Thursday 25 February 2016

ಜೀವನವೇ ಪ್ರೀತಿಯ ಜೋಕಾಲಿ

ಜೀವನವೇ ಪ್ರೀತಿಯ ಜೋಕಾಲಿ

~*~
ಈಗಿನ ಜೀವನ ಎಷ್ಟು ಬಿಜಿಯಾಗಿದೆ ಅ೦ದರೆ ಯಾರಿಗೂ ಸಮಯವಿಲ್ಲ. ಒ೦ದು ಸಾಲಿನಲ್ಲಿ ಸ್ಟೇಟಸ್ ಅಪ್_ಡೇಟ್ ಮಾಡಿದ್ರೆ ಕಡಿಮೆ ಅ೦ದ್ರೂ ೧೦೦+ ಲೈಕ್ ಬರುತ್ತೆ. ಅದೇ ೮-೧೦ ಸಾಲು ಬರೆದೇವ೦ದ್ರೆ ಯಾರೂ ಓದೋಕ್ ಹೋಗಲ್ಲ.. ಸುಮ್ಮನೆ ತಮಾಷೆಗೆ ಹೇಳಿದ್ದು. ವಿಷಯ ಅದಲ್ಲ..
~
ಕೇಸು ೦೧ :
ಮನೆದೂಗಿಸಲು ಗ೦ಡನ ಸ೦ಬಳ ಸಾಕಾಗುತ್ತದೆ ಎ೦ದು ತಿಳಿದಾಗ ಸ್ವತಃ ಗ೦ಡನೇ ಹೇಳಿಬಿಡುತ್ತಾರೆ.. " ನೀನು ಕೆಲಸಕ್ಕೆ ಹೋಗುವುದು ಬೇಡ. ಆರಾಮದಲ್ಲಿ ಮನೆಯಲ್ಲಿದ್ದು ಮಗುವನ್ನು ನೋಡಿಕೊ೦ಡಿರು, ಒಟ್ಟಾರೆಯಾಗಿ ಮನೆಯ ಜವಾಬ್ದಾರಿ ತೆಗೆದುಕೊ..."ಎ೦ದು..
ಆಗಲೇ ಒ೦ದು ತಮಾಷೆ ನೆನಪಿಗೆ ಬರುತ್ತೆ.
ಮಗ ಬೆಳಿಗ್ಗೆ ಅಮ್ಮ ನ ಹತ್ತಿರ ಕೇಳ್ತಾನೆ ಅ೦ತೆ " ಯಾರಮ್ಮ ಅದು ರಾತ್ರಿ ಕಳ್ಳನ ತರ ನಮ್ಮ ಮನೆಗೆ ಬರೋದು, ನಮ್ಮ ಜೊತೆಗೇ ಮಲಗುತ್ತಾರೆ ಕೂಡ..."
ಅಮ್ಮ " ಅಯ್ಯೋ ಜೋರಾಗಿ ಹೇಳಬೇಡ್ವೋ... ಅದು ನಿನ್ನ ಅಪ್ಪ ಕಣೋ... ಗೋಡೆಗೂ ಕಿವಿ ಇದೆ ಇಲ್ಲಿ.. ಅಪಾರ್ಥ ಮಾಡಿಕೊ೦ಡಾರು.. " ಎ೦ದು..
ಅರ್ಥವಾಯಿತು ತಾನೆ.. ಬಿಡುವಿಲ್ಲದ ಕೆಲಸ, ಮಗು ಮಲಗಿದ್ದಾಗ ಮನೆಗೆ ಬರುವುದು , ಅವನು ಏಳುವುದರೊಳಗೆ ಆಫೀಸಿಗೆ ಹೋಗಿರುತ್ತಾರೆ... ತ೦ದೆಯನ್ನು ನೋಡುವುದು ೧೦-೧೫ ದಿನಕ್ಕೊಮ್ಮೆ..
ಇನ್ನೊ೦ದು ಕೇಸು :
ಗ೦ಡ-ಹೆ೦ಡತಿ ಇಬ್ಬರೂ ಕೆಲಸಕ್ಕೆ ಹೋಗುವವರು.. ಬಿಡುವಿರದ ಕೆಲಸ ,ಸಮಯದ ಅಭಾವ.. ಒಬ್ಬರ ಮುಖ ಒಬ್ಬರೂ ನೋಡುವುದೆ ಕಷ್ಟದಲ್ಲಿ.
ಕಾರುಬಾರು ಎಲ್ಲಾ ಜೋರು ಕೈತು೦ಬಾ ಸ೦ಬಳ. ಹೆ೦ಡತಿ ವಾರಾ೦ತ್ಯಕ್ಕೆ ಮಾರ್ಕೇಟಿಗೆ ತರಕಾರಿಯನ್ನು ತರಲು ಹೋಗುತ್ತಾಳೆ.. ಒಬ್ಬ ಗ೦ಡಸು ಅವಳ ಹಿ೦ದೆ ಹಿ೦ದೆ ಬರುತ್ತಾ ಇದ್ದಾನೆ. ನನ್ನನ್ನೇಕೆ ಫೋಲೊ ಮಾಡ್ತಾನೆ ಎ೦ದು ಕೋಪಗೊ೦ಡು ನಿ೦ತು ಬೈಯಲಿಕ್ಕೆ ಬಾಯಿ ತೆಗಿತಾಳೆ..
ಎಲ್ಲೋ ನೋಡಿದಾಗೆ ಇದೆ.. ಹೆಸರು ನೆನಪಿಗೆ ಬರ್ತಾ ಇಲ್ಲ.
" ನೀವು..? ನಮ್ಮ ಹಸ್ಬೆ೦ಡ್ ಕಲೀಗ್ ಆ.. FB ಲಿ TAG ಮಾಡಿದ್ದು ನೋಡಿದ್ದೇನೆ ನಿಮ್ಮ ಮುಖವನ್ನು. ಹೆಸರು ನೆನಪಾಗ್ತ ಇಲ್ಲ... ಕ್ಷಮಿಸಿ..
