Tuesday 30 August 2016

Happy Rakshabandhan. ನೂಲು ಹುಣ್ಣಿಮೆಯ ಶುಭಾಶಯಗಳು

ರಕ್ಷಾ ಬಂಧನ ಅಣ್ಣ ತಂಗಿ ಅಕ್ಕ ತಮ್ಮಂದಿರಿಗೇ ಇರುವ ಹಬ್ಬ.. ರಕ್ಷೆ ನೀಡು ಎಂದು ಕೇಳಿಕೊಳ್ಳುತ್ತಾ ಆಶಿರ್ವಾದ ಪಡೆಯುವ ಸುದಿನ...

(@@@)
ಚಿಕ್ಕದಿರುವಾಗ ನನ್ನ ಗೆಳತಿ , #ತಮ್ಮ ಕೊಟ್ಟ‌ ಉಡುಗೊರೆಯನ್ನೆಲ್ಲಾ ತೋರಿಸಿ ಪರಿಪರಿಯಾಗಿ ವರ್ಣಿಸುತ್ತಿದ್ದಾಗ ನನಗೆ ಅಳುವೇ ಬರುತ್ತಿತ್ತು. ಇನ್ನೊಬ್ಬ ಮಿತ್ರ ತನ್ನ ಅಕ್ಕ ,ಅಣ್ಣ ರಾಖಿ ಕಟ್ಟಿದರು ಎಂದು ಎಲ್ಲರಿಗೂ ತೋರುವ ಹಾಗೆ ಕೈಮುಂದೆ ಮಾಡುತ್ತಿದ್ದ.. ಆಗೆಲ್ಲ ತುಂಬಾ ಸಂಕಟ ಯಾಕೆ ಅಂತ ಗೊತ್ತಾಗುತ್ತಿರಲಿಲ್ಲ.. #ಹೆಣ್ಣಿನ_ಜನುಮಕೆ_ಅಣ್ಣ_ತಮ್ಮಂದಿರು_ಬೇಕು.. ಎಂದು ಹಾಡು ಹಾಡುವರು.. #ಇಲ್ಲದಿದ್ದರೆ ಏನು ಮಾಡುವುದು..😭😭😭
ನಮ್ಮ ತಂದೆ ಕಡೆಯಿಂದ ಏಕೈಕ ಪುತ್ರರತ್ನ ಇರುವುದು. ಅವರು ನಮಗಿಂತ ಇಪ್ಪತ್ತು ವರುಷ ದೊಡ್ಡವರು. ಅವರ ಜೀವನವೇ ಬೇರೆ. ಹಾದಿಯೇ ಬೇರೆ. ನಾವೆಲ್ಲ ಚಿಕ್ಕವರು. ಹಾಗಾಗಿ  ನನ್ನ ಈ ೨೫ ವರುಷದಲ್ಲಿ ಒಮ್ಮೆಯೂ ಯಾರಿಗೂ ರಾಖಿ ಕಟ್ಟಿ ಸಂಭ್ರಮಿಸಲಿಲ್ಲ.. ತಾಯಿಕಡೆಯವರಿದ್ದರೂ ಅಂತಃ ಸಂಧರ್ಭವೂ ಬರಲಿಲ್ಲ.
*
ಇದೇ ಮೊದಲ ಬಾರಿಗೆ, ನಿನ್ನೆ ರಾಖಿಯಂಗಡಿಗೆ ಹೋಗಿದ್ದೆ.. ಅಲ್ಲಿ ಎಷ್ಟು ಚಂದಚಂದದ ರಾಖಿಗಳಿದ್ದವು.. ಕೃಷ್ಣನ ಮುಖದ್ದು, ನವಿಲುಗರಿಯದ್ದು, ನವಿಲು, ಪರ್ಲ್ಗಳಿಂದ‌ ಮಾಡಿದ್ದು , ಸ್ಟೋನ್ಸ್ ಗಳಿಂದ ಮಾಡಿದ್ದು.. ಒಂದೊಂದು ರಾಖಿ ಕೈಯಲ್ಲಿ ಹಿಡಿದು ನೋಡಿದಾಗಲೂ "ಥೋ.. ಮನಸ್ಯಾಕೋ ತುಂಬಾ ಭಾರವಾಗುತ್ತಿತ್ತು... ಅಲ್ಲಿ ಅಳುವುದು ಏನು ಚಂದ ಎಂದು ಸಮಾಧಾನಮಾಡಿಕೊಂಡೆ.."
#ನಾನು ಮೊನ್ನೆ ಪೋಸ್ಟ್ ಮಾಡಿದ್ದಕ್ಕೆ ತುಂಬಾ ಅಣ್ಣಂದಿರು ವಿಳಾಸ ಕಳುಹಿಸಿದ್ದರು. ಎಲ್ಲರಿಗೂ ರಾಖಿ ಕಳುಹಿಸಿದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ರಾಖಿ ತೆಗೆದುಕೊಂಡಿದ್ದೆ.. ತುಂಬಾ ಖುಷಿಯಾಯಿತು. ಇಲ್ಲೊಬ್ಬರು ಹೇಳಿದರು ರಾಖಿ ಎದುರಲ್ಲಿ ಕೈಗೆ ಕಟ್ಟಿದರೆ ಚಂದ, ಕಳುಹಿಸುವುದರಲ್ಲಿ , ಗ್ರೀಟಿಂಗ್ಸ್ ಗಳಲ್ಲಿ ಏನಿದೆ " ಎಂದು..
ನನಗಂತು ಈ ವರುಷ ಹಬ್ಬವೇ.. ಯಾರು ಏನೇ ಹೇಳಿದರೂ.. ಅಡ್ಡಿ ಇಲ್ಲ.. ತುಂಬಾ ಭಾವುಕಳಾಗಿದ್ದೇನೆ..
ಜೊತೆಗಿರುವ ನಾಲ್ಕು ದಿನವಾದರೂ ಖುಷಿಯಿಂದ ನಗುನಗುತ್ತಿರೋಣ.
ಅಣ್ಣ ತಂಗಿ ಎಂದು ಜೊತೆಗೆ ಇರಬೇಕೆಂದೇನು ಇಲ್ಲ. ದೂರದಲ್ಲಿದ್ದರೂ ಸದಾ ಒಳಿತನ್ನೇ ಬಯಸಿದರೂ ಸಾಕು... ಪವಿತ್ರವಾದ ಸ್ಥಾನಕ್ಕೆ ಮಸಿ ಬಳಿಯದಿದ್ದರೆ ಸಾಕು...
ಎಲ್ಲರಿಗೂ ಧನ್ಯವಾದಗಳು..
@@@

No comments:

Post a Comment