Friday 27 November 2015

ಜೀವನದ ಸ೦ತೆಯಲಿ - ಹೆಣ್ಣಿನ ಆತ್ಮ ರಕ್ಷಣೆಯೋ ಇಲ್ಲಾ ಮಾನ ರಕ್ಷಣೆಯೋ



ಜೀವನದ ಸ೦ತೆಯಲಿ - ಹೆಣ್ಣಿನ ಆತ್ಮ ರಕ್ಷಣೆಯೋ ಇಲ್ಲಾ ಮಾನ ರಕ್ಷಣೆಯೋ


ಅದೊ೦ದು ಮು೦ಜಾನೆ ನೇಸರನ ಕಿರಣಗಳು ಮೊಗ್ಗಿನ ಮೇಲೆ ಬೀಳುತ್ತಿದ್ದ೦ತೆ ಅರಳಿ ನಿಲ್ಲಲು ಕಾಯುತ್ತಿದ್ದ ಪುಷ್ಪ.. ಹಾಗೆ ತ೦ಪಾಗಿ ಬೀಸುತ್ತಿದ್ದ ಗಾಳಿಯ ಜೊತೆ ಆ ಹೂವು ನಲಿಯುತಾ ಆ ಕಡೆಗೆ ಈ ಕಡೆಗೆ 
ಬಾಗುತ್ತಿತ್ತು.ಅದೆಲ್ಲಿ೦ದಲೋ ಬ೦ದ ದು೦ಬಿ ಹೂವಿನ ಮಕರ೦ದವನ್ನು ಹೀರಲು ಶುರುಮಾಡಿತು. ಹೂವಿಗೆ ಇಷ್ಟ ಇಲ್ಲದಿದ್ದರೂ, ಬೇಡ ಎ೦ದು ಹೇಳಿದರೂ ಅದು ಬಿಡಲೇ ಇಲ್ಲ. ಜೊತೆಗೇ ಇದ್ದ ಗಾಳಿಯೂ 
ಜೋರಾಗಿ ಬೀಸತೊಡಗಿತು ಆದರೂ ದು೦ಬಿ ಬಿಡದೆ ಮಕರ೦ದವನ್ನು ಹೀರಿ ಹಾರಿ ಹೋಯಿತು. ಹೂವು ದುಃಖ ದಿ೦ದ ಗಾಳಿಗೆ ಹೇಳಿತು," ನಾನು ನಿನ್ನ ಎಷ್ಟು ಪ್ರೀತಿಸುತ್ತಿದ್ದೆ. ನ೦ಬಿದ್ದೆ. ಆದರೂ ನಿನ್ನೆದುರೇ
 ಎನೆಲ್ಲಾ ಆಗಿ ಹೋಯಿತು. ನಿನಗೆ ಏನು ಮಾಡಲು ಆಗಲಿಲ್ಲ"..
ಗಾಳಿಗೆ ಈ ಮಾತ ಕೇಳಿ ದುಃಖ, ಬೇಸರ ಎಲ್ಲವೂ ಜೊತೆಗೂಡಿ ಆ ದು೦ಬಿ ಹಾರುವ ಕಡೆಗೆ ಹಿ೦ಬಾಲಿಸಿಕೊ೦ಡು ಹೋಯಿತು, ಜೋರಾಗಿ ಬಿರುಗಾಳಿಯಾಗಿ ಬೀಸಲು ಪ್ರಾರ೦ಭಿಸಿತು. 
ಅದರಿ೦ದ ಹಾರಲಾಗದ ದು೦ಬಿ ಒ೦ದು ಜೇಡನ ಬಲೆಗೆ ಬಿದ್ದು ಒದ್ದಾಡ ತೊಡಗಿತು. ಹಾಗೆ ಬಿದ್ದ ದು೦ಬಿಯನ್ನು ಅಲ್ಲೇ ಮರದಲ್ಲಿದ್ದ ಪಕ್ಷಿ ನೋಡಿ ತನ್ನ ಕೊಕ್ಕಿನಲ್ಲಿ ಕಚ್ಚಿಕೊ೦ಡು ಭಕ್ಷಿಸಿತು..
ಗಾಳಿ ಪುನಃ ಬ೦ದು ಹೂವಿನಲ್ಲಿ ನಡೆದ ಘಟನೆಯನ್ನು ತಿಳಿಸಿತು. ಆಗಲೇ ನೇಸರ ಮುಳುಗುವ ಸಮಯ ಆದ್ದರಿ೦ದ ಕುಶಿಯಿ೦ದಲೇ ಹೂವಿನ ಆತ್ಮ ನೆಮ್ಮದಿಯಿ೦ದಲೇ ತನ್ನ ದಿನವನ್ನು ಮುಗಿಸಿತು...


>> ಶ್ರೀಮತಿ ಸಿ೦ಧು ಭಾರ್ಗವ್ .

No comments:

Post a Comment