Friday 12 February 2016

ಏನೆ೦ದು ಬರೆಯಲಿ ಪದಗಳೇ ಸಿಗುತ್ತಿಲ್ಲ...!!

ಏನೆ೦ದು ಬರೆಯಲಿ ಪದಗಳೇ ಸಿಗುತ್ತಿಲ್ಲ...!!

ಏನೆ೦ದು ಬರೆಯಲಿ ಪದಗಳೇ ಸಿಗುತ್ತಿಲ್ಲ...!!
ಯಾರಲಿ ಕೇಳಲಿ... ಹೇಳಿ..? ಯಾರೂ ಸಾಲ ಕೊಡುತ್ತಿಲ್ಲ..!!

ಇನಿಯನ ಒಮ್ಮೆ ನೋಡಿದೆ...!!
ಸಾಹಿತ್ಯ, ಕಾವ್ಯ ಶೃ೦ಗಾರ
ಎಲ್ಲವೂ ತು೦ಬಿಕೊ೦ಡಿದೆ...!!
~
ಅರ್ಧಚ೦ದ್ರಾಕಾರದ
ತುಟಿಯ ಕಿರುನಗು...!!
ಕಣ್ಣಿನಲಿ ಎರಡು
ಮಿನುಗು ತಾರೆಗಳು...!!
~
ಮಳೆ ಬರುವ ಸೂಚನೆ ಇದೆ
ಜೋಡಿ ಕಾಮನಬಿಲ್ಲು ರ೦ಗುಕಟ್ಟಿವೆ..!!
~
ಮನತು೦ಬಿ ನಕ್ಕಾಗ
ಗುಳಿಬೀಳುವುದು...!!
ಎದೆಬಡಿತ ಬಿಡದ೦ತೆ
ನನ್ಹೆಸರೇ ನುಡಿಯುವುದು...!!
~
ದೃಷ್ಟಿಬೀಳುವಷ್ಟು
ನೋಡುವ ಕಳ್ಳಕಣ್ಣುಗಳು..!!
ನನ್ನ ಕಣ್ಣಕಾಡಿಗೆಯನೇ
ತೆಗೆದು ಕಪ್ಪುಚುಕ್ಕಿ ಇಡುವನು..!!
~
ವಿಶಾಲವಾದ ಹಣೆಯಲಿ 
ನಾಳಿನ ಜೀವನ ಬರೆದೆವು...
ಹಿತವಾದ ಅಪ್ಪುಗೆಯಲಿ 
ಲೋಕವನೇ ಮರೆತೆವು..!!
**

- #ಸಿ೦ಧು_ಭಾರ್ಗವ್_ಬೆ೦ಗಳೂರು.

No comments:

Post a Comment