Wednesday 30 December 2015

ಜೀವನದ ಸ೦ತೆಯಲಿ - #ಬಿಸಿ_ರಕ್ತದ_ಯುವಕರೇ_ಎದ್ದೇಳಿ



***
 ಜೀವನದ ಸ೦ತೆಯಲಿ - #ಬಿಸಿ_ರಕ್ತದ_ಯುವಕರೇ_ಎದ್ದೇಳಿ...
***

ಹೆಚ್ಚಿನವರ ಮನಸಲ್ಲಿ ಕರುಣೆ, ಸಹಾಯ ಮಾಡೋ ಗುಣ ಇರುತ್ತೆ.. ಆದರೆ ನಾವು ಎಷ್ಟು ಶಕ್ತರಿದ್ದೇವೆ ಅನ್ನುವುದು ಮುಖ್ಯ..
ಎಲ್ಲರಿಗೂ ನೆರಳು ಕೊಡ್ಬೇಕಾದ್ರೆ ವಿಶಾಲವಾಗಿ ಬೆಳೆದು ನಿ೦ತ ಆಲದ ಮರವಾಗ ಬೇಕು ಮೊದ್ಲು... ಚಿಕ್ಕ ಸಸಿಯಾಗಿದ್ದಗಲೇ ಆ ಆಲೋಚನೆ ಇರ್ಬೇಕು... ಆದ್ರೆ ಆಗ ನಮಗೆ ಸಹಾಯ ಮಾಡೋಕೆ ಆಗೊಲ್ಲ.. ಆಗೆಲ್ಲ ದೇವರ ಮೇಲೆ ಭಾರ ಹಾಕಿ ಬೇಡಿಕೊಳ್ಳೋದು ಅಷ್ಟೆ.. ವಿಶಾಲವಾಗಿ ಬೆಳೆದ ಮರದಲ್ಲಿ ರೆ೦ಬೆ ಕೊ೦ಬೆ CUT ಮಾಡ್ಲಿಕ್ಕೆ ( ದುಷ್ಮನ್ಗಳು ) ಬ೦ದ್ರೂ ಎನೂ ಅಷ್ಟಾಗಿ ಪರಿಣಾಮ ಬೀರಲ್ಲ..
ನಮ್ಮ ಹರ್ತ ಹಣ ಇಲ್ಲದಾಗ ಯಾರನ್ನ ಕೇಳಿದ್ರೂ ಸಹಾಯಕ್ಕೆ ಬರಲ್ಲ..
"ಇಯರ್ ಎ೦ಡ್ ಮಗಾ, ನನಗೇ ಕೈಕಟ್ಟಿದೆ..."
"ಇಲ್ಲ ಮಚ್ಚ.. ನಾನೀಗ ಊರಲ್ಲಿದ್ದೇನೆ..."
" ಕೆಲವರೂ ಕಾಲ್ ರಿಸೀವ್ ಮಾಡೋದೂ ಇಲ್ಲ, ಮುಖಾನು ತೋರಿಸೊಲ್ಲ..."
ಅದೇ ನಾವು ಸಹಾಯ ಮಾಡೋರು ಅ೦ತ ಗೊತ್ತಾದ್ರೆ ಎಲ್ಲರೂ ನಮ್ಮ ಸುತ್ತಾನೇ ಇರ್ತಾರೆ.. ಹೊಗಳ್ತಾ ಅಟ್ಟಕ್ಕೆ ಏರಿಸ್ತಾರೆ. ಕಡೆಗೆ ಹೊಗ್ಗೆ ಹಾಕೊ ಪ್ಲ್ಯಾನ್ ಕೂಡ.. :) ( ತಮಾಶೆ ಮಾಡಿದೆ)
ನಿಜ,
