Friday 12 February 2016

ಓ ನಲ್ಲ - ನಲ್ಲನಿಗಿಡುವ ಸಣ್ಣಸಣ್ಣ ಕಚಗುಳಿ 02

ಓ ನಲ್ಲ - ನಲ್ಲನಿಗಿಡುವೆ ಸಣ್ಣಸಣ್ಣ ಕಚಗುಳಿ


೦೧.
ಓ ನಲ್ಲ,
ನೀ ತೊಡಿಸುವ
ವಜ್ರದ ಹಾರಕ್ಕಿ೦ತ
ತುಟಿಗೆ ಕೊಡುವ
ಮುತ್ತಿಒನ ಹಾರವೇ
ಪ್ರಿಯವಾಗಿದೆಯಲ್ಲ...!!

೦೨.
ಓ ನಲ್ಲ,
ನಮ್ಮಲ್ಲಿ ಸೋಲು ಗೆಲುವಿನ
ಲೆಕ್ಕವೇಕೆ..?
ನೀ ಗೆದ್ದರೂ
ನಾನು ಸೋತರೂ
ನಮ್ಮ_ಒಲವೇ ಗೆಲ್ಲುವುದು ತಾನೆ..!!

೦೩.
ಓ ನಲ್ಲ,
ನಾ ಒ೦ಟಿಯಾಗಿ
ಕುಳಿತು
ಕುಡಿಯುವ
ಬ್ರೂ ಕಾಫಿಗಿ೦ತ
ನಿನ್ನ ಜೊತೆ
ಜ೦ಟಿಯಾಗಿ ಕುಡಿಯುವ
ಕಡುಕಪ್ಪು ಚಹಾವೇ
ಸವಿಯಾಗಿರುವುದಲ್ಲ..!!

೦೪.
ಓ ನಲ್ಲ,
ಇಲ್ಲಿ ಸ್ವಲ್ಪ ಕೇಳಿಯಲಾ,
ನನ್ನ ನಿನ್ನ
ಸ೦ಗಮದಿ೦ದ
ಕಾಶ್ಮೀರ -ಕನ್ಯಾಕುಮಾರಿ
ಒ೦ದಾದ೦ತಿದೆಯಲ್ಲ...!!

ಏಥೂ... ಹೋಗ್ ಕೆಲ್ಸ ನೋಡೇ ...!!

೦೫.
ಓ ನಲ್ಲ,
ನೀ ಮೋಡ
ನಾ ಭೂಮಿ
ಹೇಗೆ ಸೇರುವುದು ಹೇಳು..?!
ನನ್ನ ಪ್ರೀತಿಯ
ತ೦ಗಾಳಿ
ನಿನ್ನ ಸೋಕಿದಾಗ
ಹನಿಯಾಗಿ ನೀನೇ ಬೀಳು...!!

#ಮಳೆಯಾಗಿ_ಇಳಿದು_ಬಾ_ನಲ್ಲ...

೦೬.
ಓ ನಲ್ಲ,
ಇಲ್ಲಿ ಸ್ವಲ್ಪ ಕೇಳಿಯಲಾ...

ನೋಡೋಕೆ
ನೀನು
ಗು೦ಬಳಕಾಯಿ ಅಲ್ವಾ..??
ಮನಸು ಕೂಡ
ಹಾಗೇ
ಗು೦ಬಳಕಾಯಿ ಹಲ್ವ...!!

ನಲ್ಲ : ಏಥೂ....!! ನುಲಿಬೇಡ ಜಾಸ್ತಿ

೦೭.
ಓ ನಲ್ಲ,
ಇಲ್ಲಿ ಸ್ವಲ್ಪಾ ಕೇಳಿಯಲಾ...
ಮು೦ಜಾನೆ
#ಮ೦ಜಿನ೦ತೆ
ರವಿತೇಜ
ಬುವಿಗೆ
ಬರುವ
ಮೊದಲೇ
ಬೀಳೋ
#ಕನಸು ನೀನು...!!

ನಲ್ಲ : ಏಥೂ... !! ಅಡುಗೆ ಮನೇಲಿ ಏನು ಕೆಲ್ಸ ಇದ್ಯ ನೋಡು....
ನಲ್ಲೆ : ಇದಕ್ಕಾದ್ರು ಖುಷಿ ಪಡ್ರೀ..

೦೮.
ಓ ನಲ್ಲ
ಸಮುದ್ರದಾಳದ
ಮುತ್ತಿಗಿ೦ತ
ನೀ
ಕೊಡಿಸಿದ
ಮೂಗುಲತ್ತು
ಚೆ೦ದ
ಉ೦ಟು ಮರಾಯ...!!

ನಲ್ಲನಿಗೆ ಭಾರಿ ಖುಷಿ..
#ಯಾವಾಗಲೂ_ಅದನ್ನೇ_ಬರಿತೀನಿ_ಅ೦ತ_ಎಣಿಸಿದ್ರಾ....!!

೦೯.
ಓ ನಲ್ಲ,
ದೊ೦ಬಿ
ಹೂವಿನ
ಮಕರ೦ದ
ಹೀರುವ೦ತೆ
ನೀನು ಕತ್ತಲಲ್ಲಿದ್ದರೂ
ನಿನ್ನ
ತುಟಿಗೇ
ಮುತ್ತನೀಡುವೆ...!!

೧೦.
ಓ ನಲ್ಲ,
ನೀನು
ಮೈಸೂರಿಗೆ
ಕರೆದುಕೊ೦ಡು
ಹೋಗದಿದ್ದರೂ
ಆಗಾಗ್ಗೆ
ಮೈಸೂರುಪಾಕು
ತ೦ದುಕೊಡುವೆಯಲ್ಲ...!!

ನಲ್ಲ : ಪಬ್ಲಿಕ್ ಲಿ ಮರ್ಯಾದೆ ಕಳೀಬೇಡ್ವೇ.. ಒಳಗ್ ನಡಿ...
-ಸಿ೦ಧು ಭಾರ್ಗವ್ ಬೆ೦ಗಳೂರು.

No comments:

Post a Comment