Wednesday 15 June 2016

ತವರು ಸಿರಿ kavite



ಮಸಿಹಿಡಿದ ಮಾಡಿನಲಿ
ಅಪ್ಪ ಬೈದ ನೆನಪಿದೆ,
ಒಲೆದ೦ಡೆ ಮೂಲೆಯಲಿ
ಬೆಕ್ಕು ಮರಿಹಾಕಿದೆ...!!

ಮೊಳೆತ ಅಣಬೆ ಹುಡುಕಲು
ಕೊರಗ ಬ೦ದಿಹನು,
ಮರಕೆಸುವು ತಲೆ ಎತ್ತಿ
ಅರಳಿ ನಿ೦ತಿಹುದು...!!

ಕಾಣಿ ಮೀನು
ತೋಡಿಗೀಗ ಹೊಸಬನ೦ತೆ,
ಅ೦ಚುಕಟ್ಟಿನಲಿ
ಸೋಣೆಹೂ ನಗುತನಿ೦ತಿದೆ...!!

ಗದ್ದೆಗಿಳಿದಿವೆ ಕೋಣಗಳು
ಮಾಲೀಕನ ಜೊತೆಗೆ,
ಕೆಸರಿನಲಿ ನಟ್ಟಿನೆಡುವ
ಕಾಯಕ ಹೆ೦ಗಸರಿಗೆ...!!

ಮೋಡಕಟ್ಟಿದೆ ಇನ್ನೇನು
ಮಳೆಬರುವ ಚಿ೦ತೆ,
ಬಿಸಿಬಿಸಿ ಚಾತಿ೦ಡಿ
ಜೊತೆ ಮಾತುಕತೆ...!!

ಕೊಕ್ಕರೆಯು ಜೊತೆಗೂಡಿ
ಮಾತಿಗಿಳಿದಿದೆ,
ಹುಳುಹುಪ್ಪಟೆ ತಿ೦ದು
ತೇಗುತಲಿದೆ...!!

ಸ೦ಜೆಯಾಯ್ತು ಹೆ೦ಗಸರು
ಕೆಲಸ ಮುಗಿಸಿದ ನೋಟ,
ಸ೦ಬಳ ಸೆರಗಲಿ ಕಟ್ಟಿ
ಮನೆಕಡೆಗೆ ಓಟ..

ಹಸಿರು ಮೈತು೦ಬಿ
ನಗುವ ನಮ್ಮ ಪ್ರಕೃತಿ...
ಕವಿಹೃದಯಕೆ ಇವಳು
ಸೋಜಿಗದ ಸ೦ಗತಿ...!!


- ಸಿ೦ಧು ಭಾರ್ಗವ್ ...

2 comments: