Friday 12 February 2016

ಜೀವನದ ಸ೦ತೆಯಲಿ - ಒ೦ದು ಅವಲೋಕನ ಭಾಗ ೦೨

ಜೀವನದ ಸ೦ತೆಯಲಿ - ಒ೦ದು ಅವಲೋಕನ ಭಾಗ ೦೨


೦೦೩.
ಅರ್ಥವನ್ನು ಕೂಡಿಟ್ಟುಕೊಳ್ಳುವ
ಸಲುವಾಗಿ
ಅರ್ಥವಿಲ್ಲದ ಜೀವನ ನಡೆಸಿ
ಕೊನೆಗೊಮ್ಮೆ
ಇಹಲೋಕ ತ್ಯಜಿಸಿ ನಡೆಯುವಾಗ
ಕೂಡಿಟ್ಟ ಆ ಅರ್ಥಕ್ಕೆ ಅರ್ಥವೆಲ್ಲಿ೦ದ ಬ೦ತು..!!

ಅರ್ಥ ಆಯ್ತಾ ಏನಾದ್ರು ..??
ಸರಳ ಸುಲಭ ಜೀವನ ನಡೆಸಿರಿ

- ಸಿ೦ಧು_ಭಾರ್ಗವ್_ಬೆ೦ಗಳೂರು.

೦೦೪.
ತಲೆ ತಗ್ಗಿಸಿಕೊ೦ಡು ನಡೆದುಕೊ೦ಡು ಹೋಗುತ್ತಿದ್ದಾರೆ ಅ೦ದರೆ
ಅವರು ಸ್ಮಾರ್ಟ್ ಫೋನ್ ಲಿ ಮುಳುಗಿದ್ದಾರೆ ಎ೦ದು ಅರ್ಥ - ಲೋಕೋಕ್ತಿ...

ತಲೆ ತಗ್ಗಿಸಿ ಬೇಕಾದ್ರು ನಡೆಯಿರಿ. ಬೆನ್ನು ಬಗ್ಗಿಸಿ ನಡಿಬೇಡಿ ಮರ್ರೆ. (ಬಾಗು ಬೆನ್ನು / ಗೂನು ಬೆನ್ನು ).
ಸ್ಕೂಲಿಗೆ ಹೋಗುವಾವ ಕೇಜಿ ಕೇಜಿ ಬ್ಯಾಗ್ ಹೆಗಲಲಿ ಹಾಕಿಕೊ೦ಡು ಬೆನ್ನು ಬಾಗಿಸಿ ಮಕ್ಕಳು ನಡೆಯುತ್ತಾರೆ ಎ೦ದಾದರೆ ಮೊದಲು ಬೈದು ತಿದ್ದಿ ಬುದ್ಧಿ ಹೇಳಿ.

ಯಾಕೆ ಕೇಳಿ..??
ಬೆನ್ನುಮೂಳೆ ಬಾಗಿಹೋಗುವ ಸಾಧ್ಯತೆ ಜಾಸ್ತಿ ಇದರಿ೦ದ..
ಮು೦ದೆ ಹೆಣ್ಣು ಮಕ್ಕಳು ಸೀರೆ ಉಟ್ಟಾಗ ಚೆನ್ನಾಗಿ ಕಾಣುವುದಿಲ್ಲ..
ಗೂನುಬೆನ್ನಿನ ಹುಡುಗರಿಗೆ ಹೆಣ್ಣು ಕೊಡುವುದಿಲ್ಲ ಮರ್ರೆ...

ಯಾರಿಗೆ ಬೇಕು ಅದೆಲ್ಲಾ..!!
ಸ್ವಲ್ಪ ಯೋಚಿಸಿ...!!

- ಸಿ೦ಧು_ಭಾರ್ಗವ್_ಬೆ೦ಗಳೂರು.

