Tuesday 19 July 2016

ವಾರದ ಸಣ್ಣ ಕಥೆ : ಹಿತ್ತಲಲ್ಲಿ ಅರಳಿದ ಪುಷ್ಪ



ವಾರದ ಸಣ್ಣ ಕಥೆ : ಹಿತ್ತಲಲ್ಲಿ ಅರಳಿದ ಪುಷ್ಪ
~~~~~~~~~~~~~~~~~~~~~~~~~
ಅವಳಿಗೊಂದು ರೀತಿಯ ಹುಚ್ಚು, ಕಾಡು ಮಲ್ಲಿಗೆಯನ್ನು ಮನೆ ಅಂಗಳದಲ್ಲಿ ಬೆಳೆಸಬೇಕೆಂದು. ಇಲ್ಲ ಅದು ಖುಷಿಯಿಂದ ಅರಳಿ ಘಮಿಸುತ್ತಿಲ್ಲ, ಅದರ ಮನದಲ್ಲೂ ನೋವಿರಬಹುದು ಎಂಬ ಭಾವನೆ. ಅದನ್ನರಿತು ಸಮಾಧಾನ ಮಾಡಬೇಕೆಂಬ  ಅನುಕಂಪ.
***
"ಸುಮನಾ"ಳ ಮನೆಯ ಹತ್ತಿರವೇ "ಪುಷ್ಪಳ" ಮನೆಕೂಡ... ಆದರೆ ಅದು ಮಡಿವಂತರ ಮನೆಯಲ್ಲ. ಆ ಮನೆಯಂಗಳದಲ್ಲು ರಂಗೋಲಿ ಮೂಡಿದರೂ ಯಾರೂ ನೋಡುವವರಿಲ್ಲ. ದಾರಿ ಹೋಕರೆಲ್ಲ ಬೈಯುತ್ತಲೇ ಸಾಗುವರು. ಪುಷ್ಪಳಿಗೇನು ಬೇಸರವಿಲ್ಲ . ಅವಳು ಮಾಡುವ ಕೆಲಸವೇ ಹಾಗಿದ್ದು. ಅವಳ ಮನೆಗೆ ಬರುವ ಅದೆಷ್ಟೋ ಕುಡುಕರು, ಕೆಡಪರು ಮೈಬೈಸಿ ಮಾಡಿಕೊಂಡು ಹೋಗುತ್ತಾರೆ. ಮಂಚದಲ್ಲಿ ಅಲಂಕರಿಸಿಟ್ಟ ಮಲ್ಲಿಗೆ ಹೂವಿಗೂ ಅಲ್ಲಿ ಬೆಲೆ ಇಲ್ಲ ... ಬಾಡಿದ , ಪಕಳೆಕಿತ್ತ ಹೂವನ್ನೆಲ್ಲ ಒಟ್ಟು ಮಾಡಿ ರಸ್ತೆ ಬದಿಗಿದ್ದ ಕಸದ ತೊಟ್ಟಿಗೆ ಹಾಕುವಾಗ "ಸುಮನಾ" ತನ್ನ ಮನೆಯ ಕಿಟಕಿಯಿಂದಲೇ ಕದ್ದು ನೋಡುತ್ತಿರುತ್ತಾಳೆ... ಅವಳಿಗೂ ಅರ್ಥವಾಗಿತ್ತು ಮನಸ್ಸಿಲ್ಲದ ಮನಸ್ಸಿನಿಂದ ಪುಷ್ಪಳ ಜೀವನ ನಡೆಯುತ್ತಿದೆ ಎಂದು.‌ ಒಮ್ಮೆ ಅವಳ ಜೊತೆ ಮಾತನಾಡಬೇಕು, ಅವಳ ಕತೆಯನ್ನೆಲ್ಲ ಕೇಳಬೇಕು , ಅಲ್ಲಿಂದ ಹೊರ ಪ್ರಪಂಚಕ್ಕೆ ಕರೆತರಬೇಕು ಎಂದು ನಿರ್ಧರಿಸಿದಳು. ಆದರೆ ಮಾತನಾಡುವುದು ಹೇಗೆ.?!  ಅವಳು ಬಾಗಿಲು ತೆಗೆಯುವುದೇ ಇಲ್ಲ. ಹಿತ್ತಲ ಬಾಗಿಲಿನಿಂದ ಬಂದು ಕೆಲಸ‌ಮುಗಿಸಿ ಹೋಗುವವರೇ ವಿನಃ ಎದುರೇದುರೇ ಎದುರಿಸುವ ತಾಕತ್ತಿಲ್ಲದ ಗಂಡಸರೇ ಬರುವುದಲ್ಲಿಗೆ...
