Thursday 5 May 2016

ಕವನ - ಬಿರು ಬಿಸಿಲು

ಕವನ - ಬಿರು ಬಿಸಿಲು

ಕವನ - ಬಿರು ಬಿಸಿಲು

ಮಳೆ ಕರೆಯೇ ಕೋಗಿಲೆ
ಮಳೆ ಕರೆಯೇ ಕೋಗಿಲೆ
ಇಳೆಯು ತ೦ಪಾಗಲು..!!

ಮೊಗ್ಗು ಕರಟಿ ಹೋಗಿದೆ
ಮೊಗ್ಗು ಕರಟಿ ಹೋಗಿದೆ
ಅರಳೋ ಮೊದಲು..!!

ಬಿರು ಬಿಸಿಲು ಹೆಚ್ಚಾಯ್ತು
ಬಿರು ಬಿಸಿಲು ಹೆಚ್ಚಾಯ್ತು
ಭುವಿಯು ಸುಡಲು..!!

ಪ್ರೀತಿ ಸುರಿಸಬೇಕಿದೆ
ಪ್ರೀತಿ ಸುರಿಸಬೇಕಿದೆ
ಭುವಿಗೆ ಬಾನು..!!

ಮನ ಕರಗ ಬೇಕಿದೆ
ಮನ ಕರಗ ಬೇಕಿದೆ
ಮೋಡ ಹನಿಯಾಗಲು..!!

ಪೂಜೆ ಮಾಡಿಯಾಗಿದೆ
ಹರಿಕೆ ನೀಡಿಯಾಗಿದೆ
ಮಳೆಯು ಬರಲು..!!


- ಶ್ರೀಮತಿ ಸಿ೦ಧು ಭಾರ್ಗವ್.

No comments:

Post a Comment