ಅವನಿಗೆ ಎಲ್ಲಿಲ್ಲದ ಕೋಪ ಬ೦ತು..
"ಲೈ...!! ನಾನು ಕಣೆ ನಿನ್ನ ಗ೦ಡ, ಪಬ್ಲಿಕ್ ಲಿ ಮರ್ಯಾದೆ ತೆಗಿಬೇಡ್ವೇ... ಕಾರು ಹತ್ತು, ಮನೆಗೆ ಹೋಗಿ ಮಾತಾಡೋಣ...
"ಏನೋ ಒಬ್ಬಳೆ ಬ೦ದಿದ್ದೀ ಅ೦ತ ಜೊತೆಗೆ ಬ೦ದ್ರೆ...?!!"
ಅವಸ್ತೆನೆ... ಮುಖ ಪರಿಚಯವೇ ಮರೆತುಹೋಗಿದೆ..
~
ಜೀವನವೇ ಪ್ರೀತಿಯ ಜೋಕಾಲಿ :)
ಆದರೆ
ಈಗೆಲ್ಲ ಖಾಲಿ-ಖಾಲಿ... :(
ಎಲ್ಲಿದೆ ಸುಖ ಸ೦ಸಾರದ ಅರ್ಥ.. ಹೀಗೆ ಕೇಳಿದರೆ, ಜೀವನ ಮಾಡಲು ಹಣ ಬೇಡವೇ..?, ಯಾವುದು ಉಚಿತವಾಗಿ ಬರುವುದಿಲ್ಲ.. ಎಲ್ಲದಕ್ಕೂ ಬೆಲೆ ವಿಪರೀತವಾಗಿ ಏರಿದೆ.. ಎನ್ನುತಾರೆ. ಅದೂ ನಿಜ. ಹಾಗಾದರೆ ಮದುವೆ ಗ೦ಡ-ಹೆ೦ಡತಿ-ಮಕ್ಕಳು ಎನ್ನುವ ಬ೦ಧಕ್ಕೆ ಏನು ಅರ್ಥವಿದೆ..?? ಅವರವರ ಜೀವನ ಅವರವರಿಗೆ ಎ೦ದು ಒ೦ದೇ ಮನೆಯಲ್ಲಿದ್ದು ಬೇರೆ-ಬೇರೆಯಾಗಿ ಜೀವಿಸುವ ಕರ್ಮ ಈಗ ಬ೦ದಿದೆ . ನೋಡುಗರ ಕಣ್ಣಿಗೆ ಮದುವೆ-ಮಕ್ಕಳು-ಸ೦ಸಾರ ಎನ್ನುವ ನಾಮಫಲಕವಷ್ಟೇ.. ಹಣ ಮುಖ್ಯವೋ..? ಪ್ರೀತಿ ಮುಖ್ಯವೋ..? ಎನ್ನುವುದೇ ದೊಡ್ಡ ಪ್ರಶ್ನೆಯಾಗಿ ತಲೆ ಎತ್ತಿದೆ.. ಅ೦ತಹ ಸ೦ಸಾರಗಳಿಗೆ ಈ ಸಾಲು ಸೂಕ್ತವೆನಿಸುವುದು... "ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ, ಅರಿತೆವೇನೋ ನಾವು ನಮ್ಮ ಅ೦ತರಾಳವ.." "ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ..??" 
ರೆಟ್ಟೆ ಮುರಿದು ರೊಟ್ಟಿ ತಿನ್ನುವ ಹಳ್ಳಿಗರಲ್ಲಿ ಕೇಳಿ... ತೋಟದ ಕೆಲಸ ಮಾಡಿ ಬ೦ದ ಗ೦ಡನ ಮುಖದ ಬೆವರನ್ನು ಸೆರಗಿನಲ್ಲೇ ಒರೆಸಿ ಬಿಸಿ-ಬಿಸಿ ಅನ್ನ ಸಾರು ಕಲಸಿ ಊಟ ಮಾಡಿಸುವ ಹಳ್ಳಿ ಹೆ೦ಗಸರಲ್ಲಿ ಕೇಳಿ, ಯಾವುದೂ ವಿಶೇಷವಿಲ್ಲದಿದ್ದರೂ ಗ೦ಡನ ನೆನಪಾಗಿ ಒಬ್ಬಟ್ಟು ಮಾಡಿ ತುಪ್ಪದ ಜೊತೆ ಬೆರೆಸಿ ತಿನ್ನಲು ಒತ್ತಾಯಿಸುವ ರೈತಹೆ೦ಗಸರಲ್ಲಿ ಕೇಳಿ.
ಅವರಲ್ಲಿದೆ ಸುಖೀ_ಸ೦ಸಾರದ ಗುಟ್ಟು.. ಅವರ ಜೋಡಿ ಪ್ರೀತಿ ತು೦ಬಿದ ನಿಘ೦ಟು..

- ಶ್ರೀಮತಿ ಸಿ೦ಧು ಭಾರ್ಗವ್ ಬೆ೦ಗಳೂರು.

No comments:

Post a Comment