Monday 20 May 2019

Kavana Naya_Naajooku ಕವನ ನಯ‌ ನಾಜೂಕು




****

ಕವಿತೆ: ನಯ ನಾಜೂಕು
*** **** ****** *****
ಹೂವಲ್ಲಿ ಗಂಧವು ಇಹುದು
ಮಾತಲ್ಲಿ ವಂಚನೆ ಇಹುದು
ನಯವಾಗಿದೆ ಎಂದು ನಂಬದಿರು
ನಂಬಿ ಮೋಸ ಹೋಗದಿರು!

ಹಸಿದಿದ್ದ ಜಿಂಕೆ ಮರಿಗೆ
ಹಸಿಹುಲ್ಲು ತಿನ್ನುವ ಆಸೆ
ವ್ಯಾಘ್ರನಿಗೇ ಹಸಿದ ಉದರ
ಎರಗಿ ತಿಂದಿತು ಜಿಂಕೆಯನೇ
ಹಸಿಬಿಸಿ ರಕುತದಲಿ ದಿನವು
ಕಳೆದು ಹೋಯಿತು ಕ್ಷಣವು
     ನಯವಾಗಿದೆ ಎಂದು ನಂಬದಿರು
     ನಂಬಿ ಮೋಸ ಹೋಗದಿರು!

ಮುಂಜಾನೆ ಇಬ್ಬನಿ ಮೇಲೆ
ಹಸಿರಲೆಯ ಮಿಂಚುವ ಲೀಲೆ
ರವಿತೇಜ ಬರುವನು ನೋಡು
ಇಬ್ಬನಿಯು ಕರಗಿತು ನೋಡು
ಹಸಿರ ಹೃದಯಕೆ ಆದ ಘಾಸಿಯ
ಕೇಳದೇ ಹೋದರೇ ಯಾರು
      ನಯವಾಗಿದೆ ಎಂದು ನಂಬದಿರು
      ನಂಬಿ ಮೋಸ ಹೋಗದಿರು!

ಹರಿಯುವ ನದಿಯಲಿ ಕಲರವ
ಈಜುವ ಮೀನಿಗೆ ಸಂಭ್ರಮ
ಬೇಸಿಗೆ ಕಾಲದ ಬೇಗೆಗೆ
ಆವಿಯಾಗಿದೆ ಜೀವಜಲ
ನೀರನೇ ನಂಬಿದ ಮತ್ಯಕೆ
ಬದುಕಿ ಉಳಿಯುವ ಬಗೆಯೇನು?
      ನಯವಾಗಿದೆ ಎಂದು ನಂಬದಿರು
      ನಂಬಿ ಮೋಸ ಹೋಗದಿರು!



- ಸಿಂಧು ಭಾರ್ಗವ್.

No comments:

Post a Comment