳಲ್ಲಿ....
(@@@)


Happy Rakshabandhan. ನೂಲು ಹುಣ್ಣಿಮೆಯ ಶುಭಾಶಯಗಳು

ರಕ್ಷಾ ಬಂಧನ ಅಣ್ಣ ತಂಗಿ ಅಕ್ಕ ತಮ್ಮಂದಿರಿಗೇ ಇರುವ ಹಬ್ಬ.. ರಕ್ಷೆ ನೀಡು ಎಂದು ಕೇಳಿಕೊಳ್ಳುತ್ತಾ ಆಶಿರ್ವಾದ ಪಡೆಯುವ ಸುದಿನ...

(@@@)
ಚಿಕ್ಕದಿರುವಾಗ ನನ್ನ ಗೆಳತಿ , #ತಮ್ಮ ಕೊಟ್ಟ‌ ಉಡುಗೊರೆಯನ್ನೆಲ್ಲಾ ತೋರಿಸಿ ಪರಿಪರಿಯಾಗಿ ವರ್ಣಿಸುತ್ತಿದ್ದಾಗ ನನಗೆ ಅಳುವೇ ಬರುತ್ತಿತ್ತು. ಇನ್ನೊಬ್ಬ ಮಿತ್ರ ತನ್ನ ಅಕ್ಕ ,ಅಣ್ಣ ರಾಖಿ ಕಟ್ಟಿದರು ಎಂದು ಎಲ್ಲರಿಗೂ ತೋರುವ ಹಾಗೆ ಕೈಮುಂದೆ ಮಾಡುತ್ತಿದ್ದ.. ಆಗೆಲ್ಲ ತುಂಬಾ ಸಂಕಟ ಯಾಕೆ ಅಂತ ಗೊತ್ತಾಗುತ್ತಿರಲಿಲ್ಲ.. #ಹೆಣ್ಣಿನ_ಜನುಮಕೆ_ಅಣ್ಣ_ತಮ್ಮಂದಿರು_ಬೇಕು.. ಎಂದು ಹಾಡು ಹಾಡುವರು.. #ಇಲ್ಲದಿದ್ದರೆ ಏನು ಮಾಡುವುದು..😭😭😭
ನಮ್ಮ ತಂದೆ ಕಡೆಯಿಂದ ಏಕೈಕ ಪುತ್ರರತ್ನ ಇರುವುದು. ಅವರು ನಮಗಿಂತ ಇಪ್ಪತ್ತು ವರುಷ ದೊಡ್ಡವರು. ಅವರ ಜೀವನವೇ ಬೇರೆ. ಹಾದಿಯೇ ಬೇರೆ. ನಾವೆಲ್ಲ ಚಿಕ್ಕವರು. ಹಾಗಾಗಿ  ನನ್ನ ಈ ೨೫ ವರುಷದಲ್ಲಿ ಒಮ್ಮೆಯೂ ಯಾರಿಗೂ ರಾಖಿ ಕಟ್ಟಿ ಸಂಭ್ರಮಿಸಲಿಲ್ಲ.. ತಾಯಿಕಡೆಯವರಿದ್ದರೂ ಅಂತಃ ಸಂಧರ್ಭವೂ ಬರಲಿಲ್ಲ.
*
ಇದೇ ಮೊದಲ ಬಾರಿಗೆ, ನಿನ್ನೆ ರಾಖಿಯಂಗಡಿಗೆ ಹೋಗಿದ್ದೆ.. ಅಲ್ಲಿ ಎಷ್ಟು ಚಂದಚಂದದ ರಾಖಿಗಳಿದ್ದವು.. ಕೃಷ್ಣನ ಮುಖದ್ದು, ನವಿಲುಗರಿಯದ್ದು, ನವಿಲು, ಪರ್ಲ್ಗಳಿಂದ‌ ಮಾಡಿದ್ದು , ಸ್ಟೋನ್ಸ್ ಗಳಿಂದ ಮಾಡಿದ್ದು.. ಒಂದೊಂದು ರಾಖಿ ಕೈಯಲ್ಲಿ ಹಿಡಿದು ನೋಡಿದಾಗಲೂ "ಥೋ.. ಮನಸ್ಯಾಕೋ ತುಂಬಾ ಭಾರವಾಗುತ್ತಿತ್ತು... ಅಲ್ಲಿ ಅಳುವುದು ಏನು ಚಂದ ಎಂದು ಸಮಾಧಾನಮಾಡಿಕೊಂಡೆ.."
#ನಾನು ಮೊನ್ನೆ ಪೋಸ್ಟ್ ಮಾಡಿದ್ದಕ್ಕೆ ತುಂಬಾ ಅಣ್ಣಂದಿರು ವಿಳಾಸ ಕಳುಹಿಸಿದ್ದರು. ಎಲ್ಲರಿಗೂ ರಾಖಿ ಕಳುಹಿಸಿದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ರಾಖಿ ತೆಗೆದುಕೊಂಡಿದ್ದೆ.. ತುಂಬಾ ಖುಷಿಯಾಯಿತು. ಇಲ್ಲೊಬ್ಬರು ಹೇಳಿದರು ರಾಖಿ ಎದುರಲ್ಲಿ ಕೈಗೆ ಕಟ್ಟಿದರೆ ಚಂದ, ಕಳುಹಿಸುವುದರಲ್ಲಿ , ಗ್ರೀಟಿಂಗ್ಸ್ ಗಳಲ್ಲಿ ಏನಿದೆ " ಎಂದು..
ನನಗಂತು ಈ ವರುಷ ಹಬ್ಬವೇ.. ಯಾರು ಏನೇ ಹೇಳಿದರೂ.. ಅಡ್ಡಿ ಇಲ್ಲ.. ತುಂಬಾ ಭಾವುಕಳಾಗಿದ್ದೇನೆ..
ಜೊತೆಗಿರುವ ನಾಲ್ಕು ದಿನವಾದರೂ ಖುಷಿಯಿಂದ ನಗುನಗುತ್ತಿರೋಣ.
ಅಣ್ಣ ತಂಗಿ ಎಂದು ಜೊತೆಗೆ ಇರಬೇಕೆಂದೇನು ಇಲ್ಲ. ದೂರದಲ್ಲಿದ್ದರೂ ಸದಾ ಒಳಿತನ್ನೇ ಬಯಸಿದರೂ ಸಾಕು... ಪವಿತ್ರವಾದ ಸ್ಥಾನಕ್ಕೆ ಮಸಿ ಬಳಿಯದಿದ್ದರೆ ಸಾಕು...
ಎಲ್ಲರಿಗೂ ಧನ್ಯವಾದಗಳು..
@@@

ಹನಿ-Honey

ಹನಿ-Honey
***********
ಮುಂಜಾನೆಯೇ ನೀ
ಮುತ್ತಿಟ್ಟರೆ ಕೆನ್ನೆಗೆ..
ದಿನವಿಡೀ
ಖುಷಿಯಾಗಿರಲು ಸಾಕೆನಗೆ...!!
**
ನಿನಗೆಂದು ಬರೆದ ಪತ್ರಗಳ ಕಳುಹಿಸಲು
ಅಂಚೆಪೆಟ್ಟಿಗೆಯ ಹುಡುಕುತಿರುವೆ...
ನೀ ಮನದಲ್ಲೇ ಇರುವಾಗ
ಯಾಕೆಬೇಕು ಅದರ ಗೊಡವೆ...!!
**
ನಾ ಹತ್ತಿರ ಬಂದಾಗೆಲ್ಲ ನೀನು
ಯಾಕೆ..?ಮೌನವಾಗುವುದು
ಎಂದು ಕೇಳಿದೆನು.
"ತುಟಿಗೆ ತುಟಿಯ ಬೆಸೆದಿರುವೆಯಲ್ಲ "
ಇನ್ನು ಹೇಗೆ? ಮಾತನಾಡುವುದು ಎಂದನು...
**
ತಾಯಿಯ ನೆನಪಾಯಿತು
ನಿನ್ನ ನೋಡಿದಾಗ..
ಮಡಿಲಿನಲಿ ಮಗುವಾಗಿ ಮಲಗಲೇ
ಎಂದು ನೀ ಕೇಳಿದಾಗ...!!
**
ನನ್ನ ಹೆಜ್ಜೆಗಳು ಇಲ್ಲೇಇವೆ..
ಗೆಜ್ಜೆಮಾತ್ರ ಕಳೆದುಹೋಗಿದೆ..
ನಿನ್ನ ಮನದಲ್ಲಿ ನಡೆದುಬಂದಿರುವೆ..
ಇರು , ಒಮ್ಮೆ ಬಂದು ಅಲ್ಲೇಲ್ಲ ಹುಡುಕುವೆ...!!
***
😍 #ಸಿಂಧು_ಭಾರ್ಗವ್.. 😍

