Thursday 5 May 2016

ಕವನ - ದಾರಿಯೇ ಸಾರುತಿದೆ ಜೀವನದ ಸವಿನೆನಪನ್ನು


ದಾರಿಯೇ ಸಾರುತಿದೆ ಜೀವನದ ಸವಿನೆನಪನ್ನು

ಏಳುಬೀಳಿನ ನಡುವೆ ಸಾಗಿದ ತಿರುವುಗಳನ್ನು..!
ಅಮ್ಮ ಎ೦ಬ ತೊದಲುನುಡಿ ಕಿವಿಗೆ ನೀಡಿದ ಇ೦ಪನ್ನು..!
ಅಪ್ಪ ಕೈಹಿಡಿದು ಜೀವನದ ಹೆಜ್ಜೆ ಕಲಿಸಿದ ಪರಿಯನ್ನು..!
ಅಕ್ಕ-ಅಣ್ಣ೦ದಿರ ಜೊತೆ ಕುಣಿದಾಡಿದ ಕ್ಷಣವನ್ನು..!
ಸೋತು ಬಿದ್ದಾಗ ಅಳಲೆ೦ದೇ ಇದ್ದ ಆ ಜಾಗವನ್ನು..!
ಖುಷಿಗೂ ಕಣ್ಣಲಿ ಹನಿ ಜಿನುಗುವುದ ಅರಿತಿದ್ದೆನು..!
ದಿನವೂ ಪ್ರಾರ್ಥಿಸಲೆ೦ದು ಹೋಗುತ್ತಿದ್ದ ಆ ಗುಡಿಯನ್ನು..!
ನೇಹ- ಪ್ರೀತಿ ತೋರಿಸಿ ಧೈರ್ಯ ನೀಡಿದ ಗೆಳತಿಯರನ್ನು..!

|| ದಾರಿಯೇ ಸಾರುತಿದೆ ಜೀವನದ ಸವಿನೆನಪನ್ನು ||



|| ದಾರಿಯೇ ಸಾರುತಿದೆ ಜೀವನದ ಸವಿನೆನಪನ್ನು ||

ಒಣಗಿದ ತರಗೆಲೆ, ಚಿಗುರಿದ ಮಾವು..!
ಕೆ೦ಪಾದ ಕರಿಮೆಣಸು, ಸಿ೦ಗಾರ ಹೂವು..!
ಯುಗಾದಿಯ ಆಗಮನವು, ಹೊ೦ಗೆಯ ನಗುವು..!
ಸಾರುತಿದೆ ನೀತಿಯನು, ಜೀವನಕೆ ಪಾಠವನು..!
ಏಳು-ಬೀಳಿನ ಮೂರು ದಿನದ ಜೀವನವು..!
ನನ್ನ೦ತೆ ಜೀವಿಸಲು ಹೆಣಗಾಡುವುದು..!
ಕಲಿತಿದ್ದೆ ಪ್ರಕೃತಿಯ ಮಡಿಲಿನಲೇ ಎಲ್ಲವನು..!
ನೋವು ನಲಿವಿಗೆ ಇವಳೇ ಸಖಿಯಾಗಿರುವಳು..!

|| ದಾರಿಯೇ ಸಾರುತಿದೆ ಜೀವನದ ಸವಿನೆನಪನ್ನು ||

- ಶ್ರೀಮತಿ ಸಿ೦ಧು ಭಾರ್ಗವ್.


1 comment: