Monday 4 January 2016

ಜೀವನದ ಸ೦ತೆಯಲಿ - #ಅಮ್ಮಾ_ಎ೦ದೊಡನೆ_ಕಣ್ಣಾಲೆ_ತು೦ಬುವುದು...



"ಜೀವನದ ಸ೦ತೆಯಲಿ - #ಅಮ್ಮಾ_ಎ೦ದೊಡನೆ_ಕಣ್ಣಾಲೆ_ತು೦ಬುವುದು"

@ ರಕ್ತ ಬಸಿದು ಹಾಲಾಗಿಸಿದ ಆ ಮಹಾತಾಯಿಯ ನೆನೆಸಿದಾಗೆಲ್ಲ ಕಣ್ಣಾಲೆ ತು೦ಬುವುದು.
@ ಕರುಳಬಳ್ಳಿ ಕತ್ತರಿಸಿ ಗರ್ಭಗುಡಿಯಿ೦ದ ಹೊರಜಗತ್ತು ನೋಡಲು ಅನುವು ಮಾಡಿಕೊಟ್ಟ ಮಹಾತಾಯಿಯ ನೆನೆಸಿದಾಗೆಲ್ಲ ಕಣ್ಣಾಲೆ ತು೦ಬುವುದು.
@ ಸುರುಟಿದ ಸೀರೆ ಉಟ್ಟೇ, ಹಣವ ಕೂಡಿಟ್ಟು ಹೊಸ ಬಟ್ಟೆ ನನಗೆ ತೊಡಿಸಿ ನನ್ನ ಆನ೦ದವ ನೋಡಿ ಕಣ್ಣಾಲೆ ತು೦ಬಿದ ಆ ದಿನದ, ಆಕೆಯ ಪಟ, ಇನ್ನೂ ಕಣ್ಣೆದುರು ಬರುವುದು.
@ ಬಿಸಿಗ೦ಜಿ ಎನಗುಣಿಸಿ ತಣ್ಣಗಿನ ತ೦ಗಳನ್ನವನು೦ಡು " ಹೊಟ್ಟೆ ತು೦ಬಿದಾ ಮುದ್ದು " ಎ೦ದು ಕೇಳಿದ ದನಿ ಕಿವಿಯಲ್ಲಿನ್ನೂ ಗು೦ಯ್ಗುಡುವುದು..
@ ಅಪ್ಪನಿ೦ದ ಬೈಸಿಕೊಳ್ಳುವುದ ತಪ್ಪಿಸಿ, ಆ ಉರಿ ಕೋಪವ ತಾನೇ ಎದುರಿಸಿ ನಮ್ಮನ್ನು ಕೊಣೆಗೆ ಕಳುಹಿಸಿದ ಆ ಕ್ಷಣ ಈಗಲೂ ನೆನಪಾಗುವುದು.
@ ಮು೦ಗೋಪಿಗೆ ಕೊರಳಕೊಟ್ಟು, ಚ೦ಚಲ ಮನಸ್ಸಿನ್ನ ಮಕ್ಕಳ ಆಡುವ "ತಪ್ಪು_ಮಾತುಗಳನ್ನು, ಚುಚ್ಚುಮಾತುಗಳನ್ನು ಇ೦ಗಿಸಿಕೊಳ್ಳುವ ಗುಣ ಆ #ಮಹಾತಾಯಿಗೆ ಮಾತ್ರ ಇರುವುದು.
@ ಒಳ್ಳೆಯ ವರನ ನೋಡಿ, ಮದುವೆ ಮಾಡಿಕೊಟ್ಟು ನೆಮ್ಮದಿಯ ಆನ೦ದ ಭಾಷ್ಪವ ಕಣ್ಣಲ್ಲಿ ಸೆರಗಿನಿ೦ದ, ಮರೆಯಲ್ಲಿ ನಿ೦ತು ಒರೆಸಿಕೊಳ್ಳುವುದ ನಾ ನೋಡಿದ್ದು, ಈಗಲೂ ಕಣ್ಕಟ್ಟುವುದು..

.... #ಅಮ್ಮ, #ಉಮ್ಮ, #ಮಾಯಿ, #ಮೋಮ್, #ಮಾ, #ಮದರ್, ಏನೇ ಕರೆದರೂ ಯಾರು ಅವಳ ಬಗ್ಗೆ ಎಷ್ಟೇ ಬರೆದರೂ ಓದಿದಾಗೆಲ್ಲ ನನ್ನವ್ವನ ನೆನಪಾಗಿ ಕಣ್ಣಾಲಿ ತು೦ಬುವುದು...

> #ಸಿ೦ಧು_ಭಾರ್ಗವ್_ಬೆ೦ಗಳೂರು.

No comments:

Post a Comment