Sunday 14 August 2016

Happy Independence day2016. in Kannada


(@)

೧)ನಾನು ಚಿಕ್ಕವಳಿದ್ದಾಗ ನಮ್ಮನೆ ಕೆಲಸದವ ಹೇಳಿದ್ದು.. "ಎಂತದೇ ಸ್ವಾತಂತ್ರ್ಯ ಅಂದ್ರೆ? ಮನೆ ಹೆಣ್ಮಕ್ಕಳೆಲ್ಲ ಮೈನೆರದಿದೋ.. ಒಂದ್ ಪಾಯಕಾನೆ(Toilet) ಕಟ್ಟುಕೆ ಅರ್ಜಿ ಹಾಕಿ ಎಸ್ಟ್ ಸಮಯ ಆಯ್ತ್ ಗೊತ್ತಾ...? ಪಂಚಾಯ್ತಿಗೆ ತಿರ್ಗಿ‌ತಿರ್ಗಿ ಸಾಕಾಯ್ತ್ ಬಿಟ್ರೆ  ಕೆಲ್ಸ ಆಯ್ಲ ಇನ್ನು... ಯಾರು ಎಂತ ಏನ್ ಆಯ್ಕ್ ಅಂದ್ ಸಹ ಕೇಂಬುದಿಲ್ಲೆ.. 😟
೨) ನಮ್ಮನ್ನೆಲ್ಲ ಯಾರ್ ಕೇಳ್ತಾರಾ..? ದೇಶಕ್ಕೋಸ್ಕರವೇ ಜೀವ ಕೈಯಲ್ಲಿಟ್ಟು ಬದುಕುತ್ತಾ ಇದ್ದೇವೆ. ಎಲ್ಲಿಯಾದ್ರು ಸತ್ತರೆ ಸರಕಾರಿ ಗೌರವದೊಂದಿಗೆ ನಮ್ಮ ಹೆಣವನ್ನು ಸುಡಬಹುದು. ಮೂರು ಸಲಿ ಮಲೇರಿಯಾ ಅಟ್ಯಾಕ್ ಆಗಿದೆ. ಊರಿಗೆ ಹೋಗೋಕೆ ಆಗೋದಿಲ್ಲ. ಇಲ್ಲಿ ನಮ್ಮನ್ನು ಬಿಟ್ಟು ಡ್ಯುಟಿ ಗೆ ಹೋಗ್ತಾರೆ.. (ವರಿಸ್ಸಾದಲ್ಲಿ ಡ್ಯುಟಿಯಲ್ಲಿದ್ದಾಗ ನನ್ನ ಸ್ನೇಹಿತರು, ವಿಜಯ್ CISF (The Central Industrial Security Force) ಹೇಳಿದ್ದು...
೩)ಅಡಿಕೆಗೆಲ್ಲ ಕೊಳೆ ಕಾಯಿಲೆ, ತೆಂಗಿನಕಾಯಿ ಒಂದು ರೂಪಾಯಿಗೂ ಸೇಲ್ ಆಗ್ತಾ ಇಲ್ಲ , ಅದಕ್ಕೆ ಎಳನೀರು ಸಿಯಾಳವನ್ನೇ ಮಾರೋದು..( ನನ್ನ ತಂದೆ ಹೇಳಿದ್ದು )
ನಿಜವಾದ ಅರ್ಥ ಏನು ಸ್ವಾತಂತ್ರ್ಯ ಎಂದರೆ??
ನೀರು, ಅನ್ನಕ್ಕಾಗಿ ಹೋರಾಟ ನಡೆಸುವ #ರೈತರಿಗೆ ಮಹಿಳೆಯರು, ಬಸುರಿಯರು ಎಂದು ನೋಡದೆ ಬಾಸುಂಡೆ ಬರುವ ಹಾಗೆ ಹೊಡೆಯುವುದು, ದನಿ ಎತ್ತಲಿಕ್ಕಿಲ್ಲ ಎಂದು ಜೈಲುಗೆ ಹಾಕುವುದು ಇದನ್ನೆಲ್ಲ ನೋಡುತ್ತಿರುವ ಮೂರನೇ ವ್ಯಕ್ತಿ (ನೆರೆ ರಾಜ್ಯ, ದೇಶದವರು) ಎಷ್ಟು ಅಪಹಾಸ್ಯ ಮಾಡುತ್ತಿರಬಹುದು..‌ ನಮ್ಮ ದೇಶ ಕಾಯುವ #ಯೋಧರನ್ನೆಲ್ಲ ವರ್ಷಕ್ಕೊಮ್ಮೆ ನೆನಪು ಮಾಡೋಕೆ ಸ್ವಾತಂತ್ರ್ಯ ದಿನ..?
ಇದೆಲ್ಲ ಬೇಕಾ ನಮಗೆ...
**
ಸ್ವಾತಂತ್ರ್ಯ ಸಿಕ್ಕಿ ಎಪ್ಪತ್ತು ವರುಷ ಆದರೂ ನಾವು ಚಿಕ್ಕವರಿದ್ದಾಗ ಕೊಟ್ಟ ಇಪ್ಪತ್ತು ಪೈಸೆಯ ಚಾಕಲೇಟ್ ನೆನಪು ಹೋಗಿಲ್ಲ...
