Monday 20 May 2019

ಹೂವಿಗೊಂದು ಪತ್ರ

Source pick_googleimages

Source picg_oogleimages

ಆತ್ಮೀಯ ಹೂವೇ,
     ನೀನೆಂದರೆ ನನಗೆ #ಸ್ಪೂರ್ತಿ. ಮುಂಜಾನೆ ಅರಳಿ ಸಂಜೆ ಬೀಳುವ ನೀನು, ಗಾಳಿ, ಮಳೆ, ಉರಿ ಬಿಸಿಲಿಗೂ ಬಾಡದೇ ನಗುತ ನಿಂತಿರುವುದು ನನಗಂತಲ್ಲ ಎಲ್ಲರಿಗೂ ಸ್ಪೂರ್ತಿಯ ಸೆಲೆಯೇ ತಾನೆ. ಬುಡದಲಿ ನೀರು ಹಾಕಿ ಆರೈಕೆ ಮಾಡಿದರೆ ಸಾಕು ನೀನು ರಾಶಿ ರಾಶಿ ಹೂವ ನೀಡುವುದರ ಮೂಲಕ ನಿನ್ನ #ಪ್ರೀತಿ_ವಿಶ್ವಾಸವ ತೋರಿಸುವೆ. ಬೇಸಿಗೆ ಕಾಲದಲಿ ಉಸಿರ ಬಿಗಿ ಹಿಡಿದು ಕಾದು ಮಳೆಗಾಲದಲ್ಲಿ ಸಾಧ್ಯವಾಗುವಷ್ಟು ನೀರು ಕುಡಿದು ಬೆಳೆದು ಮತ್ತೆ ಉಸಿರಾಡುವೆ. ಏನೇ ಕಷ್ಟ ಬಂದರೂ ನಿನ್ನ #ಪ್ರಯತ್ನವ ನೀನು ಬಿಡುವುದಿಲ್ಲ.
     ಸಂಜೆಯೇ ಮೊಗ್ಗು ಅರಳಿಸಿಕೊಂಡು ಘಮವ ಹರಡಲು ಶುರು ಮಾಡುವೆ. ಎಲ್ಲರನೂ ತನ್ನತ್ತ ಸೆಳೆದುಕೊಳ್ಳುವೆ. ವಿಕಾರ ಮನಸ್ಸಿನ ಜನರಿಂದಾಗಿ ರಕ್ಷಿಸಿಕ್ಕೊಳಲು ಮುಳ್ಳುಗಳಿಂದ ರಕ್ಷಣೆ ಪಡೆಯುವೆ.
    ನಿಜ ನಿನ್ನನ್ನು ಹೆಣ್ಣಿಗೆ ಹೋಲಿಸುವರು. ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕು ಎಂದು ನೀನು ಸಾರಿಸಾರಿ ಹೇಳುತಿರುವೆ ನೋಡು. ಹೂವೇ, ಎಲ್ಲರಿಗೂ ಮೆಚ್ಚುಗೆಯಾಗುವ ನೀನು ಪ್ರಕೃತಿಯ ಮಡಿಲಿನಲಿ ಸದಾ ಸುಖಿಯಾಗಿರು.

ಇಂತೀ ಪ್ರೀತಿಯ,
ಸಿಂಧು

No comments:

Post a Comment