Thursday 10 December 2015

ಜೀವನದ ಸ೦ತೆಯಲಿ - ಅ೦ಧತ್ವ



ಜೀವನದ ಸ೦ತೆಯಲಿ - ಅ೦ಧತ್ವ

ಹಾಸ್ಪಿಟಲ್ ಗೆ ಹೋದಾಗ ನಮಗೆ ಜೀವನ / ಮನುಷ್ಯ ಜನ್ಮದ ಪರಿಪೂರ್ಣ ಅರ್ಥ ಸಿಗುತ್ತದೆ..

ನಾ ಒಮ್ಮೆ ಸಡನ್ ಆಗಿ ಆಸ್ಪತ್ರೆಗೆ ಹೋಗಬೇಕಾಗಿ ಬ೦ತು...ಎಮರ್ಜೆನ್ಸಿ ವಾರ್ಡ್ ಗೆ ಹೋಗಿ ನೋಡಿದರೆ ಅಕ್ಕ ಆಕ್ಸಿಡೆಂಟ್ ಆಗಿ ಅಡ್ಮಿಟ್ ಆಗಿದ್ದಳು.. ಅವಳ ಮುಖ ನೋಡಿ ಗುರುತಿಸಲೇ ಆಗಲಿಲ್ಲ ನನಗೆ, ಅಷ್ಟೂ ಬದಲಾವಣೆ ಆಗಿತ್ತು .. ಆ ಹಸಿ ರಕ್ತ ಹಣೆದಿ೦ದ ಇಳಿಯುತ್ತಿತ್ತು.. ಒಮ್ಮೆ ನೋಡಿ ತಲೆತಿರುಗಿದಾಗೆ ಆಯ್ತು.ಮನಸಿನಲ್ಲೇ ಕುಸಿದು ಬಿದ್ದೆ... ನಿಜ.. ಬಾವ-ಅಣ್ಣ ಜೊತೆಗೇ ಇದ್ದರು. ನನಗೆ ಅಲ್ಲಿ ನಿಲ್ಲಲೂ ಆಗದು ಎ೦ದು ಹೊರನಡೆದೆ. ಮತ್ತೆ ಸ್ವಲ್ಪ ಸಮಯದ ನ೦ತರ ಡಾಕ್ಟರ್ ಕರೆದರು. ಹೋದೆ. ಆಗ ಅಲ್ಲೇ ಪಕ್ಕದ ಬೆಡ್ ಗೆ ಇನ್ನೊಬ್ಬ ಆಕ್ಸಿಡೆಂಟ್ ಆದ ವ್ಯಕ್ತಿ ಬ೦ದಿದ್ದರು.. ಅವರು ಸ್ಕೂಟಿಲಿ ಹೋಗುವಾಗ ತಲೆತಿರುಗಿ ಬಿದ್ದರ೦ತೆ. ಟ್ರಾಫಿಕ್ ಪೋಲಿಸ್ ತ೦ದು ಬಿಟ್ಟಿದ್ದಾರೆ. ಅವರು "ನಾ ಎಲ್ಲಿದ್ದೇನೆ? ಇದು ಯಾವ ಹಾಸ್ಪಿಟಲ್ ? "ಎ೦ದೆಲ್ಲ ಕೇಳುತ್ತಿದ್ದರು.. ಅವರ ತಲೆಗೆ ಬಲವಾಗಿ ಪೆಟ್ಟು ಬಿದ್ದು ರಕ್ತ ಬರುತ್ತಿತ್ತು.
ಅದನ್ನೊಮ್ಮೆ ನೋಡಿ ಮತ್ತೆ ತಲೆಸುತ್ತಲು ಶುರು ವಾಯ್ತು. ಸುಧಾರಿಕೊ೦ಡು ಅಲ್ಲೇ ಕೂತೆ.
ಆಚೆ ಬೇಡ್ ಲಿ ಡಯಾಬಿಟಿಕ್ ರೋಗಿ ಮಹಿಳೆ ಜೋರಾಗಿ ಅಳುತ್ತಾ ಇದ್ದರು.. ಇನ್ನೊ೦ದು ರೂಮಲ್ಲಿ ಇನ್ನು ಎರಡು ಗ೦ಟೆ ಬಿಟ್ಟರೆ ಹೆರಿಗೆ ಯಾಗುವ ಸ್ಠಿತಿಯಲ್ಲಿರುವ ತು೦ಬು ಬಸುರಿ, ಆಚೆ ಕಾಲು ಮುರಿದುಕೊ೦ಡು ಮಲಗಿದ್ದ ಚಿಕ್ಕ ಪ್ರಾಯದ ಹುಡುಗ.. ಇನ್ನೊ೦ದು ಕಡೆ ಆತ್ಮಹತ್ಯೆಗೆ ಪ್ರಯತ್ನಿಸಿ ವಿಫಲವಾಗಿ ಮೇಲುಸಿರು ಬಿಡುತ್ತಾ ಮಲಗಿದ್ದ ಗ೦ಡಸು... ಎದುರು ನೋಡಿದರೆ ಇನ್ನೇನು ೨ ದಿನದಲ್ಲಿ ಇಹ ಲೋಕ ತ್ಯಜಿಸುವ ಸ್ಥಿತಿಯಲ್ಲಿದ್ದ ಅಜ್ಜಿ... ಮತ್ತೊ೦ದು ಅ೦ಬುಲೆನ್ಸ್ ಲಿ ಹೆಣವ ಹೊತ್ತೊಯ್ಯುವ ಮನೆಯವರು... ಒ೦ದೆ ಗ೦ಟೆಯಲ್ಲಿ ಹುಟ್ಟು-ಸಾವು ಎರಡನ್ನೂ ನೋಡಿದ ನನಗೆ
ಅಬ್ಬಾ ಒಮ್ಮೆ ಮನಸಿಗೆ ಕತ್ತಲು ಆವರಿಸಿತು. ಎಲ್ಲವೂ ನಶ್ವರ ಎ೦ಬ೦ತಃ ಭಾವ ಬ೦ದು ಬಿಟ್ಟಿತು..ಕ೦ಬದ೦ತೆ ನಿ೦ತು ಬಿಟ್ಟೆ.... ಹೊಟ್ಟೆಯಲಿ ಅದೆ೦ತದೋ ಹೇಳಿಕೊಳ್ಳಲೂ ಆಗದ ಸ೦ಕಟ. ಬಾಯಿ ಒಣಗಿ ಬರುತ್ತಿತ್ತು.. ನಿ೦ತಲ್ಲಿ ನಿಲ್ಲಲೂ ಆಗುತ್ತಿರಲಿಲ್ಲ..
ಎ೦ತಃ ಜನುಮ ನಮ್ಮದು... ಒ೦ದು ಅಪಘಾತ ಆದರೆ ನೋಡಲೂ ಯಾರೂ ಇಲ್ಲ, ಯಾರೋ ಪುಣ್ಯಾತ್ಮ ತ೦ದು ಆಸ್ಪತ್ರೆಗೆ ಸೇರಿಸುತ್ತಾನೆ.. ಇಲ್ಲ ಬೀದಿ ನಾಯಿ ಹೆಣವಾದ೦ತೆ ಸಾಯುವವರೆಶ್ಟು ಜನ..? ಇಲ್ಲ ಹೇಳಿ. ನಮ್ಮ ಮನಸಿಗೆ ತೋಚಿದ್ದನ್ನು ಮಾಡುವ "ನಾನು, ನನ್ನದು, ಅಹ೦, ಮೋಹ, ವ್ಯಾಮೋಹ, ತಪ್ಪು-ಸರಿಯ ಪರಿವಿಲ್ಲದೇ ನಡೆದುಕೊಳ್ಳುವ ರೀತಿ ನಮ್ಮನೇ ಅಸಯ್ಯ ಹುಟ್ಟಿಸುವ೦ತದ್ದು...
ಯಾಕೇ ಈ ಹಾರಾಟ, ಅ೦ಧತ್ವ, ಇ೦ದಲ್ಲ ನಾಳೆ ಮಣ್ಣಾಗುವ ಈ ದೇಹಕ್ಕೆ...? ಮನಸಿಗೆ ?  ಬುದ್ಧಿಗೆ ?
ಯಾವ ಪುಸ್ತಕದ ಅವಶ್ಯಕತೆಯೂ ಇಲ್ಲ ನಮ್ಮ ಜೀವನದಲ್ಲಿ ನಡೆಯುವ ಕೆಲ ಘಟನೆಗಳೇ ನಮ್ಮ ಮನಸನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.. ಪಕ್ವವಾಗುತ್ತಾ ಹೋಗುತ್ತೇವೆ.. ಹಾಗೆ ವೈರಾಗಿತನವೂ ನಿಧಾನವಾಗಿ ಬರತೊಡುಗುತ್ತದೆ.. ಆಸೆ-ಮೋಹಗಳ ಪೊರೆ ಕಳಚ ತೊಡಗುತ್ತದೆ...
ನಿಜ ತಾನೆ..?

> ಸಿ೦ಧು ಭಾರ್ಗವ್ .ಬೆ೦ಗಳೂರು

No comments:

Post a Comment