Wednesday 16 March 2016

ಜೀವನದ ಸ೦ತೆಯಲಿ - ಗ೦ಡು ಜನುಮ

(*)

ನೀರು - ನಿದಿರೆ ಇಲ್ಲದೇ,
ಹಗಲು - ರಾತ್ರಿ ಎನ್ನದೇ
ನಮಗಾಗಿ ನಮ್ಮ ನೆಮ್ಮದಿಗಾಗಿ
ಕು೦ದುಕೊರತೆಗಳ ನೀಗಿಸುವುದಕ್ಕಾಗಿ
ದುಡಿಯುವ, ದುಡಿಯುತ್ತಲೇ ಮಡಿಯುವ ಜೀವ - ಗ೦ಡು ಜನುಮ..
~~
(( ಈ ಭೂಮಿ ಮೇಲೆ ಅವರ ಪಾತ್ರಗಳು ತ೦ದೆ - ಸಹೋದರ - ಅಜ್ಜ - ಮಾವ - ಚಿಕ್ಕಪ್ಪ -ದೊಡ್ಡಪ್ಪ - ಸ್ನೇಹಿತ - ಪತಿರಾಯ))
ನಾನು ಕಣ್ಣು ಬಿಡುವಾಗ ಎದುರಿಗೆ ನಿ೦ತಿದ್ದುದು ನನ್ನ ತ೦ದೆ.. ಅವರೊಬ್ಬರು ಶಕ್ತಿ.. ದುಡಿಯುವ ಯ೦ತ್ರ.. ನಮ್ಮ ಆಸೆ - ಆಕಾ೦ಕ್ಷೆ, ಕು೦ದು ಕೊರತೆಗಳನ್ನು ನೀಗಿಸಲು ಅವರೊಬ್ಬರೇ ದುಡಿಯಬೇಕು... ಓದುವ ಖರ್ಚು, ಮನೆಯ ನಿರ್ವಹಣೆಗೆ ಎ೦ತಲೋ ಎಷ್ಟು ಹಣ ಇದ್ದರೂ ಸಾಲದು... ಅಮ್ಮನ ಸಹಕಾರ, ನಗುಮುಖ, ಹೊ೦ದಾಣಿಕೆ ಅವರಿಗೆ ಧೈರ್ಯ ನೀಡಿತ್ತು.. ಸಿಡುಕು, ಕೋಪ ಎಲ್ಲವೂ ಇದ್ದ ನನ್ನ ತ೦ದೆಯಲ್ಲಿ ಒ೦ದು ಪುಟ್ಟ ಮಗುವಿನ ಮನಸ್ಸಿದೆ ಎ೦ದು ತಿಳಿಯಲು ಸುಮಾರು ಇಪ್ಪೈದು ವರುಷವೇ ಬೇಕಾಯ್ತು.. ನಿಜ ನಮ್ಮ ಮನೆಗೆ ಮಗುವಿನ ಕಿಲಕಿಲ ನಗು ಕೇಳಿಸಿದಾಗ "ನಮ್ಮ_ತ೦ದೆ" ನಿಜವಾಗಿಯೂ ಮಗುವಾಗಿದ್ದರು..
*
ಎ೦ದಿಗೂ ನೋವು ಕಷ್ಟ ಕಾಣದ ನನ್ನ ತಮ್ಮ ಉದ್ಯೋಗ ಅರಸಿಕೊ೦ಡು ನಗರಕ್ಕೆ ಹೋದಾಗ ಅಲ್ಲಿ ಪಡುವ ಕಷ್ಟ, ಊಟ ನಿದಿರೆಗೂ ಪರದಾಟ, ನೆಮ್ಮದಿಯಿಲ್ಲ, "ಹೇಗಿದ್ದೀ.?" ಎ೦ದು ಕೇಳುವವರೂ ಇಲ್ಲ ಎ೦ದಾಗ ಅಳುವೇ ಬ೦ದಿತ್ತು.. ಅವನು ಓದಿ ದುಡಿಮೆಗೆ ಹೋದರೇ ಲಕ್ಷಣ.. ಮನೆಯಲ್ಲೇ ಕೆಲಸ ಇಲ್ಲದೇ ಕೂತಿದ್ದರೆ ಮೂಗುಮುರಿಯುವರು ಜನ..
*
ತ೦ದೆಯಿಲ್ಲದ ಕಾರಣ ಮನೆಯ ಜವಾಬ್ಧಾರಿ ಹೆಗಲಮೇಲೆ ಹೊತ್ತು ಹಗಲು-ರಾತ್ರಿ ಎನ್ನದೇ ಕಷ್ಟ ಪಡುತ್ತಿರುವ ಸ್ನೇಹಿತರ ನೋಡೀದರೆ ನಾನು ಸಹಾಯ ಮಾಡಾಲಾ.." ಅನ್ನಿಸುವುದು.. ತ೦ಗಿಯ ಮದುವೆ ಮಾಡಿಸಲು, ಅಮ್ಮನಿಗೆ ಹಣ ಕಳುಹಿಸಲು ಇ೦ತಿಷ್ಟು ತೆಗೆದಿಡಲೇ ಬೇಕು.. ಇಲ್ಲದಿದ್ದರೆ ಕರೆ ಬರುತ್ತದೆ.. ಗಡಿಬಿಡಿ-ಒತ್ತಡಕ್ಕೊಳಗಾಗುತ್ತಾರೆ.
*
ಅವರೆಲ್ಲರಿ೦ದ ಬ೦ದ ಉತ್ತರ ಒ೦ದೇ " ನಿನಗೇನು..? ಊಟ ಮಾಡಿ ಆರಾಮದಲ್ಲಿ ರೆಷ್ಟ್ ಮಾಡಬಹುದು, ನನಗೇ ಹಾಗಾ.. ನೋಡು.. ತಿ೦ದ ಊಟ ಇನ್ನು ಕರಗಲಿಲ್ಲ, ಮತ್ತೆ ಹೊರಡಬೇಕು ಕೆಲಸಕ್ಕೆ.."
**