Happy Shri Krishna Janmaastami @Udupi





!! ಕೃಷ್ಣಾಯ ವಾಸುದೇವಾಯ ದೇವಕೀ ನಂದನಾಯಚ !!
!! ನಂದಗೋಪ ಕುಮಾರಾಯ ಗೋವಿಂದಾಯ ನಮೋನಮಃ !!
ಸದ್ಹೃದಯೀ ಮಿತ್ರರಿಗೆಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು..
~~~~
ಶ್ರೀಕೃಷ್ಣನ ಜನುಮ ದಿನವನ್ನು ಉಡುಪಿ, ಮುಂಬೈ,ಪುಣೆ ,ಮಥುರಾ ,ತಮಿಳುನಾಡು ಹಾಗೂ ದೇಶದ ಉದ್ದಗಲಕ್ಕೂ ಅಲ್ಲದೇ ವಿದೇಶದಲ್ಲಿಯೂ ಬಹಳ ಸಂಭ್ರಮದಿಂದ ಆಚರಿಸುವುದನ್ನು ನಾವು ಕಾಣಬಹುದು. ಅದರಲ್ಲಿಯೂ #ವಿಟ್ಲಪಿಂಡಿ, ಮೊಸರುಕುಡಿಕೆ ಗೊಲ್ಲರಿಂದ ಮಡಿಕೆ ಒಡೆಯುವ ಕಾರ್ಯಕ್ರಮ ಹೆಸರುವಾಸಿಯಾಗಿದೆ. ಪುಟಾಣಿ ಮಕ್ಕಳಿಂದ ಮುದ್ದುಕೃಷ್ಣ ಸ್ಪರ್ಧೆ, ಹುಲಿವೇಷ, ಗೊಲ್ಲರವೇಷ ಮಾನವ ಪಿರಮಿಡ್ ಮೂಲಕ ಆಗಸದೆತ್ತರದ ಮಡಿಕೆ ಒಡೆಯುವುದು ಒಂದು ಸವಾಲೇ ಸರಿ.‌ ಎಲ್ಲರಿಗೂ ಶುಭವಾಗಲಿ.. ಎಲ್ಲರೂ ಸಂಭ್ರಮದಿಂದ ಶ್ರೀ ಕೃಷ್ಣನ ಬರಮಾಡಿಕೊಳ್ಳಿ...
!!..ಬೋಲೋ ಶ್ರೀ ಕೃಷ್ಣ ಪರಮಾತ್ಮ ಕೀ ಜೈ...!!
~
ಶ್ರೀಮತಿ ಸಿಂಧು ಭಾರ್ಗವ್.



ಅಂತಹ ಸವಾಲನ್ನು ಕಳೆದ ಇಪ್ಪತೈದು ವರುಷಗಳಿಂದ ನಡೆಸಿಕೊಂಡು ಬಂದಿರುವ ಬಾಲ್ ಹನುಮಾನ್ ಮಿತ್ರ ಮಂಡಳಿ(ಮುಂಬಯಿ) ಗೆ ತುಂಬು ಹೃದಯದ ಹಾರೈಕೆಗಳು.ಕಳೆದ ನಾಲ್ಕೈದು ವರುಷಗಳಿಂದ ಪಾರಿತೋಷಕವನ್ನು ತಮ್ಮದಾಗಿಸಿಕೊಂಡಿರುವ ಸಂತೋಷ್ ಶೆಟ್ಟಿ ಮತ್ತು ಅವರ ಟೀಮ್ ಗೆ ಒಂದು ಹ್ಯಾಟ್ಸ್ ಆಫ್ ..೨೦೦-೨೫೦ ಜನ ಸದಸ್ಯರಿರುವ ತಂಡ ಸತತ ಅಭ್ಯಾಸದ ಮೂಲಕ ನಗದು ಬಹುಮಾನದ ಜೊತೆಗೆ ಶೀಲ್ಡನ್ನು ಪಡೆದು ಪುರಮಿರ-ಬಾಯೆಂದರ್ ನಲ್ಲಿ ನಂ.೦೧ ತಂಡ  ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.. ಬೆಳಿಗ್ಗೆ ಹತ್ತು ಗಂಟೆಗೆ ಶುರುವಾಗಿ ರಾತ್ರೆ ೧೦ಗಂಟೆ ತನಕವೂ ಕೇರಿಕೇರಿಗಳಿಗೆ ತಿರುಗಿ ಮಡಿಕೆ ಒಡೆಯುತ್ತಾ ಬಹುಮಾನವನ್ನು ತಮ್ಮದಾಗಿಸಿಕೊಳ್ಳುತ್ತಾರೆ.. ಈಗಾಗಲೇ ಮುಂಬಯಿಯಲ್ಲಿ ಬೀಡುಬಿಟ್ಟು ಅಭ್ಯಾಸದಲ್ಲಿ ನಿರತರಾಗಿದ್ದಾರೆ ಎಂದು ಸಂತೋಷ ಶೆಟ್ಟಿಯವರು ತಿಳಿಸಿದರು. 
ಈ ಬಾರಿಯೂ ಅವರಿಗೆ ಜಯಸಿಗಲಿ ಎಂದು ಹರಸುತ್ತಾ ಎಲ್ಲರಿಗೂ ಅಷ್ಟಮಿಯ ಶುಭಾಶಯಗಳು.. ಚಕ್ಕುಲಿ ,ಉಂಡೆ, ಕಡುಬು ಕಳುಹಿಸುತ್ತೇನೆ. ಹಲ್ಲು ಇದ್ದವರು ತಿನ್ನಿ..
!!..ಬೋಲೋ ಶ್ರೀ ಕೃಷ್ಣ ಪರಮಾತ್ಮ ಕೀ ಜೈ...!!

~
ಶ್ರೀಮತಿ ಸಿಂಧು ಭಾರ್ಗವ್..



Monday 22 August 2016

ನಗೆ ಟಾನಿಕ್- ಈ ಸಮಯ ಹಾಸ್ಯಮಯ




)(@)(
ಕಾಲೇಜು ದಿನಗಳಲ್ಲಿ ಮಿತ್ರನೋರ್ವ
ಕೊಡುತ್ತಿದ್ದ ಪ್ರತಿಯೊಂದು ಖಷಿಗೂ ಪಾರ್ಟಿ..
ಅವನ ಮೊದಲ ಪ್ರೀತಿ ಶುರುವಾಯಿತೆಂದು ಪಾರ್ಟಿ,
ಪಾರ್ಕಿನಲಿ‌ ಕೈ ಕೈ ಹಿಡಿದರೆಂದು ಪಾರ್ಟಿ,
ಮೊದಲ ಚುಂಬನಕ್ಕೊಂದು ಪಾರ್ಟಿ...
~
ನಮಗೇನು, ವಾರವಾರದ ಅಪ್ಡೇಟ್
ಕೇಳುತ ಶುಭಹಾರೈಸಿದೆವು ಹಾರ್ಟಿ..
ಕೊನೆಗೊಂದು ದಿನ ಟೈಟಾಗಿ ಬಂದು ,
ಬಾಟಲಿ ಕೈಗೆ ಕೊಟ್ಟ  ನಮಗೂ ಒಂದು,
ಅಳತೊಡಗಿದ ಅವಳು ಬಿಟ್ಟು ಹೋದಳೆಂದು..

#ಸಿಂಧು 😍👏
***
)(@)(
ಮಿತ್ರನೋರ್ವ ಬಳಿಬಂದು ಕೇಳಿದ ದಿನೇ ದಿನೇ
 ಉಬ್ಬುತಿದೆಯಲ್ಲ ನಿನ್ನ ಗುಂಡಾದ #ಹೊಟ್ಟೆ ಎಂದು...?!?
ನಾನೆಂದೆ ಇದಕ್ಕೆಲ್ಲ‌ ಕಾರಣ,
ಮದುವೆಯಾದಂದಿನಿಂದ ಅಡುಗೆ‌ಮಾಡಲು
ಉಪಯೋಗಿಸುವ ಅವಳ ಹಿತ್ತಾಳೆ #ಸೌಟೇ.. ಎಂದು..
😳😜😷
#ಸಿಂಧು 😍👏
***
)(@)(
ಅವನ #ಭಾವನೆಗಳಿಗೆಲ್ಲ ಇವಳೇ ಕಿವಿಯಾಗುವಳು,
ನಗುವಾಗುವಳು, ನೋವಮರೆಸುವಳು..

ಪರಸ್ಪರ ಅರಿತಿದ್ದರೂ
ಅವನ ಕೈಹಿಡಿಯುವ ಯೋಗವಿಲ್ಲದವಳು..

ಕಾರಣ ,
ಅವನು ಅವಳ " #ಬಾವನಾಗುವನು"..
ಹೆ‍ಚ್ಚು ಮುಂದುವರಿದರೆ ಅಕ್ಕ ಸೌಟು ಹಿಡಿಯುವಳು...!! 😜
~*~
#ಸಿಂಧು 😍
***
)(@)(
ಇಂದಂತು ಪತಿರಾಯರು ಹೊಗಳುತಲೇ ದಿನ ಕಳೆದರು
ನೀನೆ ಚಂದ ನೀನೇ ಅಂದ
ಯಾಕಂತ‌‌ ಈ ಹೊಗಳಿಕೆ ಹೇಳಿ ಮುದ್ದು ಕಾಂತ..
ಏನಿಲ್ಲ ಕಣೆ, ಮತ್ತೆ ಬಂತಲ್ಲ ವಾರಾಂತ್ಯ..
ಈ ಬಾರಿಯೊಂದು ನೀನೇ ಬಟ್ಟೆ ಒಗೆದುಬಿಡು ಎಂದ ಪ್ರಾಣಕಾಂತ..
~*~
#ಸಿಂಧು 😍👏
***
)(@)(
ಚಿಗುರು ಮೀಸೆ ಹುಡುಗ
ಕಿರುಕಿಟಕಿಯಿಂದ  ನೋಡಿದ
ಪಕ್ಕದ್ಮನೆ ಆಂಟೀನಾ...!
ಕೈಯಾಡಿಸಿ ನಗೆಬೀರುತಲಿ
ಬರಹೇಳಿದ್ದಳು ಸರಿ ಮಾಡಿಕೊಡುವೆಯ
ನಮ್ಮನೆ ಆಂಟೆನಾ?!?

ಮನ ಉಬ್ಬಿತು ಹುಂಬ ಧೈರ್ಯದಿ
 ತೋರಿಸಹೊರಟ ಹೀರೋತನ..!
ಮಳೆಗಾಲ ಬೇರೆ ಜಾರಿದ ಹೆಂಚು
 ಬಿದ್ದು ಮುರಿದುಕೊಂಡ ತನ್ನ ಕಾಲನ್ನ...!!

- ಸಿಂಧು 👏😍
( ಪ್ರೇರಣೆ ರಮೇಶ್ ಕೈಗಾ ಸರ್ ಬರೆದ ಕಿಸ್ ಮಾತ್ರೆ ಹಾಸ್ಯ ಕವನ ಸಂಕಲನ. ಇನ್ನಷ್ಟು ಹಾಸ್ಯಮಯ ಕವನವನ್ನೇ ಬರೆಯಿರಿ ಸರ್.)
ಎದೆಯಾಳದಿಂದ ಹೇಳಿತಿರುವೆ ಸರ್


ನನ್ನ ಮನದ ನೋವನ್ನು ಕಡಿಮೆ ಮಾಡಲು
ದಿನವೂ ಸೇವಿಸುತ್ತಿರುವೆ ಮಾತ್ರೆಯನ್ನ..!
ಓದಿದ್ದನ್ನೆ ಓದಿದರೂ ಹಳತೆನಿಸದೇ
 ನಗುತಲೀ ಖುಷಿಯಾಗಿಸಿರುವೆ ಮನಸನ್ನ...!!

Sunday 14 August 2016

ಕವನ - ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು 2016



(@)
ಎಲ್ಲಿಯ ಸ್ವಾತಂತ್ರ್ಯ?!
~~~~~~~~~~~~
ಬಡಿದುಕೊಳ್ಳಬೇಡಿ ಎಂದು ಬಾಯ್ಬಿಟ್ಟೆ ,
ಎಲ್ಲಾ ಸೇರಿ ನನಗೇ ಬಡಿದರು...!!

