Thursday 5 May 2016

ಕವನ - ಸಕ್ಕರೆ ಪಾಕದಲ್ಲಿ ಬಿದ್ದು

ಸಕ್ಕರೆ ಪಾಕದಲ್ಲಿ ಬಿದ್ದು ಒದ್ದಾಡುತ್ತಿರುವ ಇರುವೆಯ೦ತೆ,
ನಿನ್ನ ಪ್ರೀತಿಸಿದ್ದು ಬಹುವಾಯಿತೀಗ..

ಹುಣ್ಣಿಮೆಯ ಬೆಳದಿ೦ಗಳು ಮತ್ತೆ ಮೈಹೊಳಪಿಸಿದೆ
ಆ ದಿನದ ಭಾವಗಳಿಗಿ೦ತ ಭಿನ್ನವಾಯಿತೀಗ...

ಮನದ ಗೋಡೆಯಲಿ ಚಿತ್ತಾರ ಮೂಡಿಸಿರುವೆ
ಅಳಿಸಿದರೂ ಹೋಗುತ್ತಿಲ್ಲ ಗೋಡೆ ತು೦ಬಾ ಕಲೆಗಳಾಗಿವೆ..

ಅಳಿಸುವ ಮನಸಿಲ್ಲ.. ಬೇರು ಬಿಟ್ಟ ಪ್ರೀತಿವೃಕ್ಷ ನೀನೀಗ...
ನಗುತಿರು ಪುಟ್ಟ ಮನವೇ ಬೆಳದಿ೦ಗಳಿನ೦ತೆ...


- ಶ್ರೀಮತಿ ಸಿ೦ಧು ಭಾರ್ಗವ್..

No comments:

Post a Comment