ವಾರದ ಕಥೆ :: ಮರಿಯಪ್ಪನ ಪಾರ್ಕ್ ನಲ್ಲಿ ಆ ಸಂಜೆ
*******
ನಾವು ಪಾರ್ಕಿಗೆ ಹೋಗುವುದು ವಾರಾಂತ್ಯದ ಅತಿಥಿಗಳಂತೆ.. ಅದೂ ಮಗುವಿನ ಒತ್ತಾಯಕ್ಕೆ, ಸಮಯ ಸಿಕ್ಕಾಗ, ಮಳೆಬರುವುದೆಂಬ ನೆಪ, ಹೀಗೆ ಇಲ್ಲ ಸಲ್ಲದ ನೆಪವೊಡ್ಡಿ ತಪ್ಪಿಸಿಕೊಳ್ಳುವು
***
ಆದರೂ ಮಗುವಿಗೆ . ಅವನಿಗೆ ಇದಲ್ಲದೇ ಬೇರೆ ಏನಿದೆ ಮರಗಿಡ, ಪಕ್ಷಿಗಳೆಂದು ತೋರಿಸಲು..
ಅದಕ್ಕಾದರೂ ಹೋಗುವುದು. ಹತ್ತಿರವಾಗಿದ್ದರೆ
ಹಾಗೆ ಸುತ್ತ ಕಣ್ಣಾಡಿಸಿದೆ....
***
ಜೋಕಾಲಿಯಲಿ ಜೀಕುವ ಮಕ್ಕಳು, ಆನೆ ಸೋಂಡಿಲಿನ ಜಾರು ಬಂಡಿಯಲ್ಲಿ ಜಾರುವ ಮಕ್ಕಳು, ಕೆಲವು ಮಕ್ಕಳಂತೂ ಹೆತ್ತವರ ಎದುರು ಧೈರ್ಯ ಪ್ರದರ್ಶಿಸುವುದು,
ಹಾಸ್ಯ ಮಾಡುತ್ತ ಗೆಳೆಯರ ಕಾಲ್ ಎಳೆಯುವವರ ಗುಂಪು, ಏನೋ ತಾಳ ತಪ್ಪಿತೆಂದು ಗೆಳೆಯನ ಹತ್ತಿರ ಹೇಳಿ ಅಳುತ್ತಿರುವ ಹುಡುಗಿ.. ಮನೆಮನೆ ಕಥೆ , ಪೆನ್ನು ಪೇಪರ್ ಹಿಡಿದು ಬರೆಯುತ್ತಿದ್ದ ಯುವಕವಿ. ಪಾನಿಪುರಿ ಮಾರುವಾತ. ಕೆಲವರು ತಮ್ಮ ನಾಯಿಯ ಜೊತೆ ನಡಿಗೆ, ಅದಕ್ಕೆ ಪ್ರತಿಸ್ಪರ್ಧಿ ಯಂತೆ ಬೀದಿನಾಯಿಗಳು ಸುತ್ತು ಬರುತ್ತಿದ್ದವು. ನಾರ್ಥ್ ಈಸ್ಟ್ , ತಮಿಳರು, ತೆಲುಗು ಜನರು, ಮಾರ್ವಾಡಿಗಳು, ಕನ್ನಡಿಗರು, ಮುಸಲ್ಮಾನರು, ಹಿರಿಯರು ಕಿರಿಯರು, ಎಲ್ಲರ ಸಮಾಗಮ..
**
ಗೇಟಿನಿಂದ ಹೊರಗೆ ಒಂದಷ್ಟು ಸ್ವಂತವಾಹನಗಳು ಕಾಯುತ್ತ ನಿಂತಿದ್ದವು, ಕೆಲವರು ಕಾರಿನಲ್ಲಿ ಬಂದು "ಅಯ್ಯೋ ಕೆಸರಾಗುತ್ತೆ, ಮಳೆ ಬೇರೆ ಬಂದಿದೆ , ಬೇಡ ಇಳಿಯುವುದು .." ಎಂದು ವಾಪಾಸ್ಸಾದರು. ಸುತ್ತ ತಿಂಡಿ ತಿನಿಸಿನ ವ್ಯಾಪಾರಿ ಅಂಗಡಿಗಳು... ಒಂದಕ್ಕೆ ಎರಡು ರೇಟು, ಬೇಡವೆಂದರೂ ಮಕ್ಕಳ ಹಠಕ್ಕೆ ತೆಗೆದುಕೊಳ್ಳುವುದ
ಅಬ್ಬಾ ಒಂದಾ.. ಎರಡಾ. ನಾನು ಮನದಲ್ಲೆ ಎಲ್ಲವನ್ನು ಸವಿಯುತ್ತಾ ಹಕ್ಕಿಗಳಿಗೆ ಶುಭರಾತ್ರಿ ಹೇಳಿ ಅಲ್ಲಿಂದ ಹೊರಟೆ ..
.
ಸಿಂಧು ಭಾರ್ಗವ್ ..