ಅವರೆಲ್ಲ ನಮ್ಮವರೆಂದು ಸ್ನೇಹಬೆಳೆಸಿದೆ ,
ಅವರಿಂದ ದೂರವಿರಿ ಎಂದು ಬೈದರು...!!

ನಡುರಾತ್ರಿಯಲಿ ಮನೆಗೆ ಹೆಜ್ಜೆ ಹಾಕಿದವಳು,
ಕಾಮುಕರ ಹಸಿವಿಗೆ ಬಲಿಯಾದಳು...!!

ಕೇಸರಿ ಬಿಳಿ ಹಸಿರು ಎಲ್ಲಿ ನೆಮ್ಮದಿಯ ಉಸಿರು ?
ತಲೆಎತ್ತಿ ನಿಂತ ಬಾವುಟ ,ನಾಯಿ ನರಿಗಳದ್ದೇ ಆಟ...!!

ದೇಶ ಕಾಯುವ ಸೈನಿಕ ಅವನ ಜೀವಕ್ಕಿಲ್ಲ ರಕ್ಷಕ,
ಪೈರು ಬೆಳೆವ ರೈತನು ಹಸಿವಿನಿಂದ ಸತ್ತನು...!!

ಬರೀ ಮಾತಿನಲೇ ಮುಗಿಯುವುದೆಲ್ಲ,
ಪಣತೊಟ್ಟು ನಿಂತರೆ
ಅಸಾಧ್ಯವಾದುದು ಯಾವುದೂ ಇಲ್ಲ...!!

#ಸಿಂಧು_ಭಾರ್ಗವ್

Happy Independence day2016. in Kannada


(@)