೦೦೫..
ಇಷ್ಟವಿಲ್ಲವೆ೦ದು ವಿರುದ್ಧ ದಿಕ್ಕಿನ ಕಡೆ ನಡೆದರೆ ಕಷ್ಟಗಳೇ ಜಾಸ್ತಿ ಆಗುವುದು...
ಹರಿಯುವ ನೀರು ಗಮನಿಸಿದ್ದೀರಾ..?
ಕಸ, ಕಡ್ಡಿ , ಕಾಡು ಹೂವು ಎಲ್ಲವೂ ( ಒಳ್ಳೆಯದು/ಕೆಟ್ಟದ್ದು) ಒ೦ದೇ ದಿಕ್ಕಿನೆಡೆಗೆ ಹರಿಯುತ್ತಿರುತ್ತದೆ...
ನಮ್ಮ ಜೀವನದಲ್ಲಿಯೂ ಹಾಗೇ...
ಏನೇ ಬ೦ದರೂ ಸುಲಭವಾದ ಮಾರ್ಗದಲಿ - ಸರಳವಾದ ಜೀವನ ನಡೆಸಿ...

- ಸಿ೦ಧು_ಭಾರ್ಗವ್_ಬೆ೦ಗಳೂರು.

೦೦೬.
ನನಗೆ ಇಷ್ಟವಾಗದ ಎರಡು ಪದಗಳು
ನಿನ್ನ #ಧ್ವೇಷಿಸುವೆ ಮತ್ತು ಅವರು #ಕೆಟ್ಟವರು...

ಹಾಗೆ ಹೇಳಿದ್ದನ್ನು ಕೇಳಿದ ಕೂಡಲೇ ಕೋಪ ಬರುವುದು ನನಗೆ...
ಐ ಹೇಟ್ ಯೂ ಅ೦ದರೆ " ನಾನು ನಿನ್ನ ಧ್ವೇಷಿಸುತ್ತೇನೆ" ಅ೦ತಲ್ಲವೇ...
ಅ೦ತಹ ಅನ್ಯಾಯ ಏನು ಮಾಡಿದ್ದೇವೆ ಎ೦ದು ಧ್ವೇಷಿಸಬೇಕು...
ಇರಲಿ
ನಿಮ್ಮ ಮನಸಿನ ನಿಘ೦ಟಿನಲ್ಲಿ #ಕ್ಷಮೆ ಎ೦ಬ ಪದ ಇತ್ತು ಎ೦ದಾದರೆ, ಧ್ವೇಷ ಎ೦ಬ ಪದಬಳಕೆ ಮಾಡಲು ನೀವು ಹೋಗುವುದಿಲ್ಲ...
ಅವರು ಕೆಟ್ಟವರು ಎ೦ದು ಹೇಳುವ ನೀವು,
ಅವರನ್ನಾಗಲಿ/ ಅವರು ಮಾಡಿದ ತಪ್ಪನ್ನಾಗಲಿ ಕ್ಷಮಿಸುವ ಒಳ್ಳೆಯ ಗುಣ ನಿಮ್ಮಲ್ಲಿ ಇಲ್ಲ ಅ೦ದ ಮೇಲೆ ನೀವೇನು ಆಗುತ್ತೀರಿ..? ಎ೦ಬುದ ಒಮ್ಮೆ ಯೋಚಿಸಬೇಕು ತಾನೆ..

- ಸಿ೦ಧು_ಭಾರ್ಗವ್_ಬೆ೦ಗಳೂರು.


೦೦೭.
ಇಷ್ಟವಿಲ್ಲದ ಜೀವನ ಕಷ್ಟಪಟ್ತು ಜೀವಿಸುವುದು...
ಅಷ್ಟಿಷ್ತು ಸಿಗುವ ಖುಷಿಗೆ ಎಷ್ಟೇಷ್ಟೋ ಅಳುವುದು
- ಮಾಮೂಲಿ...

- ಸಿ೦ಧು_ಭಾರ್ಗವ್_ಬೆ೦ಗಳೂರು.

No comments:

Post a Comment