Wednesday 27 July 2016

ನೆನಪಿನ ಬುತ್ತಿ

 ಚಿಕ್ಕವರಿದ್ದಾಗಿನ ಖುಷಿ ಈಗಿಲ್ಲ...
ನೆನಪಿನ ಬುತ್ತಿಯಿನ್ನು ಕಾಲಿಯಾಗಲ್ಲ...
~~~
ಇದನ್ನ ನಮ್ಮ ಕಡೆ #ತೋಡು ಅನ್ನುತ್ತೇವೆ. ಸಂಕ (ಸೇತುವೆ ) ತೋಟ-ಗದ್ದೆಯನ್ನು & ಮನೆಯನ್ನು ಸೇರಿಸಲು ಇದೆ.
ನಾವು ಚಿಕ್ಕದಿರುವಾಗ ಪಾಣಿಪಂಜಿಯಲ್ಲಿ ಕಾಣಿ ಮೀನುಗಳನ್ನು ಹಿಡಿತಾ ಇದ್ವಿ. ನೆರಮನೆ ಮರಾಠೀಮಕ್ಕಳ ಜೊತೆ. ತುಂಬಾ ಖುಷಿ ಮೀನು ಸಿಕ್ಕಿದಾಗ. ತಪ್ಪಿಸಿಕೊಂಡು ಹೋದಾಗ ಬೇಸರವಾಗೋದು. ಹಿಡಿಯದೇ ಬಿಡಬಾರದು ಅನ್ನುವಂತಹ ಹಠ ಒಂದು ರೀತಿ. ಹಿಡಿದ ಮೀನನ್ನೆಲ್ಲ ಚೊಂಬಿಗೆ ಹಾಕಿ ತೆಗೆದುಕೊಂಡು ಬಂದು ಹಟ್ಟೀ ದಂಡೆಯಲ್ಲಿ ( ಹಸುವಿನ ಕೊಟ್ಟಿಗೆ)  ಇಡೋದು. ಅಮ್ಮ ಹಟ್ಟಿ ಕೆಲ್ಸ ಮಾಡ್ತಾ ಇರ್ತಾರೆ.
" ಯಾಕಾ ತಂದೆ ಅದನ್ನ! ಸಾಯುತ್ತೆ  ಮರಾಯ್ತಿ . ಬಿಟ್ಟು ಬಾ ವಾಪಾಸ್ಸು .." ಅಂದರು ಕೇಳೋದಿಲ್ಲ.. ಮರುದಿನ ಬೆಳಿಗ್ಗೆ ಓಡಿ ಹೋಗಿ ನೋಡೋದು. ನಿದಿರೆಯೂ ಸರಿ ಮಾಡಿರೋದಿಲ್ಲ.. ಆಗ ಕೆಲವು ಸತ್ತು ಹೋಗಿ ಒಂದೆರಡು ಜೀವವಿರುತ್ತೆ. ಸತ್ತ ಮೀನಿನ ವಾಸನೆ, ಬೆಳಿಗ್ಗೆ ಅಪ್ಪಯ್ಯ ಹಟ್ಟಿ ಹತ್ತಿರ ಬಂದಾಗ.
" ಅಲ್ಲಾ. ಆ ಹೆಣ್ಣಿಗೆ ಹೇಳ್‌ ಮಾರಾಯ್ತಿ.  ಭಟ್ಟರ ಮನೆಲಿ ಮೀನ್ ವಾಸನೆ ಬಂದರೆ ಎಂತ ಎನಿಸೋದಿಲ್ಲ ಜನ.. ನಾ ಏನೂ ಹೇಳುದಿಲ್ಲ ಮರ್ಕತ್ ಅದ್... " ( ಅಳುವುದು)
ಅಂತ ಹೇಳಿ ವಾಪಾಸಾಗ್ತಿದ್ರು.
ಎಷ್ಟು ಹೇಳಿದ್ರು ನಾವು ಮಾಡೋದು ಅದನ್ನೆ....
ಅಲ್ಲದೆ ಪಾರಿಜಾತ ಹೂವಿನ ಗಿಡವನ್ನು ತಾಒಡಿನ ದಂಡೆಯಲ್ಲೇ ನಡುವುದು ಜಾಸ್ತಿ. ಬೆಳ್ಳಂಬೆಳಿಗ್ಗೆ ಅದು ನೀರಿನಲ್ಲಿ ತೇಲಿ ಬರುವುದುಮ ಅದಂತು ಅದ್ಭುತ ನವಿರಾದ ಅನುಭವ... ಗಮ್ಮತ್ ಆತಿತ್ ಚಣ್ಣಕಿಪ್ಪತಿಗೆ..(ಚಿಕ್ಕವರಿದ್ದಾಗ)
~~~

#ಅಮ್ಮನ ಮಗಳು ,
ರಾಧಿಕಾ. 😍

No comments:

Post a Comment