೧)ನಾನು ಚಿಕ್ಕವಳಿದ್ದಾಗ ನಮ್ಮನೆ ಕೆಲಸದವ ಹೇಳಿದ್ದು.. "ಎಂತದೇ ಸ್ವಾತಂತ್ರ್ಯ ಅಂದ್ರೆ? ಮನೆ ಹೆಣ್ಮಕ್ಕಳೆಲ್ಲ ಮೈನೆರದಿದೋ.. ಒಂದ್ ಪಾಯಕಾನೆ(Toilet) ಕಟ್ಟುಕೆ ಅರ್ಜಿ ಹಾಕಿ ಎಸ್ಟ್ ಸಮಯ ಆಯ್ತ್ ಗೊತ್ತಾ...? ಪಂಚಾಯ್ತಿಗೆ ತಿರ್ಗಿ‌ತಿರ್ಗಿ ಸಾಕಾಯ್ತ್ ಬಿಟ್ರೆ  ಕೆಲ್ಸ ಆಯ್ಲ ಇನ್ನು... ಯಾರು ಎಂತ ಏನ್ ಆಯ್ಕ್ ಅಂದ್ ಸಹ ಕೇಂಬುದಿಲ್ಲೆ.. 😟
೨) ನಮ್ಮನ್ನೆಲ್ಲ ಯಾರ್ ಕೇಳ್ತಾರಾ..? ದೇಶಕ್ಕೋಸ್ಕರವೇ ಜೀವ ಕೈಯಲ್ಲಿಟ್ಟು ಬದುಕುತ್ತಾ ಇದ್ದೇವೆ. ಎಲ್ಲಿಯಾದ್ರು ಸತ್ತರೆ ಸರಕಾರಿ ಗೌರವದೊಂದಿಗೆ ನಮ್ಮ ಹೆಣವನ್ನು ಸುಡಬಹುದು. ಮೂರು ಸಲಿ ಮಲೇರಿಯಾ ಅಟ್ಯಾಕ್ ಆಗಿದೆ. ಊರಿಗೆ ಹೋಗೋಕೆ ಆಗೋದಿಲ್ಲ. ಇಲ್ಲಿ ನಮ್ಮನ್ನು ಬಿಟ್ಟು ಡ್ಯುಟಿ ಗೆ ಹೋಗ್ತಾರೆ.. (ವರಿಸ್ಸಾದಲ್ಲಿ ಡ್ಯುಟಿಯಲ್ಲಿದ್ದಾಗ ನನ್ನ ಸ್ನೇಹಿತರು, ವಿಜಯ್ CISF (The Central Industrial Security Force) ಹೇಳಿದ್ದು...
೩)ಅಡಿಕೆಗೆಲ್ಲ ಕೊಳೆ ಕಾಯಿಲೆ, ತೆಂಗಿನಕಾಯಿ ಒಂದು ರೂಪಾಯಿಗೂ ಸೇಲ್ ಆಗ್ತಾ ಇಲ್ಲ , ಅದಕ್ಕೆ ಎಳನೀರು ಸಿಯಾಳವನ್ನೇ ಮಾರೋದು..( ನನ್ನ ತಂದೆ ಹೇಳಿದ್ದು )
ನಿಜವಾದ ಅರ್ಥ ಏನು ಸ್ವಾತಂತ್ರ್ಯ ಎಂದರೆ??
ನೀರು, ಅನ್ನಕ್ಕಾಗಿ ಹೋರಾಟ ನಡೆಸುವ #ರೈತರಿಗೆ ಮಹಿಳೆಯರು, ಬಸುರಿಯರು ಎಂದು ನೋಡದೆ ಬಾಸುಂಡೆ ಬರುವ ಹಾಗೆ ಹೊಡೆಯುವುದು, ದನಿ ಎತ್ತಲಿಕ್ಕಿಲ್ಲ ಎಂದು ಜೈಲುಗೆ ಹಾಕುವುದು ಇದನ್ನೆಲ್ಲ ನೋಡುತ್ತಿರುವ ಮೂರನೇ ವ್ಯಕ್ತಿ (ನೆರೆ ರಾಜ್ಯ, ದೇಶದವರು) ಎಷ್ಟು ಅಪಹಾಸ್ಯ ಮಾಡುತ್ತಿರಬಹುದು..‌ ನಮ್ಮ ದೇಶ ಕಾಯುವ #ಯೋಧರನ್ನೆಲ್ಲ ವರ್ಷಕ್ಕೊಮ್ಮೆ ನೆನಪು ಮಾಡೋಕೆ ಸ್ವಾತಂತ್ರ್ಯ ದಿನ..?
ಇದೆಲ್ಲ ಬೇಕಾ ನಮಗೆ...
**
ಸ್ವಾತಂತ್ರ್ಯ ಸಿಕ್ಕಿ ಎಪ್ಪತ್ತು ವರುಷ ಆದರೂ ನಾವು ಚಿಕ್ಕವರಿದ್ದಾಗ ಕೊಟ್ಟ ಇಪ್ಪತ್ತು ಪೈಸೆಯ ಚಾಕಲೇಟ್ ನೆನಪು ಹೋಗಿಲ್ಲ...
ಗಣ್ಯಾತಿಗಣ್ಯರಿಂದ ಧ್ವಜಾರೋಹಣ, ಎಲ್ಲರ ಕೈಯಲ್ಲಿ ಬಾವುಟ,  ಭಾಷಣ ಮಾಡಿ ,ಸಿಹಿಹಂಚಿ ಮನೆಗೆ ಕಳುಹಿಸುವುದು...
ಇಂದಿನ ಮಕ್ಕಳೇ ಮುಂದಿನ ಭವಿಷ್ಯ, ಉತ್ತಮ ಪ್ರಜೆಗಳಾಗಿ ಎಂದವರು ಇನ್ನೂ ಇದ್ದಾರೆ. ಆದರೆ ಆ ಮಕ್ಕಳು ದೇಶಕ್ಕಾಗಲಿ, ಸಮಾಜಕ್ಕಾಗಲಿ ಏನಾದರೂ ಮಾಡುತ್ತಿದ್ದಾರೆ!? ಹೋಗಲಿ ಅವರವರುಗಳ ಭವಿಷ್ಯವನ್ನಾದರೂ ಚೆನ್ನಾಗಿ ರೂಪಿಸಿಕೊಂಡಿದ್ದಾರಾ?! ನಮ್ಮಂತಹ ಯುವಕ/ತಿಯರು ಎಲ್ಲಿದ್ದಾರೆ?!? ಏನು ಮಾಡುತ್ತಿದ್ದಾರೆ?! ಅನ್ಯಾಯಕ್ಕೆ ಒಂದಾಗಿ ದನಿಎತ್ತಬೇಕಿದೆ. ಆದರೆ ನಮಗ್ಯಾಕೆ ಎಂದು ಸುಮ್ಮನಿದ್ದಾರೆ. ತಮ್ಮ ಬುಡಗಟ್ಟಿ ಮಾಡಿಕೊಳ್ಳುವುದರಲ್ಲೇ ಬಿಜಿಯಾಗಿದ್ದಾರೆ..
ಮುಂದೆ ಹೋಗುವವರನ್ನು ನಿಂದಿಸಿಯೋ/ಹಂಗಿಸಿಯೋ ಚುಚ್ಚುಮಾತನಾಡಿಯೋ ಹಿಂದೆ ತಳ್ಳುತ್ತಿದ್ದಾರೆ..
*
ನನ್ನ ಪ್ರಶ್ನೆ ಒಂದೇ ದೇಶ ಉದ್ಧಾರ ಮಾಡುವುದು ಬೇಡ. ಮೊದಲು ನಮ್ಮ ಸುತ್ತಮುತ್ತಲಿರುವವರನ್ನೇ ಪ್ರೀತಿಯಿಂದ ಸ್ನೇಹದಿಂದ ನೋಡಿ. ಅಸ್ಪರ್ಶರಂತೆ ವರ್ತಿಸಬೇಡಿ...  ಒಗ್ಗಟ್ಟಿನಲ್ಲಿರ ಬೇಕಾದದ್ದು ನಾವೇ ಹೊರತು  ಬೇರೆಯವರಿಂದ ಹೇಳಿಸಿಕೊಂಡು ಬರುವುದಲ್ಲ... ನೀವು ಕಲಿತ ಊರನ್ನು ಒಮ್ಮೆ ತಿರುಗಿ‌ ನೋಡಿ... ಕಷ್ಟದಲ್ಲಿರುವ ಜನರು ಇನ್ನೂ ಇದ್ದಾರೆ. ನೀವು‌ಕಲಿತ ಶಾಲೆಗೆ ಏನಾದರೂ ಸಹಾಯ ಬಡಬಗ್ಗರಿಗೆ ಸಹಾಯ ಹಸ್ತ ಚಾಚುವುದು.. ಅವರ ಮುಖದಲ್ಲಿ ನಗು ಮೂಡುವಂತೆ ಮಾಡುವುದು ಇದೆಲ್ಲ ನಾವುಗಳೇ ಮಾಡಬೇಕು. ಎಲ್ಲದಕ್ಕೂ ಸರ್ಕಾರದ ಮೇಲೆ ದೂರು ಹಾಕಿ ಕೈಕಟ್ಟಿ ಕುಳಿತುಕೊಳ್ಳುವುದಲ್ಲ... ಎಲ್ಲಿಯೂ ಶಾಂತಿ ಇಲ್ಲ ಸೌಹಾರ್ದ ವಿಲ್ಲ. ರೈತರ ಕಷ್ಟ ಕೇಳುವವರಿಲ್ಲ, ಮನಸ್ಸು ಕೊಳಕು, ಬುದ್ಧಿಯೂ ಕೊಳಕು... ಎಲ್ಲರೂ ಅವಕಾಶವಾದಿಗಳು....
ನಮಗೆ ಸ್ವಾತಂತ್ರ್ಯ ಸಿಕ್ಕಿಯಾಗಿದೆ. ಹೀಗೆ ಕಚ್ಚಾಡುತ್ತಾ ಇದ್ದರೆ ಒಗ್ಗಟ್ಟು ಪ್ರದರ್ಶಿಸಿದ್ದರೆ ಇದ್ದ ಸ್ವಾತಂತ್ರ್ಯ ವೂ ಕಸಿದುಕೊಂಡು ಹೋಗುವರು.. ಸಂಶಯವಿಲ್ಲ.. ಎಂಬುದು ನನ್ನ ಅನಿಸಿಕೆ..
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು...

