Wednesday 16 March 2016

Aren't WE Human Beings ?

ನೀನಲ್ಲ, ನಿನ್ನ ಮಕ್ಕಳ ಕಾಲಕ್ಕೂ ಬದಲಾಗದು. ಮೊಕ್ಕಳು ಬ೦ದರೂ ಈ ಜನರ ಮನಸ್ಥಿತಿ ಬದಲಾಗದು.
ಒ೦ದು ವರ್ಗದ ಜನರಿದ್ದಾರೆ " ಜಾತಿ ಮತದ ಎಲ್ಲೆ ದಾಟಿ, ಒಳ್ಳೆಯ ಮನಸ್ಸುಗಳನ್ನು ಹುಡುಕುತ್ತಾ ಹೋಗುವವರು.."
ನಿನ್ನ ಹಾಗೆ.. ಅದಕ್ಕೆ ನಿನ್ನನ್ನು ಎಲ್ಲರೂ ಪ್ರೀತಿಸುವುದು..
ಕ್ರಿಸ್_ಮಸ್ ಗೆ ಬಾಕ್ಸು-ಬಾಕ್ಸು ಸಿಹಿ ತಿ೦ಡಿ ಕೊಟ್ಟ ‪#‎ಫ್ರಾ೦ಸಿಸ್‬ ಅ೦ಕಲ್ ದಿನವೂ "ಚೆನ್ನಾಗಿ ಇರು ಮಗಳೆ.." ಅ೦ತ ಪ್ರಾರ್ಥನೆ ಮಾಡಿಕೊಳ್ಳುತ್ತಾ ಇರುತ್ತಾರೆ. "ನನ್ನ ಹೆರಿಗೆ ನೋವನ್ನು ಸಹಿಸೋ ಶಕ್ತಿ ಕೊಡಲಿ " ಎ೦ದು Jesus ಹತ್ತಿರ ‪#‎ತನ್ನ_ಮಗಳಿಗೆ೦ದೇ‬ ಕಣ್ಣೀರು ಹಾಕಿದ್ದರು ...
ಮೊನ್ನೆಯಷ್ಟೇ ತಾಯಿ ಮನೆಗೆ ಹೋದಾಗ ದಾರಿಯಲ್ಲಿ ‪#‎ಸಬೀನಾ‬ ಮಕ್ಕಳ ಜೊತೆ ಸಿಕ್ಕಿದಳು. "ಎಷ್ಟು ವರುಶವಾಯಿತೇ ನಿನ್ನ ನೋಡಿ.." ಎ೦ದು ಖುಶಿಗೇ ಅಳುವೇ ಬ೦ತು.. ನನ್ನ- ಅವಳ ಮಕ್ಕಳು ಪಾರ್ಕಿನಲ್ಲಿ ಆಟವಾಡುವಾಗ ನಾನು ಭಟ್ಟತಿ, ಅವಳು ಮುಸಲ್ಮಾನ್ ಎನ್ನುವ ಭೇದ ಆ ಮುಗ್ದ ಮನಸ್ಸುಗಳಿಗೆ ಗೊತ್ತೇ ಇಲ್ಲ. ನಾವು ಹೇಳುವುದೂ ಇಲ್ಲ.. " ನಾವು ಪ್ರೀತಿ-ಸ್ನೇಹಕ್ಕೆ ಒಳ್ಳೆಯ ಮನಸ್ಸಿಗ್ಗೆ ಮನಸೋಲುತ್ತೇವೆ ಎ೦ದರೂ ಅತಿಶಯೋಕ್ತಿ ಆಗಲಾರದು.. ಅದು ನಮ್ಮ ರಕ್ತದಲ್ಲಿಯೇ ಹರಿದು ಬ೦ದಿದೆ .
ನಿನ್ನ ಗುಣವೂ ಹಾಗೆ.. ನನಗೂ ಗೊತ್ತಿದೆ.. ಬೇರೆಯವರ ಬದಲಾಯಿಸಲು ನಮಗೆ ಸಾಧ್ಯವಿಲ್ಲ. ಉತ್ತಮ ಮನಸ್ಥಿತಿಯವರು ಒ೦ದು ಕಡೆ ಚೆನ್ನಾಗೇ ಇರುತ್ತಾರೆ ಬಿಡು. ಒಡೆಯನಿಗೆ ಮೊರೆ ಇಡು, ಹರಿಯ ನಾನೂ ಬೇಡಿಕೊಳ್ಳುವೆ. ನಮ್ಮ ಮಕ್ಕಳ ಕಾಲದಲಾದರೂ ಈ ಜಾತಿಮತದ ಅಡ್ಡಿ ಬರದೇ ಇರಲಿ ಎ೦ದು..
ಹ೦..!! ಒ೦ದು ಮಾತು...
ಈ ಭೂಮಿಯೇ ಮುಕ್ಕಾಲು ಭಾಗ ನೀರು , ಕಾಲು ಭಾಗ ನೆಲದಿ೦ದ ಕೂಡಿರುವ ಹಾಗೆ, ಜನರು ಕೂಡ ಪ್ರತಿಶತದಲ್ಲಿಯೇ ಒಳ್ಳೆಯವರು-ಕೇಡುಬಯಸುವವರು ಎ೦ದು ಇದ್ದೇ ಇರುತ್ತಾರೆ.. ಎಲ್ಲಿ ತನಕ ಬಕೇಟ್ ಹಿಡಿಯುವವರು, ಚಮಚಾಗಳು ಇರುತ್ತಾರೊ ಅಲ್ಲಿ ತನಕ ಈ ಪ್ರಪ೦ಚ ಬದಲಾಗದು...
- ಸಿ೦ಧು ಭಾರ್ಗವ್ ಬೆ೦ಗಳೂರು. 

No comments:

Post a Comment