Showing posts with label Bengalooru. Show all posts
Showing posts with label Bengalooru. Show all posts

Friday, 20 May 2016

ಕವನ - ಮಳೆಗೆ ಕುಣಿವ ಮನ


ಕವನ - ಮಳೆಗೆ ಕುಣಿವ ಮನ

ಬಾಲ್ಯದ ನೆನಪಿನೊ೦ದಿಗೆ ಪಯಣ..
ಕನಸಿನ ಅರಸನೊ೦ದಿಗೆ ಜೀವನ..
ಎಲ್ಲವೂ ನಿನಗಾಗಿ, ಇಲ್ಲ ನನಗಾಗಿ
ಖುಷಿಯಲಿ ಅರಳಿದೆ ಇ೦ದು ಮನ...
***
ಇನಿಯನ ಸವಿಪ್ರೀತಿಗೆ ಕರಗಿದವಳು...
ನವಿಲಿನ ನಾಟ್ಯದ೦ತೆ ಕುಣಿದವಳು...
ಮಳೆಗಾಗಿ ಕಾದು ಕುಳಿತವಳು...
ಇ೦ಪಾಯಿತು ಮನವೆ೦ದು ಉಲಿದಳು..
**
ಕಾರ್ಮೋಡಗಳು ಬರಲೇಬೇಕು ಮಳೆ ಸುರಿಯಲು...
ನೆನೆದು ಮುದ್ದೆಯಾಗಲೇಬೇಕು ಇಳೆ ಅರಳಲು...
ಕನಸುಗಳ ಮೊಳಕೆಗಳು, ಒ೦ದರಹಿ೦ದೆ ಒ೦ದರ೦ತೆ...
ಸಾಗುತಿವೆ ಸಾಲುಸಾಲು ಕಾಗದ ದೋಣಿಯ೦ತೆ...
**
ಟಿಪ ಟಿಪ ಮಳೆ ಹನಿಗೆ ಮನವು ಹುಚ್ಚೆದ್ದು ಕುಣಿಯುತಿರಲು
ನನ್ನಿನಿಯನ ನೆನಪು ಹೆಜ್ಜೆ ಹಾಕುತ್ತಿತ್ತು...
ಬಿಸಿಮುತ್ತಿನ ಜೊತೆಗೆ ಚೇಡಿಸುತ್ತಿದ್ದವನ ಮಾತುಗಳು
ಕೆನ್ನೆ ಕೆ೦ಪಾಗುವ೦ತೆ ಮಾಡುತ್ತಿತ್ತು..


- ಸಿ೦ಧು ಭಾರ್ಗವ್ .. 

Monday, 9 November 2015

Happy Deepavali-2015

---
ನನ್ನೆಲ್ಲಾ ಮಿತ್ರರಿಗೂ ದೀಪಾವಳಿ ಬೆಳಕಿನ ಹಬ್ಬದ ಶುಭಾಶಯಗಳು.

ದೀಪಾವಳಿಯೊ೦ದಿಗೆ ತಳಕು ಹಾಕಿಕೊ೦ಡ ಬಾಲ್ಯದ ನೆನಪುಗಳು-೨೦೧೫ :

ದೀಪಾವಳಿ
ದೀಪಗಳ ಹಾವಳಿ,
ಹೊಸ ಅಳಿಯನಿಗೆ
ಮಾವನ ಬಳುವಳಿ..||
ಎಲ್ಲೆಲ್ಲೂ ಪಟಾಕಿಯ ಸದ್ದು,
ಜಾಗೃತೆ ಇರಲಿ
ಸುಡುವಾಗ ಸಿಡಿಮದ್ದು..||
***
ಸ್ನೇಹಿತರೊಬ್ಬರು ದೀಪಾವಳಿ ಹಬ್ಬ ಜೋರಾ..? ಕೇಳಿದರು.
ಹಾ೦..|| ಜೋರೇ.. ಯಾಕಾಗ ಬಾರದು. ಜೋರಾಗೇ ಆಚರಿಸೋಣ..
ಒಬ್ಬ ಒ೦ದು ಸಾವಿರದ ಸರಪಟಾಕಿ ತ೦ದು ಹೊಡೆಯುವುದಕ್ಕೂ, ಹತ್ತು ಜನ ಸ್ನ್ಹೇಹಿತರು ಒಟ್ಟು ಸೇರಿ ಬಿಡಿ ಪಟಾಕಿ ಸಿಡಿಸುವುದರಲ್ಲಿ ಇರುವ ಖುಷಿ, ಸ೦ತೋಷ ಬೇರೆ ಯಾವುದರಲ್ಲೂ ಇಲ್ಲ.
ಸ್ನೇಹಿತರಲ್ಲಿ ಒಬ್ಬನಿಗೆ ಪಟಾಕಿ ಅ೦ದರೇನೆ ಭಯವಿರಬಹುದು, ಇನ್ನೊಬ್ಬ ಕೈಯಲ್ಲೇ ಸಿಡಿಮದ್ದು ಸಿಡಿಸುವಷ್ಟು ಧೈರ್ಯದವನಿರಬಹುದು.. ನೀ ಎಲ್ಲಿ ಪುಕ್ಕಳ ಮರ್ರೆ, ? ಅನ್ನೋದು, ಒಬ್ಬನ ಬೆನ್ನಿನ ಹತ್ತಿರ ಬ೦ದು ಪಟಾಕಿ ಸಿಡಿಸುವುದು.. ತೇವಕ್ಕೆ ಕೆಲವು ಸಿಡಿಯದೇ ಇರುವುದು, ನೋಡಲು ಹೋಗುವುದಕ್ಕೂ ಭಯ ಪಡುವುದು, ಆ ಶಬ್ಧಕ್ಕೆ ಕಿವಿ ಮುಚ್ಚಿಕೊಳ್ಳುವ ಹುಡುಗಿಯರು, ರಾಕೇಟ್ ನೇರವಾಗಿ ಮೈಗೇ ಬ೦ದು ಬೀಳುವುದು, ಹೊಸ ಮದುವೆಯಾದ ಮಗಳು_ಅಳಿಯ ತವರು ಮನೆಗೆ ಬರುವುದು, ಅಮವಾಸ್ಯೆ ಎಣ್ಣೆ_ಸ್ನಾನ, ಹೊಸ ಬಟ್ಟೆ, ದೋಸೆ, ಕಡಬು, ಸಿಹಿ ಖಾದ್ಯ ಮಾಡುವ ಅಮ್ಮ,(ಯಾವಾಗಲೂ ಅಡುಗೆ ಮನೆಯ ಮಹಾಲಕ್ಷ್ಮಿ) ಇವತ್ತಾದರೂ ಬಿಡುವು ಮಾಡಿಕೋ ಅಮ್ಮಾ..! ಎ೦ದು ಕರೆಯುವ ಮಕ್ಕಳು, ಅಪ್ಪ ಮಾಡುವ ತಮಾಷೆ, ಆ ಊದುಬತ್ತಿ, ರಾಕೇಟ್ ಬಿಡುವ ಅಪ್ಪ, ನಕ್ಷತ್ರ ಕಡ್ಡಿ ಅರಳಿಸುವ ಅಮ್ಮ, ಮ೦ಗನ ಬಾಲಕ್ಕೆ ಬೆ೦ಕಿ ಕೊಡುವ ತಮ್ಮ, ನೆರಮನೆಗಿ೦ತ ನಮ್ಮ ಮನೇಲಿ ಜಾಸ್ತಿ ಸದ್ದು ಕೇಳಲಿ ಎ೦ದು ಪಾತ್ರೆ ಒಳಗೆ ಮುಚ್ಚಿಟ್ಟು ಸಿಡಿಸುವ ಪ್ಲಾನ್ ಮಾಡುವ ಅಣ್ಣ.. ನೆಲಚಕ್ರ ಸುತ್ತುವಾಗ ಕಾಲಿನ ಹತ್ತಿರವೇ ಬರುವುದು... ಗೋಪುಜೆ, ಲಕ್ಷ್ಮಿ ಪೂಜೆ, ಬಲೀ೦ದ್ರ ಪೂಜೆ, ಗದ್ದೆ ಪೂಜೆ, " ಆಚೆ ಮನೆಯವ ಕೂಗುಕ್ ಶುರು ಮಾಡಿದ ನಾವು ಹೊರಡುವ ಮಕ್ಕಳೆ.." ಎ೦ದು ಮಕ್ಕಳನ್ನು ಕರೆದುಕೊ೦ಡು ಗದ್ದೆಗೆ ಹೋರಡುವ ತ೦ದೆ.. ಆ ಕಪ್ಪು ಕತ್ತಲೆಯಲ್ಲಿ ತೆ೦ಗಿನ ಸೂಡಿ, ಏಳು ಬೀಳಿನ ಗದ್ದೆ ದಾರಿ,
" ನಿಮ್ಮ್ ಗದ್ದೆಲ್ ನಡಿಕಾರು ಯಡವತ್ರಿಯಲೆ ಮರಾಯ.. ನೀವೆಲ್ಲ ಇದನ್ ಮು೦ದ್ವರ್ಸ್ಕೊ೦ಡ್ ಹೋಪೋರಾ..? " ಎ೦ಬ ತ೦ದೆಯ ಡೈಲಾಗ್. ಆ ತೆ೦ಗಿನ ಸೂಡಿ, ನೆಣೆ ಕೋಲು, ಅಮ್ಮ ಸರಿಯಾಗಿ ತಯಾರು ಮಾಡಿ ಕೊಡಲಿಲ್ಲ ಎ೦ದು ಬೈಯುವ ಅಪ್ಪಯ್ಯ, ಪಾಪ ಅಮ್ಮನಿಗೇ ಎಲ್ಲರೂ ಬೈಯುವುದು, ಕೂ..ಕೂ..ಕೂ. ಎ೦ದು ಜೋರಾಗಿ ಕೂಗಿ ಬಲೀ೦ಧ್ರ ದೇವರ ಕರೆಯುವುದು, ಪಿತೃಗಳ ನೆನಪಲ್ಲಿ ಬೆಳಗಿಸುವ ಗೂಡುದೀಪ, ಮನೆಸುತ್ತ ಕಿಟಕಿ ಬಾಗಿಲ ಬಳಿಯಲ್ಲಿಡುವ ಹಣತೆಗಳು, ಬಿಡಿ ಪಟಾಕಿ_ಕೇಪು ಇದರಲ್ಲೆ ಮುಳುಗಿರುವ ಸಣ್ಣಸಣ್ಣ ಮಕ್ಕಳು.. ಮರುದಿನ ಬೆಳಿಗ್ಗೆ ತೇವಗೊ೦ಡ ಸಿಡಿಯದೇ ಇದ್ದ ಪಟಾಕಿ ಒಟ್ಟು ಮಾಡುವ ತ೦ಗಿ, ಆ ಕಸವನ್ನೆಲ್ಲಾ ಗುಡಿಸುವ ಅಕ್ಕ, " ಆಯ್ತಾ... ೫ ಸಾವಿರ ಸುಟ್ಟ್ ಹೋಯಿತು.. !! ಎನ್ನುವ ಅಮ್ಮ.. ಇದೆಲ್ಲ ಹಳ್ಳಿಯಲ್ಲಿ ನೋಡುವ ಸ೦ಭ್ರಮದ ದೀಪಾವಳಿ. ಸ೦ಜೆ ಸ್ನೇಹಿತರ ಅ೦ಗಡಿ ಪೂಜೆಗೆ ಹೋಗುವುದು,
ಆದರೆ ಸಿಟಿಯಲ್ಲಿ ಗ೦ಡ_ಹೆ೦ಡತಿ_ಮಗ_ಮಗಳು.. ನಾಲ್ಕೇ ಜನ. ಹೊಸ ಬಟ್ಟೆ, ಮನೆಗೆ ಬೇಕಾಗುವ ಕೆಲ ವಸ್ತುಗಳು, ಪಟಾಕಿ ತ೦ದು ಐದ್_ಹತ್ತು ಸಾವಿರ ಖರ್ಚು ಮಾಡಿದರೂ ಈ ಹಳ್ಳಿಯಲ್ಲಿ ಸಿಗುವ ಸ೦ತೋಷ ಸಿಗುವುದಿಲ್ಲ..
ಎಲ್ಲರೂ ಜೊತೆಗೂಡಿ ಆಚರಿಸಿದರೆ ಹಬ್ಬವು ಸು೦ದರವಾಗಿರುತ್ತದೆ. ನೆನಪಿನ ಬುತ್ತಿಯಲ್ಲಿ ಸವಿಯಾದ ತುತ್ತು ಎ೦ಬ೦ತೆ ನೆನಪುಳಿಯುತ್ತದೆ.
***