~ #ಸಿಂಧು_ಭಾರ್ಗವ್. 😍

Monday 8 August 2016

ವಾರದ ಸಣ್ಣ ಕತೆ : ಜಲ್ಲಿಕಲ್ಲು



ವಾರದ ಸಣ್ಣ ಕತೆ: ಜಲ್ಲಿಕಲ್ಲು
~~~
"ನೀವು ದಿನವಿಡೀ ಊರೂರು ಸುತ್ತಿದರೂ, ನಾವು ಕೊಡುವ ಆಹಾರ, ಬಟ್ಟೆ, ಸಿಗದು. ಇನ್ನೂ ಒಂದು ವರುಷ ನೆಮ್ಮದಿಯಿಂದ ಜೀವನ‌ ಮಾಡಬಹುದು.. ರೆಟ್ಟೆ ಮುರಿದು ಕೆಲಸ ಮಾಡಿದರೆ ಹೊಟ್ಟೆತುಂಬಾ ಊಟ ,ಕಣ್ತುಂಬಾ ನಿದಿರೆ ನಿಮ್ಮ ಪಾಲಿಗೆ. ಹಠಮಾಡಿದರೆ ಮಣ್ಣುತಿನ್ನುವಿರಿ. ಹಿರಿಯರೆಲ್ಲ ಸೇರಿ ಮಾತುಕತೆ ನಡೆಸಿ ಒಂದು ನಿರ್ಧಾರಕ್ಕೆ ಬನ್ನಿ..." ಎಂದು ಏರಲು ದನಿಯಿಂದ ಧನಿಕ ಬೊಬ್ಬಿಡುತ್ತಿದ್ದ..
***
ಅಲ್ಲೊಂದು ವಿಶಾಲವಾದ ಜಾಗವಿತ್ತು. ಅಷ್ಟರವರೆಗೆ ಯಾರೂ ನೋಡಿರಲಿಲ್ಲ.
ಸಣ್ಣ ಸಣ್ಣ ಗುಡಿಸಲು ಕಟ್ಟಿಕೊಂಡು ಪ್ಲಾಸ್ಟಿಕ್ ,ಕಸಕಡ್ಡಿ ಆಯುವವರು ಜೀವನ ನಡೆಸುತ್ತಿದ್ದರು. ಸುತ್ತಲೂ ಹಳೆಯ ಮರಗಳು ವಿಶಾಲವಾಗಿ ತನ್ನೆಲ್ಲ ರೆಂಬೆ-ಕೊಂಬೆಗಳನ್ನು ಚಾಚಿಕೊಂಡು ನೆರಳು ನೀಡುತ್ತಿದ್ದವು.. ಹಕ್ಕಿಪಕ್ಕಿಗಳು ಆ ಮರಗಳಲ್ಲಿ ಆಶ್ರಯ ಪಡೆದುಕೊಂಡಿದ್ದವು..
ನೆಲದಮೇಲೆಲ್ಲ ಹುಲ್ಲುಹಾಸಿಗೆ. ಅದನ್ನು ತಿನ್ನಲು ಹಸುಗಳು, ಆಡು ಕುರಿಗಳು ಬರುತ್ತಿತ್ತು. ಮಕ್ಕಳು ಯಾರ ಗೊಡವೆ ಇಲ್ಲದೆ ಆಡಿಕೊಂಡಿದ್ದರು.
ಹಳ್ಳಿಯ ವಾತಾವರಣ, ಶುದ್ಧಗಾಳಿ ,ಸಾಕಷ್ಟು ಬೆಳಕು ಯಾವುದಕ್ಕು ಕೊರತೆಯಿಲ್ಲದೆ ಜನರು ಬದುಕುತ್ತಿದ್ದರು..
**
ಒಮ್ಮೆ ಅದೆಲ್ಲಿಂದಲೋ ಬಂದ ಆಗರ್ಭ ಶ್ರೀಮಂತ  ನಾಲ್ಕಾರು ಮಂದಿಗಳೊಂದಿಗೆ ನೆಲವನ್ನು ಅಳೆತೆಮಾಡಲು ಶುರುಮಾಡಿದ್ದ.ಅವನ ಕಾರು ಬಂದೊಡನೆ ಮರದಲ್ಲಿದ್ದ ಹಕ್ಕಿಪಕ್ಕಿಗಳೆಲ್ಲ "ಏನೋ ಅನಾಹುತವಾಗಲಿದೆ ಎಂಬ ಮುನ್ಸೂಚನೆ ನೀಡುವಂತೆ ವಿಚಿತ್ರ ಧ್ವನಿಯಲ್ಲಿ ಕೂಗಲು  ಶುರುಮಾಡಿದವು. ಹಸುಗಳು ಕೂಡ ಗಾಬರಿ ಮುಖದಿಂದ ಆ ಕಾರನ್ನೆ ನೋಡುತ್ತಿದ್ದವು.. ನೆಲದಲ್ಲೇ ಕುಂಟೆಬಿಲ್ಲೆ ಆಡುತ್ತಿದ್ದ ಮಕ್ಕಳೆಲ್ಲ ಮನೆಯೊಳಗೆ ಓಡಿಹೋದರು. ಹೆತ್ತವರಿಗೆ ವಿಷಯ ತಿಳಿಸಿದರು. ಅಷ್ಟರಲ್ಲೇ ಆ ಧನಿಕ ೫-೧೦ ಮಂದಿಯನ್ನು ಒಟ್ಟುಗೂಡಿಸಿ ಮಾತಿಗಿಳಿದಿದ್ದ.. ಇಲ್ಲೊಂದು ಅಪಾರ್ಟ್ಮೆಂಟ್ ತಲೆಯೆತ್ತಲಿದೆ. ನೀವೆಲ್ಲ ಮನೆ ಕಾಲಿ ಮಾಡಿಕೊಂಡು ಹೋಗಿ ಎಂದು ಹೇಳುತ್ತಿದ್ದ. ಅವರಿಗಾದ ಆಘಾತ ಅಷ್ಟಿಷ್ಟಲ್ಲ .. "ಇಲ್ಲ ಹೋಗಲು ಸಾಧ್ಯವಿಲ್ಲ.." ಎಂದು ಕೆಲವರು ಅಲ್ಲೇ ವಿರೋಧಿಸಿದರು... ಜಗಳವಾಯ್ತು. ಕೈಕೈಮಿಲಾಯಿಸಿದರು. ಆ ಧನಿಕ ವಾಪಾಸ್ಸಾದ. ಮತ್ತೆ ಒಂದು ವಾರ ಬಿಟ್ಟು ಬಂದ.. ಅವನ ಮಾತು ಕೇಳಿದ ಜನರು ಮರುಮಾತನಾಡದೇ ಎಲ್ಲರೂ ಬಾಯಿಮುಚ್ಚಿಕೊಂಡು ಒಪ್ಪಿದರು...
ಸಿಮೆಂಟಿನ ಜೊತೆಗೆ ಜಲ್ಲಿಕಲ್ಲು ಬೆರೆಸಿ ಕಟ್ಟಿದ ಅಪಾರ್ಮೆಂಟ್ ವರುಷದೊಳಗೆ ತಲೆಎತ್ತಿ ನಿಂತಿತ್ತು...
~
😍 #ಸಿಂಧು_ಭಾರ್ಗವ್.. 😍

Sunday 7 August 2016

Happy Friendship Day 2016 in Kannada






ಸ್ನೇಹಿತರ ದಿನಾಚರಣೆ ಎಂದಾಗ ನೆನಪಾಹುವುದು ನಮ್ಮ‌ಕಾಲೇಜು ದಿನಗಳು..
***
ಮುರ್ಗಿ ಕ್ಯಾ ಜಾನೆ ಅಂಡೆ ಕಾ ಕ್ಯಾ ಹೋಗಾ?!
ಅರೆ ಲೈಫ್ ಮುಲೇಗಿ ಯಾ ತವೇ ಪೆ ಫ್ರೈ ಹೋಗಾ...
ಕೋಯಿ ನ ಜಾನೆ ಅಪನಾ ಫ್ಯುಚರ್ ಕ್ಯಾ ಹೋಗಾ..?!
