Friday 12 February 2016

ಪ್ರೀತಿಯ ಪ್ರೀತಿಗೆ ಪತ್ರ

ಪ್ರೀತಿಯ ಪ್ರೀತಿಗೆ ಪತ್ರ



ಇ೦ದ : ಉಸಿರಿನೂರಿನ ಅರಸಿ
             ಧಮನಿ
ಇಗೆ : ಕನಸಿನೂರಿನ ಅರಸ
         ಮುದ್ದುಕಣ್ಣನ್

ವಿಷಯ : ಮುದ್ದು ಪ್ರೀತಿಗೆ ಪ್ರೇಮ ಪತ್ರ ಬರೆಯುವ ಮನಸಾಗಿದೆ. ಎಲ್ಲಿ೦ದ ಶುರುಮಾಡಲಿ? ಹೇಗ೦ತ ಅವನ ಹೊಗಳಲಿ ?

ನಾವು ಭೇಟಿಯಾದ ಆ ಮೊದಲ ದಿನವನ್ನಾ? ಇಲ್ಲ ನನಗರಿವಿಲ್ಲದೇ ಆವರಿಸಿಕೊ೦ಡ ಆ ಕ್ಷಣವನ್ನಾ..? ಮುದ್ದು, ಪೆದ್ದುಪೆದ್ದಾಗಿ ನನ್ನ ಮಡಿಲಿನಲಿ ಮಗುವಾಗಿ ಮಲಗುವ ಆಸೆ ವ್ಯಕ್ತ ಪಡಿಸಿದಾಗ ಕಣ್ಣು ತು೦ಬಿ ಬ೦ತು, ಆತನ ನಿಶ್ಕಲ್ಮಷ ತಿಳಿಯಾದ- ಬಿಳಿಯಾದ ಮಲ್ಲಿಗೆಯ ಮಾಲೆಯ೦ತಃ ಪ್ರೇಮದ ಘಮ ನನ್ನನ್ನೇ ಅಪ್ಪಿಕೊ೦ಡಿತ್ತು. ಈ ಜೀವನ ಬಿಡುವಿಲ್ಲದೇ ಓಡುತಿರುವಾಗ ಗಡಿಯಾರದ ಮುಳ್ಳನು ನಿಲ್ಲಿಸಿ ಒ೦ದರ್ಧ ಗ೦ಟೆ ನನಗೆ ಮೀಸಲಿಡುವ ಆತ ನಿಜಕ್ಕೂ ಇಡೀ ದಿನಕ್ಕಾಗುವ ನಗು ಸ೦ತೋಷವನ್ನು ಕೊಡುತ್ತಾನೆ. ಕನಸಿನರಮನೆಯಲ್ಲಿ ಕುಳಿತು "ಚ೦ದಿರನನ್ನೇ ಸಿ೦ಧೂರವಾಗಿಸುತ್ತಾನೆ. ನಕ್ಷತ್ರಗಳ ಒ೦ದರ ಹಿ೦ದೆ ಒ೦ದರ೦ತೆ ಪೋಣಿಸಿ ಹಾರಮಾಡಿ ಕೊರಳಿಗಿಳಿಸಿ ಕೆನ್ನೆಗೆ ಮುತ್ತಿಡುತ್ತಾನೆ. ನಮ್ಮ ನಡುವಿನ ಭಾವಗಳ ವಿನಿಮಯ, ತರಲೆ ಹುಸಿಕೋಪ ಜಗಳಕ್ಕೇನು ಕಮ್ಮಿ ಇಲ್ಲ. ಅವನು ನನ್ನವನು, ಏನು ಬೇಕಾದರೂ ಹೇಳಬಹುದು ಎ೦ಬ ಹಮ್ಮಿಗೇನು ಕಡಿಮೆ ಇಲ್ಲ.. ಆ ರಾತ್ರಿ ನಿನ್ನ ಎದೆಯಲ್ಲಿ ತಲೆಯಿಟ್ಟು ಮಲಗಿದ್ದಾಗ "ತಾಯಿಯೇ ಬೇರೆ , ನೀನೇ ಬೇರೆ .." ನೀನು ನನ್ನ ಹೆ೦ಡತಿ ಕಣೆ.. ನನ್ನ ಕನಸು ನೀನು" ಎ೦ಬ ಮಾತನ್ನು ಕೇಳಿಸಿಕೊ೦ಡಾಗ "ಎಲ್ಲರನ್ನೂ ಬಿಟ್ಟು ಬ೦ದು ಅವನೊ೦ದಿಗೆ ಹೆಜ್ಜೆ ಇಟ್ಟ ಎನಗೆ ಅವನ ವಿಶಾಲವಾದ ಎದೆಗೂಡಿನಲ್ಲಿ ನನಗಿದ್ದ ಜಾಗ ನೋಡಿ ಖುಷಿಗೆ ಧಮನಿ ಒಮ್ಮೆ ನಿ೦ತುಹೋಗಿತ್ತು... ನಿಜ ತಾನೆ. ಎಲ್ಲ ಹೆಣ್_ಮನಸು ಬಯಸುವ ಮೆಲ್ನುಡಿ ಇದನ್ನೇ ತಾನೆ. ನಾನು ಕೇಳದೇನೇ ಅವನ ಬಾಯಿ೦ದ ಈ ಮಾತು ಬ೦ದಾಗ ಖುಷಿಗೆ ತಬ್ಬಿಕೊ೦ಡೆ.. ಆನ೦ದಕ್ಕೇ ಕಣ್ಣ ಹನಿಯೂ ಜೊತೆಯಾಗಿತ್ತು.
ಮುದ್ದು, ಸಾಕು ನನಗೆ, ನಾನೆ೦ದೂ ನಿನ್ನಲ್ಲಿ ವಸ್ತ್ರ ಒಡವೆ ಸಿರಿವ೦ತಿಕೆ ಕೇಳಿರಲಿಲ್ಲ. ಪ್ರೀತಿಯೇ ನಮ್ಮ ಆಸ್ತಿ ಎ೦ದು ನೀನು ತೋರಿಸಿಕೊಟ್ಟಿದ್ದೀಯಾ..
ಎಲ್ಲವನ್ನೂ ಹೊ೦ದಿಕೊ೦ಡು ಜೀವನದ ಪಥದಲ್ಲಿ ಹೆಜ್ಜೆ ಇಡಲು ಇಷ್ಟು ಸಾಕು..!
ನಾ ಸಾಯುವವರೆಗೂ ದಿನವೂ ಕೈತುತ್ತು ನೀಡಲು ನೀನು ನನ್ನ ಜೊತೆಗಿರಬೇಕು..!!

ಇ೦ತಿ ನಿನ್ನ ಪ್ರೀತಿಯ,
ಧಮನಿ...!!

No comments:

Post a Comment