ಒಮ್ಮೆ ಧೈರ್ಯಮಾಡಿ ಸುಮನಾ ಹಿತ್ತಲ ಬಾಗಿಲು ಬಡಿಯುತ್ತಾಳೆ...
**
ಯಾವುದೋ ನೆನೆದ ಹಕ್ಕಿ ಎಂದು ಬಾಗಿಲು ತೆರೆದಾಗ ಹೆಂಗಸು ನಿಂತಿರುವುದು ನೋಡಿ, ಗಾಬರಿಯಾಯಿತು. ಒಮ್ಮೆ ಬಾಗಿಲು ಮುಚ್ಚಿಬಿಟ್ಟಲು. ಜಗಳಕ್ಕೆ ಬಂದಿರಬಹುದಾ..?! ಅವಮಾನ ಮಾಡುವರಾ?! ಒಂದೂ ಅರಿವಾಗದೇ ಸ್ಥಂಭದಂತೆ ನಿಂತು ಬಿಟ್ಟಳು. ಸುಮನಾ ಮತ್ತೆ ಬಾಗಿಲು ಬಡಿದಳು. ಉಸಿರು ಕಟ್ಟಿಕೊಂಡು ಬಾಗಿಲು ತೆರೆಯುತ್ತಲೇ ಪುಷ್ಪ  ಬೈಯಲು ಶುರು ಮಾಡಿದಳು... " ನನಗೆ  ಬೈಯುವ ,ಅವಮಾನ ಮಾಡುವ ಯಾವ ಅಧಿಕಾರವೂ ನಿಮಗಿಲ್ಲ. ಇದು ನನ್ನ  ಹೊಟ್ಟೆಪಾಡು , ಹೇಗಾದರೂ ಬದುಕುತ್ತೇನೆ... ಹೊರಡಿ ಇಲ್ಲಿಂದ....." 😈😈😈
ಸುಮನಾಳ ಮೊಗದಲ್ಲಿ ನಗು ಮೂಡಿತು . ಅದು ತಂಪಾದ ತಂಗಾಳಿಯಂತೆ  ಪುಷ್ಪಾಳನ್ನು ಆವರಿಸಿತು.. ಏನೋ ಪರಿವರ್ತನಾ ಭಾವ ಮೈಮನದಲ್ಲಿ ಸಂಚಲನ...
" ಕುಳಿತುಕೊಳ್ಳಬಹುದೇ..?? "
"ಹ್ಮ್ಮ್ ... ಒಳ ಬನ್ನಿ... ಯಾಕೆ ಬಂದಿರಿ?! ನನ್ನಿಂದ ಏನಾಗಬೇಕು...?!"
" ನೀನು ಇಲ್ಲಿ ಯಾಕಿರುವೆ?! ನಿನಗೀ ಕೆಲಸ, ಜೀವನ ಇಷ್ಟವಿಲ್ಲವೆಂದು ನನಗೂ ತಿಳಿದಿದೆ.. ಸುಳ್ಳು ಹೇಳಬೇಡ.. ಮನಸಿನಲ್ಲಿದ್ದುದನ್ನು ಬಿಚ್ಚಿಡು... ನಿನ್ನ ಜೀವನ ಇದಲ್ಲ. ಹೊಸ ಪರ್ವಕ್ಕೆ ನೀನು ಅಡಿ ಇಡಬೇಕು, ಇಲ್ಲಿಂದ ಹೊರಗೆ ಬಾ... " ಎಂದಾಗ...
