Sunday 7 August 2016

Happy Friendship Day 2016 in Kannada






ಸ್ನೇಹಿತರ ದಿನಾಚರಣೆ ಎಂದಾಗ ನೆನಪಾಹುವುದು ನಮ್ಮ‌ಕಾಲೇಜು ದಿನಗಳು..
***
ಮುರ್ಗಿ ಕ್ಯಾ ಜಾನೆ ಅಂಡೆ ಕಾ ಕ್ಯಾ ಹೋಗಾ?!
ಅರೆ ಲೈಫ್ ಮುಲೇಗಿ ಯಾ ತವೇ ಪೆ ಫ್ರೈ ಹೋಗಾ...
ಕೋಯಿ ನ ಜಾನೆ ಅಪನಾ ಫ್ಯುಚರ್ ಕ್ಯಾ ಹೋಗಾ..?!
ಹೋಂಟ್ ಗುಮಾವ್ ಸೀಟಿ ಬಜಾ
ಸೀಟೀ ಬಜಾಕೆ ಬೋಲ್
ಬಯ್ಯಾ ಆಲ್ ಈಸ್ ವೆಲ್...
ಎಂದು ಆಕಾಶ ಕಳಚಿ ಬೀಳುವಷ್ಟು ಕೂಗಿದ್ದು ನೆನಪಿದೆಯಾ ಗೆಳತಿ.?!
ನಮ್ಮ ಕಾಲೇಜು ಜೀವನವ ಸವಿಸವಿಯಾಗಿ ಉಂಡಿದ್ದು , ಈಗ ಒಂದು ಹಂತದಲ್ಲಿ ನಿಜವಾದ ಜೀವನದ ಸವಿಯ ಸವಿಯುತ್ತಿರುವುದು,
ನಿದಿರೆ ಮಾಡಲು ಬಿಡದ ಕನಸಿನ ಹುಡುಗ, ಸೀರೆಯುಟ್ಟು ಜಾರಿ ಬಿದ್ದಾಗ ನಕ್ಕ ಸ್ನೇಹಿತ, ಜೀನ್ಸ್ ನಿನಗೆ ಸೂಟ್ ಆಗಲ್ಲ ಕಣೆ ಎಂದವ, ಕದ್ದು ಸೀಬೆಕಾಯಿ ಹಂಚಿ ತಿಂದದ್ದು, ಅತೀ ಬುದ್ಧಿವಂತ, ಅತೀ ದಡ್ಡ, ಸಣಕಲು,  ದಡಿಯಾ, ಲಂಬು ,ಕುಳ್ಳಿ, ಟಿಫಿನ್ ಬಾಕ್ಸ್ ತರುವ ನಾವು, ಹೋಟೇಲ್ ನಲ್ಲೇ ಊಟ ಮಾಡಿ ಬರುವ ಕೆಲವರು, ಬೆಳಿಗ್ಗೆ ೫ಗಂಟೆಗೆಲ್ಲ‌ಮನೆಬಿಡುತದತಿದ್ದ ಸ್ನೇಹಿತರು, ಕಂಪೌಂಡ್ ದಾಟಿದರೆ ಮನೆ ಸಿಗುತ್ತಿದ್ದವರು,  ಸಂಜೆ ಒಟ್ಟಿಗೆ ಬಸ್ ಸ್ಟ್ಯಾಂಡ್ ತನಕ ಗಲಾಟೆ ಮಾಡುತ್ತಾ ಹಾಕುವ ಹೆಜ್ಜೆ ಕಳೆದು ಹೋದ ಗೆಜ್ಜೆ ಇನ್ನು ಅಲ್ಲೇ ಇದೆ ಗೆಳತಿ, ಬಾ ಹೋಗಿ ಹುಡುಕುವ  ಇನ್ನೊಮ್ಮೆ, ತರಗತಿಯಲ್ಲಿ ಕೇಳಿದ ಪ್ರಶ್ನೆಗೆ ನೆಲ ನೋಡುವುದು,  ಇಂಟರ್ನಲ್ಸ್ ಗೆ ಓದುವ ಬದಲು ಆಗಸ ನೋಡುವುದು, ಬೇರೆ ತರಗತಿ ಹುಡುಗರಿಗೆ ಲೈನ್ ಹಾಕುವುದು, ಬರ್ತ್ ಡೇಗೆ ಮಿಡ್ನೈಟ್ ಯಿಂದ ಶುಭಾಶಯಗಳ ಸುರಿಮಳೆ, ಗಿಫ್ಟ್ಸ್ , ಪಾರ್ಟಿ, ಕೇಕ್ ಮುಖತುಂಬಾ ಹಚ್ಚುವುದು,  ಕಿಚಾಯಿಸೋದು, ನಾವು ದಿನವೂ ಹೋಗಿ ಬರುವ ಬಸ್ಸನ್ನು ೩ ವರ್ಷಕ್ಕೆ ಲೀಸ್ ಗೆ ತೆಗೆದುಕೊಂಡದ್ದು, ಅದೇ‌ಸೀಟು ,ಅದೇ ಕಿಟಕಿಗೆ ತಲೆ ಒರಗಿ ಮನೆ ಬರುವ ತನಕ ಗೊರಕೆ ಹೊಡೆಯುತ್ತಿದ್ದ ಆದಿನಗಳು, ಅಜ್ಜಿ ಮನೆ ಪರೋಟ, ಸೋಡಾ ಕೆಲವೊಮ್ಮೆ ಉಪವಾಸ, ಮಧ್ಯರಾತ್ರಿ ತನಕ ರಗ್ಗು ಹೊದ್ದುಕೊಂಡು ಮಾಡುತ್ತಿದ್ದ ಚಾಟಿಂಗ್, ಅವರವರ ಲವ್ ಸ್ಟೋರೀಸ್, ಅದಕ್ಕೆ ನಮ್ಮ ಕಾಮೆಂಟರೀ,  ಪ್ರೊಜೆಕ್ಟ್ ಗೆ ತಲೆ ಬಿಸಿ ಮಾಡಿಕೊಂಡದ್ದು, ಗೆಳೆಯರ ಮರಣ ಅಳುತರಿಸಿದ್ದು.. ಅ.ಭಿ.ವಿ.ಪಿ ಸ್ಟ್ರೈಕ್ ಗಳು ,ಕ್ಲಾಸ್ ಗೆ ಹಾಕಿದ ಬಂಕ್ಗಳು, ಎಲ್ಲವೂ ತಾಜಾವಾಗಿದೆ... ನಾಳೆ ಏನಾಗುವುದೋ ಎಂಬ ಪರಿವೇ ಇಲ್ಲದೆ, ಗೊಡವೆಗೂ ಹೋಗದೆ ಇಂದಿನ ದಿನ ಕಳೆಯಿತ್ತಿದ್ದ ರೀತಿ ಅಚ್ಚರಿ ಎನಿಸುತ್ತದೆ.
ಕಾಲೇಜು ಕಾಂಪಸ್ಸಿನಿಂದ ಹೊರ ಬಂದ ಮೇಲೆ ತಂದೆ ಕೊಡುತ್ತಿದ್ದ ಪಾಕೇಟ್ಮನಿ ಕಾಲಿಯಾದ ಮೇಲೆ ಕೆಲವರಿಗೆ ಉದ್ಯೋಗ ಅಗತ್ಯವಾಗಿತ್ತು, ಕೆಲಸ ಹುಡುಕುವುದರಲ್ಲೇ ಬಿಜಿಯಾದರು,  ಊರೂರು ಅಲೆದರು, ಕಷ್ಟಪಟ್ಟು ಕೆಲಸ ಗಿಟ್ಟಿಸಿಕೊಂಡರು, ಬದಲಾದ ನಂಬರ್, ಮುಖನೋಡಿದರೂ ಗುರುತ ಸಿಗದು, ಹೇಗಿದ್ದೀರಿ ಎಂದು ಕೇಳಿದರೂ ಹೇಳುವಷ್ಟು ಸಮಯವಿಲ್ಲ‌, or ಮನಸ್ಸು ಇಲ್ಲವೇನೋ. ಯಾವ ಕೆಲಸ ಎಂದೂ ಹೇಳಲು ಮನಸ್ಸಿಲ್ಲದವರು, ಕೆಲ ಹುಡುಗಿಯರಿಗೆ ಮದುವೆ ಭಾಗ್ಯ,  ನಮ್ಮಂತವರು‌ ಅಂತವರಿಗೆಲ್ಲತೊಂದರೆ ಯಾಕೆ ಕೊಡುವುದು ಎಂದು ದೂರ ಉಳಿದುಬಿಡುವುದು.. ಮದುವೆಯಾಗಿದೆ ಎಂದು ಅವರೇ ನಮ್ಮನ್ನು ದೂರವಿಡುವುದು, ಬರ್ತ್ ಡೇ ಗು ವಿಷಸ್ ಬರುವುದು ನಿಂತು ಹೋಯಿತು. ಮದುವೆಗೆ ಬರಲಾಗಲಿಲ್ಲ ಎಂಬ ನೆಪ, ಅನಿವಾರ್ಯವಾಗಿಯೂ ಬರಲಾಗದವರು, ಈಗ  ಎಲ್ಲೇಲ್ಲೋ ಹೋಗಿ ಜೀವನ ಕಟ್ಟಿಕೊಂಡ ಸ್ನೇಹಿತರು.. ಮನೆಯ ಜವಾಬ್ದಾರಿ ಹೊತ್ತ ಹೆಗಲುಗಳು, ಸಾವು- ನೋವು ಎಲ್ಲವೂ ಉಂಡವರು..
 ಫೇಸ್ ಬುಕ್ ವಾಟ್ಸ್ ಅಪ್ ನಿಂದ ಅವರ ಮುಖನೋಡುವ, ದೌಲತ್ತು , ಸಾಧನೆ- ಸಂಭ್ರಮ ನೋಡುವ ಭಾಗ್ಯ. ಇಲ್ಲದಿದ್ದರೆ ಅದೂ ಇಲ್ಲವಾಗುತ್ತಿತ್ತು....
ಎಲ್ಲರಿಗೂ ಸ್ನೇಹಿತರ ದಿನಾಚರಣೆಯ ಶುಭಾಶಯಗಳು...ಎಲ್ಲರು ಎಲ್ಲೇ ಇದ್ದರು ಚೆನ್ನಾಗಿರಿ..
**
ಘಟ್ಟ ಹತ್ತಿದ ನೆನಪುಗಳ
ಚಟ್ಟಕಟ್ಟಿದ ನೆನಪುಗಳ
ಬೇಕಂತಲೇ ಸುಟ್ಟುಹಾಕಿದ ನೆನಪುಗಳು,
ಕೂಡಿಟ್ಟು ಕಾಪಾಡಿದ ಸ್ನೇಹಿತರ ನೆನಪುಗಳ
ವರ್ಷಕ್ಕೊಮ್ಮೆ  ಮಾಡುವ ಶ್ರಾದ್ಧದಂತೆ ನೆನಪಿಸಿಕೊಳ್ಳುವುದೇ ಸ್ನೇಹಿತರ ದಿನಾಚರಣೆ..
ಸಂಭ್ರಮವಿಲ್ಲ ಮನದಲ್ಲಿ. ಬದಲಾಗಿದೆ ,ಬೆಳೆದಿದೆ, ಕಳೆದಿದೆ ,ಕೊಳೆತಿದೆ ಮನವೇಕೋ...?!
ಹೊಸನೀರು ತೊರೆಯಾಗಿ ಹರಿಹರಿದು ಸಾಗರವ ಸೇರುವಂತೆ ನನ್ನೀ ಜೀವನದಲಿ ಬಂದ ಎಲ್ಲಾ ಸ್ನೇಹಿತರು ನೆನಪಾಗಿ ಬೆರೆತು ಹೋಗಿದ್ದಾರೆ...
ಸ್ನೇಹಜೀವಿಯೇ ಆದರೂ ಹೊಸದಾಗಿ ಬರುವ ಗೆಳೆತಿ(ಯ)ರ ಸೇರಿಸಿಕೊಳ್ಳಲಾಗದೇ ದಡಕ್ಕೆ ತಂದು ದೂಡುವ ಅಲೆಯಂತಾಗಿ ಮನಸ್ಸು..
ಪೊರೆಕಳಚಿದ ಹಾವಂತೆ ನಾನು ಸದ್ದಿಲ್ಲದೆ ಸರಿದುಹೋಗಿರುವೆ... ಹೋಗಲೇ ಬೇಕಾದ ಅನಿವಾರ್ಯ ಬಂದಾಗ ನಾನು ಯಾವ ಉತ್ತರ ಕೊಡದೇ ಮೌನಿಯಾದೆ...

#ಸಿಂಧು_ಭಾರ್ಗವ್. 

No comments:

Post a Comment