ಹೋಂಟ್ ಗುಮಾವ್ ಸೀಟಿ ಬಜಾ
ಸೀಟೀ ಬಜಾಕೆ ಬೋಲ್
ಬಯ್ಯಾ ಆಲ್ ಈಸ್ ವೆಲ್...
ಎಂದು ಆಕಾಶ ಕಳಚಿ ಬೀಳುವಷ್ಟು ಕೂಗಿದ್ದು ನೆನಪಿದೆಯಾ ಗೆಳತಿ.?!
ನಮ್ಮ ಕಾಲೇಜು ಜೀವನವ ಸವಿಸವಿಯಾಗಿ ಉಂಡಿದ್ದು , ಈಗ ಒಂದು ಹಂತದಲ್ಲಿ ನಿಜವಾದ ಜೀವನದ ಸವಿಯ ಸವಿಯುತ್ತಿರುವುದು,
ನಿದಿರೆ ಮಾಡಲು ಬಿಡದ ಕನಸಿನ ಹುಡುಗ, ಸೀರೆಯುಟ್ಟು ಜಾರಿ ಬಿದ್ದಾಗ ನಕ್ಕ ಸ್ನೇಹಿತ, ಜೀನ್ಸ್ ನಿನಗೆ ಸೂಟ್ ಆಗಲ್ಲ ಕಣೆ ಎಂದವ, ಕದ್ದು ಸೀಬೆಕಾಯಿ ಹಂಚಿ ತಿಂದದ್ದು, ಅತೀ ಬುದ್ಧಿವಂತ, ಅತೀ ದಡ್ಡ, ಸಣಕಲು,  ದಡಿಯಾ, ಲಂಬು ,ಕುಳ್ಳಿ, ಟಿಫಿನ್ ಬಾಕ್ಸ್ ತರುವ ನಾವು, ಹೋಟೇಲ್ ನಲ್ಲೇ ಊಟ ಮಾಡಿ ಬರುವ ಕೆಲವರು, ಬೆಳಿಗ್ಗೆ ೫ಗಂಟೆಗೆಲ್ಲ‌ಮನೆಬಿಡುತದತಿದ್ದ ಸ್ನೇಹಿತರು, ಕಂಪೌಂಡ್ ದಾಟಿದರೆ ಮನೆ ಸಿಗುತ್ತಿದ್ದವರು,  ಸಂಜೆ ಒಟ್ಟಿಗೆ ಬಸ್ ಸ್ಟ್ಯಾಂಡ್ ತನಕ ಗಲಾಟೆ ಮಾಡುತ್ತಾ ಹಾಕುವ ಹೆಜ್ಜೆ ಕಳೆದು ಹೋದ ಗೆಜ್ಜೆ ಇನ್ನು ಅಲ್ಲೇ ಇದೆ ಗೆಳತಿ, ಬಾ ಹೋಗಿ ಹುಡುಕುವ  ಇನ್ನೊಮ್ಮೆ, ತರಗತಿಯಲ್ಲಿ ಕೇಳಿದ ಪ್ರಶ್ನೆಗೆ ನೆಲ ನೋಡುವುದು,  ಇಂಟರ್ನಲ್ಸ್ ಗೆ ಓದುವ ಬದಲು ಆಗಸ ನೋಡುವುದು, ಬೇರೆ ತರಗತಿ ಹುಡುಗರಿಗೆ ಲೈನ್ ಹಾಕುವುದು, ಬರ್ತ್ ಡೇಗೆ ಮಿಡ್ನೈಟ್ ಯಿಂದ ಶುಭಾಶಯಗಳ ಸುರಿಮಳೆ, ಗಿಫ್ಟ್ಸ್ , ಪಾರ್ಟಿ, ಕೇಕ್ ಮುಖತುಂಬಾ ಹಚ್ಚುವುದು,  ಕಿಚಾಯಿಸೋದು, ನಾವು ದಿನವೂ ಹೋಗಿ ಬರುವ ಬಸ್ಸನ್ನು ೩ ವರ್ಷಕ್ಕೆ ಲೀಸ್ ಗೆ ತೆಗೆದುಕೊಂಡದ್ದು, ಅದೇ‌ಸೀಟು ,ಅದೇ ಕಿಟಕಿಗೆ ತಲೆ ಒರಗಿ ಮನೆ ಬರುವ ತನಕ ಗೊರಕೆ ಹೊಡೆಯುತ್ತಿದ್ದ ಆದಿನಗಳು, ಅಜ್ಜಿ ಮನೆ ಪರೋಟ, ಸೋಡಾ ಕೆಲವೊಮ್ಮೆ ಉಪವಾಸ, ಮಧ್ಯರಾತ್ರಿ ತನಕ ರಗ್ಗು ಹೊದ್ದುಕೊಂಡು ಮಾಡುತ್ತಿದ್ದ ಚಾಟಿಂಗ್, ಅವರವರ ಲವ್ ಸ್ಟೋರೀಸ್, ಅದಕ್ಕೆ ನಮ್ಮ ಕಾಮೆಂಟರೀ,  ಪ್ರೊಜೆಕ್ಟ್ ಗೆ ತಲೆ ಬಿಸಿ ಮಾಡಿಕೊಂಡದ್ದು, ಗೆಳೆಯರ ಮರಣ ಅಳುತರಿಸಿದ್ದು.. ಅ.ಭಿ.ವಿ.ಪಿ ಸ್ಟ್ರೈಕ್ ಗಳು ,ಕ್ಲಾಸ್ ಗೆ ಹಾಕಿದ ಬಂಕ್ಗಳು, ಎಲ್ಲವೂ ತಾಜಾವಾಗಿದೆ... ನಾಳೆ ಏನಾಗುವುದೋ ಎಂಬ ಪರಿವೇ ಇಲ್ಲದೆ, ಗೊಡವೆಗೂ ಹೋಗದೆ ಇಂದಿನ ದಿನ ಕಳೆಯಿತ್ತಿದ್ದ ರೀತಿ ಅಚ್ಚರಿ ಎನಿಸುತ್ತದೆ.
ಕಾಲೇಜು ಕಾಂಪಸ್ಸಿನಿಂದ ಹೊರ ಬಂದ ಮೇಲೆ ತಂದೆ ಕೊಡುತ್ತಿದ್ದ ಪಾಕೇಟ್ಮನಿ ಕಾಲಿಯಾದ ಮೇಲೆ ಕೆಲವರಿಗೆ ಉದ್ಯೋಗ ಅಗತ್ಯವಾಗಿತ್ತು, ಕೆಲಸ ಹುಡುಕುವುದರಲ್ಲೇ ಬಿಜಿಯಾದರು,  ಊರೂರು ಅಲೆದರು, ಕಷ್ಟಪಟ್ಟು ಕೆಲಸ ಗಿಟ್ಟಿಸಿಕೊಂಡರು, ಬದಲಾದ ನಂಬರ್, ಮುಖನೋಡಿದರೂ ಗುರುತ ಸಿಗದು, ಹೇಗಿದ್ದೀರಿ ಎಂದು ಕೇಳಿದರೂ ಹೇಳುವಷ್ಟು ಸಮಯವಿಲ್ಲ‌, or ಮನಸ್ಸು ಇಲ್ಲವೇನೋ. ಯಾವ ಕೆಲಸ ಎಂದೂ ಹೇಳಲು ಮನಸ್ಸಿಲ್ಲದವರು, ಕೆಲ ಹುಡುಗಿಯರಿಗೆ ಮದುವೆ ಭಾಗ್ಯ,  ನಮ್ಮಂತವರು‌ ಅಂತವರಿಗೆಲ್ಲತೊಂದರೆ ಯಾಕೆ ಕೊಡುವುದು ಎಂದು ದೂರ ಉಳಿದುಬಿಡುವುದು.. ಮದುವೆಯಾಗಿದೆ ಎಂದು ಅವರೇ ನಮ್ಮನ್ನು ದೂರವಿಡುವುದು, ಬರ್ತ್ ಡೇ ಗು ವಿಷಸ್ ಬರುವುದು ನಿಂತು ಹೋಯಿತು. ಮದುವೆಗೆ ಬರಲಾಗಲಿಲ್ಲ ಎಂಬ ನೆಪ, ಅನಿವಾರ್ಯವಾಗಿಯೂ ಬರಲಾಗದವರು, ಈಗ  ಎಲ್ಲೇಲ್ಲೋ ಹೋಗಿ ಜೀವನ ಕಟ್ಟಿಕೊಂಡ ಸ್ನೇಹಿತರು.. ಮನೆಯ ಜವಾಬ್ದಾರಿ ಹೊತ್ತ ಹೆಗಲುಗಳು, ಸಾವು- ನೋವು ಎಲ್ಲವೂ ಉಂಡವರು..
