Tuesday, 21 May 2019

School reopened ಮಕ್ಕಳ ಹಾಡು ಶಾಲೆಗೆ ಹೊರಟೆನು

Googleimage
*****
ಮಕ್ಕಳ ಹಾಡು: ಶಾಲೆಗೆ ಹೊರಟೆನು


ಶಾಲೆಗೆ ಹೊರಟೆನು ಅಮ್ಮ ನಾನು ಶಾಲೆಗೆ ಹೊರಟೆನು
ಗೆಳೆಯರ ನೋಡದೇ ತಿಂಗಳೇ ಕಳೆದಿದೆ
ಹರಟೆ ಹೊಡೆಯದೇ ಬೇಸರವಾಗಿದೆ
ಯುನಿಫಾರ್ಮ್ ಧರಿಸುವ ಆಸೆಯಾಗಿದೆ
ಪಾಠೀಚೀಲವು ನನ್ನನೇ ಕರೆದಿದೆ
ಶಾಲೆಗೆ ಹೊರಟೆನು ಅಮ್ಮ ನಾನು ಶಾಲೆಗೆ ಹೊರಟೆನು!


ಕೂಡಿಸಿ ಕಳೆಯಲು ಗಣಿತದ ತರಗತಿ
ಹಾಡಿ ಕುಣಿಯಲು ಕನ್ನಡವು
ಸೋಜಿಗ ಮೂಡಿಸೊ ವಿಜ್ಞಾನದ ತರಗತಿ
ಇತಿಹಾಸವ ಅರಿಯಲು ಸಾಮಾಜವು
ಎಲ್ಲವನೂ ಕಲಿಯುವ ಆತುರವಮ್ಮ ಕ್ಲಾಸಿಗೆ ಮೊದಲು ಬರುವೆನಮ್ಮ!
ಶಾಲೆಗೆ ಹೊರಟೆನು ಅಮ್ಮ ನಾನು ಶಾಲೆಗೆ ಹೊರಟೆನು!


ಗದರಿಸಿರಿ ಕಲಿಸುವ ಶಿಕ್ಷಕರು ನಮ್ಮನು ತಿದ್ದುವ ಶಿಲ್ಪಿಗಳು
ಮಮತೆಯ ತೋರಿಸಿ ಓದಿಸುತ ತಾಯಿಯ ಸ್ಥಾನವ ತುಂಬುವರು
ಬೇಧಭಾವವಿಲ್ಲವಮ್ಮ ನಾವೆಲ್ಲರೂ ಒಂದೇ ಎಂದೆಂದೂ
ಯಾವ ಬಣ್ಣ ದ್ವೇಷವಿಲ್ಲ ನಾವು ಗೆಳೆಯರು ಎಂದೆಂದೂ
ಒಗ್ಗಟ್ಟಿನ ಮಂತ್ರವ ಸಾರಲು, ಶಾಲೆಯೇ ಮೊದಲ ಗುಡಿಯಮ್ಮ
ದೇಶಕೆ ಉತ್ತಮ ಪ್ರಜೆಯಾಗಿ ನಾನು ಬಾಳುವೆ ಸರಿಯಮ್ಮ!
ಶಾಲೆಗೆ ಹೊರಟೆನು ಅಮ್ಮ ನಾನು ಶಾಲೆಗೆ ಹೊರಟೆನು!



ಸಿಂಧು ಭಾರ್ಗವ್.

No comments:

Post a Comment