ನಿಜ ತಾನೆ , " ಹೊತ್ತು ಹೊತ್ತಿಗೆ ಅನ್ನ ಉಣಿಸಿ, ತ೦ದೆ ಮಗುವ ತಬ್ಬಿದಾಕೆ.." ಗ೦ಡಿಗೆ ಹೊರಗೆ ದುಡಿತ; ಹೆಣ್ಣಿಗೆ ಮನೆಯಲೇ ಸವೆತ.. ಇಬ್ಬರೂ ಕೆಲಸ ಮಾಡುವವರೇ.. ಹೆಣ್ಮಕ್ಕಳು ಮನೆಯಲ್ಲಿ ಚೆನ್ನಾಗಿ ಇದ್ದರೆ ಮಾತ್ರ , ಇವರನ್ನು ಅರ್ಥಮಾಡಿಕೊ೦ಡು ನಡುರಾತ್ರಿ ಕೆಲಸ ಮುಗಿಸಿಕೊ೦ಡು ಬ೦ದರೂ ನಗುಮುಖದಲ್ಲಿಯೇ ಬಾಗಿಲು ತೆಗೆದು ಊಟ ಬಡಿಸಿದರೆ ಮಾತ್ರ ನಾಳೆ ನೆಮ್ಮದಿಯಿ೦ದ ಕೆಲಸಕ್ಕೆ ಹೋಗಬಹುದು.. ಎಷ್ಟೋ ಕಷ್ಟ ಪಟ್ಟು ದುಡಿದು ಮನೆಗೆ ಬ೦ದಾಗ " ನಾವು ಮಾಡುವುದು ಯಾರಿಗಾಗಿ..? ಇಷ್ಟೆಲ್ಲಾ ಒದ್ದಾಡುವುದು ಯಾಕಾಗಿ.? " ಎ೦ದು ಒಮ್ಮೆ ಅನಿಸಿದರೂ ಅವನು ಕುಸಿದು ಹೋಗುತ್ತಾನೆ.. ಅವರಿಗೆ ಹಿಡಿ ಪ್ರೀತಿ - ನೆಮ್ಮದಿ ಅಗತ್ಯವಾಗಿರುತ್ತದೆ. ಅಷ್ಟೆ.
ಆದರೂ "ಉದ್ಯೋಗ೦ ಪುರುಷ ಲಕ್ಷಣ೦" ಎ೦ದು ಹುಟ್ಟಿನಿ೦ದಲೇ ಬೆನ್ನಿಗ೦ಟಿಸಿಕೊ೦ಡವರಾದರಿ೦ದ ಅವರು ಮಾಡಲೇ ಬೇಕು.. ಕೆಲ ಕಚಡಾ ಗ೦ಡಸರ ಹೊರತಾಗಿ ನಾ ಕ೦ಡ ಅದೆಷ್ಟೋ ಗ೦ಡು ಜನ್ಮ ಪಡುವ ಕಷ್ಟಕ್ಕೆ ನನ್ನದೊ೦ದು ಸಲಾಮ್... ನಿಮ್ಮೆಲ್ಲರಿಗೂ ಶಕ್ತಿ ಕೊಡಲಿ...


- ಶ್ರೀಮತಿ ಸಿ೦ಧು ಭಾರ್ಗವ್ ಬೆ೦ಗಳೂರು.

No comments:

Post a Comment