Thursday 5 May 2016

ಕವನ - ಪ್ರಪ೦ಚದಲ್ಲಿ ಎಲ್ಲೆಲ್ಲೂ ಬೆಳಕು


ಪ್ರಪ೦ಚದಲ್ಲಿ ಎಲ್ಲೆಲ್ಲೂ ಬೆಳಕು
ಯಾವ ಜಾಗದಲ್ಲಿಲ್ಲ ಹೇಳಿ ಕೊಳಕು..?!

ರೈತರು ಬೆಳೆದ ಬೆಳೆಗೆ ಇಲ್ಲ ಬೆಲೆ
ಪರೋಕ್ಷವಾಗಿ ಮಾಡುತ್ತಿದ್ದಾರೆ ಕೊಲೆ..!!

ದುಡಿದು ತಿನ್ನಲು ರೆಟ್ಟೆಯಲಿ ಶಕ್ತಿಯಿರಲು
ದೇವಾಲಯದ ಎದುರು ಭಿಕ್ಷೆ ಬೇಡುವ ಜನರು..!!

ಇದ್ದ ಮರವನ್ನೆಲ್ಲ ಕಡಿದು ನೆಲಕ್ಕುರುಳಿಸುವರು
ಕೃತಕ ಮೋಡಬಿತ್ತನೆಗೆ ಮು೦ದಾಗುವರು..!!

ಜನರ ಏಳಿಗೆಗೆ೦ದು ಚುನಾಯಿಸಿ ಬರುವರು
ಗದ್ದುಗೆ ಏರಿದ ಮೇಲೆ ಎಲ್ಲ ಮರೆಯುವರು..!!

ಹುಳುಕು ತು೦ಬಿದ ಮೋಡಗಳು ಮುಸುಕಿರುವುದು
ಏಳಿಗೆಯ ಕಿರಣಗಳು ಕಣ್ಣಿಗೆ ಬೀಳದಿರುವುದು..!!

ಪ್ರಪ೦ಚದಲ್ಲಿ ಎಲ್ಲೆಲ್ಲೂ ಬೆಳಕು
ಯಾವ ಜಾಗದಲ್ಲಿಲ್ಲ ಹೇಳಿ ಕೊಳಕು..?!


- ಶ್ರೀಮತಿ ಸಿ೦ಧು ಭಾರ್ಗವ್.

No comments:

Post a Comment