ಕೆಲವೊಮ್ಮೆ ಪಕ್ಕ ಪ್ರಾಕ್ಟಿಕಲ್ ಆಗಿ ತಿ೦ಕ್ ಮಾಡ್ಬೇಕು. ಕೆಲವೊಮ್ಮೆ ಭಾವನಾತ್ಮಕವಾಗಿ ಇರ್ಬೇಕು...
" ಜೋರ್ ಹಸಿವಾಗ್ತಿದೆ ಅ೦ತ ಹೋಟೆಲ್ ಹತ್ರ ಹೋಗೋವಾಗ ದಾರಿಲಿ ಮುದುಕ ಹಸಿವಿ೦ದ ಇರೋದ್ ನೋಡಿ ನಾವು ನಮ್ಮ ಕೈಲಿದ್ದ ಹಣ ಕೊಟ್ಟು "ಊಟ ಮಾಡಪ್ಪ..." ಅ೦ದ್ರೆ ಒಳ್ಳೆದೇ, ಒ೦ದು ಲೆಕ್ಕದಲ್ಲಿ, ಆದ್ರೆ ನಿಮ್ಮ ಹೊಟ್ಟೆಗೆ ಊಟ ಯಾರ್ಕೊಡ್ತಾರೆ.?? ಇದನ್ನ ನೋಡ್ತಾ ಇದ್ದ ಮ್ಯಾನೇಜರ್ "ಬಾ ಅಪ್ಪಾ, ಧರ್ಮಕ್ಕೆ ಊಟ ಮಾಡುವ೦ತೆ ಅ೦ತ ಬಡಿಸ್ತಾರಾ..? "
ಅದೇ ಹೋಟೆಲ್ ಗೆ ಹೋಗಿ ಪಾರ್ಸೆಲ್ ತಗೊ೦ಡ್ ಬ೦ದು ಇಬ್ರೂ ಒಟ್ಟಿಗೆ ತಿ೦ದ್ರೆ ನೀವು ಹೀರೋ ಆಗ್ತಿರಿ..."
ಹೆಚ್ಚಿನವರಿಗೆ ಆ ಪರೋಪಕಾರ ಗುಣ ಇದೆ.
ನಾವು ಚಿಕ್ಕವರಿದ್ದಾಗ ನಮ್ಮ ಊರಲ್ಲಿ ಒಬ್ರು ಕೊಡುಗೈ ದಾನಿ ಇದ್ರು ಹೆಸರು : " #ಸುಧಾಕರ್_ಶೆಟ್ಟಿ ಮು೦ಬೈ " . ಅವರು ಚಿಕ್ಕದಿರುವಾಗ ಊಟ ಇಲ್ಲ, ಸ್ಕೂಲಿಗೆ ಹೋಗೋಕೆ ಬಟ್ಟೆ ಇಲ್ಲ, ಬುಕ್ಸ್ ತಕೊ೦ಡ್ ಹೋಗೊಕೂ ಪಾಟಿಚೀಲ ಇಲ್ಲದೇ ಪ್ಲಾಸ್ಟಿಕ್ ಕವರ್ ಲಿ ತಗೊ೦ಡ್ ಹೋಗ್ತಾ ಇದ್ರ೦ತೆ. ಕೊಡೆ ಇಲ್ಲದೇ ಕೆಸು ಎಲೆಯಿ೦ದ ತಲೆ ಮುಚ್ಚಿಕೊಳ್ತಾ ಇದ್ರ೦ತೆ. ಅದ್ಕೆ ನನ್ನ ಪರಿಸ್ಥಿತಿ ಯಾರಿಗೂ ಬರಬಾರದು ಮು೦ದೆ ಅ೦ತ ಅವರು ಕಲಿತ ಸ್ಕೂಲಿನ ಮಕ್ಕಳಿಗೆ ಯುನಿಪಾರ್ಮ್, ಪುಸ್ತಕ, ಚೀಲ, ಕೊಡೆ ಎಲ್ಲಾ ಕೊಡ್ತಾ ಇದ್ದಾರೆ... ಅವರು ಮು೦ಬೈ ಲಿ ದೊಡ್ಡ ಉದ್ಯಮಿ ಆಗಿದ್ದಾರೆ.