ಧೀರ್ಘಮೌನಕ್ಕೆ ಶರಣಾದಳು. ಹೇಳಬೇಕೋ ಬೇಡವೋ ಎಂದು ಯೋಚಿಸತೊಡಗಿದಳು. "ಹ್ಮ್ಮ್... ನನಗೂ ಸಾಕಾಗಿದೆ ಈ ನಾಟಕೀಯ ಜೀವನ. ಇಲ್ಲಿಂದ ಮುಕ್ತಿ ಸಿಗುವುದಾದರೆ ಇವರ ಹತ್ತಿರ ಎಲ್ಲವನ್ನೂ ಹೇಳಿ ಹೊರಟುಬಿಡಬೇಕು, ಹಿತ್ತಲ ಬಾಗಿಲನ್ನು ಶಾಶ್ವತವಾಗಿ‌ ಮುಚ್ಚಬೇಕು ..." ಎಂದು ಮನದಲ್ಲೇ ಎನಿಸಿ ಯಾರಿಗೂ ತಿಳಿದಿಲ್ಲದ ಕಥೆ-ವ್ಯಥೆಯನ್ನು ಎಳೆ ಎಳೆಯಾಗಿ ಬಿಡಿಸತೊಡಗಿದಳು.
**
ನಾನು ನನ್ನ ಅಮ್ಮ ಇಬ್ಬರೇ ಇದ್ದದ್ದು ಈ ಮನೆಯಲ್ಲಿ. ತಂದೆ ನಾನು ಹೆಣ್ಣು ಎಂದು ತಿಳಿದಾಗಲೆ ನಮ್ಮನ್ನು ಬಿಟ್ಟು ಹೋಗಿದ್ದ. ಇದ್ದಾನೋ‌ ಸತ್ತಿದ್ದಾನೋ‌ ತಿಳಿಯದು.. ಅಮ್ಮ ಜೀವನಕ್ಕೆ ಎಂದು ಅಲ್ಲಿ ಇಲ್ಲಿ ಮುಸುರೆ ತಿಕ್ಕಿ ನನ್ನ‌ ಸಾಕಿದಳು.. ಒಬ್ಬ ಸಿರಿವಂತನ ಪಟ್ಟದರಸಿ ಯಾದಳು.. ಆದರೆ ಹೆಂಡತಿಯಲ್ಲ. ಅವರೇ ನಮ್ಮ‌ತಾಯಿಗೆ ಕೊಟ್ಟ‌ ಮನೆಯಿದು. ಒಮ್ಮೆ ಅವರ ಹೆಂಡತಿಗೆ ವಿಷಯ ತಿಳಿದು ಜಗಳವಾಗಿ ಅವರಿಂದ ನಮ್ಮನ್ನು ದೂರ ಮಾಡಿದರು.. ಆಗ ತಾಯಿಗೆ ಅಂದಚಂದಕ್ಕೆ ಅಂಕುಡೊಂಕಿಗೆ ಮೋಹಗೊಂಡು ಸಮಾಧಾನ ಮಾಡುವ ನೆಪದಲ್ಲಿ ಮೈಮುಟ್ಟಿದವರೇ ಎಲ್ಲಾ... 😟 ಬೇಡವೆಂದರೂ ಕೇಳುವವರಲ್ಲ.. ನಾನು‌ ಚಿಕ್ಕವಳಾಗಿದ್ದೆ.. ಏನೂ ಅರ್ಥವಾಗುತ್ತಲೂ ಇರಲಿಲ್ಲ. ವರುಷಗಳೆ ಕಳೆಯಿತು.