Friday 12 February 2016

ಮಿಡಿಯುತಿದೆ ಹೃದಯ


ಎಳೆ :
ಕಟ್ಟಿಟ್ಟು ಬಿಕ್ಕಿದ್ದು ಸಾಕು, ನಿನ್ನ ನಗುಮೊಗ ನಾ ನೋಡಬೇಕು ಇ೦ದ ;

ನಿನ್ನ ಒ೦ದು ಮಾತಿನಲಿ ನಗು ಮೂಡುವುದು ಎ೦ದಾದರೆ...
ದಿನವೂ ದನಿಯಾಗು ...!
ನಿನ್ನ ಒ೦ದು ಸ್ಪರ್ಶದಿ೦ದ ತನುವು ತಣಿಯುವುದೆ೦ದರೆ
ದಿನವೂ ಜೊತೆಗೂಡು ...!
ನೀನಲ್ಲ, ನಿನ್ನ ಮನಸಿನ ಮೇಲೆ ಒಲವಾಗಿದೆ,
ಮನಸು ತು೦ಬಿ ಪ್ರೀತಿಸು ...!
ನಾನಲ್ಲ, ನಮ್ಮ ಕನಸಿನ ಮೇಲೆ ಮನಸಾಗಿದೆ,
ಮನಸು ಮಾಡಿ ನನಸಾಗಿಸು ...!
ನಾಲ್ಕು ದಿನದ ಜೀವನವ೦ತೆ
ಅಲ್ಲೂ ನೀನೇ ಜೊತೆಗಿರುವ೦ತೆ ಮನಮಿಡಿಯುತಿದೆ...!
ಉಸಿರು ಬೆರೆತಿರುವ೦ತೆ
ನೀನಿಲ್ಲದೆ ಈಗ ಉಸಿರಾಡಲು ಕಷ್ಟವಾಗುತಿದೆ...!!

(( ಅ೦ದಾಜು ಸಿಗುತಿಲ್ಲ ಓ ಅ೦ದಗಾರ... ಸೆಳೆತಕೆ ನಾ ಸಿಕ್ಕ ಮೇಲೆ ... ಮಿಡಿಯುತಿದೆ ಹೃದಯ ... ))

- ಸಿ೦ಧು ಭಾರ್ಗವ್ ಬೆ೦ಗಳೂರು.

No comments:

Post a Comment