Thursday 5 May 2016

ಕವಿತೆ - ಸೂಚನೆ ಮೊದಲೇ ಇತ್ತು



ಸೂಚನೆ ಮೊದಲೇ ಇತ್ತು ನನ್ನ ಮನಸಿಗೆ ನೀ ಬರುವೆ ಎ೦ದು....
ಮನದ ಕಾಲಿ ಜಾಗದಲಿತ್ತು ನಿನ್ನ ಬಿ೦ಬದ ಅರಮನೆಯೊ೦ದು....

ಕಣ್ಣು ಕಣ್ಣು ಸೇರಿದಾಗಲೇ ಪ್ರೀತಿ ಮೂಡಿತ್ತು..
ಮನದ ಕಿಟಕಿ ಆಗಲೇ ತೆರೆದಿತ್ತು...

ಈ ಮಧುರ ಭಾವಕೆ ಪದಗಳ ಕೊರತೆಯಾಗಿದೆ..
ಸಾಲ ಕೇಳಲು ನಿನ್ನ ಬಳಿಗೆ ಬರಬೇಕಾಗಿದೆ..

ಅಪ್ಪಿತಪ್ಪಿ ನಿನ್ನ ಹೆಸರ ಉಲಿಯುತ್ತೀನಿ..
ದಿಕ್ಕುತಪ್ಪಿ ಮೈಲಿಯಷ್ಟು ನಡೆಯುತ್ತೀನಿ..

ಜೊತೆಗೆ ಕೂತು ಹ೦ಚಿಕೊಳ್ಳುವ ಪ್ರೇಮದೂಟವ
ಮೋಡದ ಮಡಿಲಿನಲಿ ಸು೦ದರ ಕನಸ ಕಾಣುವ...

ಚ೦ದಿರ ಏತಕೋ ನಮ್ಮನು ನೋಡಿ ಕರುಬುತಿರುವ...
ಮೊಗೆದಷ್ಟು ಪ್ರೀತಿ ಹ೦ಚಿಕೊಳ್ಳುವ , ಅವನ ಹೊಟ್ಟೆಉರಿಸುವ...

- ಶ್ರೀಮತಿ ಸಿ೦ಧು ಭಾರ್ಗವ್ ...

No comments:

Post a Comment