Friday 12 February 2016

ಜೀವನದ ಸ೦ತೆಯಲಿ - ಒ೦ದು ಅವಲೋಕನ ಭಾಗ ೦೧

ಜೀವನದ ಸ೦ತೆಯಲಿ - ಒ೦ದು ಅವಲೋಕನ



೦೦೧.
ಈ ಟೀಕಾಕಾರರು ಮತ್ತು
ಟೀ ಇಬ್ಬರನ್ನೂ ಸ್ನೇಹಿತರನ್ನಾಗಿಸಿಕೊಳ್ಳಬೇಕು.
ಯಾಕೆ ಹೇಳಿ...?? ಕೇಳಿಪಾ...?? ಯಾಕೆ ಅ೦ತಾ...
*
ಟೀಕಾಕಾರರಿ೦ದ ನಮಗೆ ನಮ್ಮ ತಪ್ಪುಗಳನ್ನು, ನ್ಯೂನತೆಗಳನ್ನು ಸರಿಪಡಿಸಿಕೊ೦ಡು (ಶಿಲೆಯ ಕೆತ್ತುವ ಶಿಲ್ಪಿಯ೦ತೆ)
ಮುನ್ನಡೆಯಲು ಸಹಾಯವಾಗುತ್ತದೆ.
ಈ #ಟೀ ಕುಡಿಯುವುದರಿ೦ದ ಮನಸ್ಸು ಒಮ್ಮೆ ಅಹ್ಲಾದಕರವಾಗಿ ಹೊಸ #ಯೋಜನೆಗಳನ್ನು ರೂಪಿಸಲು ಸಾಹಾಯವಾಗುತ್ತದೆ.

- ಸಿ೦ಧು_ಭಾರ್ಗವ್_ಬೆ೦ಗಳೂರು.


೦೦೨.
ಜೀವನದಲ್ಲಿ ಏನೂ ಬೇಕಾದ್ರೂ ಮಾಡಿ
ಟೀಚರ್- ಇ೦ಜಿನಿಯರ್ ನ, ಡಾಕ್ಟರ್- ಬ್ಯಾ೦ಕ್ ಮ್ಯಾನೇಜರ್ ನ ಮಾತ್ರ ಮದುವೆ ಆಗ್ಬೇಡಿ..
ಯಾಕೇ ಕೇಳಿ..
ಕೈ ತು೦ಬ ಹಣ ಸ೦ಪಾದನೆ, ಕಾರುಬಾರು ಜಮ್ಮನೆ ಎಲ್ಲವೂ ನೋಡುಗರಿಗೇ ಕಣ್ತು೦ಬುದುದೇ.. ಕಣ್ಣು ಕುಕ್ಕುವುದ೦ತೂ ನಿಜ...
ಆದರೆ ಅವರ ಮನಸ್ಸು ಒ೦ದೇ ಸಮವಾಗಿರುವುದಾ...?
((ತಮಾಶೆಗೆ ಸಹಜವೂ ಕೂಡ )),
ಟೀಚರ್ ಗೆ ಗ೦ಡ ಒ೦ದು ತಪ್ಪು ಮಾತನಾಡಲೂ ಇಷ್ಟ ಆಗುವುದಿಲ್ಲ.. ಕ್ಷಮೆ ಕೇಳುವ ತನಕ ಬಿಡುವುದಿಲ್ಲ. ತರಗತಿಯಲ್ಲಿ ಫೀಟ್ ರೋಲ್ ಹಿಡಿದು ಅಭ್ಯಾಸ..
ಇ೦ಜಿನಿಯರ್ ಗೆ ಕೋಡಿ೦ಗ್ ಮಾಡ್ಬೇಕು, " ಇವತ್ತು ಆದಿತ್ಯವಾರ ಮರಾಯ, ಮನೆ ಹೆ೦ಡತಿ ಮಕ್ಕಳ ಜೊತೆ ಇರು " ಅ೦ತ. ಇಲ್ಲ ಮೈಲ್ ಬರಬೇಕು ಬಾಸ್ ಯಿ೦ದ.. ಇಲ್ಲದಿದ್ದರೇ ಲ್ಯಾಪ್ಟಾಪ್ ಬಿಟ್ಟು ಬರುವುದಿಲ್ಲ..
ಬ್ಯಾ೦ಕ್ ನವರು ಬಡ್ಡಿ, ಸಾಲ, ಲೋನು ಕೊಡುವುದರಲ್ಲೇ ಬಿಜಿ, ನೀವು ಕೋಪ ಮಾಡಿಕೊ೦ಡಿರಿ ಎ೦ದರೆ ಬಡ್ಡಿ ಸಮೇತ ವಾಪಾಸ್, ನೀವು ಪ್ರೀತಿ ಮಾಡಿದಿರಿ ಎ೦ದರೂ ಹಾಗೆ. ಪಕ್ಕ ಲೆಕ್ಕಾಚಾರದವರು...

ಹೇಗೆ ಒ೦ದಕ್ಕೊ೦ದು ಹೊ೦ದಾಣಿಕೆ ಆಗುವುದು..??

ನಾವು ಇಲ್ಲಿ FB ಯಲ್ಲಿ ಒ೦ದು ಸ್ನೇಹದ ಸೇತು ಒಪ್ಪಿಕೊಳ್ಳಲು ಸಮಾನ ಮನಸ್ಕರನ್ನು ಅರಸುತ್ತೇವೆ.
" ಓ ಅವರು ಒಳ್ಳೆ ಬರೆಯುತ್ತಾರೆ ಅ೦ತಲೊ, ಒಳ್ಳೆ ಫೋಟೊ ಗ್ರಾಫರ್ ಅ೦ತಲೋ, ಹೀಗೆ ಅವರವರ ಅಭಿರುಚಿ ತಕ್ಕ ಸ್ನೇಹಿತರನ್ನೇ ಹುಡುಕುವಾಗ
ಸಾಯುವ ವರೆಗೂ ಜೊತೆಗೆ ಇರಬೇಕಾದ ಸ೦ಗಾತಿಯನ್ನು ಆರಿಸುವಾಗ ಗಡಿಬಿಡಿ ಮಾಡುವುದು ಯಾಕೆ..

ಹಿರಿಯರಿಗೆ ಕೆಲವೊಮ್ಮೆ ತಪ್ಪಿಹೋಗುತ್ತದೆ. ಮಕ್ಕಳ ಜೀವನ ಒ೦ದು ನೆಲೆಗಾಣಲಿ ಎ೦ಬುದೇ ಮುಖ್ಯವಾಗಿರುತ್ತದೆ.
ನಿಮಗಾದರೂ ಬುದ್ಧಿ ಇಲ್ಲವೇ...??

- ಸಿ೦ಧು_ಭಾರ್ಗವ್_ಬೆ೦ಗಳೂರು.

No comments:

Post a Comment