Thursday 5 May 2016

ಕವಿತೆ - ಸ್ನೇಹಿತನೇ ಸ್ನೇಹಿತನೇ ಮನಸಿನ ಒಡೆಯನೇ



ಸ್ನೇಹಿತನೇ ಸ್ನೇಹಿತನೇ ಮನಸಿನ ಒಡೆಯನೇ
ಸಣ್ಣ ಸಣ್ಣ ಆಸೆಗಳ ಪೂರೈಸಿಕೊಡು ಮನದರಸನೇ...

ಕನಸಿನೂರಿನಲಿ ಹೂಮಳೆ ಸುರಿಯುತಿದೆಯ೦ತೆ,
ಭಾವಗಳ ಮಿಲನದಲಿ ಮಿ೦ದೇಳಬೇಕು...

ಮೋಡದೂರಿನಲಿ ಚ೦ದ್ರಮ ಸಿಲುಕಿರುವನ೦ತೆ
ಒಡೆವೆಯ ರೂಪದಲಿ ಮುಡಿಗೇರಿಸಬೇಕು...

ನದಿಯೂರಿನಲಿ ಮೀನಿನ ನರ್ತನವಿದೆಯ೦ತೆ
ಗೆಜ್ಜೆಕಟ್ಟಿ ಅವುಗಳ ಜೊತೆ ನಾ ಕುಣಿಯಬೇಕು...

ನವಿಲಿನೂರಿನಲಿ ಪಟ್ಟೆ ಸೀರೆಯ ಮೆರವಣಿಗೆಯಿದೆಯ೦ತೆ...
ನಾನೂ ಧರಿಸಿ ನವಿಲುಗಳ ಹೊಟ್ಟೆಉರಿಸಬೇಕು....

ಸ್ನೇಹಿತನೇ ಸ್ನೇಹಿತನೇ ಮನಸಿನ ಒಡೆಯನೇ
ಸಣ್ಣ ಸಣ್ಣ ಆಸೆಗಳ ಪೂರೈಸಿಕೊಡು ಮನದರಸನೇ...

- ಶ್ರೀಮತಿ ಸಿ೦ಧು ಭಾರ್ಗವ್

No comments:

Post a Comment