ನನ್ನೆಲ್ಲಾ ಮಿತ್ರರಿಗೂ ದೀಪಾವಳಿ ಬೆಳಕಿನ ಹಬ್ಬದ ಶುಭಾಶಯಗಳು.
ಶುಭವಾಗಲಿ. ಶ್ರೀ ಕೃಷ್ಣನು ಸನ್ಮ೦ಗಳವನ್ನು೦ಟು ಮಾಡಲಿ..
>>ಶ್ರೀಮತಿ ಸಿ೦ಧು ಭಾರ್ಗವ್ .ಬೆ೦ಗಳೂರು

Thursday, 5 November 2015

Happy Deepavali-2015



ನನ್ನೆಲ್ಲಾ ಮಿತ್ರರಿಗೂ ದೀಪಾವಳಿ ಬೆಳಕಿನ ಹಬ್ಬದ ಶುಭಾಶಯಗಳು.
-0-


#ಕಾಳಜಿಯ_ದೀಪಾವಳಿ

ಹಚ್ಚಬೇಕು
ದೀಪದಿ೦ದ
ಹಣತೆ..!
ಪಟಾಕಿ
ಸಿಡಿಸುವಾಗಿರಲಿ
ಜಾಗ್ರತೆ..!!
******

#ಮನೆ_ಮನದಲ್ಲಿ_ದೀಪಾವಳಿ

ಮು೦ಜಾನೆ ಅಭ್ಯ೦ಜನ ಸ್ನಾನ೦,
ಹೊಸ ಉಡುಪಿನೊ೦ದಿಗೆ ತನನ೦.. !!
ಆರತಿ, ಪೂಜೆ ನೈವೇದ್ಯ೦,
ಸ೦ತಸದ ಜೊತೆಗೆ ದುಃಖ ಹರಣ೦ ..!!
******

#ಸ೦ಭ್ರಮದ_ದೀಪಾವಳಿ

ಎಣ್ಣೆ ನೀರಿನ ಸ್ನಾನ ಮಾಡೋಣ,
ಹೊಸ ಬಟ್ಟೆಯ ತೊಡೋಣ,
ಸಿಹಿ ತಿನಿಸನ್ನು ತಿನ್ನೋಣ,
ಪಟಾಕಿಯ ಸಿಡಿಸೋಣ,
ಬನ್ನಿ ಸ೦ಭ್ರಮದಿ೦ದ,
ಜಾಗರೂಕತೆಯಿ೦ದ
ಎಲ್ಲರೂ ಒ೦ದಾಗಿ
ದೀಪಾವಳಿಯನ್ನು
ಆಚರಿಸೋಣ....!!
******
#ಜಿಪುಣ_ಪತಿರಾಯ

ದೀಪಾವಳಿ ಎ೦ದರೆ,
ಗ೦ಡ ಪಿಳಿಪಿಳಿ ಕಣ್ ಬಿಡುವ...
ಮಡದಿಗೆ ಸೀರೆ, ಮಕ್ಕಳಿಗೆ ಬಟ್ಟೆ
ತರಬೇಕಲ್ಲಾ.. ಎ೦ದು ಚಿ೦ತಿಸುವ...
ಸಿಹಿ ತಿ೦ಡಿಯೊ೦ದನ್ನೇ ತ೦ದು
ಎಲ್ಲಾ ಮುಗಿಸುವ...
ಪಟಾಕಿ ಸುಡಲು ಪಕ್ಕದ ಮನೆಗೆ ಕಳಿಸುವ...!!
******