 ಫೇಸ್ ಬುಕ್ ವಾಟ್ಸ್ ಅಪ್ ನಿಂದ ಅವರ ಮುಖನೋಡುವ, ದೌಲತ್ತು , ಸಾಧನೆ- ಸಂಭ್ರಮ ನೋಡುವ ಭಾಗ್ಯ. ಇಲ್ಲದಿದ್ದರೆ ಅದೂ ಇಲ್ಲವಾಗುತ್ತಿತ್ತು....
ಎಲ್ಲರಿಗೂ ಸ್ನೇಹಿತರ ದಿನಾಚರಣೆಯ ಶುಭಾಶಯಗಳು...ಎಲ್ಲರು ಎಲ್ಲೇ ಇದ್ದರು ಚೆನ್ನಾಗಿರಿ..
**
ಘಟ್ಟ ಹತ್ತಿದ ನೆನಪುಗಳ
ಚಟ್ಟಕಟ್ಟಿದ ನೆನಪುಗಳ
ಬೇಕಂತಲೇ ಸುಟ್ಟುಹಾಕಿದ ನೆನಪುಗಳು,
ಕೂಡಿಟ್ಟು ಕಾಪಾಡಿದ ಸ್ನೇಹಿತರ ನೆನಪುಗಳ
ವರ್ಷಕ್ಕೊಮ್ಮೆ  ಮಾಡುವ ಶ್ರಾದ್ಧದಂತೆ ನೆನಪಿಸಿಕೊಳ್ಳುವುದೇ ಸ್ನೇಹಿತರ ದಿನಾಚರಣೆ..
ಸಂಭ್ರಮವಿಲ್ಲ ಮನದಲ್ಲಿ. ಬದಲಾಗಿದೆ ,ಬೆಳೆದಿದೆ, ಕಳೆದಿದೆ ,ಕೊಳೆತಿದೆ ಮನವೇಕೋ...?!
ಹೊಸನೀರು ತೊರೆಯಾಗಿ ಹರಿಹರಿದು ಸಾಗರವ ಸೇರುವಂತೆ ನನ್ನೀ ಜೀವನದಲಿ ಬಂದ ಎಲ್ಲಾ ಸ್ನೇಹಿತರು ನೆನಪಾಗಿ ಬೆರೆತು ಹೋಗಿದ್ದಾರೆ...
ಸ್ನೇಹಜೀವಿಯೇ ಆದರೂ ಹೊಸದಾಗಿ ಬರುವ ಗೆಳೆತಿ(ಯ)ರ ಸೇರಿಸಿಕೊಳ್ಳಲಾಗದೇ ದಡಕ್ಕೆ ತಂದು ದೂಡುವ ಅಲೆಯಂತಾಗಿ ಮನಸ್ಸು..
ಪೊರೆಕಳಚಿದ ಹಾವಂತೆ ನಾನು ಸದ್ದಿಲ್ಲದೆ ಸರಿದುಹೋಗಿರುವೆ... ಹೋಗಲೇ ಬೇಕಾದ ಅನಿವಾರ್ಯ ಬಂದಾಗ ನಾನು ಯಾವ ಉತ್ತರ ಕೊಡದೇ ಮೌನಿಯಾದೆ...

#ಸಿಂಧು_ಭಾರ್ಗವ್. 

Tuesday 2 August 2016

ವಾರದ ಸಣ್ಣ ಕತೆ : ನೆನೆದ ಮಲ್ಲಿಗೆ ಯಂತೀ ಜೀವನ


**
ರಾತ್ರೆ ಹತ್ತಾದರೂ ಹೂವನ್ನು ಗುಡ್ಡೆಹಾಕಿಕೊಂಡು ಮಾರುತ್ತಿದ್ದ. ನೂರು ಗ್ರಾಮ್ಗೆ ಹತ್ತು ರೂಪಾಯಿ ..
.ನೂರಕ್ಕೆ‌ ಹತ್ತು ... ನೂರಕ್ಕೆ ಹತ್ತು... ಎಂದು. ಅವನ ಹೆಂಡತಿ ಮನೆ ಬಾಗಿಲಿಗೆ ಹತ್ತು ಸಲಿ ಬಂದು ಇಣುಕಿಹೋದಳು. ಒಲೆಯನ್ನು ಹಿಡಿಸಿ, ಮತ್ತೆ ಆರಿಸಿಹೋಗುತ್ತಿದ್ದಳು. ಪುಟ್ಟಮಗು ಅಪ್ಪ ತರುವ ಚಾಕಲೇಟಿಗೆ ಕಾಯುತ್ತಿತ್ತು.
ಕೊರೆಯುವ ಚಳಿ. ನಡುಗುತ್ತಲೇ ಬೊಬ್ಬೆಹಾಕುತ್ತಿದ್ದ. ಕೈಕಾಲು ತಂಡಿಗಟ್ಟಿತ್ತು. ಮಳೆರಾಯ ಬೇಕಂತಲೇ "ಧೋ..." ಎಂದು ಸುರಿಯುತ್ತ ಅವನ ಸಹನೆಯ ಜೊತೆ ಆಟವಾಡುತ್ತಿದ್ದ... ನೆನೆದ ಹೂವು ಕೆ.ಜಿ.ಗೆ ಲೆಕ್ಕ ಸಿಗದೆಂದು ಬೆಳಿಗ್ಗೆಯಿಂದ‌‌ ಯಾರು ಕೊಳ್ಳಲಿಲ್ಲ. ಆ ದಿನದ ವ್ಯಾಪಾರದಲ್ಲಿ ಹಾಲು , ಹಿಡಿಯಷ್ಟು ಅಕ್ಕಿ-ಬೇಳೆ, ನಾಲ್ಕು ತರಕಾರಿ , ಮೂರು ಮೊಟ್ಟೆ ತೆಗೆದುಕೊಂಡು ಹೋದರೆ ಮಧ್ಯರಾತ್ರೆ  ಒಂದು ಊಟಮಾಡಬಹುದು. ಈ ದಿನ ಹಣದ ಚೀಲ ತುಂಬಲಿಲ್ಲ. ಗಂಟೆಯೂ ಆಯ್ತು. ಎಲ್ಲ ಬ್ಯಾಗಿಗೆ ತುಂಬಿಸಿ ಭಾರವಾದ ಮನಸ್ಸಿನಿಂದ ಮನೆಗೆ ವಾಪಾಸ್ಸಾದ.
ಬಾಗಿಲಿನಲ್ಲಿಯೇ ಹೆಂಡತಿ ಅವನ ಕೈನೋಡಿದಳು. "ಐದು ಮೊಟ್ಟೆ ತೆಗೆದುಕೊಳ್ಳುವಷ್ಟು ವ್ಯಾಪಾರವಾಯ್ತು ಮಾರಾಯ್ತಿ.. ಇದನ್ನೆ ಆಮ್ಲೇಟ್ ಮಾಡಿ ತಿನ್ನುವ. ಬೇಸರಿಸಬೇಡ.."
"ಹ್ಮ.. ನಮಗೆ ಅಡ್ಡಿಲ್ಲ. ಮಗು..?!. ಅದು ಪದೆ ಪದೇ ಏಳುತ್ತದೆ. ಹಸಿವಾಗಿ ಹೊಟ್ಟೇಲಿ ಸಂಕಟವಾಗುತ್ತೆ. ನಾನೇನು ಕೊಡಲಿ ಆಗ.?!
ನಾನು ಕೆಲಸಕ್ಕೆ ಹೋಗುತ್ತಿದ್ದೆ. ನನ್ನಿಂದಲೇ ಇಷ್ಟೆಲ್ಲ ಕಷ್ಟ ನಿಮಗೆ.. ಕ್ಷಮಿಸಿ.."