ಗಣ್ಯಾತಿಗಣ್ಯರಿಂದ ಧ್ವಜಾರೋಹಣ, ಎಲ್ಲರ ಕೈಯಲ್ಲಿ ಬಾವುಟ,  ಭಾಷಣ ಮಾಡಿ ,ಸಿಹಿಹಂಚಿ ಮನೆಗೆ ಕಳುಹಿಸುವುದು...
ಇಂದಿನ ಮಕ್ಕಳೇ ಮುಂದಿನ ಭವಿಷ್ಯ, ಉತ್ತಮ ಪ್ರಜೆಗಳಾಗಿ ಎಂದವರು ಇನ್ನೂ ಇದ್ದಾರೆ. ಆದರೆ ಆ ಮಕ್ಕಳು ದೇಶಕ್ಕಾಗಲಿ, ಸಮಾಜಕ್ಕಾಗಲಿ ಏನಾದರೂ ಮಾಡುತ್ತಿದ್ದಾರೆ!? ಹೋಗಲಿ ಅವರವರುಗಳ ಭವಿಷ್ಯವನ್ನಾದರೂ ಚೆನ್ನಾಗಿ ರೂಪಿಸಿಕೊಂಡಿದ್ದಾರಾ?! ನಮ್ಮಂತಹ ಯುವಕ/ತಿಯರು ಎಲ್ಲಿದ್ದಾರೆ?!? ಏನು ಮಾಡುತ್ತಿದ್ದಾರೆ?! ಅನ್ಯಾಯಕ್ಕೆ ಒಂದಾಗಿ ದನಿಎತ್ತಬೇಕಿದೆ. ಆದರೆ ನಮಗ್ಯಾಕೆ ಎಂದು ಸುಮ್ಮನಿದ್ದಾರೆ. ತಮ್ಮ ಬುಡಗಟ್ಟಿ ಮಾಡಿಕೊಳ್ಳುವುದರಲ್ಲೇ ಬಿಜಿಯಾಗಿದ್ದಾರೆ..
ಮುಂದೆ ಹೋಗುವವರನ್ನು ನಿಂದಿಸಿಯೋ/ಹಂಗಿಸಿಯೋ ಚುಚ್ಚುಮಾತನಾಡಿಯೋ ಹಿಂದೆ ತಳ್ಳುತ್ತಿದ್ದಾರೆ..
*
ನನ್ನ ಪ್ರಶ್ನೆ ಒಂದೇ ದೇಶ ಉದ್ಧಾರ ಮಾಡುವುದು ಬೇಡ. ಮೊದಲು ನಮ್ಮ ಸುತ್ತಮುತ್ತಲಿರುವವರನ್ನೇ ಪ್ರೀತಿಯಿಂದ ಸ್ನೇಹದಿಂದ ನೋಡಿ. ಅಸ್ಪರ್ಶರಂತೆ ವರ್ತಿಸಬೇಡಿ...  ಒಗ್ಗಟ್ಟಿನಲ್ಲಿರ ಬೇಕಾದದ್ದು ನಾವೇ ಹೊರತು  ಬೇರೆಯವರಿಂದ ಹೇಳಿಸಿಕೊಂಡು ಬರುವುದಲ್ಲ... ನೀವು ಕಲಿತ ಊರನ್ನು ಒಮ್ಮೆ ತಿರುಗಿ‌ ನೋಡಿ... ಕಷ್ಟದಲ್ಲಿರುವ ಜನರು ಇನ್ನೂ ಇದ್ದಾರೆ. ನೀವು‌ಕಲಿತ ಶಾಲೆಗೆ ಏನಾದರೂ ಸಹಾಯ ಬಡಬಗ್ಗರಿಗೆ ಸಹಾಯ ಹಸ್ತ ಚಾಚುವುದು.. ಅವರ ಮುಖದಲ್ಲಿ ನಗು ಮೂಡುವಂತೆ ಮಾಡುವುದು ಇದೆಲ್ಲ ನಾವುಗಳೇ ಮಾಡಬೇಕು. ಎಲ್ಲದಕ್ಕೂ ಸರ್ಕಾರದ ಮೇಲೆ ದೂರು ಹಾಕಿ ಕೈಕಟ್ಟಿ ಕುಳಿತುಕೊಳ್ಳುವುದಲ್ಲ... ಎಲ್ಲಿಯೂ ಶಾಂತಿ ಇಲ್ಲ ಸೌಹಾರ್ದ ವಿಲ್ಲ. ರೈತರ ಕಷ್ಟ ಕೇಳುವವರಿಲ್ಲ, ಮನಸ್ಸು ಕೊಳಕು, ಬುದ್ಧಿಯೂ ಕೊಳಕು... ಎಲ್ಲರೂ ಅವಕಾಶವಾದಿಗಳು....
ನಮಗೆ ಸ್ವಾತಂತ್ರ್ಯ ಸಿಕ್ಕಿಯಾಗಿದೆ. ಹೀಗೆ ಕಚ್ಚಾಡುತ್ತಾ ಇದ್ದರೆ ಒಗ್ಗಟ್ಟು ಪ್ರದರ್ಶಿಸಿದ್ದರೆ ಇದ್ದ ಸ್ವಾತಂತ್ರ್ಯ ವೂ ಕಸಿದುಕೊಂಡು ಹೋಗುವರು.. ಸಂಶಯವಿಲ್ಲ.. ಎಂಬುದು ನನ್ನ ಅನಿಸಿಕೆ..
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು...

~ #ಸಿಂಧು_ಭಾರ್ಗವ್. 😍

No comments:

Post a Comment