Tuesday 30 August 2016

Yogaraaj Bhat ಯೋಗರಾಜ್ ಭಟ್ ರ ನೆನಪಲ್ಲಿ... "-ಗಳು"

ಫೇಸ್ ಬುಕ್ ಕರ್ಮಕಾಂಡ : ಯೋಗರಾಜ್ ಭಟ್ ರ ನೆನಪಲ್ಲಿ...


ಆಗಾಗ್ಗೆ ಮೂಡುವ
440Volts ಥಾಟ್ಸ್_ಗಳು..
ಗೋಡೆ ಮೇಲೆ
ಅಂಟಿಸುವ ಬರಹಗಳು..

ಸಾಲಲಿ ನಿಂತು
ಓದುವ ಜನಗಳು..
ಮೂರು ಲೈಕ್ ಗಳು
ಆರು ಕಮೆಂಟ್_ಗಳು..

ಬೇಡವೆಂದರೂ ಹೆಚ್ಚುವ
ಸ್ನೇಹಿತರ ಸಂಖ್ಯೆಗಳು..
ಇನ್ ಬಾಕ್ಸ್ ನಲ್ಲಿ
ನೂರಾರು 'ಹಾಯ್'ಗಳು..

ಉತ್ತರಿಸದಿದ್ದರೆ ಅವರಿಗೆ
ಆಗುವ ಬೇಸರಗಳು..
ನಮ್ಮಲ್ಲಿ ಮಾತನಾಡಲು
ಸಮಯದ ಅಭಾವಗಳು..

ಬೋರಾದಾಗೆಲ್ಲ ತೆರೆಮೇಲೆ
ಕುಣಿಯುವ ಸೆಲ್ಫೀಗಳು..
ಲೈಕ್ ಬರದಿದ್ದರೆ, ಮತ್ತೆ
ಡಲ್ ಆಗುವ ಮುಖಗಳು‌‌..

ಕಿರಿಕಿರಿ ,ರಗಳೆ ,ಜಗಳ,
ಕಾಲು ಎಳೆತಗಳು..
ಕೋಪದಲ್ಲಿ ಮಾಡುವ
ಬ್ಲಾಕ್ ಗಳು, ಅನ್ ಫ್ರೈಂಡ್ ಗಳು...

ಬೇಡವೆಂದರೂ
ತಳಕುಹಾಕಿಕೊಳ್ಳುವ ಗಾಸಿಪ್ ಗಳು..
ಕೊನೆಗೆ ನೆಮ್ಮದಿಗೆಂದು ತಾವಾಗೇ,
ಡಿ_ಅಕ್ಟಿವೇಟ್ ಆಗುವ ಜನಗಳು...!!


~ ಸಿಂಧುಭಾರ್ಗವ್ .ಬೆಂಗಳೂರು

3 comments:

  1. ಅದ್ಧುತ ಅಮೋಘ ಈ ಸುಂದರ ಸಾಲುಗಳು
    ತಿಳಿದೊ ತಿಳಿಯದೆಯೊ ನಿಮ್ಮ ಮಾತಿನಂತೆ ನಾವು ಫೇಸ್ ಬುಕ್ ನಲ್ಲಿ ಬುಕ್ಕಾಗಿ ಎತ್ತಿದ ದಶವಾತರಗಳು ಕರ್ಮಖಾಂಡಗಳು .......
    ಏನೂ ಹೇಳಲಿ ಈ ನಿಮ್ಮ ಸಾಲುಗಳಿಗೆ ....
    ಅರಿವಿಲ್ಲದೆ ನಿಮಗೊಂದು ಧೀರ್ಘದಂಡ ನಮಸ್ಕಾರ...

    ReplyDelete