#ಜ್ಞಾನದ_ಹಣತೆ_ಹಚ್ಚೋಣ

ಎಣ್ಣೆ ಹಚ್ಚದೇ ಮೈಗೆ
ಒ೦ದು ವರುಶವಾಯಿತು,
ದೀಪಾವಳಿಯ
ಸುದಿನ ಬ೦ದೇ ಬಿಟ್ಟಿತು,
ಜಿಡ್ಡುಗಟ್ಟಿದ ಮೈಗೆ ಎಣ್ಣೆಸ್ನಾನ,
ಬಡ್ಡುಗಟ್ಟಿದ ಬುದ್ಧಿಯ ಬದಲಾಯಿಸೋಣ,
ಮು೦ದೆ ತಪ್ಪು ಆಗದ೦ತೆ ತಿದ್ದಿ ನಡೆಯೋಣ,
ದೀಪ ಹಚ್ಚೋಣ ಬನ್ನಿ
ಜ್ಞಾನದ ಹಣತೆ ಹಚ್ಚೋಣ,..!!
ಸಿಹಿಯ ಹ೦ಚೋಣ ಬನ್ನಿ
ಪ್ರೀತಿಯ ಸವಿಯ ನೀಡೋಣ...!!
* ** ***
ನಗೆ_ಬಾ೦ಬ್ :

ಮೊಮ್ಮಗ : ಹ್ಯಾಪಿ ದೀವಾಲಿ ಅಜ್ಜಿ.
ಅ೦ತ ತು೦ಬ ಜೋಶ್_ಯಿ೦ದ ವಿಶ್ ಮಾಡಿದ.
ಅಜ್ಜಿ : ಏನು..? ಊರಿಡೀ ದೀಪಹಚ್ಚಿ ಹಬ್ಬ ಆಚರಿಸ್ತಿದಾರೆ, ನೀನೇನು ದೀವಾಳಿ ಆಗೋಗ್ಲಿ ಅ೦ತ ಹೇಳ್ತೀಯ..?
ಮೊಮ್ಮಗ : ಅದಲ್ಲ ಅಜ್ಜಿ " #ದೀಪಾವಳಿಯ ಶುಭಾಶಯಗಳು " ಅ೦ದೆ
ಅಜ್ಜಿ : ಹೌದಾ.. ಕನ್ನಡ ಬರುತ್ತೆ ತಾನೆ. ಅಚ್ಚಕನ್ನಡದಲ್ಲಿ ಎಲ್ಲರಿಗೂ ಹಾರೈಸಲು ನಿ೦ಗೇನ್ ಬ೦ತು ರೋಗ..
ಅ೦ತ ಕಿವಿ ಹಿ೦ಡಿದಳ೦ತೆ..
ಅಜ್ಜಿ ರಾಕೇಟ್, ಮೊಮ್ಮಗನ್ ಟುಸ್ ಪಟಾಕಿ..||

#ಗಾ೦ಚಾಲಿ_ಬಿಡಿ_ಕನ್ನಡ_ಮಾತಾಡಿ ||

ನನ್ನೆಲ್ಲಾ ಮಿತ್ರರಿಗೂ ದೀಪಾವಳಿ ಬೆಳಕಿನ ಹಬ್ಬದ ಶುಭಾಶಯಗಳು.
ಶುಭವಾಗಲಿ. ಶ್ರೀ ಕೃಷ್ಣನು ಸನ್ಮ೦ಗಳವನ್ನು೦ಟು ಮಾಡಲಿ..

>>ಶ್ರೀಮತಿ ಸಿ೦ಧು ಭಾರ್ಗವ್ .ಬೆ೦ಗಳೂರು