‌ಅಮ್ಮನೂ ತೀರಿಹೋದರು. ನಾನು ಮಾತ್ರ ಈ ಮನೆಯಲ್ಲಿ‌ ಇದ್ದೇನೆ. ಆದರೆ ಅಮ್ಮ ಮಾಡಿದ ಕೆಲಸಕ್ಕೆ ಎಲ್ಲರೂ ನನ್ನನ್ನೂ ಹಾಗೆ ನೋಡುತ್ತಿದ್ದಾರೆ... ಯಾರ್ಯಾರೋ ಬರುತ್ತಾರೆ.. ಎಲ್ಲರನ್ನೂ ಆ ಕೋಣೆಗೆ ಕಳುಹಿಸಿ ನಿದ್ರೆಮಾತ್ರೆ ಹಾಕಿದ ಹಾಲು ಕುಡಿಸುತ್ತೇನೆ ೨-೩ಗಂಟೆ ಮಲಗಿ‌ ಹೋಗುತ್ತಾರೆ...  ಅವರಿಗೇನೂ ಅರಿವಿಗೆ ಬರಿವುದಿಲ್ಲ.. ಅಮಲಿನಲ್ಲೇ ಮನೆ ಸೇರಿರುತ್ತಾರೆ. ಇಲ್ಲ‌ ಕಟ್ಟಿಹಾಕಿ ಬೆದರಿಕೆ ಒಡ್ಡುತ್ತೇನೆ..‌ಇಲ್ಲಿಯದು ಹೊರಗೆ ಬಾಯಿ ಬಿಡಬಾರದು ಎಂದು...
ನಾನು ಆ ರೀತಿ ಹೆಣ್ಣಲ್ಲ ಎಂದು ಯಾರ‌ ಬಳಿ ಹೋಗಿ ಕೂಗಿಕೊಳ್ಳುವುದು.. ನನಗೆ ಮಾತ್ರ ಗೊತ್ತಿದೆ ನಾನು ಪರಿಶುದ್ಧಳು ಎಂದು.. ನನ್ನನ್ನು ನೀವು ಗಮನಿಸಿದ್ದು ಯಾವಾಗಿನಿಂದ..?! ಎಲ್ಲರೂ ಬೈಯುವವರೇ ವಿನಃ ನನ್ನ‌ ಕಷ್ಟ ಕೇಳಿದವರಿಲ್ಲ... ದಯಮಾಡಿ ನನ್ನನ್ನು ಕರೆದುಕೊಂಡು ಹೋಗಿ. ಒಂದು ಕೆಲಸಕ್ಕೆ ಕೊಡಿಸಿ . ನಿಮ್ಮ   ಹೆಸರು ಹೇಳಿ ಬದುಕುತ್ತೇನೆ.. ಈ ಊರಿಂದ ದೂರ ಹೋಗಬೇಕು ನಾನು..."
**
ಸುಮನಾಳು ಎನಿಸಿದ್ದು ಸರಿಯಾಗೇ ಇತ್ತು. ಈಗಲೇ ಉಟ್ಟ ಬಟ್ಟೆಯಲ್ಲಿ ಬಂದು ಬಿಡು. ಎಂದು ಅವಳ ಬದುಕಿಗೊಂದು ದಾರಿ ತೋರಿಸಿದಳು..
ಪುಷ್ಪಳ ಹಿತ್ತಲಬಾಗಿಲು ಶಾಶ್ವತವಾಗಿ ಮುಚ್ಚಿತು.. ಮನೆಯೋ ಗಿಡಗಂಟಿಯಿಂದ ಮುಚ್ಚಿಹೋಯಿತು...
~~~~~~~~~~~~~~~~~~~~
- #ಸಿಂಧು_ಭಾರ್ಗವ್ 😍

No comments:

Post a Comment