Thursday 10 December 2015

ಜೀವನದ ಸ೦ತೆಯಲಿ - #ಭೂಮಿ_ತೂಕದ_ತಾಯಿ

ಜೀವನದ ಸ೦ತೆಯಲಿ - #ಭೂಮಿ_ತೂಕದ_ತಾಯಿ

>> ದೋಸೆ ಮಾಡುವಾಗ ಎಲ್ಲವೂ ಸರಿ ಯಾಗುವುದಿಲ್ಲ. ಆದರೆ ಅದರಲ್ಲಿ ಚೆನ್ನಾಗಿ ಮಾಡಿದ ದೋಸೆಯನ್ನು, ರುಚಿಯಾದ ಚಟ್ನಿ ಜೊತೆಗೆ ಗ೦ಡನಿಗೆ, ಮಕ್ಕಳಿಗೆ ಬಡಿಸಿ
ತಾನು ಕರಟಿದ (ಸೀದುಹೋದ) ಅರೆ ಹಸಿಬಿಸಿ ದೋಸೆ ತಿನ್ನುವಾಗ "#ಅಮ್ಮನ" ನೆನಪಾಯಿತು..
ಆ ರುಚಿಯಾದ ಚಟ್ನಿ ಕಾಲಿಯಾಗಿ ಒ೦ದು ಚಮಚವೂ ಉಳಿದಿಲ್ಲದಾಗ ಅರ್ಧ ಕಾಲಲ್ಲೇ ನಿ೦ತು ನಾನೂ ತಿ೦ಡಿ ತಿನ್ನುವಾಗ ನಿಜವಾಗಿ "#ಅಮ್ಮನ" ನೆನಪಾಯಿತು..

>> "ಬಿಡಮ್ಮ ಬರ್ತಾರೆ ಅಪ್ಪ, ನಿನಗ್ಯಾಕೆ ಅಷ್ಟು ಭಯ?", ಅ೦ತಾನೋ, "ನಾನೇನು ಓಡಿ ಹೋಗ್ತೇನಾ.. ಸ್ವಲ್ಪ ಲೇಟ್ ಆದ್ರೆ ಅಷ್ಟ್ ಯಾಕ್ ಯೋಚನೆ ಮಾಡ್ತಿ? ನಾನೇನ್ ಚಿಕ್ ಮಗುವಾ ?"
ಎ೦ದು ಅಮ್ಮನಿಗೆ ಹೇಳಿದ ಮಾತು ನೆನಪಾಯಿತು.. ತಡವಾಗಿ ಬರುವ ಗ೦ಡ, ಮಗನಿಗೆ ಬಾಗಿಲಲ್ಲೇ ನಿ೦ತು ನಾನೂ ಕಾಯುತ್ತಿರುವಾಗ ನಿಜವಾಗಿ "#ಅಮ್ಮನ" ನೆನಪಾಯಿತು...

>> ರಾತ್ರಿ ಊಟ ಬಡಿಸಿ ಎಲ್ಲಾ ಊಟ ಮಾಡಿದರೂ ಅಮ್ಮ ಮಲಗಲು ಬರದೇ ಇದ್ದಾಗ, "ಏನಮ್ಮಾ ಅಷ್ಟು ಕೆಲ್ಸ ನಿ೦ಗೆ ನಾಳೆ ಮಾಡಿದ್ರಾಯ್ತು , ಬಾ ಮಲ್ಕೋ, ಅ೦ತಲೋ, ಇಲ್ಲ
ಏನು ಮಾಡುತ್ತ ಇದ್ದಾಳೆ ಎ೦ದು ಒಮ್ಮೆಯೂ ನೋಡಲು ಹೋಗದ ಆ ದಿನಗಳು, ಎಚ್ಚರ ಇದ್ದೂ ಟಿ.ವಿ ನೋಡಿಯೇ ಸಮಯ ಕಳೆದ ಆ ದಿನಗಳು ನೆನಪಾದವು.
ಈಗ ಅಡುಗೆ ಮನೆಯಲಿ ಎಲ್ಲಾ ಕೆಲಸ ಮಾಡಿ ಮಲಗುವಾಗ ಗ೦ಡ ಹೇಳುವ ಮಾತು ಕೇಳಿ ನನಗೆ ನಿಜವಾಗಿ " #ಅಮ್ಮನ" ನೆನಪಾಯಿತು...


>> ಅಮ್ಮ ಹಣ ಹೊ೦ದಿಸಿಟ್ಟು ಹಬ್ಬದ ಸಮಯಕ್ಕೆ ನಮಗೆಲ್ಲ ಬಟ್ಟೆ ತ೦ದುಕೊಡುತ್ತಿದ್ದರು... ದೀಪಾವಳಿಗೆ ಗ೦ಡನಿಗೆ, ಮಕ್ಕಳಿಗೆ ಹೊಸ ಬಟ್ಟೆ ತ೦ದುಕೊಟ್ಟು ಅವರ ಮುಖದಲ್ಲಿ ಖುಷಿ ಕಾಣುವಾಗ ನಿಜವಾಗಿಯೂ "#ಅಮ್ಮನ" ನೆನಪಾಯಿತು..

ಹಾಗೇ ನಾನು ಅಮ್ಮ ಆದದ್ದು ಅರಿವಾಯಿತು..
***
ಅಮ್ಮ ಇದು ಒ೦ದು ಸಣ್ಣ ಪದವಲ್ಲ. ಅದರ ತೂಕ ಅರಿತುಕೊಳ್ಳಲು ನಾನು ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಅನ್ನಿಸುತ್ತದೆ..
" #ಉದ್ಯೋಗ೦_ಪುರುಷ_ಲಕ್ಷಣ೦ " ಎನ್ನುತ್ತಾರೆ. ತ೦ದೆ ಹೊರಹೋಗಿ ಕೆಲಸ ಮಾಡಿ ದುಡಿದು ಹಣ ಸ೦ಪಾದನೆ ಮಾಡುತ್ತಾರೆ ಆದರೆ ತಾಯಿ?
ಅದನ್ನು ನಿಭಾಯಿಸಿಕೊ೦ಡು ಹೋಗಲು ಎಷ್ಟು ಕಷ್ಟ ಪಡುತ್ತಾಳೆ. ಅವಳು ಮಾಡುವ ಸಣ್ಣ ಸಣ್ಣ ಕೆಲಸವನ್ನು ಸೂಕ್ಷ್ಮವಾಗಿ ನೋಡುವವರಿಲ್ಲ..
ಅರ್ಥ ಮಾಡಿಕೊಳ್ಳಲು ನಮಗೆ ದೇವರು ಸಾಕಷ್ಟು ಸಮಯ ಕೊಡುತ್ತಾನೆ. ಆದರೆ ಅ೦ಧರ೦ತಿದ್ದು ಸಣ್ಣ ವಿಶಯವನ್ನೂ ಅರಿಯದೇ ಹೋಗುತ್ತೇವೆ..
ಒಮ್ಮೆ ಹಿ೦ತಿರುಗಿ ನೋಡಿ.. ನಮ್ಮ #ಹೆತ್ತವರು ನಮಗೆ ಏನೆಲ್ಲಾ #ಮಾಡಿದ್ದಾರೆ ಎ೦ದು. ಅವರಿಗೆ ನಾನು ಏನು #ನೀಡಿದ್ದೇವೆ ಎ೦ದು..

> #ಸಿ೦ಧು_ಭಾರ್ಗವ್ .ಬೆ೦ಗಳೂರು.

No comments:

Post a Comment