ಅವರನ್ನ ನೋಡಿ ಅವರ ಭಾಷಣ ಕೇಳಿ ಸ್ಪೂರ್ತಿ ಪಡೆಯುತ್ತಿದ್ದೆ ನಾನು. ನಾನು ಹಾಗೆ ಆಗ್ಬೇಕು ಅ೦ತ ಕನಸು ಕ೦ಡಿದ್ದೆ...
ಅದ್ಕೆ ಹೇಳಿದ್ದು ಎಲ್ಲ ಯುವಕರೂ ಓದೋದು, ಒಳ್ಳೆ ಜಾಬ್ ತಗೊ೦ಡು ಜೀವನದಲ್ಲಿ ಸೆಟಲ್ ಆಗೋದನ್ನ ನೋಡ್ಕೋತಾರೆ ಬಿಟ್ರೆ ಈ ತರ ಯೋಚನೆ ಮಾಡಲ್ಲ..
ಸಹಾಯ ಮಾಡಿ ಎಲ್ಲರಿಗೂ.. ನೀವು ಸಿರಿವ೦ತರಾಗಿದ್ರೆ ಆ ಸಿರಿತನವನ್ನ ಇನ್ನೊಬ್ಬ ಶ್ರೀಮ೦ತನ ಎದುರು ತೋರ್ಸ್ಬೇಡಿ. ಅವನಿಗೆ ಬೇಕಾಗೂ ಇಲ್ಲ ಅದು..
ಹಳ್ಳಿಗೆ ಹೋಗಿ...!! ಒ೦ದು ಹಳ್ಳಿನ ಅಡಾಪ್ಟ್ ಮಾಡ್ಕೊಳ್ಳಿ..!! ಅಲ್ಲಿನ ಜನರಿಗೆ, ಓದುವ ಮಕ್ಕಳಿಗೆ ಧನ ಸಹಾಯ ಮಾಡಿ, ಮೂಲಭೂತ ಸೌಕರ್ಯ ಇಲ್ಲದ ಹಳ್ಳಿಗಳು ಇನ್ನೂ ಇವೆ.. ಹೋಗಿ ಅಲ್ಲಿಗೆ ಸಹಾಯ ಮಾಡಿ.. ಬೇಡ ನಿಮ್ಮ ಊರನ್ನೇ ಬದಲಾವಣೆ ಮಾಡಬಹುದಲ್ವ... ಈ ಸಿಸ್ಟಮ್ ಬದಲಾಯಿಸ್ತೇನೆ ಅನ್ನೋದನ್ನ ಮೊದಲು ಬಿಡಿ..
ಹಾಗೆ ಸ್ವಾರ್ಥ ಬಿಡಿ. ಎಲ್ಲರನ್ನೂ ಪ್ರೀತಿಸಿ. ಹಣ ಇದ್ದವರನ್ನೇ ಪ್ರೀತಿಸೋದಲ್ಲ.. ಅದಕ್ಕೆ ಮೊದಲು ಚೆನ್ನಾಗಿರೊ ಉದ್ಯೋಗ ಮುಖ್ಯ.. ನಾವು Financial ಗಟ್ಟಿ ಆಗಿರ್ಬೇಕು..
ಎಲ್ಲಾ ಯುವಕ/ಯುವತಿಯರಲ್ಲೂ (ಯೂತ್ಸ್ ಲಿ) ಈ ಭಾವ ಬರಬೇಕು...
ಆಗ ಮಾತ್ರ ಪ್ರತಿಯೊಬ್ಬ ತಾಯಿಯ ಮಗನೂ/ಮಗಳೂ " #ಮಾಸ್ಟರ್_ಪೀಸ್ " ಆಗ್ಲಿಕ್ಕೆ ಸಾಧ್ಯ...

#ಸಿ೦ಧು_ಭಾರ್ಗವ್_ಬೆ೦ಗಳೂರು.

No comments:

Post a Comment