" ಅಯ್ಯೋ... ಹುಚ್ಚಿ , ನೀ ಇಲ್ಲದಿದ್ದರೆ ನಾನು ಇಷ್ಟೂ ದುಡಿಯುತ್ತಿರಲಿಲ್ಲವೇನೋ.. ? ಈಗೊಂದು ಜವಾಬ್ದಾರಿ ಬಂದಿದೆ. ನೀನೇ ನನಗೆ ಸ್ಪೂರ್ತಿ. ನಮ್ಮ ಮನೆ ಲಕ್ಷ್ಮಿ ನೀನು... ಏನೇನೋ ಯೋಚಿಸಬೇಡ.." "ಮಗು ಒಂದಾದರೂ ಬೇಕೇ ಬೇಕು, ನಮ್ಮ ನೋವು ಮರೆಸಲು ಅವಳೇ ಪುಟ್ಟದೇವತೆಯಾಗಿ ಬಂದಿದ್ದಾಳೆ. ಎಂದು ಸಮಾಧಾನ ಮಾಡುತ್ತಿದ್ದ.. ಅಲ್ಲೇ ಹತ್ತಿರದಲ್ಲಿದ್ದ ಮಗು "ಅಪ್ಪಾ... ಚಾಕಲೇಟ್ ತರಲಿಲ್ವಾ.. ಬೇಡಬಿಡು ನಾಳೆ‌ ತಾ ಆಯ್ತಾ.." ಎಂದಾಗ ಗಂಡಹೆಂಡತಿರು ಮಗುವನ್ನು ಗಟ್ಟಿಯಾಗಿ ತಬ್ಬಿಕೊಂಡು ಅಳತೊಡಗಿದರು.
ಹಾಗೆ ಮಾಡಿದ ಆಮ್ಲೇಟನ್ನು ತಿಂದು‌ ಮಲಗಿದರು...
*_*_*
ಇಂತಹದ್ದು ಸಾವಿರಾರಿದೆ.‌ ಅಂದಂದಿನ  ದುಡಿಮೆಯಿಂದ‌ ಜೀವನ ಸಾಗಿಸುವಂತಹ ಜನರು. ಚೆನ್ನಾಗಿ ವ್ಯಾಪಾರವಾದರೆ ಹೊಟ್ಟೆತುಂಬಾ ಊಟ, ಇಲ್ಲದಿದ್ದರೆ ತಣ್ಣೀರು ಬಟ್ಟೆ. ಯಾರೂ ಗಮನಿಸಿರುವುದೇ ಇಲ್ಲ ನೋಡಿ...

#ಸಿಂಧುಭಾರ್ಗವ್. 

August Month Special in Kannada

!! ಹರಿ_ಸರ್ವೋತ್ತಮ !!    !! ವಾಯು_ಜೀವೋತ್ತಮ !!

 #ಅಗಸ್ಟ್_ತಿಂಗಳು ಶುರುವಾಯಿತೆಂದರೆ ಮಹಿಳೆಯರಿಗೆ ಎಲ್ಲಿಲ್ಲದ ಸಂಭ್ರಮ. ಶ್ರಾವಣ ಮಾಸ ಎಂದರೆ ಮನಸ್ಸಿಗೆ ತುಂಬಾ ತಂಪು, ಒಂದು ರೀತಿಯ ಸಡಗರ, ಸಂಭ್ರಮ..‌ ಹಬ್ಬಗಳು ಒಂದರ ಹಿಂದೆ‌ ಒಂದು ಬರುತ್ತವೆ. ಸೀರೆ, ಅರಸಿನ-ಕುಂಕುಮ, ಬಳೆಗಳು, ಹೂವು_ಹಣ್ಣಿಗಳಿಗೆ ಎಲ್ಲಿಲ್ಲದ ಬೇಡಿಕೆ. ಮಳೆಗಾಲದ ಜೋರಾದ ಗಾಳಿ ಗುಡುಗು-ಮಿಂಚು, ಎಡಬಿಡದೆ ಸುರಿಯುವ ಮಳೆಯು ಕಡಿಮೆಯಾಗಿ ವಾತಾವರಣ ತಂಪಾಗಿರುತ್ತದೆ. ಹಾಗೆ ಎಲ್ಲಿ ನೋಡಿದರಲ್ಲಿ ಹಸಿರು ಹೊದ್ದು ಭೂಮಿ ತಾಯಿಯು ಕಂಗೊಳಿಸುತ್ತಿರುತ್ತಾಳೆ.
ಆ ಚಿಗುರು ನೋಡುವಾಗೆಲ್ಲ ಹುರುಪು-ಉತ್ಸಾಹ ಬೇಡವೆಂದರೂ ಚಿಗುರತೊಡಗುತ್ತದೆ.
ಅಗಸ್ಟ್ ತಿಂಗಳಿನಲ್ಲಿ ಬರುವ ಹಬ್ಬಹರಿದಿನಗಳ ಪಟ್ಟಿ....
~~~~~~~~~~~~~~~~~~~~~~~~~
ಅಗಸ್ಟ್ ೦೨ : #ಭೀಮನ #ಅಮಾವಾಸ್ಯೆ . ಗಂಡನ ಪೂಜೆ.
೦೩: #ಶ್ರಾವಣ_ಮಾಸಾರಂಭ.
೦೭ : #ನಾಗರ_ಪಂಚಮಿ. ಮತ್ತು ಸ್ನೇಹಿತರ ದಿನಾಚರಣೆ.
೧೨: #ವರಮಹಾಲಕ್ಣ್ಮಿ_ವೃತ.
೧೩: #ಶ್ರಾವಣ_ಶನಿವಾರ.
೧೪ : #ಏಕಾದಶಿ .
೧೫ : #ಸ್ವಾತಂತ್ರ್ಯ_ದಿವಸ .
೧೮: #ನೂಲು_ಹುಣ್ಣಿಮೆ . ರಕ್ಷಾ ಬಂಧನ.
೨೦ : ಮಂತ್ರಾಲಯ ಶ್ರೀ ರಾಘವೇಂದ್ರ #ಸ್ವಾಮಿಗಳ #ಆರಾಧನೆ.
೨೧ : #ಸಂಕಷ್ಟ_ಚತುರ್ಥಿ.
೨೪: ಶ್ರೀ ಕೃಷ್ಣ ನಮ್ಮ ಮುದ್ದು #ಕೃಷ್ಣನ_ಜನ್ಮಾಷ್ಟಮಿ* .
**
ಶ್ರಾವಣ ಸೋಮವಾರ, ಮಂಗಳಗೌರಿ ವೃತ,  ಶ್ರಾವಣ ಶುಕ್ರವಾರ ,ಶ್ರಾವಣ ಶನಿವಾರ ಹೀಗೆ ಎಲ್ಲಾ ವಾರವೂ ಶ್ರೇಷ್ಠವೇ..
**
ಹಾಗೆ ಈ #ತಿಂಗಳಿನಲ್ಲಿ_ಜನಿಸಿದ_ಮಕ್ಕಳು ತುಂಬಾ ಸೃಜನಾತ್ಮಕ, ಕ್ರಿಯಾತ್ಮಕವಾಗಿಯೂ,  ಬುದ್ಧಿ ಶಾಲಿಗಳಾಗಿಯೂ, ನಗುಮೊಗದ ತಾಳ್ಮೆ, ಸಹನೆ ಇರುವಂತಹ, ದೈವೀಭಕ್ತರು,  ಸ್ನೇಹಜೀವಿಗಳು, ಸಹಾಯಮಾಡುವ ಗುಣವೂ, ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಗುಣವೂ ಹೊಂದಿರುತ್ತಾರೆ.. ಏನೇ ಕಷ್ಟ ಬಂದರೂ ಎದುರಿಸಿ ಮನಸ್ಸನ್ನು ಹಚ್ಚ ಹಸಿರಾಗಿರಿಸಿಕೊಳ್ಳುತ್ತಾರೆ.
.
👏 !! *ಹರಿ_ಓಂ* !! 👏
#ಶ್ರೀಮತಿ_ಸಿಂಧು_ಭಾರ್ಗವ್ .