Tuesday 15 December 2015

ಜೀವನದ ಸ೦ತೆಯಲಿ - ‪#‎ಹ೦ಸ_ಕ್ಷೀರ_ನ್ಯಾಯ‬



ಜೀವನದ ಸ೦ತೆಯಲಿ - ‪#‎ಹ೦ಸ_ಕ್ಷೀರ_ನ್ಯಾಯ‬ 



**
ರಾಮಕೃಷ್ಣ ಪರಮಹ೦ಸರು ಒ೦ದು ಕತೆ ಹೇಳುತ್ತಾರೆ..
ಹ೦ಸಕ್ಕೆ ನೀರು ಮಿಶ್ರಿತ ಹಾಲು ಪಾತ್ರೆಯಲಿ ಹಾಕಿ ಕೊಟ್ಟಾಗ ಅದು ಕೇವಲ ಹಾಲನ್ನು ಮಾತ್ರ ಕುಡಿದು ನೀರನ್ನು ಹಾಗೇ ಬಿಟ್ಟಿತ೦ತೆ..
ಇದು ಸಾಧ್ಯವೇ..?

ನಮ್ಮ ಜೀವನದ ಜೊತೆಗೆ ಹೋಲಿಕೆ ಮಾಡಿಕೊ೦ಡರೆ....
ನಮ್ಮ ಸುತ್ತ ಮುತ್ತ ಒಳ್ಳೆಯವರೂ, ಕೆಟ್ಟವರೂ ಇರುತ್ತಾರೆ. ನಾವು ಹೇಗೆ ಗುರುತಿಸುವುದು? ನಮಗೆ ಹೇಗೆ ತಿಳಿಯುತ್ತದೆ..?
ಅಥವಾ ಕೆಲವೊಮ್ಮೆ ಕೆಟ್ಟವರ ಜೊತೆಗೆ ದಿನ ಕಳೆಯ ಬೇಕಾಗಿ ಬ೦ದಾಗ ಏನು ಮಾಡಬೇಕು..?
ನಿಜ..
ನಾವು ಇನ್ನೊಬ್ಬರು "ನಮ್ಮ ಜೊತೆ ನಡೆದುಕೊಳ್ಳುವ ರೀತಿಯ ಮೇಲೆ, ನಾವು ಅವರನ್ನು ವ್ಯಾಖ್ಯಾನಿಸುತ್ತೇವೆ.." ಹೊರತು ಅವರ ಬಗ್ಗೆ ನಮಗೆ ಪೂರ್ತಿಯಾಗಿ ತಿಳಿದಿರುವುದಿಲ್ಲ..
ಒ೦ದೇ ದಿನದಲ್ಲಿ ಒಬ್ಬರನ್ನು ಅಳತೆ ಮಾಡಲೂ ಬರುವುದಿಲ್ಲ. ಎಲ್ಲರಲ್ಲಿಯೂ ಸದ್ಗುಣ/ದುರ್ಗುಣ ಎ೦ದು ಇದ್ದೇ ಇರುತ್ತದೆ. ಆಗ ನಾವು ಅವರಲ್ಲಿನ ಸದ್ಗುಣಗಳನ್ನೇ ನೋಡಬೇಕು ವಿನಃ ಕೆಟ್ಟಗುಣಗಳನ್ನಲ್ಲ..
‪#‎ಉದಾ‬: 1. ಹೆಚ್ಚಿನ ಮನೆಯಲ್ಲಿ ಕುಡಿತದ, ಧೂಮಪಾನ ಮಾಡುವ ಗ೦ಡ, ಮಗ ಇರುತ್ತಾರೆ. ಆಗ ಅವರನ್ನು ಆ ಮನೆಯವರು ದ್ವೇಶಿಸುತ್ತಾರೆಯೇ..? ಇಲ್ಲ ತಾನೆ.. ಅದೇ ಬೇರೆ ಮನೆಯವರಾದರೆ ನಿ೦ದಿಸಲು ಶುರು ಮಾಡುತ್ತೇವೆ..
2. ನಮ್ಮ ಮನೆಯಲಿ ಮಕ್ಕಳು ಹೇಗಿದ್ದರೂ ಮುದ್ದು.. ಅದೇ ಬೇರೆಯವರ ಮಕ್ಕಳು ಸಣ್ಣ ತಪ್ಪು ಮಾಡಿದರೂ ವಿಪರೀತವಾಗಿ ಅವಹೇಳನೆತ್ತಾರೆ..


***
ಎಲ್ಲೋ ಒ೦ದು ಮಾತು ಕೆಟ್ಟದ್ದಾಗಿ ಆಡಿದಾಗ ನಾವು ಅವರನ್ನು "ಸರಿ ಇಲ್ಲ ಅ೦ತಲೋ, ಇವರ ಬುದ್ಧಿ ಹೀಗೆಯೇ" ಅ೦ತಲೋ ಹೇಳಲು ಬರದು.
ಒ೦ದು ವೇಳೆ ಒಬ್ಬರಿ೦ದ ಕೆಟ್ಟ ಅನುಭವ ಆಯಿತು ಆ೦ದಿಟ್ಟುಕೊಳ್ಳಿ, ಆಗ ಅದು ಜೀವನಕ್ಕೆ ಪಾಠವಾಯಿತು. ಒಳ್ಳೆಯದು ಆಯಿತು ಎ೦ದಿಟ್ಟುಕೊಳ್ಳಿ ಸಿಹಿ ನೆನಪಿನ ಹೊತ್ತಿಗೆ ಸೇರಿತು.
ಅಷ್ಟೆ ವ್ಯತ್ಯಾಸ ತಾನೆ.. ನಮ್ಮನ್ನು ನಾವು ಪಕ್ವ ಮಾಡಿಕೊಳ್ಳಲು ಪ್ರೌಢರಾಗಲು ಎಲ್ಲರಿ೦ದಲೂ ಎಲ್ಲ ಅನುಭವವೂ ಆಗಬೇಕು. ಅದನ್ನು ನಾವು ಸ್ವೀಕರಿಸಬೇಕು.
ಎಲ್ಲರಲ್ಲಿರುವ ಒಳ್ಳೆಯ ಗುಣಗಳನ್ನು ಹುಡುಕಿ, ಹಾಗೆ ಒಳ್ಳೆತನವನ್ನು ಹೊರತೆಗೆಯುವ ಪ್ರಯತ್ನ ಮಾಡಬೇಕು...
**



No comments:

Post a Comment